Tuesday, May 25, 2010

ಇಂದಿನ ಸುದ್ದಿಗಳು ೨೫-೫-೨೦೧೦

1. ವಿಮಾನ ದುರಂತ : ಬ್ಲಾಕ್ ಬಾಕ್ಸ್ ಇನ್ನೂ ಸಿಕ್ಕಿಲ್ಲ. ಡಿಎನ್ಎ ಫಲಿತಾಂಶಕ್ಕೆ 22 ಶವಗಳು ಕಾದಿವೆ.
2. ರೈತರ ಮೇಲಿನ ಕೇಸುಗಳೆಲ್ಲಾ ವಾಪಾಸ್ : ಸಚಿವ ಸಂಪುಟದಲ್ಲಿ ನಿರ್ಧಾರ.
3. ಕೇಂದ್ರ ಯುಪಿಎ ಸರಕಾರ - ಎರಡನೇ ಇನ್ನಿಂಗ್ಸ್ : ಗುರಿ ತಲುಪದೇ ನಿವೃತ್ತಿ ಆಗಲಾರೆ, ಸೋನಿಯಾ ಮೇಡಂ ಜೊತೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದರು ಪ್ರಧಾನಿ ಮನಮೋಹನ ಸಿಂಗ್.
4. ಜಾರ್ಖಂಡ್ : ಶಿಬು ಸೊರೆನ್ ಗೆ ಬಿಜೆಪಿ ಬೆಂಬಲ ವಾಪಾಸ್. ಬಹುಮತ ಸಾಬೀತುಪಡಿಸಲು ವಾರದ ಗಡುವು ನೀಡಿದ ರಾಜ್ಯಪಾಲರು.
5. ಚನ್ನರಾಯನಪಟ್ಟಣದಲ್ಲಿ ತಮ್ಮಸಹಾಯಕ ಸುಧಾಕರಗೌಡ ಮದುವೆಗೆ ಆಗಮಿಸಿದ, ಬಾಲಿವುಡ್ ನಟ ಅಮೀರಖಾನ್ ಮತ್ತು ಪತ್ನಿ ಕಿರಣರಾಯ ಮದುವೆ ಗಿಫ್ಟ್ ಆಗಿ 18 ಲಕ್ಷ ರೂ. ಮೌಲ್ಯದ ಕಾರು ಹಾಗೂ ಮುಂಬೈನಲ್ಲಿ ಮನೆಯೊಂದನ್ನು ನೀಡಿದರು.
6. ಗಡಿ ಗುರುತು ನಾಶ ಹಾಗೂ ಜೀವಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ಸಚಿವ ಜನಾರ್ಧನರೆಡ್ಡಿ ವಿರುದ್ಧ ಜಾಮೀನು ರಹಿತ ವಾರಂಟ್ ಮುಂದುವರಿಸಿರುವ ನ್ಯಾಯಾಲಯ ಜೂ.26ಕ್ಕೆ ವಿಚಾರಣೆಯನ್ನು ಮುಂದೂಡಿದ್ದಾರೆ.
7. ಕಾಂಗ್ರೆಸ್ ಪಕ್ಷದ ಸಾಂಸ್ಥಿಕ ಚುನಾವಣೆಯನ್ನು ಈ ತಿಂಗಳ ಅಂತ್ಯಕ್ಕೆ ನಡೆಯಲಿದ್ದು, ಜೂನ್ ಅಂತ್ಯಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ: ಕಾಂಗ್ರೆಸ್ ಅಧ್ಯಕ್ಷ ಆರ್.ವಿ.ದೇಶಪಾಂಡೆ.
8. ರೆಡ್ಡಿ ಸಹೋದರರು 30 ಗಣಿಗಳಿಂದ ಕಪ್ಪ ಕಾಣಿಕೆ ಸಂಗ್ರಹಿಸುತ್ತಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಆರೋಪಿಸಿದ್ದಾರೆ.
9. ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಕ್ಕೆ ಗುರಿಯಾಗಿರುವ ಮಾಜಿ ಸಚಿವ ಹರತಾಳು ಹಾಲಪ್ಪ ಅವರ ನ್ಯಾಯಾಂಗ ಬಂಧನದ ಅವಧಿಯು ಜೂ.7ರವರೆಗೆ ವಿಸ್ತರಿಸಲಾಗಿದೆ.
10. ಭಟ್ಕಳ ಮೂಲದ ಉಗ್ರ ಅಬ್ದುಲ್ ಸಮದ್ ನನ್ನು ಮಂಗಳೂರಿನಲ್ಲಿ ಸೋಮವಾರ ಬಂಧಿಸಲಾಗಿದೆ. ಈತ ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

Sunday, May 23, 2010

ಇಂದಿನ ಸುದ್ದಿಗಳು ೨೩-೫-೨೦೧೦

ಅಪ್ ಡೇಟ್ ಸುದ್ದಿಗಳು
1. ವಿಮಾನ ದುರಂತ :

ಇಂದಿನ ಸುದ್ದಿಗಳು

Saturday, May 22, 2010

ಇಂದಿನ ಸುದ್ಧಿಗಳು ೨೨-೫-೨೦೧೦

ಬ್ರೇಕಿಂಗ್ ನ್ಯೂಸ್
ವಿಮಾನ ಅಪಘಾತ : 163 ಜನರ ಸಜೀವ ದಹನ - ಮೂವರು ಗಂಭೀರ ಗಾಯ
ಮಂಗಳೂರು : ಇಂದು ಬೆಳಗ್ಗೆ 6-15ರ ಸುಮಾರಿಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವೊಂದು ಅಪಘಾತಕ್ಕೀಡಾಗಿ ಸುಮಾರು 163 ಜನರು ಸಜೀವವಾಗಿ ದಹನಗೊಂಡ ಘಟನೆ ಇಲ್ಲಿನ ಕೆಂಜಾರು ಬಳಿ ನಡೆದಿದೆ.
ದುಬೈದಿಂದ ಹೊರಟಿದ್ದ ಏರ್ ಇಂಡಿಯಾ ಎಕ್ಸ್ಪ್ ಪ್ರೆಸ್ ವಿಮಾನವು ಬೆಳಗ್ಗೆ 6-45ರ ಸುಮಾರಿಗೆ ಬಜ್ಪೆ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗಬೇಕಿತ್ತು. ಆದರೆ, ಕೆಂಜಾರು ಬಳಿ ವಿಮಾನ ಅಪಘಾತಕ್ಕೀಡಾಗಿದೆ. ಇದರಲ್ಲಿದ್ದ ಸುಮಾರು 169 ಜನ ಪ್ರಯಾಣಿಕರ ಪೈಕಿ 163 ಜನ ದುರ್ಮರಣಕ್ಕೀಡಾಗಿದ್ದು, ಉಳಿದವರು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಈ ಅಪಘಾತಕ್ಕೆ ತಾಂತ್ರಿಕ ತೊಂದರೆಗಳ ಕಾರಣವೆಂದು ಹೇಳಲಾಗಿದ್ದರೂ, ಸ್ಪಷ್ಟ ಮಾಹಿತಿ ಇನ್ನೂ ಗೊತ್ತಾಗಿಲ್ಲ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ, ತಕ್ಷಣವೇ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಬದುಕುಳಿದವರ ರಕ್ಷಣಗೆ ಮುಂದಾಗಿದ್ದಾರೆ. ಮಕ್ಕಳು ಸೇರಿದಂತೆ ಈ ಅವಘಢದಲ್ಲಿ ಮಹಿಳೆಯರು ಸಜೀವ ದಹನವಾಗಿದ್ದಾರೆ ಎಂದು ಹೇಳಲಾಗಿದೆ. ಅಪಘಾತಕ್ಕೆ ಕಾರಣವೇನೆಂಬುದು ತನಿಖೆಯಿಂದ ತಿಳಿಯಲು ಸಾಧ್ಯ ಎನ್ನಲಾಗಿದೆ.

1. ಗೂರ್ಖಾ ನಾಯಕ ತಮಂಗ್ ಕಗ್ಗೊಲೆ.
2. ಹಿಂದಿ, ಇಂಗ್ಲೀಷ ಭಾಷೆಯಲ್ಲಿ ಚಿತ್ರೀಕರಣಗೊಂಡ 'ಕೈಟ್ಸ್' ಚಿತ್ರವನ್ನು ಬಿಡುಗಡೆ ಮಾಡಬಾರದೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನಿರ್ಧಾರಕ್ಕೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ದೊರೆತಿದೆ.
3. 10 ತರಗತಿಯವರೆಗೆ ಹೊಸ ಪಠ್ಯಕ್ರಮ : ಮುಂದಿನ ವರ್ಷದಿಂದ 5ನೇ ತರಗತಿಯವರೆಗೆ ನೂತನ ಪಠ್ಯಕ್ರಮ, 2014ಕ್ಕೆ 10ನೇ ತರಗತಿವರೆಗೂ ನೂತನ ಪಠ್ಯ. ವೆಬ್ ಸೈಟ್ ನಲ್ಲಿ ಸಾರ್ವಜನಿಕ ಚರ್ಚೆಗೆ ಆಹ್ವಾನಿಸಲಾಗಿದೆ.
4. ರಾಜ್ಯದ 9 ಜನ ಐಎೆಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
5. ರೈತರ ಮಹಾಸಂಗಮಕ್ಕೆ ಕೂಡಲ ಸಂಗಮ ಸಜ್ಜು.
6. ಲೈಲಾ ಚಂಡಮಾರುತ ಎಫೆಕ್ಟ್ : ಗುಲ್ಬರ್ಗದಲ್ಲಿ ಭಾರೀ ಮಳೆ. ಆಂಧ್ರದಲ್ಲಿ 27 ಜನ ಸಾವು.
7. ಇಂದು ಸಿಇಟಿ ಫಲಿತಾಂಶ ಪ್ರಕಟ.
8. ಉಗ್ರ ಕಸಾಬ್ ಈಗ ಖೈದಿ ನಂ. ದಿ.7096.
9. ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ ಮುಷರಫ್ ಅವರಿಗೆ ಪ್ರಧಾನಿಯಾಗುವ ಬಯಕೆ ಆಗಿದೆಯಂತೆ. ಹಾಗಂತ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
10. ಭಾರತದ ಮಾಜಿ ಪ್ರಧಾನಿ ರಾಜೀವ ಗಾಂಧಿ ಅವರ ಪುಣ್ಯಸ್ಮರಣೆ ನಿಮಿತ್ತ ನಿನ್ನೆ ಇಡೀ ದೇಶ ಅವರಿಗೆ ನಮನ ಸಲ್ಲಿಸಿತು.

ಇಂದಿನ ಸುದ್ಧಿಗಳು ೨೨-೫-೨೦೧೦

Friday, May 21, 2010

ಇಂದಿನ ಸುದ್ದಿಗಳು ೨೧-೫-೨೦೧೦

ಆಂಧ್ರ ತತ್ತರ : ಚಂಡಿ ಲೈಲಾಗೆ 16 ಜನ ಬಲಿ.
ಬೆಂಗಳೂರಿನ ಅಲ್ಲಲ್ಲಿ ಬಿರುಗಾಳಿ, ಮಳೆ : ಒಂದು ಸಾವು
ಸಿಎಂ ರಾಜೀನಾಮೆಗೆ ಸಿದ್ಧರಾಮಯ್ಯ ಆಗ್ರಹ
ರಾಜ್ಯಪಾಲರು ದಿಢೀರ್ ದೆಹಲಿಗೆ : ರಾಜ್ಯದಲ್ಲಿ ರೆಕ್ಕೆ -ಪುಕ್ಕ
ಕೈಟ್ಸ್ ಸಿನಿಮಾ : ಸೂತ್ರ ಹಿಡಿದ ಕರ್ನಾಟಕ ವಾಣಿಜ್ಯ ಮಂಡಳಿ
ಮಾಜಿ ಸಚಿವ ಹಾಲಪ್ಪ ಪ್ರಕರಣ : ರಕ್ತ ಮಾದರಿ -ಕೋರ್ಟ ಆದೇಶ ಿಂದು
ನಿತ್ಯಾನಂದನ ಜಾಮೀನು ಅರ್ಜಿ: 24ರಂದು ವಿಚಾರಣೆ
ಸಾನಿಯಾ -ಮಲಿಕಗೆ ದುಬೈನಲ್ಲಿ ಮನೆ ಬೇಕಿದೆಯಂತೆ.
ಎಟಿಎಂ ಸೃಷ್ಟಿಕರ್ತ ಸ್ಕಾಟಲೆಂಡನ ಜಾನ ಶೆಫರ್ಡ ಲಂಡನ್ನಿನಲ್ಲಿ ನಿಧನ
ಬಳ್ಳಾರಿಯ 18 ಗಣಿ ಕಂಪನಿ ಅಮಾನತಿಗೆ ಭಾರತೀಯ ಗಣಿ ಪ್ರಾಧಿಕಾರ (ಐಬಿಎಂ) ಶಿಫಾರಸ್ಸು ಮಾಡಿದೆ.
ಇಂದು ನಟ ಮೋಹನ ಲಾಲ ಜನ್ಮದಿನ.

ಇಂದಿನ ಸುದ್ದಿಗಳು ೨೧-೫-೨೦೧೦

ಇಂದಿನ ಸುದ್ದಿಗಳು

ಇಂದಿನ ಸುದ್ದಿಗಳು

lailaa

lailaa bartale anta dugudavittu.

lailaa

Thursday, May 20, 2010

ಇಂದಿನ ಸುದ್ದಿಗಳು

ಲೈಲಾವೃಷ್ಟಿ :
ತಮಿಳುನಾಡು, ಆಂಧ್ರ ಪ್ರದೇಶಕ್ಕೆ ಅಪ್ಪಳಿಸಿದೆ ಬಿರುಗಾಳಿ.
ಕರ್ನಾಟಕದಲ್ಲಿ ಇಂದು ಮತ್ತು ನಾಳೆ ಭಾರೀ ಮಳೆ

ಅಫ್ಜಲ್ ಗುರು ಗಲ್ಲು ಶಿಕ್ಷೆ ಮುಂದೂಡಲು ಹೊಸ ನೆಪ.

ಲಷ್ಕರ್ ಸಂಘಟನೆ ಜೊತೆ ನಕ್ಸಲ್ ರ ನಂಟಿದೆ ಎಂದು ಛತ್ತೀಸಗಢದ ಮುಖ್ಯಮಂತ್ರಿ ರಮಣಸಿಂಗ್ ಅನುಮಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಸುರಿದ ಭಾರೀ ಮಳೆಗೆ ಸುಮಾರು 4 ಜನ ಬಲಿಯಾಗಿದ್ದಾರೆ.

ಪ್ರವಾಸೋದ್ಯಮ ಸಚಿವ ಜನಾರ್ಧನರೆಡ್ಡಿ ವಿರುದ್ಧ ರಾಜ್ಯಪಾಲ ಹಂಸರಾಜ ಭಾರಧ್ವಾಜ ಅವರ ಬಳಿ ಹಲವು ಅಸ್ತ್ರಗಳಿವೆ ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ಹೇಳಿದ್ದಾರೆ.

ಸಚಿವ ಸಂಪುಟವನ್ನು ವಿಸ್ತರಣೆ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭಿನ್ನ ಹೇಳಿಕೆಗಳನ್ನು ನೀಡಿದ್ದಾರೆ.

Wednesday, May 19, 2010

ಫೋನ್ ಕವಿತೆಗಳು

1.

ಬುಕ್ಕಿಂಗ್ ಸೆಂಟರ್ನಲ್ಲಿ
ಕೆಲಸ ಮಾಡುತ್ತಿದ್ದ ಹುಡುಗಿಯೊಬ್ಬಳಿಗೆ ಫೋನಿನಲ್ಲಿ
ಹೇಳಿದೆ :
ಹುಡುಗಿ ನಾ ನಿನ್ನ ಪ್ರೀತಿಸುತ್ತೇನೆ ಎಂದು.
ಅವಳು ತಕ್ಷಣ ಉತ್ತರಿಸಿದಳು.
ನೀವು ಸರದಿಯಲ್ಲಿದ್ದೀರಿ.

2.

ಎಸ್ಟಿಡಿ ಬೂತಿನಲ್ಲಿದ್ದ ಹುಡುಗಿಯೊಬ್ಬಳಿಗೆ
ಫೋನಿನಲ್ಲಿ ಹೇಳಿದೆ.
ಹುಡುಗಿ ನಾ ನಿನ್ನ ಪ್ರೀತಿಸುತ್ತೇನೆ ಎಂದು
ಅವಳು ತಕ್ಷಣ ಉತ್ತರಿಸಿದಳು
ಈ ಮಾರ್ಗ ಕಾರ್ಯನಿರತವಾಗಿದೆ.. ಸ್ವಲ್ಪ ಸಮಯದ
ನಂತರ ಪ್ರಯತ್ನಿಸಿ ಎಂದು.


3.

ಮೊಬೈಲ್ ಇದ್ದ ಹುಡುಗಿಯೊಬ್ಬಳಿಗೆ
ಫೋನಿನಲ್ಲಿ ಹೇಳಿದೆ.
ಹುಡುಗಿ ನಾ ನಿನ್ನ ಪ್ರೀತಿಸುತ್ತೇನೆ.
ಅವಳು ತಕ್ಷಣ ಉತ್ತರಿಸಿದಳು
ನೀವು ತಲುಪಲು ಇಚ್ಛಿಸುತ್ತಿರುವ ಹುಡುಗಿ
ತನ್ನ ಒಳ ಬರುವ ಕರೆಗಳನ್ನು ನಿಷೇಧಿಸಿದ್ದಾಳೆ.
ಸಂಕ್ಷಿಪ್ತ ಸುದ್ದಿಗಳು

ರಂಗಾಯಣ ಮುಖ್ಯಸ್ಥರಾಗಿ ಲಿಂಗದೇವರು ಹಳೆಮನೆ ನೇಮಕಗೊಂಡಿದ್ದಾರೆ.

ಬಿಹಾರ ರಾಜ್ಯದ ಉಸ್ತುವಾರಿಯನ್ನು ಸಂಸದ ಅನಂತಕುಮಾರ ವಹಿಸಿಕೊಂಡಿದ್ದಾರೆ.

ಹಾಲಪ್ಪ ಮತ್ತು ನಿತ್ಯಾನಂದನ ಜಾಮೀನು ವಿಚಾರಣೆ ಮುಂದಕ್ಕೆ ಹಾಕಲಾಗಿದೆ.

ಮೈನಾ


ಶುರುವಾಗಿದೆ ಬ್ಲಾಗ್ ಲೋಕ. ನಾನು ಇದಕ್ಕೆ ಹೊಸಬ. ಆದ್ರೆ ಈ ಬ್ಲಾಗ್ ಸಂಸ್ಕೃತಿ ಹೊಸತನ ಬರೆವಣಿಗೆಯನ್ನು ಹಾಳುಮಾಡುತ್ತೆ ಎಂತಲೂ ಅದೇ ರೀತಿ ಹೊಸ ಬರಹಗಾರರನ್ನು ಗುರುತಿಸುತ್ತದೆ ಎಂಬ ವಿಷಯ ತಿಳಿಯುತ್ತದೆ.



ಮಹಿಪಾಲ್.....

maina hakki


this is mahipal reddy. we see as soon as possible in blog.



thanks.


regards


Mahipal