Sunday, August 29, 2010

ನಕ್ಕುಬಿಟ್ಟು ಸುಮ್ಮನಾಗಿ

ಮುಧೋಳ ಸಾಹಿತ್ಯ ಸಮ್ಮೇಳನದಲ್ಲಿ ರವಿ ಬೆಳಗೆರೆ, ಚಂಪಾ ಮೀಟ್ ಆದ್ರು. ಚಂಪಾ ಹೇಳಿದ್ರು-
ರವಿ, ಹೊಸ ಪುಸ್ತಕ ತರ್ತಿದೀನಿ “ಲೇಖಕರ ವಿಳಾಸಗಳು” ಅಂತ…
ತಕ್ಷಣ ರವಿ ಬೆಳಗೆರೆ ಹೇಳಿದ್ರು-
ಚಂಪಾ, ಆ ಹೆಸ್ರು ಬೇಡ “ಲೇಖಕರ ವಿಲಾಸಗಳು” ಅಂತ ಇಡಿ. ಸಖತ್ತಾಗಿ ಸೇಲಾಗುತ್ತೆ…

* * *

ಸಂಕ್ರಮಣ ಚಂದಾ ಕ್ಯಾಂಪೈನ್ ನಡೀತಾ ಇತ್ತು. ಚಂಪಾ ಶಾಂತರಸರ ಮನೆಗೆ ಫೋನ್ ಮಾಡಿದ್ರು-
ರಾಯಚೂರಲ್ಲಿ ಚಂದಾ ಮಾಡಿಸಿಕೊಡ್ರಿ ಅಂತ.
ಶಾಂತರಸರ ಶ್ರೀಮತಿ ಸಜೆಶನ್ ಕೊಟ್ರಂತೆ-
ಅದಕ್ಕೇನು ಚಂಪಾ ಅವ್ರೆ, ಬನ್ನಿ.
ಚಂಪಾ ಕೇಳಿದ್ರಂತೆ-
ಅದಕ್ಯಾಕೆ ಅಲ್ಲಿಗೆ ಬರೋದು, ನೀವೇ ಮಾಡಿಸಿಬಿಡಿ.
ತಕ್ಷಣ ಶ್ರೀಮತಿ ಶಾಂತರಸರು ಅಂದ್ರಂತೆ-
ಚಂಪಾ ಅವರೆ, ಹೆಣ ಮುಂದಿದ್ರೆ ಅಳೋಕೆ ಚಂದ ಅಂತ.

* * *

ಹಂಪನಾ ಯಾವ್ದೋ ಯೂನಿವರ್ಸಿಟಿಗೆ ಬಂದಿದ್ರು. ವಾಮನ ನಂದಾವರ ದಂಪತಿಗಳು ಆಗ ತಾನೆ ಹೊಸ ಮನೆ ಕಟ್ಟಿ ಮುಗಿಸಿದ್ರು. ಹಳೇ ಮನೇನ ಮಾರಿರಲಿಲ್ಲ. ಯಾರೋ ನಂದಾವರ ಅವರನ್ನ ಹಂಪನಾಗೆ ಇಂಟ್ರೊಡ್ಯೂಸ್ ಮಾಡ್ತಾ-
ಸಾರ್, ಎಲ್ಲಾದ್ರೂನೂ ಸಾಹಿತಿಗಳಿಗೆ ಎರಡು ಮನೆ ಇರೋದು ಕೇಳಿದ್ರಾ ಅಂದ್ರು.
ಹಂಪನಾ ಯಥಾಪ್ರಕಾರ ಮೀಸೆ ತುದೀಲೇ ನಗ್ತಾ-
ಇಲ್ಲಪ್ಪ, ಆದ್ರೆ ಎರಡು ಸಂಸಾರ ಇರೋದ್ ಮಾತ್ರ ಕೇಳಿದೀನಿ ಅಂದ್ರು.

* * *

ಯಾವ್ದೋ ಪ್ರೋಗ್ರಾಮಿನಲ್ಲಿ “ಹಂಪನಾ, ನೀವೇ ನಮ್ಮ ಜಹಾಂಪನಾ” ಅನ್ನೋ ರೀತಿನಲ್ಲಿ ಸಂಘಟಕರು ಹಾಡಿ ಹೊಗಳಿದ್ರು. ಹಂಪನಾ ಪಾಪ ಕುಳ್ಳಗಿದ್ದಾರಲ್ಲ, ಹಾಗಾಗಿ ಭಾಷಣ ಮಾಡೋಕೆ ಅಂತ ಎದ್ದಾಗ ಸೌಂಡ್ ಸಿಸ್ಟಮ್ ನವನು ಓಡಿ ಬಂದು ಮೈಕ್ ಎತ್ತರ ಕಡಿಮೆ ಮಾಡ್ದ.
ಹಂಪನಾ ಹೇಳಿದ್ರು-
ನೀವೇನೇ ಹೊಗಳಿ, ನನ್ನ ಎತ್ತರ ಸರಿಯಾಗಿ ಗೊತ್ತಿರೋದು ಮೈಕ್ ನವನಿಗೆ ಮಾತ್ರ ಅಂತ.

(ಈ ಸಂಗತಿಗಳೆಲ್ಲ ಯಾವಾಗಲೋ ಕೇಳಿದ್ದು. ನಿಜ ಇದ್ರೂ ಇರಬಹುದು, ಸುಳ್ಳಿದ್ರೂ ಇರಬಹುದು, ಕರೆಕ್ಷನ್ನೂ ಬೇಕಾಗಬಹುದು. ಏನಾದ್ರೂ ಇದ್ರೆ ಗಮನಕ್ಕೆ ತನ್ನಿ. ಇಲ್ಲಾಂದ್ರೆ ನಕ್ಕುಬಿಟ್ಟು ಸುಮ್ಮನಾಗಿ.)

No comments: