Saturday, August 21, 2010

ಜಯಶ್ರೀ ಕಾಲಂ:ಅದ್ಭುತ ನಟನೆಯ ಅಪರೂಪದ ಕಲಾವಿದೆ…

Media Mind

ಅತ್ಯಂತ ವಿಜೃಂಭಣೆಯಿಂದ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ಹಬ್ಬವೂ ಒಂದು. ಎಲ್ಲೆಲ್ಲೋ ಸಂಭ್ರಮ. ಹಣ, ಐಶ್ವರ್ಯ , ನೆಮ್ಮದಿ ,ಸಂತಸ,ಧೈರ್ಯ… ಎಲ್ಲದರ ಸಂಖೇತ ಈ ಹಬ್ಬ, ಈ ಎಲ್ಲದರ ಪ್ರತೀಕವೇ ಲಕ್ಷ್ಮಿ..ಸಮಸ್ತರಿಗೂ ತಾಯಿ ಲಕ್ಷ್ಮಿ ಸನ್ಮಂಗಳವನ್ನು ಉಂಟು ಮಾಡಲಿ.

ಶ್ರಿಮಂತರಿಗಿದು ವರಮಹಾಲಕ್ಷ್ಮಿ, ಬಡವರಿಗೆ worry ಮಹಾಲಕ್ಷ್ಮಿ ಎಂದು ಫೇಸ್ ಬುಕ್ಕಲ್ಲಿ ದಾಖಲಿಸಿದ್ದರು ಒಂದರ್ಥದಲ್ಲಿ ಅದೂ ಸರಿ ಅನ್ನಿ. ಅದರಲ್ಲೂ ನಿನ್ನೆ ನಡೆದ ಘಟನೆಯು ಅತ್ಯಂತ ನೋವು ಉಂಟು ಮಾಡಿದೆ. ಪಾಪ ಮೊದಲೇ ಭಿಕ್ಷುಕ ಜನ್ಮ ಅದರಲ್ಲೂ ಎಂತಹ ಸಾವು..! ದುಃಖ ಆಯ್ತು ನನಗೆ ವಾಹಿನಿಗಳಲ್ಲಿ ವೀಕ್ಷಿಸಿ. ಅನಾಯಾಸೇನ ಮರಣಂ ವಿನಃ ದೈನ್ಯೇನ ಜೀವನಂ ! ಎನ್ನುವ ನುಡಿ ಇದೆ, ಯಾರೇ ಆಗಲಿ ಬದುಕು ಆರಾವಾಗಿರಬೇಕು ಎನ್ನುವ ಆಶಯ ಹೊಂದಿರುತ್ತಾರೆ .

ಆದ್ರೆ ಹಿಂದೆ ಒಂದು ಜನ್ಮ ಅನ್ನುವುದು ಇತ್ತೋ ಇಲ್ಲವೋ ಆದರೆ ಈ ಜನ್ಮದಲ್ಲಿ ಭಿಕ್ಷುಕರಾಗಿ ಜೀವಿಸುವುದೇ ಅತ್ಯಂತ ಘೋರ ಅಂತಹುದರಲ್ಲಿ ಇಂತಹ ಸಾವು, ಅವರ ನಿಸ್ಸಹಾಯಕತೆ ಎಲ್ಲವೂ ಮನಕ್ಕೆ ಬೇಸರಗಳ ರಾಶಿ ತಂದಿಟ್ಟಿತು. ಚಂದನ, ಸುವರ್ಣ,ಈ ಟೀವಿ, ಉದಯ ಕಸ್ತೂರಿ, ಸಮಯ, ಟೀವಿ ನೈನ್,ಎಲ್ಲದರಲ್ಲೂ ಕವರೇಜ್ ಚೆನ್ನಾಗಿ ಮಾಡಿದ್ರು.

ತುಂಬಾ ದುಃಖ ಅನ್ನಿಸುತ್ತೆ ಇಂತಹ ವಿಷಯಗಳ ಕವರೇಜ್ ಬಗ್ಗೆ ಹೇಳೋಕೆ.. ಸಮಾಜ ಸೇವೆ ಮಾಡ್ತೀನಿ ಅಂತ ರಾಶಿ ರಾಶಿ ಹೇಳುವವರು ಒಂದು ಹನಿಯಷ್ಟು ಸಹಾಯ ಮಾಡಿದರೆ ಇಂತಹವರ ಬದುಕು ಸ್ವಲ್ಪಮಟ್ಟಿಗಾದರೂ ಸರಿಯಾಗುತ್ತದೆ. ಯಾರಿಗೂ ಬ್ಯಾಡ ಕಣ್ರೀ ಇಂತಹ ಲೈಫ್

ನಗು ಹಂಚುವ ಸಂಭ್ರಮ ತುಂಬಾ ಜನಕ್ಕೆ ಇದೆ. ಅದೊಂದು ದೈವದತ್ತ ವರ.ಹೆಚ್ಚಾಗಿ ಕೆಲವರ ಮುಖ ಉರಿಮೆಣಸಿಕಾಯಿ. ನಕ್ರೇನು ಗತಿನೋ ಅನ್ನುವ ಮನಸ್ಥಿತಿ .ಅದರಲ್ಲೂ ಬಣ್ಣ ಹಚ್ಚಿ ಬೆಳಕಿಗೆ ಒಮ್ಮೆ ಮುಖ ಒಡ್ಡಿ ಬಿಟ್ಟರಂತೂ ಆಯಿತು, ಅವರನ್ನು ಹಿಡಿಯೋಕೆ ಆಗಲ್ಲ.

ಮುಖದಲ್ಲಿ ನಗುವಿಗೆ ಕೊರತೆ ಶುರು ಆಗಿ ಬಿಡುತ್ತೆ. ಯಾರೋ ಪಾಪದ ಅಭಿಮಾನಿಗಳು ನನಗೆ ನಿಮ್ಮ ನಟನೆ ತುಂಬಾ ಇಷ್ಟ ಅಂತ ಹೇಳಿದ್ರೆ ಬ್ಯಾಡ ಉರಿಮುಖ ಮತ್ತೂ ಗಬ್ಬು ಆಗಿ ಬಿಡುತ್ತೆ..!ಆದ್ರೆ ನಾನು ವೀಕ್ಷಿಸಿದ ಕೆಲವು ಕಲಾವಿದೆಯರಲ್ಲಿ ಮಾಸದ ನಗು ಅಂದ್ರೆ ಸೀತಾ ಕೋಟೆದು! ನಗದೆ ಇದ್ರೆ ಏನಾಗಿ ಬಿಡುತ್ತೋ ಅನ್ನುವಷ್ಟು ನಗುವ ಹೆಣ್ಣುಮಗಳು ಇಷ್ಟ ಆಗುತ್ತೆ.

ಈಟೀವಿಯಲ್ಲಿ ಟಿ.ಎನ್.ಸೀತಾರಾಂ ಸರ್ ಅವರ ಸೀರಿಯಲ್ ಮುಕ್ತ ಮುಕ್ತ ದಲ್ಲಿ ಶಾಂಭವಿ ಅಕ್ಕನ ಪಾತ್ರಧಾರಿ ಸೀತಾ ನಟನೆ ಅದ್ಭುತ. ಅದೇ ರೀತಿ ಕಸ್ತೂರಿ ವಾಹಿನಿಯಲ್ಲಿ ಸುಪ್ನಾತಿ ಸುಬ್ಬಿಯಲ್ಲಿನ ನಟನೆಯೂ ಸಹ ಅತ್ಯದ್ಭುತ! ಮನಸ್ಸಿಗೆ ಹಿಡಿಸುವ ಅಪರೂಪದ ಕಲಾವಿದೆ.

ನಟನೆಯಲ್ಲಿ ಇರ ಬೇಕಾದ ಜೀವಂತಿಕೆ ಸೀತಾ ಹತ್ರ ಇದೆ. ಕೆಲವರು ತುಂಬಾ ಚೆನ್ನಾಗಿ ಮಾತಾಡ್ತಾರೆ , ಅತ್ಯಂತ ಚನ್ನಾಗಿ ನಟಿಸ್ತಾರೆ, ಆದರೆ ಅವರು ಮಾತಾಡುವಾಗ ಬಳಸುವ ಕೆಲವು ಪದಗಳು , ಅದರಲ್ಲಿ ಎಳೆಯುವ ರಾಗ ಕಿವಿಗೆ ತಂಪಾಗಲ್ಲ .ಬೇಡ ಬಿಡಿ ಅವರ ಹೆಸರುಗಳನ್ನೂ ಹೇಳೋದು ಹಬ್ಬದ ದಿನದಲ್ಲಿ ಆ ಹೆಣ್ಣು ಮಕ್ಕಳು ನೊಂದು ಕೊಂಡು ಬಿಡ್ತಾರೆ .

ಶಾಂಭವಿಯಂತೆ ಮನದಲ್ಲಿ ಸ್ಥಿರವಾಗಿ ನಿಲ್ಲುವ ಸುಬ್ಬಿಯ ಸ್ಟೈಲ್ ಅಮ್ಮ ಆಹಾ… ಸುಂದರ್ ! ಇಂಗ್ಲೀಷ್ ಭಾಷೆಯ ಮೋಹಿ ಅಮ್ಮ .. ಯಾವ ಅಕ್ಷರಕ್ಕೂ ಮೋಸ ಮಾಡದ ಹೆಣ್ಣು ಮಗಳು ಉದಾ :- ವಾಕಿಂಗ್ ಬದಲು ವಾಲ್ಕಿಂಗ್, ಪ್ರಮೋಶನ್ ಬದಲು ಪ್ರಮೋಟಿನ್ put ಪುಟ್ ಆದ್ರೆ but ಬುಟ್ ಅಲ್ವ ! ಎಂದು ಇಂಗ್ಲೀಷ್ ಭಾಷೆಗೆ ಸವಾಲು ಒಡ್ಡುವ ಜಾಣೆ .ಶಶಿಧರ್ ಕೋಟೆ,ಸೀತಾ ಕೋಟೆ ದಂಪತಿಗಳು ಪ್ರಾಯಶ: ನಗುವ ಕಾಂಟ್ರಾಕ್ಟ್ ತಗೊಂಡಿದ್ದಾರೆ ಅಂತ ಕಾಣುತ್ತೆ ,ಸೀತಾ ಭಾಷೆಯಲ್ಲೇ ಹೇಳುವುದಾದರೆ ತುಂಬಾ ಸ್ಪೆಕಿಯಲ್ ಅಲ್ಲಾ ಸ್ಪೆಷಲ್ ಪೇರ್ .ಇಂತಹ ಸುಂದರ ನಗೆ ನನ್ನ ಮನ ಸೆಳೆದಿರುವ ಮತ್ತೊಬ್ಬ ಕಲಾವಿದೆ ಸುಂದರಶ್ರೀ.

@@ ಸುವರ್ಣ ವಾಹಿನಿಯಲ್ಲಿ ಕ್ಲಾಸ್ ಮೇಟ್ ಸೀರಿಯಲ್ ತುಂಬಾ ಚೆನ್ನಾಗಿದೆ.

ಕೆಲವು ಎಪಿಸೋಡ್ ಗಳನ್ನು ವೀಕ್ಷಿಸಿದ್ದೇನೆ . ಹೆಚ್ಚಾಗಿ ಇಂತಹ ಕಥಾಹಂದರ ದೂರದರ್ಶನ್ ನಲ್ಲಿ ವೀಕ್ಷಿಸಿದ್ದೆ,ಆದರೆ ಈಗ ಕನ್ನಡ ವಾಹಿನಿಯಲ್ಲಿ ಕಾಣುವ ಸೌಭಾಗ್ಯ ವೀಕ್ಷಕರಿಗೆ ಸಿಕ್ಕಿದೆ. ಪ್ರತಿಯೊಬ್ಬ ಮಕ್ಕಳು ತುಂಬಾ ಚೆನ್ನಾಗಿ ನಟಿಸಿದ್ದಾರೆ, ಹಾಗೆನ್ನುವುದಕ್ಕಿಂತ ನಿರ್ದೇಶಕ ಶಿವಮಣಿ ಅವರ ಪ್ರತಿಭೆ ಬಳಸಿ ಕೊಂಡಿದ್ದಾರೆ. ಕ್ರಿಯೇಟಿವ್ ನಿರ್ದೇಶಕರು.

ಜೋಶ್ನಂತಹ ಸಿನಿಮಾ ಕೊಟ್ಟ ಶಿವಮಣಿ ಈಗ ಕ್ಲಾಸ್ ಮೇಟ್ ನೀಡ್ತಾ ಇದ್ದಾರೆ.ಹೆಚ್ಚಾಗಿ ಧಾರಾವಾಹಿಗಳು ಅಂತ ಅಂದ್ರೆ ದ್ವೇಷ ,ಅಸೂಯೆ, ಒಟ್ಟಾರೆ ಮನಸ್ಸಿಗೆ ಮುದ ನೀಡದೇ ಇರುವ ಸಂಗತಿಗಳನ್ನು ಒಳಗೊಂಡಿರುತ್ತದೆ. ಆದರೆ ಈ ಸೀರಿಯಲ್ ಎಲ್ಲರೂ ವೀಕ್ಷಿಸ ಬಹುದು.ಇತ್ತೀಚೆಗೆ ಎಲ್ಲಾ ಚಾನೆಲ್ಗಳಲ್ಲಿ ಹೊಸ ಹೊಸ ಸೀರಿಯಲ್ಗಳು ಶುರು ಆಗ್ತಾ ಇದೆ,ರಿಯಾಲಿಟಿ ಕಾಲ ಮುಗಿದು ಮತ್ತೊಮ್ಮೆ ಸೀರಿಯಲ್ ಕಾಲ ಆರಂಭ ಆಯ್ತಾ?? ಬಿಡಿ ಹಾಗಾದ್ರೆ ಇನ್ನಿದೆ ಕಥೆ ಗಂಡು ಮಕ್ಕಳಿಗೆ .

ಹಿಂದೆ ಈಟೀವಿ ವಾಹಿನಿಯಲ್ಲಿ ಸಿಕ್ಕಾಪಟ್ಟೆ ಒಳ್ಳೊಳ್ಳೆ ಕಾರ್ಯಕ್ರಮಗಳ ಸುರಿಮಳೆ ಆಯ್ತು. ಸಂಜೆ ಐದಕ್ಕೆ ಶುರು ಆದರೆ ಹನ್ನೊಂದರ ತನಕ ವೀಕ್ಷಿಸಲೇ ಬೇಕು ಅನ್ನುವಂತಹ ವಾತಾವರಣ ಕ್ರಿಯೇಟ್ ಆಗಿ ಬಿಡ್ತು. ಅಷ್ಟು ಕಾಲ ಮೊನಾಪಲಿ ಮಾಡಿದ್ದ ಉದಯ ವಾಹಿನಿ ಬೆಚ್ಚಿ ಬೆದರಿ ಬಿಡ್ತು. ವೀಕ್ಷಕರನ್ನು ತನ್ನತ್ತ ಸೆಳೆಯು, ಏನು ಚಿನ್ನ, ರನ್ನದ ಬಹುಮಾನ ಇಡ್ತು .

ಆ ಸಂದರ್ಭದಲ್ಲಿ ಹಾಸ್ಯ ಬರಹಗಾರ ಪ್ರಾಣೇಶ್ ಆಚಾರ್ ಅವರು ಕಾರ್ಯಕ್ರಮ ಒಂದರಲ್ಲಿ ಯಪ್ಪಾ ಎನ್ ಹೇಳ್ತೀರಿ ನಮ ಹೆಣ್ಣು ಮಕ್ಕಳು ಈಟಿವಿ ಮುಂದ ಕುಂತ್ರ ಆಟೀವಿಯಲ್ಲಿ ಕಡೀಗೆ ಹೆಣ ಉರುಳಿಸಿ ಬ್ಯಾರಿ ಕೆಲ್ಸಕ್ಕೆ ಹೋಗ್ತಾ ಇದ್ರು ಎಂದು ಹೇಳಿದ್ರು,ಆ ಬಳಿಕ ಅದನ್ನು ಅನೇಕ ಕಾರ್ಯಕ್ರಮಗಳಲ್ಲೂ ಹೇಳಿದ್ದರು ಅಷ್ಟೊಂದು ಅಡಿಕ್ಟ್ ಆಗಿದ್ರು ಮಹಿಳಾಮಣಿಗಳು.ಪುನಃ ಸೀರಿಯಲ್ ಯುಗ ಶುರು ಆಗುವಂತೆ ಕಾಣ್ತಾ ಇದೆ ಅಯ್ಯೋ ಸಿವ್ನೆ ಸೆಂಬುಲಿಂಗ ಗಂಡಸುಮಕ್ಕಳನ್ನು ನೀನೆ ಕಾಪಾಡಪ್ಪ

@@ ಶಾಲೆಯಿಂದ ಹಿಡಿದು ಯುನಿವರ್ಸಿಟಿ ತನಕ ನನಗೆ ಅನೇಕ ಗುರುಗಳು ಸಿಕ್ಕಿದ್ದಾರೆ.ಅವರ ತರಲೆ ಸ್ಟುಡೆಂಟ್.ಈಗ ನನಗೆ ಬ್ಲಾಗ್ ಲೋಕದಲ್ಲಿ ಒಬ್ಬರು ಮೇಷ್ಟ್ರು ಸಿಕ್ಕಿದ್ದಾರೆ, ಅವರು ಜಿನ್ ಮೋಹನ್ ಸ್ವಲ್ಪ ಸೋಮಾರಿತನ ಬಿದ್ರು ತಕ್ಷಣ ???? ಇರುವ ಮೇಲ್ ಬರುತ್ತೆ. ತಕ್ಷಣ ತಡಬಡಿಸಿ ಬರೀತೀನಿ ಛೇ ಅದಕ್ಕೆ ಮಾರ್ಕ್ಸ್ ಹಾಕೋದೆ ಇಲ್ಲ .. ಮೇಷ್ಟ್ರೇ ಎನ್ ಕಥೆ



ರೇಡಿಯೋ ಸದ್ದು..

101 .3 ಆರ್ಜೆ ರೇವತಿ ಕಾರ್ಯಕ್ರಮ ಮೊನ್ನೆ ಕೇಳ್ತಾ ಇದ್ದೆ. ಆಕಾಶವಾಣಿ ಬಾನುಲಿ ಕೇಂದ್ರಗಳ ಉದ್ಘೋಶಕಿಯರ ಬಗ್ಗೆ ವಿಶೇಷವಾಗಿ ಹೇಳುವ ಹಾಗೆ ಇಲ್ಲ, ಅಷ್ಟೊಂದು ಅದ್ಭುತವಾದ ಭಾಷೆಯ ಬಳಕೆ. ತುಂಬಾ ಮಂದಗಾಮಿಯರಾಗಿ ಮನ ಸೆಳೆಯುತ್ತಾರೆ.ಅವರು ಬಳಕೆ ಮಾಡುವ ಪದಗಳನ್ನು ಗಮನಿಸ್ತಾ ಇರ್ತೀನಿ ಸಖತ್ ! ಈಗ ಈ ಹಾಡನ್ನು ಪ್ರಸಾರಿಸಿ ಎಂದು ಸಂದೇಶ ಕಳುಹಿಸಿರುವವರು….:-) ಸರ್ವಂ ಕನ್ನಡಮಯ೦.ಎಷ್ಟೊಂದು ಸಹನೆಯಿಂದ ರಾಶಿ ರಾಶಿ ಸಂದೇಶಗಳನ್ನು ಓದ್ತಾರೆ ಅದೇ ನನಗೆ ವಿಸ್ಮಯ ತರಿಸೋದು .

91 .1 ಆರ್ಜೆ ಸ್ಮೈಲಿ ಶ್ವೇತ ಹೆಸರಿಗೆ ತಕ್ಕಂತೆ ಸುಂದರ ಧ್ವನಿಯ ಹೆಣ್ಣುಮಗಳು.ಆಕೆಯ ಅನೇಕ ಟೀವಿ ಕಾರ್ಯಕ್ರಮಗಳನ್ನು ವೀಕ್ಷಿಸಿದ್ದೇನೆ ತುಂಬಾ ಚೆನ್ನಾಗಿ ಸಂದರ್ಶನ ನಡೆಸಿಕೊಡುವ ಕಲೆಗಾರಿಕೆ ಶ್ವೇತಳಲ್ಲಿದೆ.ಈಕೆಯೂ ಅಷ್ಟೆ ನಗದೆ ಇದ್ರೆ ಏನಾಗಿ ಬಿಡುತ್ತೋ ಎನ್ನುವವರ ಸಾಲಿಗೆ ಸೇರಿದ್ದಾರೆ..!ಪ್ರತಿದಿನ ಚೌಚೌ ಬಾತ್ ಹೆಸರಿನ ಕಾರ್ಯಕ್ರಮ ಶ್ವೇತ ನಡೆಸಿ ಕೊಡೋದು.

No comments: