Sunday, October 24, 2010

ದೀಪಾವಳಿ

Wikipedia ಇಂದ



ದೀಪಾವಳಿ



ಹಬ್ಬದ ಸಂಕೇತವಾದ ಅಲಂಕೃತ ದೀಪ


ಇತರ ಹೆಸರುಗಳು ದಿವಾಳಿ, ದೀಪಗಳ ಹಬ್ಬ

ಆಚರಿಸುವವರು ಹಿಂದೂ ಧರ್ಮ, ಸಿಖ್ ಧರ್ಮ, ಜೈನ ಧರ್ಮ ಮತ್ತು ಭೌದ್ಧ ಧರ್ಮಗಳ ಅನುಯಾಯಿಗಳು

ರಜಾ ಪ್ರಕಾರ ಧಾರ್ಮಿಕ

ಪ್ರಾಮುಖ್ಯತೆ ವಿವಿಧ

ಆರಂಭ

ಮುಕ್ತಾಯ
ಆಚರಣೆ ದಿನ ಕಾರ್ತಿಕ ಮಾಸದ ಅಮಾವಾಸ್ಯೆಯ ಎರಡು ದಿನಗಳು ಮುಂಚೆ ಪ್ರಾರಂಭವಾಗಿ ಅದರ ಎರಡು ದಿನಗಳ ನಂತರ ಮುಗಿಯುತ್ತದೆ.

೨೦೦೬ರಲ್ಲಿ ದಿನಾಂಕ ಅಕ್ಟೋಬರ್ ೨೧

ಆಚರಣೆಗಳು ಮನೆಗಳ ದೀಪಾಲಂಕಾರ, ಪಟಾಕಿಗಳು, ಕಾಣಿಕೆಗಳು

ಆಚರಣೆ ವಿಧಿಗಳು ಪ್ರಾರ್ಥನೆ, ಪೂಜೆ

ಸಂಭಂದಿತ ಹಬ್ಬಗಳು



ದೀಪಾವಳಿ (ದೀಪಗಳ ಸಾಲು) ದೀಪಗಳ ಹಬ್ಬ; ಇದನ್ನು ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ ಉತ್ತರ ಭಾರತದಲ್ಲಿ ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು.



ಪರಿವಿಡಿ [ಅಡಗಿಸು]

೧ ದಿನಾಂಕ

೨ ಪ್ರಾಮುಖ್ಯತೆ

೩ ಆಚರಣೆ

೪ ಸ್ವಾರಸ್ಯ

೫ ಬಾಹ್ಯ ಸ೦ಪರ್ಕಗಳು



[ಬದಲಾಯಿಸಿ] ದಿನಾಂಕ

ಭಾರತದ ಸಾಂಪ್ರದಾಯಿಕ ಪಂಚಾಂಗಗಳು ಚಂದ್ರಮಾನವನ್ನು ಅವಲಂಬಿಸಿವೆ, ಅಂದರೆ ಆಶ್ವಯುಜ ಮಾಸ ಕೃಷ್ಣಪಕ್ಷದ ಚತುರ್ದಶಿ, ಅಮಾವಾಸ್ಯೆ ಹಾಗೂ ಕಾರ್ತಿಕ ಮಾಸ ಶುಕ್ಲಪಕ್ಷದ ಪಾಡ್ಯ - ಈ ದಿನಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ದೀಪಾವಳಿ ಹಬ್ಬ ಸಾಮಾನ್ಯವಾಗಿ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಆಚರಿಸಲಾಗುತ್ತದೆ. ಅಮಾವಾಸ್ಯೆಯ ದಿನ ದೀಪಾವಳಿಯ ಹಬ್ಬದ ಕಾಲದಲ್ಲೇ ಉಂಟಾಗುತ್ತದೆ. ಅಮಾವಾಸ್ಯೆಯ ನಿಖರ ದಿನಾಂಕ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ದಿನಗಳಂದು ಆಗಬಹುದು - ಇದರೊಂದಿಗೆ ದೀಪಾವಳಿಯ ದಿನಾಂಕವೂ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆಯಾಗಬಹುದು.



೨೦೦೪ ರಲ್ಲಿ ನವೆಂಬರ್ ೧೨ ರಂದು ಅಮಾವಾಸ್ಯೆ ಬಂದರೆ ಮುಂದಿನ ಎರಡು ವರ್ಷಗಳಲ್ಲಿ ಕ್ರಮವಾಗಿ ನವೆಂಬರ್ ೧ ಮತ್ತು ಅಕ್ಟೋಬರ್ ೨೫ ರಂದು ಆಚರಿಸಲಾಯಿತು.



[ಬದಲಾಯಿಸಿ] ಪ್ರಾಮುಖ್ಯತೆ

ಎರಡು ಪೌರಾಣಿಕ ಘಟನೆಗಳು ಮುಖ್ಯವಾಗಿ ದೀಪಾವಳಿಯೊಂದಿಗೆ ಸಂಬಂಧಿತವಾಗಿವೆ:



ಶ್ರೀ ರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ

ಅಮಾವಾಸ್ಯೆಯ ಹಿಂದಿನ ದಿನ (ಚತುರ್ದಶಿ) ಶ್ರೀ ಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ

ಒಟ್ಟಿನಲ್ಲಿ ದೀಪಾವಳಿಯಲ್ಲಿ ಕೇಡಿನ ಮೇಲೆ ಶುಭದ ವಿಜಯವನ್ನು ಆಚರಿಸಲಾಗುತ್ತದೆ.



ದೀಪಾವಳಿಯೊಂದಿಗೆ ಇನ್ನಿತರ ಪುರಾಣಗಳೂ ಸಂಬಂಧಿತವಾಗಿದೆ. ಉದಾಹರಣೆಗೆ, ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರು ದಿನ ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತದೆ.



ಸಿಕ್ಖ್ ಧರ್ಮದಲ್ಲಿಯೂ ದೀಪಾವಳಿ ಮುಖ್ಯ ಹಬ್ಬ. ೧೬೨೦ ರಲ್ಲಿ ಸಿಕ್ಖರ ಆರನೆಯ ಗುರು ಹರಗೋಬಿ೦ದ್ ಸಿ೦ಗ್ ಗ್ವಾಲಿಯರ್ನ ಕೋಟೆಯಲ್ಲಿ ಬಂಧಿತರಾಗಿದ್ದ ೫೨ ರಾಜರನ್ನು ಬಿಡಿಸಿ ತ೦ದ ದಿನವೆ೦ದು ಈ ಕಾಲವನ್ನು ಆಚರಿಸಲಾಗುತ್ತದೆ.

ದೀಪಾವಯು ಜೈನ ಧರ್ಮದಲ್ಲಿ ಕಡೆಯ ತೀರ್ಥಂಕರ ಮಹಾವೀರರು ಕಾರ್ತಿಕ ಚತಿರ್ದಶಿಯಂದು (ಕ್ರಿ.ಪೂ ೫೨೭ ಅಕ್ಟೋಬರ್ ೧೫) ಪಾವಾಪುರಿಯಲ್ಲಿ ಮೋಕ್ಷ ಹೊಂದಿದ ದಿನವಾಗಿ ಆಚರಿಸಲ್ಪಡುತ್ತದೆ.

ಕ್ರಿ.ಪೂ ೩ನೇ ಶತಮಾನದಲ್ಲಿ ಆಚಾರ್ಯ ಭದ್ರಬಾಹುವಿನಿಂದ ರಚಿತವಾದ ಕಲ್ಪಶ್ರುತ ಗ್ರಂಥದಲ್ಲಿರುವಂತೆ ಮಹಾವೀರರ ನಿರ್ವಾಣ ಕಾಲದಲ್ಲಿದ್ದ ದೇವತೆಗಳಿಂದ ಅಂಧಕಾರವು ಮರೆಯಾಗಿದ್ದಿತು. ಆದರೆ ಮುಂದಿನ ರಾತ್ರಿ ಗಾಡಾಂಧಕಾರವು ಆವರಿಸಿತು. ತಮ್ಮ ಗುರುವಿನ ಜ್ಜಾನಜ್ಯೋತಿಯ ಸಂಕೇತವಗಿ ೧೬ ಗಣ-ಚರ್ಕವರ್ತಿ, ೯ ಮಲ್ಲ ಮತ್ತು ೯ಗಣರಾಜ್ಯದಲ್ಲಿ ದ್ವಾರವನ್ನು ಬೆಳಗಿದರು.



ಜೈನರಿಗೆ ಇದು ವರ್ಷದ ಪ್ರಾರಂಭ.



[ಬದಲಾಯಿಸಿ] ಆಚರಣೆ

ಹಿಂದೂ ಧರ್ಮದ ಜನರು ಪ್ರತಿ ವರ್ಷವೂ ಪ್ರಪ೦ಚದ ಎಲ್ಲೆಡೆ ದೀಪಾವಳಿಯನ್ನು ವಿಜೃ೦ಭಣೆಯಿ೦ದ ಆಚರಿಸುತ್ತಾರೆ. ಹೊಸ ಬಟ್ಟೆಗಳು, ಸಿಹಿತಿ೦ಡಿಗಳು ಎಲ್ಲಕ್ಕೂ ಹೆಚ್ಚಾಗಿ ಪಟಾಕಿಗಳಿಗೆ ದೀಪಾವಳಿ ಪ್ರಸಿದ್ಧ. ಉತ್ತರ ಭಾರತದಲ್ಲಿ ದೀಪಾವಳಿಯ ಸಮಯವೇ ಹೊಸ ಆರ್ಥಿಕ ವರ್ಷದ ಪ್ರಾರಂಭ ಸಹ; ಹೊಸ ಲೆಕ್ಕದ ಪುಸ್ತಕಗಳನ್ನು ಈ ಸಮಯದಲ್ಲೇ ತೆರೆಯಲಾಗುತ್ತದೆ. ದೀಪಾವಳಿಯ ಅಂಗವಾಗಿ ನಡೆಯುವ ಇತರ ಸಮಾರಂಭಗಳಲ್ಲಿ ಆಯುಧಪೂಜೆ ಮತ್ತು ಗೋಪೂಜೆಗಳನ್ನು ಹೆಸರಿಸಬಹುದು. ಪಟಾಕಿಗಳನ್ನು ಸ್ಫೋಟಿಸುವುದು ದೀಪಾವಳಿಯ ಆಚರಣೆಯ ಒಂದು ಭಾಗವಾಗಿದೆ.



ದಿಪದ ಹಬ್ಬ .ಹೊಲ ತೊಟದಲ್ಲಿ ದಿಪದ ಕಮ್ಬವನ್ನು ನಿತ್ತಿ ಆಛರಿಸುವುದು.



ಅನೇಕ ಕಡೆಗಳಲ್ಲಿ ದೀಪಾವಳಿಯನ್ನು ಐದು ದಿನಗಳ ಕಾಲ ಆಚರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಮೂರು ದಿನಗಳ ಆಚರಣೆ ನಡೆಯುತ್ತದೆ. ದಕ್ಷಿಣ ಭಾರತದಲ್ಲಿ ನರಕ ಚತುರ್ದಶಿ ಪ್ರಮುಖವಾದರೆ, ಉತ್ತರ ಭಾರತದಲ್ಲಿ ಅಮಾವಾಸ್ಯೆಯಂದು ಆಚರಿಸಲಾಗುವ ಲಕ್ಷ್ಮಿ ಪೂಜೆ ಮುಖ್ಯವಾದದ್ದು.



ಜೈನ ಧರ್ಮದಲ್ಲಿ ದೀಪಾವಳಿಯನ್ನು ಕಾರ್ತಿಕ ಮಾಸದ ೩ ದಿನ ಆಚರಿಸುತ್ತಾರೆ. ಮನೆಯ ದ್ವಾರವನ್ನು ದೀಪದಿಂದ ಬೆಳಗುವುದರ ಜೊತೆಗೆ ಈ ಸಮಯದಲ್ಲಿ ಮಹಾವೀರರ ಉಪದೇಶಗಳನ್ನೊಳಗೊಂಡ ಉತ್ತಾರಾಧ್ಯಾಯನ ಸ್ತೋತ್ರದ ಪಠಣೆ ಮಾಡುತ್ತಾರೆ. ಕೆಲವರು ಮಹಾವೀರರ ನಿರ್ವಾಣ ಸ್ಠಳವಾದ ಬಿಹಾರ ರಾಜ್ಯದ ಪಾವಾಪುರಿಗೆ ಯಾತ್ರೆ ಕೈಗೊಳ್ಳುತ್ತಾರೆ. ವ್ಯಾಪಾರಿಗಳು ಹೊಸ ಲೆಕ್ಕದ ಪುಸ್ತಕಗಳನ್ನು ಪ್ರಾರಂಭಿಸುತ್ತಾರೆ.



[ಬದಲಾಯಿಸಿ] ಸ್ವಾರಸ್ಯ

ಅಕ್ಟೋಬರ್ ನ ಕೊನೆಯ ವಾರದಲ್ಲಿ ಅಂತರ್ಜಾಲದ ಶೋಧ ಯಂತ್ರವಾದ ಗೂಗಲ್ ನಲ್ಲಿ ಎರಡನೆ ಅತಿ ಹೆಚ್ಚು ಶೋಧಗಳು ದೀಪಾವಳಿಯ ಗ್ರೀಟಿ೦ಗ್ ಕಾರ್ಡ್ ಗಳಿಗಾಗಿ ನಡೆದವು!

ಎಲ್ಲ ಅಪ್ಪ ಅಮ್ಮಂದಿರು ನೋಡಲೇಬೇಕಾದ ಚಿತ್ರ

ಎಲ್ಲ ಅಪ್ಪ ಅಮ್ಮಂದಿರು ನೋಡಲೇಬೇಕಾದ ಚಿತ್ರ
*ರಾಜೇಂದ್ರ ಚಿಂತಾಮಣಿ



ನಾನು ನನ್ನ ಕನಸು
ಸುಮಾ ಗುಹಾ
ರಮೇಶ್ ಅರವಿಂದ್
ಆಮೂಲ್ಯ
ಪ್ರಕಾಶ್ ರೈ
ಪ್ರಕಾಶ್ ರೈ ತಾನೊಬ್ಬ ಅನುಭವಿ ನಟನಷ್ಟೇ ಅಲ್ಲ ತಮ್ಮಲ್ಲೊಬ್ಬ ಪ್ರಬುದ್ಧ ನಿರ್ದೇಶಕನೂ ಅಡಗಿದ್ದಾನೆ ಎಂಬುದನ್ನು 'ನಾನು ನನ್ನ ಕನಸು' ಚಿತ್ರದ ಮೂಲಕ ನಿರೂಪಿಸಿದ್ದಾರೆ. ನಟನೆಯೊಂದಿಗೆ ನಿರ್ದೇಶನವನ್ನೂ ಮುಂದುವರಿಸುವ ಸೂಚನೆಯನ್ನು ಪ್ರಕಾಶ್ ರೈ ಕೊಟ್ಟಿದ್ದಾರೆ. ಈ ಚಿತ್ರ ಎಲ್ಲಾ ಅಪ್ಪ ಅಮ್ಮಂದಿರಿಗೂ ಮರೆಯಲಾಗದ ಅನುಭವ ನೀಡುತ್ತದೆ. ''ಒಂದು ಮಗು ಹುಟ್ಟಿದಾಗ ಅಪ್ಪನೂ ಹುಟ್ಟುತ್ತಾನೆ'' ಎಂಬ ನಂಬಿಕೆಯೊಂದಿಗೆ ಕತೆ ಕುತೂಹಲಭರಿತವಾಗಿ ಸಾಗುತ್ತದೆ.

ಚಿತ್ರ ಮುಂಜಾನೆಯ ಚುಮು ಚುಮು ಚಳಿಯ ವಾಕಿಂನೊಂದಿಗೆ ಆರಂಭವಾಗುತ್ತದೆ. ಅಲ್ಲೊಂದು ಮಗು ಯಾರನ್ನೋ ಕಾತುರದಿಂದ ನಿರೀಕ್ಷಿಸುತ್ತಿರುತ್ತದೆ. ಉತ್ತಪ್ಪನಿಗೂ (ಪ್ರಕಾಶ್ ರೈ)ಗೂ ಕುತೂಹಲ. ಮಗು ಅವರಪ್ಪ ಜಯಂತ್ ಗಾಗಿ (ರಮೇಶ್ ಅರವಿಂದ್) ನಿರೀಕ್ಷಿಸುತ್ತಿರುವುದು ಗೊತ್ತಾಗುತ್ತದೆ. ಒಬ್ಬರು ಎದೆಮಟ್ಟಕ್ಕೆ ಬೆಳೆದ ಮಗಳ ತಂದೆ. ಮತ್ತೊಬ್ಬರು ಎರಡು ವರ್ಷದ ಮಗುವಿನ ತಂದೆ. ಇಬ್ಬರ ನಡುವೆ ಬೆಳಗಿನ ಚಹಾ ಸೇವನೆಯೊಂದಿಗೆ ಮಾತುಕತೆ ಸಾಗುತ್ತದೆ. ಕಥೆ ಹಿಂದಕ್ಕೆ ಹೊರಳುತ್ತದೆ.

ಪ್ರಕಾಶ್ ರೈ ತಮ್ಮ ಮಗಳು ಕನಸು ಬಗ್ಗೆ ಹೇಳುತ್ತಾ ಹೋಗುತ್ತಾರೆ. ಅವಳು ಹುಟ್ಟಿದಾಗಿನಿಂದ ಒಂದೊಂದೆ ಹೆಜ್ಜೆ ಇಡುವ ತನಕ, ಅವಳೊಂದಿಗೆ ಆಟವಾಡುವ, ಶಾಲೆಗೆ ಸೇರಿಸುವ ತನಕ ಮಗಳೆಂದರೆ ಪ್ರಕಾಶ್ ರೈಗೆ ಅಕ್ಕರೆ. ಒಂದು ಕ್ಷಣವೂ ಅವಳನ್ನು ಬಿಟ್ಟಿರಲಾರದಷ್ಟು ಪ್ರೀತಿ. ಕಡೆಗೆ ಮಗಳನ್ನು ಶಾಲೆಗೆ ಕಳುಹಿಸಬೇಕಾದರೂ ಅದು ಎಲ್ಲಿ ತನ್ನಿಂದ ದೂರವಾಗುತ್ತದೋ ಎಂಬ ಅಳುಕು ತಂದೆಗೆ ಕಾಡುತ್ತಿರುತ್ತದೆ.



ಆದರೆ ಕನಸು ತಾಯಿ ಕಲ್ಪನಾ(ಸಿತಾರಾ)ತಂದೆ ಪ್ರಕಾಶ್ ರೈ ಅವರಂತೆ ಅಲ್ಲ. ಮಗಳಿಗೆ ಏನು ಬೇಕು ಏನು ಬೇಡ ಎಂಬ ಆಯ್ಕೆ ಸ್ವಾತಂತ್ರ ಆಕೆಗೆ ಬಿಟ್ಟಿರುತ್ತಾಳೆ. ಮಗಳ ಬಗ್ಗೆ ಮಮಕಾರವಿದ್ದರೂ ಅಪ್ಪನಂತೆ ಸದಾ ಮಗಳ ಹಿಂದೆ ಬಿದ್ದಿರುವುದಿಲ್ಲ. ಒಂದು ಸನ್ನಿವೇಶದಲ್ಲಿ ಮಗು ಶಾಲೆಗೆ ಹೋಗಲು ಸೈಕಲ್ ಬೇಕು ಎನ್ನುತ್ತದೆ. ಸೈಕಲ್ ಬೇಡ, ಶಾಲೆಗೆ ನಾನೇ ಬಿಡುತ್ತೇನೆ. ಬಿದ್ದು ಬಿಡುತ್ತೀಯಾ ಎಂಬ ಅಳುಕು ತಂದೆಗೆ ಕಾಡುತ್ತಿರುತ್ತದೆ. ಆದರೆ ಮಗಳಿಗೆ ಎಲ್ಲರಂತೆ ತಾನೂ ಸೈಕಲ್ ನಲ್ಲಿ ಶಾಲೆಗೆ ಹೋಗಬೇಕೆಂಬ ಆಸೆ. ಸೈಕಲ್ ಹೊಡೆಯುವುದು ಹೇಗೆ ಎಂದು ಮಗಳಿಗೆ ಪಾಠ ಹೇಳಿಕೊಡಲು ಹೋಗಿ ಅಪಹಾಸ್ಯಕ್ಕೆ ಒಳಗಾಗುತ್ತಾನೆ ಅಪ್ಪ.



ಕಡೆಗೆ ಮಗಳು ಸೈಕಲ್ ತುಳಿದುಕೊಂಡು ಶಾಲೆಗೆ ಹೊರಡುತ್ತಾಳೆ. ತನ್ನ ಮಗಳಿಗೆ ಎಲ್ಲಿ ಹೆಚ್ಚುಕಡಿಮೆಯಾಗುತ್ತದೋ ಎಂಬ ಅಳುಕಿನಲ್ಲಿ ಪ್ರಕಾಶ್ ರೈ ಆಕೆಯನ್ನು ಹಿಂಬಾಲಿಸುತ್ತಾನೆ. ಇದು ಆಕೆಗೆ ಗೊತ್ತಾಗಿ ಸೈಕಲ್ ನಿಲ್ಲಿಸಿ, ಅಪ್ಪ ನನ್ನನ್ಯಾಕೆ ಫಾಲೋ ಮಾಡುತ್ತೀರಾ. ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ. ''I Know What I Do'' ಎನ್ನುತ್ತಾಳೆ. ಅಲ್ಲಿಗೆ ತನ್ನ ಮಗಳು ಇನ್ನೂ ಚಿಕ್ಕಮಗು ಅಲ್ಲ ಎಂಬುದು ಅಪ್ಪನ ಅರಿವಿಗೆ ಬರುತ್ತದೆ.



ಕಡೆಗೆ ಮಗಳು ದೊಡ್ಡವಳಾಗಿ ದೆಹಲಿಯ ಪ್ರತಿಷ್ಠಿತ ಜವಹಾರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಎಂಬಿಎ ಸೀಟು ಗಿಟ್ಟಿಸುತ್ತಾಳೆ. ಇಲ್ಲೂ ಅಪ್ಪನಿಗೆ ಮತ್ತೊಮ್ಮೆ ತಮ್ಮ ಮಗಳು ದೂರವಾಗುತ್ತಾಳೆ ಎಂಬ ಪ್ರಜ್ಞೆ ಜಾಗೃತವಾಗುತ್ತದೆ. ದೆಹಲಿಗೆ ಹೋಗುವುದು ಬೇಡ. ಅಲ್ಲಿನ ವೆದರ್ ನಿನಗೆ ಅಡ್ಜಸ್ಟ್ ಆಗಲ್ಲ ಎಂಬಂತಹ ನೆಪಗಳನ್ನು ಹೇಳಿ ಇಲ್ಲೇ ಮಣಿಪಾಲ್ ನಲ್ಲಿ ಓದುಕೋ ಎನ್ನುತ್ತಾನೆ. ಆದರೆ ಮಗಳು ಇವೆಲ್ಲಾ ಅರ್ಥವಾಗಷ್ಟು ದಡ್ಡಿಯಲ್ಲ.



ಕಡೆಗೂ ಅಪ್ಪನನ್ನು ಹೇಗೋ ಒಪ್ಪಿಸುತ್ತ್ತಾಳೆ. ಆದರೆ ಶಿಕ್ಷಣ ಮುಗಿಸಿಕೊಂಡು ಬರುವ ವೇಳೆ ಅಪ್ಪನಿಗೆ ಆಘಾತ ಕಾದಿರುತ್ತದೆ. ತಾನೊಬ್ಬ ಹುಡುಗನನ್ನು ಪ್ರೀತಿಸುತ್ತಿರುವುದಾಗಿ ಹೇಳುತ್ತಾಳೆ. ಅಪ್ಪ ಅಷ್ಟಕ್ಕೆ ಸಿಟ್ಟಾಗಿ ಮಗಳ ಮೇಲೆ ಮುನಿಸಿಕೊಂಡು ಹೊರಟು ಹೋಗುತ್ತಾನೆ. ಕಾಲೇಜಿನ ದಿನಗಳಲ್ಲಿ ಯಾರೋ ಒಬ್ಬ ಪ್ರೇಮಪತ್ರ ಕೊಟ್ಟಾಗ ಅಪ್ಪ. ಇಂತಹ ವಿಚಾರಗಳಲ್ಲೆಲ್ಲಾ ಹೇಗೆ ನಿಭಾಯಿಸಬೇಕು ಎಂದು ಹೇಳಿಕೊಟ್ಟಿರುತ್ತಾರೆ. ನೀನೇ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಬೇಕು. ಹುಡುಗ ಇಷ್ಟ ಇಲ್ಲ ಎಂದರೆ ಅವನೊಂದಿಗೆ ಮಾತನಾಡಿ ವಿಷಯ ಹೇಳು. ಇಷ್ಟಕ್ಕೆಲ್ಲಾ ಪ್ರಾಂಶುಪಾಲರಿಗೆ ಹೇಳಿ ವಿಷಯ ದೊಡ್ಡದು ಮಾಡುವ ಅವಶ್ಯಕತೆ ಇಲ್ಲ ಎಂದು ಅಪ್ಪ ಮಗಳಿಗೆ ಬುದ್ಧಿ ಹೇಳಿರುತ್ತಾನೆ.



ಆದರಿಲ್ಲಿ ಪ್ರೀತಿಸಿದ್ದೇನೆ ಎಂದು ಹೇಳಿದಾಗ ಅಪ್ಪ ಕೋಪಿಸಿಕೊಳ್ಳುತ್ತಾನೆ. ಅಪ್ಪ ಮಗಳ ನಡುವೆ ಭಾವನೆಗಳ ಸಂಘರ್ಷ ಶುರುವಾಗುತ್ತದೆ. ತನ್ನ ಮಗಳು ಪ್ರೀತಿಸಿರುವ ಹುಡುಗ ಯಾವ ಜಾತಿಯೋ ಎಂದು ಯೋಚಿಸುತ್ತಿರುವ ತಂದೆಗೆ ಆತ ಪಂಜಾಬಿನ ಸಿಖ್ ಜನಾಂಗದವ ಎಂದು ತಿಳಿದು ಮತ್ತಷ್ಟು ಕುಗ್ಗಿ ಹೋಗುತ್ತಾನೆ.ಆದರೆ ಬರುಬರುತ್ತಾ ತನ್ನ ಮಗಳ ಕೈಹಿಡಿಯುವಾತ ಬುದ್ಧಿವಂತ ಎಂಬುದು ಪ್ರಕಾಶ್ ರೈಗೆ ಮನವರಿಕೆಯಾಗುತ್ತದೆ. ಕಥೆ ಆಸಕ್ತಿ ಕೆರಳಿಸುತ್ತಾ ಸಾಗುತ್ತದೆ.



ಚಿತ್ರದಲ್ಲಿ ಯಾರೊಬ್ಬರ ಅಭಿನಯವನ್ನೂ ಪ್ರಶ್ನಿಸುವಂತಿಲ್ಲ. ಅಷ್ಟೊಂದು ಚೆನ್ನಾಗಿ ಎಲ್ಲರೂ ಹೊಂದಿಕೊಂಡಿದ್ದಾರೆ. ಸುದೀರ್ಘ ಸಮಯದ ಬಳಿಕ ಸಿತಾರಾ ಕನ್ನಡಕ್ಕೆ ಮರಳಿದ್ದಾರೆ. ತಾಯಿಯ ಪಾತ್ರದಲ್ಲಿ ಅವರು ಕಂಗೊಳಿಸಿದ್ದಾರೆ. ಇನ್ನು ಮಗಳಾಗಿ ಅಭಿನಯಿಸಿರುವ ಅಮೂಲ್ಯ ಪಾತ್ರ ಆಪ್ತವೆನ್ನಿಸುತ್ತದೆ. ಹಂಸಲೇಖ ಅವರ ಸಂಗೀತ ಸಾಹಿತ್ಯ ಖುಷಿಕೊಡುತ್ತದೆ.ಒಂದು ಮಾಮರ ಮಾಮರದಲ್ಲೊಂದು ಗುಬ್ಬಿ ಗೂಡು...ಎಂಬ ಹಾಡು ಕೇಳಲು ಇಂಪಾಗಿದೆ. ರಮೇಶ್ ಅರವಿಂದ್ ಅವರದು ಅತಿಥಿ ಪಾತ್ರವಾದರೂ ನೆನಪಿನಲ್ಲಿ ಉಳಿಯುವಂತಹ ಪಾತ್ರ.



ವಿಶೇಷವಾಗಿ ಅನಂತ ಅರಸ್ ಅವರ ಛಾಯಾಗ್ರಹಣದ ಬಗ್ಗೆ ಹೇಳಲೇಬೇಕು. ಕಾವೇರಿಯ ಉಗಮ ಸ್ಥಳವಾದ ಭಾಗಮಂಡಲ, ಚಿಕ್ಕಮಗಳೂರಿನ ಬಾಬಾಬುಡನಗಿರಿ, ಕೆಳಗೂರು ಟೀ ಎಸ್ಟೆಟ್, ಸಕಲೇಶಪುರ, ಶನಿವಾರಸಂತೆ ಹಾಗೂ ಮಡಿಕೇರಿಯ ಸೊಬಗಿನ ತಾಣಗಳು ಕ್ಯಾನ್ವಾಸ್ ಮೇಲಿನ ಸುಂದರ ಕಲಾಕೃತಿಗಳಂತೆ ಮೂಡಿಬಂದಿವೆ. ಅರಸ್ ಅವರ ಕ್ಯಾಮೆರಾ ಕೈಚಳಕ ಗಮನಸೆಳೆಯುತ್ತದೆ. ರೀಮೇಕ್ ಚಿತ್ರವಾದರೂ ಪ್ರಕಾಶ್ ರೈ ಕನ್ನಡ ಜಾಯಮಾನಕ್ಕೆ ತಕ್ಕಂತೆ ತೆಗೆದಿದ್ದಾರೆ.



ಚಿಕ್ಕಂದಿನಿಂದಲೇ ಮಕ್ಕಳನ್ನು ಅಲ್ಲಿ ಹೋಗಬೇಡ, ಇಲ್ಲಿ ಹೋಗಬೇಡ. ಅದು ಮುಟ್ಟಬೇಡ. ನಿನಗೆ ಗೊತ್ತಾಗಲ್ಲ. ಹೀಗೆ ಎಲ್ಲಾ ಇಲ್ಲಗಳನ್ನು ಅವರ ಮನಸ್ಸಿನಲ್ಲಿ ತುಂಬಬೇಡಿ. ಮಕ್ಕಳು ಮಕ್ಕಳಂತೆ ಬೆಳೆಯಲು ಬಿಡಿ. ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಬೆಳೆಸಿ. ತಂದೆಯ ಜವಾಬ್ದಾರಿಯೇನು? ತಾಯಿಯಾದವಳು ಹೇಗಿರಬೇಕು. ಮಕ್ಕಳ ಬೇಕು ಬೇಡಗಳೇನು? ಎಂಬ ಪ್ರಶ್ನೆಗಳಿಗೆ ಉತ್ತರ 'ನಾನು ನನ್ನ ಕನಸು'.