Wednesday, August 4, 2010

ಬಾನಂಗಳದ ರಂಗವಲ್ಲಿ

ಬಾನಂಗಳದ ರಂಗವಲ್ಲಿ
mahipal reddi

ಮಹಿಪಾಲ್ ರೆಡ್ಡಿ ಮುನ್ನೂರ್
ರಿಹರ್ಸಲ್…
ಅಕ್ಷರ ಜ್ಞಾನವಿಲ್ಲದಿದ್ದರೆ ಈ ಲೌಕಿಕ ಬದುಕಿನ ಜಗತ್ತಿನಲ್ಲಿ ’ಹಾಗೇ ಸುಮ್ಮನೆ’ ಜೀವನ ನಡೆಯಲಾರದು. ವಿದ್ಯೆಯಿಂದಲೇ ಮನುಷ್ಯ ವ್ಯಕ್ತಿತ್ವದ ವಿಕಾಸವಾಗುತ್ತದೆ. ಜತೆಗೆ ಒಂದು ಸಮುದಾಯದ ಸರ್ವಾಂಗೀಣ ಅಭಿವೃದ್ಧಿಯೂ ಅದರೊಳಗೆ ಇರುತ್ತದೆ.
ಈ ನೆಲದಲ್ಲಿರುವವರಿಗೂ ಮೂಲಭುತ ಸೌಲಭ್ಯಗಲ್ಲೊಂದಾದ ’ಅಕ್ಷರ ಜ್ಞಾನ-ಶಿಕ್ಷಣ’ ಕೊಡುವುದಾಗಿ ಸರಕಾರವು ಶ್ರಮ ಪಡುತ್ತಿದೆ. ಬಾಲ ಕಾರ್ಮಿಕರನ್ನು ಹಿಡಿದು ಶಾಲೆಗೆ ಕಳುಹಿಸುವುದು, ಶಾಲೆ ಬಿಟ್ಟ ಮಕ್ಕಳಿಗೆ ಮರಳಿ ಶಾಲೆಗೆ ಸೇರಿಸುವುದು, ಕೂಲಿ ಕೆಲಸಕ್ಕೆ ಕಳಿಸಲ್ಪಡುವುದನ್ನು ತಡೆಹಿಡಿದು ಅವರನ್ನು ಶಾಲೆಯಲ್ಲಿ ಕೂಡಿಸುವುದು, ವಯಸ್ಕರ ರಾತ್ರಿ ಶಾಲೆ, ಬಾ ಮರಳಿ ಶಾಲೆಗೆ, ಕೂಲಿಯಿಂದ ಶಾಲೆಗೆ.. ಹೀಗೆ ಒಂದೇ….ಎರಡೇ…ಅನೇಕ ಯೋಜನೆಗಳು ಸರಕಾರವು ಹಾಕಿಕೊಂಡಿದೆ.
ಇದಕ್ಕಾಗಿ ಪೂರಕವಾಗಿ ’ದೂರಶಿಕ್ಷಣ’ದ ಹೆಸರಿನಲ್ಲಿ ಪಾಠಬೋದನೆ, ಪಾಠಗಲ ರೂಪಾಂತರ ಮೂಲಕ ಮಕ್ಕಳ ಭೌತಿಕ ವಿಕಾಸಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿದೆ.
ಆ ನಿಟ್ಟಿನಲ್ಲಿ ಆಕಾಶವಾಣಿಯ ಜತೆಗೂಡಿ ’ದೂರಶಿಕ್ಷಣ’ಯೋಜನೆಯಡಿ ಸರಕಾರವು ಶಾಲಾ ಅಭ್ಯಾಸಿಗಳಿಗೆ ಪಾಠಗಳ ರೂಪಾಂತರ ಮಾಡಿ ಅಧ್ಯಯನಕ್ಕೆ ಅನುಕೂಲ ಮಾಡಿಕೊಡಲಾಗಿತ್ತು.
ಆ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು, ಸಾಹಿತಿಗಳನ್ನು, ನಾಟಕಕಾರರನ್ನು ಒಂದೆಡೆ ಸೇರಿಸಿ, ಪ್ರಾಥಮಿಕ, ಹೈಸ್ಕೂಲು ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಪಾತ್ರಗಳನ್ನೇ ನಾಟಕ ರೂಪಾಂತರ ಮಾಡಿ ಅವರ ಬೌದ್ಧಿಕ ಬೆಳವಣಿಗೆಗೆ ಕಾರಣವಾಗುವ ಯೋಜನೆಯನ್ನು ಹಾಕಿಕೊಂಡಿತ್ತು.
ಅಂಥ ಸಂದರ್ಭದಲ್ಲಿ ನನಗೂ ಆ ಅವಕಾಶ ಸಿಕ್ಕಿತ್ತು.ಹೀಗಾಗಿ ಓದುವ ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಪುಟ್ಟ ಪುಸ್ತಕ ನಾಟಕಗಳ ಸಂಕಲನ ರೂಪಿಸಲಾಗಿದೆ. ಈ ಕೃತಿಯಲ್ಲಿ ಆಕಾಶವಾಣಿಯಲ್ಲಿ ಪ್ರಸಾರವಾದ ಏಳು ನಾಟಕಗಳಿವೆ. ಹೈಸ್ಕೂಲು ಹಾಗೂ ಪ್ರಾಥಮಿಕ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ, ಅಭಿರುಚಿ ಮೂಡುವಂತಹ ರೀತಿಯಲ್ಲಿ ಈ ನಾಟಕಗಳನ್ನು ಆಡುಭಾಷೆಯಲ್ಲಿ ಬರೆಯಲಾಗಿದೆ.
ಅಕ್ಷರಾಭ್ಯಾಸವೂ ಸಹ ಮಕ್ಕಳ ಮನೋವಿಕಾಸಕ್ಕೆ ಸಹಕಾರಿಯಾಗುವ ರಾಷ್ಟ್ರೀಯ ಸಂದೇಶಗಳಲ್ಲಿ ಬಿಂಬಿಸುವ ಪ್ರಯತ್ನ ಮಾಡಲಾಗಿದೆ.’ಕಥೆ’ಯಂತೆ ನಾಟಕಗಲು ಕೂಡ ಮಕ್ಕಳ ಮನಸ್ಸಿನ ಮೇಲೆ ಬಹುಬೇಗ ಪ್ರಭಾವ ಮೂಡಿಸುತ್ತದೆ. ನಾಟಕಗಳನ್ನು ಓದಿ ಆನಂದಿಸಬೇಕು. ಅದರ ಜತೆಗೆ ರಂಗಭೂಮಿಯ ಮೇಲೆ ಇಲ್ಲವೇ ಬಾನುಲಿಯಲ್ಲಿ ಅಭಿನಯಿಸುವ ಮೂಲಕ ಹೆಚ್ಚೆಚ್ಚು ಜನಕ್ಕೆ ಇಲ್ಲಿಯ ನಾಟಕಗಲ ರಸವತ್ತಾದ ಶೈಲಿ ಮತ್ತು ರಾಷ್ಟ್ರೀಯ ಜ್ಞಾನ ಸಂದೇಶ ತಲುಪಿಸಬೇಕಾದ ಅಗತ್ಯವಿದೆ.
ಆ ಹಿನ್ನಲೆಯಲ್ಲಿಯೇ ಇದೆಲ್ಲವೂ.ಪ್ರೀತಿಯಿಂದ ಇದನ್ನು ಕೈಗೆತ್ತಿಕೊಳ್ಳುತ್ತೀರಿ ಮತ್ತು ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಕಾರಣರಾಗುತ್ತೀರಿ ಎಂದು ಆಶಿಸುತ್ತೇನೆ.

ಪ್ರಿಯ ಮಕ್ಕಳೆ, ನಿಮಗೂ ಮನವಿ.ಏನೆಂದರೆ, ನೀವು ಓದುವ ಪಠ್ಯಕ್ಕೆ ಸಂಬಂಧಿಸಿದಂತೆ ಪಾಠಗಳನ್ನು ಆಯ್ದುಕೊಂಡು ರೂಪಾಂತರ ಮಾಡಿ ನಾಟಕಗಳ ಮೂಲಕ ನಿಮ್ಮ ಮನೋವಿಕಾಸಕ್ಕೆ ಏಣಿಯಾಗಲಿದ್ದು, ಈ ನಾಟಕಗಳನ್ನು ಓದುವಿರಿ ಮತ್ತು ಅಭಿನಯಿಸುವಿರಿ ಎಂಬ ನಂಬಿಕೆ ಇಟ್ಟುಕೊಂಡಿದ್ದೇನೆ.
ಈ ನಾಟಕಗಳ ರಚನೆ ಎನ್ನುವುದು ಕನಸಿನಂತೆಯೇ ಆಯಿತು ಎಂದರೆ ತಪ್ಪೇನಲ್ಲ.ಕಲಬುರ್ಗಿ ಆಕಾಶವಾಣಿಯಲ್ಲಿದ್ದ ಸನ್ಮಿತ್ರ ಪರ್ವತೀಕರ ಸತೀಶ ಅವರು ನಾಟಕಗಳನ್ನು ಬರೆಯುವಂತೆ ಪ್ರೇರೇಪಿಸಿದರು.
ಅದಕ್ಕೂ ಮುನ್ನ ನವರಂಗ ನಾಟ್ಯನಿಕೇತನದ ಸ್ಥಾಪಕ, ಅಧ್ಯಕ್ಷ, ಮಿತ್ರ ಪ್ರಭಾಕರ ಜೋಶಿ ಅವರ ಜತೆಗಿನ ’ರಂಗಸ್ನೇಹ’ದಿಂದಾಗಿ ನನ್ನಂಥವನಿಗೆ ನಾಟಕದ ಗೀಳು ಅಂಟಿಕೊಂಡಿತು. ಅದರ ಪ್ರತಿಫಲವೇ ಈ ಕೃತಿ ಎನ್ನಬಹುದು.
ಈ ನಾಟಕ ಕೃತಿಯನ್ನು ಓದುಗರ ಕೈಗಿಡುವಲ್ಲಿ ಸಹಕರಿಸಿದ ಎಲ್ಲ ನನ್ನ ಆಪ್ತ ಮಿತ್ರರಿಗೆ ನೆನೆಕೆಗಳು, ಪುಸ್ತಕವನ್ನು ಪ್ರಕಟಿಸುತ್ತಿರುವ ’ರಾಷ್ಟ್ರಕೂಟ ಪುಸ್ತಕ ಮನೆ’ ಅವರಿಗೆ ವಂದನೆಗಳು.
’ರಾಷ್ಟ್ರಕೂಟ ಪುಸ್ತಕ ಮನೆ’ ಅವರಿಗೆ ವಂದನೆಗಳು.

No comments: