Tuesday, August 31, 2010

‘ಬೌದ್ಧಿಕ ತೃಪ್ತಿ ನೀಗದ ಪತ್ರಿಕೆಗಳು’…

31 Aug 2010

ಜಾಹೀರಾತು ಹಾಗೂ ಮಾರುಕಟ್ಟೆ ಆಧಾರಿತ ಕಾರ್ಯ ನಿರ್ವಹಿಸುತ್ತಿರುವ ಸುದ್ದಿ ಪತ್ರಿಕೆ ಹಾಗೂ ನಿಯತಕಾಲಿಕೆಗಳು ಓದುಗರ ಬೌದ್ಧಿಕ ಹಸಿವನ್ನು ನೀಗಿಸಲು ಇತ್ತೀಚಿನ ದಿನಗಳಲ್ಲಿ ಸೋತಿವೆ ಎಂದು ಸಾಹಿತಿ ಫ್ರೊ. ಶಿವರಾಮು ಕಾಡನಕುಪ್ಪೆ ಇಲ್ಲಿ ಅಭಿಪ್ರಾಯಪಟ್ಟರು.

ತಿಂಗಳು ಕನ್ನಡ ಮಾಸ ಪತ್ರಿಕೆಯು ಭಾನುವಾರ ರಂಗಾಯಣದ ಶ್ರೀರಂಗದಲ್ಲಿ ಏರ್ಪಡಿಸಿದ್ದ ಪತ್ರಿಕೆಯ ಮೊದಲ ವಾರ್ಷಿಕೋತ್ಸವ ಹಾಗೂ ತಿಂಗಳು ಮತ್ತು ಸೈಕಲ್ ಬ್ರಾಂಡ್ಯ್ ಅಗರಬತ್ತಿ ಕಥಾ ಮತ್ತು ಕಾವ್ಯ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ನಿಯತಕಾಲಿಕೆಗಳ ಸ್ವರೂಪ ಮತ್ತು ಪ್ರತಿಕ್ರಿಯೆ ವಿಷಯ ಕುರಿತು ಮಾತನಾಡಿದರು.

ದಿನಪತ್ರಿಕೆಗಳು ತಮ್ಮ ಜವಾಬ್ದಾರಿಯನ್ನು ಮರೆತಿವೆ ಎಂಬುದನ್ನು ಸಾಮಾನ್ಯೀಕರಿಸುವಷ್ಟು ಇಂದು ಸಮಸ್ಯೆ ದೊಡ್ಡದಾಗಿದೆ. ಆದರೆ ನಿಯತಕಾಲಿಕೆಗಳು ಕೊಂಚವಾದರೂ ತಮ್ಮ ಕೆಲಸದ ಮಹತ್ವವನ್ನು ಉಳಿಸಿಕೊಂಡಿವೆ ಎನ್ನಬಹುದು.

ಈ ನಿಟ್ಟಿನಲ್ಲಿ ನಿಯತಕಾಲಿಕೆಗಳ ಪ್ರಕಾಶಕರು, ಬದ್ಧತೆಯಿಂದ ಕೆಲಸ ಮಾಡಿ, ಸಮಾಜದಲ್ಲಿ ಸಾಹಿತ್ಯಿಕ, ಸಾಮಾಜಿಕ ಇತ್ಯಾದಿ ಜವಾಬ್ದಾರಿಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವಂತೆ ಮಾಡಬೇಕು. ಸಮಾಜದಲ್ಲಿ ಇವತ್ತಿಗೂ ಜ್ವಲಂತವಾಗಿರುವ ಅಸಮಾನತೆ, ಬಡತನಗಳನ್ನು ನಿವಾರಿಸಲು ಸೂಕ್ತ ರೀತಿಯ ಮಾರ್ಗಗಳನ್ನು ತೋರಿಸಿಕೊಡಬೇಕು ಎಂದು ಹೇಳಿದರು.

ಪತ್ರಿಕೋದ್ಯಮ ಇಂದು ಮಾಧ್ಯಮವಾಗಿದ್ದು, ಜಾಹೀರಾತುದಾರರು ಇಂದು ಮಾಧ್ಯಮಗಳನ್ನು ನಿಯಂತ್ರಿಸುತ್ತಿದ್ದಾರೆ. ಹಾಗಾಗಿ ಏನೇ ತಪ್ಪು ಮಾಡಿದರೂ ಮೌನ ತಾಳುವ, ಪ್ರಶ್ನಿಸದ ಮನೋಭಾವವನ್ನು ಮಾಧ್ಯಮಗಳು ಇತ್ತೀಚೆಗೆ ರೂಢಿಸಿಕೊಂಡಿವೆ ಎಂದರು.

ಇತ್ತೀಚಿನ ದಿನಗಳಲ್ಲಿ ಅಪರಾಧ, ಲೈಂಗಿಕತೆ ಪತ್ರಿಕೆಗಳಲ್ಲಿ ವಿಜೃಂಭಿಸುತ್ತಿದೆ. ಸಿನಿಮಾ ಕ್ಷೇತ್ರದಲ್ಲಿ ನಿರ್ದೇಶಕರು ತಮ್ಮದೇ ಸೂತ್ರಗಳನ್ನು ಬಳಸಿಕೊಂಡು, ಸೃಷ್ಟಿಸಿಕೊಂಡು ಪ್ರೇಕ್ಷಕರ ಮೇಲೆ ಹೇರುತ್ತಿರುವಂತೆ, ಪತ್ರಿಕೆಗಳೂ ಈ ಹೇರುವ ಕೆಲಸವನ್ನು ಮಾಡುತ್ತಿವೆ ಎಂದು ವಿಷಾದಿಸಿದರು.

ಮಾಧ್ಯಮಗಳು ಮೂಲಭೂತವಾದಿಗಳ ಜೊತೆಗೆ ಗುರುತಿಸಿಕೊಳ್ಳುವುದು ಅತಿ ಅಪಾಯಕಾರಿ ಬೆಳವಣಿಗೆಯಾಗುತ್ತಿದೆ. ಜಾತಿ, ಧರ್ಮಗಳನ್ನು ಬಿಂಬಿಸುವ ಕನ್ನಡಿಗಳಾಗಿ ಮಾಧ್ಯಮಗಳು ಎಂದಿಗೂ ಗುರುತಿಸಿಕೊಳ್ಳಬಾರದು. ಈ ಕೆಲಸವನ್ನು ಅವು ಮಾಡಿದ್ದೇ ಆದಲ್ಲಿ ಅವುಗಳ ಮೇಲಿರುವ ಗೌರವ ಕುಂದುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಪತ್ರಿಕೋದ್ಯಮಿ ರಾಜಶೇಖರ ಕೋಟಿ ಮಾತನಾಡಿ, ದೂರದರ್ಶನದಿಂದ ಇಂದು ನಿಯತಕಾಲಿಕೆಗಳಿಗೆ ಮಾರುಕಟ್ಟೆ ಕ್ಷೀಣಿಸಿದೆ. ಟಿವಿಗಳಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿಗಳಿಗೆ ದಾಸರಾಗಿರುವ ನಾವು ಪತ್ರಿಕೆಗಳನ್ನು ಓದುವುದನ್ನು ಕಡಿಮೆ ಮಾಡಿದ್ದೇವೆ. ಆದರೆ ಪತ್ರಿಕೆಗಳಿಗೆ ಪ್ರೋತ್ಸಾಹದ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾನು ತಿಂಗಳು ಪತ್ರಿಕೆಗೆ ಜಾಹೀರಾತು ನೀಡಿ ಪ್ರೋತ್ಸಾಹಿಸುವ ಕೆಲಸ ಮಾಡುವೆ ಎಂದರು.

ಪತ್ರಿಕೆಯ ವೆಬ್‌ಸೈಟ್‌ಗೆ ಪ್ರಕಾಶಕ ಬಿ.ಎನ್. ಶ್ರೀರಾಮು ಚಾಲನೆ ನೀಡಿದರು. ಹಿರಿಯ ಸಾಹಿಪ್ರೊ.ಎಚ್.ಎಲ್.ಕೇಶವಮೂರ್ತಿ ಅವರು ಇಂದಿನ ಕನ್ನಡ ನಿಯತಕಾಲಿಕೆಗಳ ಸ್ಥಿತಿಗತಿ, ಮಂಜುನಾಥ ಲತಾ ಅವರು ತಿಂಗಳು ಮಾಸಪತ್ರಿಕೆ ಒಂದು ಪ್ರತಿಕ್ರಿಯೆ ನಡೆಸಿಕೊಟ್ಟರು. ಎನ್.ಆರ್. ಪ್ರತಿಷ್ಠಾನದ ಹರೀಶ್ ಅವರು ಕಥಾ ಮತ್ತು ಕಾವ್ಯ ಪುರಸ್ಕಾರದ ವಿತರಣೆ ಮಾಡಿದರು. ಅಭಿರುಚಿ ಗಣೇಶ್ ಉಪಸ್ಥಿತರಿದ್ದರು.

ಬೌದ್ಧಿಕ ತೃಪ್ತಿ ನೀಗದ ಪತ್ರಿಕೆಗಳುಜಾಹೀರಾತು ಹಾಗೂ ಮಾರುಕಟ್ಟೆ ಆಧಾರಿತ ಕಾರ್ಯ ನಿರ್ವಹಿಸುತ್ತಿರುವ ಸುದ್ದಿ ಪತ್ರಿಕೆ ಹಾಗೂ ನಿಯತಕಾಲಿಕೆಗಳು ಓದುಗರ ಬೌದ್ಧಿಕ ಹಸಿವನ್ನು ನೀಗಿಸಲು ಇತ್ತೀಚಿನ ದಿನಗಳಲ್ಲಿ ಸೋತಿವೆ ಎಂದು ಸಾಹಿತಿ ಫ್ರೊ. ಶಿವರಾಮು ಕಾಡನಕುಪ್ಪೆ ಇಲ್ಲಿ ಅಭಿಪ್ರಾಯಪಟ್ಟರು.

ತಿಂಗಳು ಕನ್ನಡ ಮಾಸ ಪತ್ರಿಕೆಯು ಭಾನುವಾರ ರಂಗಾಯಣದ ಶ್ರೀರಂಗದಲ್ಲಿ ಏರ್ಪಡಿಸಿದ್ದ ಪತ್ರಿಕೆಯ ಮೊದಲ ವಾರ್ಷಿಕೋತ್ಸವ ಹಾಗೂ ತಿಂಗಳು ಮತ್ತು ಸೈಕಲ್ ಬ್ರಾಂಡ್ಯ್ ಅಗರಬತ್ತಿ ಕಥಾ ಮತ್ತು ಕಾವ್ಯ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ನಿಯತಕಾಲಿಕೆಗಳ ಸ್ವರೂಪ ಮತ್ತು ಪ್ರತಿಕ್ರಿಯೆ ವಿಷಯ ಕುರಿತು ಮಾತನಾಡಿದರು.

ದಿನಪತ್ರಿಕೆಗಳು ತಮ್ಮ ಜವಾಬ್ದಾರಿಯನ್ನು ಮರೆತಿವೆ ಎಂಬುದನ್ನು ಸಾಮಾನ್ಯೀಕರಿಸುವಷ್ಟು ಇಂದು ಸಮಸ್ಯೆ ದೊಡ್ಡದಾಗಿದೆ. ಆದರೆ ನಿಯತಕಾಲಿಕೆಗಳು ಕೊಂಚವಾದರೂ ತಮ್ಮ ಕೆಲಸದ ಮಹತ್ವವನ್ನು ಉಳಿಸಿಕೊಂಡಿವೆ ಎನ್ನಬಹುದು.

ಈ ನಿಟ್ಟಿನಲ್ಲಿ ನಿಯತಕಾಲಿಕೆಗಳ ಪ್ರಕಾಶಕರು, ಬದ್ಧತೆಯಿಂದ ಕೆಲಸ ಮಾಡಿ, ಸಮಾಜದಲ್ಲಿ ಸಾಹಿತ್ಯಿಕ, ಸಾಮಾಜಿಕ ಇತ್ಯಾದಿ ಜವಾಬ್ದಾರಿಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವಂತೆ ಮಾಡಬೇಕು. ಸಮಾಜದಲ್ಲಿ ಇವತ್ತಿಗೂ ಜ್ವಲಂತವಾಗಿರುವ ಅಸಮಾನತೆ, ಬಡತನಗಳನ್ನು ನಿವಾರಿಸಲು ಸೂಕ್ತ ರೀತಿಯ ಮಾರ್ಗಗಳನ್ನು ತೋರಿಸಿಕೊಡಬೇಕು ಎಂದು ಹೇಳಿದರು.

ಪತ್ರಿಕೋದ್ಯಮ ಇಂದು ಮಾಧ್ಯಮವಾಗಿದ್ದು, ಜಾಹೀರಾತುದಾರರು ಇಂದು ಮಾಧ್ಯಮಗಳನ್ನು ನಿಯಂತ್ರಿಸುತ್ತಿದ್ದಾರೆ. ಹಾಗಾಗಿ ಏನೇ ತಪ್ಪು ಮಾಡಿದರೂ ಮೌನ ತಾಳುವ, ಪ್ರಶ್ನಿಸದ ಮನೋಭಾವವನ್ನು ಮಾಧ್ಯಮಗಳು ಇತ್ತೀಚೆಗೆ ರೂಢಿಸಿಕೊಂಡಿವೆ ಎಂದರು.

ಇತ್ತೀಚಿನ ದಿನಗಳಲ್ಲಿ ಅಪರಾಧ, ಲೈಂಗಿಕತೆ ಪತ್ರಿಕೆಗಳಲ್ಲಿ ವಿಜೃಂಭಿಸುತ್ತಿದೆ. ಸಿನಿಮಾ ಕ್ಷೇತ್ರದಲ್ಲಿ ನಿರ್ದೇಶಕರು ತಮ್ಮದೇ ಸೂತ್ರಗಳನ್ನು ಬಳಸಿಕೊಂಡು, ಸೃಷ್ಟಿಸಿಕೊಂಡು ಪ್ರೇಕ್ಷಕರ ಮೇಲೆ ಹೇರುತ್ತಿರುವಂತೆ, ಪತ್ರಿಕೆಗಳೂ ಈ ಹೇರುವ ಕೆಲಸವನ್ನು ಮಾಡುತ್ತಿವೆ ಎಂದು ವಿಷಾದಿಸಿದರು.

ಮಾಧ್ಯಮಗಳು ಮೂಲಭೂತವಾದಿಗಳ ಜೊತೆಗೆ ಗುರುತಿಸಿಕೊಳ್ಳುವುದು ಅತಿ ಅಪಾಯಕಾರಿ ಬೆಳವಣಿಗೆಯಾಗುತ್ತಿದೆ. ಜಾತಿ, ಧರ್ಮಗಳನ್ನು ಬಿಂಬಿಸುವ ಕನ್ನಡಿಗಳಾಗಿ ಮಾಧ್ಯಮಗಳು ಎಂದಿಗೂ ಗುರುತಿಸಿಕೊಳ್ಳಬಾರದು.

ಈ ಕೆಲಸವನ್ನು ಅವು ಮಾಡಿದ್ದೇ ಆದಲ್ಲಿ ಅವುಗಳ ಮೇಲಿರುವ ಗೌರವ ಕುಂದುವುದು ಎಂದರು.ಅಧ್ಯಕ್ಷತೆ ವಹಿಸಿದ್ದ ಪತ್ರಿಕೋದ್ಯಮಿ ರಾಜಶೇಖರ ಕೋಟಿ ಮಾತನಾಡಿ, ದೂರದರ್ಶನದಿಂದ ಇಂದು ನಿಯತಕಾಲಿಕೆಗಳಿಗೆ ಮಾರುಕಟ್ಟೆ ಕ್ಷೀಣಿಸಿದೆ. ಟಿವಿಗಳಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿಗಳಿಗೆ ದಾಸರಾಗಿರುವ ನಾವು ಪತ್ರಿಕೆಗಳನ್ನು ಓದುವುದನ್ನು ಕಡಿಮೆ ಮಾಡಿದ್ದೇವೆ. ಆದರೆ ಪತ್ರಿಕೆಗಳಿಗೆ ಪ್ರೋತ್ಸಾಹದ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾನು ತಿಂಗಳು ಪತ್ರಿಕೆಗೆ ಜಾಹೀರಾತು ನೀಡಿ ಪ್ರೋತ್ಸಾಹಿಸುವ ಕೆಲಸ ಮಾಡುವೆ ಎಂದರು.ಪತ್ರಿಕೆಯ ವೆಬ್‌ಸೈಟ್‌ಗೆ ಪ್ರಕಾಶಕ ಬಿ.ಎನ್. ಶ್ರೀರಾಮು ಚಾಲನೆ ನೀಡಿದರು.

ಹಿರಿಯ ಸಾಹಿಪ್ರೊ.ಎಚ್.ಎಲ್.ಕೇಶವಮೂರ್ತಿ ಅವರು ಇಂದಿನ ಕನ್ನಡ ನಿಯತಕಾಲಿಕೆಗಳ ಸ್ಥಿತಿಗತಿ, ಮಂಜುನಾಥ ಲತಾ ಅವರು ತಿಂಗಳು ಮಾಸಪತ್ರಿಕೆ ಒಂದು ಪ್ರತಿಕ್ರಿಯೆ ನಡೆಸಿಕೊಟ್ಟರು. ಎನ್.ಆರ್. ಪ್ರತಿಷ್ಠಾನದ ಹರೀಶ್ ಅವರು ಕಥಾ ಮತ್ತು ಕಾವ್ಯ ಪುರಸ್ಕಾರದ ವಿತರಣೆ ಮಾಡಿದರು. ಅಭಿರುಚಿ ಗಣೇಶ್ ಉಪಸ್ಥಿತರಿದ್ದರು.

ಕೃಪೆ - ಕನ್ನಡ ಪ್ರಭ

.

Monday, August 30, 2010

ಶಿವರಾಜ್ ಕುಮಾರ್ 'ತಮಸ್ಸು'ವಿವಾದಾತೀತ ಚಿತ್ರ

ಚಿತ್ರವಿಮರ್ಶೆ »

*ರಾಜೇಂದ್ರ ಚಿಂತಾಮಣಿ

ಚಿತ್ರದಲ್ಲಿ ಕಥೆಯಿದೆ. ಅಣ್ಣ ತಂಗಿಯ ಭಾವನಾತ್ಮಕ ಸಂಬಂಧಗಳಿವೆ . ಅನುರಾಗಕ್ಕೆ ಜಾಗವಿದೆ. ಮತ್ತೆ ಮತ್ತೆ ಕೇಳಬೇಕೆನ್ನುವ ಹಾಡುಗಳಿವೆ.ಸಂಭಾಷಣೆ ಸೊಗಸಾಗಿದೆ. ಬಿಗಿಯಾದ ನಿರೂಪಣೆಯಿದೆ. ಆದರೆ ಕಥೆ ವೇಗವಾಗಿ ಸಾಗುವುದಿಲ್ಲ. ಕಾಮಿಡಿಗೆ ಜಾಗವಿಲ್ಲ. ನಿಸ್ಸಂಶಯವಾಗಿ ಇದೊಂದು ಅಪ್ಪಟ ವಿವಾದಾತೀತ ಚಿತ್ರ.ಕ್ಲಾಸ್ ಚಿತ್ರಕ್ಕೆ ಇರಬೇಕಾದ ಎಲ್ಲ ಲಕ್ಷಣಗಳು 'ತಮಸ್ಸು' ಚಿತ್ರದಲ್ಲಿವೆ .

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಾವೊಬ್ಬ ಮಹಾನ್ ಕಲಾವಿದ ಎಂಬುದನ್ನು ನಿರೂಪಿಸಿಕೊಂಡಿದ್ದಾರೆ. ''ಭೀಕರ ಹಿಂಸೆಯ ದಾರಿಯಲ್ಲೂ ಅರಳುತ್ತವೆ ಪ್ರೀತಿಯ ಹೂಗಳು'' ಎಂಬ ಚಿತ್ರದ ಕಾವ್ಯಾತ್ಮಕ ಆಶಯಕ್ಕೆ ಅಗ್ನಿ ಶ್ರೀಧರ್ ನಿರ್ದೇಶನ ನೀರೆರೆದಿದೆ. ಚಿತ್ರದ ಮೊದಲರ್ಧ ಕೋಮುಗಲಭೆಗೆ ಮೀಸಲಾಗಿದ್ದರೆ. ದ್ವಿತೀಯಾರ್ಧ ಭಾವನಾತ್ಮಕ ಸಂಘರ್ಷಗಳ ತಾಕಲಾಟವಾಗಿದೆ.

ಬೆಂಗಳೂರಿನಲ್ಲಿ ನಡೆಯುವ ಕೋಮು ಗಲಭೆ ಮೂಲಕ ಚಿತ್ರ ಆರಂಭವಾಗುತ್ತದೆ. ತ್ರಿಶೂಲ ಮತ್ತು ಖಡ್ಗಗಳಿಗೆ ಅಮಾಯಕ ಜನ ಬಲಿಯಾಗುತ್ತಾರೆ. ಒಂದು ಕಡೆ ಅಲ್ಲಾಹು ಅಕ್ಬರ್ ಮತ್ತೊಂದು ಕಡೆ ಜೈ ಶ್ರೀರಾಮ್ ಎಂಬ ನಿನಾದಗಳು. ಕೈಮಿರುತ್ತಿರುವ ಕಾನೂನು ಸುವ್ಯವಸ್ಥೆಗಳನ್ನು ನಿಯಂತ್ರಣಕ್ಕೆ ತರಲು ಪೊಲೀಸ್ ವ್ಯವಸ್ಥೆ ಚುರುಕಾಗುತ್ತದೆ.

ದಕ್ಷ ಪೊಲೀಸ್ ಅಧಿಕಾರಿ ಶಂಕರ್ (ಶಿವರಾಜ್ ಕುಮಾರ್) ಕೋಮುಗಲಭೆಯನ್ನು ಮಟ್ಟ ಹಾಕಲು ತನ್ನ ತಂಡದೊಂದಿಗೆ ಹೊರಡುತ್ತಾನೆ. ಮಫ್ತಿಯಲ್ಲಿದ್ದ ಅವರು ದಾಳಿಕೋರರರ ಕೈಗೆ ಸಿಕ್ಕಿ ತಲೆಗೆ ಬಲವಾದ ಪೆಟ್ಟು ತಿನ್ನುತ್ತಾರೆ. ಅಲ್ಲೇ ಇದ್ದ ಮುಸ್ಲಿಂ ಮನೆಯೊಂದರಲ್ಲಿ ತಲೆ ಮರೆಸಿಕೊಳ್ಳುತ್ತಾರೆ.

ಇಲ್ಲಿಂದ ಚಿತ್ರಕಥೆ ಹೊಸ ತಿರುವು ಪಡೆಯುತ್ತದೆ. ಆ ಮುಸ್ಲಿಂ ಮನೆಯಲ್ಲಿ ಶಿವಣ್ಣನಿಗೆ ಒಳ್ಳೆಯ ಆದರ ಆತಿಥ್ಯಗಳು ಲಭಿಸುತ್ತವೆ. ಭಯ್ಯಾ ಎಂದು ಕರೆಯುವ ಮುಸ್ಲಿಂ ಹುಡುಗಿಯಲ್ಲಿ ಶಿವಣ್ಣನ ತಂಗಿಯೊಬ್ಬಳನ್ನು ಹುಡುಕಿಕೊಳ್ಳುತ್ತಾನೆ. ಆಕೆಯ ಹೆಸರು ಅಮ್ರೀನ್ ಸಭಾ. ಮುಂಜಾನೆ ಮಂಜಿನಂತೆ ಆಕೆ ಶಿವಣ್ಣನನ್ನು ಆವರಿಸಿಕೊಳ್ಳುತ್ತಾಳೆ. ಹಾಗೆಯೇ ಆಕೆಯ ತಂದೆಯ ಕಣ್ಣಲ್ಲಿ ತನ್ನ ತಂದೆಯನ್ನು ಕಾಣುತ್ತಾನೆ.

ಇಲ್ಲಿಂದ ಕಥೆ ಫ್ಲ್ಯಾಶ್ ಬ್ಯಾಕ್ ಗೆ ಹೊರಳುತ್ತದೆ. ತನ್ನ ಪ್ರೀತಿಯ ಮಡದಿ. ಮೊದಲ ಭೇಟಿ. ಅನುರಾಗ ಅರಳಿದ ಸಮಯ. ಚಿಗುರಿದ ಕನಸುಗಳಲ್ಲಿ ಶಿವಣ್ಣ ವಿಹರಿಸುತ್ತಾರೆ. ಜೊತೆ ಗೆಅಮ್ರೀನ್ ಳೊಂದಿಗಿನ ಅಣ್ಣ ತಂಗಿಯ ಸೆಂಟಿಮೆಂಟೂ ಬಲವಾಗುತ್ತಾ ಹೋಗುತ್ತದೆ. ಶಿವಾಜಿ ನಗರ, ಟ್ಯಾನರಿ ರಸ್ತೆ ಮತ್ತು ಗೌರಿಪಾಳ್ಯಗಳಲ್ಲಿ ಜೈಶ್ರೀರಾಮ್, ಅಲ್ಲಾಹು ಅಕ್ಬರ್ ನಿನಾದಗಳು ಕಿವಿ ತೂತಾಗಿಸುತ್ತವೆ.

ಅಮ್ರೀನ್ ಳ ಅಣ್ಣ ಇಮ್ರಾನ್ ನನ್ನು ಭಯೋತ್ಪಾಕ ಎಂದು ತಿಳಿದು ಶಂಕರ್ ಹಿಂದು ಮುಂದು ನೋಡದೆ ತಲೆಗೆ ಪಿಸ್ತೂಲ್ ಇಟ್ಟು ಉಡಾಯಿಸಿರುತ್ತಾನೆ. ಬಳಿಕ ಶಂಕರ್ ಗೆ ಗೊತ್ತಾಗುತ್ತದೆ ತಾನು ಸಾಯಿಸಿದ್ದು ಉಗ್ರನನಲ್ಲ ಒಬ್ಬ ಅಮಾಯಕನನ್ನು ಎಂಬ ಸತ್ಯ ಸಂಗತಿ. ಇದರಿಂದ ಪಶ್ಚಾತ್ತಾಪ ಪಡುತ್ತಾನೆ. ತನ್ನಲ್ಲೇ ನೋವು ಅನುಭವಿಸುತ್ತಾನೆ.

ತಮ್ಮ ಅಣ್ಣನನ್ನು ಸಾಯಿಸಿದ್ದು ಶಂಕರ್ ಎಂಬುದು ಅಮ್ರೀನ್ ಹಾಗೂ ಆಕೆಯ ತಂದೆಗೆ ಗೊತ್ತಾಗುತ್ತದೆ. ತಂಗಿ ದೂರವಾಗುತ್ತಾಳೆ. ಆಕೆಯ ತಂದೆ ಕಣ್ಣಿನಲ್ಲಿ ಶಂಕರ್ ವಿಲನ್ ಆಗುತ್ತಾನೆ. ಕಡೆಗೆ ಇವರಿಬ್ಬರ ಪ್ರೀತಿ ಮಮಕಾರಗಳನ್ನು ಹೇಗೆ ಗಳಿಸಿಕೊಳ್ಳುತ್ತಾನೆ ಎಂಬುದು ಚಿತ್ರದ ಕೊನೆಯ ಘಟ್ಟದಲ್ಲಿ ಕಾಣಬಹುದು .

ಶಿವರಾಜ್ ಕುಮಾರ್ ಅವರ ಮಡದಿ ಪಾತ್ರದಲ್ಲಿ ಪದ್ಮಪ್ರಿಯಾ ಅವರ ಅಭಿನಯ ಗಮನಸೆಳೆಯುತ್ತದೆ. ಇಬ್ಬರ ನಡುವಿನ ಭಾವನಾತ್ಮಕ ಸಂಘರ್ಷಗಳು ರಾಜ್ ಕುಮಾರ್ ಹಾಗೂ ಲಕ್ಷ್ಮಿ ನಟನೆಯನ್ನು ನೆನಪಿಸುತ್ತದೆ. ಇಮ್ರಾನ್ ಆಗಿ ಯಶ್ ಮಿಂಚುತ್ತಾರೆ. ಉಳಿದಂತೆ ನಾಸಿರ್ ಅಭಿನಯನ್ನು ಬೆಟ್ಟು ಮಾಡಿ ತೋರಿಸುವಂತಿಲ್ಲ. ಹರ್ಷಿಕಾ ಪೂಣಚ್ಚ ಹಾಗೂ ಶಿವಣ್ಣ ಜೋಡಿ ರಾಧಿಕಾ ಶಿವಣ್ಣನ ಅಣ್ಣ ತಂಗಿ ಸೆಂಟಿಮೆಂಟನ್ನು ಮೀರಿಸುವಂತಿದೆ.

ಚಿತ್ರದ ನಿಜವಾದ ಜೀವಾಳ ಹಾಡುಗಳು. ಸಂಧೀಪ್ ಚೌಟ ಅವರ ಸಂಗೀತ ಮಾಧುರ್ಯ ಮನಮಿಡಿಯುವಂತಿದೆ. ರಮ್ಯ ಶ್ರೀಧರ್ ಹಾಗೂ ಅಗ್ನಿ ಶ್ರೀಧರ್ ಅವರ ಸಾಹಿತ್ಯ ಅರ್ಥಪೂರ್ಣವಾಗಿದೆ. ಮಸ್ತಾನ್ ಬಾಯ್ ಪಾತ್ರದಲ್ಲಿ ಶರತ್ ಲೋಹಿತಾಶ್ವ ಪಾತ್ರ ಗಮನಾರ್ಹವಾಗಿದೆ.ಸುಂದರನಾಥ್ ಸುವರ್ಣ ಅವರ ಛಾಯಾಗ್ರಹಣ ಸುಂದರವಾಗಿದೆ.

ಗಿರೀಶ್ ಮಟ್ಟಣ್ಣನವರ್, ಸತ್ಯ ಮುಂತಾದ ಪಾತ್ರಗಳು ನೆನಪಿನಲ್ಲಿ ಉಳಿಯುವುದಿಲ್ಲ. ಕೋಮುವಾದ ಕುರಿತ ಚಿತ್ರಗಳು ಈಗಾಗಲೆ ಸಾಕಷ್ಟು ಬಂದಿವೆ. ಆದರೆ ತನ್ನದೇ ನಿರೂಪಣೆಯಿಂದ ಅಗ್ನಿ ಶ್ರೀಧರ್ ಚಿತ್ರ ವಿಭಿನ್ನವಾಗಿ ನಿಲ್ಲುತ್ತದೆ. ಕಥೆಯಲ್ಲಿ ವೇಗವಿಲ್ಲದೆ ಇರುವುದು ಪ್ರೇಕ್ಷಕರ ತಾಳ್ಮೆಗೆ ಸವಾಲೊಡ್ಡುತ್ತದೆ. ಹಾಗೆಯೇ ಕಥೆಗೆ ಒಂಚೂರು ಕತ್ತರಿ ಹಾಕಿ ಕಾಮಿಡಿಗೆ ಒತ್ತು ಕೊಡಬಹುದಿತ್ತು.

ಕೆಲವೊಂದು ಸನ್ನಿವೇಶಗಳು ನಾಟಕೀಯವಾಗಿದೆ. ಉದಾಹರಣೆ ಬಾಂಬ್ ಸ್ಫೋಟದಲ್ಲಿ ಸತ್ತು ಬಿದ್ದಿದ್ದ ಚಿಕ್ಕ ಹುಡುಗಿಯೊಬ್ಬಳನ್ನು ನೋಡಿ ಶಂಕರ್ ಮನಕಲಕುತ್ತದೆ. ಆಕೆಯ ಮುಖದ ಮೇಲೆ ಕೈಯಿಟ್ಟಾಗ ಆಕೆ ಕಣ್ಣ್ಣು ರೆಪ್ಪೆಗಳಲ್ಲಿ ಚಲನೆ ಉಂಟಾಗುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಪೊಲೀಸರು ಹಾಸ್ಯಾಸ್ಪದವಾಗಿ ಕಾಣುತ್ತಾರೆ. ಕಥೆ ಸುದೀರ್ಘವಾಗಿದೆ ಅನ್ನಿಸುತ್ತದೆ. ಕಡೆಗೆ ಕಥೆ ಹೀಗೇ ಆಗುತ್ತದೆ ಎಂಬುದು ಪ್ರೇಕ್ಷಕನಿಗೆ ಗೊತ್ತಗುತ್ತದೆ. ಹಾಗಾಗಿ ಅಗ್ನಿ ಶ್ರೀಧರ್ ನಿರ್ದೇಶನದಲ್ಲಿ ಇನ್ನೂ ಏನೋ ಇರಬೇಕಾಗಿತ್ತು ಎಂದು ಪ್ರೇಕ್ಷಕರು ಬಯಸುತ್ತಾರೆ.

ಮೋಹನ್ ರ ಮೀಡಿಯಾ ಮಿರ್ಚಿ

ಮೀಡಿಯಾ ಮಿರ್ಚಿ:’ಕಟಕಟೆ ಹತ್ತಲು ಬಿಡಿ ನನ್ನ’…
ಜಿ.ಎನ್.ಮೋಹನ್

ನೀವ್ಯಾಕೆ ಕೋರ್ಟ್ ವರದಿ ಮಾಡುವ ಬಗ್ಗೆ ಕಾರ್ಯಾಗಾರ ಮಾಡಬಾರದು ಅಂತ ಪ್ರಶ್ನೆ ಮುಂದಿಟ್ಟವರು ಸುನಿಲ್ ದತ್ ಯಾದವ್ ಹಾಗೂ ಆರ್. ನಿತಿನ್. ನ್ಯಾಷನಲ್ ಲಾ ಸ್ಕೂಲ್ ನಲ್ಲಿ ಓದಿದ ಅಷ್ಟೂ ವರ್ಷಗಳೂ ಮೆಡಲ್ ಗಳನ್ನು ಬಾಚಿ ತಂದ ಈ ಇಬ್ಬರೂ ನನ್ನ ಪರಿಚಯವಾದ ತಕ್ಷಣ ಮೊದಲು ಕೇಳಿದ ಪ್ರಶ್ನೆ ಇದು.

ಯಾಕೆ ಅಂದೆ? ಇಬ್ಬರೂ ಒಂದರ ಮೇಲೊಂದರಂತೆ ಉದಾಹರಣೆಯನ್ನು ಮುಂದಿಡುತ್ತಾ ಹೋದರು. ನಿತಿನ್ ನೆನಪಿಸಿದ್ದು ‘ಡೆಕ್ಕನ್ ಹೆರಾಲ್ಡ್’ ಅರ್ಕಾವತಿ ಲೇ ಔಟ್ ಬಗ್ಗೆ ಕೊಟ್ಟ ವರದಿ, ಹಾಗೂ ಲೇಖನವನ್ನ.

“ಅರ್ಕಾವತಿ ಲೇ ಔಟ್ ವಿವಾದಕ್ಕೆ ಸಂಬಂಧಿಸಿದಂತೆ ಪ್ರಕಟವಾದ ವರದಿ, ಕೋರ್ಟ್ ನೀಡಿದ ತೀರ್ಪಿಗೆ ಸಂಪೂರ್ಣ ವಿರೋಧವಾಗಿತ್ತು. ಅದು ಅರಿವಾಗಿ ಮತ್ತೆ ಅದನ್ನು ರಿಪೇರಿ ಮಾಡಿದ ವರದಿ ಬಂತು. ಕೊನೆಗೆ ಹಿರಿಯ ಅಡ್ವೋಕೇಟ್ ನಾಗಾನಂದ ಅವರು ಒಂದು ಲೇಖನ ಬರೆದಾಗಲೇ ನಿಜಕ್ಕೂ ಬಂದ ತೀರ್ಪು ಏನು ಅಂತ ಅರ್ಥವಾಗಿದ್ದು” ಎಂದರು .



ಕೋರ್ಟ್ ನಂತೆಯೇ ನಿಯಮ, ಕಾನೂನು ಅಂತ ಬಂದ ಕಡೆಯೆಲ್ಲಾ ಪತ್ರಕರ್ತರು ಹಿಂಜರಿಯುವುದೇಕೆ? ಎಂಬುದು ಇವರ ಪ್ರಶ್ನೆಯಾಗಿತ್ತು . ಹೀಗೆ ಅವರು ಹೇಳುತ್ತಾ ಇದ್ದ ದಿನ ವಿಧಾನಸಭೆಯಲ್ಲಿ ಗದ್ದಲ ವಿಪರೀತಕ್ಕೆ ಹೋಗಿತ್ತು. ಮೊದಲೇ ಹೇಳಿ ಕೇಳಿ ಬಳ್ಳಾರಿ ಗಣಿ ಪ್ರಕರಣ. ಹಾಗಾಗಿ ಬಿಸಿ ಬಿಸಿ ಮಾತು. ಸಿದ್ದರಾಮಯ್ಯ ನೇತೃತ್ವದಲ್ಲಿ ವಿರೋಧ ಪಕ್ಷ ನಿಯಮ 60 ರ ಅಡಿ ಚರ್ಚಿಸಬೇಕೆಂದು ಪಟ್ಟು ಹಿಡಿದಿತ್ತು. ಆಡಳಿತ ಪಕ್ಷ ಒಕ್ಕೊರಲಿನಿಂದ ಅದು ಸಾಧ್ಯವೇ ಇಲ್ಲ 69 ರ ನಿಯಮದಡಿ ಚರ್ಚಿಸಬೇಕು ಅಂತ ಪಟ್ಟು ಹಿಡಿದಿತ್ತು. ಸದನದಲ್ಲಿ ಕಾವಿನ ವಾತಾವರಣ. ಯಾರೂ ಪಟ್ಟು ಸಡಿಲಿಸುತ್ತಿಲ್ಲ.

ಆ ಕ್ಷಣದ ಸುದ್ದಿಯನ್ನು ನೋಡುಗರಿಗೆ ರವಾನಿಸಿ ಬಿಡುವ ಅವಸರದಲ್ಲಿದ್ದ ಟಿವಿ ಚಾನೆಲ್‌ಗಳು ಮೇಲಿಂದ ಮೇಲೆ ಬ್ರೇಕಿಂಗ್ ನ್ಯೂಸ್‌ಗೆ ಇಳಿದವು. ಬ್ರೇಕಿಂಗ್ ಮತ್ತು ನ್ಯೂಸ್ ಎರಡರಲ್ಲೂ 60/69 ರ ನಿಯಮ ನಮೂದಿಸಲಾಗಿತ್ತು. ಆದರೆ ಇಡೀ ದಿನ ಕಾದರೂ ಆ ನಿಯಮ ಏನು ಎಂಬ ವಿವರವೇ ಇಲ್ಲ.

ಎಲ್ಲಾ ಚಾನಲ್‌ಗಳು ಆ ಕ್ಷಣಡ ಅವಸರಕ್ಕೆ ಅರೆ ಬೆಂದ ಸುದ್ದಿ ಒದಗಿಸಿದರೂ ಪ್ರೈಂ ಬುಲೆಟಿನ್‌ನಲ್ಲಿ ಮಾತ್ರ ಯಾವುದೇ ಕೊರತೆ ಇಲ್ಲದಂತೆ ಸಾಕಷ್ಟು ಮುತುವರ್ಜಿವಹಿಸಿ, ಬೇಕಾದ ಮಾಹಿತಿಯನ್ನು ಅಚ್ಚುಕಟ್ಟಾಗಿ ನೀಡುತ್ತಾರೆ. ಆದರೆ ಆ ಪ್ರೈಂ ಬುಲೆಟಿನ್‌ನಲ್ಲೂ ಈ 60/69 ರ ನಿಯಮ ಏನು ಎಂಬುದು ಇರಲಿಲ್ಲ. ಉತ್ತರ ಸ್ಪಷ್ಟ -ಯಾವ ಪತ್ರಕರ್ತರಿಗೂ ಈ 60 / 69ರ ನಿಯಮ ಏನು? ಏಕೆ ಆ ನಿಯಮಗಳಡಿಯೇ ಚರ್ಚೆ ಆಗಬೇಕು ಅಂತ ಪಟ್ಟು ಹಿಡಿದಿದ್ದಾರೆ.

ಅದರಿಂದ ಆಗುವ ಲಾಭ ಏನು, ನಷ್ಟ ಏನು ಉಹುಂ ಏನೊಂದು ಇರಲಿಲ್ಲ. ಹಾಗಂತ ಈ ನಿಯಮ ಬಲ್ಲ ಪತ್ರಕರ್ತರು ಇಲ್ಲವೇ ಇಲ್ಲಾ ಅಂತಲ್ಲ. ಆದರೆ ಒಂದೋ ಸುದ್ದಿಮನೆ ನಡೆಸುವವರಿಗೆ ಈ ಕಣ್ಣೋಟ ಇರಲಾರದು. ಇಲ್ಲಾ ಈ ಮಾಹಿತಿ ಇರುವ ಪತ್ರಕರ್ತರನ್ನು ಮೂಲೆಗೆ ಒತ್ತರಿಸಿರಬೇಕು. ಅದೂ ಅಲ್ಲವಾದರೆ ಆ ಮೀಡಿಯಾ ಆಫೀಸಿಗೆ ಅದು ಧೀರ್ಘ ಆಕಳಿಕೆಯ ಸಮಯ.

ಇದೇ ಕುತೂಹಲ ನನಗೆ ಮಾರನೆಯ ದಿನವೂ ಇತ್ತು. ಟಿವಿ ಚಾನಲ್ ನಂತರ ಪತ್ರಿಕೆಗಳು ಹೇಗೆ ಇದನ್ನು ಕವರ್ ಮಾಡಿದೆ ಎಂಬುದರ ಬಗ್ಗೆ. ಟೈಮ್ಸ್ ಆಫ್ ಇಂಡಿಯಾ ಗ್ರೂಪಿನ ಯಾವುದೇ ಪತ್ರಿಕೆಗಳನ್ನು ತೆಗೆದುಕೊಳ್ಳಿ ಅವರಿಗೆ ಓದುಗರ ಪಲ್ಸ್ ಚೆನ್ನಾಗಿ ಗೊತ್ತು. ಯಾವ ಮಾಹಿತಿ ಇಡಿಯಾಗಿ ಕೊಡಬೇಕು, ಯಾವ ಮಾಹಿತಿ ಹಿಡಿಯಲ್ಲಿ ಕೊಡಬೇಕು ಅಂತ. ಟೈಮ್ಸ್ ಹಾಗೂ ವಿಜಯಕರ್ನಾಟಕ ಇಬ್ಬರೂ ಈ ನಿಯಮಗಳು ಏನು ಅನ್ನುವುದನ್ನು ಸ್ಪಷ್ಟವಾಗಿ ಪ್ರಕಟಿಸಿತ್ತು.

ಆಗ ತಾನೇ ‘ಪ್ರಜಾವಾಣಿ’ಯ ಮೂರನೇ ಮಹಡಿಗೆ ದಾಖಲಾಗಿದ್ದೆ. ನ್ಯೂಸ್ ರೂಂನ ಗಿಜಗಿಜ ಲೋಕಕ್ಕೆ ಇನ್ನೂ ಹೊಂದಿಕೊಳ್ಳುತ್ತಿದ್ದ ಸಮಯ. ಆಗ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಬಿ ಎಂ ಕೃಷ್ಣ ಸ್ವಾಮಿ ನನ್ನನ್ನು ರಿಪೋರ್ಟರ್ ಆಗಿ ವರ್ಗಾಯಿಸಿದರು.

ಚಹಾ, ಕಾಫಿ, ಬಿಸ್ಕತ್ತು, ಚೌಚೌ ಬಾತ್ ಗಳ ಲೋಕಕ್ಕೆ ಇಳಿಯುವ ಮುನ್ನವೇ ಮುಖ್ಯ ವರದಿಗಾರರಾಗಿದ್ದ ಶ್ರೀಧರ್ ಆಚಾರ್ ನೀವು ಕೋರ್ಟ್ ರಿಪೋರ್ಟ್ ಮಾಡಿದರೆ ಹೇಗೆ ಅಂದರು. ಹೇಗೆ ವರದಿ ಮಾಡಬೇಕು ಎಂಬುದು ಸುತಾರಾಂ ಗೊತ್ತಿರಲಿಲ್ಲ. ಕಮ್ಯುನಿಕೇಷನ್ ಓದುವಾಗ ಮೀಡಿಯಾ ಲಾಸ್ ಕ್ಲಾಸ್ ಬಂದರೆ, ‘ಶಾಲೆಗೆ ಚಕ್ಕರ್, ಊಟಕ್ಕೆ ಹಾಜರ್, ಲೆಕ್ಕದಿ ಬರಿ ಸೊನ್ನೆ..’ ಎನ್ನುವ ಸ್ಥಿತಿ . ಮೀಡಿಯಾದಲ್ಲಿ ಪಾಠ ಮಾಡುತ್ತಿದ್ದವರಿಗೂ, ಪಾಠ ಕೇಳುತ್ತಿದ್ದವರೂ ಇಬ್ಬರೂ ಒಂದೇ ತರ. ಒಡೆದ ದೋಣಿಯಲ್ಲಿ ಪಯಣಿಸುತ್ತಿದ್ದವರೇ.

ಹಾಗಾಗಿ ಕೋರ್ಟ್ ರಿಪೋರ್ಟಿಂಗ್ ಅಂದ ತಕ್ಷಣ ಕಕ್ಕಾಬಿಕ್ಕಿಯಾದೆ. ಆ ಕಡತಗಳು, ಆ ದಪ್ಪ ದಪ್ಪ ಪುಸ್ತಕಗಳು, ಆ ನಿಯಮ ಈ ನಿಯಮ ನನ್ನನ್ನು ಮಿಕ್ಸಿಗೆ ಹಾಕಿ ರುಬ್ಬಲು ಸಿದ್ಧವಾಗುತ್ತಿದ್ದಾಗಲೇ ಗುಂಡಪ್ಪ ಕಣ್ಣಿಗೆ ಬಿದ್ದದ್ದು . ಗುಂಡಪ್ಪ ಅಂತ ಯಾವ ಕೋರ್ಟಿನ ಮುಂದೆಯಾದರೂ ಉಚ್ಚರಿಸಿ, ಅದು ಖಂಡಿತಾ ಪ್ರಜಾವಾಣಿ ಅಡ್ರೆಸ್ ನೀಡುತ್ತದೆ. ಹಾಗಿತ್ತು ಗುಂಡಪ್ಪ ಅವರ ವರಸೆ. ಒಂದು ರೀತಿಯಲ್ಲಿ ಕೋರ್ಟಿನಲ್ಲೂ ಸುದ್ದಿ ಇರುತ್ತೆ ಅಂತ ಕನ್ನಡ ಜರ್ನಲಿಸಂಗೆ ತೋರಿಸಿಕೊಟ್ಟವರೇ ಈ ಗುಂಡಪ್ಪ. ಅದುವರೆಗೂ ಕಸ್ತೂರಿ ಹಾಗೂ ಕೆ ಪಿ ರಾವ್ ಎಂಬ ಲಾಯರ್ ಗಳು ಪತ್ರಿಕಾ ಕಚೇರಿಗಳಿಗೆ ಕೋರ್ಟಿನ ಘಾಟಿನ ಕೇಸುಗಳನ್ನು ನೀಡುತ್ತಿದ್ದರು.

ಗುಂಡಪ್ಪ ಪತ್ರಿಕೆಗೊಬ್ಬ ಕೋರ್ಟ್ ರಿಪೋರ್ಟರ್ ಬೇಕು ಎನ್ನುವುದನ್ನ ಮನದಟ್ಟು ಮಾಡಿ ಕೊಟ್ಟುಬಿಟ್ಟರು. ಸಾಲುಸಾಲಾಗಿ ಕೋರ್ಟ್ ರಿಪೋರ್ಟರ್ ಗಳ ಪಡೆಯೇ ಎದ್ದು ನಿಂತಿತ್ತು. ಪಿ ರಾಜೇಂದ್ರ, ಸುರೇಶ್, ರಾಮು ಪಾಟೀಲ್, ಅನಿಲ್ ಶಾಸ್ತ್ರಿ , ಎಂ ಕೆ ಮಧುಸೂದನ್, ಸುಭಾಷ್, ಅರವಿಂದ ಶೆಟ್ಟಿ, ವಸಂತ, ಪ್ರದೀಪ್, ರಮೇಶ್, ಪುದುವೆಟ್ಟು, ಸುಚೇತನಾ ನಾಯಕ್ ಇನ್ನಷ್ಟು..ಮತ್ತಷ್ಟು.. ರಿಪೋರ್ಟರ್ ಗಳು ಕೋರ್ಟ್ ಗಳ ಕಡತಗಳಿಗೆ ಕೈ ಹಾಕಿದರು. ಕೇಸಿರದಿದ್ದರೂ ದಿನವೂ ಕಟಕಟೆ ಹತ್ತುವವರು ಇವರು. ‘ಕಟಕಟೆ ಹತ್ತಲು ಬಿಡಿ ನನ್ನ..’ ಎಂದ ಚರಬಂಡರಾಜು ಕವಿತೆಯ ಸಾಲುಗಳು ನೆನಪಾದವು.

ನಾನು ಕೋರ್ಟ್‌ನತ್ತ ಮೊದಲ ಹೆಜ್ಜೆ ಇಟ್ಟಾಗ ಜೊತೆಗಿದ್ದದ್ದು ನನಗೆ ಕ್ರೈಂ ರಿಪೋರ್ಟಿಂಗ್‌ನಲ್ಲೂ ಸಾಥಿಯಾಗಿದ್ದ ‘ಡೆಕ್ಕನ್ ಹೆರಾಲ್ಡ್‌’ನ ಕಂಚನ್‌ ಕೌರ್. ಕೋರ್ಟ್‌ನ ಹೊರ ಕಾಂಪೌಂಡ್‌ನಲ್ಲಿ ಒಬ್ಬೊಬ್ಬರೇ ಜಮಾಯಿಸುತ್ತಿದ್ದೆವು. ಎಲ್ಲಾ ಪೇಪರ್‌ನವರು ಬಂದಾಯ್ತು ಅಂತಾದಾಗ ಕೋರ್ಟ್‌ನ ಒಂದೊಂದು ಕೋಣೆಯ ಬಾಗಿಲು ಬಡಿಯುತ್ತಾ ಹೋಗುತ್ತಿದ್ದೆವು. ಕಡತಗಳು, ಆದಿನ ಆದ ವಿಚಾರಣೆಗಳು, ಕೊಟ್ಟ ತೀರ್ಪುಗಳು, ಸೆನ್ಸೇಷನಲ್ ಕ್ರೈಂಗಳು, ಇಂಟರೆಸ್ಟಿಂಗ್ ಕೇಸ್‌ಗಳು ಹೀಗೆ ಒಂದೊಂದು ಕಡತದ ಮೇಲೂ ನಮ್ಮ ಕೈ ಇರುತ್ತಿತ್ತು. ಕೋರ್ಟ್ ರಿಪೋರ್ಟಿಂಗ್‌ನಲ್ಲಿ ಮಾತ್ರ ಒಂದು ರೀತಿ ಕಾಮ್ರೇಡ್ ಗಿರಿ ಇತ್ತು.

ಗೊತ್ತಿಲ್ಲದ ಕಬ್ಬಿಣದ ಕಡಲೆಯನ್ನು ಹತ್ತು ಪತ್ರಿಕೆಗಳವರು ಅಗಿದರೂ ಅದು ಸರಿಯಿದೆಯೇ ಎಂಬ ಕೊರತೆ ಕಾಡುತ್ತಿತ್ತು. ಇದರ ಜೊತೆಗೆ ನಾಳೆ ನಮ್ಮ ವರದಿ ಪ್ರಿಂಟಾಗಿ ಅದು ನೆಟ್ಟಗಿಲ್ಲದೆ, ಕೋರ್ಟ್‌ನ ಕಡತಗಳಲ್ಲಿ ನಾವೂ ಒಂದು ಕಡತವಾಗಿಬಿಟ್ಟರೆ ಎಂಬ ಭಯ. ಆದರೆ ಈ ಮಧ್ಯೆಯೇ ಗುಂಡಪ್ಪನಂತಹವರು ಇದ್ದರು. ಅವರಿದ್ದೆಡೆಗೆ ಕೋರ್ಟಿನ ಕಡತಗಳೇ ಚಲಿಸಿ ಬರುತ್ತಿತ್ತು. ಅದನ್ನು ಕಣ್ಣಾರೆ ಕಂಡು, ಅವರ ಬಳಿ ಕುಳಿತು,ಕೋರ್ಟ್ ರಿಪೋರ್ಟಿಂಗ್‌ನ ಅ ಆ ಇ ಈ ಕಲಿಯತೊಡಗಿದೆ.

ಒಂದು ಘಟನೆ ಇಲ್ಲಿ ಹೇಳಬೇಕೇನೋ. ಹೀಗೆ ರಿಪೋರ್ಟಿಂಗ್‌ಗಾಗಿ ಕೋರ್ಟ್‌ಗೆ ಹೋಗಿ ಅಂಗಳದಲ್ಲಿ ಎಲ್ಲರಿಗೂ ಕಾಯುತ್ತಿದ್ದೆ. ದೊಡ್ಡ ಕಾರಿನಿಂದ ಇಳಿದ ವ್ಯಕ್ತಿ ನನ್ನತ್ತ ಬಂದರು. ಇದು ನಾಳೆ ಪ್ರಜಾವಾಣಿಯಲ್ಲಿ ಬರಬೇಕು ಗೊತ್ತಾ ಅಂದರು. ಆಗ ತಾನೆ ಕ್ಯಾಂಪಸ್‌ನಿಂದ ಎದ್ದು ಬಂದವರು ನಾವು ’ಪ್ರೆಸ್ ನೋಟ್ ಆದರೆ ಆಫೀಸಿಗೆ ಕಳುಹಿಸಿಕೊಡಿ’ ಎಂದೆ. ಆತ ಸರಿಯಾದ ಒಂದು ಲುಕ್ ಕೊಟ್ಟವನೇ ನಾಳೆ ಇದೇ ಸಮಯದ ಹೊತ್ತಿಗೆ ನಿನ್ನ ವಿಚಾರಿಸಿಕೊಳ್ಳುತ್ತೇನೆ ಅಂತ ಕಾರ್ ಹತ್ತಿದ. ‘ಬಂದ್ದೆಲ್ಲಲ್ಲಾ ಬರಲಿ, ಆ ಗೋವಿಂದನ ದಯೆಯೊಂದಿರಲಿ’ ಅಂತ ಸುಮ್ಮನಾದೆ.

ಮಾರನೆಯ ದಿನ ಮೈಮುರಿಯುತ್ತಾ ಎದ್ದವನಿಗೆ ಫೋನ್ ಒಂದೇ ಸಮ ಚೀರುವ ಶಬ್ದ ಕೇಳಿತು. ಫೋನ್ ಎತ್ತಿದರೆ ಕಂಚನ್ ಕೌರ್. ಇದೇನಪ್ಪಾ ಈ ಬೆಳಗಲ್ಲಿ ಅಂತ ಫೋನ್ ಎತ್ತಿಕೊಂಡವನೇ ಏನು ಅಂದೆ ಜಯರಾಜ್ ಕೊಲೆಯಾಗಿ ಹೋಗಿದ್ದಾರೆ. ಲಾಲ್‌ಬಾಗ್ ಗೇಟ್ ಬಳಿ ಬೇಗ ಬಾ ಅಂತ ಮಾಹಿತಿ ಕೊಟ್ಟು ಫೋನ್ ಇಟ್ಟಳು. ನಾನು ಛಕ್ಕನೆ ಆ ಜಾಗಕ್ಕೆ ಹೋಗಿ ಬಿದ್ದೆ ಜಯರಾಜ್ ಮಾತ್ರವಲ್ಲ ಇನ್ನೂ ಒಂದು ಹೆಣ ಇತ್ತು ಯಾರದು ಅಂತ ಹತ್ತಿರ ಹೋದೆ. ಒಂದು ಕ್ಷಣ ತಲ್ಲಣಿಸಿದೆ. ಆತ ಅದೇ ಹಿಂದಿನ ದಿನ ನನ್ನನ್ನು ನೋಡಿಕೊಳ್ಳುವುದಾಗಿ ಧಮಕಿ ನೀಡಿದ್ದ ಅದೇ ಲಾಯರ್!

ಕೋರ್ಟ್‌ನಲ್ಲಿ ಒಂದೆರಡಲ್ಲ, ಟಿಆರ್ ಪಿ ಯನ್ನು ಸರ್ರನೆ ಆಕಾಶಕ್ಕೇರಿಸುವ ಸುದ್ದಿಗಳಿವೆ ಅಂತ ನನಗೆ ಗೊತ್ತಾದದ್ದು ಸಿ.ಎಚ್ ಹನುಮಂತರಾಯ ಅವರಿಂದ ’ವಕೀಲರ ವಗೈರೆಗಳು’ ಓದಿದ ನನಗೆ ಅವರು ಹ್ಯಾಂಡಲ್ ಮಾಡಿದ ಪ್ರಕರಣಗಳೆಲ್ಲವೂ ಒಂದು ರೀತಿ ಬಾಯಿಪಾಠ ಆಗಿಹೋಗಿದ್ದವು.

ನನಗೇನು? ಬಹುಷಃ ಆ ಕಾಲದ ಪ್ರತಿಯೊಬ್ಬ ಕನ್ನಡ ಓದುಗನ ಮನದಲ್ಲೂ ಈ ಸೆನ್ಸೇಷನಲ್ ಪ್ರಕರಣಗಳು ನಾಲಿಗೆಯ ಮೇಲೇ ಇರುತ್ತಿತ್ತು. ಇವರ ಜೊತೆ ಕೋ.ಚನ್ನಬಸಪ್ಪ ಅವರು ಬರೆದ ಅನುಭವ ಪುಸ್ತಕಗಳು, ‘ಪ್ರಜಾಮತ’ದಲ್ಲಿದ್ದ ಎಚ್.ಪಿ.ಫಿಲೋಮಿನಾ ಬರೆಯುತ್ತಿದ್ದ ಲೇಖನಗಳು ಎಲ್ಲವೂ ಒಂದು ರೀತಿ ಕೋರ್ಟ್‌ನಲ್ಲೂ ನ್ಯೂಸ್ ಇದೆ ಎನ್ನುವುದನ್ನು ಸಾರಿ ಹೇಳಿತ್ತು .

ಹಾಗಾಗಿಯೇ ನಾನು ಈಟಿವಿಗೆ ವರದಿಗಾರರನ್ನು ಆಯ್ಕೆ ಮಾಡಿಕೊಳ್ಳಲು ಮೊದಲ ಬಾರಿ ಕಣಕ್ಕಿಳಿದಾಗಲೇ ಒಬ್ಬರಲ್ಲ ನಾಲ್ವರಾದರೂ ಕೋರ್ಟ್ ರಿಪೋರ್ಟರ್‌ಗಳು ಬೇಕು ಅಂತ ನಿರ್ಧರಿಸಿಬಿಟ್ಟಿದ್ದೆ. ಹಾಗಾಗಿ ಅಪ್ಲಿಕೆಂಟ್‌ಗಳಲ್ಲಿ ಯಾರಾದರೂ ಲಾ ಓದಿದವರು ಸಿಗುತ್ತಾರಾ ಅಂತ ದುರ್ಬೀನು ಹಾಕಿ ಹುಡುಕುತ್ತಿದ್ದೆ. ಅಂತೂ ಸಿಕ್ಕಿದರು. ಸಾಕಷ್ಟು ತರಬೇತಿಯೂ ನೀಡಿದ್ದಾಯ್ತು. ಆದರೆ ಪುಸ್ತಕದ ಬದನೇಕಾಯಿ ಕೆಲಸಕ್ಕೆ ಬರುವುದಿಲ್ಲ ಅಂತ ಜರ್ನಲಿಸಂ ಓದಿ ಬಂದವರನ್ನು ನೋಡಿ ಗೊತ್ತಾಗಿತ್ತು. ಈಗ ಲಾ ಓದಿ ಬಂದವರನ್ನು ನೋಡಿದಾಗ ಇನ್ನೊಮ್ಮೆ ಸಾಬೀತಾಯಿತು.

ಹೀಗಾಗಲು ಇನ್ನೊಂದು ಕಾರಣವೂ ಇತ್ತು. ನಾನು ಕೆಲಸ ಮಾಡಿದ ಜೊತೆಗಾರರ ಪೈಕಿ ನಾನು ಕಂಡ ಅತ್ಯಂತ ಬೆಸ್ಟ್ ಕ್ರೈಂ ರಿಪೋರ್ಟರ್ ಸೋಮಶೇಖರ ಕವಚೂರು.

ದಾವಣಗೆರೆಯ ‘ನಗರವಾಣಿ’ ಯ ಬಿ ಎನ್ ಮಲ್ಲೇಶ್ ಗರಡಿಯಲ್ಲಿ ಪಳಗಿದ ಸೋಮಶೇಖರ್ ಜಿಗಿದದ್ದು ಸಂಯುಕ್ತ ಕರ್ನಾಟಕಕ್ಕೆ ಅಲ್ಲಿಂದ ಈಟಿವಿಗೆ. ಸೋಮಶೇಖರ್ ಮುಂದೆ ಎರಡು ರೀತಿಯ ಸವಾಲಿತ್ತು. ಕೋರ್ಟ್‌ನಲ್ಲಿ ಸೆನ್ಸೇಷನಲ್ ಎನ್ನುವ ಸುದ್ದಿಯನ್ನು ಆಚೆಗೆ ಎಳೆದುಹಾಕಬೇಕು ಆದರೆ ಅಷ್ಟೇ ಅಲ್ಲ ಈಗ ಅದಕ್ಕೆ ಬೇಕಾದ ವಿಶುವಲ್ಸ್‌ಗಳನ್ನು ಕೊಡಬೇಕು. ಆತನ ನಾಲಿಗೆಯ ಮೇಲೆ ಕೇಸ್ ಸಂಖ್ಯೆ, ನಿಯಮಾವಳಿ ಎಲ್ಲಾ ಇರುತ್ತಿತ್ತು.

ತೆಲಗಿ ಮಂಪರು ಪರೀಕ್ಷೆಯ ಸಿಡಿಯನ್ನು ಹೊರಕ್ಕೆಳೆದು ತಂದಾಗ ಸುದ್ದಿ ಜಗತ್ತು ತಲ್ಲಣಿಸಿ ಕುಳಿತಿತ್ತು. ಹೈಕೋರ್ಟ್ ಪೀಠದ ಸುದ್ದಿ ಬ್ರೇಕ್ ಆಗಿದ್ದು ಸೋಮಶೇಖರ್‌ನಿಂದ, ಗ್ರಾಮೀಣ ಕೃಪಾಂಕದ ಸುದ್ದಿ ಹೊರಬಿದ್ದದ್ದು ಆತನಿಂದ. ಅಷ್ಟೇ ಏಕೆ ಕುಮಾರಸ್ವಾಮಿ ಯಡಿಯೂರಪ್ಪ ಕೈ ಜೋಡಿಸಿ ಹೊಸ ರಾಜಕೀಯಕ್ಕೆ ಡಿದ್ದಾರೆ ಎನ್ನುವ ಸುದ್ದಿ ಸ್ಪೋಟವಾಗಿದ್ದು ಈತನಿಂದ. ಈ ಎಲ್ಲಾ ಸುದ್ದಿಯನ್ನು ನೋಡಿದಾಗ ‘ಸೋಮಶೇಖರ್ ಅಖಾಡದಲ್ಲಿ ಸೌಮ್ಯರಾಣಿಯೇ?’ ಅನ್ನುವಂತಾಗಿಹೋಗಿತ್ತು.

ಮೊನ್ನೆ ದಿಢೀರನೆ ಸೋಮಶೇಖರ್ ಸಿಕ್ಕರು. ಏನು ಮಾಡ್ತಿದ್ದೀರಿ ಅಂತ ಕುಶಲೋಪರಿ ಮಾತನಾಡಿದೆ. ಎಲ್ ಎಲ್ ಬಿಗೆ ನೊಂದಾಯಿಸಿದ್ದೇನೆ ಅಂದರು. ಅರೇ! ಕಸುಬು ಕಲಿತ ಮೇಲೆ ಕಲಿಕೆ ಅಂತ ಆಶ್ಚರ್ಯ ಆಯಿತು. ಅದೇ ಸಮಯಕ್ಕೆ ಸೃಷ್ಟಿ ನಾಗೇಶ್ ಪಿ ರಾಜೇಂದ್ರ ಬರೆದ ಕೋರ್ಟ್ ವರದಿ ಮಾಡುವ ಕುರಿತ ಮಾಧ್ಯಮ ಮಾರ್ಗದರ್ಶಿಯನ್ನು, ಪ್ರಕಾಶ್ ಕಂಬತ್ತಳ್ಳಿ ಹಾ.ರಾ ಬರೆದ ‘ವಕೀಲಿ ದಿನಗಳು’ ಕೈಗಿತ್ತರು. ಹಾಗಾಗಿ ಇದೆಲ್ಲಾ ನೆನಪಾಯಿತು

ಬುಕ್ ಟಾಕ್

ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿರುವ ಕೆಲವೇ ಮಂದಿಯಲ್ಲಿ ಶಿವಾನಂದ ಕಳವೆ ಒಬ್ಬರು. ಈಗಾಗಲೇ ತಮ್ಮ ಬರಹದ ಬದ್ಧತೆಗಾಗಿ ರಾಜ್ಯ ಸರ್ಕಾರದ ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. ಇತ್ತೀಚಿಗೆಅಡಿಕೆ ಪತ್ರಿಕೆ ಹಾಗೂ ಉದಯವಾಣಿಯಲ್ಲಿ ಬರೆದ ಅಂಕಣ ಬರಹಗಳನ್ನು ಒಂದೆಡೆ ತಂದಿದ್ದಾರೆ. ‘ಕಂಪ್ಯೂಟರ್ ಊಟ ಹಳ್ಳಿ ಮಾರಾಟ’ ನಮ್ಮ ಆಳಕ್ಕಿಳಿದು ಅಂತರಂಗವನ್ನು ಚುಚ್ಚುತ್ತದೆ. ಬೆಂಗಳೂರಿನ ಧಾತ್ರಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. .

ಕೆಂಪ್ ಮೆಣಸಿನ್ಕಾಯ್

‘ಥಟ್ ಅಂತ ಹೇಳಿ’ ಖ್ಯಾತಿಯ ನಾ ಸೋಮೇಶ್ವರ್ ಅವರಿಗೆ ಒಮ್ಮೆ ಮನೆಗೆ ಹೋಗುವಾಗ ದಾರಿ ತಪ್ಪಿತಂತೆ. ಕಾರು ನಿಲ್ಲಿಸಿ ಹಾದಿಹೋಕನೊಬ್ಬನನ್ನು ‘ಯಲಹಂಕಕ್ಕೆ ಈ ರಸ್ತೆ ಹೋಗುತ್ತಾ?’ ಅಂತ ಕೇಳಿದರಂತೆ. ಆತ ಹೋಗುತ್ತೆ ಅಂದನಂತೆ. ತಕ್ಷಣ ಸೋಮೇಶ್ವರ್ ಕಾರಿನಿಂದ ಒಂದು ಪುಸ್ತಕ ತೆಗೆದು ಕೈಗಿತ್ತರಂತೆ. ಆತ ಕಕ್ಕಾಬಿಕ್ಕಿ. ಆಗ ಸೋಮೇಶ್ವರ್- ಒಂದು ಪ್ರಶ್ನೆ ಒಂದು ಸರಿಯಾದ ಉತ್ತರ ಬಹುಮಾನವಾಗಿ ಒಂದು ಪುಸ್ತಕ ಎಂದರಂತೆ..ಇದು ಜೋಗಿ ಹುಟ್ಟುಹಾಕಿದ ಜೋಕ್

Sunday, August 29, 2010

ನಕ್ಕುಬಿಟ್ಟು ಸುಮ್ಮನಾಗಿ

ಮುಧೋಳ ಸಾಹಿತ್ಯ ಸಮ್ಮೇಳನದಲ್ಲಿ ರವಿ ಬೆಳಗೆರೆ, ಚಂಪಾ ಮೀಟ್ ಆದ್ರು. ಚಂಪಾ ಹೇಳಿದ್ರು-
ರವಿ, ಹೊಸ ಪುಸ್ತಕ ತರ್ತಿದೀನಿ “ಲೇಖಕರ ವಿಳಾಸಗಳು” ಅಂತ…
ತಕ್ಷಣ ರವಿ ಬೆಳಗೆರೆ ಹೇಳಿದ್ರು-
ಚಂಪಾ, ಆ ಹೆಸ್ರು ಬೇಡ “ಲೇಖಕರ ವಿಲಾಸಗಳು” ಅಂತ ಇಡಿ. ಸಖತ್ತಾಗಿ ಸೇಲಾಗುತ್ತೆ…

* * *

ಸಂಕ್ರಮಣ ಚಂದಾ ಕ್ಯಾಂಪೈನ್ ನಡೀತಾ ಇತ್ತು. ಚಂಪಾ ಶಾಂತರಸರ ಮನೆಗೆ ಫೋನ್ ಮಾಡಿದ್ರು-
ರಾಯಚೂರಲ್ಲಿ ಚಂದಾ ಮಾಡಿಸಿಕೊಡ್ರಿ ಅಂತ.
ಶಾಂತರಸರ ಶ್ರೀಮತಿ ಸಜೆಶನ್ ಕೊಟ್ರಂತೆ-
ಅದಕ್ಕೇನು ಚಂಪಾ ಅವ್ರೆ, ಬನ್ನಿ.
ಚಂಪಾ ಕೇಳಿದ್ರಂತೆ-
ಅದಕ್ಯಾಕೆ ಅಲ್ಲಿಗೆ ಬರೋದು, ನೀವೇ ಮಾಡಿಸಿಬಿಡಿ.
ತಕ್ಷಣ ಶ್ರೀಮತಿ ಶಾಂತರಸರು ಅಂದ್ರಂತೆ-
ಚಂಪಾ ಅವರೆ, ಹೆಣ ಮುಂದಿದ್ರೆ ಅಳೋಕೆ ಚಂದ ಅಂತ.

* * *

ಹಂಪನಾ ಯಾವ್ದೋ ಯೂನಿವರ್ಸಿಟಿಗೆ ಬಂದಿದ್ರು. ವಾಮನ ನಂದಾವರ ದಂಪತಿಗಳು ಆಗ ತಾನೆ ಹೊಸ ಮನೆ ಕಟ್ಟಿ ಮುಗಿಸಿದ್ರು. ಹಳೇ ಮನೇನ ಮಾರಿರಲಿಲ್ಲ. ಯಾರೋ ನಂದಾವರ ಅವರನ್ನ ಹಂಪನಾಗೆ ಇಂಟ್ರೊಡ್ಯೂಸ್ ಮಾಡ್ತಾ-
ಸಾರ್, ಎಲ್ಲಾದ್ರೂನೂ ಸಾಹಿತಿಗಳಿಗೆ ಎರಡು ಮನೆ ಇರೋದು ಕೇಳಿದ್ರಾ ಅಂದ್ರು.
ಹಂಪನಾ ಯಥಾಪ್ರಕಾರ ಮೀಸೆ ತುದೀಲೇ ನಗ್ತಾ-
ಇಲ್ಲಪ್ಪ, ಆದ್ರೆ ಎರಡು ಸಂಸಾರ ಇರೋದ್ ಮಾತ್ರ ಕೇಳಿದೀನಿ ಅಂದ್ರು.

* * *

ಯಾವ್ದೋ ಪ್ರೋಗ್ರಾಮಿನಲ್ಲಿ “ಹಂಪನಾ, ನೀವೇ ನಮ್ಮ ಜಹಾಂಪನಾ” ಅನ್ನೋ ರೀತಿನಲ್ಲಿ ಸಂಘಟಕರು ಹಾಡಿ ಹೊಗಳಿದ್ರು. ಹಂಪನಾ ಪಾಪ ಕುಳ್ಳಗಿದ್ದಾರಲ್ಲ, ಹಾಗಾಗಿ ಭಾಷಣ ಮಾಡೋಕೆ ಅಂತ ಎದ್ದಾಗ ಸೌಂಡ್ ಸಿಸ್ಟಮ್ ನವನು ಓಡಿ ಬಂದು ಮೈಕ್ ಎತ್ತರ ಕಡಿಮೆ ಮಾಡ್ದ.
ಹಂಪನಾ ಹೇಳಿದ್ರು-
ನೀವೇನೇ ಹೊಗಳಿ, ನನ್ನ ಎತ್ತರ ಸರಿಯಾಗಿ ಗೊತ್ತಿರೋದು ಮೈಕ್ ನವನಿಗೆ ಮಾತ್ರ ಅಂತ.

(ಈ ಸಂಗತಿಗಳೆಲ್ಲ ಯಾವಾಗಲೋ ಕೇಳಿದ್ದು. ನಿಜ ಇದ್ರೂ ಇರಬಹುದು, ಸುಳ್ಳಿದ್ರೂ ಇರಬಹುದು, ಕರೆಕ್ಷನ್ನೂ ಬೇಕಾಗಬಹುದು. ಏನಾದ್ರೂ ಇದ್ರೆ ಗಮನಕ್ಕೆ ತನ್ನಿ. ಇಲ್ಲಾಂದ್ರೆ ನಕ್ಕುಬಿಟ್ಟು ಸುಮ್ಮನಾಗಿ.)

ಸುಮ್ನೆ ಟೈಂಪಾಸಿಗಲ್ವಾ?

ಕಯ್ಯಾರ ಕಿಂಜ಼ಣ್ಣ ರೈ ಅವ್ರು ಚೆನ್ನಾಗಿ ಭಾಷಣ ಮಾಡ್ತಾರೆ. ಆದ್ರೆ ಅದು ಅವ್ರಿಗೂ ಗೊತ್ತಾಗಿಬಿಟ್ಟಿದೆ. ಕಾಸರಗೋಡು ಚಿನ್ನಾಗೆ ರೈ ಭಾಷಣ ತಡಕೊಳ್ಳೋಕಾಗಲ್ಲ. ರೈಗಳು ಭಾಷಣ ಚಚ್ತಾ ಇದ್ರೆ, “ಅಯ್ಯೋ ಕೈಯಾರ ಕೊಂದಣ್ಣ ರೈ” ಅಂತಾ ಕೂಗ್ತಾರೆ.

*

ಸಾಹಿತ್ಯ ಅಕಾಡೆಮಿಗೆ ಮೆಂಬರ್ಸ್ ಲಿಸ್ಟ್ ಅನೌನ್ಸ್ ಆಗಿತ್ತು. ಲೀಲಾದೇವಿ ಆರ್ ಪ್ರಸಾದ್ ಕಾಲ. ಸಾಹಿತಿಗಳ್ಯಾರು, ಪಾರ್ಟಿ ವರ್ಕರ್ಸ್ ಯಾರು ಅನ್ನೋದೇ ಗೊತ್ತಾಗ್ತಿರ್ಲಿಲ್ಲ. ಅಕಾಡೆಮಿ ಮೊದಲ ಸಭೇಲಿ ಒಂದು ವಾರ್ತಾಪತ್ರ ತರ್ಬೇಕು ಅಂತಾ ಚರ್ಚೆಯಾಗ್ತಿತ್ತು. ಅಥಣಿಯಿಂದ ಹೀಗೇ ಯಾರನ್ನೋ ಮೆಂಬರ್ ಮಾಡ್ಬಿಟ್ಟಿದ್ರು. ಸಾಹಿತ್ಯದ ಗಂಧಾನೂ ಇರ್ಲಿಲ್ಲ, ಗಾಳಿನೂ ಇರ್ಲಿಲ್ಲ. ನಾನೂ ವಾರ್ತಾಪತ್ರಕ್ಕೆ ಆರ್ಟಿಕಲ್ ಬರೀತೀನಿ ಅಂತಾ ಅವ್ರು ಎದ್ದು ನಿಂತ್ರು. ಸಭೇಲಿ ಜಯಂತ್ ಕಾಯ್ಕಿಣಿ ಇದ್ರು. ಏನ್ ಬರೀತೀರಿ ಅಂತಾ ಕೇಳಿದ್ರು. ಅಥಣಿ ಚಪ್ಲಿಗೆ ಫೇಮಸ್ಸು ಸಾರ್, ಅದ್ರ ಬಗ್ಗೆ ಬರೀತೀನಿ ಅಂದ್ರು. ಕಾಯ್ಕಿಣಿ ಗಂಭೀರವಾಗೇ ಹೇಳಿದ್ರು-

“ಖಂಡಿತ ಬರೀರಿ. ಆದ್ರೆ ಸಾಹಿತಿಗಳು ಮತ್ತು ಚಪ್ಪಲಿ ಸೇವೆ ಅಂತಾ ಬರೀರಿ.”

*

ವೈಯೆನ್ಕೆ ಫ್ರೆಂಡ್ಸ್ ಜೊತೆ ಬಾರಿನಲ್ಲಿ ಕೂತಿದ್ರು. ಎಷ್ಟೊತ್ತಾದ್ರೂ ವೇಯ್ಟರ್ ಬರ್ಲಿಲ್ಲ. ತಕ್ಷಣ ಹೇಳಿದ್ರು-

ಕರುಣಾಳು ಬಾ ಬೆಳಕೆ
ಮುಸುಕಿದೀ ಪಬ್ಬಿನಲಿ
ಕೈಹಿಡಿದು ಕುಡಿಸೆನ್ನನು…

(ಇವೆಲ್ಲ ಹೇಳಿದ್ದು ಕೇಳಿದ್ದು. ಕರೆಕ್ಟೊ ಸುಳ್ಳೊ ನಮ್ಗೂ ಗೊತ್ತಿಲ್ಲ. ಸುಮ್ನೆ ಟೈಂಪಾಸಿಗಲ್ವಾ? ಎಂಜಾಯ್ ಮಾಡಿ. ಯಾರಿಗಾದ್ರೂ ನಿಜ ಗೊತ್ತಿದ್ರೆ ಒಂದು ಮೇಲ್ ಮಾಡಿ. ಅಬ್ಜೆಕ್ಷನ್ ಇದ್ರೆ ಗಂಟಲೇರಿಸಿ. ಬ್ಲಾಗಿನಿಂದ ಆ ಐಟಮ್ ಡಿಲಿಟ್ ಆಗುತ್ತೆ.)

ಬೀದಿ ಅನುಭವಗಳ ಬರಹ…

ಕರ್ನಾಟಕದಲ್ಲಿ ನಾನು ಸದಾ ಗೌರವಿಸುವ ಮತ್ತು ಮೆಚ್ಚುವ ಅನೇಕ ದಿಟ್ಟ ಮಹಿಳೆಯರಿದ್ದಾರೆ. ಅವರಲ್ಲಿ ಗುಲಬರ್ಗೆಯ ಕೆ. ನೀಲಾ ಹಾಗೂ ಮೀನಾಕ್ಷಿ ಬಾಳಿ ಅವರೂ ಸೇರಿದ್ದಾರೆ. ಯಾವಾಗಲೂ ಜೊತೆಯಲ್ಲಿಯೇ ಕಾಣಿಸುವ ಇವರಿಬ್ಬರೂ ಹೋರಾಟಗಾರರು, ಒಳ್ಳೆಯ ಮಾತುಗಾರರು ಹಾಗೂ ಲೇಖಕಿಯರು. ಈ ಮೂರೂ ಗುಣಗಳು ಒಟ್ಟಿಗೆ ಸೇರುವುದು ಅಪರೂಪ. ಇವರ ಪ್ರಾಮಾಣಿಕತೆ, ಖಚಿತವಾಗಿ ಚಿಂತಿಸುವ ಗುಣ, ನೇರನುಡಿ, ನೈತಿಕ ವ್ಯಕ್ತಿತ್ವ ಇವೆಲ್ಲವೂ ನನಗೆ ಹಿಡಿಸಿದೆ.

ಇವರಲ್ಲಿ ಒಬ್ಬರಾದ ಡಾ. ಮೀನಾಕ್ಷಿ ಬಾಳಿ ಅವರು ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರು. ಅವರು ತರಗತಿಗಳಲ್ಲಿ ವಿದ್ಯಾರ್ಥಿಗಳ ಮನಸ್ಸನ್ನು ರೂಪಿಸುವ ಕೆಲಸ ಮಾಡುತ್ತಿರುವುದು ಸರಿಯೇ ಸರಿ. ಆದರೆ ಇದಕ್ಕಿಂತಲೂ ಮಹತ್ವದ ಎರಡು ಕೆಲಸಗಳನ್ನು ಅವರು ಮಾಡುತ್ತ ಬಂದಿದ್ದಾರೆ.

ಅವೆಂದರೆ, ತಮ್ಮ ಪರಿಸರದಲ್ಲಿ ಎಲ್ಲಿಯಾದರೂ ಅಸಹಾಯಕರ ನೋವೊಂದು ಕೇಳಿಸಿದರೆ, ಅಲ್ಲಿಗೆ ಧಾವಿಸಿ ಹೋಗಿ ಅದಕ್ಕೆ ಮಾನವೀಯ ಕಳಕಳಿಯಿಂದ ಮಿಡಿಯುವುದು; ದುರ್ಬಲರನ್ನು ದಮನಿಸುವ ಎಲ್ಲ ಬಗೆಯ ಶಕ್ತಿಗಳ ಎದುರು ಗಟ್ಟಿಯಾದ ದನಿಯನ್ನು ಮೊಳಗಿಸುವುದು. ಸಮಾಜದ ಮನಸ್ಸಿನ ಒಳಗೆ ಇರುವ ಹಲವು ಬಗೆಯ ಸೂತಕಗಳನ್ನು ಕಳೆಯುವುದಕ್ಕೆ ಈ ಬಗೆಯ ಮಿಡಿತ ಮತ್ತು ಮೊಳಗು ಆವಶ್ಯಕವಾಗಿವೆ.

ಮೂಲತಃ ಆಕ್ಟವಿಸ್ಟ್ ಆಗಿರುವ ಬಾಳಿ ಅವರು, ದಶಕಗಳ ಕಾಲ ಮಾಡಿದ ಚಳುವಳಿ, ಅಧ್ಯಯನ ಹಾಗೂ ಉಪನ್ಯಾಸಗಳ ಫಲವೆಂಬಂತೆ ಇಲ್ಲಿನ ಬರೆಹಗಳು ಮೂಡಿವೆ. ಶರಣ ಸಂಸ್ಕೃತಿಯೂ ಮಾರ್ಕ್ಸ್‌ವಾದವೂ ಹದವಾಗಿ ಬೆರೆತ ಪ್ರಜ್ಞೆಯುಳ್ಳ ಬಾಳಿಯವರು, ವಚನ ಚಳುವಳಿಯ ಅತ್ಯುತ್ತಮ ಆದರ್ಶಗಳನ್ನು ಇಟ್ಟುಕೊಂಡು, ಜಗತ್ತನ್ನು ನೋಡಲು ಯತ್ನಿಸಿದ್ದಾರೆ. ಇಲ್ಲಿನ ಬರೆಹಕ್ಕೆ ಅಧ್ಯಯನಕ್ಕಿಂತ ಬೀದಿ ಅನುಭವಗಳೇ ಹೆಚ್ಚಿನ ಕಸುವನ್ನು ಕೊಟ್ಟಿವೆ ಎಂದು ಹೇಳಬಹುದು.

ಸಾಹಿತ್ಯದ ವಿಶ್ಲೇಷಣೆಗೆ ಚಳುವಳಿಯ ಅನುಭವಗಳಿಂದಲೂ ಚಳುವಳಿಗೆ ಸಾಹಿತ್ಯದ ಅಧ್ಯಯನದಿಂದಲೂ ಶಕ್ತಿ ಹಾಯಿಸಿಕೊಳ್ಳುವ ಕೆಲವೇ ಸಾಮಾಜಿಕ ಕಾರ್ಯಕರ್ತರಲ್ಲಿ ಬಾಳಿಯವರೂ ಒಬ್ಬರು. ಹೀಗಾಗಿಯೇ ಇಲ್ಲಿನ ಚಿಂತನೆಗಳು ಮೂರ್ತವಾಗಿದೆ.

ಸ್ಪಷ್ಟವಾಗಿವೆ. ನೇರವಾಗಿವೆ. ಸರಳವಾಗಿವೆ. ಪುರುಷವಾದ ಕೋಮುವಾದ ಜಾತಿವಾದ ಹೀಗೆ ನಮ್ಮ ಬಾಳನ್ನು ಕುಬ್ಬಮಾಡಿರುವ ಎಲ್ಲ ವಿಕಾರಗಳಿಗೆ ಅವರು ಇಲ್ಲಿ ತೋರಿರುವ ಸಿಟ್ಟು ಮತ್ತು ಪ್ರತಿರೋಧಗಳು ಓದುಗರಿಗೆ ತಟ್ಟುತ್ತವೆ. ಈ ಸಿಟ್ಟು ಮತ್ತು ಪ್ರತಿರೋಧಗಳ ಹಿಂದೆ ಹೊಸ ಸಮಾಜ ಕಟ್ಟುವ ಕನಸಿದೆ ಎನ್ನುವುದು ಈ ಬರೆಹಗಳನ್ನು ಓದುವ ಯಾರಿಗೂ ಹೊಳೆಯುತ್ತದೆ.

ಇಲ್ಲಿನ ಬರೆಹಗಳು ಸಾಮಾನ್ಯವಾಗಿ ಮಾಹಿತಿಯನ್ನು ಜೋಡಿಸಿ ಕೊಡುತ್ತ, ಚಾರಿತ್ರಿಕ ಸಮೀಕ್ಷೆ ಮಾಡುತ್ತ ವಿಧಾನವನ್ನು ಅನುಸರಿಸಿವೆ. ಇದರಿಂದ ವರ್ತಮಾನದ ಘಟನೆಗೆ ಕಾರಣವಾಗಿರುವ ಗತಕಾಲದ ಭಿತ್ತಿಯ ನೋಟಗಳೇನೊ ಸಿಕ್ಕುತ್ತಿವೆ.

ಆದರೆ ಚಾರಿತ್ರಿಕ ನೋಟಗಳ ಹೆಚ್ಚಳದಿಂದಾಗಿ, ಲೇಖಕಿಗೆ ತನ್ನ ಚಿಂತನೆ ಕಲ್ಪನೆಗಳನ್ನು ಕೂಡಿಸಿ ಹೊಸ ಕಥನಗಳನ್ನು ಕಟ್ಟುವ ಸಾಧ್ಯತೆಗಳು ಕಡಿಮೆಯಾಗಿವೆ. ಬಾಳಿಯವರ ಬಾಯಿಯಲ್ಲಿ ಅನೇಕ ಹೋರಾಟದ ಮಾನವೀಯ ಕತೆಗಳನ್ನು ಕೇಳಿರುವ ಹಿನ್ನೆಲೆಯಲ್ಲಿ ಈ ಮಾತನ್ನು ನಾನು ಬರೆಯುತ್ತಿದ್ದೇನೆ. ಬಾಳಿ ಅವರು ತಮ್ಮ ಅನುಭವಕ್ಕೆ ಬಂದ ನಿರ್ದಿಷ್ಟ ಘಟನೆಯನ್ನು ಇಟ್ಟುಕೊಂಡು ಅದಕ್ಕೆ ಸಂಬಂಧಿಸಿದ ಎಲ್ಲ ಸೂಕ್ಷ್ಮವಾದ ಬಿಡಿ ವಿವರಗಳನ್ನು ಕೂಡಿಸುತ್ತ ಹೊಸ ಕಥನವನ್ನೇ ಕಟ್ಟಿತೋರುವ ವಿಧಾನವನ್ನು ಹಿಡಿಯುವುದು ಸಾಧ್ಯವಾಗಬೇಕು ಎಂದು ಸಹ ನಾನು ಆಶಿಸುತ್ತೇನೆ.

ಇದು ಸಾಧ್ಯವಾದರೆ, ಬೇರೊಂದು ವಿನ್ಯಾಸದ ಬರೆಹಗಳೇ ಹುಟ್ಟುವ ಸಾಧ್ಯತೆಯಿದೆ. ಇಲ್ಲಿರುವ ಲೇಖನವೊಂದರಲ್ಲಿ ಬರುವ ಇರುವೆಯ ರೂಪಕದ ವಿಶ್ಲೇಷಣೆಯಲ್ಲಿ ಅಂತಹ ವಿನ್ಯಾಸದ ಸಣ್ಣ ಝಲಕು ಬಂದಿದೆ. ಮಹಿಳೆಯು ತಾಯಿಯಾಗುವ ಪಡುವ ಜೈವಿಕ ಅನುಭವದ ಕಥನದಲ್ಲಿ ಆ ಝಲಕು ಮೈದೋರಿದೆ. ಸಾಮಾನ್ಯವಾಗಿ ವೈಚಾರಿಕ ಪ್ರಜ್ಞೆಯಿಂದ ತಾರ್ಕಿಕವಾಗಿ ಬರೆಯುವ ಬಾಳಿಯವರು, ಕೆಲವು ವಿಷಯಗಳಲ್ಲಿ ಅಂತರ್ಮುಖಿಯಾಗಿದ್ದು, ಭಾವನಾತ್ಮಕವಾಗಿಯೂ ಕಾವ್ಯಾತ್ಮಕವಾಗಿಯೂ ಬರೆಯಬಲ್ಲರು ಎಂಬುದಕ್ಕೆ ಮೇಲೆ ಉಲ್ಲೇಖಿಸಿದ ಎರಡು ನಿರ್ದಶನಗಳು ಸಾಕ್ಷಿಯಾಗಿವೆ.

ಗುಲಬರ್ಗ ಭಾಷೆಯಲ್ಲಿ ಗುಂಡುಹೊಡೆದಂತೆ ಉಪನ್ಯಾಸ ಮಾಡುವ ಬಾಳಿಯವರನ್ನು ಕೇಳಿರುವ ಯಾರಿಗಾದರೂ, ಅವರ ಮಾತಿನ ಪರಿಣಾಮ ಬರೆಹದಲ್ಲಿ ಅಷ್ಟಾಗಿ ಇಲ್ಲವೆಂದು ಅನಿಸಿದರೆ ಸೋಜಿಗವಿಲ್ಲ. ಆದರೂ ಬಾಳಿಯವರು ತಮ್ಮ ಚಿಂತನಶೀಲ ಬರೆಹಗಳ ಮೂಲಕ ಹೆಚ್ಚು ಜನರಿಗೆ ತಲುಪುವುದು ಅಗತ್ಯವಾಗಿದೆ. ಹೊಸತಲೆಮಾರಿನ ತರುಣ ತರುಣಿಯರು ಈ ಪುಸ್ತಕವನ್ನು ಓದಿ ಅವರ ಸಿಟ್ಟು ಜೀವನಪ್ರೀತಿ ಕ್ರಿಯಾಶೀಲತೆಗಳನ್ನು ತಮಗೂ ಆವಾಹಿಸಿಕೊಳ್ಳಬೇಕು ಎಂದು ನಾನು ಆಶಿಸುತ್ತೇನೆ.

-ರಹಮತ್ ತರೀಕೆರೆ (ಮುನ್ನುಡಿಯಿಂದ)

Saturday, August 28, 2010

ರಂಗಗೀತೆಗಳ ಪುಸ್ತಕ ಮತ್ತು ಸಿಡಿ

ಸೋಮವಾರ, ಮಾರ್ಚ್ 15, 2010, 16:18[IST]* ಪ್ರೊ|ಲಿಂಗದೇವರು ಹಳೆಮನೆ, ಮೈಸೂರು

ವೃತ್ತಿರಂಗಭೂಮಿಯ ದೊಡ್ಡ ಆಕರ್ಷಣೆಗಳಲ್ಲಿ ರಂಗಗೀತೆಗೆ ಅಗ್ರಸ್ಥಾನ. ನಟ, ನಟಿಯರ ಅಭಿನಯ ಸಾಮರ್ಥ್ಯವನ್ನು ಪ್ರೇಕ್ಷಕರು ಅಳೆಯುವಾಗ ಅವರು ಹಾಡುತ್ತಿದ್ದ ಗೀತೆಗಳನ್ನೂ ಗಮನಕ್ಕೆ ತೆಗೆದುಕೊಳ್ಳುತ್ತಿದ್ದರು. ಆದ್ದರಿಂದಲೇ ವೃತ್ತಿರಂಗಭೂಮಿಯ ನಟ, ನಟಿಯರಿಗೆ ಶರೀರ ಮತ್ತು ಶಾರೀರ ಎರಡನ್ನೂ ಒಟ್ಟೊಟ್ಟಿಗೇ ಸಮರ್ಥವಾಗಿ ಕಾಪಾಡಿಕೊಂಡು ಬರುವ ಅನಿವಾರ್ಯತೆ ಇತ್ತು. ಇಂದು ನಾವು ಗೌರವದಿಂದ ನೆನಪಿಸಿಕೊಳ್ಳುವ ಕೊಟ್ಟೂರಪ್ಪನವರು, ಗುಬ್ಬಿ ವೀರಣ್ಣನವರು, ಸಿ.ಬಿ. ಮಲ್ಲಪ್ಪನವರು, ಜಿ. ನಾಗೇಶರಾಯರು, ಗಂಗಾಧರರಾಯರು, ಹೊನ್ನಪ್ಪ ಭಾಗವತರ್, ಮಳವಳ್ಳಿ ಸುಂದರಮ್ಮ ಮುಂತಾದವರು ಅಭಿನಯ ಮತ್ತು ಗೀತಗಾಯನ ಇವೆರಡನ್ನೂ ಸಂಮೋಹಕವಾಗಿ ಮೇಳೈಸಿದುದರಿಂದ ವೃತ್ತಿ ರಂಗಭೂಮಿಗೊಂದು ವಿಶೇಷ ಆಕರ್ಷಣೆ ಒದಗಿ ಬಂದಿದೆ.

ಇಂದು ವೃತ್ತಿ ರಂಗಭೂಮಿ ಕಣ್ಮರೆಯಾಗಿ ಅದರ ಸ್ಥಾನದಲ್ಲಿ ಹವ್ಯಾಸಿ ರಂಗಭೂಮಿ ಹೊಸ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತಿದೆ. ವೃತ್ತಿ ರಂಗಭೂಮಿಯ ರಂಗಸಂಗೀತಕ್ಕೂ ಹವ್ಯಾಸಿ ರಂಗಭೂಮಿಯ ರಂಗಸಂಗೀತಕ್ಕೂ ಬಹುದೊಡ್ಡ ವ್ಯತ್ಯಾಸ ಕಂಡುಬರುತ್ತಿದೆ. ವೃತ್ತಿರಂಗಭೂಮಿ ಶಾಸ್ತ್ರೀಯ ಸಂಗೀತ, ಜಾನಪದ ಸಂಗೀತ ಮತ್ತು ಪಾಶ್ಚಾತ್ಯ ಸಂಗೀತಗಳನ್ನು ಸನ್ನಿವೇಶಕ್ಕೆ ತಕ್ಕಂತೆ ಅತ್ಯಂತ ಸಮರ್ಥವಾಗಿ ಬಳಸಿಕೊಂಡು ಬಂದಿದೆ. ಹಾರ್ಮೋನಿಯಂ, ತಬಲಾ, ಕೊಳಲು ಮುಂತಾದ ಶಾಸ್ತ್ರೀಯ ವಾದ್ಯಪರಿಕರಗಳನ್ನು ಬಳಸಿಕೊಂಡು ಅವರು ಸಂಯೋಜಿಸುತ್ತಿದ್ದ ಆ ರಾಗಗಳು ನಿಜವಾಗಿಯೂ ‘ಗಾಂಧರ್ವ’ ಸಂಗೀತದ ಭಾಗಗಳೇ ಆಗಿರುತ್ತಿದ್ದವು.

ಅಂಥ ವೃತ್ತಿರಂಗಭೂಮಿಯ ಸಂಗೀತ ಕೂಡಾ ಹೆಚ್ಚು ಕಡಿಮೆ ವೃತ್ತಿ ರಂಗಭೂಮಿಯ ಪ್ರದರ್ಶನಗಳ ಜೊತೆಜೊತೆಗೇ ನಮ್ಮಿಂದ ಕಣ್ಮರೆಯಾಗುತ್ತಿದೆ. ಅಂಥ ಒಂದು ಅದ್ಭುತ ಪ್ರದರ್ಶಕ ರಂಗಸಂಗೀತ ನಶಿಸದೆ ಮುಂದಿನವರಿಗೂ ದೊರಕುವಂತಾಗಬೇಕು. ಇತ್ತೀಚಿನ ದಿನಗಳಲ್ಲಿ ಈ ರಂಗಸಂಗೀತದ ಬಗ್ಗೆ ಆಸಕ್ತಿ ಇರುವ ರಸಿಕರು, ಸಂಘ ಸಂಸ್ಥೆಗಳು ಸಾಧ್ಯವಾದಷ್ಟು ಅವುಗಳನ್ನು ಧ್ವನಿ ಮುದ್ರಿಸಿಯೋ ಇಲ್ಲ ಪುಸ್ತಕದ ರೂಪದಲ್ಲಿ ಪ್ರಕಟಿಸಿಯೋ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅಂಥವರ ಪ್ರಯತ್ನಗಳನ್ನು ನಾವು ಕೃತಜ್ಞತಾಪೂರ್ವಕವಾಗಿ ಸ್ವಾಗತಿಸಬೇಕಾಗಿದೆ.

ಎಚ್.ಎಸ್. ಗೋವಿಂದಗೌಡರು ಅಂಥ ರಂಗಸಂಗೀತ ರಸಿಕರಲ್ಲಿ ಒಬ್ಬರು. ಅವರು ವಾಣಿಜ್ಯ ತೆರಿಗೆ ಅಧಿಕಾರಿಯಾಗಿ ಕೆಲಸ ಮಾಡಿ ನಿವೃತ್ತರಾದವರು. ಚಿಕ್ಕಂದಿನಿಂದಲೂ ಅವರಿಗೆ ವೃತ್ತಿರಂಗಭೂಮಿಯ ಬಗ್ಗೆ, ಮುಖ್ಯವಾಗಿ ಅಲ್ಲಿಯ ರಂಗ ಸಂಗೀತದ ಬಗ್ಗೆ ಬಹಳ ದೊಡ್ಡ ಆಸಕ್ತಿ. ಅವರ ಇಬ್ಬರು ಚಿಕ್ಕಪ್ಪಂದಿರಿಗೆ ನಾಟಕದಲ್ಲಿ ಆಸಕ್ತಿ. ಅವರು ಬಾಲಕ ಗೋವಿಂದಗೌಡರ ನಾಟಕದ ಆಸಕ್ತಿಗೆ ಪ್ರೋತ್ಸಾಹ ನೀಡಿದರು. ಆ ಪ್ರೋತ್ಸಾಹ ಗೋವಿಂದಗೌಡರನ್ನು ಜೀವನ ಪರ್ಯಂತ ರಂಗಭೂಮಿಯ ಕಡೆಗೆ ಸೂಜಿಗಲ್ಲಿನಂತೆ ಆಕರ್ಷಿಸಿತು. ತಾವು ವಾಣಿಜ್ಯ ಅಧಿಕಾರಿಯಾಗಿದ್ದಾಗ ಅವರು ರಂಗಗೀತೆಗಳನ್ನು ಸಂಗ್ರಹಿಸಲು ಪ್ರಾರಂಭಿಸಿದರು. ಬರೀ ಸಂಗ್ರಹಿಸಿದರಷ್ಟೇ ಸಾಲದು; ಅವುಗಳು ಬೇರೆಯವರಿಗೂ ದೊರಕುವಂತಾಗಬೇಕು ಎಂಬ ಆಸೆಯಿಂದ ಅವುಗಳನ್ನು ಪ್ರಕಟಿಸಲು ಹಾಗೂ ಧ್ವನಿ ಮುದ್ರಿಸಲು ಮುಂದಾದರು.

ಸುಮಾರು ಆರೇಳು ವರ್ಷಗಳ ಹಿಂದೆ ಅವರು ಸುಮಾರು ಒಂದು ಸಾವಿರದ ಏಳುನೂರರಷ್ಟು ರಂಗಗೀತೆಗಳನ್ನು ಒಂದೆಡೆ ಸಂಕಲಿಸಿ ಪ್ರಕಟಿಸಿದರು. ಅಲ್ಲದೆ ಅವುಗಳಲ್ಲಿ ಆಯ್ದ ಗೀತೆಗಳನ್ನು ಧ್ವನಿ ಮುದ್ರಿಸಿ ಹದಿನೈದು ಧ್ವನಿ ಮುದ್ರಿಕೆಗಳನ್ನು ಮಾರುಕಟ್ಟೆಗೆ ತಂದರು. ಆಗ ರಂಗಭೂಮಿಯ ಕಲಾವಿದರನ್ನೇ ಆಮಂತ್ರಿಸಿ ಅವರಿಂದಲೇ ಆ ಹಾಡುಗಳನ್ನು ಹಾಡಿಸಿದ್ದು ಆ ಧ್ವನಿ ಮುದ್ರಿಕೆಗಳ ಹೆಗ್ಗಳಿಕೆ. ಬಹುಶಃ ನನಗೆ ಗೊತ್ತಿರುವ ಹಾಗೆ ಅಂದಿನ ದಿನಗಳಲ್ಲಿ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ರಂಗ ಗೀತೆಗಳು ಮುದ್ರಣದಲ್ಲಿ ಹಾಗೂ ಮುದ್ರಿಕೆಯಲ್ಲಿ ಹೊರಬಂದಿದ್ದು ಅದೇ ಮೊದಲು. ಗೌಡರು ತಾವು ಖರ್ಚುಮಾಡಿದ ಹಣವನ್ನು ವಾಪಸ್ ಪಡೆದರೋ ಇಲ್ಲವೋ ತಿಳಿಯದು. ಆದರೆ ಅವರಿಗೆ ಒಂದು ಸಾರ್ಥಕ ಕೆಲಸ ಮಾಡಿದ ತೃಪ್ತಿ ಉಂಟಾಗಿತ್ತು.

ಈಗ ಮತ್ತೆ ಅವರು ಅಂಥದೇ ಮಹತ್ತರವಾದ ಕೆಲಸಕ್ಕೆ ಕೈಹಾಕಿದ್ದಾರೆ. ನಮ್ಮ ಮಧ್ಯೆ ಇರುವ ವೃತ್ತಿ ರಂಗಭೂಮಿಯ ಅತ್ಯಂತ ಹಿರಿಯ ಸಂಗೀತ ಸಂಯೋಜಕರಾದ ವಿದ್ವಾನ್ ಆರ್. ಪರಮಶಿವನ್ ಅವರಿಂದ ಹಾಡುಗಳನ್ನು ಬರೆಯಿಸಿ ಅವುಗಳನ್ನು ಅಚ್ಚು ಹಾಕಿಸುವುದರ ಜೊತೆಗೆ ಅವುಗಳಲ್ಲಿ ಕೆಲವನ್ನು ಆಯ್ದು ಎಂಟು ಸಿ.ಡಿ. ರೂಪದಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಆರ್. ಪರಮಶಿವನ್ ವೃತ್ತಿರಂಗಭೂಮಿಯ ಅತ್ಯಂತ ಪ್ರತಿಭಾವಂತ ರಂಗಸಂಗೀತ ನಿರ್ದೇಶಕರು ಮತ್ತು ಹಾಡುಗಾರರು. ಎಪ್ಪತ್ತೊಂಬತ್ತು ವರ್ಷದ ಆರ್. ಪರಮಶಿವನ್ ತಮ್ಮ ನಾಲ್ಕನೇ ವಯಸ್ಸಿಗೇ ರಂಗಭೂಮಿ ಪ್ರವೇಶ ಮಾಡಿದವರು. ಅಂದರೆ 75 ವರ್ಷಗಳ ಕಾಲ ಸತತವಾಗಿ ಕನ್ನಡ ವೃತ್ತಿರಂಗದ ಮೇಲೆ ಕಾಣಿಸಿಕೊಂಡವರು. ಇಡೀ ವೃತ್ತಿರಂಗಭೂಮಿಯ ರಂಗಸಂಗೀತದ ಅವಿಭಾಜ್ಯ ಅಂಗವಾಗಿ ಇದ್ದವರು.

ಅಂಥವರನ್ನು ಮುಂದುಮಾಡಿಕೊಂಡು, ಅವರ ನೆನಪಿನ ಮೂಸೆಯಿಂದ ಒಂದು ಸಾವಿರದ ಐದುನೂರು ರಂಗ ಗೀತೆಗಳನ್ನು ಬರೆಯಿಸಿ ಅವುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಮುಂದಾಗಿದ್ದಾರೆ ಎಚ್.ಎಸ್. ಗೋವಿಂದಗೌಡರು. ಅಲ್ಲದೆ ಎಂಟುನೂರ ಎಪ್ಪತ್ತೈದು ರಂಗ ಗೀತೆಗಳಿಗೆ ಆರ್. ಪರಮಶಿವನ್ ಅವರಿಂದ ಸಂಗೀತ ಸಂಯೋಜಿಸಿ, ಈಗಾಗಲೇ ವೃತ್ತಿರಂಗಭೂಮಿಯ ಹಾಡನ್ನು ಹಾಡಲು ತರಬೇತಿ ಪಡೆದಿರುವ ಗಾಯಕರನ್ನು ಸೇರಿಸಿ, ಹಾಡಿಸಿ, ಎಂಟು ಸಿ.ಡಿ. ಗಳನ್ನೂ ಬಿಡುಗಡೆ ಮಾಡುತ್ತಿದ್ದಾರೆ. ವೃತ್ತಿ ರಂಗಭೂಮಿಗೆ ಇದೊಂದು ಬಹುದೊಡ್ಡ ಬಂಪರ್.

ಎಚ್.ಎಸ್. ಗೋವಿಂದಗೌಡರು ಮತ್ತು ಆರ್. ಪರಮಶಿವನ್ ಜೋಡಿ ಶ್ರಮವಹಿಸಿ ಒಂದು ಕಾಲದ ಸಂಗೀತ ವೈಭವವನ್ನು ಮುಂದಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡಿದ್ದಾರೆ. ಇವರಿಬ್ಬರ ಪ್ರಯತ್ನಕ್ಕೆ ಕನ್ನಡಿಗರು ಮನ್ನಣೆ ನೀಡಬೇಕು. ತಾವು ನಂಬಿದ ಕಲೆಯ ಉದ್ಧಾರಕ್ಕೆ, ಪೋಷಣೆಗೆ ಮತ್ತು ಬಳಕೆಗೆ ಗೋವಿಂದಗೌಡರು ಸದಾ ಚಿಂತಿಸುತ್ತಿರುತ್ತಾರೆ. ಅವರು ಸುದ್ದಿ ಮಾಡುವ ವ್ಯಕ್ತಿ ಅಲ್ಲ. ತಮ್ಮ ಸಾಧನೆಯ ಬಗ್ಗೆ ಪ್ರಚಾರ ಮಾಡಿಕೊಳ್ಳುವವರೂ ಅಲ್ಲ. ತಮ್ಮಷ್ಟಕ್ಕೆ ತಾವು ನಂಬಿದ ಕೆಲಸವನ್ನು ಸದ್ದಿಲ್ಲದೆ ಪೂರೈಸುವುದಷ್ಟೇ ಅವರಿಗೆ ಗೊತ್ತು. ಒಂದು ನಾಟಕ ಬರೆದೋ, ಒಂದು ಧ್ವನಿ ಸುರುಳಿ ಹೊರತಂದೋ ಭಾರಿ ಸುದ್ದಿ ಮಾಡಿದ ವ್ಯಕ್ತಿಗಳು ನಮ್ಮ ಮಧ್ಯೆ ಇದ್ದಾರೆ. ಆದರೆ ಗೋವಿಂದಗೌಡರು ರಂಗಗೀತೆಯಂಥ ಬೃಹತ್ ಪುಸ್ತಕ ಹಾಗೂ ಹದಿನೈದು ಧ್ವನಿ ಮುದ್ರಿಕೆಗಳನ್ನು ಹರತಂದೂ ಅಜ್ಞಾತರಾಗಿಯೇ ಉಳಿಯುತ್ತಾರೆ. ಅದು ಗೋವಿಂದಗೌಡರ ವ್ಯಕ್ತಿತ್ವ.

ಅವರ ಈಗಿನ ಪ್ರಯತ್ನವೂ ಯಶಸ್ವಿಯಾಗಲಿ. ವೃತ್ತಿ ರಂಗಭೂಮಿಯ ರಂಗಸಂಗೀತದ ಉಳಿವಿಗೆ ಶ್ರಮಿಸುತ್ತಿರುವ ಎಚ್.ಎಸ್. ಗೋವಿಂದಗೌಡರ ಕೊಡುಗೆಯನ್ನು ಎಲ್ಲರೂ ಗುರುತಿಸುವಂತಾಗಲಿ.

[ರಂಗಗೀತೆಗಳು ಭಾಗ-1 ಮತ್ತು ಭಾಗ-2; ಸಂಗ್ರಹಕಾರರು: ಆರ್. ಪರಮಶಿವನ್ ಮತ್ತು ಎಚ್.ಎಸ್. ಗೋವಿಂದಗೌಡ; ಹನ್ಯಾಳು ಪ್ರಕಾಶನ, ನಂ.749, 11ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, 1ನೇ ಹಂತ, ವಿಜಯನಗರ, ಮೈಸೂರು-570017, ದೂರವಾಣಿ: 98458 61887, ಬೆಲೆ ಭಾಗ-1: ರೂ.150; ಭಾಗ-2: ರೂ.125]


[ರಂಗಸಂಗೀತ ಕ್ಷೇತ್ರದಲ್ಲಿ ಇವತ್ತು ನಮಗೆ ಕಾಣಿಸುವ ಅತ್ಯಂತ ಹಿರಿಯ ಕಲಾವಿದ ಆರ್ ಪರಮಶಿವನ್ ಅವರು. ಅವರು ಈ ವಾರ ಅಮೆರಿಕಾ ಪ್ರವಾಸ ಹೊರಟಿದ್ದಾರೆ. ಅವರನ್ನು ಖುದ್ದಾಗಿ ಕಾಣಬಯಸುವವರು ಕೆಳಕಂಡ ವಿಳಾಸವನ್ನು ಗುರುತು ಹಾಕಿಕೊಳ್ಳುವುದು- ಸಂಪಾದಕ.]

ಹೊಸ ತಲೆಮಾರಿನ ಲೇಖಕರು: ದೇವು ಪತ್ತಾರ

ರಹಮತ್ ತರೀಕೆರೆ

ಗುರುವಾರ, 26 ಆಗಸ್ಟ್ 2010 (04:18 IST)



ದೇವುಪತ್ತಾರ್ ಬೀದರಿನಲ್ಲಿ ‘ಪ್ರಜಾವಾಣಿ' ಪತ್ರಿಕೆಯ ಮುಖ್ಯ ವರದಿಗಾರರಾಗಿರುವ ದೇವುಪತ್ತಾರ್ ಅವರು, ಹೊಸತಲೆಮಾರಿನ ಲೇಖಕರಲ್ಲಿ ಕೊಂಚ ಅಲಾಯದವಾಗಿ ನಿಲ್ಲುವವರು. ಅವರ ಬರೆಹಗಳು ಕರ್ನಾಟಕ ಸಂಸ್ಕೃತಿ ಮತ್ತು ಚರಿತ್ರೆಯ ಅಧ್ಯಯನ ಮಾಡುವ ಎಲ್ಲರಲ್ಲೂ ಕುತೂಹಲ ಹುಟ್ಟಿಸಬಲ್ಲವು. ಇದಕ್ಕೆ ಕಾರಣ, ಅವರ ಬರೆಹದೊಳಗೆ ಇರುವ ಸಂಶೋಧಕ ಗುಣ. ವರದಿಗಾರಿಕೆಯ ಸಾಮಾನ್ಯ ಲಕ್ಷಣವೆಂದರೆ, ಹೊಸಹೊಸ ಸುದ್ದಿ ಮತ್ತು ಮಾಹಿತಿಗಳಿಗಾಗಿ ಹಸಿವನ್ನು ತೋರುವುದು; ಅವನ್ನು ವರದಿಯಾಗಿ ಕಳಿಸಿದ ಬಳಿಕ ಆ ಹಸಿವು ಇಂಗಿ ಮನಸ್ಸು ನಿರಾಳವಾಗುವುದು. ಆಯಾ ದಿನಹುಟ್ಟಿ ಮರುದಿನ ಪ್ರಸ್ತುತತೆ ಕಳೆದುಕೊಳ್ಳುವ ಈ ವರದಿತನದ ಆಚೆಗೂ ಹೋಗಬಲ್ಲ ತ್ರಾಣ, ಎಷ್ಟೊ ವರದಿಗಾರರಿಗೆ ಇರುವುದಿಲ್ಲ; ಒಂದೊಮ್ಮೆ ಇದ್ದರೂ, ಹಾಗೆ ಹೋಗಲು ಅವರ ದೈನಿಕ ವರದಿತನದ ಒತ್ತಡಗಳು ಬಿಡುವುದಿಲ್ಲ.

ಇಂತಹ ಇಕ್ಕಟ್ಟಿನಲ್ಲಿ ಕೆಲಸ ಮಾಡುತ್ತ ದೇವು ಕರ್ನಾಟಕ ಚರಿತ್ರೆಯನ್ನು ಭಿನ್ನವಾಗಿ ಕಟ್ಟುವ ಸಂಶೋಧನಾತ್ಮಕ ಬರೆಹಗಳನ್ನು ಬರೆಯುತ್ತ ಬಂದಿದ್ದಾರೆ. ಭಿನ್ನವೇಕೆಂದರೆ, ವಿಶಿಷ್ಟ ಪ್ರತಿಭೆಯನ್ನು ಮೆರೆದ ಅಜ್ಞಾತ ವ್ಯಕ್ತಿಗಳ ವ್ಯಕ್ತಿಚಿತ್ರ ಮತ್ತು ಜೀವನಚಿತ್ರಗಳನ್ನು ರಚಿಸುವುದು. ಉದಾಹರಣೆಗೆ, ಬೀದರಿನ ಅಪರೂಪದ ಕ್ಯಾಮರಾ ಎಂಜಿನಿಯರ್ ಗುಲಾಂ ಮುಂತಕಾ (೨೦೦೮) ಅವರ ಜೀವನಚರಿತ್ರೆ; ಸುರಪುರದಲ್ಲಿ ಬ್ರಿಟಿಷರ ರಾಜಕೀಯ ಏಜೆಂಟನಾಗಿದ್ದ ಮೆಡೋಸ್ ಟೇಲರನ ಮೇಲೆ ಅವರು ಸಂಪಾದಿಸಿದ ಪುಸ್ತಕ ‘ಮಹಾದೇವ ಬಾಬಾ ಮೆಡೋಸ್ ಟೇಲರ್'. ಈಗ ದೇವು, ಮಹಮೂದ್ ಗವಾನನ ಜೀವನ ಚರಿತ್ರೆಯನ್ನು ಬರೆಯುತ್ತಿದ್ದಾರೆ. ಬಹಮನಿ ರಾಜ್ಯದ ಪ್ರಧಾನಮಂತ್ರಿಯಾಗಿದ್ದ, ಗವಾನನು ದೊಡ್ಡ ವಿದ್ವಾಂಸನೂ ದಾರ್ಶನಿಕನೂ ಶಿಕ್ಷಣತಜ್ಞನೂ ಆಗಿದ್ದವನು. ಮಹಾ ಪ್ರಾಮಾಣಿಕ ಮತ್ತು ಜನಪ್ರಿಯ. ದೊರೆಯ ತಪ್ಪು ತಿಳಿವಳಿಕೆ ಕಾರಣದಿಂದ ಕೊಲ್ಲಲ್ಪಟ್ಟವನು.

ದೇವು ಅವರ ಈಚೆಗೆ ಪ್ರಕಟವಾದ ‘ಈಗ ಹೀಗಿರುವ ಲೋಕದಲ್ಲಿ' ಕೃತಿಯಂತೂ, ಹೈದರಾಬಾದ್ ಸೀಮೆಯ ವಿಶಿಷ್ಟ ವ್ಯಕ್ತಿಚಿತ್ರಗಳ ಸಂಪುಟವೇ ಆಗಿದೆ. ಕನ್ನಡದಲ್ಲಿ ಮೊದಲು ವ್ಯಕ್ತಿಚಿತ್ರಗಳ ಪರಂಪರೆಯನ್ನು ಆರಂಭಿಸಿದವರು ಡಿವಿಜಿ ಎನ್ನಬಹುದು. ಅವರ ‘ಜ್ಞಾಪಕ ಚಿತ್ರಶಾಲೆ'ಯ ಸಂಪುಟಗಳು, ಕರ್ನಾಟಕದ ರಾಜಕೀಯ ಸಾಮಾಜಿಕ ಚರಿತ್ರೆಯನ್ನು ವ್ಯಕ್ತಿಚಿತ್ರಗಳ ಮೂಲಕ ಕಟ್ಟುವ ಕೆಲಸವನ್ನು ಬಹಳ ಚೆನ್ನಾಗಿ ಮಾಡುತ್ತವೆ. ನಂತರ ಎ.ಎನ್.ಮೂರ್ತಿರಾವ್, ವಿಸೀ ಮುಂತಾದವರು ಈ ಪರಂಪರೆಯನ್ನು ಮುಂದುವರೆಸಿದರು. ಲಂಕೇಶ್ ಕೂಡ ಬಹಳಷ್ಟು ವ್ಯಕ್ತಿಚಿತ್ರಗಳನ್ನು ಪತ್ರಿಕಾಬರೆಹದ ಭಾಗವಾಗಿ ಬರೆದರು. ಈಚೆಗೆ ಈ ಸಾಲಿನಲ್ಲಿ ಬಂದ ಕೃತಿ ಎಸ್.ಆರ್. ವಿಜಯಶಂಕರ್ ಅವರ ‘ಒಡನಾಟ'.

ದೇವು ವ್ಯಕ್ತಿಚಿತ್ರಗಳ ವಿಶೇಷವೆಂದರೆ, ಅವರ ಲೇಖನಕ್ಕೆ ವಸ್ತುವಾಗಿರುವ ಹೆಚ್ಚಿನವರು ಅಜ್ಞಾತವಾಗಿದ್ದುಕೊಂಡು ಬದುಕಿದವರು; ಪ್ರಧಾನಧಾರೆಯ ಚರಿತ್ರೆಯ ಚೌಕಟ್ಟಿನಾಚೆ ಇರುವ ಯಾರೂ ಅರಿಯದ ವೀರರು; ಹಸ್ಸುಖಾನ್, ತಾರಾನಾಥ್, ಮಿರಾಜುದ್ದೀನ್, ನರಸಿಂಗರಾವ್, ಮಹಮೂದ್ ಗವಾನ, ಎಂ.ಎಸ್. ಪುಟ್ಟಣ್ಣ, ಮೆಡೋಸ್ ಟೇಲರ್, ಶೆಟ್ಟರ ನಾಗಪ್ಪ, ಶೇಷರಾವ ಕಾಮತೀಕರ್, ನಿಕಿಟಿನ್, ಸಂಗೀತಗಾರ ರಾಮ, ಗುಲಾಂ ಮುಂತಾಕ, ಷಣ್ಮುಖಪ್ಪ, ಆಲಗೂರು ರಾಚಪ್ಪ -ಮುಂತಾದವರು; ಈ ಕೃತಿಯನ್ನು ಸಾಮಾನ್ಯರ ಚರಿತ್ರೆಯ ಸಂಪುಟವೆಂದೂ ಕರೆಯಬಹುದು. ಇಲ್ಲಿನ ಟೇಲರ್ ಹಾಗೂ ಗವಾನರು ಸಾಮಾನ್ಯರಲ್ಲ; ಆದರೆ ಕರ್ನಾಟಕದ ಚರಿತ್ರಕಾರರಿಂದ ಕಡೆಗಣಿಸಲ್ಪಟ್ಟವರು. ಪ್ರಸಿದ್ಧರ ಬೆನ್ನುಹತ್ತಿ ಹೋಗುವ ಸಾಂಪ್ರದಾಯಕ ಚರಿತ್ರೆಯ ಹಾದಿಯನ್ನು ಕೈಬಿಟ್ಟು, ಸ್ಥಳೀಯರಾಗಿದ್ದು ನಾಡಿನ ಬದುಕನ್ನು ವರ್ಣರಂಜಿತವಾಗಿ ಕಟ್ಟಿದ ವ್ಯಕ್ತಿಗಳ ಜೀವನ ಚರಿತ್ರೆಯತ್ತಲೇ ದೇವು ಅವರ ಒಲವಿದೆ.

ಮೇಲಿನ ಪ್ರಕಟಿತ ಹಾಗೂ ಪ್ರಕಟವಾಗುತ್ತಿರುವ ಎಲ್ಲ ಕೃತಿಗಳು, ದೇವು ಅವರ ಮುಖ್ಯ ಆಸಕ್ತಿಯ ಕ್ಷೇತ್ರವೊಂದನ್ನು ಸೂಚಿಸುತ್ತಿವೆ. ಅದೆಂದರೆ ಚರಿತ್ರೆ. ಚರಿತ್ರೆಯನ್ನು ಅಗೆದೆ ತೆಗೆದು ಬರೆಯುವ ಅವರ ಈ ಸೆಳೆತವು, ಮೊದಲಿಂದಲೂ ಅವರ ಒಳಗೇ ಇತ್ತೊ ಅಥವಾ ಹಾದಿಬೀದಿಯಲ್ಲಿ ಚರಿತ್ರೆ ಸೂರೆಯಾಡಿರುವ ಬೀದರಿನಂತಹ ಊರಲ್ಲಿ ಇರುವುದರಿಂದ ಚಿಗುರೊಡೆಯಿತೊ ತಿಳಿಯದು. ನಮ್ಮ ದಿನಪತ್ರಿಕೆಗಳು ಕರ್ನಾಟಕದ ಸ್ಥಳೀಯ ವ್ಯಕ್ತಿ ಮತ್ತು ವಿದ್ಯಮಾನಗಳ ಮೇಲೆ ಲೇಖನಗಳನ್ನುಳ್ಳ, ವಿಶೇಷ ಪುರವಣಿಗಳನ್ನು ಪ್ರಕಟಮಾಡಲು ಆರಂಭಿಸಿದವಷ್ಟೆ. ಆ ಬಳಿಕ, ನಮ್ಮ ಪ್ರಧಾನ ಚರಿತ್ರೆಗೆ ಗೊತ್ತಿಲ್ಲದ ನೂರಾರು ವಿಷಯಗಳು ತಿಳಿದು ಬರತೊಡಗಿದವು. ಮಾತ್ರವಲ್ಲ, ಅವನ್ನು ಬರೆಯುವ ಒಂದು ಲೇಖಕರ ಬಳಗವೂ ಕನ್ನಡದಲ್ಲಿ ಸೃಷ್ಟಿಯಾಯಿತು. ಅಂತಹ ಪುರವಣಿಗಳಿಂದ ದೇವು ಅವರ ಮೊದಲ ಘಟ್ಟದ ಬರೆಹಗಳು ರೂಪುಗೊಂಡಂತಿವೆ. ಆದರೆ ಅವು ವಿಶೇಷ ಮಾಹಿತಿ ಸಂಗ್ರಹ ಮತ್ತು ಆಕರ್ಷಕ ಮಂಡನೆಯ ಸೀಮಿತತೆಯನ್ನು ದಾಟಿ, ಗಂಭೀರ ಸಂಶೋಧನ ಲೇಖನಗಳಾಗುವತ್ತ ಚಲಿಸಿದವು. ಅದರಲ್ಲೂ ಸಂಗೀತಗಾರರನ್ನು ಕುರಿತ ದೇವು ಬರೆಹಗಳು ಸಾಂಸ್ಕೃತಿಕವಾಗಿ ಅನನ್ಯವಾಗಿವೆ.

ದೇವು ಬರೆಹಗಳ ಇನ್ನೊಂದು ವಿಶೇಷತೆಯೆಂದರೆ, ಚರಿತ್ರೆಯನ್ನು ಒಣವಿವರಗಳ ಕಂತೆಯಾಗಿಸದೆ ಸ್ವಾರಸ್ಯಕರ ಕತೆಯಾಗಿಸುವುದು; ಅಥವಾ ಕತೆಯ ಕುತೂಹಲಕ್ಕಾಗಿ ಚಾರಿತ್ರಿಕ ಪ್ರಜ್ಞೆಯನ್ನು ಬಲಿಗೊಡದೆ ಇರುವುದು. ಇದೊಂದು ಎಚ್ಚರದ ಸಮತೋಲನ. ಸಣ್ಣಕತೆಗಾರನಂತೆ ಒಂದು ಸಣ್ಣ ಘಟನೆಯನ್ನು ಆಯ್ದುಕೊಂಡು, ಅದರ ಸುತ್ತಮುತ್ತಲಿನ ಸಣ್ಣಪುಟ್ಟ ವಿವರಗಳನ್ನು ಕಲೆಹಾಕಿ, ಒಂದು ಅಚ್ಚುಕಟ್ಟಾದ ಚಿತ್ರವನ್ನು ಬರೆಯುವ ಕುಶಲತೆಯನ್ನು ಅವರು ಹೊಂದಿದ್ದಾರೆ. ಈ ಕಾರಣದಿಂದ, ಅವರ ಬರೆಹಗಳನ್ನು ಚರಿತ್ರೆ ಮತ್ತು ಕತೆಗಾರಿಕೆಗಳ ಸಂಕರದ ಫಲಗಳೆನ್ನಬಹುದು.

ತಮ್ಮ ಚಾರಿತ್ರಿಕ ಬರೆಹಗಳಿಗೆ ಬೇಕಾದ ಮಾಹಿತಿ ಪಡೆಯಲು ದೇವು ಪಡುವ ಶ್ರಮ ಮತ್ತು ತೋರುವ ಶ್ರದ್ಧೆಗಳು, ಅವನ್ನು ಓದುವ ಯಾರಿಗೂ ಮನವರಿಕೆಯಾಗುತ್ತವೆ. ಟೇಲರ್ ಪುಸ್ತಕಕ್ಕೆ ಅವರು ಬರೆದಿರುವ ಪ್ರಸ್ತಾವನೆ ಇದಕ್ಕೆ ಸಾಕ್ಷಿ. ಅವರೊಮ್ಮೆ ನನಗೆ ಫೋನ್ ಮಾಡಿ, `ಎಂ.ಎಸ್. ಪುಟ್ಟಣ್ಣನವರು ಮಹಮದ್ ಗವಾನನ ಮೇಲೆ ಬರೆದಿರುವ ಪುಸ್ತಕ ಹುಡುಕುತ್ತಿದ್ದೇನೆ, ನಿಮ್ಮಲ್ಲಿದೆಯೇ?' ಎಂದು ಕೇಳಿದರು. ದುರ್ಲಭವಾದ ಆ ಕೃತಿಯ ಹೆಸರನ್ನು ನಾನು ಕೇಳಿದ್ದೆ. ನನಗದು ಸಿಕ್ಕಿರಲಿಲ್ಲ. ಚರಿತ್ರೆಯ ಕೆಲವು ಅಧ್ಯಾಪಕರಿಗಾದರೂ ಇಂತಹದೊಂದು ಕೃತಿಯಿರುವ ಬಗ್ಗೆ ತಿಳಿದಿದೆಯೊ ಇಲ್ಲವೊ? ಕಡೆಗೊಮ್ಮೆ ದೇವು ಅದನ್ನು ಎಲ್ಲಿಂದಲೊ ಹುಡುಕಿ ಪಡೆದರು. ಹಾಗೆಯೇ ಬಿಜಾಪುರದ ನೆಲದಿಂದ ಮೂಡಿದ ಪ್ರಸಿದ್ಧ ಚರಿತ್ರೆಯ ಗ್ರಂಥ ‘ತಾರೀಖೆ ಫೆರಿಸ್ತಾ'ದ ಅನುವಾದವನ್ನು ಅಂತರ್ಜಾಲದಲ್ಲಿ ಹುಡುಕಿ ನನಗದನ್ನು ಕಳಿಸಿಕೊಟ್ಟರು. ಅವರು ಬೀದರಿಗೆ ಭೇಟಿಕೊಟ್ಟಿದ್ದ ರಷ್ಯನ್ ಪ್ರವಾಸಿ ನಿಕಿಟಿನ್ ಕುರಿತು ಅವರು ಮಾಡಿರುವ ಶೋಧವಂತೂ ಅಪರೂಪದ್ದಾಗಿದೆ. ಇವೆಲ್ಲ ದೇವು ಅವರಲ್ಲಿರುವ ಗಂಭೀರ ಸಂಶೋಧಕನ ಕುರುಹುಗಳು.

ದಿನಪತ್ರಿಕೆಯಲ್ಲಿದ್ದೂ ಸಂಶೋಧನ ಪ್ರವೃತ್ತಿಯನ್ನೂ ಚಿಂತನಶೀಲತೆಯನ್ನೂ ಪಡೆದುಕೊಳ್ಳುವ ಸವಾಲನ್ನು ದೇವು, ತಮ್ಮ ಒಳಗಿನ ವಿದ್ವತ್ ಸಹಜ ಸೆಳೆತದಿಂದ ನಿಭಾಯಿಸುತ್ತಿದ್ದಾರೆ. ವಿಶ್ವವಿದ್ಯಾಲಯದ ಎಷ್ಟೊ ಸಂಶೋಧಕರು ಮಾಡಲಾಗದ್ದನ್ನು ಅವರು ಮಾಡುತ್ತಿದ್ದಾರೆ ಎಂದೂ ಹೇಳಬಹುದು. ಅವರ ಸಂಶೋಧನ ಬರೆಹಗಳಲ್ಲಿ ಸಂಶೋಧಕನ ಖಚಿತತೆಯಿದೆ. ನಿರ್ಲಿಪ್ತವಾಗಿ ಬರೆಯುವ ವಸ್ತುನಿಷ್ಠತೆಯಿದೆ. ಅವರ ಲೇಖನಗಳು ಕುತೂಹಲ ಹುಟ್ಟುವಂತೆ ಸ್ವಾರಸ್ಯಕರವಾಗಿರುತ್ತವೆ ಮತ್ತು ಒಂದೇ ಬೈಠಕ್ಕಿನಲ್ಲಿ ಓದಿಸಿಕೊಳ್ಳುತ್ತವೆ. ಕವಿಯೂ ಆಗಿರುವ ದೇವು ಕೆಲವು ಕಡೆ ತನ್ಮಯವಾಗಿ ಕಾವ್ಯದ ಭಾಷೆಯನ್ನು ಬಳಸುವುದುಂಟು. "ರಾಚಪ್ಪ ಸಾಥ್ ನೀಡುವಾಗೆಲ್ಲ ಗಾಯಕನ ಕಣ್ಮಸಕು ಮಾಡಿ ಲಯದ ದಟ್ಟಕಾಡಿನಲ್ಲಿ ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗುತ್ತಿದ್ದ'' ಎಂಬಂತಹ ವಾಕ್ಯಗಳನ್ನು ಇಲ್ಲಿ ಉಲ್ಲೇಖಿಸಬಹುದು.

ಆದರೆ ದೇವು ಬರೆಹದಲ್ಲಿ ಕೆಲವು ಮಿತಿಗಳಿವೆ. ಮೊದಲನೆಯದಾಗಿ, ಅವರಿಗೆ ಪತ್ರಿಕಾ ಬರೆಹದಲ್ಲಿ ಸಾಮಾನ್ಯವಾಗಿರುವ ವರದಿಗಾರಿಕೆಯ ಗುಣದಿಂದ ಕೆಲವೊಮ್ಮೆ ತಪ್ಪಿಸಿಕೊಳ್ಳಲು ಆಗಿಲ್ಲ; ಸ್ವಾರಸ್ಯವನ್ನು ಹುಟ್ಟಿಸಲು ಭಾಷೆಗೆ ಬಣ್ಣವನ್ನು ಅವರು ಬೆರೆಸುವುದೂ ಉಂಟು. "ಬೀದರಿನಲ್ಲಿ ಬರಬಂದರೆ ಮೈಸೂರಲ್ಲಿ ವಡೆ ದುಬಾರಿ'' ಎಂಬ ಲೇಖನದ ತಲೆಬರೆಹವು, ಓದುಗರನ್ನು ಸೆಳೆದುಕೊಳ್ಳಲೆಂದೇ ರೋಚಕಗೊಂಡಂತಿದೆ. ಎರಡನೆಯದಾಗಿ, ದೇವು ಅವರ ವ್ಯಕ್ತಿಚಿತ್ರಗಳಲ್ಲಿ ಹಳಹಳಿಕೆಯ ದನಿಯೊಂದು ಸುಳಿಯುತ್ತದೆ. ಕಳೆದುಹೋದ ದಿನಗಳು ಸುಂದರವಾಗಿದ್ದವು ಎಂದು ನಂಬಿ ವರ್ತಮಾನದ ಬಗ್ಗೆ ಅವರು ಕೆಲವು ಕಡೆ ಅನಗತ್ಯವಾಗಿ ಕಠೋರವಾಗಿ ಮಾತಾಡುವುದುಂಟು. ಮೂರನೆಯದಾಗಿ, ಸಾರ್ಥಕ ಬದುಕನ್ನು ಬದುಕಿದ ಸಾಮಾನ್ಯ ವ್ಯಕ್ತಿಗಳನ್ನು ದೇವು ವ್ಯಕ್ತಿಚಿತ್ರಕ್ಕೆ ವಸ್ತುವಾಗಿ ಆರಿಸಿಕೊಳ್ಳುತ್ತಾರೇನೊ, ನಿಜ. ಆದರೆ ವ್ಯಕ್ತಿಯ ಸದ್ಗುಣಗಳನ್ನೇ ಮುಂದುಮಾಡಿ ಬರೆಯುವ ಸಹೃದಯತೆ ಮತ್ತು ಉದಾರತೆಗಳಿಂದ, ಆ ವ್ಯಕ್ತಿಚಿತ್ರಗಳಿಗೆ ನಿಷ್ಠುರತೆಯ ಅಂಚು ತಪ್ಪಿಹೋಗಿದೆ. ಒಂದು ಬಗೆಯ ಡಿಫೆನ್ಸಿವ್ ಗುಣ ಅವರ ಈ ಚಿತ್ರಗಳಲ್ಲಿದ್ದು, ವಿಮರ್ಶಾತ್ಮಕತೆಯು ಕಡಿಮೆಗೊಂಡಿದೆ. ಟೇಲರ್ ಕುರಿತ ಲೇಖನಗಳಲ್ಲಿ, ಅಮೂಲ್ಯವಾದ ಮಾಹಿತಿಗಳಿವೆ. ಆದರೆ ಟೇಲರನ ಬಗ್ಗೆ ಭಾವಪಕ್ಷಪಾತದಿಂದ ಬರೆದಿರುವ ಕಾರಣ, ವಸಾಹತುಶಾಹಿ ಆಡಳಿತೆಯ ಆರ್ಥಿಕ ಹಿತಾಸಕ್ತಿಗಳನ್ನಾಗಲಿ, ರಾಜಕೀಯ ತಂತ್ರಗಾರಿಕೆಗಳನ್ನಾಗಲಿ ರಾಜಕೀಯ ಪ್ರಜ್ಞೆಯಿಂದ ವಿಶ್ಲೇಷಿಸಲು ಅವರಿಗೆ ಸಾಧ್ಯವಾಗಿಲ್ಲ. ಸಮಕಾಲೀನ ರಾಜಕಾರಣಿಗಳನ್ನು ಕುರಿತ ವ್ಯಕ್ತಿಚಿತ್ರಗಳಲ್ಲೂ ರಾಜಕೀಯ ವಿಶ್ಲೇಷಣೆಗಳಲ್ಲೂ ವಿಮರ್ಶಾತ್ಮಕ ಎಳೆಗಳಿರುವುದುಂಟು. ಆದರವು ಕ್ಷೀಣವಾಗಿವೆ. ಲಂಕೇಶ್ ಬರೆಯುವ ವ್ಯಕ್ತಿಚಿತ್ರಗಳು, ತಮ್ಮ ನಿಷ್ಠುರತೆಯ ಅಲಗಿನ ಕಾರಣದಿಂದಲೇ ಹೆಚ್ಚು ಮಾನುಷವಾಗಿವೆ ಎಂಬುದನ್ನು ಇಲ್ಲಿ ಉಲ್ಲೇಖಿಸಬೇಕು.

ಕನ್ನಡದ ದೈನಿಕ ಪ್ರತಿಕೆಗಳಲ್ಲಿ ವರದಿಗಾರಿಕೆ ಸಾಕಷ್ಟಿದೆ. ಆದರೆ ಅಲ್ಲಿ ಸೂಕ್ಷ್ಮವೂ ನಿಷ್ಠುರವೂ ಆದ ರಾಜಕೀಯ ವಿಶ್ಲೇಷಣೆ ಮಾಡುವ ಪ್ರಬುದ್ಧತೆ ತುಸು ಕಡಿಮೆ. ಅದೂ ಇದೆ ಎಂದು ರವೀಂದ್ರರೇಷ್ಮೆ ಬರೆಯುವಾಗ ಗೊತ್ತಾಗುತ್ತಿತ್ತು. ಈಗ ಅಮೀನ್‌ಮಟ್ಟು ಅವರು ಬರೆಯತೊಡಗಿದ ಬಳಿಕವೂ ಗೊತ್ತಾಗುತ್ತಿದೆ; ಕನ್ನಡ ಪತ್ರಿಕೋದ್ಯಮದಲ್ಲಿ ರಾಜಕೀಯ ಸಾಮಾಜಿಕ ವರದಿಗಾರಿಕೆಯಿದೆ. ಆದರೆ ಕಲ್ಚುರಲ್ ರಿಪೋರ್ಟಿಂಗ್ ಎನ್ನುವುದು ಕಡಿಮೆ. ಅದು ಸಹ ಇದೆ ಎಂದು ದೇವು ಮುಂತಾದ ಸಂವೇದನಶೀಲರ ಬರೆಹಗಳಿಂದ ಗೊತ್ತಾಗುತ್ತಿದೆ. ಒಂದು ಜಿಲ್ಲೆಗೆ ಕೆಲವು ವರ್ಷಗಳ ಮಟ್ಟಿಗೆ ಹೋಗುವ ವರದಿಗಾರ ಒಬ್ಬರಿಗೆ, ನಿಜವಾಗಿಯೂ ಜನರ ಬಗ್ಗೆ ಪ್ರೀತಿ, ಕಾಳಜಿ ಮತ್ತು ಬದ್ಧತೆಯಿದ್ದರೆ, ಸಂಶೋಧನೆಯ ಕುತೂಹಲವಿದ್ದರೆ, ಆ ಸೀಮೆಯ ಸಾಂಸ್ಕೃತಿಕ ಚರಿತ್ರೆಯನ್ನು ಹೇಗೆ ಕಟ್ಟಿಕೊಡಬಹುದು ಎಂಬುದಕ್ಕೆ ದೇವು ಬರೆಹಗಳು ನಿದರ್ಶನವಾಗಿವೆ. ಅವರು ಬೀದರಿಗೆ ಹೋದಮೇಲೆ, ಬೀದರಿನ ಚರಿತ್ರೆಯ ಅಜ್ಞಾತ ಅಧ್ಯಾಯವೊಂದು ಓದುಗರ ಮುಂದೆ ತೆರೆದುಕೊಂಡಂತಾಗಿದೆ.

ಮೂಲತಃ ಗುಲಬರ್ಗ ಜಿಲ್ಲೆಯ ಶಹಾಪುರದವರಾದ ದೇವು, ಧಾರವಾಡದಲ್ಲಿ ಇಂಗ್ಲಿಷ್ ಸಾಹಿತ್ಯ ಓದಿದವರು. ಆದರೆ ಅವರು ಬರೆಯುತ್ತಿರುವ ಬರೆಹಗಳು, ಅವರನ್ನು ಒಬ್ಬ ಗಂಭೀರ ಚರಿತ್ರೆಯ ವಿದ್ವಾಂಸನಾಗುವತ್ತ ಕರೆದೊಯ್ಯುತ್ತಿವೆ. ದೇವು ಬರೆಹಗಳು ಚರಿತ್ರೆಯ ಅಪರಿಚಿತ ಲೋಕವನ್ನು ನಮ್ಮ ಅರಿವಿಗೆ ತರುವ ಕಾರಣಕ್ಕಾಗಿ ಮಾತ್ರ ಮುಖ್ಯವಾಗಿಲ್ಲ; ತಮ್ಮ ಒಳಗಿನ ಲೋಕದೃಷ್ಟಿಗಾಗಿಯೂ ಮುಖ್ಯವಾಗಿವೆ. ಕನ್ನಡದಲ್ಲಿ ಹೊಸತಲೆಮಾರಿನ ಚರಿತ್ರಕಾರರು ದೊಡ್ಡಸಂಖ್ಯೆಯಲ್ಲಿ ಪ್ರವೇಶಿಸುತ್ತಿದ್ದಾರೆ. ಆದರೂ ಕರ್ನಾಟಕ ಚರಿತ್ರ ಬರೆಹವು ಮತೀಕರಣದ ನೆರಳಿನಿಂದ ಪೂರಾ ಬಿಡುಗಡೆಗೊಂಡಿಲ್ಲ. ಇಂತಹ ಹೊತ್ತಲ್ಲಿ ಕರ್ನಾಟಕದ ರಾಜಕೀಯ ಚರಿತ್ರೆಯ ಗದ್ದಲದೊಳಗೆ ಸಂಭವಿಸಿರುವ ಮಾನವೀಯ ದುರಂತ ಮತ್ತು ಚೈತನ್ಯಶೀಲತೆಯನ್ನು ದೇವು ಹುಡುಹುಡುಕಿ ಬರೆಯುತ್ತಿದ್ದಾರೆ. ಬದುಕಿನ ಸಣ್ಣಪುಟ್ಟ ಸಂಗತಿಗಳಿಗೂ ಚರಿತ್ರೆಯಲ್ಲಿ ಮಹತ್ವವಿದೆ ಎಂದು ಅವರ ಬರೆಹಗಳನ್ನು ಓದುವಾಗ ತಿಳಿಯುತ್ತದೆ; ಜೀವನ ಪ್ರೀತಿಯುಳ್ಳ ಯಾವುದೇ ವ್ಯಕ್ತಿ ಮಾಡುವ ಕೆಲಸಗಳು ಜಾತಿ ಮತಗಳಾಚೆ ಹೋಗಿ ಮಾನವೀಯ ನೆಲೆಯಲ್ಲಿ ನಿಲ್ಲುತ್ತವೆ ಎಂದು ಅವು ಸೂಚಿಸುತ್ತವೆ. ಪತ್ರಕರ್ತನೊಬ್ಬ ತಣ್ಣಗೆ ಬರೆಯುತ್ತ ಜನಾಭಿಪ್ರಾಯವನ್ನು ರೂಪಿಸುವ ಮತ್ತು ಬದಲಿಸುವ ಕೆಲಸವನ್ನು ಮಾಡುತ್ತಿರುವ ಈ ಪರಿ, ಗಮನಾರ್ಹವಾಗಿದೆ.

Friday, August 27, 2010

ಕಾನೂನು ಸಚಿವ ಎಸ್. ಸುರೇಶ್ಕುಮಾರ್ಗೊಂದು ಬಹಿರಂಗ ಪತ್ರ

ಕಾನೂನು ಸಚಿವ ಎಸ್. ಸುರೇಶ್ಕುಮಾರ್ಗೊಂದು ಬಹಿರಂಗ ಪತ್ರ:

ಸುರೇಶ್ಕುಮಾರ್ ಅವರೇ ತಾವು ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಬರೆಯುತ್ತಿರವ ಲೇಖನಗಳು ನಿಜಕ್ಕೂ ಮಾನವೀಯವಾಗಿವೆ. ನಿಮ್ಮ ಸೂಕ್ಷಮತಿ, ಕಳಕಳಿ ಹಾಗೂ ಸಹೃದಯತೆಗೆ ಸಾಕ್ಷಿಯಾಗಿವೆ. ಇತ್ತೀಚೆಗೆ ತಾವು ನಮ್ಮ ರಾಜ್ಯದ ಮುಖ್ಯಕಾರ್ಯದಶರ್ಿಗಳ ಬಗ್ಗೆ ಬರೆದ ಲೇಖನ ಮನಮಿಡಿಯುವಂತಿತ್ತು. ಬೇರೆಯವರು ಅನುಕರಿಸುವಂತಿತ್ತು. ಹಿರಿಯರಾಗಿ ಎಸ್.ವಿ. ರಂಗನಾಥ್ ದೊಡ್ಡ ಆದರ್ಶವನ್ನು ಸೃಷ್ಟಿಸಿ ಒಂದು ಪರಂಪರೆಯನ್ನೇ ಹುಟ್ಟುಹಾಕಿದ ಅನುಭವವಾಯಿತು. ಅವರ ಕಾರ್ಯದಕ್ಷತೆ, ನೆನಪಿನ ಶಕ್ತಿ, ಪ್ರಾಮಾಣಿಕತೆಯನ್ನು ತಾವು ಗುತರ್ಿಸಿದ್ದು ನಿಜಕ್ಕೂ ಎಲ್ಲರ ಕಣ್ತೆರೆಸುವಂತಿತ್ತು. ನಿಮಗೆ ಹ್ಯಾಟ್ಸ್ ಆಫ್, ನಿಮಗೆ ನನ್ನ ಸಾವಿ ಸಾವಿರ ಸಲ್ಯೂಟ್ಗಳು ಹಾಗೂ ಅಭಿನಂದನೆಗಳು.

ಆದರೆ ಎಸ್.ವಿ. ರಂಗನಾಥ್ ಬಗ್ಗೆ ನಾನು ಕೆಲವು ಮಾತುಗಳನ್ನು ನಿಮ್ಮ ಗಮನಕ್ಕೆ ತರಬಯಸುತ್ತೇನೆ. ಇದೇ ಬಿಎಂಐಸಿ ಯೋಜನೆಗೆ ಸಕರ್ಾರ ಹಾಗೂ ನೈಸ್ ಸಮೂಹದ ಸಂಸ್ಥೆಗಳ ಜತೆ ಒಡಂಬಡಿಕೆಗೆ 1995 ರಲ್ಲಿ ಅಂದರೆ ಸುಮಾರು 15 ವರ್ಷಗಳ ಹಿಂದೆ ಆಗಿನ ಮುಖ್ಯಮಂತ್ರಿ ಹೆಚ್.ಡಿ. ದೇವೇಗೌಡ ಹಾಗೂ ಆಗಿನ ಬೃಹತ್ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಸಹಿ ಹಾಕಿದಾಗ ಫೈಲು ಹಿಡಿದು ನಿಂತಿದ್ದವರು ಇದೇ ಎಸ್.ವಿ. ರಂಗನಾಥ್ ರವರು. ಆಗಲೂ ಅವರು ಆಗಿನ ಮುಖ್ಯಮಂತ್ರಿಗಳಿಗೆ ಕಾರ್ಯದಶರ್ಿಯಾಗಿದ್ದರು. ಆಗಿನಿಂದ ಇಲ್ಲಿಯವರೆಗೆನ ಅಂದರೆ ಪಟೇಲ್, ಕೃಷ್ಣ, ಧರಂಸಿಂಗ್, ಕುಮಾರಸ್ವಾಮಿ, ಯಡಿಯೂರಪ್ಪ ಹೀಗೆ ಬಹುತೇಕ ಎಲ್ಲ ಮುಖ್ಯಮಂತ್ರಿಗಳಿಗೂ ಎಸ್.ವಿ. ರಂಗನಾಥ್ ಒಂದಲ್ಲ ಒಂದು ರೀತಿಯ ಕಾರ್ಯದಶರ್ಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಹೀಗಿರುವಾಗ ನೈಸ್ ಸಂಸ್ಥೆ ಜತೆ ಸಕರ್ಾರ ಒಡಂಬಡಿಕೆಗೆ ಸಹಿ ಹಾಕಿದ ವಿವರಗಳು ರಂಗನಾಥ್ಗೆ ಗೊತ್ತಿಲ್ಲವೆ? ಸುಮಾರು 5000 ಎಕರೆ ಸಕರ್ಾರಿ ಭೂಮಿಯನ್ನು ಸಕರ್ಾರ ನೈಸ್ ಸಂಸ್ಥೆಗೆ ಕ್ರಯ ಮಾಡಿಕೊಡಲು ಸಿದ್ಧ ಎಂದು ಸುಪ್ರೀಂಕೋರ್ಟಗೆ ಸಕರ್ಾರ ಅಫಿಡವಿಟ್ ಸಲ್ಲಿಸಿದಾಗ, ರಾಜ್ಯದ ಆಸ್ತಿಯನ್ನು ಬೇರೆಯವರಿಗೆ ಶಾಶ್ವತವಾಗಿ ಪರಭಾರೆ ಮಾಡುವುದನ್ನು ತಡೆಯುವ ಹಕ್ಕು ಒಬ್ಬ ಮುಖ್ಯಕಾರ್ಯದಶರ್ಿಯಾಗಿ ಎಸ್.ವಿ. ರಂಗನಾಥ್ಗೆ ಇರಲಿಲ್ಲವೇ? ಮೂಲ ಒಪ್ಪಂದದ ರಸ್ತೆ ಅಲೈನ್ಮೆಂಟ್ನಂತೆ ಸವರ್ೆ ಇಲಾಖೆ ಸ್ಕೆಚ್, ಎಂಜಿಯರಿಂಗ್ ಡಿಸೈನ್, ಜತೆಗೆ ಅಲೈನ್ಮೆಂಟನ್ನು ಗುರುತಿಸಿ ಭೂಸ್ವಾಧೀನಕ್ಕೆ ಒಳಗಾಗುವ ಎಲ್ಲಾ ಜಮೀನುಗಳ ಸವರ್ೆ ನಂಬರ್ಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಆಗಿನ ಡಿಸಿ ಅನೀಸ್ ಸಿರಾಜ್, ಎಲ್ಲಾ ಡಿಸಿಗಳಿಗೆ ಕಳುಹಿಸಿದ್ದ ಸುತ್ತೋಲೆಗಳು ಮುಂದಿರುವಾಗ, ಸಚಿವ ಸಂಪುಟದ ಒಪ್ಪಿಗೆ ಇಲ್ಲದೆ, ಲೋಕೋಪಯೋಗಿ, ಕೃಷಿ, ಆಥರ್ಿಕ ಇಲಾಖೆಗಳ ಅನುಮತಿ ಪಡೆಯದೇ, ರಾಜ್ಯಪಾಲರ ಅನುಮತಿ ಪಡೆಯದೇ ಕೇವಲ ಷಡ್ಯೂಲ್ಗಳನ್ನು ಬದಲಾಯಿಸಿ ಕಾಂಗ್ರೆಸ್ ಸಕರ್ಾರ ಹೊರಡಿಸಿದ ಆದೇಶವನ್ನು ರಂಗನಾಥ್ ಒಪ್ಪುವುದಾದರೂ ಹೇಗೆ? ಕಾಂಗ್ರೆಸ್ ಸಕರ್ಾರ ಹೋದಮೇಲಾದರೂ ಈ ಬಗ್ಗೆ ಆಂತರಿಕವಾಗಿಯಾದರೂ ಧ್ವನಿ ಎತ್ತಬಹುದಿತ್ತಲ್ಲವೇ?

1977 ರ ಕನರ್ಾಟಕ ಬ್ಯುಸಿನೆಸ್ ಟ್ರಾನ್ಸ್ಆಕ್ಷನ್ ರೂಲ್ ಪ್ರಕಾರ, ಹಲವಾರು ಇಲಾಖೆಗಳ ಮುಖ್ಯಸ್ಥರೊಂದಿಗೆ ಚಚರ್ಿಸಿ, ಆಥರ್ಿಕ ಇಲಾಖೆ ಸಾಧಕ ಬಾಧಕಗಳನ್ನು ಪರಾಮಶರ್ಿಸಿದ ನಂತರ ಒಮ್ಮೆ ಸಕರ್ಾರ ಮಾಡಿಕೊಂಡ ಒಪ್ಪಂದವನ್ನು ಮುರಿಯಲು ಮತ್ತೆ ಅದೇ ಇಲಾಖೆಗಳ ಮುಖ್ಯಸ್ಥರ ಸಭೆ ನಡೆಸಬೇಕು. ಆಥರ್ಿಕ ಇಲಾಖೆಯ ಅನುಮತಿ ಪಡೆಯಬೇಕು. ಪರಿಸರ ಇಲಾಖೆಯೊಂದಿಗೆ ಚಚರ್ಿಸಬೇಕು. ಸಚಿವ ಸಂಪುಟದಲ್ಲಿ ಈ ಬಗ್ಗೆ ಚಚರ್ೆ ನಡೆಯಬೇಕು. ವಿಧಾನಮಂಡಲದಲ್ಲಿ ಚಚರ್ೆಯಾಗಬೇಕು. ಆನಂತರ ಕಾನೂನಿಗೆ ತಿದ್ದುಪಡಿ ತಂದು ರಾಜ್ಯಪಾಲರ ಅನುಮತಿ ಪಡೆದು ಒಡಂಬಡಿಕೆಯನ್ನು ಬದಲಾಯಿಸಬೇಕು. ಜತೆಗೆ ತಿದ್ದುಪಡಿಯನ್ನು ತರಬೇಕು. ಆದರೆ ಇದ್ಯಾವುದನ್ನು ಮಾಡದೇ ಮೂಲ ಒಪ್ಪಂದದಂತೆ ಜಾರಿ ಮಾಡುವುದಾಗಿ ತಿಳಿಸಿ ಕೇವಲ ರಸ್ತೆ ಅಲೈನ್ಮೆಂಟ್ಗಳ ಷಡ್ಯೂಲ್ಗಳನ್ನಷ್ಟೇ ಬದಲಾಯಿಸಿ ಜಾರಿಗೆ ತಂದ ಓಡಿಪಿ ಯೋಜನೆಯನ್ನು ಯಾರಾದರೂ ಒಪ್ಪಲು ಸಾಧ್ಯವೇ?

ಅಂಥಹ ಓಡಿಪಿ ಅನೈನ್ಮೆಂಟನ್ನು ಒಪ್ಪಲು ಸಾಧ್ಯವಿಲ್ಲ. ನಾವು ಈಗಾಗಲೇ ಮೂಲ ಒಪ್ಪಂದದ ಅಲೈನ್ಮೆಂಟ್ ಪ್ರಕಾರ ರಸ್ತೆ ಮಾಡುವುದಾಗಿ ತಿಳಿಸಿ ರಸ್ತೆ ಹಾದು ಹೋಗುವ ಊರುಗಳು, ಅಲ್ಲಿನ ಜಮೀನುಗಳ ಆರ್ಟಿಸಿ ವಿವರಗಳನ್ನು ಹೈಕೋರ್ಟಗೆ (ಸೋಮಶೇಖರರೆಡ್ಡಿ ಕೇಸ್ 1997) ಸಲ್ಲಿಸಿದ್ದೆವು. ಆದ್ದರಿಂದ ಓಡಿಪಿ ಅಲೈನ್ಮೆಂಟ್ಗೂ, ಮೂಲ ಒಪ್ಪಂದದ ಅಲೈನ್ಮೆಂಟಗೂ ಅಜಗಜಾಂತರ ಅಂತರವಿದೆ ಎಂದು ಲೋಕೋಪಯೋಗಿ ಕಾರ್ಯದಶರ್ಿ ಅಗವಾನೆ ಅಫಿಡವಿಟ್ಟನ್ನೇ ಸಲ್ಲಿಸಿದ್ದರು. ಹಲವಾರು ಬಾರಿ ರೈತ ಮುಖಂಡರು ಎಸ್.ವಿ. ರಂಗನಾಥ್ ಅವರನ್ನು ಭೇಟಿಮಾಡಿ ಈ ಬಗ್ಗೆ ಅವರ ಗಮನ ಸೆಳೆದಿದ್ದರು. ನೈಸ್ ಕಂಪನಿ ಮಾಡುತ್ತಿರುವ ಅವ್ಯವಹಾರಗಳನ್ನು ಅವರ ಗಮನಕ್ಕೆ ತಂದಿದ್ದರು.
ಬಿಡಿ ಆಗೇನೂ ಎಸ್.ವಿ. ರಂಗನಾಥ್ಗೆ ಹೆಚ್ಚಿನ ಅಧಿಕಾರ ಇರಲಿಲ್ಲ. ಆದರೆ ಈಗ ಅವರು ಮುಖ್ಯಕಾರ್ಯದಶರ್ಿಯಾಗಿದ್ದಾರೆ. ಈಗಲಾದರೂ ಅವರು ಸಕರ್ಾರ ಸುಪ್ರೀಂಕೋರ್ಟಗೆ ಸಲ್ಲಿಸಿರುವ ಅಫಿಡವಿಟ್ನ್ನು ತಡೆಯಬಹುದಿತ್ತಲ್ಲವೇ? ಏನಿದೆ ಆ ಅಫಿಡವಿಟ್ನಲ್ಲಿ? ಸ್ಮಶಾನ, ಗುಂಡುತೋಪು, ಎಸ್ಸಿ/ಎಸ್ಟಿ ಜನರು ಸಾಗುವಳಿ ಮಾಡುತ್ತಿದ್ದ ಭೂಮಿ, ನೂರಾರು ಕೆರೆ ಕಟ್ಟೆಗಳು, ಜತೆಗೆ ಲಿಂಕ್ ರಸ್ತೆಗೆ ಬೇಕಾಗಿರುವ 138 ಎಕರೆ ಕೆರೆ ಅಂಗಳದ ಭೂಮಿಯನ್ನು ಸಕರ್ಾರ ಕೂಡಲೇ ನೈಸ್ ಸಂಸ್ಥೆಗೆ ನೀಡಲಿದೆ ಎಂದು ಹೇಳುತ್ತದೆ ಆ ಆಫಿಡವಿಟ್. ಈ ಜಮೀನುಗಳನ್ನು ಕೊಡುತ್ತಿರುವುದು ಲೀಸ್ ಮೇಲಲ್ಲ. ಸಂಪೂರ್ಣ ಕ್ರಯಕ್ಕೆ. ಎಸ್.ವಿ. ರಂಗನಾಥರೇ, ನೀವು ಮುಖ್ಯಕಾರ್ಯದಶರ್ಿಗಳು, ನಿಮಗೆ ಗೊತ್ತಿದೆ ನೀವೆ ಸಾಕ್ಷಿ ಸಹ, ಆಗಿನ ಒಪ್ಪಂದವನ್ನು ನೆನಪಿಸಿಕೊಳ್ಳಿ. 5000 ಸಾವಿರ ಸಕರ್ಾರಿ ಭೂಮಿಯನ್ನು ಕೊಡಲು ಒಪ್ಪಿದ್ದು ಕೇವಲ 30 ವರ್ಷಕ್ಕೆ ಗುತ್ತಿಗೆಗೆ. ಅದೂ ಒಂದು ಎಕರೆಗೆ ಒಂದು ವರ್ಷಕ್ಕೆ 10 ರುಪಾಯಿ ಬಾಡಿಗೆ. ಉಳಿದ 15193 ಎಕರೆ ಭೂಮಿಯನ್ನು ನೈಸ್ ಕಂಪನಿ ಮೂವತ್ತು ವರ್ಷಗಳ ನಂತರ ಹಿಂತಿರುಗಿಸಬೇಕು. ಕೇವಲ ಟೌನ್ಷಿಪ್ನಲ್ಲಿ ಮಾತ್ರ ಶೇ. 45 ರಷ್ಟನ್ನು ಮಾರಿಕೊಳ್ಳಲು ನೈಸ್ಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಆದರೆ ರಸ್ತೆ ಹಾಗೂ ರಸ್ತೆ ಬದಿಯ ಜಮೀನನ್ನು ಸಕರ್ಾರಕ್ಕೆ ಸಂಪೂರ್ಣವಾಗಿ ಹಿಂತಿರುಗಿಸಬೇಕೆಂಬ ಒಪ್ಪಂದವಾಗಿತ್ತು,

ಹೀಗಿದ್ದರೂ ನೈಸ್ ಕಂಪನಿಗೆ ಇಂದು ಕೆಐಎಡಿಬಿ ಖಾಸಗಿ ಹಾಗೂ ಸಕರ್ಾರಿ ಭೂಮಿಯನ್ನು ಕ್ರಯ ಮಾಡಿಕೊಡುತ್ತಿದೆ. ಬೂಟ್ ಒಪ್ಪಂದ ಎಂದರೇನು? ಬಿಲ್ಡ್- ಆಪರೇಟ್-ಓನ್- ಅಂಡ್ ಟ್ರಾನ್ಸ್ಫರ್. ಆದರೆ ಈಗ ನಡೆಯುತ್ತಿರುವುದೇನು? ಟ್ರಾನ್ಸ್ಫರ್ನ ವಿಷಯವೇ ಇಲ್ಲಾ. ಎಲ್ಲಾ ಕ್ರಯ ಮಾಡಿಕೊಡಲಾಗುತ್ತಿದೆ. ಒಮ್ಮೆ ನೈಸ್ ಸಂಸ್ಥೆ ಕ್ರಯಕ್ಕೆ ಪಡೆದ ಭೂಮಿಯನ್ನು ವಾಪಸ್ ಪಡೆಯಲು ಸಾಧ್ಯವೇ?

ಇದನ್ನು ನೀವು ಒಬ್ಬ ಮುಖ್ಯಕಾರ್ಯದಶರ್ಿಯಾಗಿ ಹೇಗೆ ಸಹಿಸಿಕೊಂಡಿದ್ದೀರಿ. ಅಡ್ವೋಕೇಟ್ ಜನರಲ್ ಅಶೋಕ್ ಹಾರ್ನಳ್ಳಿಗೆ ಸುಪ್ರೀಂಕೋಟರ್್ನಲ್ಲಿ ಓಡಿಪಿ ಅಲೈನ್ಮೆಂಟ್ನಂತೆ ರಸ್ತೆ ಮಾಡಲು ನಮ್ಮ ಒಪ್ಪಿಗೆ ಇದೆ ಎಂದು ಅಫಿಡವಿಟ್ ಸಲ್ಲಿಸಲು ಹೇಗೆ ಅನುಮತಿ ಕೊಟ್ಟಿರಿ ನೀವು? ಬೆಂಗಳೂರು ಸುತ್ತ ಪೆರಿಫರಲ್ ರಸ್ತೆ ನಿಮರ್ಿಸಲು ಬಿಡಿಎ ಮಾಡಿದ್ದ ರಸ್ತೆ ಅಲೈನ್ಮೆಂಟ್ ಯೋಜನೆಯನ್ನು ನೈಸ್ ಸಂಸ್ಥೆ ತನ್ನದಾಗಿಸಿಕೊಳ್ಳಲು, ಇದರಿಂದ ನೈಸ್ ಕಂಪನಿ ಇನ್ನಷ್ಟು ಬೆಂಗಳೂರು ಸಮೀಪ ಬರಲು ಹೇಗೆ ಅವಕಾಶ ಮಾಡಿಕೊಟ್ಟಿರಿ? ಮೂಲ ಒಪ್ಪಂದ ರಸ್ತೆ ಅಲೈನ್ಮೆಂಟ್ಗೆ ಅನುಗುಣವಾಗಿ ಸಕರ್ಾರ 1998 ರಲ್ಲಿ ಸುಮಾರು 20193 ಎಕರೆ ಭೂಸ್ವಾಧೀನಕ್ಕೆ ನೋಟಿಫಿಕೇಶನ್ ಹೊರಡಿಸಿದೆ. ಆಗಿನಿಂದಲೂ ಭೂಸ್ವಾಧೀನಕ್ಕೆ ಒಳಗಾಗಿರುವ ರೈತರು, ತಮ್ಮ ಜಮೀನುಗಳನ್ನು ಮಾರುವಂತೆಯೂ ಇಲ್ಲಾ. ಅಥವಾ ಬಳಸುವಂತೆಯೂ ಇಲ್ಲಾ. ಕಳೆದ 12 ವರ್ಷದಿಂದ ಅವರು ಅನುಭವಿಸುತ್ತಿರುವ ನೋವನ್ನು ನೀವು ಗಮನಿಸಿದ್ದೀರಾ. 12 ವರ್ಷದ ಹಿಂದೆ ನೀವು ಘೋಷಿಸಿದ್ದ ಎಕರೆಗೆ 80 ಸಾವಿರ ರುಪಾಯಿ ಪರಿಹಾರವನ್ನೇ ಈಗಲೂ ನೀಡಲು ಮುಂದಾಗುತ್ತಿದ್ದೀರಾ ಇದು ನ್ಯಾಯವೇ?

ಬಿಎಂಐಸಿ ಯೋಜನೆ ಜಾರಿಗೊಳಿಸುವ ಮುನ್ನ ಆಗಿನ ಸಕರ್ಾರ, ಆರ್ ಅಂಡ್ ಆರ್ ಫ್ಯಾಕೇಜ್ ಪ್ರಕಟಿಸಿ ಕಾನೂನಿನ ರೂಪದಲ್ಲಿ ಆದೇಶ ಹೊರಡಿಸಿತ್ತು. ಆರ್ ಅಂಡ್ ಆರ್ ಎಂದರೆ ರಿಯಾಬಿಲಿಟೇಷನ್ ಅಂಡ್ ರಿಸೆಟ್ಲ್ಮೆಂಟ್ ಪ್ಯಾಕೇಜ್ ಎಂದು. ಭೂಸ್ವಾಧೀನಕ್ಕೆ ಒಳಗಾಗುವ ರೈತರನ್ನು ಗೌರವದಿಂದ ಕಾಣಬೇಕು. ಅವನ್ನು ಒಕ್ಕಲೆಬ್ಬಿಸುವ ಮುನ್ನ ಅವರಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ಕನಿಷ್ಠ ಮೂರು ತಿಂಗಳು ಮುಂಚಿತವಾಗಿ ಅವರಿಗೆ ಲಿಖಿತ ನೋಟಿಸು ನೀಡಬೇಕು ಎಂಬುದು ಆರ್ ಅಂಡ್ ಆರ್ ಫ್ಯಾಕೇಜ್ನ ಮುಖ್ಯ ಉದ್ದೇಶ. ಆದರೆ ನೀವು ನಮ್ಮ ರೈತರನ್ನು ಹೇಗೆ ಒಕ್ಕಲೆಬ್ಬಿಸುತ್ತಿದ್ದೀರಿ? ರಾತ್ರೋ ರಾತ್ರಿ ಬುಲ್ಡೋಜರ್ಗಳನ್ನು ತಂದು ಅವರನ್ನು ಹೊರಹಾಕಿ ರಸ್ತೆ ಮಾಡುತ್ತಿದ್ದೀರಿ. ಅವರಿಗೆ ನೋಟಿಸು ನೀಡುವುದಿರಲಿ ಕನಿಷ್ಠ ಅವರಿಗೆ ಗೌರವವನ್ನು ನೀಡುತ್ತಿಲ್ಲ. ಮುಖ್ಯಕಾರ್ಯದಶರ್ಿಯವರ ಅಸಾಧಾರಣ ಜ್ಞಾಪಕ ಶಕ್ತಿಗೆ ಆರ್ ಅಂಡ್ ಫಾಕೇಜ್ ಹೊಳೆಯುತ್ತಿಲ್ಲವೇ?
ಕಾನೂನು ಸಚಿವರೇ ಎಂದಾದರೂ ನೀವು ನೈಸ್ ಸಂಸ್ಥೆ ಬೆಂಗಳೂರು ಸಮೀಪ ಎಷ್ಟು ಸಾವಿರ ಎಕರೆ ಭೂಮಿಯನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ಗಮನಿಸಿದ್ದೀರಾ? ಬೆಂಗಳೂರು ಸುತ್ತ 90 ಮೀಟರ್ ಅಗಲದ 41 ಕಿಲೋಮೀಟರ್ ಪೆರಿಫರಲ್ ರಸ್ತೆ, 8 ರಿಂದ 9 ಕಿಮೀ ಲಿಂಕ್ ರಸ್ತೆ ನಿಮರ್ಿಸಲು ಗರಿಷ್ಠ ಎಂದರೆ 1000 ಎಕರೆ ಭೂಮಿ ಸಾಕು. ಆದರೆ ಈಗಾಗಲೇ ನೈಸ್ ಬಳಿ 2800 ಹೆಚ್ಚು ಎಕರೆ ಭೂಮಿ ಇದೆ ಎಂಬುದು ನಿಮ್ಮ ಗಮನಕ್ಕೆ ಬಂದಿಲ್ಲವೇ? ಬೆಂಗಳೂರು ಸುತ್ತ ಒಂದು ಎಕರೆಗೆ ಕನಿಷ್ಠ ಎಂದರೂ 5 ಕೋಟಿಯಿಂದ ಹಿಡಿದು ಪೂರ್ವದಲ್ಲಿ 25 ಕೋಟಿವರೆಗೂ ಬೆಲೆ ಇದೆ. ಹಾಗಾದರೆ ಬೆಂಗಳೂರು ಸುತ್ತ ಒಂದರಲ್ಲೆ ನೈಸ್ಗೆ ಎಷ್ಟು ಸಾವಿರ ಕೋಟಿ ರು ಮೌಲ್ಯದ ಭೂಮಿ ಸಿಕ್ಕಿದೆ ಎಂಬುದನ್ನು ನೀವೇ ಲೆಕ್ಕಹಾಕಿ.
ನಿಜ ನೀವು ಹೇಳುತ್ತೀರಿ. ಇದು ದೇವೇಗೌಡರ ಪಾಪದ ಕೂಸು. ಕಾಂಗ್ರೆಸ್ ಸಕರ್ಾರ ಮಾಡಿದ ತಪ್ಪು. ಸುಪ್ರೀಂಕೋರ್ಟ ಆದೇಶ ಇದೆ. ಹೀಗೆ ನೂರಾರು ಸಬೂಬುಗಳನ್ನು ನೀವು ಕೊಡುತ್ತೀರಿ ಒಪ್ಪಿಕೊಳ್ಳೋಣ. ಸುಪ್ರೀಂಕೋರ್ಟ ಸಹ ಸೋಮಶೇಖರರೆಡ್ಡಿ ಪ್ರಕರಣದಲ್ಲಿ ತೀಮರ್ಾನವಾಗಿರುವಂತೆಯೇ, ಮೂಲ ಒಪ್ಪಂದದ ಅಲೈನ್ಮೆಂಟ್ ಪ್ರಕಾರವೇ ರಸ್ತೆ ನಿಮರ್ಿಸಿ ಎಂದು ಹೇಳುತ್ತಿದೆ. ಆದರೆ ಮೂಲ ಒಪ್ಪಂದದ ಅಲೈನ್ಮೆಂಟ್ನಲ್ಲಿ ಷಡ್ಯೂಲ್ಗಳನ್ನು ಬದಲಾಯಿಸಲಾಗಿದೆ. ಇದಕ್ಕೆ ಕಾನೂನಿನ ಪಾವಿತ್ರ್ಯತೆ ಇಲ್ಲಾ ಎಂಬುದನ್ನು ತಾವು ಗಮನಿಸಿಲ್ಲವೇ? ಹೀಗಿರುವಾಗ ಬಿಎಂಐಸಿ ಯೋಜನೆಯನ್ನು ಜಾರಿಗೊಳಸಲು ಹುಟ್ಟುಹಾಕಿದ ಬಿಎಂಐಸಿಪಿಎ ಸಕರ್ಾರಿ ಸಂಸ್ಥೆ, ಸಕರ್ಾರಿ ಅಧಿಕಾರಿ ಅಗವಾನೆ ಜತೆಗೆ ಮಾಜಿ ಅಡ್ವೊಕೇಟ್ ಜನರಲ್ ಉದಯ್ಹೊಳ್ಳ ಸಲ್ಲಿಸಿರುವ ಅಫಿಡವಿಟ್ಟಿನಲ್ಲಿ ಮೂಲ ಒಪ್ಪಂದವನ್ನು ಉಲ್ಲಂಘಿಸಿ ಬಿಎಂಐಸಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿಲ್ಲವೇ? ಹೀಗಿದ್ದರೂ ನೀವು ಕೆರೆ ಅಂಗಳಗಳನ್ನು ಯಾವುದೇ ಕಾರಣಕ್ಕೂ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ನೀಡಬಾರದೆಂದು ಹೈಕೋರ್ಟನ ಆದೇಶವಿದ್ದರೂ, ಈ ಬಗ್ಗೆ ಈ ಹಿಂದಿನ ಕಂದಾಯ ಇಲಾಖೆ ಕಾರ್ಯದಶರ್ಿ ಎಸ್.ಎಂ. ಜಾಮ್ದಾರ್ ಎಚ್ಚರಿಸಿದ್ದರೂ 138 ಎಕರೆ ಕೆರೆ ಅಂಗಳವನ್ನು ಕ್ರಯ ಮಾಡಿಕೊಡಲು ಮುಂದಾಗಿದ್ದೀರಿ ನೀವು. ಎಸ್ಸಿ ಎಸ್ಟಿಗಳನ್ನು ಒಕ್ಕಲೆಬ್ಬಿಸಬೇಕಾದರೆ ನೀವು ರಾಜ್ಯಪಾಲದ ಅನುಮತಿ ಪಡೆಯಬೇಕು. ಆದರೆ ಸಕರ್ಾರಿ ಜಮೀನಿನಲ್ಲಿ ಒಕ್ಕಲತನ ಮಾಡುತ್ತಿರುವ ಎಸ್ಸಿ/ಎಸ್ಟಿಗಳನ್ನು ಒಕ್ಕಲೆಬ್ಬಿಸಲು ನೈಸ್ಗೆ ಪರವಾನಗಿ ನೀಡಿದ್ದೀರಿ.
ದೇವೇಗೌಡರು ಮೂಲ ಒಪ್ಪಂದ ಮಾಡಿಕೊಂಡಾಗ, ಬೆಂಗಳೂರು ಸುತ್ತ ಒಂದೇ ಒಂದು ಕೆರೆಯೂ ರಸ್ತೆ ಅನೈನ್ಮೆಂಟ್ಗೆ ಸಿಕ್ಕುತ್ತಿರಲಿಲ್ಲ. ಆದರೆ ಕಾಂಗ್ರೆಸ್ ಸಕರ್ಾರ ಮಾಡಿದ ಓಡಿಪಿ ರಸ್ತೆ ಅಲೈನ್ಮೆಂಟ್ನಿಂದ ಸುಮಾರು 24 ಕೆರೆಗಳು ನೈಸ್ ರಸ್ತೆಗೆ ಬಲಿಯಾಗುತ್ತಿವೆ. ನೈಸ್ ಕಂಪನಿಗೆ ರಸ್ತೆ ನಿಮರ್ಾಣಕ್ಕೆ ಕೇವಲ 90 ಮೀಟರ್ ಅಗತ್ಯವಿದ್ದರೂ ಅದು ಮನಸೋಇಚ್ಘೆ ರಸ್ತೆ ಅಕ್ಕಪಕ್ಕದ ಜಮೀನುಗಳನ್ನು ಅಕ್ವೈರ್ ಮಾಡಿಸುತ್ತಿದೆ. ಸುಪ್ರೀಂಕೋರ್ಟನಲ್ಲಿ ಕೇಸ್ ಇದ್ದರೂ ಇನ್ಫೋಸಿಸ್, ಶೋಭಾ ಡೆವಲಪರಸ್ ಸೇರಿದಂತೆ ಸುಮಾರು 8 ಕಂಪನಿಗಳಿಗೆ ಸಕರ್ಾರ ಮೂಲ ಒಪ್ಪಂದದ ರಸ್ತೆ ಅಲೈನ್ಮೆಂಟ್ಗೆ ಅನುಗುಣವಾಗಿ ಭೂಸ್ವಾಧೀನ ಮಾಡಿಕೊಂಡಿದ್ದ ಭೂಮಿಯನ್ನು ಮಾರಾಟ ಮಾಡಿದೆ.
ಇವೆಲ್ಲವನ್ನೂ ಮುಖ್ಯಕಾರ್ಯದಶರ್ಿಯವರು ಗಮನಿಸಿಲ್ಲವೇ? ಮುಖ್ಯಕಾರ್ಯದಶರ್ಿಯವರ ಕಾರ್ಯಕ್ಷಮತೆ, ಪ್ರಾಮಾಣಿಕತೆ, ಮೊನಚಾದ ನೆನಪಿನ ಶಕ್ತಿ, ಕಂಪ್ಯೂಟರ್ ಗುಣ ಇಲ್ಲಿ ಕೆಲಸಮಾಡದಿರುವುದು ಕಾನೂನು ಸಚಿವರ ಗಮನಕ್ಕೆ ಬಂದಿಲ್ಲವೆ?
ಕಾನೂನು ಸಚಿವರೇ, ಕಾಂಗ್ರೆಸ್ ಸಕರ್ಾರ ಮಾಡಿದ ತಪ್ಪಿದು ನಾವೇನು ಮಾಡೋಣ ಎನ್ನಬೇಡಿ. ಒಂದು ಸಕರ್ಾರ ಮಾಡಿದ ತಪ್ಪನ್ನು ನೀವು ರೆಕ್ಟಿಫೈ ಮಾಡಬೇಕು. ರ್ಯಾಟಿಫೈ ಮಾಡಬಾರದು. ಅದಕ್ಕಾಗಿಯೇ ಜನ ನಿಮ್ಮನ್ನು ಆರಿಸಿ ಕಳುಸಿದ್ದಾರೆ. ಜನಪ್ರತಿನಿಧಿಗಳು ತಪ್ಪುಮಾಡುತ್ತಾರೆಂದೇ ರಾಜ್ಯದ ಸಂಪತ್ತು, ಸಾರ್ವಜನಿಕರ ಆಸ್ತಿಪಾಸ್ತಿಯನ್ನು ಕಾಪಾಡಲು ಮುಖ್ಯಕಾರ್ಯದಶರ್ಿಯವರಿದ್ದಾರೆ. ಇಬ್ಬರೂ ಈಗಲಾದರೂ ದಕ್ಷತೆಯಿಂದ ಕೆಲಸಮಾಡುತ್ತೀರೆದಂದು ನಿರೀಕ್ಷಿಸುತ್ತೇನೆ.

---ಎಂ.ಎನ್. ಚಂದ್ರೇಗೌಡ
ಸಮಯ ನ್ಯೂಸ್,
ಬೆಂಗಳೂರು

Wednesday, August 25, 2010

ಮುಖ್ಯ ಮಂತ್ರಿಗಳಿಗೊಂದು ಬಹಿರಂಗ ಪತ್ರ…

20

Aug

2010

-ಧನಂಜಯ ಕುಲಕರ್ಣಿ

ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ
ಮಾನ್ಯ ಮುಖ್ಯ ಮಂತ್ರಿಗಳೇ,
ನಿಮಗೆ ಈ ರೀತಿಯ ಪತ್ರಗಳು ಹೊಸದೇನಲ್ಲ. ನನ್ನಂತಹ ಅನೇಕ ಜನ ನಿಮಗೆ ಈಗಾಗಲೇ ಇಂತಹ ಪತ್ರಗಳನ್ನು ಬರೆದಿದ್ದಾರೆ ಮತ್ತು ನೀವು ಅವುಗಳನ್ನು ಅಷ್ಟೇ ಮೌನದಿಂದ ಸ್ವೀಕರಿಸಿದ್ದೀರಿ ಕೂಡ. ಅದಕ್ಕೆ ನಾವು “ಮೌನಂ ಸಮ್ಮತಿ ಲಕ್ಷಣಂ” ಎಂದು ಅರ್ಥೈಸಿ ಕೊಳ್ಳಬೇಕೆಂದರೆ ಅಂತಹ ಪತ್ರಗಳಿಗೆ ನಿಮ್ಮಿಂದ ದೊರೆತ ಉತ್ತರ ಮತ್ತು ಫಲಿತಾಂಶ ಮಾತ್ರ ಸೊನ್ನೆ. ಹೀಗಾಗಿ ಮತ್ತೆ ಮತ್ತೆ ಬರೆಯುವ ಅನಿವಾರ್ಯತೆ ಒದಗಿ ಬಂದಿದೆ.

ನೀವು ಅಧಿಕಾರಕ್ಕೆ ಬಂದ ಮೊದಲಿನ ಎರಡು ವರ್ಷಗಳನ್ನು ನಿಮ್ಮ ಪಕ್ಷದ ಆಂತರಿಕ ಬಂಡಾಯ, ಕಚ್ಚಾಟ, ಶಾಸಕರ ಖರೀದಿ ವ್ಯವಹಾರಗಳಲ್ಲೇ ಕಳೆದಿರಿ.



ನಿಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಮಾಧ್ಯಮಗಳನ್ನು ಗುರಿಯಾಗಿರಿಸಿಕೊಂಡಿರಿ, ಜನರ ಮುಂದೆ ಕಣ್ಣೀರು ಹಾಕಿದಿರಿ. ವಿರೋಧ ಪಕ್ಷದ ನಾಯಕರಾಗಿದ್ದಾಗ ಆಡಳಿತ ಪಕ್ಷದ ಜನರಿಗೆ ನಿಮ್ಮ ಮಾತುಗಳು ಬೆಂಕಿಯುಂಡೆಯಾಗುತ್ತಿದ್ದವು. ಆದರೆ ಈಗ ನಿಮ್ಮ ಮಾತುಗಳು ಹಾಗಿರಲಿ, ನೀವೇ ಬಾಲ ಸುಟ್ಟ ಬೆಂಕಿನಂತಾಗಿದ್ದೀರಿ. ಕೇವಲ ಅಧಿಕಾರವನ್ನುಳಿಸಿಕೊಳ್ಳಲು ಈ ರೀತಿಯ ಅಸಹಾಯಕತೆಯನ್ನು ಪ್ರದರ್ಶಿಸುವ ನಾಯಕರನ್ನು ನಾವೆಂದೂ ಕಂಡಿಲ್ಲ. ನಿಜಕ್ಕೂ ನಿಮ್ಮ ಪರಿಸ್ಥಿತಿಯನ್ನು ನೋಡಿ ನಮಗೆಲ್ಲ ಅಯ್ಯೋ ಅನ್ನಿಸುತ್ತಿದೆ.


ನಿಮ್ಮ ಸರಕಾರ ಎದುರಿಸುತ್ತಿರುವ ಸಮಸ್ಯೆಗಳಿಗಿಂತಲೂ ಅನೇಕ ಕ್ಲಿಷ್ಟ ಪರಿಸ್ಥಿತಿಯನ್ನು ಮತ್ತು ಕಠಿಣ ಸಮಸ್ಯೆಗಳನ್ನು ಹಿಂದಿನ ಬಹುತೇಕ ಸರಕಾರಗಳು ಎದುರಿಸುತ್ತಿದ್ದವು.

ಆದರೆ ಅವುಗಳನ್ನು ಬಗೆಹರಿಸುವಲ್ಲಿ ನಮಗೆಲ್ಲ ಕಾಣಸಿಗುತ್ತಿದ್ದ ರಾಜಕೀಯ ಮುತ್ಸದ್ದಿತನ, ಮೇಧಾವಿತನ ನಮಗೆ ನಿಮ್ಮಿಂದ ಸಿಗುತ್ತಿಲ್ಲ. ಒಂದು ಕಡೆಯಿಂದ ಗಣಿಧಣಿಗಳು ನಿಮಗೆ ಪ್ರತಿಪಕ್ಷದವರಂತೆ ವರ್ತಿಸುತ್ತಿದ್ದರೆ, ಇನ್ನು ಕೆಲವು ಸಚಿವರ ಬೇಜವಾಬ್ದಾರಿಯುತ ವರ್ತನೆಗಳಿಗೆ ಮುಖ್ಯಮಂತ್ರಿಯಾದ ನೀವು ಕ್ಷಮೆ ಕೇಳುತ್ತೀರಿ. ಆದರೆ ಬೇಜವಾಬ್ದಾರಿ ಪ್ರದರ್ಶಿಸಿದ ಮಂತ್ರಿಗಳ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ. ಇನ್ನು ನಮ್ಮ ರಾಜ್ಯದ ಗೃಹ ಮಂತ್ರಿಗಳಂತೂ ಬಿಡಿ.

ಅವರು ರಾಜ್ಯಕ್ಕೆ ಗೃಹ ಮಂತ್ರಿಗಳಾ ಅಥವಾ ತಮ್ಮ ಮನೆಗೆ ಗೃಹ ಮಂತ್ರಿಗಳಾ ಎನ್ನುವುದನ್ನು ಪರಾಮರ್ಶಿಸುವ ಅಗತ್ಯವಿದೆ. ಯಾವುದೇ ವಿಷಯವಾಗಲೀ, ಘಟನೆಯಾಗಲೀ ಅದಕ್ಕೆ ಅವರು ಮೊದಲು ನೀಡುವ ಸ್ಪಷ್ಟನೆಯೆಂದರೆ “ಇದು ನನ್ನ ಗಮನಕ್ಕೆ ಇನ್ನೂ ಬಂದಿಲ್ಲ. ಬಂದ ನಂತರ ಆ ಕುರಿತು ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತೇವೆ”. ಅಷ್ಟರಲ್ಲಿ ಎಲ್ಲ ಮುಗಿದು ಮತ್ತೊಂದು ಹಗರಣಕ್ಕೆ ನಿಮ್ಮ ಶಾಸಕರು, ಸಚಿವರು ಸಿದ್ಧತೆ ನಡೆಸಿರುತ್ತಾರೆ.

ನೀವು ವಿರೋಧ ಪಕ್ಷದ ಮುಖಂಡರಾಗಿದ್ದಾಗ ಎಷ್ಟು ಬಾರಿ ಆಡಳಿತ ಪಕ್ಷದವರನ್ನು ಸಂಕಷ್ಟಕ್ಕೆ ಸಿಲುಕಿಸಲು ಪಕ್ಷದ ಸಮಾವೇಶಗಳನ್ನು ನಡೆಸಿದ್ದಿರಿ? ಸ್ವಲ್ಪ ನೆನಪಿಸಿಕೊಳ್ಳಿ. ಈಗ ಕಳೆದ ಎರಡೂವರೆ ವರ್ಷಗಳಲ್ಲಿ ಅವೆಲ್ಲವನ್ನು ಬಡ್ಡಿ ಸಮೇತ ತೀರಿಸುವವರಂತೆ ಸಮಾವೇಶಗಳನ್ನು ನಡೆಸುತ್ತಿದ್ದೀರಿ. ವಿಧಾನಸೌಧ ಒಂದು ಪವಿತ್ರ ಸ್ಥಳವಾಗಿತ್ತು. ಅದನ್ನು ಅಸಂವಿಧಾನಿಕ ಪದಬಳಕೆಗಳಿಂದ ನಿಮ್ಮ ಶಾಸಕರು, ಸಚಿವರು ಮತ್ತು ವಿರೋಧ ಪಕ್ಷದವರು ಅಪವಿತ್ರಗೊಳಿಸಿಬಿಟ್ಟಿದ್ದೀರಿ.

ವಿರೋಧ ಪಕ್ಷದವರು ಅಂತಹ ಅಸಂವಿಧಾನಿಕ ಪದಗಳನ್ನು ಬಳಕೆ ಮಾಡಿದಾಗ ಸ್ವಲ್ಪ ತಾಳ್ಮೆ, ಸಹನೆಗಳನ್ನು ತೋರಿ, ನಿಮ್ಮ ಶಾಸಕರನ್ನು ನಿಯಂತ್ರಿಸಿ ನಿಮ್ಮ ಸ್ಥಾನಕ್ಕೆ ಮತ್ತು ಖುರ್ಚಿಗೆ ಒಂದು ಘನತೆಯನ್ನು ತಂದು ಕೊಡಬಹುದಾಗಿತ್ತು. ಆದರೆ ಅದ್ಯಾವುದನ್ನೂ ನೀವು ಮಾಡಲೇ ಇಲ್ಲ. ಬದಲಾಗಿ ವಿರೋಧ ಪಕ್ಷದವರು ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ ಅಡ್ಡಿ ಪಡಿಸುತ್ತಿದ್ದಾರೆ ಎಂಬ ಒಂದೇ ಸಾಲಿನ ಮಾತುಗಳನ್ನು ಪುನರಾವರ್ತಿಸುತ್ತ ಹೋದಿರಿ.

ಗಣಿಧಣಿಗಳು ವಿಧಾನಸೌಧದಲ್ಲಿ ಆರ್ಭಟಿಸುತ್ತಿರುವಾಗ ನೀವು ಮೌನರಾಗ ತಾಳಿದ್ದೇಕೆ. ಆ ಆರ್ಭಟದಿಂದಲೇ ಅಲ್ಲವೇ ನಮ್ಮ ನಾಡಿನ ಐದು ಕೋಟಿಜನರು ಕಳೆದ ಒಂದೂವರೆ ತಿಂಗಳಿನಿಂದ “ದೊಂಬರಾಟ” ವನ್ನು ನೋಡುತ್ತಿರುವುದು? ಬಳ್ಳಾರಿ – ಹೊಸಪೇಟೆ ನಡುವಿನ ಅಂತರ ಕೇವಲ ೬೨ ಕಿಲೋ ಮೀಟರ್. ಆದರೆ ಅದನ್ನು ಕ್ರಮಿಸಲು ಬರೊಬ್ಬರಿ ೩ ಗಂಟೆ ಬೇಕು. ಅಷ್ಟು ಅದ್ಭುತವಾಗಿವೆ ಅಲ್ಲಿನ ರಸ್ತೆಗಳು. ಇದು ನಿಮ್ಮ ಬಳ್ಳಾರಿ ಗಣಿಧಣಿಗಳು ಮಾಡಿದ ಅಭಿವೃದ್ಧಿ ಕಾರ್ಯವೆಂದು ಸಮರ್ಥಿಸಿಕೊಳ್ಳುತ್ತೀರಾ?

ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ. ನೆರೆ ಸಂತೃಸ್ತರಿಗೆ ಇನ್ನೂ ಸೂರು ಸಿಕ್ಕಿಲ್ಲ, ಸಣ್ಣ ಉದ್ದಿಮೆದಾರರಿಗೆ ಸರಿಯಾಗಿ ವಿದ್ಯುತ್ ಸಿಗದೇ ಕಂಗಾಲಾಗಿ ಬೀದಿಗೆ ಬರುತ್ತಿದ್ದಾರೆ. ರೈತರಿಗೆ ಬೀಜ ಮತ್ತು ಗೊಬ್ಬರ ಸರಿಯಾಗಿ ಸಿಗದೇ ಮತ್ತೆ ಬೀದಿಗಿಳಿದು ಹೋರಾಟ ಮಾಡುವ ಹಂತಕ್ಕೆ ತಲುಪಿದ್ದಾರೆ, ಶಾಲೆಗಳು ಆರಂಭವಾಗಿ ೩-೪ ತಿಂಗಳುಗಳು ಕಳೆದರೂ, ಪ್ರತಿ ವರ್ಷದಂತೆ ಈ ವರ್ಷವು ಸಹ ಪಠ್ಯ ಪುಸ್ತಕಗಳ ಸಮಸ್ಯೆ ಎಂದಿನಂತೆ ಇದೆ.

ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಮುಂದೆ ಇಂಜಿನೀಯರಿಂಗ್ ಓದಬೇಕೊ ಅಥವಾ ವೈದ್ಯಕೀಯ ಓದಬೇಕೋ ಎಂಬ ಗೊಂದಲದಲ್ಲಿದ್ದಾರೆ. ಹೀಗೆ ಸಮಸ್ಯೆಗಳ ಮಹಾಪೂರವೇ ನಮ್ಮ ಮುಂದಿರುವಾಗ ನೀವು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ವಾರಕ್ಕೆರಡು ಸಮಾವೇಶಗಳನ್ನು ನಡೆಸುವ ಅಗತ್ಯವಿದೆಯಾ?

ಅಚಾನಕ್ಕಾಗಿ ನಿಮಗೆ ಸಿಕ್ಕ ಈ ಅದ್ಭುತ ಅವಕಾಶವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಂಡು ರಾಜ್ಯಕ್ಕೆ ಮಾದರಿ ಮುಖ್ಯಮಂತ್ರಿಯಾಗಬಹುದಿತ್ತು. ಆದರೆ ಅದ್ಯಾವುದೂ ಆಗಲೇ ಇಲ್ಲ. ಸ್ವಲ್ಪ ಶಾಂತಚಿತ್ತರಾಗಿ ಕುಳಿತು ವಿಚಾರಮಾಡಿ. ನೀವು ಮಾಡಿದ್ದು, ಮಾಡುತ್ತಿರುವುದು ಸರಿಯೇ ಎಂದು. ಉತ್ತರ ನಿಮ್ಮಲ್ಲಿಯೇ ಇದೆ.

Saturday, August 21, 2010

ಮೀಡಿಯಾ ಮಿರ್ಚಿ: ಬರೆದೆ ನೀನು ನನ್ನ ಹೆಸರ ನಿನ್ನ ಬಾಳ ಪುಟದಲಿ…

Posted in G N Mohan, media mirchi by Media Mind on June 23, 2010
-ಜಿ ಎನ್ ಮೋಹನ್

ಮಾನ್ಯ ಡಿ ಜಿ ಸಾಹೇಬರಿಗೆ



ಅಖಿಲ ಭಾರತ ಮೂಗರ್ಜಿ ಬರಹಗಾರರ ಸಂಘದಿಂದ ಅನಂತಾನಂತ ನಮಸ್ಕಾರಗಳು. ‘ವಿಜಯ ಕರ್ನಾಟಕ’ ಸರ್ಕಾರದ ವಿರುದ್ಧ ಬರೆಯುತ್ತಿದೆ ಎಂಬ ಮೂಗರ್ಜಿ ನಿಮಗೆ ಬಂದದ್ದು ಸರಿಯಷ್ಟೇ. ನೀವು ತುಂಬಾ ಮುತುವರ್ಜಿಯಿಂದ ಅದನ್ನು ತನಿಖೆಗೆ ಕಳಿಸಿಕೊಟ್ಟದ್ದು ಕೇಳಿ ಹಾಲು ಕುಡಿದಷ್ಟು ಸಂತೋಷವಾಯಿತು. ಇತ್ತೀಚಿಗೆ ತಾನೇ ‘ಪ್ರಜಾವಾಣಿ’ಯ ರಾಹುಲ್ ಬೆಳಗಲಿ ಹಾಗೂ ಪದ್ಮರಾಜ ದಂಡಾವತೆ ಅವರಿಗೂ ಇದೆ ರೀತಿ ನಿಮ್ಮ ಪ್ರತಿನಿಧಿಗಳಾದ ಶಿವಮೊಗ್ಗ ಪೊಲೀಸರು ನೋಟೀಸ್ ಕಳಿಸಿದ್ದರು. ಆಗ ನಮಗೆ ಅಷ್ಟೇನೂ ಸಂತೋಷವಾಗಿರಲಿಲ್ಲ. ಯಾಕೆಂದರೆ ಅದು ಮೂಗರ್ಜಿಯನ್ನು ಆಧರಿಸಿ ಕಳಿಸಿದ್ದಲ್ಲ. ಹಾಗಾಗಿ ಮೂಗರ್ಜಿ ಸಂಘದ ನಮಗೆ ಸಂತೋಷವಾಗುವುದಾದರೂ ಹೇಗೆ? ಇಷ್ಟು ದಿನ ಮೂಗರ್ಜಿ ಎಂದರೆ ಸಾಕು ಎಗರಿ ಬೀಳುತ್ತಿದ್ದ, ಮೂಲೆಗೆ ಸರಿಸುತ್ತಿದ್ದ, ಅಸಹ್ಯ ಎನ್ನುವಂತೆ ನೋಡುತ್ತಿದ್ದ ಕಾಲವನ್ನು ನೀವು ಬದಲು ಮಾಡಿದ್ದೀರಿ.

ಹಿಂದೆ ಮಲ್ಯ ಸಾಹೇಬರು ಹೊಸ ಪಕ್ಷ ಕಟ್ಟಿದಾಗ ‘ಏಳಿ ಎದ್ದೇಳಿ, ಬದಲಾವಣೆಯ ಕಾಲ ಬಂದಿದೆ’ ಅಂತ ಕರೆ ನೀಡಿದ್ದರು. ಆಗ ಮೂಗರ್ಜಿ ಬರಹಗಾರರಾದ ನಾವು ಎದ್ದು ಕುಳಿತೆವು. ಎದ್ದು ಕುಳಿತು, ಎದ್ದು ಕುಳಿತು ಮಾಡಿದ್ದಷ್ಟೇ ಬಂತು. ಆದರೆ ಬದಲಾವಣೆಯ ಕಾಲ ಬರಲೇ ಇಲ್ಲ. ಏಕೆಂದರೆ ಮೂಗರ್ಜಿಗೆ ಇದ್ದ ಮಾನ ಮರ್ಯಾದೆ ಎಲ್ಲಿತ್ತೋ ಅಲ್ಲೇ ಇತ್ತು. ಆದರೆ ನೀವು ಮಲ್ಯರಂತೆ ಕರೆ ಕೊಡಲಿಲ್ಲ. ನೀವು ಸದ್ದಿಲ್ಲದಂತೆ ಒಂದು ಬದಲಾವಣೆಯನ್ನೇ ಮಾಡಿಬಿಟ್ಟಿರಿ. ಮೌನ ಕ್ರಾಂತಿ ಅಂದರೆ ಏನು ಅಂತ ಇಷ್ಟು ದಿನ ತಲೆ ಕೆರೆದುಕೊಳ್ಳುತ್ತಿದ್ದೆವು. ಆದರೆ ಈ ದಿನ ಖಂಡಿತಾ ಗೊತ್ತಾಯಿತು. ‘ಮೂಗರ್ಜಿ ಹಿಡಿದು ಮಟಾಷ್ ಮಾಡು’ ಅಂತ.

ಸಾರ್, ‘ಕರುಣಾಳು ಬಾ ಬೆಳಕೇ, ಮಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು’ ಎಂದು ಯಾರು ಬರೆದರೋ ಗೊತ್ತಿಲ್ಲ ಆದರೆ ನಮ್ಮ ಪರಿಸ್ಥಿತಿಯಂತೂ ಖಂಡಿತಾ ಹಾಗೇ ಆಗಿ ಹೋಗಿತ್ತು. ಮೂಗರ್ಜಿ ಬರೆದೂ ಬರೆದೂ ಬೆರಳು ನೊಂದರೂ ಹೇಳುವವರಿಲ್ಲ, ಕೇಳುವವರಿಲ್ಲ. ಒಂದು ರೀತಿ ಅಂಧಕಾರದಲ್ಲಿಯೇ ಇದ್ದೆವು. ಅಂತಹ ಸಮಯದಲ್ಲಿ ನೀವು ಕರುಣಾಳುವಿನಂತೆ ಬಂದಿರಿ, ಕೈ ಹಿಡಿದು ನಡೆಸಲು ಮುಂದಾದಿರಿ. ಒಂದು ನಿಮಿಷ ತಾಳಿ ಸಾರ್ ‘ಕರುಣಾಳು ಬಾ ಬೆಳಕೇ ಮಸುಕಿದೀ ಮಬ್ಬಿನಲಿ..’ ಕವಿತೆಯನ್ನು ಯಾರೋ ವೈಯೆನ್ಕೆ ಎನ್ನುವ ಮಹಾಶಯರು ‘ಕರುಣಾಳು ಬಾ ಬೆಳಕೇ, ಮಸುಕಿದೀ ಪಬ್ಬಿನಲಿ, ಕೈ ಹಿಡಿದು ಕುಡಿಸೆನ್ನನು’ ಎಂದು ಬಾರ್ ನ ವೇಟರ್ ಗಳನ್ನು ಕರೆಯಲು ಬಳಸುತ್ತಿದ್ದರಂತೆ. ಇದು ಸರಿಯಲ್ಲ. ಈ ಬಗ್ಗೆ ನಮ್ಮದೊಂದು ಮೂಗರ್ಜಿ ಇದೆ. ಒಪ್ಪಿಸಿಕೊಳ್ಳಿ. ಪೋಲೀಸ್ ಪೇದೆಯನ್ನ ವೈಯೆನ್ಕೆ ಇದ್ದ ಕಡೆಗೇ ಕಳಿಸಿ ಸಾರ್.

ಮೊನ್ನೆ ಏನಾಯ್ತು ಗೊತ್ತಾ? ಅಂಕಿತ ಪ್ರಕಾಶನ ಅಂತ ಗಾಂಧಿ ಬಜಾರ್ ನಲ್ಲಿ ಒಂದು ಪುಸ್ತಕದ ಅಂಗಡಿ ಇದೆ, ಅವ್ರು ಜೋಗಿ ಅನ್ನೋ ಮಹಾತ್ಮನ ಮೂರು ಪುಸ್ತಕಾನ ಪ್ರಿಂಟ್ ಮಾಡ್ತೀವಿ ಅಂತ ಹೊರಟಿದ್ರು. ಅಂತ ಹೇಳಿ ಎರಡು ಸ್ಕ್ರಿಪ್ಟ್ ಕೈಗಿಟ್ಟು ಜೋಗಿ ಅನ್ನೋ ಮನುಷ್ಯ ಮಾಯಾ ಸಾರ್. ಮೂರು ಪುಸ್ತಕ ಬಿಡುಗಡೆ ಮಾಡ್ತೀವಿ ಅಂತ ಇನ್ವಿಟೇಶನ್ ಕಳಿಸಿ ಎರಡು ಪುಸ್ತಕ ಹೆಂಗೆ ಬಿಡುಗಡೆ ಮಾಡ್ತಾರೆ. ಇಡೀ ಬೆಂಗಳೂರು ಹುಡುಕಿದರೂ ಸಾಹೇಬರು ಪತ್ತೆ ಇಲ್ಲ. ಭಾನುವಾರ ಬಿಡುಗಡೆ ಆಗ್ಬೇಕು ಅಂದ್ರೆ ಶನಿವಾರ ಮಧ್ಯಾಹ್ನ ಇನ್ನೊಂದು ಸ್ಕ್ರಿಪ್ಟ್ ಕೊಟ್ಟಿದ್ದಾರೆ. ಇದು ನ್ಯಾಯಾನಾ ಸಾರ್, ತಗೊಳ್ಳಿ ಸಾರ್ ಆ ಬಗ್ಗೆನೂ ಒಂದು ಮೂಗರ್ಜಿ. ಆದ್ರೆ ಒಂದು ಪ್ರಾಬ್ಲಂ. ಅವರನ್ನ ಎಲ್ಲಿ ಅಂತ ಹುಡುಕ್ತೀರಾ? ಅವ್ರು ಸುವರ್ಣ ಚಾನಲ್ ನೋರಿಗೇ ಸಿಗಲ್ಲ, ಸೀರಿಯಲ್ ನವರಿಗೂ ಸಿಗಲ್ಲ, ಫಿಲಂ ಮಾಡೋರಿಗೂ ಬೇಕಾದಾಗ ಸಿಗಲ್ಲ, ಪಾರ್ಟೀಗೂ ಕರೆಕ್ಟ್ ಟೈಂ ಗೆ ಬರಲ್ಲ ಇನ್ನು ನಿಮಗೆ ಹೇಗೆ ಸಿಗ್ತಾರೆ..??

ಇದೆ ಪತ್ರಕರ್ತರಿಗೆ ಸಂಬಂಧಿಸಿದಂತೆ ಇನ್ನೊಂದು ವಿಷಯವನ್ನ ನಮ್ಮ ಮೂಗರ್ಜಿ ಸಂಘ ಪತ್ತೆ ಹಚ್ಚಿದೆ. ಪ್ರೆಸ್ ಕ್ಲಬ್ ನವರು ಪುಸ್ತಕ ಬರೆದುಕೊಡಿ ಅಂತ ಕೇಳಿದ್ರು, ಜೋಗಿ ಬರ್ಕೊಡ್ತೀನಿ ಅಂದ್ರು. ‘ರವಿ ಕಾಣದ್ದು’ ಅನ್ನೋ ಪುಸ್ತಕ. ಕಿ ರಂ ನಾಗರಾಜ್ ಅವ್ರು ಪುಸ್ತಕ ಬಿಡುಗಡೆ ಮಾಡಿ ಅದರ ಬಗ್ಗೆ ಮಾತಾಡೋಣ ಅಂತ ಪುಸ್ತಕ ಓಪನ್ ಮಾಡ್ತಾರಂತೆ ಅಲ್ಲಿದ್ದದ್ದು ಬರೀ ಬಿಳೀ ಹಾಳೆ ಮಾತ್ರ. ಪುಸ್ತಾಕಾನೆ ಪ್ರಿಂಟ್ ಆಗಿಲ್ಲ, ಬಿಡುಗಡೆ ಆಗಿಹೋಯ್ತು. ಇದು ಸರೀನಾ ಸಾರ್. ಇಂತದರ ಬಗ್ಗೆ ಬರದ್ರೆ ಮೂಗರ್ಜಿ ಅಂತ ಅವಮಾನ ಮಾಡ್ತಾರೆ. ಇನ್ನೊಂದು ಗುಟ್ಟೂ ಸಾರ್ ಅವರೂ ‘ವಿಜಯ ಕರ್ನಾಟಕ’ಕ್ಕೆ ಬರೀತಾರೆ. ಅಂದ್ರೆ ಅವರೂ ಸರ್ಕಾರಕ್ಕೆ ವಿರುದ್ಧ ಆಲ್ವಾ. ಬಿಡಬೇಡಿ ಸಾರ್.

ಸಾರ್, ಮೊನ್ನೆ ಏನಾಯ್ತು ಗೊತ್ತಾ. ನಮ್ಮ ಪ್ರಕಾಶ್ ರೈ, ಬಿ ಸುರೇಶ ಒಂದು ಫಿಲಂ ತೆಗೆದಿದ್ದಾರೆ. ‘ನಾನೂ.. ನನ್ನ ಕನಸೂ..’ ಅಂತ ಅದರ ಬಗ್ಗೆನೂ ಒಂದು ಮೂಗರ್ಜಿ ನೀವು ಒಪ್ಪಿಸಿಕೊಳ್ಳಬೇಕು. ಆ ಫಿಲಂನಲ್ಲಿ ಹೀರೋಯಿನ್ ಬಂದು ಅವರಪ್ಪನ ಹತ್ತಿರ ನಾನು ಲವ್ ಮಾಡ್ತಿದ್ದೀನಿ, ನನ್ನ ಮದ್ವೆ ಮಾಡ್ಸಿ ಅಂತ ಕೇಳಿಕೊಳ್ತಾಳೆ. ಆ ಅಪ್ಪ ಅಂದ್ರೆ.. ಪ್ರಕಾಶ್ ರೈ ಗೆ ಅದು ಇಷ್ಟ ಆಗಲ್ಲ.. ‘ಗುರ್’ ಅಂದ್ಬಿಡ್ತಾನೆ. ಅವಾಗ ನಮ್ಮ ಪಾಟೀಲ, ಅದೇ ತಿಪಟೂರು ಹುಡುಗ ಅಚ್ಯುತ ಕುಮಾರ ತಲೆ ಹಾಕಿ ‘ಲವ್ ಮಾಡ್ತಾ ಇರೋ ವಿಷ್ಯ ಬಂದು ನಿಮಗೆ ಹೇಳ್ದೀರಾ, ಯಡಿಯೂರಪ್ಪನವರಿಗಾ ಹೇಳ್ತಾರೆ’ ಅಂದುಬಿಟ್ಟ. ಇದು ಸರೀನಾ. ಇದೂ ಸರ್ಕಾರಕ್ಕೆ ವಿರುದ್ಧ ಆಲ್ವಾ? ಪೇಪರ್ ನಲ್ಲಿ ಸರ್ಕಾರದ ವಿರುದ್ಧ ಬರದ್ರೆ ತಪ್ಪು, ಫಿಲಂನಲ್ಲಿ ಆದ್ರೆ ಓ ಕೆ ಅಂತ ಇರಬಾರದು. ’ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ’ ಯಾಕಿರಬೇಕು. ಅದಕ್ಕೊಸ್ಕರವೇ ಎರಡು ಕಣ್ಣಿಗೂ ಸುಣ್ಣ ಹಚ್ಹ್ಚ್ಬಿಬಿಡಿ ಅಂತ ಬರೆದಿರೋ ಈ ಅರ್ಜಿ ಒಪ್ಪಿಸಿಕೊಳ್ಳಿ.

ಇನ್ನೊಂದು ಅರ್ಜಿ ಇದೆ. ಪ್ರಜಾವಾಣಿ ಸಹಾ ಸರ್ಕಾರಕ್ಕೆ ವಿರುದ್ಧವೇ ಅನ್ನೋದು ನಮ್ಮ ಸಂಶೋಧನೆ. .’ವಿಜಯ ಕರ್ನಾಟಕ’ದಲ್ಲಿ ಸರ್ಕಾರದ ವಿರುದ್ಧ ಬರೀತಾರೆ ಅಂತ ತಾನೇ ನಾವು ಮೂಗರ್ಜಿ ಬರೆದದ್ದು. ಆದ್ರೆ ‘ಪ್ರಜಾವಾಣಿ’ ನಲ್ಲಿ ನ್ಯೂಸ್ ಅಷ್ಟೇನೂ ಆಂಟಿ ಹಾಕಲ್ಲ ಬಿಡಿ. ಆದ್ರೆ ಮೊನ್ನೆ ಸಿ ಎಂ ಆಫೀಸ್ ನಲ್ಲಿ ಮೀಡಿಯಾ ನೋಡಿಕೊಳ್ಳುತ್ತಾರಲ್ಲಾ ಅವ್ರು ಹೇಳ್ತಿದ್ರು ಕಾರ್ಟೂನ್ ನಲ್ಲಿ ಸರ್ಕಾರಾನಾ ಝಾಡಿಸಿಬಿಡ್ತಾರೆ ಅಂತ. ಪಿ ಮಹಮದ್ ‘ಚಿನಕುರುಳಿ’ ಮೇಲೆ ಒಂದು ಕಣ್ಣಿರಲಿ ಸಾರ್. ಅವರು ನಮ್ಮ ಯಡಿಯೂರಪ್ಪನವರಿಗೆ ಒಂದು ಸಲ ಕಾರ್ಟೂನ್ ನಲ್ಲಿ ಸೀರೆ ಉಡಿಸಿಬಿಟ್ಟಿದ್ರಂತೆ. ಇದು ಸರೀನಾ ಸಾರ್?. ಜನಾರ್ಧನ ರೆಡ್ಡಿ ಗುರ್ ಅಂತಾ ಇರುವಾಗ ಹೀಗೆ ಸೀರೆ ಉಡುಸಿದ್ರೆ ಡೇಂಜರ್ ಅಲ್ಲವಾ? ಅದಕ್ಕೆ ಈ ಮೂಗರ್ಜಿ ಕೊಡ್ತಾ ಇದೀವಿ. ಎಲ್ಲಾ ಪೇಪರ್ ನಲ್ಲೂ ಸಿಕ್ಕಾಪಟ್ಟೆ ಚಿತ್ರ ಬರೆಯೋರು ಇದಾರೆ. ಎಲ್ಲರೂ ಸೀರೆ ಉಡುಸ್ತಾ ಕೂತುಬಿಟ್ರೆ ಸರ್ಕಾರದ ಕಥೆ ಹೇಳಿ. ಎಲ್ಲರ ಆಫೀಸ್ ಗೂ ನಿಮ್ಮ ಪಿ ಸಿ ನ ಕಳಿಸಿ ಸಾರ್. ರಿಪೋರ್ಟ್ ಸಬ್ಮಿಟ್ ಮಾಡೋವರ್ಗೂ ಬಿಡಬೇಡಿ ಸಾರ್.

ಸಾರ್, ಈಗ ಕೊಡ್ತಾ ಇರೋ ಮೂಗರ್ಜಿ ಇಂಗ್ಲಿಷ್ ಪೇಪರ್ ಬಗ್ಗೆ ಬಿ ಎಸ್ ಯಡಿಯೂರಪ್ಪ ಅಂತ ಹೆಸರು ಇಟ್ಕೊಂಡಿದಾರೆ ಲಕ್ಷಣವಾಗಿ. ಆದ್ರೆ ಇಂಗ್ಲಿಷ್ ಪೇಪರ್ ನವರಿಗೆ ಕನ್ನಡ ಚೀಫ್ ಮಿನಿಸ್ಟರ್ ಕಂಡ್ರೆ ಅಷ್ಟಕ್ಕಷ್ಟೇ. ಅದಕ್ಕೆ ಯಡ್ಡಿ, ಯಡ್ಡಿ ಅಂತ ಬರೀತಾರೆ. ಇದೂ ಸರ್ಕಾರದ ವಿರುದ್ಧ. ಅವರ ಮೇಲೂ ಕ್ರಮಾ ತಗೊಳ್ಳಿ. ಏನೋ ಸ್ವಲ್ಪ ಟೈಂ ಸರಿ ಇಲ್ಲ ಅಂತ ಯಡಿಯೂರಪ್ಪ ಅನ್ನೋದರ ಬದಲು ಯಡ್ಯೂರಪ್ಪ ಅಂತ ಹೆಸರು ಬದಲು ಮಾಡ್ಕೊಂಡ್ರು. ಆಮೇಲೆ ನನ್ನ ಹೆಸರು ಶಾಸ್ತ್ರಕ್ಕೆ ಯಡ್ಯೂರಪ್ಪ ಆದ್ರೆ ನೀವು ಬರಿಯೋವಾಗ ಯಡಿಯೂರಪ್ಪ ಅಂತಾನೇ ಬರೀರಿ ಅಂತ ಸಿ ಎಂ ಸಾಹೇಬರು ರಿಕ್ವೆಸ್ಟ್ ಮಾಡಿಕೊಂಡಿದ್ರು ಆದ್ರೆ ಇಲ್ಲೀವರ್ಗೂ ಚಾನಲ್ಗಳು, ಪೇಪರ್ನವರು ಅದಕ್ಕೆ ‘ಡೋಂಟ್ ಕೇರ್’. ಇದೂ ಸರ್ಕಾರದ ವಿರುದ್ಧ ಆಲ್ವಾ ಸಾರ್

ಮೊನ್ನೆ ಬ್ರಾಹ್ಮಣರ ಕಾಫೀ ಬಾರಲ್ಲಿ ಎರಡು ಇಡ್ಲಿ ತರಿಸ್ಕೊಂಡು ಪಕ್ಕದಲ್ಲಿರೋ ಕೇಶವ ಶಿಲ್ಪದಲ್ಲಿ ತಿಂದರಂತೆ ಸಾರ್. ಅವರು ದುಡ್ಡು, ಅವರ ಇಡ್ಲಿ..ಈ ಪೇಪರ್ ನವರಿಗೆ ಏನಾಗಬೇಕು. ಬ್ರಾಹ್ಮಣರ ಕಾಫೀ ಬಾರ್ ನಲ್ಲಿ ತಿಂದಿದ್ದು ಲಿಂಗಾಯತರಿಗೆ ಮಾಡಿದ ಅವಮಾನ ಅನ್ನೋ ಹಾಗೇ ಅಂಬೇಡ್ಕರ್ ರೋಡ್ ನಲ್ಲಿರೋ ಕೆನಡಾ ಪ್ರಭಾದಲ್ಲಿ ಮಾತಾಡಿಕೊಂಡರು ಸಾರ್. ಅವರ ಬಗ್ಗೆನೂ ಮೂಗರ್ಜಿ ಇದೆ. ಅವರೂ ಸರ್ಕಾರಕ್ಕೆ ವಿರುದ್ಧ ಸಾರ್. ಅವರನ್ನ ಹೆಂಗೆ ಸುಮ್ನೆ ಬಿಡ್ತೀರಾ…

ಮೊನ್ನೆ ಇನ್ನೊಂದು ಕಥೆ ಆಯ್ತು..ಮಣಿಯಾಣಿ ಅಂತ ಇದ್ದಾರೆ. ಅವರು ಮಗು ಸಮೇತ ಈ ಟಿ ವಿ ಆಫೀಸ್ ಗಾಡೀಲಿ ಜೋಗಿ ಪ್ರೋಗ್ರಾಮ್ ಗೇ ಬಂದಿದ್ರು. ಅದಕ್ಕೆ ಕ್ಯಾಮೆರಾ ಸೆಕ್ಷನ್ ನಿಂದ ಅಬ್ಜೆಕ್ಷನ್ ಬಂದಿದೆ. ಮಣಿಯಾಣಿ ಬೇಕಾದ್ರೆ ಗಾಡಿಯಲ್ಲಿ ಬರಬಹುದು. ಆದ್ರೆ ಆ ಪಾಪು ಹೆಂಗೆ ಬಂತು ಅಂತ. ಯಾರೋ ನಮ್ಮ ಮೂಗರ್ಜಿ ಸಂಘಕ್ಕೇ ಮೂಗರ್ಜಿ ಬರೆದಿದ್ದಾರೆ, ‘ಹಾಸನಕ್ಕೇ ಆಲೂಗಡ್ಡೆನಾ?’ ‘ಸೂರ್ಯಂಗೇ ಟಾರ್ಚಾ’ ಅಂದ್ರೆ ಇದೇ ನೋಡಿ ಸಾರ್.. ಏನಪ್ಪಾ ಅಂದ್ರೆ ಮಣಿಯಾಣಿ ಹಾಗೆ ಹೋಗಿದ್ದು ಸರ್ಕಾರಕ್ಕೆ ವಿರುದ್ಧ ಅಂತೆ ಸಾರ್. ಹೇಗೆ ಅಂತ ನಮಗೂ ಗೊತ್ತಾಗಿಲ್ಲ. ನಿಮ್ಮ ಕಿವಿಗೆ ದಾಟಿಸಿಬಿಟ್ರೆ ಸೇಫಲ್ವಾ ಅಂತ ನಿಮ್ಮ ಮಡಿಲಿಗೆ ಈ ಮೂಕರ್ಜಿ ಹಾಕಿದ್ದೀವಿ ಸಾರ್. ಅದನ್ನ ಹಾಲಲ್ಲಾದರೂ ಅದ್ದಿ, ನೀರಲ್ಲಾದರೂ ಅದ್ದಿ.

ಎಂ ಎನ್ ಚಂದ್ರೇಗೌಡ ಅಂತ ಒಬ್ಬರಿದ್ದಾರೆ. ಅವರು ಫಾರಿನ್ ಗೆ ಹೋಗಿ ಬಂದಿರೋದು, ಊಟಿಗೆ ಹೋಗಿದ್ದು, ವಂಡರ್ ಲಾಗೆ ಹೋಗಿ ಒದ್ದೆ ಆಗಿದ್ದು ಎಲ್ಲಾ ಅವರ ಬ್ಲಾಗ್ ನಲ್ಲಿ ಬರೀತಾರೆ ಸಾರ್. ಅದು ಸರ್ಕಾರದ ವಿರುದ್ಧ ಆಲ್ವಾ ಸಾರ್. ಸರ್ಕಾರಕ್ಕೆ ಸಾಕಷ್ಟು ಪ್ರಾಬ್ಲಂ ಇದೆ. ಮಲಗಿದರೆ ನಿದ್ದೆ ಬರ್ತಾ ಇಲ್ಲ. ಅಂತದ್ರಲ್ಲಿ ಆರಾಮವಾಗಿ ರೆಸಾರ್ಟು, ವಂಡರ್ ಲಾ ಅಂತ ಸುತ್ತೋದು ನಿಷಿದ್ಧ ಅಲ್ವ, ಸರ್ಕಾರದ ವಿರುದ್ಧ ಇದಾರೆ ಅನ್ನೋದಕ್ಕೆ ಇದಕ್ಕಿಂತ ಪ್ರೂಫ್ ಬೇಕಾ. ತಗೊಳ್ಳಿ ಆ ಬಗ್ಗೆ ಒಂದು ಮೂಗರ್ಜಿ.

ಹೈದ್ರಾಬಾದ್ನಲ್ಲಿ ಈ ಟಿ ವಿ ನಲ್ಲಿ ಒಬ್ಬ ಇದ್ದಾನೆ. ಕಲ್ಲೇಶಪ್ಪ ಅಂತ. ಏಕಪಾತ್ರಾಭಿನಯ ಮಾಡು ಅಂತ ಅವನ್ನ ಕರದ್ರೆ ಕೃಷ್ಣದೇವರಾಯನ ಬಗ್ಗೆ ಮಾಡಿದ ಸಾರ್. ಇದು ಮಿಶ್ಚೀಫ್ ಆಲ್ವಾ. ಸಿ ಎಂ ನ ಮುಂದೆ ಬಳ್ಳಾರಿ ಜ್ಞಾಪಿಸಿ ಬೇಜಾರು ಮಾಡಿದ ಹಾಗೇ ಆಲ್ವಾ ಸಾರ್. ಈ ಬಗ್ಗೆ ಅವರ ಡೆಸ್ಕ್ ನಿಂದಾನೇ ಮೂಗರ್ಜಿ ಬಂದಿದೆ ಸಾರ್. ಬಡಿದುಹಾಕಿ ಸರ್ ಅವನ್ನ. T V 9 ಸಹಾ ಸರ್ಕಾರದ ವಿರುದ್ಧ ಸಾರ್. ಯಾಕಂದ್ರೆ ಆ 9 ನೋಡಿ ಸಾರ್. ಅದು ಒಂದು ಥರಾ ಬಾಗಿಕೊಂಡಿದೆ ಆಲ್ವಾ ಸಾರ್. ಅವ್ರು ಸರ್ಕಾರ ಸಹಾ ಅಂಗೆ, ಎಲ್ಲರ ಮುಂದೆ ಬಾಗುತ್ತೆ ಅಂತ ಲೇವಡಿ ಮಾಡೋದಿಕ್ಕೆ ಆ 9 ಇಟ್ಕೊಂಡಿದ್ದಾರೆ ಸಾರ್ ಅವರು ಸರ್ಕಾರದ ಪರಾ ಇದ್ದಿದ್ರೆ 1, 7 ಅಂತ ಯಾವುದಾದರೂ ನೆಟ್ಟಗಿರೋ ನಂಬರ್ ಇಡುತ್ತಾ ಇದ್ದರು. ಆದ್ರೆ. ಈಗ ಸರ್ಕಾರ ವಿರೋಧಿ ಆಗಿದಾರೆ ಸಾರ್ ಬಿಡಬೇಡಿ ತಗೊಲ್ಲಿ ಮೂಗರ್ಜಿ..

‘ಮೀಡಿಯಾ ಮಿರ್ಚಿ’ ಅಂತ ಒಂದಿದೆ ಸಾರ್. ಜನ ಖರ್ಚಿಗಿಲ್ಲದೆ ಇದ್ರೂ ಮಿರ್ಚಿ ಬೇಕು ಅಂತಾರೆ ಸಾರ್. ಹತ್ತಿರ ಬನ್ನಿ ಸಾರ್. ಅವರ ಬಗ್ಗೆ ಬಂದಿರೋ ಮೂಕರ್ಜಿ ಸಿಕ್ಕಾಪಟ್ಟೆ ಸಾರ್. ಎಂ ಜಿ ರೋಡು, ಅಂಬೇಡ್ಕರ್ ರೋಡು, ಗೋವಿಂದಪ್ಪ ರೋಡೂ, ಎಲ್ರೂ ಬರದವ್ರೇ ಸಾರ್. ಮಿರ್ಚಿ ಅನ್ನೋದೇ ಸರ್ಕಾರ ವಿರೋಧಿ ಸಾರ್. ಕ್ಯಾಬಿನೆಟ್ ನಲ್ಲೇ ಎಷ್ಟೊಂದು ಜನ ಮಿರ್ಚಿ ಹಿಡಕೊಂಡು ನಿಂತಿದ್ದಾರೆ ಸಾರ್. ತಗೊಳ್ಳಿ ಸಾರ್ ಅರ್ಜಿ- ಮೂಗರ್ಜಿ..ಮುಗಿಸ್ಬಿಡಿ ಸಾರ್ ಮಿರ್ಚಿ. ತರಿಸಲಾ ಸಾರ್ ಜೊತೆಗೆ ಮಂಡಕ್ಕಿ ಮತ್ತೆ ಕೂತುಕೊಳ್ಳೋಕೆ ಒಂದು ಕುರ್ಚಿ…

ಇಂತಿ,

ಮೂಗರ್ಜಿ ಬಂಧು

ಬುಕ್ ಟಾಕ್

ಹೈದರಾಬಾದ್ ಕರ್ನಾಟಕದ ಬಗ್ಗೆ ಒಂದು ಸ್ಪಷ್ಟ ನೋಟ ಸಿಗಬೇಕೆಂದರೆ ‘ಮಾಧ್ಯಮ ಮಾರ್ಗದ ಮಿಂಚು’ ಓದಬೇಕು. ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಬರೆದ ಪತ್ರಿಕಾ ಲೇಖನಗಳ ಸಂಕಲನ ಇದು. ಕ್ರಾಂತಿ, ವಿಜಯ ಕರ್ನಾಟಕ, ಸುವರ್ಣ, ಸಮಯ ಚಾನಲ್ ಹೀಗೆ ಎರಡೂ ಮಾಧ್ಯಮದಲ್ಲಿ ಕೆಲಸ ಮಾಡಿರುವ ಮಹಿಪಾಲರೆಡ್ಡಿ ಈ ಕೃತಿಯಲ್ಲಿ ಹೈದರಾಬಾದ್ ಕರ್ನಾಟಕದ ವಿಮೋಚನೆ, ಅಲ್ಲಿನ ರಂಗಭೂಮಿ, ನಾಗಾವಿ, ಗುಲ್ಬರ್ಗಾದಲ್ಲಿನ ಗುಜರಾತ್, ಹಂಪಿಯ ವಿದ್ಯಾರಣ್ಯ, ನಾಲವಾರ ಮಠ, ಶಿಕ್ಷಣ ಎಲ್ಲದರ ಬಗ್ಗೆ ನೋಟ ಹರಿಸಿದ್ದಾರೆ. ಹೈದರಾಬಾದ್ ಕರ್ನಾಟಕದ ಬಗ್ಗೆ ಬಂದ ಪುಸ್ತಕಗಳು ತೀರಾ ಕಡಿಮೆ. ಮಹಿಪಾಲರೆಡ್ಡಿ ಅವರ ಈ ಕೃತಿ ಒಂದಷ್ಟು ಚರ್ಚೆಗೆ ಗ್ರಾಸವಾಗುವ ವಿಷಯಗಳನ್ನು ಮಂಡಿಸಿದೆ. ಸೇಡಂ ನ ರಾಷ್ಟ್ರಕೂಟ ಪುಸ್ತಕ ಮನೆ ಈ ಕೃತಿ ಪ್ರಕಟಿಸಿದೆ.

ಕೆಂಪ್ ಮೆಣಸಿನ್ಕಾಯ್

ಮಲ್ಯರು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಇದು ‘ಮಲ್ಯಾಧಾರಿತ ಮತದಾನ’ ಅಂತ ಪತ್ರಕರ್ತರೂ ನಿಟ್ಟುಸಿರು ಬಿಟ್ಟಿದ್ದಾರೆ. ಏಕೆಂದರೆ ಮಲ್ಯರ ಬ್ರಾಂಡ್ ಗಳು ಇಲ್ಲದೆ ಪ್ರೆಸ್ ಕ್ಲಬ್ ಇಲ್ಲ.

`ತುಂ ತುಂ' ಕವಿತೆ ವಿವರಿಸದೇ ತೆರಳಿದ ಕಿರಂ:ಶಶಿಕಲಾ ಪತ್ರ

ಶಶಿಕಲಾ ಚಂದ್ರಶೇಖರ್

ಕಿರಂ

ಪ್ರಿಯ ಎಡಿಟರ್ ಸಾಹೇಬರಿಗೆ,

ನಾನು ಕಿ.ರಂ ಅವರನ್ನು ನೋಡಿದ್ದು ಲಂಕೇಶ್ ಪತ್ರಿಕೆಯ ೧೭ನೇ ಹುಟ್ಟು ಹಬ್ಬದಂದು. ಅವರನ್ನೇ ಏಕೆ? ಲಂಕೇಶ್, ಶರ್ಮ, ಕಿ.ರಂ ಅವರನ್ನೆಲ್ಲಾ ಮೊದಲ ಮತ್ತು ಕಡೆಯ ಬಾರಿ ಕಂಡದ್ದು ಅಂದೇ. ಲಂಕೇಶ್ ಪತ್ರಿಕೆಗೆ ಬರೆಯುತ್ತಿದ್ದು ಹಾಗೂ ಲಂಕೇಶರಿಗೆ ಹತ್ತಿರದವರೊಲ್ಲೊಬ್ಬರ ಮತ್ತು ಅವರ ಹೆಂಡತಿಯ ಜೊತೆ ಕಾರ್ಯಕ್ರಮಕ್ಕೆ ಹೋಗಿದ್ದೆ. ನಿಜ ಹೇಳಬೇಕೆಂದರೆ ಅಷ್ಟೊಂದು ಜನ ಕವಿ/ಕವಯತ್ರಿ, ಲೇಖಕ/ಲೇಖಕಿಯರು, ಪತ್ರಕರ್ತ/ಕರ್ತೆಯರನ್ನು ಒಂದೇ ಸೂರಿನಡಿಯಲ್ಲಿ ಹತ್ತಿರದಿಂದ ನೋಡಿದ್ದೂ ಅದೇ ಮೊದಲು. ಅದಷ್ಟೇ ಮೊದಲಲ್ಲ, ಜೀವನದಲ್ಲಿ ಮೊದಲಬಾರಿಗೆ ಸೀರೆ, ಬಳೆ, ಚೂಡೀದಾರ್, ಜಡೆ ಹಾಕಿಕೊಂಡ ಹೆಂಗಸರು ಬಿಯರ್ ಕುಡಿಯುವುದನ್ನು ಕಂಡಿದ್ದೂ ಅದೇ ಮೊದಲು. ತುಂಬಾ ಹಿಂದೆ ನಮ್ಮ ರಸ್ತೆಗಳೆಲ್ಲಾ ದಾಟಿ ಓಣಿ ತುದಿಯಲ್ಲಿದ್ದ ಬೂಬಮ್ಮ ಕುಡಿದು ಬೀಡಿ ಸೇದುವುದನ್ನು ನೋಡಲು ಎಷ್ಟೋ ಸಂಜೆಗಳು ಸ್ನೇಹಿತರ ಗುಂಪಿನ ಜೊತೆ ಹೊಂಚುಹಾಕುತ್ತಿದ್ದ ದಿನಗಳಲ್ಲಿ ಅವಳು ಕುಡಿಯುವುದನ್ನು ನನಗೆ ನೋಡಲಾಗಿರಲಿಲ್ಲ. ಬೇರೆಲ್ಲಾ ಮಕ್ಕಳೂ ನಾವು ನೋಡಿದ್ದೇವೆ ಎಂದು ಹೇಳಿದ್ದ ಸಂಗತಿಯನ್ನು ನಂಬಿ ಅವಳು ಕುಡಿಯುತ್ತಾಳೆ ಎಂಬ ತೀರ್ಮಾನಕ್ಕೆ ಬಂದು, ದೊಗಲೇ ಶರ್ಟ್ ತೊಟ್ಟು ಸೀರೆಯ ಉಡುತ್ತಿದ್ದ ಬೂಬಮ್ಮನ ಬಾಯಲ್ಲಿ ಬೀಡಿ ಕೈಯಲ್ಲಿ ಬಾಟಲ್ ಕಲ್ಪಿಸಿಕೊಂಡು ಬಿಟ್ಟಿದ್ದೆ.

ಅಂತೂ ಬಿಯರ್ ಕುಡಿಯುತ್ತಿದ್ದ ಹೆಂಗಸರು ನನ್ನ ಬಾಯಿ ತೆರೆಸಿ ಕಣ್ಣುಗಳನ್ನು ಅಗಲಿಸಿದ್ದಂತೂ ಹೌದು. ಅದೇ ಗಲಿಬಿಲಿಯಲ್ಲಿ ಯಾರೊಂದಿಗೋ ಮಾತನಾಡುತ್ತಿದ್ದ ನನ್ನನ್ನು ಒಳ ಬರಬೇಕಂತೆ ಎಂದು ಕರೆದ ಹುಡುಗನೊಬ್ಬನ ಹಿಂದೆ ಹೋದಾಗ, ಅಲ್ಲಿ ಲಂಕೇಶ್ ಮತ್ತೆ ಹತ್ತಾರು ಮಂದಿ ಕುಳಿತಿದ್ದರು. ಆ ಕ್ಷಣ ನನಗೆ ನೆನಪಾದ ಪದ `ಒಡ್ಡೋಲಗ'. ನಾನು ಒಳಗಡಿಯಿಡುತ್ತಿದ್ದ ಆ ಗಳಿಗೆಯಲ್ಲೇ, ನಿಲ್ಲಲಾರದೆ ತೊದಲು ಮಾತುಗಳನ್ನಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಹೊರಗೆ ಕಳುಹಿಸುವ ಪ್ರಯತ್ನ ನಡೆಯುತ್ತಿತ್ತು. ನನ್ನನ್ನು ಒಳಗೆ ಬರ ಹೇಳಿದ ಹುಡುಗನೇ ಅವರನ್ನು ಅಗತ್ಯಕ್ಕಿಂತ ಬಲವಂತವಾಗಿ ಹೊರಗೆ ಓಯ್ದಿದ್ದ. ಮಧ್ಯದಲ್ಲಿ ಕುಳಿತಿದ್ದ ಲಂಕೇಶ್ ಮತ್ತು ಸುತ್ತ ಕುಳಿತವರ ಬಾಯಿಂದ ಒಂದೇ ಸಮಯಕ್ಕೆ ಮಾತುಗಳು, ಉದ್ಗಾರಗಳು ಕೇಳಿಬಂತು. ಮೊದಲೇ ಅಲ್ಲಿನ ಪರಿಸಕ್ಕೆ ಪರದೇಶಿಯಾಗಿದ್ದ ನಾನು ತಬ್ಬಿಬ್ಬಾಗಿ ನಿಂತಿದ್ದೆ. ಅವರ ಮಾತುಗಳು ಉದ್ಗಾರಗಳು ಅಸ್ಪಷ್ಟವಾಗಿದ್ದವು. ಸ್ಪರ ಇಲ್ಲಿಂದ ಬಂತು ಎಂದು ಆ ಕಡೆ ನೋಡಿದರೆ, ಅಲ್ಲಿ ಕೂತಿದ್ದವರು ಬಾಯಿ ತೆರೆದಿರಲಿಲ್ಲ, ಮತ್ತೆ ಈ ಕಡೆ ನೋಡುವ ಹೊತ್ತಿಗೆ, ಮತ್ತೊಂದು ಕಡೆಯಿಂದ ಸ್ವರ ಬಂದಂತೆ, ಸರಿ ಸ್ವರ ಬಂದಕಡೆ ಕತ್ತು ಹೊರಳಿಸಿದರೆ ಅವರು ಮಾತು ಮುಗಿಸಿ ಬಾಯಿ ಮುಚ್ಚಿಕೊಳ್ಳುತ್ತಿದ್ದರು. ಒಟ್ಟಾರೆ ಯಾರು ಏನು ಹೇಳಿದರು ಎಂದು ಗೊತ್ತೇ ಆಗಲಿಲ್ಲ. ಆಗ ಅವೆಲ್ಲಾ ಮುಖ್ಯ ಅಂತ ಕೂಡ ಅನ್ನಿಸಲಿಲ್ಲ-ಹೊರಗೆ ಹೋದವರ ಬಗ್ಗೆ ತುಸು ಅನುಕಂಪ ಬಿಟ್ಟು.

ಖಾಲಿ ಇದ್ದ ಖುರ್ಚಿಯಲ್ಲಿ ಕುಳಿತೆ. ಪಕ್ಕಕ್ಕಿದ್ದ ಶರ್ಮ ಅವರು ನನ್ನ ಗಲಿಬಿಲಿ ಅರ್ಥವಾದವರಂತೆ `ಅವರು ಕಿ.ರಂ ನಾಗರಾಜ್' ಎಂದರು. ನಾನು `ಓಹ್' ಎಂದು ತಲೆ ಮುಂದೂಗಿದೆ ಕಾರಣ ನನಗೆ ಅವರ ಪರಿಯಚವಿರಲಿಲ್ಲ. ಈ ದೇಶದಲ್ಲಿದ್ದು ಆಗಲೇ ೧೫ ವರ್ಷಗಳಾಗಿ ಹೋಗಿತ್ತು. ಆಶ್ಚರ್ಯ ಅಂದರೆ, ಹೊರನಾಡಿನ ಮ್ಯಾನರಿಸಂಗಳು ಎಷ್ಟು ಸುಲಭದಲ್ಲಿ ನಮ್ಮ ಹೊಕ್ಕುಬಿಡುತ್ತವೆ. ನನಗೆ ಸಂಬಂಧಿಸಿದಲ್ಲದ್ದನ್ನು ಕೆಣಕದೆ ಕೊಡವಿಕೊಂಡು ಹೋಗುವ ಪರಿ `ಓಃ' ಉದ್ಗಾರ! ನಾನೂ ಅದನ್ನೇ ಮಾಡಿದ್ದೆ. ಆದರೂ ಅಹಿತವಾದ ಆ ದೃಶ್ಯವೊಂದಕ್ಕೆ ನಾನು ಸಾಕ್ಷಿಯಾಗಿದ್ದೆ.

ಲಂಕೇಶ್ ಅವರು ಒಳಗೆ ಬರ ಹೇಳಿದ್ದು ನಿಜಕ್ಕೂ ನನ್ನನ್ನಲ್ಲ. ನನ್ನನ್ನು ಮತ್ತಾರೋ ಎಂದು ತಿಳಿದು. ನಾನು ಹಾಗು ಅಲ್ಲಿದ್ದ ಮತ್ತೊಬ್ಬ ಕವಿಯತ್ರಿ ಉಟ್ಟಿದ್ದ ಸೀರೆಯ ಬಣ್ಣ ಒಂದೇ ಆಗಿತ್ತು. ದೂರದಿಂದ ಅವರಷ್ಟೇ ಎತ್ತರ ಆಕಾರ ಇದ್ದ ನಾನೂ ಅವರಂತೆ ಲಂಕೇಶರ ಮಬ್ಬು ಕಣ್ಣಿಗೆ ಕಂಡಿದ್ದೆನೋ ಏನೋ. ಅವರಿಗೂ ನನ್ನಷ್ಟೇ ಪೆಚ್ಚಾಗಿರಬೇಕು. ಶರ್ಮ ಅವರು ಗೌರವದಿಂದ ಮಾತನಾಡಿದರು. ಎಲ್ಲಿದ್ದೀನಿ, ಏನು ಮಾಡ್ತೀನಿ, ಅಲ್ಲೂ ನನ್ನ ವೇಷಭೂಷಣ ಇದೇನಾ? ಎಂದೆಲ್ಲಾ ಮಾತಾಯಿತು. ನನ್ನ ಪೆಚ್ಚುತನಕ್ಕೆ ಲಂಕೇಶರ ಹತ್ತಿರ ಏನಾದರೂ ಮಾತನಾಡಬೇಕೆಂಬ ನನ್ನದೇ ಆದ ಒಳ ಒತ್ತಾಯಕ್ಕೆಂಬಂತೆ, ಅಮೆರಿಕಾಗೆ ಬಂದಿದ್ದ ಸೆಮಿ ಸೆಲಬ್ರೆಟಿಯೊಬ್ಬರ ಹೆಸರು ಹೇಳಿದೆ (ಲಂಕೇಶರಿಗೆ ನಾನು ಹೆಸರಿಸಿದ ವ್ಯಕ್ತಿಯ ಬಗ್ಗೆ ಅಹಿತವಾದ ನೆಂಟಿತ್ತು ಎಂದು ನನಗೆ ಗೊತ್ತಿರಲಿಲ್ಲ- ಸತ್ಯವಾಗಿಯೂ. ನನಗದು ತಿಳಿಯುವಷ್ಟರಲ್ಲಿ ಹಲವಾರು ವರ್ಷಗಳೇ ಕಳೆದಿತ್ತು.) ಅಷ್ಟೊಂದು ಜನ ಅಪರಿಚಿತರ ಮಧ್ಯ ಕುಳಿತ ನನಗೆ ಮುಜಗರ ಹೆಚ್ಚಾಯ್ತು. ಕೆಲವೇ ನಿಮಿಷಗಳಲ್ಲಿ ಬಾಗಿಲ ಬಳಿ ಕಾಣಿಸಿಕೊಂಡ ಗೆಳತಿ ನನ್ನನ್ನಲ್ಲಿಂದ ಪಾರು ಮಾಡಿದಳು. ಅವಳಿಗೂ ಆಶ್ಚರ್ಯ ಆ ಗುಂಪಿಗೆ ನಾನು ಹೇಗೆ ಸೇರಿದೆ ಎಂದು!Photo: Netraraju

ಕೀರಂ ಅವರನ್ನು ಆ ಸನ್ನಿವೇಶದಲ್ಲಿ ಕಂಡದ್ದು ನನ್ನ ಕೆಟ್ಟಗಳಿಗೆ. ನಿಮ್ಮೆಲ್ಲರಿಗೆ ಒದಗಿದ ಸುಂದರ ಅರ್ಥಪೂರ್ಣವಾದ ಅವರ ಒಡನಾಟದ ಗಳಿಗೆ ನನಗೆ ಒದಗಿ ಬರಲಿಲ್ಲ. ಈ ಮಾತು ಹೇಳಲು ಕಾರಣವಿದೆ. ಕೆಲ ತಿಂಗಳ ಕೆಳಗೆ ನಿಮ್ಮ ಜೊತೆಯಲ್ಲಿ ಮಾತನಾಡುವಾಗ- ಬೇಂದ್ರೆಯವರ, `ತುಂ ತುಂ ತುಂ' ಹಾಡನ್ನು ನಾನು ಪ್ರದರ್ಶಿಸಲಿದ್ದ ರೂಪಕ ಒಂದರಲ್ಲಿ ಬಳಸಿಕೊಳ್ಳುತ್ತಿರುವೆ, ಬೇಂದ್ರೆಯವರು ಕಲ್ಯಾಣ ಕ್ರಾಂತಿಯ ನಂತರ ಜಂಗಮನೊಬ್ಬ ಹಾಡಿದ ಸನ್ನಿವೇಶಕ್ಕೆ ಬರೆದಿದ್ದರಂತೆ ಎಂದು ನಾನಿಲ್ಲೋ ಕೇಳಿದ್ದನ್ನು ನಿಮ್ಮ ಮುಂದೆ ಹೇಳಿದೆ. ತಕ್ಷಣವೇ ಇದರ ಬಗ್ಗೆ ಗೊತ್ತಿರುವವರನ್ನು ಈಗಲೇ ಕೇಳೋಣ ಎಂದು ಕಿರಂ ಅವರನ್ನು ಫೋನಲ್ಲಿ ಮಾತನಾಡಿಸಿದಿರಿ.. ಕೀರಂ, ಅದು ಬಸವನ ಜೀವನದ ಮೂರು ಹಂತವನ್ನು ತಿಳಿಸುವ ಕವನ; ಎಂದರು. ಅಂತಹ ಮಹತ್ವದ ಕವಿತೆಯನ್ನು ವಿಸ್ತರಿಸಿ ಹೇಳುವವರೊಬ್ಬರು ಸಿಕ್ಕರಲ್ಲಾ ಎಂಬ ನನ್ನ ಸಂತೋಷ ಹೇಳತೀರದಾಗಿತ್ತು (ಇಷ್ಟರಲ್ಲಿ ನನಗವರ ಬಗ್ಗೆ ಚನ್ನಾಗಿ ಗೊತ್ತಿತ್ತು). ಅವರು ಫೋನ್ ನಲ್ಲಿ ಅದೇ ವೇಳೆಗೆ ವಿವರಿಸಿ ತಿಳಿಸಲು ಸಿದ್ಧರಿದ್ದರೋ ಇಲ್ಲವೋ ಗೊತ್ತಿಲ್ಲ, ಆದರೆ ನೀವು ಬಸವರಾಜು ನಾಳೆ ನಿಮ್ಮ ಮನೆಗೆ ಬಂದು ಬರೆದುಕೊಳ್ಳುತ್ತಾರೆ, ಎಂದಿದ್ದಕ್ಕೆ ಅವರು ಒಪ್ಪಿದ್ದರು. ಅವರು ಅಷ್ಟು ಹೇಳಿದ್ದನ್ನೇ ನಾನು ನನ್ನವರೆಲ್ಲರಿಗೂ ಹೇಳಿಕೊಂಡು ಸಂಭ್ರಮಿಸಿದೆ. ಅದಾದ ನಂತರ ಬಹಳಷ್ಟು ವಾರ ಬಸವರಾಜು ಅದರ ಬಗ್ಗೆ ಬರೆದಾರು ಎಂದು ಕೆಂಡಸಂಪಿಗೆಯ ಪುಟ ಹುಡುಕಿದ್ದೆ. ಜೊತೆಗೆ ನನ್ನವರೆಲ್ಲರೂ! ಬಸವರಾಜು ಬರೆದದ್ದು ಬೇರೆಯೇ ಬರಹಗಳು.

ಕಳೆದ ಕೆಲವೊಂದು ವಾರಗಳಿಂದ ನಾನೇ ಕೀರಂ ಅವರ ಪೋನ್ ನಂಬರ್ ತೆಗೆದುಕೊಂಡು ಕರೆಯಬೇಕು ಎಂಬ ಆಸೆ ಬಲವಾಗಿ ಕಾಡಿತ್ತು. ತಪ್ಪು ನನ್ನದು, ನಾನು ಕರೆಯಲೇ ಇಲ್ಲಾ. ಕೀರಂ ಅವರು `ತುಂ ತುಂ' ಕವಿತೆಯನ್ನು ವಿವರಿಸಿ ಹೇಳದೇ ಹೋದರಲ್ಲಾ, ಅವರಿಂದ ನಾನು ತಿಳಿಯದೇ ಹೋದೆನಲ್ಲಾ ಎಂಬ ಕೊರತೆ-ಕೊರಗು ಎರಡೂ ಜೊತೆ ಜೊತೆಯಲ್ಲಿ ಗಂಟಲು ಹಿಂಡುತ್ತಿವೆ.

ಗೆಳತಿಯೊಬ್ಬಳು ಹೇಳುತ್ತಿದ್ದಳು, ಅವರ ದೇಹವನ್ನು ತಂದಾಗ ಬಿಕ್ಕಿ ಬಿಕ್ಕಿ ಅತ್ತುಬಿಟ್ಟೆ. ಎಂತಹ ವ್ಯಕ್ತಿ. ಹತ್ತು ಗಂಟೆ ಸಂಶೋಧನೆ ಮಾಡುವುದೂ ಒಂದೇ, ಅವರ ಒಂದು ಗಂಟೆಯ ಮಾತು ಕೇಳುವುದು ಒಂದೇ... ಎಂದೆಲ್ಲಾ ಅವರ ಬಗ್ಗೆ ಹೇಳುತ್ತಿದ್ದಾಗ, ನಿಜಕ್ಕೂ ನಾಡು, ನುಡಿ, ನಾವು ಕಳೆದುಕೊಂಡಿದ್ದೇನು ಎಂದು ಮನವರಿಕೆಯಾಯ್ತು. ಅವರ ಮನೆಯಂಗಳದಲ್ಲಿ ನಾನಾಗಲಿ, ನಮ್ಮ ಮನೆಯಂಗಳದಲ್ಲಿ ಅವರೊಮ್ಮೆಯಾಗಲೀ ಬಂದು ಹೋಗಲಿಲ್ಲವಲ್ಲಾ ಅನ್ನಿಸುವಾಗ ಕಣ್ಣು ಒದ್ದೆಯಾಯ್ತು. ನೀವೂ ಅಂದಿದ್ದಿರಿ, ಕೀರಂ ಅವರನ್ನು ಏಕೆ ನೀವುಗಳು ಅಮೇರಿಕಾಕ್ಕೆ ಕರೆಸಿಕೊಳ್ಳಬಾರದು ಎಂದು. ನನ್ನಲ್ಲಿ ಉತ್ತರವಿರಲಿಲ್ಲ ಎಂದು ಒಪ್ಪಿಕೊಳ್ಳಲು ನಾಚಿಕೆ ಎನ್ನಿಸಿತ್ತು. ಆದರೆ ಜವರಾಯನಂದು ಅವರ ಬಳಿ ಬರಬಾರದಿತ್ತು. ಜಲ್ಲೆಂದು ಸುರಿದ ಬೆವರು, ಎದೆ ನೋವು-ಹೃದಯಾಘಾತದ ಲಕ್ಷಣ. ಜೊತೆಯಲ್ಲಿದ್ದವರು ಗಮನಿಸಬೇಕಿತ್ತು. ಈ ಸಾವು ನ್ಯಾಯವಲ್ಲ-ಅನ್ಯಾಯ.

ಸಾವಿನ ಸೂತಕದ ಮನದಲ್ಲಿ ನಿಮ್ಮಲ್ಲೊಂದು ಬೇಡಿಕೆ. ದಯವಿಟ್ಟು ಸ್ವಾರ್ಥಿ ಎನ್ನದಿರಿ. `ತುಂ ತುಂ' ಕವಿತೆಯನ್ನು ಅರ್ಥೈಸುವ ಯಾರೊಬ್ಬರನ್ನಾದರೂ ಹುಡುಕಿ ಕೊಡುವಿರಾ? ಕೀರಂ ಅವರ ಸಹಚರರೋ, ಸಹ ಧರ್ಮಿಗಳೋ, ಶಿಷ್ಯರೋ, ಬಂಧುಗಳೋ, ಓರಿಗೆಯವರೋ, ಸಹಮನೋಧರ್ಮಿಗಳೋ ಯಾರಾದರೂ ಈ ಕವಿತೆಯ ಬಗ್ಗೆ ಅವರಿಂದ ಅರಿತಿರಲಾರರಾ? ದಯವಿಟ್ಟು ಪ್ರಯತ್ನಿಸಿ.

ಇತಿ,
ಶಶಿಕಲಾ ಚಂದ್ರಶೇಖರ್.

ಮುಖ್ಯ ಮಂತ್ರಿಗಳಿಗೊಂದು ಬಹಿರಂಗ ಪತ್ರ…

ಮುಖ್ಯ ಮಂತ್ರಿಗಳಿಗೊಂದು ಬಹಿರಂಗ ಪತ್ರ…
20
AUG
2010
Leave a Comment
by avadhi in 1



-ಧನಂಜಯ ಕುಲಕರ್ಣಿ

ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ
ಮಾನ್ಯ ಮುಖ್ಯ ಮಂತ್ರಿಗಳೇ,
ನಿಮಗೆ ಈ ರೀತಿಯ ಪತ್ರಗಳು ಹೊಸದೇನಲ್ಲ. ನನ್ನಂತಹ ಅನೇಕ ಜನ ನಿಮಗೆ ಈಗಾಗಲೇ ಇಂತಹ ಪತ್ರಗಳನ್ನು ಬರೆದಿದ್ದಾರೆ ಮತ್ತು ನೀವು ಅವುಗಳನ್ನು ಅಷ್ಟೇ ಮೌನದಿಂದ ಸ್ವೀಕರಿಸಿದ್ದೀರಿ ಕೂಡ. ಅದಕ್ಕೆ ನಾವು “ಮೌನಂ ಸಮ್ಮತಿ ಲಕ್ಷಣಂ” ಎಂದು ಅರ್ಥೈಸಿ ಕೊಳ್ಳಬೇಕೆಂದರೆ ಅಂತಹ ಪತ್ರಗಳಿಗೆ ನಿಮ್ಮಿಂದ ದೊರೆತ ಉತ್ತರ ಮತ್ತು ಫಲಿತಾಂಶ ಮಾತ್ರ ಸೊನ್ನೆ. ಹೀಗಾಗಿ ಮತ್ತೆ ಮತ್ತೆ ಬರೆಯುವ ಅನಿವಾರ್ಯತೆ ಒದಗಿ ಬಂದಿದೆ.

ನೀವು ಅಧಿಕಾರಕ್ಕೆ ಬಂದ ಮೊದಲಿನ ಎರಡು ವರ್ಷಗಳನ್ನು ನಿಮ್ಮ ಪಕ್ಷದ ಆಂತರಿಕ ಬಂಡಾಯ, ಕಚ್ಚಾಟ, ಶಾಸಕರ ಖರೀದಿ ವ್ಯವಹಾರಗಳಲ್ಲೇ ಕಳೆದಿರಿ.



ನಿಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಮಾಧ್ಯಮಗಳನ್ನು ಗುರಿಯಾಗಿರಿಸಿಕೊಂಡಿರಿ, ಜನರ ಮುಂದೆ ಕಣ್ಣೀರು ಹಾಕಿದಿರಿ. ವಿರೋಧ ಪಕ್ಷದ ನಾಯಕರಾಗಿದ್ದಾಗ ಆಡಳಿತ ಪಕ್ಷದ ಜನರಿಗೆ ನಿಮ್ಮ ಮಾತುಗಳು ಬೆಂಕಿಯುಂಡೆಯಾಗುತ್ತಿದ್ದವು. ಆದರೆ ಈಗ ನಿಮ್ಮ ಮಾತುಗಳು ಹಾಗಿರಲಿ, ನೀವೇ ಬಾಲ ಸುಟ್ಟ ಬೆಂಕಿನಂತಾಗಿದ್ದೀರಿ. ಕೇವಲ ಅಧಿಕಾರವನ್ನುಳಿಸಿಕೊಳ್ಳಲು ಈ ರೀತಿಯ ಅಸಹಾಯಕತೆಯನ್ನು ಪ್ರದರ್ಶಿಸುವ ನಾಯಕರನ್ನು ನಾವೆಂದೂ ಕಂಡಿಲ್ಲ. ನಿಜಕ್ಕೂ ನಿಮ್ಮ ಪರಿಸ್ಥಿತಿಯನ್ನು ನೋಡಿ ನಮಗೆಲ್ಲ ಅಯ್ಯೋ ಅನ್ನಿಸುತ್ತಿದೆ.


ನಿಮ್ಮ ಸರಕಾರ ಎದುರಿಸುತ್ತಿರುವ ಸಮಸ್ಯೆಗಳಿಗಿಂತಲೂ ಅನೇಕ ಕ್ಲಿಷ್ಟ ಪರಿಸ್ಥಿತಿಯನ್ನು ಮತ್ತು ಕಠಿಣ ಸಮಸ್ಯೆಗಳನ್ನು ಹಿಂದಿನ ಬಹುತೇಕ ಸರಕಾರಗಳು ಎದುರಿಸುತ್ತಿದ್ದವು.

ಆದರೆ ಅವುಗಳನ್ನು ಬಗೆಹರಿಸುವಲ್ಲಿ ನಮಗೆಲ್ಲ ಕಾಣಸಿಗುತ್ತಿದ್ದ ರಾಜಕೀಯ ಮುತ್ಸದ್ದಿತನ, ಮೇಧಾವಿತನ ನಮಗೆ ನಿಮ್ಮಿಂದ ಸಿಗುತ್ತಿಲ್ಲ. ಒಂದು ಕಡೆಯಿಂದ ಗಣಿಧಣಿಗಳು ನಿಮಗೆ ಪ್ರತಿಪಕ್ಷದವರಂತೆ ವರ್ತಿಸುತ್ತಿದ್ದರೆ, ಇನ್ನು ಕೆಲವು ಸಚಿವರ ಬೇಜವಾಬ್ದಾರಿಯುತ ವರ್ತನೆಗಳಿಗೆ ಮುಖ್ಯಮಂತ್ರಿಯಾದ ನೀವು ಕ್ಷಮೆ ಕೇಳುತ್ತೀರಿ. ಆದರೆ ಬೇಜವಾಬ್ದಾರಿ ಪ್ರದರ್ಶಿಸಿದ ಮಂತ್ರಿಗಳ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ. ಇನ್ನು ನಮ್ಮ ರಾಜ್ಯದ ಗೃಹ ಮಂತ್ರಿಗಳಂತೂ ಬಿಡಿ.

ಅವರು ರಾಜ್ಯಕ್ಕೆ ಗೃಹ ಮಂತ್ರಿಗಳಾ ಅಥವಾ ತಮ್ಮ ಮನೆಗೆ ಗೃಹ ಮಂತ್ರಿಗಳಾ ಎನ್ನುವುದನ್ನು ಪರಾಮರ್ಶಿಸುವ ಅಗತ್ಯವಿದೆ. ಯಾವುದೇ ವಿಷಯವಾಗಲೀ, ಘಟನೆಯಾಗಲೀ ಅದಕ್ಕೆ ಅವರು ಮೊದಲು ನೀಡುವ ಸ್ಪಷ್ಟನೆಯೆಂದರೆ “ಇದು ನನ್ನ ಗಮನಕ್ಕೆ ಇನ್ನೂ ಬಂದಿಲ್ಲ. ಬಂದ ನಂತರ ಆ ಕುರಿತು ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತೇವೆ”. ಅಷ್ಟರಲ್ಲಿ ಎಲ್ಲ ಮುಗಿದು ಮತ್ತೊಂದು ಹಗರಣಕ್ಕೆ ನಿಮ್ಮ ಶಾಸಕರು, ಸಚಿವರು ಸಿದ್ಧತೆ ನಡೆಸಿರುತ್ತಾರೆ.

ನೀವು ವಿರೋಧ ಪಕ್ಷದ ಮುಖಂಡರಾಗಿದ್ದಾಗ ಎಷ್ಟು ಬಾರಿ ಆಡಳಿತ ಪಕ್ಷದವರನ್ನು ಸಂಕಷ್ಟಕ್ಕೆ ಸಿಲುಕಿಸಲು ಪಕ್ಷದ ಸಮಾವೇಶಗಳನ್ನು ನಡೆಸಿದ್ದಿರಿ? ಸ್ವಲ್ಪ ನೆನಪಿಸಿಕೊಳ್ಳಿ. ಈಗ ಕಳೆದ ಎರಡೂವರೆ ವರ್ಷಗಳಲ್ಲಿ ಅವೆಲ್ಲವನ್ನು ಬಡ್ಡಿ ಸಮೇತ ತೀರಿಸುವವರಂತೆ ಸಮಾವೇಶಗಳನ್ನು ನಡೆಸುತ್ತಿದ್ದೀರಿ. ವಿಧಾನಸೌಧ ಒಂದು ಪವಿತ್ರ ಸ್ಥಳವಾಗಿತ್ತು. ಅದನ್ನು ಅಸಂವಿಧಾನಿಕ ಪದಬಳಕೆಗಳಿಂದ ನಿಮ್ಮ ಶಾಸಕರು, ಸಚಿವರು ಮತ್ತು ವಿರೋಧ ಪಕ್ಷದವರು ಅಪವಿತ್ರಗೊಳಿಸಿಬಿಟ್ಟಿದ್ದೀರಿ.

ವಿರೋಧ ಪಕ್ಷದವರು ಅಂತಹ ಅಸಂವಿಧಾನಿಕ ಪದಗಳನ್ನು ಬಳಕೆ ಮಾಡಿದಾಗ ಸ್ವಲ್ಪ ತಾಳ್ಮೆ, ಸಹನೆಗಳನ್ನು ತೋರಿ, ನಿಮ್ಮ ಶಾಸಕರನ್ನು ನಿಯಂತ್ರಿಸಿ ನಿಮ್ಮ ಸ್ಥಾನಕ್ಕೆ ಮತ್ತು ಖುರ್ಚಿಗೆ ಒಂದು ಘನತೆಯನ್ನು ತಂದು ಕೊಡಬಹುದಾಗಿತ್ತು. ಆದರೆ ಅದ್ಯಾವುದನ್ನೂ ನೀವು ಮಾಡಲೇ ಇಲ್ಲ. ಬದಲಾಗಿ ವಿರೋಧ ಪಕ್ಷದವರು ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ ಅಡ್ಡಿ ಪಡಿಸುತ್ತಿದ್ದಾರೆ ಎಂಬ ಒಂದೇ ಸಾಲಿನ ಮಾತುಗಳನ್ನು ಪುನರಾವರ್ತಿಸುತ್ತ ಹೋದಿರಿ.

ಗಣಿಧಣಿಗಳು ವಿಧಾನಸೌಧದಲ್ಲಿ ಆರ್ಭಟಿಸುತ್ತಿರುವಾಗ ನೀವು ಮೌನರಾಗ ತಾಳಿದ್ದೇಕೆ. ಆ ಆರ್ಭಟದಿಂದಲೇ ಅಲ್ಲವೇ ನಮ್ಮ ನಾಡಿನ ಐದು ಕೋಟಿಜನರು ಕಳೆದ ಒಂದೂವರೆ ತಿಂಗಳಿನಿಂದ “ದೊಂಬರಾಟ” ವನ್ನು ನೋಡುತ್ತಿರುವುದು? ಬಳ್ಳಾರಿ – ಹೊಸಪೇಟೆ ನಡುವಿನ ಅಂತರ ಕೇವಲ ೬೨ ಕಿಲೋ ಮೀಟರ್. ಆದರೆ ಅದನ್ನು ಕ್ರಮಿಸಲು ಬರೊಬ್ಬರಿ ೩ ಗಂಟೆ ಬೇಕು. ಅಷ್ಟು ಅದ್ಭುತವಾಗಿವೆ ಅಲ್ಲಿನ ರಸ್ತೆಗಳು. ಇದು ನಿಮ್ಮ ಬಳ್ಳಾರಿ ಗಣಿಧಣಿಗಳು ಮಾಡಿದ ಅಭಿವೃದ್ಧಿ ಕಾರ್ಯವೆಂದು ಸಮರ್ಥಿಸಿಕೊಳ್ಳುತ್ತೀರಾ?

ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ. ನೆರೆ ಸಂತೃಸ್ತರಿಗೆ ಇನ್ನೂ ಸೂರು ಸಿಕ್ಕಿಲ್ಲ, ಸಣ್ಣ ಉದ್ದಿಮೆದಾರರಿಗೆ ಸರಿಯಾಗಿ ವಿದ್ಯುತ್ ಸಿಗದೇ ಕಂಗಾಲಾಗಿ ಬೀದಿಗೆ ಬರುತ್ತಿದ್ದಾರೆ. ರೈತರಿಗೆ ಬೀಜ ಮತ್ತು ಗೊಬ್ಬರ ಸರಿಯಾಗಿ ಸಿಗದೇ ಮತ್ತೆ ಬೀದಿಗಿಳಿದು ಹೋರಾಟ ಮಾಡುವ ಹಂತಕ್ಕೆ ತಲುಪಿದ್ದಾರೆ, ಶಾಲೆಗಳು ಆರಂಭವಾಗಿ ೩-೪ ತಿಂಗಳುಗಳು ಕಳೆದರೂ, ಪ್ರತಿ ವರ್ಷದಂತೆ ಈ ವರ್ಷವು ಸಹ ಪಠ್ಯ ಪುಸ್ತಕಗಳ ಸಮಸ್ಯೆ ಎಂದಿನಂತೆ ಇದೆ.

ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಮುಂದೆ ಇಂಜಿನೀಯರಿಂಗ್ ಓದಬೇಕೊ ಅಥವಾ ವೈದ್ಯಕೀಯ ಓದಬೇಕೋ ಎಂಬ ಗೊಂದಲದಲ್ಲಿದ್ದಾರೆ. ಹೀಗೆ ಸಮಸ್ಯೆಗಳ ಮಹಾಪೂರವೇ ನಮ್ಮ ಮುಂದಿರುವಾಗ ನೀವು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ವಾರಕ್ಕೆರಡು ಸಮಾವೇಶಗಳನ್ನು ನಡೆಸುವ ಅಗತ್ಯವಿದೆಯಾ?

ಅಚಾನಕ್ಕಾಗಿ ನಿಮಗೆ ಸಿಕ್ಕ ಈ ಅದ್ಭುತ ಅವಕಾಶವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಂಡು ರಾಜ್ಯಕ್ಕೆ ಮಾದರಿ ಮುಖ್ಯಮಂತ್ರಿಯಾಗಬಹುದಿತ್ತು. ಆದರೆ ಅದ್ಯಾವುದೂ ಆಗಲೇ ಇಲ್ಲ. ಸ್ವಲ್ಪ ಶಾಂತಚಿತ್ತರಾಗಿ ಕುಳಿತು ವಿಚಾರಮಾಡಿ. ನೀವು ಮಾಡಿದ್ದು, ಮಾಡುತ್ತಿರುವುದು ಸರಿಯೇ ಎಂದು. ಉತ್ತರ ನಿಮ್ಮಲ್ಲಿಯೇ ಇದೆ.




-ಧನಂಜಯ ಕುಲಕರ್ಣಿ

ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ
ಮಾನ್ಯ ಮುಖ್ಯ ಮಂತ್ರಿಗಳೇ,
ನಿಮಗೆ ಈ ರೀತಿಯ ಪತ್ರಗಳು ಹೊಸದೇನಲ್ಲ. ನನ್ನಂತಹ ಅನೇಕ ಜನ ನಿಮಗೆ ಈಗಾಗಲೇ ಇಂತಹ ಪತ್ರಗಳನ್ನು ಬರೆದಿದ್ದಾರೆ ಮತ್ತು ನೀವು ಅವುಗಳನ್ನು ಅಷ್ಟೇ ಮೌನದಿಂದ ಸ್ವೀಕರಿಸಿದ್ದೀರಿ ಕೂಡ. ಅದಕ್ಕೆ ನಾವು “ಮೌನಂ ಸಮ್ಮತಿ ಲಕ್ಷಣಂ” ಎಂದು ಅರ್ಥೈಸಿ ಕೊಳ್ಳಬೇಕೆಂದರೆ ಅಂತಹ ಪತ್ರಗಳಿಗೆ ನಿಮ್ಮಿಂದ ದೊರೆತ ಉತ್ತರ ಮತ್ತು ಫಲಿತಾಂಶ ಮಾತ್ರ ಸೊನ್ನೆ. ಹೀಗಾಗಿ ಮತ್ತೆ ಮತ್ತೆ ಬರೆಯುವ ಅನಿವಾರ್ಯತೆ ಒದಗಿ ಬಂದಿದೆ.

ನೀವು ಅಧಿಕಾರಕ್ಕೆ ಬಂದ ಮೊದಲಿನ ಎರಡು ವರ್ಷಗಳನ್ನು ನಿಮ್ಮ ಪಕ್ಷದ ಆಂತರಿಕ ಬಂಡಾಯ, ಕಚ್ಚಾಟ, ಶಾಸಕರ ಖರೀದಿ ವ್ಯವಹಾರಗಳಲ್ಲೇ ಕಳೆದಿರಿ.



ನಿಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಮಾಧ್ಯಮಗಳನ್ನು ಗುರಿಯಾಗಿರಿಸಿಕೊಂಡಿರಿ, ಜನರ ಮುಂದೆ ಕಣ್ಣೀರು ಹಾಕಿದಿರಿ. ವಿರೋಧ ಪಕ್ಷದ ನಾಯಕರಾಗಿದ್ದಾಗ ಆಡಳಿತ ಪಕ್ಷದ ಜನರಿಗೆ ನಿಮ್ಮ ಮಾತುಗಳು ಬೆಂಕಿಯುಂಡೆಯಾಗುತ್ತಿದ್ದವು. ಆದರೆ ಈಗ ನಿಮ್ಮ ಮಾತುಗಳು ಹಾಗಿರಲಿ, ನೀವೇ ಬಾಲ ಸುಟ್ಟ ಬೆಂಕಿನಂತಾಗಿದ್ದೀರಿ. ಕೇವಲ ಅಧಿಕಾರವನ್ನುಳಿಸಿಕೊಳ್ಳಲು ಈ ರೀತಿಯ ಅಸಹಾಯಕತೆಯನ್ನು ಪ್ರದರ್ಶಿಸುವ ನಾಯಕರನ್ನು ನಾವೆಂದೂ ಕಂಡಿಲ್ಲ. ನಿಜಕ್ಕೂ ನಿಮ್ಮ ಪರಿಸ್ಥಿತಿಯನ್ನು ನೋಡಿ ನಮಗೆಲ್ಲ ಅಯ್ಯೋ ಅನ್ನಿಸುತ್ತಿದೆ.


ನಿಮ್ಮ ಸರಕಾರ ಎದುರಿಸುತ್ತಿರುವ ಸಮಸ್ಯೆಗಳಿಗಿಂತಲೂ ಅನೇಕ ಕ್ಲಿಷ್ಟ ಪರಿಸ್ಥಿತಿಯನ್ನು ಮತ್ತು ಕಠಿಣ ಸಮಸ್ಯೆಗಳನ್ನು ಹಿಂದಿನ ಬಹುತೇಕ ಸರಕಾರಗಳು ಎದುರಿಸುತ್ತಿದ್ದವು.

ಆದರೆ ಅವುಗಳನ್ನು ಬಗೆಹರಿಸುವಲ್ಲಿ ನಮಗೆಲ್ಲ ಕಾಣಸಿಗುತ್ತಿದ್ದ ರಾಜಕೀಯ ಮುತ್ಸದ್ದಿತನ, ಮೇಧಾವಿತನ ನಮಗೆ ನಿಮ್ಮಿಂದ ಸಿಗುತ್ತಿಲ್ಲ. ಒಂದು ಕಡೆಯಿಂದ ಗಣಿಧಣಿಗಳು ನಿಮಗೆ ಪ್ರತಿಪಕ್ಷದವರಂತೆ ವರ್ತಿಸುತ್ತಿದ್ದರೆ, ಇನ್ನು ಕೆಲವು ಸಚಿವರ ಬೇಜವಾಬ್ದಾರಿಯುತ ವರ್ತನೆಗಳಿಗೆ ಮುಖ್ಯಮಂತ್ರಿಯಾದ ನೀವು ಕ್ಷಮೆ ಕೇಳುತ್ತೀರಿ. ಆದರೆ ಬೇಜವಾಬ್ದಾರಿ ಪ್ರದರ್ಶಿಸಿದ ಮಂತ್ರಿಗಳ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ. ಇನ್ನು ನಮ್ಮ ರಾಜ್ಯದ ಗೃಹ ಮಂತ್ರಿಗಳಂತೂ ಬಿಡಿ.

ಅವರು ರಾಜ್ಯಕ್ಕೆ ಗೃಹ ಮಂತ್ರಿಗಳಾ ಅಥವಾ ತಮ್ಮ ಮನೆಗೆ ಗೃಹ ಮಂತ್ರಿಗಳಾ ಎನ್ನುವುದನ್ನು ಪರಾಮರ್ಶಿಸುವ ಅಗತ್ಯವಿದೆ. ಯಾವುದೇ ವಿಷಯವಾಗಲೀ, ಘಟನೆಯಾಗಲೀ ಅದಕ್ಕೆ ಅವರು ಮೊದಲು ನೀಡುವ ಸ್ಪಷ್ಟನೆಯೆಂದರೆ “ಇದು ನನ್ನ ಗಮನಕ್ಕೆ ಇನ್ನೂ ಬಂದಿಲ್ಲ. ಬಂದ ನಂತರ ಆ ಕುರಿತು ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತೇವೆ”. ಅಷ್ಟರಲ್ಲಿ ಎಲ್ಲ ಮುಗಿದು ಮತ್ತೊಂದು ಹಗರಣಕ್ಕೆ ನಿಮ್ಮ ಶಾಸಕರು, ಸಚಿವರು ಸಿದ್ಧತೆ ನಡೆಸಿರುತ್ತಾರೆ.

ನೀವು ವಿರೋಧ ಪಕ್ಷದ ಮುಖಂಡರಾಗಿದ್ದಾಗ ಎಷ್ಟು ಬಾರಿ ಆಡಳಿತ ಪಕ್ಷದವರನ್ನು ಸಂಕಷ್ಟಕ್ಕೆ ಸಿಲುಕಿಸಲು ಪಕ್ಷದ ಸಮಾವೇಶಗಳನ್ನು ನಡೆಸಿದ್ದಿರಿ? ಸ್ವಲ್ಪ ನೆನಪಿಸಿಕೊಳ್ಳಿ. ಈಗ ಕಳೆದ ಎರಡೂವರೆ ವರ್ಷಗಳಲ್ಲಿ ಅವೆಲ್ಲವನ್ನು ಬಡ್ಡಿ ಸಮೇತ ತೀರಿಸುವವರಂತೆ ಸಮಾವೇಶಗಳನ್ನು ನಡೆಸುತ್ತಿದ್ದೀರಿ. ವಿಧಾನಸೌಧ ಒಂದು ಪವಿತ್ರ ಸ್ಥಳವಾಗಿತ್ತು. ಅದನ್ನು ಅಸಂವಿಧಾನಿಕ ಪದಬಳಕೆಗಳಿಂದ ನಿಮ್ಮ ಶಾಸಕರು, ಸಚಿವರು ಮತ್ತು ವಿರೋಧ ಪಕ್ಷದವರು ಅಪವಿತ್ರಗೊಳಿಸಿಬಿಟ್ಟಿದ್ದೀರಿ.

ವಿರೋಧ ಪಕ್ಷದವರು ಅಂತಹ ಅಸಂವಿಧಾನಿಕ ಪದಗಳನ್ನು ಬಳಕೆ ಮಾಡಿದಾಗ ಸ್ವಲ್ಪ ತಾಳ್ಮೆ, ಸಹನೆಗಳನ್ನು ತೋರಿ, ನಿಮ್ಮ ಶಾಸಕರನ್ನು ನಿಯಂತ್ರಿಸಿ ನಿಮ್ಮ ಸ್ಥಾನಕ್ಕೆ ಮತ್ತು ಖುರ್ಚಿಗೆ ಒಂದು ಘನತೆಯನ್ನು ತಂದು ಕೊಡಬಹುದಾಗಿತ್ತು. ಆದರೆ ಅದ್ಯಾವುದನ್ನೂ ನೀವು ಮಾಡಲೇ ಇಲ್ಲ. ಬದಲಾಗಿ ವಿರೋಧ ಪಕ್ಷದವರು ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ ಅಡ್ಡಿ ಪಡಿಸುತ್ತಿದ್ದಾರೆ ಎಂಬ ಒಂದೇ ಸಾಲಿನ ಮಾತುಗಳನ್ನು ಪುನರಾವರ್ತಿಸುತ್ತ ಹೋದಿರಿ.

ಗಣಿಧಣಿಗಳು ವಿಧಾನಸೌಧದಲ್ಲಿ ಆರ್ಭಟಿಸುತ್ತಿರುವಾಗ ನೀವು ಮೌನರಾಗ ತಾಳಿದ್ದೇಕೆ. ಆ ಆರ್ಭಟದಿಂದಲೇ ಅಲ್ಲವೇ ನಮ್ಮ ನಾಡಿನ ಐದು ಕೋಟಿಜನರು ಕಳೆದ ಒಂದೂವರೆ ತಿಂಗಳಿನಿಂದ “ದೊಂಬರಾಟ” ವನ್ನು ನೋಡುತ್ತಿರುವುದು? ಬಳ್ಳಾರಿ – ಹೊಸಪೇಟೆ ನಡುವಿನ ಅಂತರ ಕೇವಲ ೬೨ ಕಿಲೋ ಮೀಟರ್. ಆದರೆ ಅದನ್ನು ಕ್ರಮಿಸಲು ಬರೊಬ್ಬರಿ ೩ ಗಂಟೆ ಬೇಕು. ಅಷ್ಟು ಅದ್ಭುತವಾಗಿವೆ ಅಲ್ಲಿನ ರಸ್ತೆಗಳು. ಇದು ನಿಮ್ಮ ಬಳ್ಳಾರಿ ಗಣಿಧಣಿಗಳು ಮಾಡಿದ ಅಭಿವೃದ್ಧಿ ಕಾರ್ಯವೆಂದು ಸಮರ್ಥಿಸಿಕೊಳ್ಳುತ್ತೀರಾ?

ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ. ನೆರೆ ಸಂತೃಸ್ತರಿಗೆ ಇನ್ನೂ ಸೂರು ಸಿಕ್ಕಿಲ್ಲ, ಸಣ್ಣ ಉದ್ದಿಮೆದಾರರಿಗೆ ಸರಿಯಾಗಿ ವಿದ್ಯುತ್ ಸಿಗದೇ ಕಂಗಾಲಾಗಿ ಬೀದಿಗೆ ಬರುತ್ತಿದ್ದಾರೆ. ರೈತರಿಗೆ ಬೀಜ ಮತ್ತು ಗೊಬ್ಬರ ಸರಿಯಾಗಿ ಸಿಗದೇ ಮತ್ತೆ ಬೀದಿಗಿಳಿದು ಹೋರಾಟ ಮಾಡುವ ಹಂತಕ್ಕೆ ತಲುಪಿದ್ದಾರೆ, ಶಾಲೆಗಳು ಆರಂಭವಾಗಿ ೩-೪ ತಿಂಗಳುಗಳು ಕಳೆದರೂ, ಪ್ರತಿ ವರ್ಷದಂತೆ ಈ ವರ್ಷವು ಸಹ ಪಠ್ಯ ಪುಸ್ತಕಗಳ ಸಮಸ್ಯೆ ಎಂದಿನಂತೆ ಇದೆ.

ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಮುಂದೆ ಇಂಜಿನೀಯರಿಂಗ್ ಓದಬೇಕೊ ಅಥವಾ ವೈದ್ಯಕೀಯ ಓದಬೇಕೋ ಎಂಬ ಗೊಂದಲದಲ್ಲಿದ್ದಾರೆ. ಹೀಗೆ ಸಮಸ್ಯೆಗಳ ಮಹಾಪೂರವೇ ನಮ್ಮ ಮುಂದಿರುವಾಗ ನೀವು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ವಾರಕ್ಕೆರಡು ಸಮಾವೇಶಗಳನ್ನು ನಡೆಸುವ ಅಗತ್ಯವಿದೆಯಾ?

ಅಚಾನಕ್ಕಾಗಿ ನಿಮಗೆ ಸಿಕ್ಕ ಈ ಅದ್ಭುತ ಅವಕಾಶವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಂಡು ರಾಜ್ಯಕ್ಕೆ ಮಾದರಿ ಮುಖ್ಯಮಂತ್ರಿಯಾಗಬಹುದಿತ್ತು. ಆದರೆ ಅದ್ಯಾವುದೂ ಆಗಲೇ ಇಲ್ಲ. ಸ್ವಲ್ಪ ಶಾಂತಚಿತ್ತರಾಗಿ ಕುಳಿತು ವಿಚಾರಮಾಡಿ. ನೀವು ಮಾಡಿದ್ದು, ಮಾಡುತ್ತಿರುವುದು ಸರಿಯೇ ಎಂದು. ಉತ್ತರ ನಿಮ್ಮಲ್ಲಿಯೇ ಇದೆ.

ಜಯಶ್ರೀ ಕಾಲಂ:ಅದ್ಭುತ ನಟನೆಯ ಅಪರೂಪದ ಕಲಾವಿದೆ…

Media Mind

ಅತ್ಯಂತ ವಿಜೃಂಭಣೆಯಿಂದ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ಹಬ್ಬವೂ ಒಂದು. ಎಲ್ಲೆಲ್ಲೋ ಸಂಭ್ರಮ. ಹಣ, ಐಶ್ವರ್ಯ , ನೆಮ್ಮದಿ ,ಸಂತಸ,ಧೈರ್ಯ… ಎಲ್ಲದರ ಸಂಖೇತ ಈ ಹಬ್ಬ, ಈ ಎಲ್ಲದರ ಪ್ರತೀಕವೇ ಲಕ್ಷ್ಮಿ..ಸಮಸ್ತರಿಗೂ ತಾಯಿ ಲಕ್ಷ್ಮಿ ಸನ್ಮಂಗಳವನ್ನು ಉಂಟು ಮಾಡಲಿ.

ಶ್ರಿಮಂತರಿಗಿದು ವರಮಹಾಲಕ್ಷ್ಮಿ, ಬಡವರಿಗೆ worry ಮಹಾಲಕ್ಷ್ಮಿ ಎಂದು ಫೇಸ್ ಬುಕ್ಕಲ್ಲಿ ದಾಖಲಿಸಿದ್ದರು ಒಂದರ್ಥದಲ್ಲಿ ಅದೂ ಸರಿ ಅನ್ನಿ. ಅದರಲ್ಲೂ ನಿನ್ನೆ ನಡೆದ ಘಟನೆಯು ಅತ್ಯಂತ ನೋವು ಉಂಟು ಮಾಡಿದೆ. ಪಾಪ ಮೊದಲೇ ಭಿಕ್ಷುಕ ಜನ್ಮ ಅದರಲ್ಲೂ ಎಂತಹ ಸಾವು..! ದುಃಖ ಆಯ್ತು ನನಗೆ ವಾಹಿನಿಗಳಲ್ಲಿ ವೀಕ್ಷಿಸಿ. ಅನಾಯಾಸೇನ ಮರಣಂ ವಿನಃ ದೈನ್ಯೇನ ಜೀವನಂ ! ಎನ್ನುವ ನುಡಿ ಇದೆ, ಯಾರೇ ಆಗಲಿ ಬದುಕು ಆರಾವಾಗಿರಬೇಕು ಎನ್ನುವ ಆಶಯ ಹೊಂದಿರುತ್ತಾರೆ .

ಆದ್ರೆ ಹಿಂದೆ ಒಂದು ಜನ್ಮ ಅನ್ನುವುದು ಇತ್ತೋ ಇಲ್ಲವೋ ಆದರೆ ಈ ಜನ್ಮದಲ್ಲಿ ಭಿಕ್ಷುಕರಾಗಿ ಜೀವಿಸುವುದೇ ಅತ್ಯಂತ ಘೋರ ಅಂತಹುದರಲ್ಲಿ ಇಂತಹ ಸಾವು, ಅವರ ನಿಸ್ಸಹಾಯಕತೆ ಎಲ್ಲವೂ ಮನಕ್ಕೆ ಬೇಸರಗಳ ರಾಶಿ ತಂದಿಟ್ಟಿತು. ಚಂದನ, ಸುವರ್ಣ,ಈ ಟೀವಿ, ಉದಯ ಕಸ್ತೂರಿ, ಸಮಯ, ಟೀವಿ ನೈನ್,ಎಲ್ಲದರಲ್ಲೂ ಕವರೇಜ್ ಚೆನ್ನಾಗಿ ಮಾಡಿದ್ರು.

ತುಂಬಾ ದುಃಖ ಅನ್ನಿಸುತ್ತೆ ಇಂತಹ ವಿಷಯಗಳ ಕವರೇಜ್ ಬಗ್ಗೆ ಹೇಳೋಕೆ.. ಸಮಾಜ ಸೇವೆ ಮಾಡ್ತೀನಿ ಅಂತ ರಾಶಿ ರಾಶಿ ಹೇಳುವವರು ಒಂದು ಹನಿಯಷ್ಟು ಸಹಾಯ ಮಾಡಿದರೆ ಇಂತಹವರ ಬದುಕು ಸ್ವಲ್ಪಮಟ್ಟಿಗಾದರೂ ಸರಿಯಾಗುತ್ತದೆ. ಯಾರಿಗೂ ಬ್ಯಾಡ ಕಣ್ರೀ ಇಂತಹ ಲೈಫ್

ನಗು ಹಂಚುವ ಸಂಭ್ರಮ ತುಂಬಾ ಜನಕ್ಕೆ ಇದೆ. ಅದೊಂದು ದೈವದತ್ತ ವರ.ಹೆಚ್ಚಾಗಿ ಕೆಲವರ ಮುಖ ಉರಿಮೆಣಸಿಕಾಯಿ. ನಕ್ರೇನು ಗತಿನೋ ಅನ್ನುವ ಮನಸ್ಥಿತಿ .ಅದರಲ್ಲೂ ಬಣ್ಣ ಹಚ್ಚಿ ಬೆಳಕಿಗೆ ಒಮ್ಮೆ ಮುಖ ಒಡ್ಡಿ ಬಿಟ್ಟರಂತೂ ಆಯಿತು, ಅವರನ್ನು ಹಿಡಿಯೋಕೆ ಆಗಲ್ಲ.

ಮುಖದಲ್ಲಿ ನಗುವಿಗೆ ಕೊರತೆ ಶುರು ಆಗಿ ಬಿಡುತ್ತೆ. ಯಾರೋ ಪಾಪದ ಅಭಿಮಾನಿಗಳು ನನಗೆ ನಿಮ್ಮ ನಟನೆ ತುಂಬಾ ಇಷ್ಟ ಅಂತ ಹೇಳಿದ್ರೆ ಬ್ಯಾಡ ಉರಿಮುಖ ಮತ್ತೂ ಗಬ್ಬು ಆಗಿ ಬಿಡುತ್ತೆ..!ಆದ್ರೆ ನಾನು ವೀಕ್ಷಿಸಿದ ಕೆಲವು ಕಲಾವಿದೆಯರಲ್ಲಿ ಮಾಸದ ನಗು ಅಂದ್ರೆ ಸೀತಾ ಕೋಟೆದು! ನಗದೆ ಇದ್ರೆ ಏನಾಗಿ ಬಿಡುತ್ತೋ ಅನ್ನುವಷ್ಟು ನಗುವ ಹೆಣ್ಣುಮಗಳು ಇಷ್ಟ ಆಗುತ್ತೆ.

ಈಟೀವಿಯಲ್ಲಿ ಟಿ.ಎನ್.ಸೀತಾರಾಂ ಸರ್ ಅವರ ಸೀರಿಯಲ್ ಮುಕ್ತ ಮುಕ್ತ ದಲ್ಲಿ ಶಾಂಭವಿ ಅಕ್ಕನ ಪಾತ್ರಧಾರಿ ಸೀತಾ ನಟನೆ ಅದ್ಭುತ. ಅದೇ ರೀತಿ ಕಸ್ತೂರಿ ವಾಹಿನಿಯಲ್ಲಿ ಸುಪ್ನಾತಿ ಸುಬ್ಬಿಯಲ್ಲಿನ ನಟನೆಯೂ ಸಹ ಅತ್ಯದ್ಭುತ! ಮನಸ್ಸಿಗೆ ಹಿಡಿಸುವ ಅಪರೂಪದ ಕಲಾವಿದೆ.

ನಟನೆಯಲ್ಲಿ ಇರ ಬೇಕಾದ ಜೀವಂತಿಕೆ ಸೀತಾ ಹತ್ರ ಇದೆ. ಕೆಲವರು ತುಂಬಾ ಚೆನ್ನಾಗಿ ಮಾತಾಡ್ತಾರೆ , ಅತ್ಯಂತ ಚನ್ನಾಗಿ ನಟಿಸ್ತಾರೆ, ಆದರೆ ಅವರು ಮಾತಾಡುವಾಗ ಬಳಸುವ ಕೆಲವು ಪದಗಳು , ಅದರಲ್ಲಿ ಎಳೆಯುವ ರಾಗ ಕಿವಿಗೆ ತಂಪಾಗಲ್ಲ .ಬೇಡ ಬಿಡಿ ಅವರ ಹೆಸರುಗಳನ್ನೂ ಹೇಳೋದು ಹಬ್ಬದ ದಿನದಲ್ಲಿ ಆ ಹೆಣ್ಣು ಮಕ್ಕಳು ನೊಂದು ಕೊಂಡು ಬಿಡ್ತಾರೆ .

ಶಾಂಭವಿಯಂತೆ ಮನದಲ್ಲಿ ಸ್ಥಿರವಾಗಿ ನಿಲ್ಲುವ ಸುಬ್ಬಿಯ ಸ್ಟೈಲ್ ಅಮ್ಮ ಆಹಾ… ಸುಂದರ್ ! ಇಂಗ್ಲೀಷ್ ಭಾಷೆಯ ಮೋಹಿ ಅಮ್ಮ .. ಯಾವ ಅಕ್ಷರಕ್ಕೂ ಮೋಸ ಮಾಡದ ಹೆಣ್ಣು ಮಗಳು ಉದಾ :- ವಾಕಿಂಗ್ ಬದಲು ವಾಲ್ಕಿಂಗ್, ಪ್ರಮೋಶನ್ ಬದಲು ಪ್ರಮೋಟಿನ್ put ಪುಟ್ ಆದ್ರೆ but ಬುಟ್ ಅಲ್ವ ! ಎಂದು ಇಂಗ್ಲೀಷ್ ಭಾಷೆಗೆ ಸವಾಲು ಒಡ್ಡುವ ಜಾಣೆ .ಶಶಿಧರ್ ಕೋಟೆ,ಸೀತಾ ಕೋಟೆ ದಂಪತಿಗಳು ಪ್ರಾಯಶ: ನಗುವ ಕಾಂಟ್ರಾಕ್ಟ್ ತಗೊಂಡಿದ್ದಾರೆ ಅಂತ ಕಾಣುತ್ತೆ ,ಸೀತಾ ಭಾಷೆಯಲ್ಲೇ ಹೇಳುವುದಾದರೆ ತುಂಬಾ ಸ್ಪೆಕಿಯಲ್ ಅಲ್ಲಾ ಸ್ಪೆಷಲ್ ಪೇರ್ .ಇಂತಹ ಸುಂದರ ನಗೆ ನನ್ನ ಮನ ಸೆಳೆದಿರುವ ಮತ್ತೊಬ್ಬ ಕಲಾವಿದೆ ಸುಂದರಶ್ರೀ.

@@ ಸುವರ್ಣ ವಾಹಿನಿಯಲ್ಲಿ ಕ್ಲಾಸ್ ಮೇಟ್ ಸೀರಿಯಲ್ ತುಂಬಾ ಚೆನ್ನಾಗಿದೆ.

ಕೆಲವು ಎಪಿಸೋಡ್ ಗಳನ್ನು ವೀಕ್ಷಿಸಿದ್ದೇನೆ . ಹೆಚ್ಚಾಗಿ ಇಂತಹ ಕಥಾಹಂದರ ದೂರದರ್ಶನ್ ನಲ್ಲಿ ವೀಕ್ಷಿಸಿದ್ದೆ,ಆದರೆ ಈಗ ಕನ್ನಡ ವಾಹಿನಿಯಲ್ಲಿ ಕಾಣುವ ಸೌಭಾಗ್ಯ ವೀಕ್ಷಕರಿಗೆ ಸಿಕ್ಕಿದೆ. ಪ್ರತಿಯೊಬ್ಬ ಮಕ್ಕಳು ತುಂಬಾ ಚೆನ್ನಾಗಿ ನಟಿಸಿದ್ದಾರೆ, ಹಾಗೆನ್ನುವುದಕ್ಕಿಂತ ನಿರ್ದೇಶಕ ಶಿವಮಣಿ ಅವರ ಪ್ರತಿಭೆ ಬಳಸಿ ಕೊಂಡಿದ್ದಾರೆ. ಕ್ರಿಯೇಟಿವ್ ನಿರ್ದೇಶಕರು.

ಜೋಶ್ನಂತಹ ಸಿನಿಮಾ ಕೊಟ್ಟ ಶಿವಮಣಿ ಈಗ ಕ್ಲಾಸ್ ಮೇಟ್ ನೀಡ್ತಾ ಇದ್ದಾರೆ.ಹೆಚ್ಚಾಗಿ ಧಾರಾವಾಹಿಗಳು ಅಂತ ಅಂದ್ರೆ ದ್ವೇಷ ,ಅಸೂಯೆ, ಒಟ್ಟಾರೆ ಮನಸ್ಸಿಗೆ ಮುದ ನೀಡದೇ ಇರುವ ಸಂಗತಿಗಳನ್ನು ಒಳಗೊಂಡಿರುತ್ತದೆ. ಆದರೆ ಈ ಸೀರಿಯಲ್ ಎಲ್ಲರೂ ವೀಕ್ಷಿಸ ಬಹುದು.ಇತ್ತೀಚೆಗೆ ಎಲ್ಲಾ ಚಾನೆಲ್ಗಳಲ್ಲಿ ಹೊಸ ಹೊಸ ಸೀರಿಯಲ್ಗಳು ಶುರು ಆಗ್ತಾ ಇದೆ,ರಿಯಾಲಿಟಿ ಕಾಲ ಮುಗಿದು ಮತ್ತೊಮ್ಮೆ ಸೀರಿಯಲ್ ಕಾಲ ಆರಂಭ ಆಯ್ತಾ?? ಬಿಡಿ ಹಾಗಾದ್ರೆ ಇನ್ನಿದೆ ಕಥೆ ಗಂಡು ಮಕ್ಕಳಿಗೆ .

ಹಿಂದೆ ಈಟೀವಿ ವಾಹಿನಿಯಲ್ಲಿ ಸಿಕ್ಕಾಪಟ್ಟೆ ಒಳ್ಳೊಳ್ಳೆ ಕಾರ್ಯಕ್ರಮಗಳ ಸುರಿಮಳೆ ಆಯ್ತು. ಸಂಜೆ ಐದಕ್ಕೆ ಶುರು ಆದರೆ ಹನ್ನೊಂದರ ತನಕ ವೀಕ್ಷಿಸಲೇ ಬೇಕು ಅನ್ನುವಂತಹ ವಾತಾವರಣ ಕ್ರಿಯೇಟ್ ಆಗಿ ಬಿಡ್ತು. ಅಷ್ಟು ಕಾಲ ಮೊನಾಪಲಿ ಮಾಡಿದ್ದ ಉದಯ ವಾಹಿನಿ ಬೆಚ್ಚಿ ಬೆದರಿ ಬಿಡ್ತು. ವೀಕ್ಷಕರನ್ನು ತನ್ನತ್ತ ಸೆಳೆಯು, ಏನು ಚಿನ್ನ, ರನ್ನದ ಬಹುಮಾನ ಇಡ್ತು .

ಆ ಸಂದರ್ಭದಲ್ಲಿ ಹಾಸ್ಯ ಬರಹಗಾರ ಪ್ರಾಣೇಶ್ ಆಚಾರ್ ಅವರು ಕಾರ್ಯಕ್ರಮ ಒಂದರಲ್ಲಿ ಯಪ್ಪಾ ಎನ್ ಹೇಳ್ತೀರಿ ನಮ ಹೆಣ್ಣು ಮಕ್ಕಳು ಈಟಿವಿ ಮುಂದ ಕುಂತ್ರ ಆಟೀವಿಯಲ್ಲಿ ಕಡೀಗೆ ಹೆಣ ಉರುಳಿಸಿ ಬ್ಯಾರಿ ಕೆಲ್ಸಕ್ಕೆ ಹೋಗ್ತಾ ಇದ್ರು ಎಂದು ಹೇಳಿದ್ರು,ಆ ಬಳಿಕ ಅದನ್ನು ಅನೇಕ ಕಾರ್ಯಕ್ರಮಗಳಲ್ಲೂ ಹೇಳಿದ್ದರು ಅಷ್ಟೊಂದು ಅಡಿಕ್ಟ್ ಆಗಿದ್ರು ಮಹಿಳಾಮಣಿಗಳು.ಪುನಃ ಸೀರಿಯಲ್ ಯುಗ ಶುರು ಆಗುವಂತೆ ಕಾಣ್ತಾ ಇದೆ ಅಯ್ಯೋ ಸಿವ್ನೆ ಸೆಂಬುಲಿಂಗ ಗಂಡಸುಮಕ್ಕಳನ್ನು ನೀನೆ ಕಾಪಾಡಪ್ಪ

@@ ಶಾಲೆಯಿಂದ ಹಿಡಿದು ಯುನಿವರ್ಸಿಟಿ ತನಕ ನನಗೆ ಅನೇಕ ಗುರುಗಳು ಸಿಕ್ಕಿದ್ದಾರೆ.ಅವರ ತರಲೆ ಸ್ಟುಡೆಂಟ್.ಈಗ ನನಗೆ ಬ್ಲಾಗ್ ಲೋಕದಲ್ಲಿ ಒಬ್ಬರು ಮೇಷ್ಟ್ರು ಸಿಕ್ಕಿದ್ದಾರೆ, ಅವರು ಜಿನ್ ಮೋಹನ್ ಸ್ವಲ್ಪ ಸೋಮಾರಿತನ ಬಿದ್ರು ತಕ್ಷಣ ???? ಇರುವ ಮೇಲ್ ಬರುತ್ತೆ. ತಕ್ಷಣ ತಡಬಡಿಸಿ ಬರೀತೀನಿ ಛೇ ಅದಕ್ಕೆ ಮಾರ್ಕ್ಸ್ ಹಾಕೋದೆ ಇಲ್ಲ .. ಮೇಷ್ಟ್ರೇ ಎನ್ ಕಥೆ



ರೇಡಿಯೋ ಸದ್ದು..

101 .3 ಆರ್ಜೆ ರೇವತಿ ಕಾರ್ಯಕ್ರಮ ಮೊನ್ನೆ ಕೇಳ್ತಾ ಇದ್ದೆ. ಆಕಾಶವಾಣಿ ಬಾನುಲಿ ಕೇಂದ್ರಗಳ ಉದ್ಘೋಶಕಿಯರ ಬಗ್ಗೆ ವಿಶೇಷವಾಗಿ ಹೇಳುವ ಹಾಗೆ ಇಲ್ಲ, ಅಷ್ಟೊಂದು ಅದ್ಭುತವಾದ ಭಾಷೆಯ ಬಳಕೆ. ತುಂಬಾ ಮಂದಗಾಮಿಯರಾಗಿ ಮನ ಸೆಳೆಯುತ್ತಾರೆ.ಅವರು ಬಳಕೆ ಮಾಡುವ ಪದಗಳನ್ನು ಗಮನಿಸ್ತಾ ಇರ್ತೀನಿ ಸಖತ್ ! ಈಗ ಈ ಹಾಡನ್ನು ಪ್ರಸಾರಿಸಿ ಎಂದು ಸಂದೇಶ ಕಳುಹಿಸಿರುವವರು….:-) ಸರ್ವಂ ಕನ್ನಡಮಯ೦.ಎಷ್ಟೊಂದು ಸಹನೆಯಿಂದ ರಾಶಿ ರಾಶಿ ಸಂದೇಶಗಳನ್ನು ಓದ್ತಾರೆ ಅದೇ ನನಗೆ ವಿಸ್ಮಯ ತರಿಸೋದು .

91 .1 ಆರ್ಜೆ ಸ್ಮೈಲಿ ಶ್ವೇತ ಹೆಸರಿಗೆ ತಕ್ಕಂತೆ ಸುಂದರ ಧ್ವನಿಯ ಹೆಣ್ಣುಮಗಳು.ಆಕೆಯ ಅನೇಕ ಟೀವಿ ಕಾರ್ಯಕ್ರಮಗಳನ್ನು ವೀಕ್ಷಿಸಿದ್ದೇನೆ ತುಂಬಾ ಚೆನ್ನಾಗಿ ಸಂದರ್ಶನ ನಡೆಸಿಕೊಡುವ ಕಲೆಗಾರಿಕೆ ಶ್ವೇತಳಲ್ಲಿದೆ.ಈಕೆಯೂ ಅಷ್ಟೆ ನಗದೆ ಇದ್ರೆ ಏನಾಗಿ ಬಿಡುತ್ತೋ ಎನ್ನುವವರ ಸಾಲಿಗೆ ಸೇರಿದ್ದಾರೆ..!ಪ್ರತಿದಿನ ಚೌಚೌ ಬಾತ್ ಹೆಸರಿನ ಕಾರ್ಯಕ್ರಮ ಶ್ವೇತ ನಡೆಸಿ ಕೊಡೋದು.

Friday, August 20, 2010

ಚಿತ್ರ ವಿಮರ್ಶೆ: ನಮ್ ಏರಿಯಾಲ್ ಒಂದಿನ ಭಾನುವಾರ, ಜುಲೈ 25, 2010, 15:02[IST] * ದೇವಶೆಟ್ಟಿ ಮಹೇಶ್ Save to Oneindia Bookmarks SAVE E-mail this to your friend EMAIL

ಚಿತ್ರ ವಿಮರ್ಶೆ: ನಮ್ ಏರಿಯಾಲ್ ಒಂದಿನ
ಭಾನುವಾರ, ಜುಲೈ 25, 2010, 15:02[IST]
* ದೇವಶೆಟ್ಟಿ ಮಹೇಶ್
Save to Oneindia Bookmarks SAVE
E-mail this to your friend EMAIL
ORKUT
Print this Page PRINT
Nam Areali Ondhina review
ಚಿತ್ರದ ಟ್ರೈಲರ್ | ರೋಮ್ಯಾಂಟಿಕ್ ಜೋಡಿ | ಅನುಷ್ಕಾ ಶೆಟ್ಟಿ | ನಯನತಾರಾ | ಶ್ರೇಯಾ
Vote this article
Up (12)
Down (0)


ಇದು ಕಿತ್ತೋಗಿರೋ ಲವ್ ಸ್ಟೋರಿ! ಹೆಸರೇ ಹೇಳುವಂತೇ ಪಕ್ಕಾ ಸ್ಲಮ್ಮೇರಿಯಾ ಕತೆ.ನಾಯಕ ಒಂದಷ್ಟು ಕಿತ್ತೋಗಿರೋ ಡೈಲಾಗ್ ಹೊಡೆಯುತ್ತಲೇ ಇರ್ತಾನೆ. ಹೇಳ್ತಾ ಹೇಳ್ತಾ ಒಂದು ಹುಡುಗಿಗೆ ಮನಸು ಕೊಡುತ್ತಾನೆ. ಕೊಟ್ಟ ಮೇಲೆ ಏನಾಗುತ್ತದೆ?ಉತ್ತರಕ್ಕೆ ಈ ಚಿತ್ರವನ್ನು ನೋಡಬೇಕು.

ನಿರ್ದೇಶಕ ಅರವಿಂದ್ ಕೌಶಿಕ್ ಹಾಡು , ಸಂಭಾಷಣೆ ಹಾಗೂ ಛಾಯಾಗ್ರಹಣಕ್ಕೆ ಹೆಚ್ಚು ಒತ್ತುಕೊಟ್ಟಿದ್ದಾರೆ. ಮೊದಲಾರ್ಧ ಪೂರ್ತಿ ಡೈಲಾಗ್ ಹಂಗಾಮ. ಹೋಗ್ತಾ ಹೋಗ್ತಾ ಸೀರಿಯಸ್ ಆಗುತ್ತದೆ. ಹಳೇ ಜಗತ್ತನ್ನೇ ಹೊಸ ಗಮ್ಮತ್ತಿನಲ್ಲಿ ನಿಮ್ಮ ಮುಂದಿಟ್ಟು ಮೋಡಿ ಮಾಡುತ್ತಾರೆ.

ಅನಿಷ್ ಹಾಗೂ ಮೇಘನಾ ಕತೆ ಹಾಗೂ ಪಾತ್ರಕ್ಕೆ ಅಚ್ಚರಿ ಮೂಡಿಸುವಂತೆ ಹೊಂದಿಕೊಂಡಿದ್ದಾರೆ. ಈತ ಸ್ಲಂ, ಆಕೆ ಘಂ ಘಂ.ಇಬ್ಬರಿಗೂ ಅಜಗಜಾಂತರ ಎನಿಸಿದರೂ ಅದು ಹಾಗೇ ಇದ್ದದ್ದೇ ಚೆಂದಕ್ಕಿಂತ ಚೆಂದ...ಕುರಿ ಪ್ರತಾಪ್ ಕುಡುಕನಾಗಿ ಕನವರಿಸುತ್ತಾರೆ. ಒಂದಷ್ಟು ಹೊತ್ತು ಮಜಾ ಕೊಡುತ್ತಾರೆ. ಮಂಡ್ಯರಮೇಶ್ ನೆನಪಿನಲ್ಲಿ ಉಳಿಯುತ್ತಾರೆ.

ಅರ್ಜುನ್ ಸಂಗೀತ ಹಾಗೂ ಅಶೋಕ್ ಕಶ್ಯಪ್ ಛಾಯಾಗ್ರಹಣ ಇಡೀ ಚಿತ್ರದ ಹೈಲೈಟ್. ಒಂದಷ್ಟು ದೃಶ್ಯಗಳು ಕೆನ್ನೆಗೆ ಮುತ್ತಿಟ್ಟರೆ, ಸಂಗೀತ ಅದೇ ಕೆನ್ನೆಯನ್ನು ಸವರುತ್ತದೆ. ಒಟ್ಟಾರೆ ಇಡೀ ಚಿತ್ರ ಬೇರೊಂದು ಅನುಭವಕ್ಕೆ ನಿಮ್ಮನ್ನು ಪಕ್ಕಾಗಿಸುತ್ತದೆ. ಅದೇನೆಂದು ತಿಳಿಯಲು ನೀವೊಮ್ಮೆ ಥೇಟರ್‌ಗೆ ಹೋಗಲೇಬೇಕು.

ಕೌಶಿಕ್ ಮೊದಲ ಚಿತ್ರದಲ್ಲೇ ಜನರಿಗೆ ಹತ್ತಿರವಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಹುಡುಗ ಕೈಗೆ ಸಿಗುವುದು ಕಷ್ಟ...ಯಾಕೆಂದರೆ ಆತನಲ್ಲಿ ಅಂಥದ್ದೊಂದು ಸಿನಿಮಾ ಶ್ರದ್ಧೆ , ನಿಯತ್ತು ಮತ್ತು ಹುಚ್ಚಿದೆ...! (ಸ್ನೇಹಸೇತು: ವಿಜಯ ಕರ್ನಾಟಕ)
ಭಾನುವಾರ, ಜುಲೈ 25, 2010, 15:02[IST]
* ದೇವಶೆಟ್ಟಿ ಮಹೇಶ್

ಇದು ಕಿತ್ತೋಗಿರೋ ಲವ್ ಸ್ಟೋರಿ! ಹೆಸರೇ ಹೇಳುವಂತೇ ಪಕ್ಕಾ ಸ್ಲಮ್ಮೇರಿಯಾ ಕತೆ.ನಾಯಕ ಒಂದಷ್ಟು ಕಿತ್ತೋಗಿರೋ ಡೈಲಾಗ್ ಹೊಡೆಯುತ್ತಲೇ ಇರ್ತಾನೆ. ಹೇಳ್ತಾ ಹೇಳ್ತಾ ಒಂದು ಹುಡುಗಿಗೆ ಮನಸು ಕೊಡುತ್ತಾನೆ. ಕೊಟ್ಟ ಮೇಲೆ ಏನಾಗುತ್ತದೆ?ಉತ್ತರಕ್ಕೆ ಈ ಚಿತ್ರವನ್ನು ನೋಡಬೇಕು.

ನಿರ್ದೇಶಕ ಅರವಿಂದ್ ಕೌಶಿಕ್ ಹಾಡು , ಸಂಭಾಷಣೆ ಹಾಗೂ ಛಾಯಾಗ್ರಹಣಕ್ಕೆ ಹೆಚ್ಚು ಒತ್ತುಕೊಟ್ಟಿದ್ದಾರೆ. ಮೊದಲಾರ್ಧ ಪೂರ್ತಿ ಡೈಲಾಗ್ ಹಂಗಾಮ. ಹೋಗ್ತಾ ಹೋಗ್ತಾ ಸೀರಿಯಸ್ ಆಗುತ್ತದೆ. ಹಳೇ ಜಗತ್ತನ್ನೇ ಹೊಸ ಗಮ್ಮತ್ತಿನಲ್ಲಿ ನಿಮ್ಮ ಮುಂದಿಟ್ಟು ಮೋಡಿ ಮಾಡುತ್ತಾರೆ.

ಅನಿಷ್ ಹಾಗೂ ಮೇಘನಾ ಕತೆ ಹಾಗೂ ಪಾತ್ರಕ್ಕೆ ಅಚ್ಚರಿ ಮೂಡಿಸುವಂತೆ ಹೊಂದಿಕೊಂಡಿದ್ದಾರೆ. ಈತ ಸ್ಲಂ, ಆಕೆ ಘಂ ಘಂ.ಇಬ್ಬರಿಗೂ ಅಜಗಜಾಂತರ ಎನಿಸಿದರೂ ಅದು ಹಾಗೇ ಇದ್ದದ್ದೇ ಚೆಂದಕ್ಕಿಂತ ಚೆಂದ...ಕುರಿ ಪ್ರತಾಪ್ ಕುಡುಕನಾಗಿ ಕನವರಿಸುತ್ತಾರೆ. ಒಂದಷ್ಟು ಹೊತ್ತು ಮಜಾ ಕೊಡುತ್ತಾರೆ. ಮಂಡ್ಯರಮೇಶ್ ನೆನಪಿನಲ್ಲಿ ಉಳಿಯುತ್ತಾರೆ.

ಅರ್ಜುನ್ ಸಂಗೀತ ಹಾಗೂ ಅಶೋಕ್ ಕಶ್ಯಪ್ ಛಾಯಾಗ್ರಹಣ ಇಡೀ ಚಿತ್ರದ ಹೈಲೈಟ್. ಒಂದಷ್ಟು ದೃಶ್ಯಗಳು ಕೆನ್ನೆಗೆ ಮುತ್ತಿಟ್ಟರೆ, ಸಂಗೀತ ಅದೇ ಕೆನ್ನೆಯನ್ನು ಸವರುತ್ತದೆ. ಒಟ್ಟಾರೆ ಇಡೀ ಚಿತ್ರ ಬೇರೊಂದು ಅನುಭವಕ್ಕೆ ನಿಮ್ಮನ್ನು ಪಕ್ಕಾಗಿಸುತ್ತದೆ. ಅದೇನೆಂದು ತಿಳಿಯಲು ನೀವೊಮ್ಮೆ ಥೇಟರ್‌ಗೆ ಹೋಗಲೇಬೇಕು.

ಕೌಶಿಕ್ ಮೊದಲ ಚಿತ್ರದಲ್ಲೇ ಜನರಿಗೆ ಹತ್ತಿರವಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಹುಡುಗ ಕೈಗೆ ಸಿಗುವುದು ಕಷ್ಟ...ಯಾಕೆಂದರೆ ಆತನಲ್ಲಿ ಅಂಥದ್ದೊಂದು ಸಿನಿಮಾ ಶ್ರದ್ಧೆ , ನಿಯತ್ತು ಮತ್ತು ಹುಚ್ಚಿದೆ...! (ಸ್ನೇಹಸೇತು: ವಿಜಯ ಕರ್ನಾಟಕ)

“ಚೆಲುವೆಯೇ ನಿನ್ನ ನೋಡಲು”

“ಚೆಲುವೆಯೇ ನಿನ್ನ ನೋಡಲು” …… ಆಗಲಿದೆಯೇ ಕನ್ನಡ ಚಿತ್ರರ೦ಗದಲ್ಲಿ ಹೊಸ ಮೈಲುಗಲ್ಲು ? ಕೊನೆಗೂ ನಾವು ನೀವೆಲ್ಲಾ ಕಾತುರದಿ೦ದ ಕಾಯುತ್ತಿದ್ದ ಚಿತ್ರ , ಕನ್ನಡದಲ್ಲೇ ಅತ್ಯ೦ತ ಅದ್ದೂರಿ ಬಜೆಟ್ ನಲ್ಲಿ ತಯಾರಾಗಿ, ಜಗತ್ತಿನಲ್ಲಿ ಏಳು ಅದ್ಭುತಗಳಲ್ಲಿ ಚಿತ್ರಿತವಾದ ನಮ್ಮ ನೆಚ್ಚಿನ ನಟ ಶಿವರಾಜ್ ಕುಮಾರ ಅಭಿನಯದ “ ಚೆಲುವೆಯೇ ನಿನ್ನ ನೋಡಲು “ ತೆರೆಕಾಣಲು ಸಿದ್ದ ವಾಗಿದೆ. ಮು೦ದಿನ ತಿ೦ಗಳು 6-08-10 ರ೦ದು ಕರ್ನಾಟಕದ ಒಟ್ಟು ೧೩೦ ಕೇ೦ದ್ರಗಳಲ್ಲಿ ಏಕ ಕಾಲಕ್ಕೆ ಬಿಡುಗಡೆಯಾಗಲಿದೆ. ಕನ್ನಡ ಚಿತ್ರರ೦ಗದ ಮಟ್ಟಿಗೆ ಇದೊ೦ದು ದಾಖಲೆ.

ಕಳೆದ ಮೂರು ವರುಷಗಳಿ೦ದ ಕನ್ನಡದ ಸವ್ಯಸಾಚಿ ನಟ , ಶಿವರಾಜ್ ಕುಮಾರ ಸತತವಾಗಿ ತಮ್ಮ ಪ್ರಭುದ್ದ ಮತ್ತು ಮನಮಿಡಿಯುವ ಅಭಿನಯದಿ೦ದ ( ಸತ್ಯ ಇನ್ ಲವ್, ಮಾದೇಶ, ಭಾಗ್ಯದ ಬಳೆಗಾರ , ದೇವರು ಕೊಟ್ಟ ತ೦ಗಿ, ಸುಗ್ರೀವ ಮತ್ತು ತಮಸ್ಸು ) ನಮ್ಮನ್ನು ಮನಕಲಕಿ ಮಾಹಾನ್ ಕಲಾವಿದ ನೆನೆಸಿಕೊ೦ಡರೂ ಮಾಡಿದ ಕೆಲವು ದುಡುಕು ನಿರ್ಧಾರದ ಚಿತ್ರಗಳು ( ಪರಮೇಶ ಪಾನ ವಾಲ , ನ೦ದ , ಹೊಡಿಮಗ ) ಅವರ ಚಿತ್ರ ಜೀವನದ ಕಪ್ಪು ಚುಕ್ಕೆಗಳಾಗಿದ್ದರಿ೦ದ , ಯಶಸ್ಸೆ೦ಬುದು ಮಾತ್ರ ಮರೀಚಿಕೆಯಾಗಿ , ಮರುಭೂಮಿಯಲ್ಲಿ ನೀರು ಸಿಕ್ಕಷ್ಟೇ ಅಪರೂಪ ವಾಗುತ್ತಿರುವಾಗ ಈಗ ಬರುತ್ತಿರುವ ಚೆಲುವೆಯೇ ನಿನ್ನ ನೋಡಲು “ ಮರಳುಗಾಡಿನಲ್ಲಿ ಸಿಕ್ಕ ಓಯಸಿಸ್ ಆಗ ಬಹುದೇ ? ಒ೦ದು ಸೂಪರ್ ಹಿಟ್ ಚಿತ್ರಕ್ಕಾಗಿ ಜಾತಕ ಪಕ್ಷಿಯ೦ತೆ ಬಹು ದಿನಗಳಿದ ಕಾದಿರುವ ಶಿವಣ್ಣ ಅಭಿಮಾನಿಗಳ ದಾಹವನ್ನು ಹಿ೦ಗಿಸಬಲ್ಲುದೇ ? ಈ ಪ್ರಶ್ನೆಗಳಿಗೆ ಉತ್ತರ ಇನ್ನು ಕೆಲವೇ ವಾರಗಳಲ್ಲಿ ಸಿಗಲಿದೆ.

ಹಾಗೆ ನೋಡಿದರೆ ಏಳು ಬೀಳುಗಳು / ಸೋಲು ಗೆಲವುಗಳು ನಮ್ಮ ಹ್ಯಾಟ್ರಿಕ್ ಹೀರೋ ಗೆ ಹೊಸತೇನಲ್ಲ. ಅವರದು ಗೆಲುವಿನಲ್ಲಿ ಹ್ಯಾಟ್ರಿಕ್ ಆದರೆ ಸೋಲಿನಲ್ಲೂ ಹ್ಯಾಟ್ರಿಕ್ಕೇ. ಈ ಹಿ೦ದೆ ಅವರು ಹಲವು ಸಲ ಇ೦ಥ ಎಲ್ಲ ಸೋಲುಗಳ ಸರಣಿಯನ್ನು ಮೀರಿ ಫಿನಿಕ್ಸ ಪಕ್ಷಿಯ೦ತೆ ಮೇಲೆದ್ದು ಬ೦ದಿದ್ದಾರೆ ಜನಮನ ಗೆದ್ದಿದ್ದಾರೆ. ಈ ಬಾರಿ ಕೂಡ ಆ ಇತಿಹಾಸ ಮರುಕಳಿಸಲಿ ಎ೦ಬುದೇ ಎಲ್ಲ ಅಭಿಮಾನಿಗಳ, ಕನ್ನಡಿಗರ ಹಾರೈಕೆ. ಆದರೆ ಸೋಲಿರಲಿ ಗೆಲುವಿರಲಿ ಶಿವಣ್ನನ ಅಭಿನಯದ ಬಗ್ಗೆ ಇದುವರೆಗೂ ಯಾವ ವಿಮರ್ಶಕನೂ ಉಸಿರೆತ್ತಿಲ್ಲ. ಪ್ರತಿಯೊ೦ದು ಪಾತ್ರವನ್ನೂ ಅಷ್ಟೇ ಶ್ರದ್ದೆ ಯಿ೦ದ ನಿರ್ವಹಿಸಿ ಈಗ ಮಹಾನ್ ಕಲಾವಿದ ನೆನ್ನಿಸಿಕೊ೦ಡಿರುವುದು ಶಿವಣ್ಣನ ವಿಶೇಷ.

ಇನ್ನು ಚೆಲುವೆಯೇ ನಿನ್ನ ನೋಡಲು “ ಚಿತ್ರದ ವಿಶೇಷವೇನು , ಏಕೆ ಈ ಚಿತ್ರ ಇಷ್ಟೊ೦ದು ಕುತೂಹಲ ಕೆರಳಿಸಿದೆ ಎ೦ಬುದರಬಗ್ಗೆ ಗಮನ ಹರಿಸೋಣ.

ಮೂರು ವರ್ಷಗಳ ಹಿ೦ದೆ ರಘುರಾಮ್ ಎ೦ಬ ಹುಡುಗ, ಅದುವರೆಗೆ ನಿರ್ದೇಶಕ ಪ್ರೇಮ್ ಕೈಯಲ್ಲಿ ಅಸಿಸ್ಟೆ೦ಟ್ ಆಗಿ ಕೆಲಸ ಮಾಡುತ್ತಿದ್ದ ಮತ್ತು ಈ ಟೀವಿಯಲ್ಲಿ ಪ್ರೋಗ್ರಾ೦ ಒ೦ದರಲ್ಲಿ ಕನ್ನಡ ಚಿತ್ರಗಳು ಬಿಡುಗಡೆಯಾದ ದಿನ ಬೆ೦ಗಳೂರಿನ ಚಿತ್ರಮ೦ದಿರಗಳ ಮು೦ದೆ ನಿ೦ತು ಮ್ಯಾಟನೀ ಶೋ ನೋಡಿ ಹೊರಬರುತ್ತಿದ ಪ್ರೇಕ್ಷಕರ ಮು೦ದೆ ಮೈಕು ಹಿಡಿದು ಚಿತ್ರದ ಬಗ್ಗೆ ಅಭಿಪ್ರಾಯ ಕೇಳುತ್ತಿದ್ದ ಹುಡುಗ ಇದ್ದಕ್ಕಿದ್ದ೦ತೆ ಸೆಪ್ಟೆ೦ಬರ್ ೧ ೨೦೦೮ ರಲ್ಲಿ ಹೋಟೆಲ್ ಕಾನಿಷ್ಕಾ ದಲ್ಲಿ ಸಣ್ಣದೊ೦ದು ಪತ್ರಿಕಾ ಗೋಷ್ಟಿಯನ್ನು ಕರೆದು ತಾನು ತನ್ನದೇ ಚಿತ್ರಕಥೆ ಆಧರಿಸಿ ಶಿವಣ್ಣ ನಾಯಕತ್ವದಲ್ಲಿ ಜಗತ್ತಿನ ಏಳು ಅಧ್ಬುತ ತಾಣಗಳಲ್ಲಿ ಚಿತ್ರೀಕರಣಗೊಳ್ಳುವ , ಚೆಲುವೆಯೇ ನಿನ್ನ ನೋಡಲು “ ಎ೦ಬ ಶೀರ್ಷಿಕೆಯ ಪ್ರೇಮ ಕಥೆಯೊದನ್ನು ನಿರ್ದೇಶಿಸಲಿದ್ದೇನೆ, ಅದಕ್ಕೆ ಸುಮಾರು ೧೦ ಕೋಟಿಯಷ್ಟು ಖರ್ಚಾಗ ಬಹುದು, ಇದನ್ನು ಎಕ್ಸ ಕ್ಯೂಸ್ ಮಿ “ ಚಿತ್ರ ಖ್ಯಾತಿಯ ನಿರ್ಮಾಪಕ ಎಮ್. ಎನ್.ಸುರೇಶ ತಮ್ಮ ತುಳಜಾಭವಾನಿ ಕ್ರಿಯೇಶನ್ಸ ಲಾ೦ಛನ ದಲ್ಲಿ ನಿರ್ಮಿಸಲಿದ್ದಾರೆ ಎ೦ಬ ಹೇಳಿಕೆಯ ಬಾ೦ಬ ಹಾಕಿದಾಗ ಗಾ೦ಧೀನಗರ ಅಚ್ಚರಿಗೊ೦ಡಿತ್ತು.

ಕನ್ನಡ ದಲ್ಲಿ ೧೦ ಕೋಟಿಯ ಚಿತ್ರವೇ ? ಅದೂ ೪೭ ರ ಹರೆಯದ ಶಿವಣ್ಣ ನಾಯಕತ್ವದಲ್ಲಿ ಪ್ರೇಮ ಕಥೆ, ಅದರ ಮೇಲೆ ಹೊಸ ನಿರ್ದೇಶಕನೊಬ್ಬನ ಮೊದಲ ಪ್ರಯತ್ನ , ಯಾವ ಧೈರ್ಯದ ಮೇಲೆ ನಿರ್ಮಾಪಕ ಸುರೇಶ ಈ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ ? ಇದು ಬಹುಷ್ಯ ಪುಕ್ಕಟೇ ಪ್ರಚಾರಕ್ಕೆ ಹರಡಿಸಿದ ಬೊಗಳೇ ಸುದ್ದಿ ಇರಬಹುದೇ ಹೀಗೆ೦ದು ಭಾವಿಸಿತ್ತು ಗಾ೦ಧೀನಗರ .

ಆದರೆ ಮು೦ದೆ ಮೂರು ತಿ೦ಗಳ ನ೦ತರ ಅ೦ದರೆ ಡಿಸೆ೦ಬರ ೮ ೨೦೦೮ ರ೦ದು ಬೆ೦ಗಳೂರಿನ ವಿದ್ಯಾರಣ್ಯ ಪುರದ ದುರ್ಗಾ ಪರಮೇಶ್ವರಿ ದೇವಸ್ತಾನದಲ್ಲಿ ಈ ಚಿತ್ರದ ಮಹೂರ್ತ ನಡೆದಾಗಲೇ ಗಾ೦ಧೀನಗರ ಈ ಸುದ್ದಿಯನ್ನು ನ೦ಬಿದ್ದು. ಶಿವಣ್ಣನ ನಾಯಕಿಯರಾಗಿ ಮು೦ಬೈನ ಸೋನಲ್ ಚವಾಣ್ ಮತ್ತು ಚೈನ್ನೈ ನ ಹರಿಪ್ರಿಯಾ ಆಯ್ಕೆಯಾದಾಗ ಶಿವಣ್ಣನ ಅಭಿಮಾನಿಗಳ ಉತ್ಸಾಹ ಮುಗಿಲು ಮುಟ್ಟಿತ್ತು.

ಅನುಭವೀ ಛಾಯಾಗ್ರಾಹಕ ಕಬೀರ್ ಲಾಲ್ ಛಾಯಾಗ್ರಹಣ, ಒ೦ದರ ಹಿ೦ದೊ೦ದರ೦ತೆ ಸುಪರ್ ಹಿಟ್ ಅಲ್ಬಮ್ ಗಳನ್ನು ನೀಡುತ್ತಿದ್ದ ಹರಿಕ್ರಿಷ್ಣ ಸ೦ಗೀತ, ಚಿ೦ತನ್ ಸ೦ಭಾಷಣೆ ಹೀಗೆ ಚೆಲುವೆಯೇ ನಿನ್ನ ನೋಡಲು “ ಒ೦ದು ಅಪರೂಪದ ಚಿತ್ರವಾಗುವ ಭರವಸೆಯನ್ನು ನಿರ್ದೇಶಕ ರಘುರಾಮ್ ಅ೦ದೇ ನೀಡಿದ್ದರು.

ಮು೦ದೆ ಈ ಚಿತ್ರದ ಶೂಟಿ೦ಗ ಶುರುವಾಗಿದ್ದು ಪೆಬ್ರುವರಿ ೨೦೦೯ ರಲ್ಲಿ . ಮು೦ದೆ ಏಪ್ರೀಲ್ ನಲ್ಲಿ ಶುರುವಾಗಿದ್ದು ಇದರ ವಿದೇಶ ಚಿತ್ರೀಕರಣದ ಯಾನ. ಜಗತ್ತಿನ ಏಳು ಅದ್ಭುತಗಳಲ್ಲಿ ಚಿತ್ರೀಕರಿಸುವುದು ಸುಲಭವಾದ ಮಾತೇನಲ್ಲ. ಅದು ಸುಮಾರು ೬೦ ಜನರ ದೊಡ್ಡ ತ೦ಡವನ್ನು ಕಟ್ಟಿಕೊ೦ಡು ವಿದೇಶ ಸುತ್ತುವುದು ದೊಡ್ಡ ಸಾಹಸವೇ ಸರಿ. ಆದರೆ ಎಮ್.ಎನ್.ಸುರೇಶ ಅದನ್ನು ಮಾಡಿ ತೋರಿಸಿದ್ದಾರೆ. ಹಲವಾರು ಅಡೆ ತಡೆಗಳು, ವಿದೇಶಗಳಲ್ಲಿ ಚಿತ್ರೀಕರಣ ಪರವಾನಗಿ ಮು೦ತಾದವುಗಳನ್ನೆಲ್ಲಾ ಸಮರ್ಥವಾಗಿ ನಿಭಾಯಿಸಿ ಆಗ್ರಾ , ಹಾ೦ಗ ಕಾ೦ಗ , ಪ್ಯಾರಿಸ್, ರೋಮ, ಜೋರ್ಡಾನ್ , ಟಸ್ಕನಿ ಮತ್ತು ದುಬೈ ಹೀಗೆ ಏಳು ಸ್ಥಳಗಳಲ್ಲಿ ಚಿತ್ರೀಕರಣ ವನ್ನು ಯಶಸ್ವಿಯಾಗಿ ಮುಗಿಸಲು ಸ್ವಲ್ಪ ತಡವಾದದ್ದು ಆಶ್ಚರ್ಯವೇನಲ್ಲ. ಕೊನೆಗೂ ಅಗಸ್ಟ ೧೩ , ೨೦೦೯ ರ೦ದು ಕೊನೆಯ ಶೆಡ್ಯೂಲ ದುಬೈನಲ್ಲಿ ಮುಗಿಸಿ ಬ೦ದ ಚಿತ್ರತ೦ಡ ಶೂಟಿ೦ಗ ಶುರುವಾಗಿ ಸರಿಯಾದ ಒ೦ದು ವರ್ಷದ ನ೦ತರ ಅ೦ದರೆ ಡಿಸೆ೦ಬರ ೯ ರ೦ದು ಮೈಸೂರಿನ ಮಹಾರಾಜಾ ಕಾಲೇಜಿನ ಮೈದಾನಿನಲ್ಲಿ ಅದ್ದೂರಿ ಸಮಾರ೦ಭದಲ್ಲಿ ಈ ಬಹು ನಿರೀಕ್ಷಿತ ಚಿತ್ರದ ಬಹು ನಿರೀಕ್ಷಿತ ಅಲ್ಬ೦ ಬಿಡುಗಡೆ ಮಾಡಿದ್ದು ಅಭಿಮಾನಿಗಳಿಗೆ ಇನ್ನೊ೦ದು ಅವಿಸ್ಮರಣಿಯ ಅನುಭವ.

ಚಿತ್ರದ ಹಾಡುಗಳು ನೀರೀಕ್ಷೆಗೆ ತಕ್ಕ೦ತೆ ಅದ್ಭುತವಾಗಿ ಮೂಡಿ ಬ೦ದಿದ್ದು , ಸ೦ಗೀತ ಪ್ರೇಮಿಗಳಿ೦ದ ಹಾಡುಗಳಿಗೆ ಅತ್ಯ್ತುತ್ತಮ ಪ್ರತಿಕ್ರಿಯೆ ಲಭಿಸಿದ್ದು , ಚಿತ್ರತ೦ಡಕ್ಕೆ ಸಮಾಧಾನ ತ೦ದಿದ್ದಲ್ಲದೇ ಶಿವಣ್ಣ ಅಭಿಮಾನಿಗಳು ಈ ಚಿತ್ರವನ್ನು ಕಾತುರದಿ೦ದ ಕಾಯುವ೦ತೆ ಮಾಡಿತ್ತು.

ಆದರೆ “ ಚೆಲುವೆಯೇ ನಿನ್ನ ನೋಡಲು “ ಚಿತ್ರ ದ೦ತಹ ಒ೦ದು ದೊಡ್ಡ ಬಜೆಟ್ ನ ಮಹಾತ್ವಾಕಾ೦ಕ್ಷೆಯ ಚಿತ್ರವನ್ನು ಅವಸರದಲ್ಲಿ ಬಿಡುಗಡೆ ಮಾಡಬಾರದು ಮತ್ತು ಇದರ ಪೋಸ್ಟ ಪ್ರೊಡಕ್ಷನ್ ಕೆಲಸಗಳು ಸಹ ಅತ್ತ್ಯುತ್ತಮ ಗುಣಮಟ್ಟದಿ೦ದ ಕೂಡಿರಬೇಕೆ೦ಬ ಛಲದಿ೦ದ ಕಳೆದ ೬ ತಿ೦ಗಳಿ೦ದ ಡಬ್ಬಿ೦ಗ , ವೈಸ ರಿಕಾರ್ಡಿ೦ಗ, ಸ್ಪೇಶಲ್ ಎಫೆಕ್ಟ್ಸ ಜೋಡಣೆ ಮು೦ತಾದ ತಾ೦ತ್ರಿಕ ಕ್ಲಿಷ್ಟ ಕೆಲಸಗಳನ್ನು ಮು೦ಬಯಿನ ADLABS ನಲ್ಲಿ ಮುಗಿಸಿ ಅಲ್ಲಿಯ ಸಿಬ್ಬ೦ದಿಯಿ೦ದ ಕನ್ನಡದಲ್ಲೂ ಇ೦ಥಹ ಅತ್ತ್ಯುತ್ತಮ ತಾ೦ತ್ರಿಕತೆಯ ಚಿತ್ರಗಳನ್ನು ಮಾಡುತ್ತಾರಾ ಎ೦ದು ಹೊಗಳಿಸಿಕೊ೦ಡ ಚಿತ್ರ ನ೦ತರ ಸೆನ್ಸಾರ ನವರಿ೦ದ ಕೌಟು೦ಬಿಕ ಪ್ರೇಕ್ಷಕರ ವೀಕ್ಷಣೆಗೆ ಯೋಗ್ಯ ಎ೦ದು ಸರ್ಟಿಫಿಕೇಟ ಪಡೆದಾಗ ಚಿತ್ರರಸಿಕರ ಕುತೂಹಲ ಇನ್ನಷ್ಟು ಹೆಚ್ಚಿಸಿದ್ದು ಸುಳ್ಳಲ್ಲ.

ಹದಿಹರೆಯದವನ್ನು ನಾಚಿಸುವ೦ತೆ ಯುವ ಕಾಸ್ಟ್ಯೂಮ್ಸ” ಗಳಲ್ಲಿ ಲವಲವಿಕೆಯಿ೦ದ ನಟಿಸಿ ರ೦ಜಿಸಿರುವ ಚೆಲುವ ಶಿವಣ್ಣ ಮತ್ತು ಚೆಲುವೆಯರಾದ ಸೋನಲ್ , ಹರಿಪ್ರಿಯಾ ರಲ್ಲದೇ ಚೆ೦ದ್ರಶೇಖರ್, ದತ್ತಣ್ಣ, ಚಿತ್ರಾ ಶೈಣೈ, ಶಾ೦ತಮ್ಮ , ತರುಣ ಸುಧೀರ, ವೆ೦ಕಟೇಶ ಪ್ರಸಾದ, ಕಾವ್ಯಾ, ಸ೦ಗೀತಾ ಹೀಗೆ ಅದ್ದೂರಿ ತಾರಾಗಣದಿ೦ದ ಕೂಡಿದ ಈ ಚಿತ್ರ ಕೌಟು೦ಬಿಕ ಪ್ರೇಕ್ಷಕರನ್ನು ಮತ್ತು ಯುವ ಪೀಳಿಗೆಯನ್ನು ಆಕರ್ಶಿಸುವುದರಲ್ಲಿ ಯಾವುದೇ ಸ೦ಶಯವಿಲ್ಲ ಎನ್ನುತ್ತಾರೆ ನಿರ್ದೇಶಕ ರಘುರಾ೦

ಶಿವಣ್ಣ ಧ್ವನಿ ನೀಡಿದ ಜನುಮಾನ ಕೊಟ್ಟ ಅಪ್ಪಾ ಥ್ಯಾ೦ಕ್ಸ ಅಮ್ಮಾ ಥ್ಯಾ೦ಕ್ಸ “ ಎ೦ಬ ಹಾಡು ಅವರ ಅಭಿಮಾನಿಗಳಲ್ಲಿ ಇನ್ನಿಲ್ಲದ ಕ್ರೇಜ್ ಹುಟ್ಟಿಸಿದರೆ, ಡಾ.ರಾಜ್ ಧ್ವನಿಯಲ್ಲಿರುವ ಸೂಪರ್ ಹಿಟ್ ಗೀತೆ “ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು “ ರಿಮಿಕ್ಸ ಆಗಿ ಶಿವಣ್ಣನ ಅಭಿನಯದಲ್ಲಿ ದುಬೈನಲ್ಲಿ ಚಿತ್ರೀಕರಣ ಗೊ೦ಡಿದ್ದು ಇದರಲ್ಲಿ ಶಿವಣ್ಣ ಡಾ.ರಾಜ್ ರ ಒಟ್ಟು ವಿಭಿನ್ನ ಗೆಟ-ಅಪ್ ನಲ್ಲಿ ಕಾಣಿಸಿಕೊ೦ಡದ್ದು ಇನ್ನೊ೦ದು ವಿಶೇಷ. ಈಗಾಗಲೇ ಟೀವಿಯಲ್ಲಿ ಬಿತ್ತರವಾಗುತ್ತಿರುವ ಇದರ ಹಾಡುಗಳ ಪೈಕಿ “ ಓ ಪ್ರಿಯತಮಾ ಪ್ರಿಯತಮಾ ತನ್ನ ಸಾಪ್ಟ ಮೆಲೋಡಿಯಿ೦ದ ಆಕರ್ಷಿಸಿದರೆ , ತರುಣ ಸುಧೀರ ನ್ರತ್ಯ ನಿರ್ದೇಶನದ “ ಹ೦ಸ ಹ೦ಸ ಹ೦ಸ ಲೇಖಾ “ ಹಾಡಿಗೆ ಟುವ್ವಿ ಟುವ್ವಿ ಎ೦ದು ಸ್ಟೆಪ್ಸ ಹಾಕಿದ ಶಿವಣ್ಣ ಲವಲವಿಕೆಯಲ್ಲಿ ೩೦ ವರ್ಶಗಳ ಹಿ೦ದಿನ “ ಆನ೦ದ “ ಚಿತ್ರದ ಶಿವಣ್ನ ನನ್ನು ನೆನಪಿಸುತ್ತಾರೆ.

ಶಿವಣ್ಣ ಈ ಚಿತ್ರದಲ್ಲಿ ಟೂರಿಸ್ಟ ಗೈಡ ಪಾತ್ರದಲ್ಲಿ ಅಭಿನಯಿಸುತ್ತಿದ್ದು…..ಆತನ ಪ್ರೇಮ ಕಥೆ, ಅದಕ್ಕೆ ಬ೦ದ ಅಡತಡೆಗಳು ಇವೇ ಈ ಚಿತ್ರದ ತಿರುಳು ಎನ್ನುತ್ತಾರೆ ನಿರ್ದೇಶಕ ರಘುರಾಮ್.

ಇಷ್ಟೆಲ್ಲಾ ವಿಶೇಷಗಳಿರುವ ಈ ಅದ್ದೂರಿ ಚಿತ್ರ ಪ್ರೇಕ್ಷಕರ ಅದರಲ್ಲೂ ಶಿವಣ್ಣ ಅಭಿಮಾನಿಗಳ ನಿರೀಕ್ಷೆಯನ್ನು ತಲುಪಬಲ್ಲುದೆ ಅವರ ಯಶಸ್ಸಿನ ದಾಹವನ್ನು ತಣಿಸ ಬಲ್ಲುದೇ ಎ೦ಬುದೇ ಈಗ ಎಲ್ಲರ ಮು೦ದಿರುವ ಯಕ್ಷ ಪ್ರಶ್ನೆ. ಆದರೆ ನಿರ್ದೇಶಕ ರಘುರಾಮ್ ಆತ್ಮ ವಿಶ್ವಾಸ, ಮತ್ತು ಅವರಲ್ಲಿ ಭರವಸೆಯಿಟ್ಟು ೧೦ ಕೋಇ ಹೂಡೈರುವ ನಿರ್ಮಾಪಕ ಎಮ್.ಎನ್.ಸುರೇಶ ರ ಆತ್ಮ ವಿಶ್ವಾಸ …ಈ ಚಿತ್ರ ಶಿವಣ್ಣ ಚಿತ್ರ ಜೀವನದಲ್ಲಿ ಒ೦ದು ಮೈಲಿಗಲ್ಲಾಗಿ ಶಿವಣ್ಣನಿಗೆ ಪುನರ್ಜನ್ಮ ನೀಡಬಲ್ಲುದು ಎ೦ಬ ಭರವಸೆಯಿ೦ದ ಶುಭ ಹಾರೈಸುದಷ್ಟೇ ಈಗ ನಮ್ಮ ಮು೦ದಿರುವ ಕೆಲಸವಲ್ಲವೇ….?

ಕಿ.ರಂ. ಸಾರ್,ಸ್ಸಾರೀ....,: ರಜನಿ ಬರಹ

ರಜನಿ ಗರುಡ
ಶುಕ್ರವಾರ, 20 ಆಗಸ್ಟ್ 2010 (03:40 IST)
ಚಿತ್ರ: ಗುಜ್ಜಾರಪ್ಪ

ನಾನು ನೀನಾಸಮ್ ವಿದ್ಯಾರ್ಥಿಯಾಗಿದ್ದೆ. ನಮಗೆ ಐದು ದಿನಗಳ ಕಾವ್ಯ ಕಮ್ಮಟ ಇರಿಸಿದ್ದರು. ಡಾ. ಚಂದ್ರಶೇಖರ ಕಂಬಾರ, ಡಾ. ಡಿ.ಆರ್.ನಾಗರಾಜ, ಪ್ರೊ. ಕಿ.ರಂ.ನಾಗರಾಜ, ಕಾ.ವೆಂ. ಬಂದಿದ್ದರು. ಇವರಿಗೆಲ್ಲ ಅಸಿಸ್ಟೆಂಟ್ ಆಗಿ ಕೆ.ಶರತ್ ಬಂದಿದ್ದರು.

ಪಂಪ ಭಾರತ, ಕುಮಾರವ್ಯಾಸ ಭಾರತ, ರನ್ನನ ಗದಾಯುದ್ಧ ಇವುಗಳೆಲ್ಲದರ ಜೊತೆಗೆ ಬೇಂದ್ರೆ, ಕುವೆಂಪು, ಲಂಕೇಶ್, ಗೋಪಾಲಕೃಷ್ಣ ಅಡಿಗ ಹೀಗೆ ಹತ್ತು ಹಲವಾರು ಜನರ ಕಾವ್ಯಗಳ ಪರಿಚಯ, ವಿಮರ್ಶೆಗಳ ಜೊತೆಗೆ ಕೊನೆಯಲ್ಲಿ ನಮಗೆ ಈ ಕಾವ್ಯಗಳನ್ನು ಓದುವ ರೀತಿಯನ್ನು ಕಲಿಸುತ್ತಿದ್ದರು. ಅದನ್ನು ನಾವು ವೇದಿಕೆಯ ಮೇಲೆ ಪ್ರಸ್ತುತ ಪಡಿಸಬೇಕಾಗುತ್ತಿತ್ತು.

ನಾನು ಆಗ ತಾನೆ ರಂಗಭೂಮಿಗೆ, ಸಾಹಿತ್ಯ- ಕಾವ್ಯ ಇವೆಲ್ಲಕ್ಕೆ ಕಣ್ಣು ಬಿಡುತ್ತಿದ್ದೆ. ಈ ಪಂಡಿತರನ್ನೆಲ್ಲ ನೋಡಿ ಗಾಬರಿಯೇ ಆಗಿದ್ದೆ. ಬೆಳಿಗ್ಗೆ 9.30ಕ್ಕೆ ಪ್ರಾರಂಭವಾದರೆ ರಾತ್ರಿ 9.30 ರ ವರೆಗೆ ನಡೆಯುತ್ತಿತ್ತು. ಮೊದಮೊದಲು ನಮಗ್ಯಾರಿಗೂ ಏನೂ ಅರ್ಥವಾಗುತ್ತಿರಲಿಲ್ಲ. ಕ್ರಮೇಣ ನಾವು ಕಾವ್ಯ ಲೋಕವನ್ನು ಪ್ರವೇಶಿಸಿದೆವು.

ಹಳೆಗನ್ನಡ ಕಾವ್ಯವನ್ನು ಓದುವಾಗ ವಿಭಕ್ತಿ ಪ್ರತ್ಯಯ, ಒತ್ತು, ದೀರ್ಘ, ಕೊಂಬುಗಳನ್ನೆಲ್ಲ ತಿದ್ದಿ-ತೀಡಿ ಕಿ.ರಂ. ಮೇಷ್ಟ್ರು ಹೇಳಿಕೊಡುತ್ತಿದ್ದರು. ಅಲ್ಲದೆ ನಾವು ನಾಟಕದ ವಿದ್ಯಾರ್ಥಿಗಳಾದ್ದರಿಂದ ಅದರಲ್ಲಿ ನಾಟಕೀಯತೆ ಕೂಡ ಬರಬೇಕೆಂದು ನಮ್ಮ ಪ್ರಿನ್ಸಿಪಾಲರಾದ ಚಿದಂಬರರಾವ್ ಜಂಬೆ ಮತ್ತೆ ಮತ್ತೆ ಹೇಳುತ್ತಿದ್ದರು. ಪಾಠ-ಪಠ್ಯ, ಓದು, ಚರ್ಚೆ-ವಿಮರ್ಶೆಗಳು ಈ ಮೇಷ್ಟ್ರಗಳ ಮಧ್ಯದಲ್ಲೇ ಹಲವಾರು ಬಾರಿ ನಡೆಯುತ್ತಿತ್ತು. ಕಾ.ವೆಂ. ಸಾಕಷ್ಟು ಸಮಯ ಕೋಪಿಸಿಕೊಂಡು ಕೂತಿರುತ್ತಿದ್ದರೆ, ಡಿ.ಆರ್ ಅವರನ್ನು ಕೀಟಲೆ ಮಾಡಿ ಗೋಳು ಹೊಯ್ದುಕೊಳ್ಳುತ್ತಿದ್ದರು. ಕಂಬಾರರ ಕಾವ್ಯ ವಾಚನವೆಂದರೆ ಅದು ಹಾಡುವುದೇ ಇರುತ್ತಿತ್ತು. ನಾವೆಲ್ಲ ಅದಕ್ಕೆ ಬೇರೆ ಬೇರೆ ವಾದ್ಯಗಳನ್ನು ಹಿಡಿದು ಬಾರಿಸುತ್ತಿದ್ದೆವು. ಸ್ವಲ್ಪ ಲಯ ತಪ್ಪಿದರೆ `ಏ ಕತ್ತೀ..' ಎಂದು ಬಯ್ಯುತ್ತಿದ್ದರು. ಅವರ ಬೈಗಳ ನಂತರ ನಾವು ತಾಳ ವಾದ್ಯಗಳನ್ನೆಲ್ಲ ಪಕ್ಕದಲ್ಲಿರಿಸಿ ಬಿಟ್ಟೆವು.

ಇವ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಸಿಗರೇಟು ಸೇದುತ್ತಾ, ಮೊಣಕಾಲ ಕೆಳಗೂ ಇಳಿದ ಜುಬ್ಬ, ಬಿಳಿಯ ಪೈಜಾಮ ಧರಿಸಿ, ಹೆಗಲವರೆಗಿನ ಗುಂಗುರು ಕೂದಲನ್ನು ಎಣ್ಣೆ ಹಾಕಿ ಬಾಚಿ, ನುಣ್ಣಗೆ ಶೇವ್ ಮಾಡಿ, ಕಡ್ಡಿ ಮೀಸೆಯ ಕಿರಂ ನಮಗೆಲ್ಲ ಪ್ರೀತಿಯ ಮೇಷ್ಟ್ರಾಗಿದ್ದರು. ಪ್ರತಿ ಬಾರಿಯೂ ಹೊಸ ಅರ್ಥದಲ್ಲಿ ಕಾವ್ಯವನ್ನು ಹೇಳಿಕೊಡುತ್ತಿದ್ದರು.

ಕಿ.ರಂ. ನನಗೆ ಅಡಿಗರ ವರ್ಧಮಾನ ಕವಿತೆ ಹೇಳಿಕೊಡುತ್ತಿದ್ದರು. ನನ್ನ ಪಕ್ಕದಲ್ಲೇ ಕುಳಿತು ಸಿಗರೇಟು ಸೇದುತ್ತಾ ಓದಿಸುತ್ತಿದ್ದರು. ಎದುರಿನಲ್ಲಿ ಡಿ.ಆರ್. ಕನ್ನಡಕದ ಹಿಂದೆ ದೊಡ್ಡ ದೊಡ್ಡ ಕಣ್ಣುಗಳನ್ನು ಹೊರಳಿಸಿ ನೋಡುತ್ತ ಮತ್ತೆ ಮತ್ತೆ ತಿದ್ದುತ್ತಿದ್ದರು. ಪಕ್ಕದಲ್ಲಿ ಕುರ್ಚಿಯಲ್ಲಿ ಕುಳಿತ ಜಂಬೆ ಜೋರಾಗಿ ಓದು ಎಂದು ಗದರುತ್ತಿದ್ದರು. ಕಿಲಾಡಿ ರಸ್ತೆಯ ಕೊನೆಯ ತಿರುವಿನಲ್ಲಿ ಅಪಘಾತ, ನ ಪ್ರಮದಿತವ್ಯ ಬೋರ್ಡಿನ ಕೆಳಗೆ ಎಂದಾಗ ನನಗೆ ನಗು ತಡೆಯಲಾಗಲಿಲ್ಲ. ಕಿ.ರಂ. ನನ್ನ ಭುಜ ತಟ್ಟಿ ಪರವಾಗಿಲ್ಲ ಕಣಮ್ಮಾ, ಇಷ್ಟು ಎಂಜಾಯ್ ಮಾಡ್ತೀಯಾ ಅಂದ್ರೆ ಕಾವ್ಯದೊಳಗೆ ಇಳಿದಿದ್ದೀಯಾ ಅಂತರ್ಥ ಎಂದರು. ಅಷ್ಟರಲ್ಲಿ ಜಂಬೆ ಧ್ವನಿ ಜೋರಾಗಿಲ್ಲ, ಅವಳಿಗೆ ಸ್ಟೇಜ್ ವೈಸ್ ಬೇಕು ಎಂದು ಹಿರಿ ಹಿರಿ ಹಿಗ್ಗಿದ್ದ ನನ್ನ ತಲೆಯ ಮೇಲೆ ತಟ್ಟಿದರು. ಡಿ.ಆರ್, ಕಲೀತಾಳಿ ಬಿಡಿ, ಇನ್ನು ಚಿಕ್ಕೋಳು ಎಂದು ಸಮಾಧಾನಿಸಿದರು.

ಇವೆಲ್ಲದರ ಮದ್ಯೆಯೂ ಕಮ್ಮಟದಿಂದ ನಾವು ಕಾವ್ಯವನ್ನು ಓದಲು- ಅರ್ಥೈಸಿಕೊಳ್ಳಲು ಸಾಧ್ಯವಾಯಿತು. ಅವರೆಲ್ಲರ ಆತ್ಮೀಯ ಸಹವಾಸ ಆಪ್ಯಾಯಮಾನವಾಗಿತ್ತು. ರಂಗದ ಮೇಲೆ ದೀರ್ಥವಾದ ಸಂಭಾಷಣೆಯನ್ನು ಹೇಳಲು, ಕಾವ್ಯವನ್ನು ನಾಟಕದಲ್ಲಿ ಬಳಸಲು ಅಲ್ಲದೆ ನಾಟಕದ ಧ್ವನಿ ಗ್ರಹಿಸಲು ನಮಗೆ ಸಹಕಾರಿಯಾಯಿತು. ನಾವು ನಾಟಕ ಮಾಡಿದರೆ ಕಿ.ರಂ. ನೋಡಬೇಕೆಂದು ಆಸೆ ಪಡುತ್ತಿದ್ದೆವು.

ಮುಂದೆ ಹಲವು ಬಾರಿ ನೀನಾಸಮ್ ಸಂಸ್ಕೃತಿ ಶಿಬಿರದಲ್ಲಿ ಅವರನ್ನು ಭೇಟಿಯಾಗಿದ್ದೇನೆ. ಪಂಪ, ಕುಮಾರವ್ಯಾಸ, ಹತ್ತು ಹಲವು ಕಾವ್ಯಗಳ ಕುರಿತಲ್ಲದೆ ಅಲ್ಲಿ ನಡೆದ ನಾಟಕ ಪ್ರಯೋಗ-ಪಠ್ಯಗಳ ಬಗೆಗೆ ಮಾತಾಡುತ್ತಿದ್ದರು. ಅವರ ಮಾತೆಂದರೆ ಅದೊಂದು ಸ್ವಗತವೆ! ಪ್ರತಿ ಬಾರಿಯು ಹೊಸದೊಂದು ವಿಚಾರ ನಮ್ಮ ಮುಂದಿಡುತ್ತ ಕೊನೆಯಲ್ಲಿ ತುಂಟ ನಗೆಯೊಂದನ್ನು ಹಾಯಿಸುವ ರೀತಿ ನನಗೆ ಖುಷಿ ಕೊಡುತ್ತಿತ್ತು.

ಅವರೊಡನೆ ನೀನಾಸಮ್ ನ ಗುಡ್ಡದಲ್ಲೆಲ್ಲೋ ಕೂತು ಎಲೆ ಅಡಿಕೆ ಹಾಕುತ್ತ ಹರಟೆ ಹೊಡೆಯುವುದು ಮಜವಾಗಿರುತ್ತಿತ್ತು. ಹೊಸತೇನು ಓದಿದ್ದೀಯಾ ಹೇಳು ಎಂಬಲ್ಲಿಂದ ಮಾತು ಪ್ರಾರಂಭವಾಗಿ ನಾನು ಆ ಪಠ್ಯವನ್ನು ಗ್ರಹಿಸಿದ್ದರ ಬಗೆಗೆ ಕೇಳುತ್ತಿದ್ದರು. ಮುಂದೆ ತಮ್ಮ ವಿಮರ್ಶೆ ಶುರು ಮಾಡುತ್ತಿದ್ದರು. ಹೀಗೆ ಒಮ್ಮೆ ಮಾತಾಡುತ್ತಾ ಶ್ರಾದ್ಧದ ಸುದ್ದಿ ಬಂತು. ತಾವು ಹೊಯ್ಸಳ ಕರ್ನಾಟಕದವರು ಶ್ರಾದ್ಧದ ಊಟಕ್ಕೆ ಏನೇನು ಮಾಡುತ್ತೇವೆ, ಹೇಗೆ ಬಡಿಸುತ್ತೇವೆ ಎಂದೆಲ್ಲ ಹೇಳಿ ನೀವು ಹವ್ಯಕರು ಏನೇನು ಮಾಡುತ್ತೀರಿ ಎಂದು ಕೇಳಿದರು. ನಾನು ಹವ್ಯಕರ ಶ್ರಾದ್ಧದ ಊಟದ ಬಗೆಗೆ ರಸವತ್ತಾಗಿ ವರ್ಣಿಸಿದಾಗ ಇನ್ನೊಮ್ಮೆ ನಿಮ್ಮಜ್ಜನ ಶ್ರಾದ್ಧಕ್ಕೆ ನನ್ನ ಕರಿ ಬರುತ್ತೇನೆ ಎಂದು ಮತ್ತೆ ತುಂಟ ನಗೆ ನಕ್ಕರು.

ನಾನವರ ಜೊತೆ ನಾಟಕ ಮತ್ತು ನಮ್ಮ ಪ್ರಯೋಗದ ಕುರಿತೇ ಮಾತಾಡಿದ್ದೇನೆಯೆ ಹೊರತು ಕಾವ್ಯದ ಬಗೆಗೆ ಮಾತಾಡಿಲ್ಲ. ಅದಕ್ಕಿಂತ ಹೆಚ್ಚೆಂದರೆ ಕಾಡು ಹರಟೆ ಹೊಡೆದಿದ್ದೇನೆ. ಇತ್ತೀಚೆಗಿನ 5-6 ವರ್ಷಗಳಿಂದ ಅವರ ಜೊತೆಗೆ ಮಾತಾಡುವ ಸಂದರ್ಭ ಬಂದಾಗೆಲ್ಲ ಬೇಕೆಂತಲೇ ತಪ್ಪಿಸಿಕೊಂಡಿದ್ದೇನೆ. ನೀನಾಸಮ್ ನಲ್ಲಿ ಮತ್ತು ಹಲವಾರು ಬಾರಿ ಧಾರವಾಡಕ್ಕೆ ಅವರು ಬಂದಾಗ ಕೂಡ ದೂರದಿಂದಲೇ ನಕ್ಕು ಕೈಬೀಸಿ ಜಾರಿಕೊಂಡು ಬಿಡುತ್ತಿದ್ದೆ.

ನೀನಾಸಮ್ ತಿರುಗಾಟದ ನಾಟಕ ನಟ ನಾರಾಯಣಿಯ ಕುರಿತು ಮತ್ತು ಅದರ ಲೇಖಕ ಡಾ. ಶಂಕರ ಮೊಕಾಶಿಯವರ ಬಗೆಗೆ ಬಹಳ ಮಾತು-ಕತೆಗಳು ಸಂಸ್ಕೃತಿ ಶಿಬಿರದಲ್ಲಾಯಿತು. ಎಕ್ಸಿಸ್ಟೆಂಶಿಯಲಿಸಮ್, ನವ್ಯೋತ್ತರದ ಬಗೆಗೆ, ಸಲಿಂಗ ಕಾಮದ ಬಗೆಗೆ ಬಿಸಿ ಬಿಸಿ ಚರ್ಚೆ ಆಯಿತು. ಕಿ.ರಂ ಕೂಡ ಮೊಕಾಶಿ ಬಗೆಗಿನ ತಮ್ಮ ಅನುಭವವನ್ನು ಹಂಚಿಕೊಡರು. ನಂತರ ಹೊರಗೆ ಬಂದಾಗ ನಾನು ಮೊಕಾಶಿಯವರ ಕುರಿತು ಏನೋ ಕೇಳಿದಾಗ ನವ್ಯೋತ್ತರ, ಎಕ್ಸಿಸ್ಟೆಂಶಿಯಲಿಸಮ್ ಎಲ್ಲ ಮೊಕಾಶಿ ಬರೆದದ್ದನ್ನು ನಂಬಬೇಡ. ಕೆಲವೊಮ್ಮೆ ಕುಚೇಷ್ಟೆಗೂ ಹಾಗೆ ಬರೆಯುತ್ತಾರೆ ಎಂದು ಕಣ್ಣು ಮಿಟುಕಿಸಿ ನಕ್ಕರು.

ಮಾರನೆ ದಿನ ಕೆ.ವಿ.ಅಕ್ಷರ ಅವರ ಕಿಂಗ್ ಲಿಯರ್ ನಾಟಕವಿತ್ತು. ಅದರಲ್ಲಿ ಜಿ.ಕೆ.ಗೋವಿಂದ ರಾವ್ ಲಿಯರ್ ಮಾಡಿದ್ದರು ಮತ್ತು ಕಾರ್ಡಿಲಿಯಾಳಿಗೆ ಮಾತೇ ಇರಲಿಲ್ಲ. ಹಿಂದುಸ್ತಾನಿ ಸಂಗೀತದ ಆಲಾಪ, ಚೀಸ್ ಗಳನ್ನು ಅವಳ ಮಾತಿನ ಬದಲಿಗೆ ಹಾಕಲಾಗಿತ್ತು. ಅದೊಂದು ಹೊಸ ಪ್ರಯೋಗ. ಶೋ ಮುಗಿದ ನಂತರ ಒಬ್ಬರೆ ನಿಂತ ಕಿ.ರಂ ಬಳಿ ಹೋದೆ. 'ಹೇಗನಿಸ್ತು ಸಾರ್' ಎಂದೆ, 'ಶೇಕ್ಸ್ ಪಿಯರ್ ಒಂದು ಮಹಾಸಾಗರ...' ಎಂದು ಮುಂದೇನೋ ಅನ್ನುವವರಿದ್ದರು. ಅಷ್ಟರಲ್ಲಿ ನನ್ನ ಗೆಳತಿಯರು ಕರೆದರು, ಹೋದೆ.

ಹಾಗೆಯೇ ಕಳೆದ ವರ್ಷ ಸಂಸ್ಕೃತಿ ಶಿಬಿರದಲ್ಲಿ... ಕಿರಂ ನನ್ನ ನೋಡಿ ನಕ್ಕು ಇತ್ತೀಚೆಗೆ ಏನು ಓದಿದ್ದೀಯಾ? ಹೇಳಲೇ ಇಲ್ಲಾ ನೀನು... ಎಂದು ಮಾತಿಗೆ ಪ್ರಾರಂಭಿಸಿದರು. ಏನಿಲ್ಲಾ ಸಾರ್.... ಎನ್ನುತ್ತಾ ಅವರನ್ನು ದಾಟಿ ಮುಂದೆ ಹೋಗಿ ಬಿಟ್ಟೆ. ಅವರನ್ನು ಮಾತನಾಡಿಸದೆ ಹೋಗಿದ್ದಕ್ಕೆ ಈಗ ಪರಿತಪಿಸುವಂತಾಗಿದೆ.

ಆಗಸ್ಟ್ 8 ರಂದು ಕೀರ್ತಿನಾಥ ಕುರ್ತಕೋಟಿಯವರ ಏಳನೆಯ ಪುಣ್ಯಸ್ಮರಣೆಗೆ ಕೀರ್ತಿಯವರ ಎರಡು ಪುಸ್ತಕ ಬಿಡುಗಡೆಯಾಗುವುದಿತ್ತು. 'ಪ್ರತ್ಯಭಿಜ್ಞಾನ' ಮತ್ತು 'ಕುಮಾರವ್ಯಾಸ ಭಾರತ ಕಥೆ ಮತ್ತು ಕಾವ್ಯ' ಇವೆರಡೂ ಪುಸ್ತಕಗಳನ್ನು ಕಿ.ರಂ ಬಿಡುಗಡೆ ಮಾಡಿ ಕುಮಾರವ್ಯಾಸ ಭಾರತದ ಮೇಲೆ ಮಾತಾಡುವವರಿದ್ದರು. ಅವರೂ ಕೂಡ ಸಂಭ್ರಮದಿಂದ ಬರಲು ಒಪ್ಪಿದ್ದರು. ನಂತರ ನೀನಾಸಂನ ಶ್ರೀ ವೆಂಕಟ್ರಮಣ ಐತಾಳರು ಮಾಡಿಸಿದ ಕಾಳಿದಾಸನ ಆರು ಕೃತಿಗಳಿಂದ ಆಯ್ದ ಭಾಗಗಳ ಅಗಲಿಕೆಯ ಅಲಕೆ ನಾಟಕ ಪ್ರದರ್ಶನವಿತ್ತು. ಅವರಿಗೂ ಅದನ್ನು ನೋಡಲು ಆಸಕ್ತಿ ಇತ್ತು. ನಾವು ಅವರಿಗೆ ಹೋಟೆಲ್ ಬುಕ್ ಮಾಡಿ ತಿರುಗಿ ಬೆಂಗಳೂರಿಗೆ ಹೋಗುವ ಟ್ರೈನ್ ಟಿಕೆಟ್ ಗಳನ್ನು ಬುಕ್ ಮಾಡಿಯಾಗಿತ್ತು. ಕಿ.ರಂ. ಜೊತೆಗೆ ಕಳೆಯಲು ನಾನು ನನ್ನ ಗಂಡ ಮಾನಸಿಕವಾಗಿ ವಿಶೇಷ ಸಿದ್ಧತೆ ಮಾಡಿಕೊಂಡಿದ್ದೆವು.

7ನೆಯ ತಾರೀಖಿನ ರಾತ್ರಿ ಬಂದ ಸುದ್ದಿಗೆ ನಾವು ಕನಲಿದೆವು. ಮಾರನೆಯ ದಿನ ಕಿ.ರಂ. ಕುಮಾರವ್ಯಾಸ ಭಾರತದ ಮೇಲೆ ಮಾತಾಡಬೇಕಿದ್ದ ಸಭೆ ಅವರ ಸಂತಾಪ ಸೂಚಕ ಸಭೆಯಾಯಿತು. ಕಿ.ರಂ. ನಾಟಕ ನೋಡುತ್ತಾರೆ ಎಂದು ಐತಾಳರು ಮತ್ತು ನಿನಾಸಂ ಬಳಗದವರು ಸಂಭ್ರಮ ಪಟ್ಟು ಬಂದಿದ್ದರು. ಆದರೆ..... ನನಗೆ ಮಾತ್ರ ಪಾಪ ಪ್ರಜ್ಞೆ ಕಾಡುತ್ತಿದೆ. ಸ್ಸಾರೀ... ಕಿ.ರಂ. ಸಾರ್.

ಏನಿದು ಸ್ಟೂಡೆಂಟ್ ರಿಪೋರ್ಟರ್ …?

Media Mind
ಸ್ಟೂಡೆಂಟ್ ರಿಪೋರ್ಟರ್…
Posted in Uncategorized by Media Mind on August 19, 2010

ಏನಿದು ಸ್ಟೂಡೆಂಟ್ ರಿಪೋರ್ಟರ್ …?

ಕರ್ನಾಟಕದಾದ್ಯಂತ ನೂರಾರು ಜರ್ನಲಿಸಂ, ಮಾಸ್ ಕಾಂ ಕಾಲೇಜುಗಳಿವೆ. ಸಾವಿರಾರು ಸಂಖ್ಯೆಯಲ್ಲಿ ಪತ್ರಿಕೋದ್ಯಮ ವಿಧ್ಯಾರ್ಥಿಗಳೂ ಇದ್ದಾರೆ. ಅವರಲ್ಲಿ ಕೆಲವರಿಗೆ ಮಾಧ್ಯಮದ ಕಡೆಗೆ ಇನ್ನಿಲ್ಲದ ಒಲವು, ಏನಾದರೂ ಸಾಧಿಸುವ ಛಲ. ಅಂತಹ ಛಲವುಳ್ಳ ಪತ್ರಿಕೋದ್ಯಮ ವಿಧ್ಯಾರ್ಥಿಗಳಿಗೊಸ್ಕರವೇ ಸಿದ್ದವಾಗಿರೋ ರಿಯಾಲಿಟಿ ಶೋ ಸುವರ್ಣ ನ್ಯೂಸ್ 24X7 ಸ್ಟೂಡೆಂಟ್ ರಿಪೋರ್ಟರ್.
ಸ್ಟೂಡೆಂಟ್ ರಿಪೋರ್ಟರ್ ನಲ್ಲಿ ಏನೇನ್ ನಡೆಯುತ್ತೆ …?

- ಸ್ಟೂಡೆಂಟ್ ರಿಪೋರ್ಟರ್ ಶೋಗೆ ಬಂದ ಅಷ್ಟೂ ಕಾಲೇಜುಗಳಿಂದ ೧೦ ಜನರನ್ನ ಆಯ್ಕೆ ಮಾಡಲಾಗುತ್ತೆ.

- ಆ ಹತ್ತು ಜನ ಸುವರ್ಣ ನ್ಯೂಸ್ ಜೊತೆ 35 ರಿಂದ 40 ದಿನ ಇರಬೇಕಾಗುತ್ತೆ.

- 10 ಜನರಲ್ಲಿ 7 ಜನರನ್ನು ವಾರಕ್ಕೊಬ್ಬರಂತೆ eliminate ಮಾಡಿ 3 ಜನರನ್ನ finalists ಗಳಾಗಿ ಉಳಿಸಿಕೊಳ್ಳಲಾಗುತ್ತೆ.
- ಆ ಮೂರು ಜನರಿಗೆ 5 episode ಗಳಲ್ಲಿ ವಿವಿಧ ವಿಭಿನ್ನ ವಿಶಿಷ್ಟ ಟಾಸ್ಕ್ ನೀಡಿ ಒಬ್ಬರನ್ನು ಬೆಸ್ಟ್ ಸ್ಟೂಡೆಂಟ್ ರಿಪೋರ್ಟರ್ ಆಗಿ ಆಯ್ಕೆ ಮಾಡಲಾಗುತ್ತೆ.

- ಬೆಸ್ಟ್ ಸ್ಟೂಡೆಂಟ್ ರಿಪೋರ್ಟರ್ ಆಗಿ ಆಯ್ಕೆಯಾದವರಿಗೆ ಅತ್ಯಾಕರ್ಷಕ ಬಹುಮಾನದ ಜೊತೆಗೆ ಸುವರ್ಣ ನ್ಯೂಸ್ 24×7 ನಲ್ಲಿ ಉದ್ಯೋಗಾವಕಾಶ ನೀಡಲಾಗುತ್ತದೆ.
ಸ್ಟೂಡೆಂಟ್ ರಿಪೋರ್ಟರ್ ನಲ್ಲಿ ಯಾರು ಭಾಗವಹಿಸಬಹುದು …?

- ನೀವು ಕರ್ನಾಟಕದ ಯಾವುದೇ ಕಾಲೇಜಿನಲ್ಲಿ ಪತ್ರಿಕೋದ್ಯಮ ಅಥವಾ ಮಾಸ್ ಕಾಂ ಓದುತ್ತಿದ್ದರೆ ಇದು ನಿಮ್ಮದೇ ವೇದಿಕೆ.

- ಮಾಧ್ಯಮದಲ್ಲಿ ಏನಾದರೂ ಸಾಧಿಸಲೇ ಬೇಕು ಅನ್ನೋ ಛಲ ನಿಮ್ಮೊಳಗಿದ್ರೆ,ನಿಮ್ಮೊಳಗೊಬ್ಬ ರಿಪೋರ್ಟರ್ ಇರೋದಾದ್ರೆ ಮತ್ಯಾಕೆ ಕಾಯ್ತಿದಿರಿ ಈಗಲೇ studentreporter @suvarnanews .tv ಗೆ ನಿಮ್ಮ ಡಿಟೈಲ್ಸ್ ಮೇಲ್ ಮಾಡಿ.

- ಅಥವಾ 9620880005 ಗೆ ಫೋನ್ ಮಾಡಿ.

http://studentreporterinfo.wordpress.com

ಎಚ್ಹೆಸ್ವಿ ಬರೆವ ಅನಾತ್ಮ ಕಥನ: ಆ ಘಟನೆ ಹೃದಯ ತಲ್ಲಣಗೊಳಿಸಿತ್ತು…

ಎಚ್ಹೆಸ್ವಿ ಬರೆವ ಅನಾತ್ಮ ಕಥನ: ಆ ಘಟನೆ ಹೃದಯ ತಲ್ಲಣಗೊಳಿಸಿತ್ತು…

19 Aug 2010 1 Comment

by avadhi in ಎಚ್.ಎಸ್.ವೆಂಕಟೇಶ ಮೂರ್ತಿ

ಅಳಿಯಲಾರದ ನೆನಹು-೨೫

ಎಚ್ ಎಸ್ ವೆಂಕಟೇಶಮೂರ್ತಿ

೧೯೮೮. ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪುರಸ್ಕಾರ ನನಗೆ ಬಂದ ವರ್ಷ. ಬೆಳಗಾಬೆಳಿಗ್ಗೆ ನನ್ನ ಬನಶಂಕರಿ ಮನೆಗೆ ಧಾವಿಸಿ ಬಂದವರು ಸಿ.ಅಶ್ವತ್ಥ್. ಏನು ಸ್ವಾಮೀ..? ಇನ್ನೂ ಮಲಗಿದ್ದೀರಿ? ನಿಮಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತಿದೆ…ಎಂದು ಹೊರಗಿನಿಂದಲೇ ಗಟ್ಟಿಯಾಗಿ ಅವರು ಕೂಗು ಹಾಕಿದ್ದು. ಕೆಲವೇ ನಿಮಿಷದಲ್ಲಿ ನರಹಳ್ಳಿ ಬಂದರು.

ದೂರವಾಣಿಯ ಮೂಲಕ ಸ್ನೇಹಿತರು, ಬಂಧುಗಳು, ಆಪ್ತರು ಒಂದೇ ಸಮ ಕರೆಮಾಡುತ್ತಾ ಅಭಿನಂದನೆ ಹೇಳತೊಡಗಿದರು. ಅದೇ ಸಂಜೆ ನನ್ನ ಬಹುಕಾಲದ ಗೆಳೆಯ ಶಂಕರ್ ಒಂದು ಔತಣಕೂಟ ಏರ್ಪಡಿಸಿದ. ಅದಕ್ಕೆ ಹಿರಿಯರಾದ ಪುತಿನ, ಕೆ.ಎಸ್.ನ ,ಜಿ.ಎಸ್.ಎಸ್ ಇಂದ ಹಿಡಿದು ನನಗೆ ಪ್ರಿಯರಾದ ಎಲ್ಲ ಲೇಖಕ ಮಿತ್ರರೂ, ಹಿತೈಷಿಗಳೂ ಆಗಮಿಸಿದ್ದರು.

ಈ ಉತ್ಸುಕತೆ ಉತ್ಸವ ನನಗೆ ಸಂತೋಷ ನೀಡಬೇಕಲ್ಲವೇ? ಆದರೆ ನನಗೆ ಇದೆಲ್ಲಾ ಆಳದಲ್ಲಿ ಮನಸ್ಸಿಗೆ ಒಂದು ಬಗೆಯ ದಿಗಿಲನ್ನೂ ಆತಂಕವನ್ನೂ ನೀಡಿತೆನ್ನುವುದು ವಾಸ್ತವ ಸತ್ಯ. ವಿಪರೀತ ಸಂತೋಷ ಯಾವಾಗಲೂ ನನ್ನಲ್ಲಿ ವಿಪರೀತ ದುಃಖದ ಸಾಧ್ಯತೆಯನ್ನು ಉದ್ರೇಕಿಸುತ್ತದೆ. ಇದೊಂದು ವಿಲಕ್ಷಣತೆ ಎಂದೇ ನೀವು ಬೇಕಾದರೆ ಕರೆಯಿರಿ.

ಬೇರೆಯವರಿಗೂ ಹೀಗೇ ಆಗುತ್ತದೆಯೋ ಏನೋ ನನಗೆ ತಿಳಿಯದು. ದಿನ ದಿನಕ್ಕೆ ಆಳವಾದ ವಿಷಾದದ ಭೂಮಿಕೆಗೆ ನಾನು ಆ ದಿನಗಳಲ್ಲಿ ಇಳಿಯುತ್ತಾ ಹೋದದ್ದು ಮಾತ್ರ ಸತ್ಯ.

ಪುರಸ್ಕಾರ ಸ್ವೀಕಾರಕ್ಕೆ ನಾನು ದೆಹಲಿಗೆ ಹೋಗಬೇಕಾಗಿತ್ತು. ನೀನು ಹೋಗಲೇ ಬೇಕು…ನಾನು ಬೇಕಾದರೆ ನಿನ್ನ ಜೊತೆಗೆ ಬರುತ್ತೇನೆ ಎಂದ ಶಂಕರ್. ನೀವು ಪ್ರಶಸ್ತಿ ಸ್ವೀಕರಿಸೋದು ನಾನೂ ನೋಡಬೇಕು. ನಾನೂ ದೆಹಲಿಗೆ ಬರುತ್ತೇನೆ ಎಂದಳು ರಾಜಲಕ್ಷ್ಮಿ. ಕೊನೆಗೆ ನಾವು ಮೂವರೂ ಟ್ರೈನಿಗೆ ಬುಕ್ ಮಾಡಿಸಿ ದೆಹಲಿಗೆ ಹೊರಟೆವು.

ದೆಹಲಿಯಲ್ಲಿ ಇರುವ ನನ್ನ ಅತ್ಯಂತ ಪ್ರಿಯ ವಿದ್ಯಾರ್ಥಿಮಿತ್ರ ವೆಂಕಟಾಚಲಹೆಗಡೆ ನಮ್ಮನ್ನು ಸ್ವಾಗತಿಸಲು ರೈಲ್ವೇ ನಿಲ್ದಾಣಕ್ಕೇ ಬಂದಿದ್ದರು. ನಾವು ದೆಹಲಿ ಕರ್ನಾಟಕ ಸಂಘದ ಗೆಸ್ಟ್ ಹೌಸಿನಲ್ಲಿ ಉಳಿದುಕೊಳ್ಳುವ ಏರ್ಪಾಡಾಗಿತ್ತು. ನಮ್ಮನ್ನು ಗೆಸ್ಟ್ ಹೌಸಿಗೆ ತಲಪಿಸಿ ಹೆಗಡೆ ಜೆ.ಎನ್.ಯೂ.ದಲ್ಲಿದ್ದ ತಮ್ಮ ಮನೆಗೆ ಹೋದರು. ಶಂಕರ್ ತನ್ನ ಆಫೀಸ್ ಕೆಲಸಕ್ಕೆ ಹೋದ.

ಅವನು ತನ್ನ ಆಫೀಸ್ ಗೆಸ್ಟ್ ಹೌಸಿನಲ್ಲೇ ಉಳಿಯುವ ನಿರ್ಧಾರ ಮಾಡಿದ್ದ. ಮಾರನೇ ದಿನ ಪ್ರಶಸ್ತಿ ಸ್ವೀಕಾರ ಕಾರ್ಯಕ್ರಮ. ಹೆಗಡೆ ನಾವು ಉಳಿದಿದ್ದ ವಸತಿಗೆ ಬಂದು ಕಾರ್ಯಕ್ರಮಕ್ಕೆ ನಮ್ಮನ್ನು ಕರೆದುಕೊಂಡು ಹೋದರು.

ನಾನು ಪ್ರಶಸ್ತಿ ಸ್ವೀಕಾರಕ್ಕೆ ಬಂದಿದ್ದರಿಂದ ಕರ್ನಾಟಕ ಸಂಘದವರು ಒಂದು ವಾರ ತಮ್ಮಲ್ಲಿ ಅತಿಥಿಯಾಗಿ ಉಳಿದುಕೊಳ್ಳಲು ನನ್ನನ್ನು ಕೋರಿದರು. ಒಂದು ಅಭಿನಂದನ ಸಮಾರಂಭವನ್ನೂ ಅವರು ಏರ್ಪಡಿಸಿದ್ದರು. ಇದೆಲ್ಲಾ ಆದ ಮೇಲೆ ಹೆಗಡೆ ನಾನೂ ಮತ್ತು ರಾಜಲಕ್ಷ್ಮಿ ಆಗ್ರಾಕ್ಕೆ ಹೋಗಿಬರುವ ಏರ್ಪಾಡುಮಾಡಿದರು. ಬೃಂದಾವನ , ಜಯಪುರಕ್ಕೆಲ್ಲಾ ಅವರು ನಮ್ಮ ಜೊತೆಗೇ ಬಂದಿದ್ದರು.

ನಾನು ಹಿಂದೆಯೇ ಒಮ್ಮೆ ಹೇಳಿದ್ದೆನಲ್ಲಾ? ನನ್ನ ವಿದ್ಯಾರ್ಥಿಗಳಿಗೆ ನನ್ನ ಮೇಲೆ ಇದ್ದುದಕ್ಕಿಂತ ಹೆಚ್ಚು ಅಭಿಮಾನ ನನ್ನ ಶ್ರೀಮತಿಯ ಮೇಲೆ. ಆಕೆ ಅಂಥ ಅಭಿಮಾನದ ಜೀವಿಯಾಗಿದ್ದಳು. ಹೀಗಾಗಿ ಹೆಗಡೆಗೆ ನನ್ನ ಪತ್ನಿ ಅಕ್ಕನೇ ಆಗಿದ್ದಳು. ಮೇಷ್ಟ್ರು ಏನೂ ಪ್ರಯೋಜನವಿಲ್ಲ.

ನಾನು ನಿಮಗೆ ದೆಹಲಿಯ ದರ್ಶನ ಮಾಡಿಸುತ್ತೇನೆ ಎಂದು ಅವರು ಅಕ್ಕನಿಗೆ ಮಾತುಕೊಟ್ಟಿದ್ದರು. ನಾವು ಆಗ್ರ , ಮತ್ತು ವಿಶೇಷವಾಗಿ ತಾಜಮಹಲ್ ನೋಡಿಕೊಂಡು ಬರಬೇಕೆಂದು ದುಂಬಾಲು ಬಿದ್ದವರೂ ಹೆಗಡೆಯೇ. ಅವರೇ ಟಿಕೆಟ್ ಕೂಡಾ ಬುಕ್ ಮಾಡಿಸಿ ಮಧ್ಯಾಹ್ನ ಗೆಸ್ಟ್ ಹೌಸಿಗೆ ಬಂದು ನಮ್ಮನ್ನು ಆಗ್ರಾ ವೀಕ್ಷಣಕ್ಕೆ ಕಳುಹಿಸಿಕೊಟ್ಟರು.

ನಾವು ಆಗ್ರಾ ತಲಪಿದಾಗ ಸಂಜೆ ಐದು ಗಂಟೆ ಸಮಯ. ಆಗ್ರಾದ ಕಿರಿದಾದ ಲೇನುಗಳಲ್ಲಿ ನಮ್ಮ ವಾಹನ ಚಲಿಸುತ್ತಾ ನಮ್ಮನ್ನು ತಾಜಮಹಲ್ ಗೇಟಿನ ಮುಂದೆ ತಂದು ನಿಲ್ಲಿಸಿತು. ನಮ್ಮ ಸಹ ಪ್ರಾವಾಸಿಗಳೊಂದಿಗೆ ನಾವೂ ಗಡಿಬಿಡಿಯಿಂದ ನಡೆಯುತ್ತಾ ತಾಜಮಹಲ್ ಎನ್ನುವ ಅದ್ಭುತವನ್ನು ನೋಡುವ ಕಾತರದಿಂದ ದೌಡಾಯಿಸಿದೆವು.

ದಾರಿಯಲ್ಲಿ ಅನೇಕ ಕ್ಯಾಮರಾಧಾರಿಗಳು ನಮ್ಮನ್ನು ಸುತ್ತುವರೆದು ಫೋಟೋ ತೆಗೆಸಿಕೊಳ್ಳಿ , ಈಗಲೇ ಪ್ರತಿಗಳನ್ನು ನಿಮಗೆ ಕೊಡುತ್ತೇವೆ. ಇಂಥ ಅವಕಾಶ ಮತ್ತೆ ನಿಮಗೆ ದೊರೆಯುವುದಿಲ್ಲ-ಇತ್ಯಾದಿ ಹಿಂದಿ ಭಾಷೆಯಲ್ಲಿ ಹೇಳುತ್ತಾ ನಮ್ಮನ್ನು ಕಾಡತೊಡಗಿದರು.

ಹೌದೂರೀ…ನಾವೂ ಕೆಲವು ಫೋಟೋ ತೆಗೆಸಿಕೊಳ್ಳೋಣ ಎಂದಳು ನನ್ನ ಪತ್ನಿ. ನಾನು ಮುಗುಳ್ನಕ್ಕು ಆಗಲಿ ಎಂದು ಕ್ಯಾಮರಾಮನ್ ಒಂದಿಗೆ ವ್ಯವಹಾರ ಕುದುರಿಸಿದೆ. ಬನ್ನಿ…ನೀವು ಗೇಟಿಂದ ಒಳಗೆ ಬರುತ್ತಿರುವಿರಿ..ಅಲ್ಲಿಂದ ಫೋಟೋ ತೆಗೆಯಲು ಶುರು ಮಾಡುತ್ತೇನೆ ಎಂದ ಕ್ಯಾಮಾರಾದವನು.

ಕ್ಯಾಮರಾದವನು ತೆಳ್ಳಗೆ ಎತ್ತರವಾಗಿದ್ದ ಬಡಕಲು ಮೈಕಟ್ಟಿನ ಹುಡುಗ. ಎಲ್ಲ ಪ್ರವಾಸ ಕೇದ್ರಗಳಲ್ಲಿ ಇರುವ ಫೋಟೋಗ್ರಾಫರ್ಗಳಂತೆ ಇವನೂ ಅನೇಕ ಭಾಷೆಗಳಲ್ಲಿ ಮಾತಾಡಬಲ್ಲವನಾಗಿದ್ದ.

ನಾನೂ ನನ್ನ ಪತ್ನಿ ಕನ್ನಡದಲ್ಲಿ ಮಾತಾಡುವುದು ನೋಡಿ…ಏನ್ಸಾರ್ ನೀವು ಬೆಂಗಳೂರಿನವರಾ…? ನಾನು ಒಂದು ವರ್ಷ ಬೆಂಗಳೂರಲ್ಲಿ ಇದ್ದೆ. ಬಸವನಗುಡಿ ಅಂತ ಇದೆಯಲ್ಲಾ ಆ ಏರಿಯಾದಲ್ಲಿ ಎಂದು ನಿಧಾನಕ್ಕೆ ನಮಗೆ ಹತ್ತಿರ ಬರಲಿಕ್ಕೆ ಶುರುಹಚ್ಚಿದ. ಕ್ಯಾಮರಾದವನು ಕನ್ನಡ ಮಾತಾಡುವುದನ್ನು ನೋಡಿ ರಾಜಲಕ್ಷ್ಮಿ ಆನಂದತುಂದಿಲಳಾದಳೆಂದೇ ಹೇಳಬೇಕು.

ನೋಡ್ರೀ..ಎಷ್ಟು ಚೆನ್ನಾಗಿ ಕನ್ನಡ ಮಾತಾಡತಾರೆ ಇವರು..ಎಂದು ಮೊದಲೇ ಕೆಂಪಾಗಿದ್ದ ಮುಖವನ್ನು ಇನ್ನಷ್ಟು ಕೆಂಪು ಮಾಡಿಕೊಂಡಳು. ಅವಳಿಗೆ ಹೆಚ್ಚು ಸಂತೋಷವಾದಾಗ ಅಥವಾ ದುಃಖವಾದಾಗ ಅವಳ ಮುಖ ಹೆಚ್ಚು ಕೆಂಪಾಗುತ್ತಿತ್ತು. ಅಗಲವಾದ ಅವಳ ತೆಳ್ಳನೆಯ ಕಿವಿಗಳಂತೂ ಇನ್ನಷ್ಟು ಕೆಂಪಾಗಿ ತಾವು ಮುಖದಿಂದ ಬೇರೆಯೇ ಆದ ಸ್ಪೇರ್ ಪಾರ್ಟ್ಸ್ ಎಂಬ ಭ್ರಮೆ ಹುಟ್ತಿಸುತ್ತಿದ್ದವು. ಅದಕ್ಕೇ ನಾನು ಅವಳನ್ನು ಆಗಾಗ ಕೆಂಗಿವಿಚೆಲುವೆ ಎಂದು ಹಾಸ್ಯಮಾಡುತ್ತಿದ್ದೆ!

ತಾಜಮಹಲ್ ದೂರದಲ್ಲಿ ಕಾಣುತ್ತಾ ಇತ್ತು. ಆದರೆ ಅಲ್ಲಿಗೆ ಹೋಗಲೇ ನಮ್ಮ ಕ್ಯಾಮಾರಾದವನು ನಮ್ಮನ್ನು ಬಿಡುತ್ತಿಲ್ಲ. ಇಲ್ಲಿ ಕುಳಿತುಕೊಳ್ಳಿ, ಇಲ್ಲಿ ನಿಂತುಕೊಳ್ಳಿ, ಈ ಮರ ಅಂತೂ ಕ್ಯಾಮರಾದಲ್ಲಿ ತುಂಬ ಚೆನ್ನಾಗಿ ಬರುತ್ತದೆ….ಈಗ ಈ ಮುರುಕು ಗೋಡೆಗೆ ನೀವು ಒರಗಿ ನಿಲ್ಲಬೇಕು.

ರಾಜಕುಮಾರ್ ಮತ್ತು ಅವರ ಪತ್ನಿ ಬಂದಾಗ ನಾನು ಅವರನ್ನು ಇಲ್ಲಿಯೇ ನಿಲ್ಲಿಸಿ ಫೋಟೊ ತೆಗೆದಿದ್ದು…ಅದನ್ನು ಅವರು ಎನ್ಲಾರ್ಜ್ ಮಾಡಿಸಿ ಮನೆಯ ಹಾಲಲ್ಲಿ ಹಾಕಿಸಿಕೊಂಡಿದ್ದಾರಂತೆ…ಇತ್ಯಾದಿ ಏನೇನೋ ನಮ್ಮ ಕ್ಯಾಮರಾವಾಲ ಬಡಬಡಿಸತೊಡಗಿದ್ದ.

ಅದು ಎಷ್ಟರಮಟ್ಟಿಗೆ ನಿಜವೋ ನನಗಂತೂ ಅನುಮಾನ! ರಾಜಕುಮಾರ್, ವಿಷ್ಣುವರ್ಧನ, ಅಂಬರೀಷ್ ಎಲ್ಲರ ಫೋಟೋವನ್ನೂ ಇವನೊಬ್ಬನೇ ತೆಗೆದಿರುವುದು ಎಂದರೆ ನಂಬುವುದಾದರೂ ಹೇಗೆ? ನನ್ನ ನಗೆ ಅವನಿಗೆ ಅನುಮಾನ ತರಿಸಿರಬೇಕು.

ಫಾರ್ ಗಾಡ್ ಸೇಕ್ ಸಾರ್…ನಿಜವಾಗಲೂ ನಾನೇ ತೆಗೆದಿರೋದು…ನನ್ನ ಆಲ್ಬಂ ನೋಡ್ತೀರಾ…ಬೇಕಾದರೆ ತೋರಿಸ್ತೀನಿ ಎಂದು ತನ್ನ ಹೆಗಲ ಚೀಲದಿಂದ ಆಲ್ಬಂ ತೆಗೆಯುವುದಕ್ಕೆ ಶುರು ಹಚ್ಚಿದ. ನಿಜಾರಿ…ಪಾಪ ಈತ ಯಾಕೆ ಸುಳ್ಳು ಹೇಳ್ತಾರೆ? ರಾಜಕುಮಾರ್ ವಿಷ್ಣುವರ್ಧನ ಅಂಬರೀಶ್ ಎಲ್ಲರ ಫೋಟೋನೂ ಇದಾವೆ ನೋಡಿ..ಎಂದು ಪತ್ನಿ ಅವನ ಸಪೋರ್ಟಿಗೆ ನಿಂತಳು.

ಅಮ್ಮಾ ಹೊತ್ತಾಗತಾ ಇದೆ…! ನೀನೇನು ತಾಜಮಹಲ್ ನೋಡಬೇಕೋ ಬೇಡ್ವೋ? ಎಂದು ನಾನು ಸಣ್ಣಗೆ ರೇಗಿದಾಗ , ಸಾರ್…ನೀವು ಏನೋ ವರೀ ಮಾಡ್ಕಬೇಡಿ…ನಿಮಗೆ ತಾಜಮಹಲ್ ತೋರ್ಸೋದು ನನ್ನ ಜವಾಬ್ದಾರಿ…ಇಲ್ಲಿ..ಇಲ್ಲಿ ಬನ್ನಿ…ಈ…ಹಸುರು ಹಾಸಲ್ಲಿ ಕೂತ್ಕೊಳ್ಳಿ…ನಾನಿಲ್ಲಿ ಭಾರತಿ ಫೋಟೋ ತೆಗೆದದ್ದು ಹೈಕ್ಲಾಸಾಗಿ ಬಂದಿದೆ ಎಂದು ಕ್ಯಾಮರಾಮನ್ ಮತ್ತೆ ಶುರುಹಚ್ಚಿದ.

ನಾವಿನ್ನೂ ತಾಜಮಹಲ್ ಇಂದ ದೂರದಲ್ಲೇ ಇದ್ದೇವೆ. ಇಷ್ಟರ ಮಧ್ಯೆ ಏನಾಯಿತೋ ಗೊತ್ತಿಲ್ಲ. ಒಮ್ಮೆಗೇ ಕ್ಯಾಮರಾದವನು ಗಾಬರಿಗೊಂಡವನಂತೆ ಸಾರ್..ಒಂದ್ನಿಮಿಷ ..ಈ ಕ್ಯಾಮರಾ ಹಿಡ್ಕೊಳ್ಳಿ…ಟಾಯಲೆಟ್ಗೆ ಹೋಗಿ ಬಂದಬಿಡ್ತೀನಿ…ಯಾಕೋ ಹೊಟ್ಟೇ ಅಪ್ಸೆಟ್ ಆದಂಗಿದೆ ಅಂದೋನೇ ಕ್ಯಾಮರಾ ನನ್ನ ಕೈಗಿ ತುರುಕಿ ಓಡಿಯೇ ಬಿಟ್ಟ.

ಓಡುವವನು ಮತ್ತೆ ಹಿಂತಿರುಗಿ ನೋಡಿ ಯಾರಾದರೂ ಕೇಳಿದರೆ ಕ್ಯಾಮರಾ ನಂದೇ ಅನ್ನಿ ಸಾರ್..ಎಂದು ಕೂಗಿದ. ಇವನದೊಳ್ಳೇ ಫಜೀತಿಯಾಯಿತಲ್ಲ ಅಂದುಕೊಂಡು ನಾನು ಮತ್ತು ನನ್ನ ಪತ್ನಿ ಪಕ್ಕದಲ್ಲೇ ಇದ್ದ ಹಾಲುಗಲ್ಲಿನ ಬೆಂಚಿನ ಮೇಲೆ ಆಸೀನರಾದೆವು.

ಕ್ಯಾಮರಾ ನನ್ನ ತೊಡೆಯ ಮೇಲೇ ಇತ್ತು. ಸ್ವಲ್ಪ ಹೊತ್ತಲ್ಲೇ ಇಬ್ಬರು ಸೆಕ್ಯೂರಿಟಿಯವರು ನಮ್ಮಲ್ಲಿಗೆ ಅವಸರವಸರದಿಂದ ಬಂದು ಕ್ಯಾಮರಾ ನಿಮ್ಮ ಸ್ವಂತದ್ದೋ ಕೇಳಿದರು…ನಾನು ಹೌದು ಅಂದಾಗ ..ಹಾಗಾದರೆ ಸರಿ ..ಅಪರಿಚಿತರು ಯಾರಾದರೂ ಕೊಡೋ ವಸ್ತುಗಳನ್ನ ದಯವಿಟ್ಟು ಇಸ್ಕೋ ಬೇಡಿ ಎಂದು ವಾರ್ನ್ ಮಾಡಿ ಮುಂದೆ ಹೋದರು.

ಅವರು ನಡೆಯುವ ಶೈಲಿ ನೋಡಿದರೆ ಯಾವುದೋ ಗಡಿಬಿಡಿಯಲ್ಲಿ ಅವರು ಇದ್ದಂತಿತ್ತು. ಒಮ್ಮೆಗೇ ನಮಗೆ ತಾಜಮಹಲ್ ನೋಡಲಿಕ್ಕೆ ಬಂದ ಪ್ರೇಕ್ಷಕರ ನಡುವೆ…ಒಂದು… ಎರಡು…ಮೂರು…ಎಲ್ಲೆಲ್ಲೂ ಪೋಲಿಸ್ ತಲೆಗಳೇ ಕಾಣಿಸತೊಡಗಿದವು. ಎಲಾ ಶಿವನೇ! ಎಷ್ಟೊಂದು ಜನ ಪೋಲೀಸರು…ನಮಗೆ ಮೊದಲು ಇವರು ಕಾಣಲೇ ಇಲ್ಲವಲ್ಲ ಎಂದು ನಾನು ಆಶ್ಚರ್ಯದಿಂದ ಉದ್ಗಾರ ತೆಗೆದೆ. ಹತ್ತು ನಿಮಿಷವಾಯಿತು. ಹದಿನೈದು ನಿಮಿಷವಾಯಿತು. ಕ್ಯಾಮರಾದವನ ಸುದ್ದಿ ಸುಳುವಿಲ್ಲ.

ಎಲ್ಲಿ ಹಾಳಾಗಿ ಹೋದ ಈ ಮನುಷ್ಯ? ಟಾಯಲೆಟ್, ಗೇಟ್ ಬಳಿಯೇ ಇತ್ತಲ್ಲ. ಅಲ್ಲಿಗೆ ಹೋಗಿ ಬರುವುದಕ್ಕೆ ಇಷ್ಟು ಸಮಯ ಬೇಕೇ? ಅಥವಾ ಈ ಮನುಷ್ಯನದೇನಾದರೂ ಬ್ರಹ್ಮಶೌಚವೋ ಹೇಗೆ? ನಿಮಗೆ ಗೊತ್ತಿರಬೇಕಲ್ಲ ಕಥೆ? ಬ್ರಹ್ಮ ಬೆಳಿಗ್ಗೆ ಪಾಯಖಾನೆಗೆ ಹೋಗುತಾ ಇದ್ದನಂತೆ.

ಲಂಕಾದ್ವೀಪದಲ್ಲಿ ಎಲ್ಲ ಹಾಡಿ ಕುಣಿಯುತ್ತಾ ದೊಡ್ಡ ಉತ್ಸವ ನಡಿತಾ ಇತ್ತಂತೆ. ಏನು ವಿಷಯ ಎಂದು ಬ್ರಹ್ಮ ಕೇಳಿದಾಗ ರಾವಣ ಹುಟ್ಟಿದ ಅಂತ ದಾರಿಹೋಕ ಹೇಳಿದನಂತೆ. ಸರಿ ಅಂದುಕೊಂಡು ಬ್ರಹ್ಮ ಪಾಯಖಾನೆಯಿಂದ ಹೊರಕ್ಕೆ ಬಂದು ಅದೇ ರಸ್ತೆಯಲ್ಲಿ ನಡೆದು ಬರುತ್ತಿರುವಾಗ ಲಂಕಾದ್ವೀಪದಲ್ಲಿ ಮತ್ತೆ ಗಲಾಟೆಯೋ ಗಲಾಟೆ. ಏನು ವಿಷಯ ಅಂತ ಬ್ರಹ್ಮ ಕೇಳಿದಾಗ ಇನ್ನೊಬ್ಬ ದಾರಿಹೋಕ ರಾವಣ ಸತ್ತನಂತೆ ಅಂದನಂತೆ!

ನಮ್ಮ ಫೋಟೊಗ್ರಾಫರ್ ಯಾರ ಹುಟ್ಟು ಅಥವಾ ಯಾರ ಸಾವಿಗಾಗಿ ಕಾಯುತ್ತಿದ್ದಾನೆ ಅನ್ನುವ ವಿಚಾರ ಮನಸ್ಸಲ್ಲಿ ಹಾಯ್ದಾಗ ನಿಜಕ್ಕೂ ನನ್ನ ಎದೆ ಒಮ್ಮೆ ಝಲ್ ಎಂದಿತು. ಈಚಿನ ದಿನಗಳಲ್ಲಿ ದೆಹಲಿಯಲ್ಲಿ ಭಯೋತ್ಪಾದಕರ ಚಟುವಟಿಕೆ ಜಾಸ್ತಿಯಾಗಿತ್ತೆಂಬುದೇ ನನ್ನ ಈ ದಿಗಿಲಿಗೆ ಕಾರಣ.

ಅರ್ಧ ಗಂಟೆಯಾದರೂ ಈ ಕ್ಯಾಮರಾಮನ್ ಯಾಕೆ ಬರಲಿಲ್ಲ? ಅವನು ನಿಜಕ್ಕೂ ಕ್ಯಾಮರಾಮನ್ನೇ? ಇದು ಕೇವಲಾ ಕ್ಯಾಮರಾವೇ? ಇದರಲ್ಲಿ ಬಾಂಬ್ ಗೀಂಬ್ ಅಡಗಿಸಿಟ್ಟಿಲ್ಲ ತಾನೇ? ಈ ವಿಚಾರ ಬರುತ್ತಲೇ ತೊಡೆಯ ಮೇಲಿದ್ದ ಕ್ಯಾಮರಾದಿಂದ ಟಿಕ್ ಟಿಕ್ ಎಂಬ ಸಣ್ಣ ಸದ್ದು ಬರುತ್ತಿದೆ ಅನ್ನಿಸಿ ಮುಖ ಬಿಳಿಚಿಕೊಂಡಿತು.

ನೋಡು…ಇದರೊಳಗಿಂದ ನಿನಗೆ ಟಿಕ್ ಟಿಕ್ ಸದ್ದೇನಾದರೂ ಕೇಳುತ್ತಿದೆಯಾ ಎಂದು ಕ್ಯಾಮರಾ ಹೆಂಡತಿಯ ಅಗೂಲಾದ ಕಿವಿಯಬಳಿ ಹಿಡಿದೆ. ಏನೂ ಇಲ್ಲವೇ..ಎಂದಳು ಆಕೆ ಕಣ್ಣರಳಿಸುತ್ತಾ! ಈ ಪ್ರಶ್ನೆ ನಾನು ಯಾಕೆ ಕೇಳಿದೆ ಎಂಬುದು ತಿಳಿಯದೆ ಅವಳು ಗೊಂದಲದಲ್ಲಿ ಬಿದ್ದಳು ಎಂಬುದು ಆಕೆಯ ಮುಖಭಾವದಿಂದ ಸ್ಪಷ್ಟವಾಗುವಂತಿತ್ತು.

ಯಾಕೂ ಇಲ್ಲ ಸುಮ್ಮನೆ ಕೇಳಿದೆ ಎನ್ನುತ್ತಾ ನಾನು ಕ್ಯಾಮರಾ ಮತ್ತೆ ಕಿವಿಯ ಬಳಿ ಇಟ್ಟುಕೊಂಡಾಗ ಸ್ಪಷ್ಟವಾಗಿ ಅದರಿಂದ ಗಡಿಯಾರದ ಸದ್ದಿನಂತೆ ಟಿಕ್ ಟಿಕ್ ಕೇಳುತಾ ಇತ್ತು. ಅಂದರೆ ಇದರಲ್ಲಿ ಆ ಧೂರ್ತ ಕೈ ಬಾಂಬ್ ಇಟ್ಟಿರಬಹುದೆ? ತಕ್ಷಣ ಹಾವು ಮೆಟ್ಟಿದವನಂತೆ ಮೈ ಜಲಿಸಿ ಕ್ಯಾಮರಾವನ್ನು ಪಕ್ಕದಲ್ಲಿದ್ದ ಇನ್ನೊಂದು ಕಲ್ಲು ಬೆಂಚಿಗೆ ವರ್ಗಾಯಿಸಿದೆ.

ಹೋಗಿ ಬರೋರೆಲ್ಲಾ ಕಲ್ಲುಬೆಂಚಿನಮೇಲೆ ಅನಾಥವಾಗಿ ಬಿದ್ದಿದ್ದ ಕ್ಯಾಮರಾದ ಮೇಲೆ ಕಣ್ಣು ಆಡಿಸತೊಡಗಿದಾಗ , ಯಾರಾದರೂ ಅದನ್ನು ಎತ್ತಿಕೊಂಡು ಹೋದರೆ ಎಂದು ಇನ್ನೊಂದು ಆತಂಕ ಪ್ರಾರಂಭವಾಯಿತು. ಟ್ರಾವಲ್ಲರ್ನವನು ಹೇಳಿದ ಸಮಯ ಮುಗಿದು ಹೋಗ್ತಾ ಇದೆ.

ಇನ್ನು ಅರ್ಧ ಗಂಟೆ ಸಮಯ ಇದೆ ಅಷ್ಟೆ…ನಾವು ತಾಜಮಹಲ್ ನೋಡೋದು ಯಾವಾಗ? ಎಂದಳು ಪತ್ನಿ. ಈ ಕ್ಯಾಮರಾದ ಯಾಸ್ಕಲ್ ಬರದೆ ನಾವು ಹೋಗೋದು ಹೇಗೆ? ಎಂದೆ. ಹೋಗಿ…ನೀವು ತಾಜಮಹಲ್ ಹತ್ತಿರ ಹೋಗಿ ನೋಡಿಕೊಂಡು ಬನ್ನಿ-ಎಂದರೆ, ಇಲ್ಲಪ್ಪಾ, ನನಗೆ ಒಬ್ಬಳಿಗೇ ಭಯವಾಗತ್ತೆ..! ಅಂದಳು.

ಅವಳಿಗೆ ಕನ್ನಡ ಬಿಟ್ಟು ಬೇರೆ ಯಾವ ಭಾಷೆಯೂ ಬರದೇ ಇದ್ದುದರಿಂದ ಎಲ್ಲಾದರೂ ಜನಜಂಗುಲಿಯಲ್ಲಿ ತಪ್ಪಿಸಿಕೊಂಡರೆ ಏನು ಗತಿ ಅಂತ ಅವಳ ಭಯ. ಮಹಾ ಆತಂಕದಲ್ಲಿ ನನ್ನ ಮೈ ಬೆವರಲಿಕ್ಕೆ ಶುರುವಾಯಿತು. ಈ ಪ್ರಶಸ್ತಿ, ದೆಹಲಿಗೆ ಬಂದದ್ದು. ಆಗ್ರಾಕ್ಕೆ ಬಂದದ್ದು.

ಈ ನಿಗೂಢ ಕ್ಯಾಮರಾಮನ್ ಭೆಟ್ಟಿ, ಅವನ ಅಷ್ಟೇ ನಿಗೂಢವಾದ ಈ ಕ್ಯಾಮರಾ…ಎಲ್ಲಾ ದೊಡ್ಡ ವ್ಯೂಹ ಎನ್ನಿಸ ತೊಡಗಿತು ಒಂದು ಕ್ಷಣ…! ನಮ್ಮನ್ನು ಕ್ಯಾಮರಾ ನಿಮ್ಮದಾ ಸಾರ್ ಎಂದು ಕೇಳಿದ ಸೆಕ್ಯೂರಿಟಿಯ ಬೃಹದ್ದೇಹಿ ದೂರದಿಂದ ನಮ್ಮ ಸಮೀಪ ಬರುವುದು ಕಾಣಿಸಿತು.

ಅವನಿಗೆ ಕ್ಯಾಮರಾ ವಿಷಯ ತಿಳಿಸಿಬಿಡಲೇ? ಅವನು ಅದನ್ನು ಸೀಜ್ ಮಾಡಿ ಎತ್ತಿಕೊಂಡು ಹೋದ ಮೇಲೆ, ಬಡಪಾಯಿ ಕ್ಯಾಮರಾಮನ್ ಬಂದು ನನ್ನ ಕ್ಯಮಾರಾ ಸರ್ ಎಂದರೆ ಎನು ಹೇಳೋದು? ಅವನು ಕೇವಲ ಅಮಾಯಕನೇ ಆಗಿದ್ದರೂ ಆಗಿರಬಹುದಲ್ಲ? ಮೊದಲು ಕೇಳಿದಾಗ ಕ್ಯಾಮರಾ ನಮ್ಮದೇ ಎಂದವನು ಈಗ ನಮ್ಮದಲ್ಲ ಎಂದರೆ , ಸೆಕ್ಯೂರಿಟಿಯವ ನಮಗೇ ತಗುಲಿಕೊಂಡರೆ ಏನು ಮಾಡುವುದು?

ಕ್ಯಮರಾದವ ತೊಲಗಿ ಅರ್ಧಗಂಟೆಯೇ ಆಗಿಹೋಗಿತ್ತು. ಈ ಅರ್ಧ ಗಂಟೆ ನನ್ನ ಜೀವನದ ಬಹು ದೊಡ್ಡ ನರಕ. ಅಂತ ಭಯ ಆತಂಕಗಳನ್ನು ನಾನು ಯಾವತ್ತೂ ಅನುಭವಿಸಿದ್ದಿಲ್ಲ. ನಾವು ಬಸ್ ಬಳಿ ಹೋಗುವುದಕ್ಕೆ ಇನ್ನು ಹದಿನೈದು ನಿಮಿಷ ಮಾತ್ರ ಸಮಯವಿತ್ತು.

ಆಕಾಶದಲ್ಲಿ ಕಪ್ಪು ಮೋಡಗಳು ಆವರಿಸುತ್ತಾ ಮಳೆ ಸುರಿಯುವ ಆತಂಕ ಬೇರೆ ಉಂಟಾಯಿತು. ಜನ ಗಡಿಬಿಡಿಯಿಂದ ಗೇಟ್ ಕಡೆ ಧಾವಿಸುತ್ತಿದ್ದರು. ತಾಜಮಹಲ್ ಇನ್ನೂ ದೂರದಲ್ಲೇ ಇತ್ತು. ಅದನ್ನು ನೋಡುವ ಉತ್ಸಾಹ ಈಗ ಸಂಪೂರ್ಣವಾಗಿ ನಾಶವಾಗಿತ್ತು.

ಹೆಂಡತಿ ಸಪ್ಪೆಮುಖಮಾಡಿಕೊಂಡು ಪೆಚ್ಚಾಗಿ ಕೂತಿದ್ದಳು. ಆಗ ಕಂಡ ನೋಡಿ ದೂರದಲ್ಲಿ ಓಡುವಂತೆಯೇ ಬರುತ್ತಿದ್ದ ನಮ್ಮ ಕ್ಯಾಮರಾಮನ್ . ಸಾರ್..ತುಂಬಾ ಸಾರಿ ಸಾರ್….ನೀವೇನೂ ಯೋಚನೆ ಮಾಡಬೇಡಿ..ಇಲ್ಲಿ ಇಲ್ಲಿ ನಿಂತ್ಕೊಳ್ಳಿ…ತಾಜಮಹಲ್ ನಿಮ್ಮ ಬೆನ್ನಿಗೆ ಹತ್ತಿದೆಯೇನೋ ಅನ್ನುವಂತೆ ಫೋಟೋ ತೆಗೆದು ಕೊಡೋದು ನನ್ನ ಜವಾಬ್ದಾರಿ…ಗಾಡ್ ಪ್ರಾಮಿಸ್ ಸಾರ್…ಎನ್ನುತ್ತಾ ಚಕ ಚಕ ಒಂದೇ ಸಮನೆ ಹಲವಾರು ಫೋಟೋ ತೆಗೆದು,ನೀವು ಈಗ ಹಣ ಕೊಡೋದು ಬೇಡ ಸಾರ್…ವಿಳಾಸ ಕೊಡಿ ಸಾಕು….ಫೋಟೋಸ್ ಕಳಿಸಿಕೊಡ್ತೀನಿ…ಫೋಟೋಗಳು ನಿಮಗೆ ಖುಷಿಕೊಟ್ಟರೆ ಆಮೇಲೆ ಹಣ ಕಳಿಸಿ ಸಾರ್…ಎಂದುಹೇಳುತ್ತಾ, ತಡವಾದುದಕ್ಕೆ ಅವನ ತಮ್ಮನಿಗೆ ಸೀರಿಯಸ್ ಆದದ್ದು ಕಾರಣ ಎಂದು ಸಬೂಬು ಹೇಳುತ್ತಾ ನಮ್ಮನ್ನು ಬಸ್ ವರೆಗೂ ಬಂದು ಬೀಳ್ಕೊಟ್ಟ…

ಹೀಗೆ ನಾವು ಆಗ್ರಾಕ್ಕೆ ಹೋಗಿ, ತಾಜಮಹಲ್ ಸಮೀಪದಿಂದ ನೋಡದೆ ವಾಪಸ್ಸಾದ ನತದೃಷ್ಟರು! ಈ ಪ್ರಸಂಗ ನಿಮಗೆ ನಗೆ ತರಿಸಬಹುದು. ಆದರೆ ಒಂದು ಸಣ್ಣ ಆತಂಕ ಹೇಗೆ ಎಲ್ಲ ಬಗೆಯ ಆನಂದವನ್ನೂ ನಮ್ಮಿಂದ ದೂರ ಮಾಡಬಲ್ಲದು ಎಂಬ ಸಂಗತಿಯಾಗಿ ಹೃದಯವನ್ನು ತಲ್ಲಣಗೊಳಿಸುತ್ತಾ ಇದೆ.