Wednesday, July 7, 2010

ನಟಸಾರ್ವಭೌಮನಿಗೆ ಹುಟ್ಟುಹಬ್ಬದ ಶುಭಾಶಯಗಳು

ನಟಸಾರ್ವಭೌಮನಿಗೆ ಹುಟ್ಟುಹಬ್ಬದ ಶುಭಾಶಯಗಳು



ನಟಸಾರ್ವಭೌಮನಿಗೆ ಹುಟ್ಟುಹಬ್ಬದ ಶುಭಾಶಯಗಳು. ಏಪ್ರಿಲ್ ೨೪ ಎರಡು ಕಾರಣಗಳಿ೦ದ ಮಹತ್ವದ ದಿನ. ಒ೦ದು: ಕನ್ನಡ ನಾಡು ಕ೦ಡ ಅದ್ಬುತ ಪ್ರತಿಭೆ ವರನಟ ಡಾ.ರಾಜಕುಮಾರ್ ಅವರ ಜನ್ಮದಿನ. ಎರಡು: ಜಗತ್ತು ಕ೦ಡ ಮತ್ತೊ೦ದು ಅದ್ಬುತ ಪ್ರತಿಭೆ ಸಚಿನ್ ತೆ೦ಡೊಲ್ಕರ್ ಜನ್ಮದಿನ ಕೂಡ. ಡಾ.ರಾಜ್ ಭೌತಿಕವಾಗಿ ಇಲ್ಲದೇ ನಾಲ್ಕು ವರ್ಷಗಳು ಕಳೆದಿವೆ. ಈಗಲೂ ಅವರಿಲ್ಲ ಎ೦ದು ಅನಿಸುವುದಿಲ್ಲ. ಏಕೆ೦ದರೆ ಕನ್ನಡದ ಏಕೀಕರಣದ ನ೦ತರ ಕನ್ನಡಿಗರ ಭಾವಕೋಶದಲ್ಲಿ ನೆಲೆಯಾದ ಸಾ೦ಸ್ಕೃತಿಕ ನಾಯಕ ರಾಜ್. ಕನ್ನಡ ಭಾಷೆಯ ಸಮಾನ ಅ೦ಶವೊ೦ದನ್ನು ಬಿಟ್ಟರೆ ಭಿನ್ನ ಭೌಗೋಳಿಕ ಪ್ರದೇಶ, ವಿವಿಧ ಬಗೆಯ ಹಿನ್ನೆಲೆ ಇರುವ ಎಲ್ಲರನ್ನೂ ತಲುಪಿದ ಡಾ.ರಾಜಕುಮಾರ್ ಅಪ್ರತಿಮ ವ್ಯಕ್ತಿತ್ವ, ಕಲಾವಿದ. ಅ೦ಥವರು ಯುಗಕ್ಕೊಬ್ಬರು. ಅ೦ಥ ರಾಜಣ್ಣನಿಗೆ ಹುಟ್ಟುಹಬ್ಬದ ಶುಭಾಶಯಗಳು.






ಅಣ್ಣಾವ್ರ ಬಗ್ಗೆ ಕೆಲವು ಗೊತ್ತಿಲ್ಲದ, ಅಥವಾ ತಿಳಿಯಬೇಕಾದ ಸ೦ಗತಿಗಳು, ನಿಮ್ಮೊಡನೆ ಹ೦ಚಿಕೊಳ್ಳುತ್ತಿದೇನೆ...



೧. ಭಾರತೀಯ ಚಿತ್ರರ೦ಗದಲ್ಲೆ ಅಭಿನಯಕ್ಕಾಗಿ ಡಾಕ್ಟರೇಟ್ ಪದವಿ ಪಡೆದ ಮೊದಲ ನಟ ಡಾ.ರಾಜ್.
೨. ಅಮೆರಿಕಾದ ಕೆ೦ಟಕಿ ರಾಜ್ಯ ನೀಡುವ ಪ್ರತಿಷ್ಟಿತ ’ಕೆ೦ಟಕಿ ಕರ್ನಲ್’ ಪ್ರಶಸ್ತಿ ಪಡೆದ ಏಕೈಕ ಭಾರತೀಯ ನಟ.
೩. ಸುಮಾರು ೫೦ಕೂ ಹೆಚ್ಚು ವರ್ಷಗಳ ಕಾಲ ಒ೦ದೇ ಭಾಷೆ ಚಿತ್ರಗಳಲ್ಲಿ ನಟಿಸಿದ ಏಕೈಕ ಕಲಾವಿದ.
೪. ಜೀವಿತಾವಧಿಯಲ್ಲೆ ರಾಜ್ಯ ಸರ್ಕಾರದ ವತಿಯಿ೦ದ ತಮ್ಮದೇ ಹೆಸರಿನ ಪ್ರಶಸ್ತಿ ಪ್ರದಾನದ ಗೌರವ ಪಡೆದ ಏಕೈಕ ನಟ.
೫. ಜಗತ್ತಿನಾದ್ಯ೦ತ ಐದು ಸಾವಿರಕ್ಕೂ ಹೆಚ್ಚು ಅಭಿಮಾನಿ ಸ೦ಘಗಳನ್ನು ಹೊ೦ದಿರುವ ಏಕೈಕ ನಟ.
೬. ಅಭಿನಯ ಮತ್ತು ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ನಟ.
೭. ರಾಜ್ ಅಭಿನಯಿಸಿದ ಮೊದಲ ಚಿತ್ರಕ್ಕೇ ರಾಷ್ಟ್ರ ಪ್ರಶಸ್ತಿಯ ಗೌರವ.
೮. ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡ ನಟ.
೯. ಸರ್ಕಾರ, ಸ೦ಘ ಸ೦ಸ್ಥೆಗಳು, ಅಭಿಮಾನಿಗಳಿ೦ದ ಹತ್ತಕ್ಕೂ ಹೆಚ್ಚು ಬಿರುದುಗಳನ್ನು ಪಡೆದುಕೊ೦ಡ ಏಕೈಕ ನಟ.
೧೦. ಒ೦ಬತ್ತು ಬಾರಿ ರಾಜ್ಯ ಪ್ರಶಸ್ತಿ, ೧೦ ಬಾರಿ ಫಿಲ೦ಫೇರ್ ಪ್ರಶಸ್ತಿ, ಎರಡು ಬಾರಿ ರಾಷ್ಟ್ರಪ್ರಶಸ್ತಿಗಳನ್ನು ಪಡೆದುಕೊ೦ಡ ಏಕೈಕ ನಟ
೧೧. ಒ೦ದೇ ವರ್ಷದಲ್ಲಿ ೧೬ ಚಿತ್ರಗಳಲ್ಲಿ ನಟಿಸಿದ ಏಕೈಕ ನಟ, ಅದೂ ಎರಡು ಬಾರಿ; ೧೯೬೪ ಮತ್ತು ೧೯೬೮ರಲ್ಲಿ.
೧೨. ಆ೦ಧ್ರಪ್ರದೇಶ ಸರ್ಕಾರ ನೀಡುವ ’ಎನ್ ಟಿ ಆರ್ ಪ್ರಶಸ್ತಿ’ಯನ್ನು ಪಡೆಕ ಏಕೈಕ ಕನ್ನಡ ನಟ.
೧೩. ಭಾರತೀಯ ಚಿತ್ರರ೦ಗದಲ್ಲೆ ಅತಿಹೆಚ್ಚು ಸಕ್ಸಸ್ ರೇಟ್ ಹೊ೦ದಿದ್ದ ಚಿತ್ರನಟ - ೯೫%.

ಆಪ್ತರಕ್ಷಕ: ಸಿನಿಮಾ ವಿಮರ್ಶೆ

ಆಪ್ತರಕ್ಷಕ: ಭಯಾನಕ, ಹಾಸ್ಯಭರಿತ, ರೋಚಕ - ಸಿನಿಮಾ ವಿಮರ್ಶೆ




ತುಂಬಾ ದಿನ ಆಗಿತ್ತು. ಒಂದು ಉತ್ತಮ ಕನ್ನಡ ಚಿತ್ರ ನೋಡದೇ. ಒಂದು ಕಡೆ ಬೇರೆ ಬೇರೆ ಎಂಗಲ್ ನಲ್ಲಿ ಲಾಂಗ್ ಬೀಸೋದೆ ಹೊಸತನ ಎಂದುಕೊಂಡಿರೋ ರೌಡಿ ಕಥೆಗಳ ಚಿತ್ರವಾದ್ರೆ ಇನ್ನೊಂದು ಕಡೆ ಒಬ್ಬರನ್ನು ಪ್ರೇಮಿಸುವ ಇಬ್ಬರು ಅದರಲ್ಲಿ ಒಬ್ಬರ ತ್ಯಾಗ. ವಾಕರಿಕೆ ಬರುವಷ್ಟು ನೋಡಿ ಅಂತಹ ಚಿತ್ರಗಳನ್ನು ಥಿಯೇಟರ್ ಗೆ ಹೋಗಿ ನೋಡುವದನ್ನು ನಿಲ್ಲಿಸಿ ಹಲವು ತಿಂಗಳೇ ಆಯ್ತು.



ಆಗ ಬಂತು ಈ ಆಪ್ತರಕ್ಷಕ. ಆಪ್ತಮಿತ್ರ ನೋಡಿದ್ದ ನನಗೆ ಅದರ ಕಥೆಯನ್ನು ಹೇಗೆ ಮುಂದುವರಿಸಿರಬಹುದು ಎಂಬ ಕುತೂಹಲ ಇತ್ತು. ಏನಪ್ಪಾ ಇದೆ ನಾಗವಲ್ಲಿ ಸಂತೋಷದಿಂದ ಹೊರಟು ಹೋಗಿದ್ದಾಳೆ ವಿಜಯ ರಾಜೇಂದ್ರ ಬಹದ್ದೂರ ಸತ್ತಿದ್ದಾನೆಂದು ಭಾವಿಸಿ. ಇನ್ನೇನು ಕಥೆ ಹೇಳುವದಿದೆ?



ಆಪ್ತಮಿತ್ರ ನೋಡಿದ್ದ ನಾನು ಆಪ್ತರಕ್ಷಕ ಅದಕ್ಕಿಂತ ಚೆನ್ನಾಗಿರಬೇಕೆಂದು ಬಯಸಿದ್ದೆ. ಪಿ.ವಾಸು ನನಗೆ ಒಂಚೂರೂ ನಿರಾಶೆ ಮಾಡಲಿಲ್ಲ. ಅದರಷ್ಟೇ ಎನೂ ಅದಕ್ಕಿಂತ ಚೆನ್ನಾಗಿಯೇ ನಿರೂಪಿಸಿದ್ದಾರೆ ಎಂದರೆ ಅದು ಉತ್ಪ್ರೇಕ್ಷೆಯ ಮಾತು ಖಂಡಿತ ಅಲ್ಲ.



ಆಪ್ತಮಿತ್ರ ಚಿತ್ರದ ಕಥೆಯನ್ನು ಮುಂದುವರಿಸಿರುವ ರೀತಿ ಉತ್ತಮ ಹೇಳಬಹುದು.



ಭಯ ಹುಟ್ಟಿಸುವ ಸನ್ನಿವೇಶಗಳು ಅದಕ್ಕೆ ತಕ್ಕಂತೆ ಎದೆ ನಡುಗಿಸುವ ಹಿನ್ನೆಲೆ ಸಂಗೀತ. ಹೆದರಿ ಮುದುಡಿ ಕೂತ ಪ್ರೇಕ್ಷಕರಲ್ಲೂ ನಗೆ ಉಕ್ಕಿಸುವ ಕೋಮಲ್ ಕುಮಾರ್ ಅಭಿನಯ, ಮಾತಿನ ಶೈಲಿ. ಚಿತ್ರಕ್ಕೆ ಪೂರಕ ಗುರುಕಿರಣ್ ಸಂಗೀತ. ಹಳೆಯ ಕಾಲಕ್ಕೆ ಒಯ್ಯುವ ಗುರುಕಿರಣ್ ಅವರ "ಗರ ಗರನೆ" ಹಾಡು ಹಾಗೂ ಮತ್ತೊಮ್ಮೆ ಇರುವ ಸುಮಧುರ "ರಾ ರಾ" ಹಾಡೂ ಕೂಡ ರಂಜಿಸುತ್ತದೆ.



ವಿಮಲಾ ರಾಮನ್ ಅವರೂ ಕೂಡ ನಾಗವಲ್ಲಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಹಾಗೆಯೇ ಸಂಧ್ಯಾ ಹಾಗೂ ಭಾವನಾ ಕೂಡಾ ಮಿಂಚಿದ್ದಾರೆ.



ಈ ಚಿತ್ರದ ನಾಯಕ ಡಾ॥ ವಿಷ್ಣುವರ್ಧನ್ ಮೂರು ಪಾತ್ರಗಳಲ್ಲಿ ಮಿಂಚಿದ್ದಾರೆ. ಈ ಮೂರು ಪಾತ್ರಗಳಲ್ಲಿ ನನಗೆ ಅತ್ಯಂತ ಹಿಡಿಸಿದ ಪಾತ್ರ ವಿಜಯ ರಾಜೇಂದ್ರ ಬಹಾದ್ದೂರ್ ದ್ದು. ಈ ರಾಜನ ಪಾತ್ರದಲ್ಲಿ ವಿಷ್ಣುವರ್ಧನ್ ಇನ್ನೂ ಯಂಗ್ ಆಗಿ ಕಾಣಿಸುತ್ತಾರೆ. ಕುದುರೆ ಮೇಲೆ ಬರುವ, "ಹೌರಾ..." ಎಂದು ಕಿರುಚುವ ಹಾಗೂ ಅವರ ಮಾತಿನ ಶೈಲಿಯನ್ನು ನೋಡಿಯೇ ಆನಂದಿಸಬೇಕು. ಡಾ॥ ವಿಜಯ್ ಪಾತ್ರ ಕೂಡಾ ಪರವಾಗಿಲ್ಲ. ಆದರೆ ಭಯ ಹುಟ್ಟಿಸುವದು ೧೨೩ ವರ್ಷ ವಯಸ್ಸಿನ ಮುದುಕನ ಪಾತ್ರ. ಉದ್ದನೆ ಉಗುರು, ಉದ್ದನೆಯ ಜಡೆ ಸಹಿತ ಮುಖಕ್ಕೆ ಬಣ್ಣ ಬಳಿದುಕೊಂಡಿರುವ ಈ ಪಾತ್ರಕ್ಕೆ ಮುಖಕ್ಕೆ ನೆರಿಗೆ ಹಾಗೂ ಜಡೆ ಬಿಳಿದಾಗಿದ್ದರೆ ಚೆನ್ನಾಗಿತ್ತು ಅನ್ನಿಸಿತು. ಇದು ವಿಷ್ಣುವರ್ಧನ್ ಅವರ 200ನೇ ಚಿತ್ರ ಕೂಡಾ. ಇದು ವಿಷ್ಣುವರ್ಧನ್ ಅವರ ಅತ್ಯುತ್ತಮ ಚಿತ್ರಗಳಲ್ಲಿ ಒಂದು ಕೂಡಾ!!



ಕಥೆಯ ಪ್ರಕಾರ ನಾಗವಲ್ಲಿ ತೆಲುಗು ನರ್ತಕಿ ಆಗಿರುವದರಿಂದ ತೆಲುಗು ಭಾಷೆಯಲ್ಲೇ ಮಾತನಾಡಿಸಿದ್ದಾರೆ. ಇದು ನೈಜತೆ ಹೆಚ್ಚಿಸಿದೆ. ಆದರೆ ಕನ್ನಡ ಸಬ್ ಟೈಟಲ್ ಇದ್ದರೆ ಚೆನ್ನಾಗಿರುತಿತ್ತು ಅನಿಸಿತು.



ಈ ಚಿತ್ರ ನೀವು ಎಂಜಾಯ್ ಮಾಡಲು ತರ್ಕ ಗಳನ್ನು ಮನೆಯಲ್ಲಿ ಮೂಟೆ ಕಟ್ಟಿ ಥಿಯೇಟರ್ ಗೆ ಹೋಗಬೇಕು. ಆಗ ಈ ಚಿತ್ರ 24 ಕ್ಯಾರೆಟ್ ಅಪ್ಪಟ ಮನರಂಜನೆ ನೀಡುವದರಲ್ಲಿ ಸ್ವಲ್ಪವೂ ಸಂಶಯವೇ ಇಲ್ಲ.



ಪ್ಲಸ್ ಪಾಯಿಂಟ್




ಕೋಮಲ್ ಕುಮಾರ್ ಅವರ ಉತ್ತಮ ಹಾಸ್ಯ ಅಭಿನಯ

ವಿಮಲಾ ರಾಮನ್ ಅವರ ನಾಗವಲ್ಲೀ ಅಭಿನಯ

ವಿಷ್ಣುವರ್ಧನ್ ಅಭಿನಯ

ಉತ್ತಮ ಚಿತ್ರ ಕಥೆ

ಚಿತ್ರಕ್ಕೆ ಪೂರಕ ಗುರುಕಿರಣ್ ಸಂಗೀತ

ಅತ್ಯುತ್ತಮ ಹಿನ್ನೆಲೆ ಸಂಗೀತ

ಉತ್ತಮ ಗ್ರಾಫಿಕ್ಸ್

ಭಯ ಹುಟ್ಟಿಸುವ ಸನ್ನಿವೇಶಗಳು


ಮೈನಸ್ ಪಾಯಿಂಟ್




ತರ್ಕಕ್ಕೆ ನಿಲುಕದ ಕೆಲವು ಸನ್ನೀವೇಶಗಳು

ಮಾಯ-ಮಂತ್ರದ ಮೇಲೆ ಆಧರಿಸಿದ ಕಥೆ


ಮಕ್ಕಳನ್ನು ಕರೆದೊಯ್ಯದಿದ್ದರೆ ಉತ್ತಮ. ಕೆಲವು ಸನ್ನಿವೇಶಗಳು, ಹಿನ್ನೆಲೆ ಸಂಗೀತ ಅವರಿಗೆ ಭಯ ಹುಟ್ಟಿಸಬಹುದು.



ಲಾಜಿಕ್ ಬದಿಗಿಟ್ಟು ದೊಡ್ಡ ಮನಸ್ಸು ಮಾಡಿ ನೋಡುವವರಾದರೆ ಕುಟುಂಬ ಸಮೇತ ಎಂಜಾಯ್ ಮಾಡಬಹುದಾದ ಚಿತ್ರ.

ಪೃಥ್ವಿ: ಸಿನಿಮಾ ವಿಮರ್ಶೆ

ಪೃಥ್ವಿ: ಎಲ್ಲವೂ ಅನಿವಾರ್ಯ - ಸಿನಿಮಾ ವಿಮರ್ಶೆ



ಪುನಿತ್ ಚಿತ್ರಗಳಲ್ಲಿ ಆತನ ‘ಪವರ್’ದೇ ಕಾರುಬಾರು. ಇಲ್ಲಿಯೂ ಹಾಗೆ. ಮೊದಲಿಂದ ತುದಿಯವರೆಗೂ ಚಿತ್ರ ಪುನಿತ್ ಮಯ. ಅದನ್ನು ಅಷ್ಟೇ ಸಮರ್ಥವಾಗಿ ನಿಭಾಯಿಸಿದ್ದು ಪುನಿತ್ ಹೆಗ್ಗಳಿಕೆ, ನಿರ್ದೇಶಕರ ಕೈಚಳಕ. ಪುನಿತ್ ತನ್ನ ಮಾಮೂಲಿ ಇಮೇಜ್ ಬಿಟ್ಟು ತುಸು ವಿಭಿನ್ನ ಗೆಟ್-ಅಪ್ ನಲ್ಲಿ ಕಾಣಿಸಿದ್ದಾನೆ. ಇಲ್ಲಿ ಆತ ಬಳ್ಳಾರಿಯ ಡಿ.ಸಿ. ಪುನಿತ್ ಮೈಕಟ್ಟು , ಡ್ರೆಸ್ಸಿಂಗ್ ಆ ಪಾತ್ರಕ್ಕೆ ಪಕ್ಕಾ ಫಿಟ್. ಪುನಿತ್ ಕೆಲವೊಂದು ಸನ್ನಿವೇಶದಲ್ಲಿ ಡಾ||ರಾಜ್ ರನ್ನು ನೆನಪಿಸಿದರೆ ಅದು ಪುನಿತ್ ತಪ್ಪಲ್ಲ. ಇಡೀ ಚಿತ್ರ ಬಳ್ಳಾರಿ ಗಣಿ ಮಾಫಿಯಾದ ಸುತ್ತ ಸುತ್ತುತ್ತದೆ. ನಮಗೆಲ್ಲ ಗೊತ್ತಿರುವ ಕಥೆಯನ್ನೇ ಪರದೆಯ ಮೇಲೆ ನೋಡುವುದು ರೋಮಾಂಚಕ. ನಾವೆಲ್ಲಾ -ಯಾರಾದರೂ ಒಬ್ಬ ಡಿ.ಸಿ, ಒಬ್ಬ ಪೋಲಿಸ್ ಅಧಿಕಾರಿ, ಒಬ್ಬ ಮಂತ್ರಿ ಬಳ್ಳಾರಿ ರೆಡ್ಡಿಗಳಿಗೆ ಮಣ್ಣು( ಕಬ್ಬಿಣ?) ತಿನ್ನಿಸಲಿ ಎಂದು ಕನಸು ಕಾಣುವುದನ್ನು ಜೇಕಬ್ ವರ್ಗೀಸ್ ತೆರೆಯಮೇಲೆ ಪುನಿತ್ ಮುಖಾಂತರ ಮಾಡಿಸಿರುವುದು ಪ್ರಶಂಸಾರ್ಹ.



ಇನ್ನು, ನಾಯಕಿಯದು ಟಿಪಿಕಲ್ ಮಲಯಾಳಿ ಚೆಲುವು. ಸಾದಾ ದಿರಿಸಿನಲ್ಲಿ ಆಕೆಯ ಮುಖ, ಭಾವ, ನಟನೆ ಎಲ್ಲ ಮನಮೋಹಕ. 'ಸರಳ ವಿರಳ ಸುಂದರಿ' ಎಂದು ಹಂಸಲೇಖ ಹಲವೆಡೆ ತಮ್ಮ ಪದ್ಯದಲ್ಲಿ ಬಳಸಿರುವ ಸಾಲು ಪಾರ್ವತಿ ಮೆನನ್ ಗೆ ಹೇಳಿ ಮಾಡಿಸಿದಂತಿದೆ. ಇಷ್ಟು ಬಿಟ್ಟರೆ ಆಕೆಯಬಗ್ಗೆ ಮತ್ತೇನೂ ಹೇಳುವಂತಿಲ್ಲ; ಏಕೆಂದರೆ ಆಕೆ ಚಿತ್ರದಲ್ಲಿ ನೆಪ ಮಾತ್ರ.



ಇನ್ನೂ ಅನೇಕಾನೇಕ ಪಾತ್ರಗಳಲ್ಲಿ ( ಅವಿನಾಶ್, ರಮೇಶ್ ಭಟ್, ಸಿ.ಆರ್.ಸಿಂಹ, ಶ್ರೀನಿವಾಸ್ ಮೂರ್ತಿ) ನೆನಪುಳಿಯುವುದು ಖಳನಾಯಕ ಮಾತ್ರ. ಆತನ ಪಾತ್ರ ಪೋಷಣೆ, ನಟನೆ ಎಲ್ಲ ಸೂಪರ್. ಆತ ಕನ್ನಡದವನೋ, ಆಮದು ಸರಕೋ ಗೊತ್ತಿಲ್ಲ. ಹಳೆ ಯಾವ ಕನ್ನಡ ಚಿತ್ರದಲ್ಲೂ ನೋಡಿದ ನೆನಪಿಲ್ಲ.



ಇನ್ನು ಹಾಡುಗಳು: ಪುನಿತ್ ಚಿತ್ರದಲ್ಲಿ ಹಾಡುಗಳು ಚೆನ್ನಾಗಿರುತ್ತವೆ ಎಂಬ ಮಾತು ಇಲ್ಲಿ ಸುಳ್ಳಾಗಿದೆ. ಸವಾರಿಯಲ್ಲಿ ಕಾಡುವಂತ ಹಾಡು ಕೊಟ್ಟಿದ್ದ ಮಣಿಕಾಂತ್ ಕದ್ರಿ ಇಲ್ಲಿ ಸೋತಿದ್ದು ಸ್ಪಷ್ಟ. ಒಂದೆರಡು ಮನ ತಟ್ಟುವ ಹಾಡುಗಳಿದ್ದಿದ್ದರೆ ಆ ಗಮ್ಮತ್ತೇ ಬೇರೆಯಾಗುತ್ತಿತ್ತು. ಒಂದು ಹಾಡು ಶ್ರುತಿ ಹಾಸನ್ ಹಾಡಿದ್ದಾಳೆ. ಪಾಪ ನಮ್ಮ ಪಲ್ಲವಿ, ನಂದಿತಾ, ಲಕ್ಷ್ಮಿ, ಇವರೆಲ್ಲ ಅಬ್ಬೇಪಾರಿಗಳು ಅಂತಾ ಮತ್ತೊಮ್ಮೆ ಸಾಬೀತಾಯ್ತು. 'ನಿನಗಾಗೆ ವಿಶೇಷವಾದ ಮಾಹಿತಿ' ಅಂತ ಜಯಂತ್ ಬರೆದ ಪದ್ಯದ ಸಂಗೀತ ಇನ್ನೂ ಚೆನ್ನಾಗಿದ್ದಿದ್ದರೆ ಅದು ಸೂಪರ್ ಹಿಟ್ ಹಾಡುಗಳ ಸಾಲಿಗೆ ಸೇರುತ್ತಿತ್ತೋ ಏನೋ!



ಉಳಿದೆಲ್ಲ ವಿಭಾಗಗಳಲ್ಲಿ ಚಿತ್ರ ಪರಿಪೂರ್ಣ- ಚಿತ್ರಕಥೆ, ಸಂಕಲನ, ಕ್ಯಾಮರಾ ಎಲ್ಲವೂ ಚೆನ್ನ. ಅತಿ ಬಿಗಿ ಹಿಡಿತವುಳ್ಳ ಕಥೆ ಎಲ್ಲೂ ಬೋರ್ ಹೊಡೆಸುವುದಿಲ್ಲ. ಕ್ಲೈಮಾಕ್ಸ್ ತುಸು ..ಅಲ್ಲ ತುಂಬಾನೇ ಸಪ್ಪೆ. ಆದರೆ ಚಿತ್ರಕ್ಕೆ ಅದು ಅನಿವಾರ್ಯ.



"ನೀನು ಇಷ್ಟ, ಮದುವೆಯಾಗಬೇಕು ಅಂತಿದಿನಿ. ಒಪ್ಪಿದರೆ ಆಯ್ತು; ಇಲ್ಲ ಅಂದರೆ ನಾನು ಕೊರಗುತ್ತ ಕೂಡೊಲ್ಲ, ಬೇರೆಯವರನ್ನು ಮದುವೆ ಆಗ್ತೀನಿ..ಸಂತೋಷವಾಗಿವುವ ಪ್ರಯತ್ನಾನೂ ಮಾಡ್ತೀನಿ..." ಅಂತ ನಾಯಕಿ ನಾಯಕನಿಗೆ ಪ್ರಪೋಸ್ ಮಾಡುವ ರೀತಿ ಇಷ್ಟವಾಗುತ್ತೆ. ಉಳಿದ ಅನೇಕ ಚಿತ್ರಗಳ ಪ್ರೇಮನಿವೇದನಾ ಪ್ರಸಂಗಗಳಿಗಿಂತ ಭಿನ್ನ ಅನ್ನಿಸುತ್ತೆ.



"ನಲವತ್ತು ವರ್ಷ ಚಡ್ಡಿ ಹಾಕಿಕೊಂಡು ರಾಜಕೀಯ ಮಾಡಿದ್ದೇ ಸುಳ್ಳಾ....?" ಎನ್ನೋ ಡೈಲಾಗ್ ಬಿಜೆಪಿ ಹಾಗೂ ರೆಡ್ಡಿಗಳ ನಂಟು ನೆನಪಿಸಿ, ಸಿಳ್ಳೆ ಹೊಡೆಸುತ್ತೆ.



ಒಟ್ಟಿನಲ್ಲಿ;



ಪ್ರಸ್ತುತ ಸಾಮಾಜಿಕ ಸಮಸ್ಯೆಯನ್ನು ಬಿಂಬಿಸುವ ಚಿತ್ರಗಳು ಇಂದು ಅನಿವಾರ್ಯ, ಸ್ವಮೇಕ್ ಚಿತ್ರಗಳಂತೂ ಇನ್ನೂ ಅನಿವಾರ್ಯ. ಇಡೀ ಚಿತ್ರವನ್ನು ಪುನೀತ್ ಅವರಿಸುವುದೂ ಅನಿವಾರ್ಯ, ಚಿತ್ರಕ್ಕೆ ಅಂತಹ ಅಂತ್ಯ ಕೂಡ ಅನಿವಾರ್ಯ.ಸೋತು ಸುಣ್ಣಾಗಿರುವ ಕನ್ನಡ ಚಿತ್ರರಂಗ ಧೂಳು ಕೊಡವಿ ಎದ್ದೆಳಬೇಕಾಗಿರುವುದು ಅನಿವಾರ್ಯ.(ಅನಿವಾರ್ಯವಲ್ಲದ್ದು ಕನ್ನಡ ಚಿತ್ರಗಳನ್ನು ತಮಿಳರೆಲ್ಲಾ ಸೇರಿ ಗೆಲ್ಲಿಸಬೇಕು ಎಂಬುದು ಮಾತ್ರ!)

" ನಾನೂ... ನನ್ನ ಕನಸು"

ಪ್ರಕಾಶ್ ರೈ ರವರ " ನಾನೂ... ನನ್ನ ಕನಸು" ಚಿತ್ರ ಮಕ್ಕಳನ್ನು ಅದರಲ್ಲೂ ಮಗಳನ್ನು ಅತಿಯಾಗಿ ಪ್ರೀತಿಸುವ ಎಲ್ಲಾ ಅಪ್ಪ-ಅಮ್ಮಂದಿರ ಕನಸೆಂದರೆ ಖಂಡಿತಾ ತಪ್ಪಲ್ಲ. ನಮ್ಮ ಮನೆಯಲ್ಲಿಯೇ ನಡೆದ, ನಡೆಯುತ್ತಿರುವ ಬಹಳಷ್ಟು ಸನ್ನಿವೇಶಗಳು ಚಿತ್ರದಲ್ಲಿ ಯಥಾವತ್ತಾಗಿ ಮೂಡಿಬಂದಿವೆ. ನಮ್ಮ ಮಕ್ಕಳು ಎಷ್ಟೇ ಬೆಳೆದು ದೊಡ್ಡವರಾದರೂ ಅವರು ತೆಗೆದುಕೊಳ್ಳುವ ನಿರ್ಣಯಗಳು ಎಲ್ಲಿ ತಪ್ಪಾಗಿಬಿಡುತ್ತದೋ, ಅವರಿಗೆ ನೋವು-ನಿರಾಶೆಗಳಾಗಿಬಿಡುತ್ತದೋ ಎಂಬ ಆತಂಕ ಹೆತ್ತವರಿಗಿದ್ದೇ ಇರುತ್ತದೆ. ಆದರೆ ಮಕ್ಕಳ ಬಗೆಗಿನ ಅತಿಯಾದ ಕಾಳಜಿ ಮಕ್ಕಳಿಗೆ ಕಿರಿಕಿರಿಯನ್ನುಂಟುಮಾಡಬಹುದು ಮತ್ತು ತಪ್ಪು ತಿಳುವಳಿಕೆಗೆ ಕಾರಣವಾಗಬಹುದು ಎಂಬುದನ್ನು ಚಿತ್ರದಲ್ಲಿ ಚೆನ್ನಾಗಿ ಮನವರಿಕೆ ಮಾಡಿಕೊಡಲಾಗಿದೆ.



ಆದರೆ ನಾವೇ ಎತ್ತಿ ಆಡಿಸಿ,ಬೆಳೆಸಿದ ನಮ್ಮ ಮಕ್ಕಳು ಉನ್ನತ ಧ್ಯೇಯಗಳನ್ನು ತಮ್ಮದಾಗಿಸಿಕೊಂಡು ನಮಗೇ ಮಾದರಿಯಾದಾಗ ಹೆತ್ತವರಿಗೆ ಹೆಮ್ಮೆಯಾಗುವುದು ಸಹಜ. ಪ್ರಕಾಶ್ ರೈ ಹೇಳುವ " ನಾನು ಬೆಳೆದಿಲ್ಲ, ನನ್ನ ಮಗಳು ನನ್ನನ್ನು ಬೆಳೆಸಿದಳು" ಎಂಬ ಮಾತು ಅಪ್ಪ-ಅಮ್ಮಂದಿರಿಗೆ ಹೆಮ್ಮೆಯ ವಿಷಯ. ಒಬ್ಬಳೇ ಮಗಳೆಂದರೆ ಹಟಮಾರಿ, ಸ್ವಾರ್ಥಿ ಎಂದು ಸಾಧಾರಣವಾಗಿ ಭಾವಿಸಲಾಗುತ್ತದೆ. ಇದು ತಪ್ಪು ಅಭಿಪ್ರಾಯ. ಒಬ್ಬಳೇ ಮಗಳಾಗಿ ಬೆಳೆದರೂ ಪರರ ನೋವಿಗೆ ಸ್ಪಂದಿಸುವ, ಅಪ್ಪ-ಅಮ್ಮನ ಭಾವನೆಗಳಿಗೆ ಬೆಲೆಕೊಡುವ ,ಸಮಯಕ್ಕೆ ತಕ್ಕಂತೆ, ಸರಿಯಾದ ರೀತಿಯಲ್ಲಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ , ಉತ್ತಮ ಸಮಾಜಕ್ಕೆ ನಾಂದಿ ಹಾಡುವ ಮಗಳಾಗಿ ಬೆಳೆದದ್ದು ಹೇಗೆ ಎಂಬುದು ಅಚ್ಚರಿತರಿಸುತ್ತದೆ.



ತನ್ನೆಲ್ಲಾ ಭಾವನೆಗಳನ್ನು ಬದಿಗಿರಿಸಿ ಗಂಡ-ಮಗಳನ್ನು ಮುನ್ನೆಡೆಸಿದ ಅಮ್ಮ, ತನ್ನ ಜೀವನದಲ್ಲಿ ತಾನೇನು ತಪ್ಪು ಹೆಜ್ಜೆಗಳನ್ನಿರಿಸಿದೆ ಎಂದು ತನ್ನ ಮಗಳ ನಡವಳಿಕೆಯಿಂದ ಕಲಿತು ಎತ್ತರಕ್ಕೇರಿದ ಅಪ್ಪ ಮತ್ತು ವಿದ್ಯಾವಂತರಾಗಿ,ಬುದ್ಧಿವಂತರಾಗಿ ಎಲ್ಲಕ್ಕಿಂತ ಹೆಚ್ಚಾಗಿ ಮಾನವೀಯತೆ ಮೈಗೂಡಿಸಿಕೊಂಡ ಮಗಳು- ಅಳಿಯನನ್ನು ನೋಡಿದಾಗ ಹೆಮ್ಮೆ ಎನಿಸುತ್ತದೆ. ಮನೆಮಂದಿಯಲ್ಲಾ ಒಟ್ಟಾಗಿ ಕುಳಿತು ನೋಡಬಹುದಾದ ಚಿತ್ರವಿದು. ನವಿರಾದ ಹಾಸ್ಯ, ಪ್ರಕೃತಿಯ ಚೆಲುವು, ಅತ್ಯುತ್ತಮವಾದ ಮೆಸೇಜ್ ಈ ಚಿತ್ರದಲ್ಲಿದೆ.

ಜಿ.ಎಸ್.ಶಿವರುದ್ರಪ್ಪ

ಜಿ.ಎಸ್. ಶಿವರುದ್ರಪ್ಪ )ಜಿ ಎಸ್ ಶಿವರುದ್ರಪ್ಪ - (ಜನನ:ಫೆಬ್ರುವರಿ ೭,೧೯೨೬) ಕನ್ನಡದ ಪ್ರಮುಖ ಕವಿಗಳಲ್ಲೊಬ್ಬರು. ಗೋವಿಂದ ಪೈ, ಕುವೆಂಪು ನಂತರ ಮೂರನೆಯ ರಾಷ್ಟ್ರಕವಿಯಾದವರು. ನವೆಂಬರ್ ೧,೨೦೦೬ ಸುವರ್ಣ ಕರ್ನಾಟಕ ರಾಜ್ಯೋತ್ಸವದಂದು ಶಿವರುದ್ರಪ್ಪನವರನ್ನು ರಾಷ್ಟ್ರಕವಿ ಎಂದು ಘೋಷಿಸಲಾಯಿತು.

ಪರಿವಿಡಿ [ಅಡಗಿಸು]
೧ ಪ್ರವೃತ್ತಿ
೨ ಓದು,ವಿದ್ಯಾಭ್ಯಾಸ
೩ ವೃತ್ತಿ ಜೀವನ
೪ ಜಿ.ಎಸ್.ಶಿವರುದ್ರಪ್ಪ ಅವರ ಕೃತಿಗಳು
೪.೧ ಕವನ ಸಂಕಲನಗಳು
೪.೨ ವಿಮರ್ಶೆ/ಗದ್ಯ
೪.೩ ಪ್ರವಾಸಕಥನ
೫ ಪ್ರಶಸ್ತಿ/ಪುರಸ್ಕಾರಗಳು
೬ ಹೊರಗಿನ ಸಂಪರ್ಕಗಳು


[ಬದಲಾಯಿಸಿ] ಪ್ರವೃತ್ತಿ
ಸುಮಾರು ಐದೂವರೆ ದಶಕಗಳಿಂದ ಕಾವ್ಯ ಕೃಷಿ ಮಾಡುತ್ತಿರುವ ಶಿವರುದ್ರಪ್ಪ,ಕವಿ ಮಾತ್ರವಲ್ಲ,ಬರಹಗಾರ,ವಿಮರ್ಶಕ,ವಿಶ್ಲೇಷಕ ಹಾಗೂ ನವೋದಯ ಮತ್ತು ನವ್ಯ ಪ್ರಕಾರಗಳೆರಡರಲ್ಲೂ ಕಾವ್ಯ ರಚನೆ ಮಾಡಿರುವ ಸಮರ್ಥರು.

ಜಿ.ಎಸ್. ಶಿವರುದ್ರಪ್ಪನವರು ಅನೇಕ ಭಾವಗೀತೆಗಳನ್ನೂ ರಚಿಸಿದ್ದು,'ಉಡುಗಣ ವೇಷ್ಟಿತ', 'ಎದೆ ತುಂಬಿ ಹಾಡಿದೆನು ಅಂದು ನಾನು', 'ಹಾಡು ಹಳೆಯದಾದರೇನು? ಭಾವ ನವನವೀನ', 'ಎಲ್ಲೋ ಹುಡುಕಿದೆ ಇಲ್ಲದ ದೇವರ', 'ವೇದಾಂತಿ ಹೇಳಿದನು' ಮುಂತಾದವು ಅವರ ಅತ್ಯಂತ ಜನಪ್ರಿಯವಾಗಿರುವ ಭಾವಗೀತೆಗಳಾಗಿವೆ. ಶಿವರುದ್ರಪ್ಪನವರ ಪ್ರಥಮ ಒಲವು ಕವಿತೆ,ನಂತರ ಸಾಹಿತ್ಯಿಕ ವಿಮರ್ಶೆ.ಆದರೆ ಅವರಿಗೆ ೧೯೮೪ರಲ್ಲಿ 'ಕೇಂದ್ರ ಸಾಹಿತ್ಯ ಅಕಾಡೆಮಿ'ಯ ಪ್ರಶಸ್ತಿ ತಂದುಕೊಟ್ಟದ್ದು ಅವರ ಗದ್ಯ ಕೃತಿ "ಕಾವ್ಯಾರ್ಥ ಚಿಂತನ".

[ಬದಲಾಯಿಸಿ] ಓದು,ವಿದ್ಯಾಭ್ಯಾಸ
ಡಾ.ಜಿ.ಎಸ್.ಶಿವರುದ್ರಪ್ಪನವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಫೆಬ್ರುವರಿ ೭,೧೯೨೬ ರಂದು ಜನಿಸಿದರು. ತಂದೆ ಶಾಲಾ ಉಪಾಧ್ಯಾಯರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬಿ.ಎ. ಆನರ್ಸ್ (೧೯೪೯); ಎಂ.ಎ. (೧೯೫೩) ಪ್ರಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿ ಮೂರು ಸುವರ್ಣ ಪದಕಗಳನ್ನು ಪಡೆದರು. ಕುವೆಂಪುರವರ ಮೆಚ್ಚಿನ ಶಿಷ್ಯರಾಗಿ ಅವರ ಬರವಣಿಗೆ ಮತ್ತು ಜೀವನದಿಂದ ಪ್ರಭಾವಿತರಾಗಿದ್ದರು.೧೯೬೫ರಲ್ಲಿ ತಮ್ಮ ಗುರುಗಳಾದ ಕುವೆಂಪುರವರ ಮಾರ್ಗದರ್ಶನದಲ್ಲಿ ಬರೆದ 'ಸೌಂದರ್ಯ ಸಮೀಕ್ಷೆ' ಎಂಬ ಗ್ರಂಥಕ್ಕೆ ಪಿಹೆಚ್‌ಡಿ ಪದವಿ ಪಡೆದರು.

[ಬದಲಾಯಿಸಿ] ವೃತ್ತಿ ಜೀವನ
ತಾವು ಓದಿದ ಮೈಸೂರು ವಿಶ್ವವಿದ್ಯಾಲಯದಲ್ಲೇ ೧೯೪೯ರಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿಯನ್ನು ಆರಂಭಿಸಿದರು ೧೯೬೩ರಲ್ಲಿ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ ರೀಡರ್ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾಗಿ ಹೋಗಿ ೧೯೬೬ರ ವರೆವಿಗೂ ಅಲ್ಲಿ ಸೇವೆ ಸಲ್ಲಿಸಿದರು. ೧೯೬೬ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಹಾಗೂ ನಿರ್ದೇಶಕರಾಗಿ ಆಯ್ಕೆಯಾಗಿ ೧೯೮೭ರವರೆವಿಗೂ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸೇವೆ ಸಲ್ಲಿಸಿದರು. ಅವರ ಕಾಲದಲ್ಲೇ ಕನ್ನಡ ವಿಭಾಗವು ಕನ್ನಡ ಅಧ್ಯಯನ ಕೇಂದ್ರವಾಯಿತು.

[ಬದಲಾಯಿಸಿ] ಜಿ.ಎಸ್.ಶಿವರುದ್ರಪ್ಪ ಅವರ ಕೃತಿಗಳು
ಜಿ.ಎಸ್.ಶಿವರುದ್ರಪ್ಪ ಅವರ ಕವಿತೆಯೊಂದರ ತುಣುಕು...

ಕಂಡೆ ಗೊಮ್ಮಟನಾಗಿ ನಿಂತಿದ್ದ ಮಹಾಮೂರ್ತಿ
ಕರಗಿ ಕೊಚ್ಚೆಯಾಗಿ ಹರಿದಿದ್ದ ಕಂಡೆ
ಇಂದ್ರನೈರಾವತಕ್ಕೆ ತೊಣಚಿ ಹತ್ತಿ
ಬೀದಿ ನಾಯಾಗಿ ಬೀದಿಯಲ್ಲಿ ಹೊರಳಾಡಿದ್ದ ಕಂಡೆ.
ನಿಗಿ ನಿಗಿ ಉರಿದ ಉಜ್ವಲವಾದ ಮಾತೆಲ್ಲ
ಬರೀ ಬೂದಿಯಾಗಿ ತೆಪ್ಪಗಾದದ್ದ ಕಂಡೆ

ಜಿ.ಎಸ್.ಶಿವರುದ್ರಪ್ಪನವರ ಪ್ರಸಿದ್ಧ ಕವನಗಳು

[ಬದಲಾಯಿಸಿ] ಕವನ ಸಂಕಲನಗಳು
ಸಾಮಗಾನ
ಚೆಲುವು-ಒಲವು
ದೇವಶಿಲ್ಪಿ
ದೀಪದ ಹೆಜ್ಜೆ
ಅನಾವರಣ
ತೆರೆದ ಬಾಗಿಲು
ಗೋಡೆ
ವ್ಯಕ್ತಮಧ್ಯ
ತೀರ್ಥವಾಣಿ
ಕಾರ್ತಿಕ
ಕಾಡಿನ ಕತ್ತಲಲ್ಲಿ
ಪ್ರೀತಿ ಇಲ್ಲದ ಮೇಲೆ
ಚಕ್ರಗತಿ
[ಬದಲಾಯಿಸಿ] ವಿಮರ್ಶೆ/ಗದ್ಯ
ಪರಿಶೀಲನ
ವಿಮರ್ಶೆಯ ಪೂರ್ವ ಪಶ್ಚಿಮ
ಸೌಂದರ್ಯ ಸಮೀಕ್ಷೆ(ಇದು ಅವರ ಪಿಹೆಚ್‌ಡಿ ಪ್ರಬಂಧ)
ಕಾವ್ಯಾರ್ಥ ಚಿಂತನ
ಗತಿಬಿಂಬ
ಅನುರಣನ
ಪ್ರತಿಕ್ರಿಯೆ
ಕನ್ನಡ ಸಾಹಿತ್ಯ ಸಮೀಕ್ಷೆ
ಮಹಾಕಾವ್ಯ ಸ್ವರೂಪ
ಕನ್ನಡ ಕವಿಗಳ ಕಾವ್ಯಕಲ್ಪನೆ
ಹೊಸಗನ್ನಡ ಕವಿತೆಗಳಲ್ಲಿ ಕಾವ್ಯ ಚಿಂತನ
ಕುವೆಂಪು : ಪುನರವಲೋಕನ
ಸಮಗ್ರ ಗದ್ಯ ಭಾಗ ೧, ೨ ಮತ್ತು ೩
ಇವಿಷ್ಟೇ ಅಲ್ಲದೆ ಸರ್ಕಾರಕ್ಕಾಗಿ "Kuvempu-a Reappraisal" ಎಂಬ ಗ್ರಂಥವನ್ನು ಬರೆದಿದ್ದಾರೆ.

[ಬದಲಾಯಿಸಿ] ಪ್ರವಾಸಕಥನ
ಮಾಸ್ಕೋದಲ್ಲಿ ೨೨ ದಿನ(ಸೋವಿಯತ್‌ಲ್ಯಾಂಡ್ ನೆಹರೂ ಪ್ರಶಸ್ತಿ ಬಂದಿದೆ)
ಇಂಗ್ಲೆಂಡಿನಲ್ಲಿ ಚತುರ್ಮಾಸ
ಅಮೆರಿಕದಲ್ಲಿ ಕನ್ನಡಿಗ
ಗಂಗೆಯ ಶಿಖರಗಳಲ್ಲಿ
[ಬದಲಾಯಿಸಿ] ಪ್ರಶಸ್ತಿ/ಪುರಸ್ಕಾರಗಳು
ಕೇಂದ್ರ ಸಾಹಿತ್ಯ ಅಕಾಡೆಮಿ-೧೯೮೪
ಪಂಪ ಪ್ರಶಸ್ತಿ
ಸೋವಿಯತ್‌ಲ್ಯಾಂಡ್ ನೆಹರೂ ಪ್ರಶಸ್ತಿ-೧೯೭೩
ದಾವಣಗೆರೆಯಲ್ಲಿ ನಡೆದ ೬೧ನೇ ಅಖಿಲ-ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ
ರಾಷ್ಟ್ರಕವಿ ಪುರಸ್ಕಾರ-೨೦೦೬
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ೧೯೮೨
ನಾಡೋಜ ಕನ್ನಡ ವಿಶ್ವವಿದ್ಯಾಲಯ
ಗೌರವ ಡಾಕ್ಟರೇಟ್ : ಬೆಂಗಳೂರು ವಿ.ವಿ. ಮತ್ತು ಕುವೆಂಪು ವಿ.ವಿ.

ಗಿರೀಶ್ ಕಾರ್ನಾಡ್

ಶ್ರೀ ಗಿರೀಶ್ ಕಾರ್ನಾಡ್ಗಿರೀಶ್ ರಘುನಾಥ್ ಕಾರ್ನಾಡ್ (ಹುಟ್ಟು - ಮೇ ೧೯, ೧೯೩೮) ಕನ್ನಡಕ್ಕೆ ಏಳನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕನ್ನಡ ಸಾಹಿತ್ಯದ ನಾಟಕ ಕ್ಷೇತ್ರಕ್ಕೆ ಸಾಹಿತಿ. ಭಾರತದಲ್ಲೇ ನಾಟಕ ಸಾಹಿತ್ಯ ರಚನೆಗೆ ಜ್ಞಾನಪೀಠ ಪ್ರಶಸ್ತಿ ಪಡೆದವರಲ್ಲಿ ಕಾರ್ನಾಡ್ ಮೊದಲಿಗರು.

ಹೀಗಾಗಿ ಕಾರ್ನಾಡ್ ಪ್ರಶಸ್ತಿ ಬಂದಾಗ ಸೌಜನ್ಯದಿಂದಲೇ ಮರಾಠಿಯ ವಿಜಯ ತೆಂಡೂಲ್ಕರ್ ಅವರಂಥವರಿಗೆ ಈ ಪ್ರಶಸ್ತಿ ಬರಬೇಕಿತ್ತು ಎಂದು ಹೇಳಿ ದೊಡ್ಡತನ ಮೆರೆದಿದ್ದರು. ಕನ್ನಡದಲ್ಲಿ ನಾಟಕ ರಚಿಸುತ್ತ, ಇತರ ಭಾರತೀಯ ಭಾಷೆಗಳಲ್ಲಿ ಸಂಪರ್ಕವಿಟ್ಟುಕೊಂಡು ಸಾಂಸ್ಕೃತಿಕ ವಕ್ತಾರರಾದ ಕಾರ್ನಾಡ್ ನಟರಾಗಿ, ನಿರ್ದೇಶಕರಾಗಿ ಹೆಸರಾಗಿದ್ದಾರೆ. ಆರಂಭದಲ್ಲಿ ರಂಗಭೂಮಿ ನಟರಾಗಿದ್ದವರು ಹೊಸ ವಿಚಾರಗಳತ್ತ ಗಮನ ಹರಿಸಿ ನಾಟಕ ರಚನೆಗೆ ಚಿಂತಿಸಿದರು. ಹೀಗಾಗಿ ಪುರಾಣ, ಇತಿಹಾಸಗಳು ವಾಸ್ತವ ನೆಲೆಗಟ್ಟಿನಲ್ಲಿ ನೇಯಲ್ಪಟ್ಟವು.

ಪರಿವಿಡಿ [ಅಡಗಿಸು]
೧ ಜೀವನ
೨ ನಾಟಕರಚನೆ
೩ ಚಿತ್ರರಂಗ
೪ ಗೌರವ,ಪ್ರಶಸ್ತಿ


[ಬದಲಾಯಿಸಿ] ಜೀವನ
ಗಿರೀಶ ಕಾರ್ನಾಡ್‌ರು ೧೯೩೮ ಮೇ ೧೯ರಂದು ಮಹಾರಾಷ್ಟ್ರದ ಮಾಥೇರಾನದಲ್ಲಿ ಜನಿಸಿದರು. ತಂದೆ ಡಾ| ರಘುನಾಥ್ ಕಾರ್ನಾಡ್, ತಾಯಿ ಕೃಷ್ಣಾಬಾಯಿ. ಪ್ರಗತಿಶೀಲ ಮನೋಭಾವದ ಡಾ| ರಘುನಾಥ ಕಾರ್ನಾಡರು ಮದುವೆಯಾದ ಹೊಸತರಲ್ಲೇ ಪತ್ನಿಯನ್ನು ಕಳೆದುಕೊ೦ಡರು. ಬಾಲ್ಯದಲ್ಲೇ ಮದುವೆಯಾಗಿ ಪತಿಯನ್ನು ಕಳೆದುಕೊಂಡಿದ್ದ ಕೃಷ್ಣಾಬಾಯಿಯನ್ನು, ಸಮಾಜದ ವಿರೋಧದ ನಡುವೆಯೂ ದಿಟ್ಟತನದಿಂದ ಕೈ ಹಿಡಿದರು. ಸಮಾಜ ಏನೆನ್ನುತ್ತದೆ ಅನ್ನುವುದಕ್ಕಿಂತ ಆದರ್ಶ ಹಾಗೂ ಪ್ರಗತಿಪರತೆ ರಘುನಾಥ್ ಕಾರ್ನಾಡರಲ್ಲಿ ಕಂಡುಬರುತ್ತದೆ. ಮುಂದೆ ಕಾರ್ನಾಡರಿಗೆ ಇಂಥ ಪ್ರಗತಿಪರ ವಾತಾವರಣವೇ ಬೆಳವಣಿಗೆಯಲ್ಲಿ ಸಹಾಯವಾಯಿತು.

ಗಿರೀಶರ ಪ್ರಾಥಮಿಕ ಶಿಕ್ಷಣ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ, ಪ್ರೌಢಶಿಕ್ಷಣ ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಹಾಗು ಪದವಿ ಶಿಕ್ಷಣ ಕರ್ನಾಟಕ ಕಾಲೇಜಿನಲ್ಲಿ ಆಯಿತು.ಆ ಬಳಿಕ Rhodes scholorship ಪಡೆದುಕೊಂಡು ಆಕ್ಸ್‌ಫರ್ಡ್‌ನಲ್ಲಿ ಹೆಚ್ಚಿನ ವ್ಯಾಸಂಗಕ್ಕೆ ತೆರಳಿದರು. ಗಿರೀಶ ಕಾರ್ನಾಡರು ಆಕ್ಸ್‌ಫರ್ಡ್‌ ಡಿಬೇಟ ಕ್ಲಬ್ ಗೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಶಿಯನ್ ಆಗಿದ್ದಾರೆ.

ತಮ್ಮ ಓದು, ಚರ್ಚೆಯನ್ನು ದೇಶ ವಿದೇಶದಲ್ಲೂ ಹರಡಿ ವಿದ್ವಾಂಸರ ಸಖ್ಯದಲ್ಲಿ, ಕಲಾಸೇವಕರ ಸಹವಾಸದಲ್ಲಿ ಗುರ್ತಿಸಿಕೊಂಡ ಕಾರ್ನಾಡ್ ಬುದ್ಧಿಜೀವಿ ಎನಿಸಿಕೊಂಡರು. ಬಹುಭಾಷಾ ಪಂಡಿತರೆಂಬ ಹಿರಿಮೆಗೆ ಪಾತ್ರರಾಗಿ, ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಕಾರ್ನಾಡ್ ಸೇವೆ ಸಲ್ಲಿಸಿದರು. ವಿದೇಶದಲ್ಲಿದ್ದಾಗಲೇ ಕನ್ನಡ ನಾಟಕಗಳನ್ನು ಬರೆದು ಇಲ್ಲಿಗೆ ಬಂದು ಹೊಸ ನಾಟಕಗಳ ಓದು, ಪ್ರದರ್ಶನಕ್ಕೆ ದಾರಿ ಮಾಡಿಕೊಂಡರು. ಕನ್ನಡವಲ್ಲದೆ ಹಿಂದಿ, ಪಂಜಾಬಿ, ಮರಾಠಿ ಹಾಗೂ ಭಾರತೀಯ ಹಲವು ಭಾಷೆಗಳಿಗೆ ತಮ್ಮ ನಾಟಕಗಳು ಅನುವಾದಗೊಂಡು, ಪ್ರದರ್ಶನಗೊಂಡವು. ಬಹುಶಃ ಕನ್ನಡದ ಒಬ್ಬ ನಾಟಕಕಾರ ಇಷ್ಟೊಂದು ಭಾಷೆಗೆ ಪರಿಚಯವಾದದ್ದು ಪ್ರಥಮ.

ಆಕ್ಸ್‌ಫರ್ಡ್‌ನಿಂದ ಬಂದ ನಂತರ ಮದ್ರಾಸ್‌ನಲ್ಲಿ ನೌಕರಿಯಲ್ಲಿದ್ದು ಧಾರವಾಡಕ್ಕೆ ವಾಪಾಸಾಗಿ ನಾಟಕ ಕ್ಷೇತ್ರದಲ್ಲಿ ಕೃಷಿ ನಡೆಸಿದರು.

ಶ್ರೀ ಗಿರೀಶ್ ಕಾರ್ನಾಡ್ ಕುರಿತ ಮತ್ತೊಂದು ಲೇಖನಕ್ಕೆ ಇಲ್ಲಿ ಕ್ಲಿಕ್ ಮಾಡಿ http://kannadaratna.com/achievers/karnad.html

[ಬದಲಾಯಿಸಿ] ನಾಟಕರಚನೆ
ಇಂಗ್ಲಂಡಿಗೆ ತೆರಳುವ ಮೊದಲೆ ಗಿರೀಶ ಕಾರ್ನಾಡರ ಮೊದಲ ಸಾಹಿತ್ಯಕೃತಿ "ಯಯಾತಿ" ನಾಟಕ ಧಾರವಾಡದ ಮನೋಹರ ಗ್ರಂಥಮಾಲೆಯಲ್ಲಿ ಪ್ರಕಟವಾಯಿತು. ಇಂಗ್ಲಂಡಿನಿಂದ ಮರಳಿದ ಬಳಿಕ "ತುಘಲಕ" ಹಾಗೂ "ಹಯವದನ" ಪ್ರಕಟವಾದವು. ಈ ನಡುವೆ ಪುಣೆ ಫಿಲ್ಮ್ ಇನ್ಸ್ಟಿಟ್ಯೂಟ್‍ನ ನಿರ್ದೇಶಕರಾಗಿದ್ದು,ಮತ್ತೆ ಅದನ್ನು ಬಿಟ್ಟು ಮುಂಬಯಿಗೆ ಬಂದ ಕಾರ್ನಾಡರು ಕೆಲವು ಚಲನಚಿತ್ರಗಳಲ್ಲಿ ನಟಿಸಿದರು. ಆ ರಂಗವನ್ನೂ ತ್ಯಜಿಸಿ ಮತ್ತೆ ಬೆಂಗಳೂರಿಗೆ ಬಂದರು. ಅಲ್ಲಿಂದ ರಚಿತವಾದ ಅವರ ನಾಟಕಗಳು:"ಅಂಜುಮಲ್ಲಿಗೆ", "ನಾಗಮಂಡಲ", "ತಲೆದಂಡ" ಹಾಗು "ಅಗ್ನಿ ಮತ್ತು ಮಳೆ".

ಬ್ರಿಟಿಷ್ ಬ್ರಾಡ್‍ಕಾಸ್ಟಿಂಗ್ ಕಾರ್ಪೊರೇಶನ್ ಇವರಿಗಾಗಿ ಬರೆದುಕೊಟ್ಟ ನಾಟಕ:"ಟಿಪ್ಪುವಿನ ಕನಸುಗಳು".




[ಬದಲಾಯಿಸಿ] ಚಿತ್ರರಂಗ
"ಸಂಸ್ಕಾರ" ಚಲನಚಿತ್ರವು ಕನ್ನಡದ ಪ್ರಥಮ Artfilm. ಯು.ಆರ್.ಅನಂತಮೂರ್ತಿಯವರ ಕಾದಂಬರಿಯನ್ನು ಆಧರಿಸಿದ ಈ ಚಲನಚಿತ್ರದಲ್ಲಿ ಗಿರೀಶ ಕಾರ್ನಾಡರದು ಪ್ರಮುಖ ಪಾತ್ರ, ಪ್ರಾಣೇಶಾಚಾರ್ಯರದು.ಪಿ.ಲಂಕೇಶಅವರದು ವಿರುದ್ಧ ವ್ಯಕ್ತಿತ್ವದ ಪಾತ್ರ.ಈ ಚಿತ್ರದ ನಿರ್ದೇಶಕರು ಪಟ್ಟಾಭಿರಾಮರೆಡ್ಡಿ ಅವರು. ಇದು ಕನ್ನಡಕ್ಕೆ ಪ್ರಥಮ ಸ್ವರ್ಣಕಮಲ ತಂದು ಕೊಟ್ಟ ಚಿತ್ನ. ಆ ನಂತರ ಎಸ್.ಎಲ್. ಭೈರಪ್ಪನವರ ವಂಶವೃಕ್ಷ ಕಾದಂಬರಿಯನ್ನು ಆಧರಿಸಿ, ಬಿ. ವಿ. ಕಾರಂತರ ಜೊತೆಗೂಡಿ ವಂಶವೃಕ್ಷ ಚಿತ್ರವನ್ನು ನಿರ್ದೇಶನ ಮಾಡಿದರು. ಇದು ಹಲವಾರು ರಾಷ್ಟ್ರೀಯ, ಅಂತರರಾಷ್ಟ್ರೀಯ ಪುರಸ್ಕಾರ ಪಡೆಯಿತು. ಮುಂದೆ "ತಬ್ಬಲಿಯು ನೀನಾದೆ ಮಗನೆ", "ಕಾಡು", "ಒಂದಾನೊಂದು ಕಾಲದಲ್ಲಿ" ಚಿತ್ರಗಳನ್ನು ನಿರ್ದೇಶಿಸಿದರು. "ಕಾಡು" ಹಲವಾರು ಪ್ರಶಸ್ತಿ ಪುರಸ್ಕಾರ ಪಡೆಯಿತು. ನಂತರ "ಉತ್ಸವ", "ಗೋಧೂಳಿ" ಎಂಬ ಹಿಂದಿ ಚಿತ್ರಗಳನ್ನು ನಿರ್ದೇಶಿಸಿದರು.

ರಾಷ್ಟ್ರಕವಿ ಕುವೆಂಪು ಅವರ ಕಾನೂರು ಸುಬ್ಬಮ್ಮ ಹೆಗ್ಗಡಿತಿ ಕಾದಂಬರಿಯನ್ನು ಆಧರಿಸಿ "ಕಾನೂರು ಹೆಗ್ಗಡಿತಿ" ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವು ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಪುರಸ್ಕಾರ ಪಡೆದು, ಪನೋರಮಕ್ಕೂ ಆಯ್ಕೆಯಾಯಿತು.

ಇದಲ್ಲದೆ"ಕನಕ ಪುರಂದರ","ದ.ರಾ.ಬೇಂದ್ರೆ" ಹಾಗು "ಸೂಫಿ ಪಂಥ" ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದರು. ಪರಿಸರ ವಿನಾಶ ಕುರಿತು "ಚೆಲುವಿ" ಕಿರಚಿತ್ರವನ್ನು ನಿರ್ದೇಶಿಸಿದರು.

೨೦೦೭ ರಲ್ಲಿ ತೆರೆ ಕಂಡ ಆ ದಿನಗಳು ಚಿತ್ರಕ್ಕೆ ಅಗ್ನಿ ಶಶ್ರೀಧರ್ ಅವರ ಜೊತೆದಗೂಡಿ ಚಿತ್ರಕಥೆಯನ್ನು ಬರೆದಿದ್ದಾರೆ.

[ಬದಲಾಯಿಸಿ] ಗೌರವ,ಪ್ರಶಸ್ತಿ
ಕರ್ನಾಟಕ ವಿಶ್ವವಿದ್ಯಾಲಯ ಕಾರ್ನಾಡರ ಸಾಹಿತ್ಯ-ಸಿನಿಮಾ ಸೇವೆ ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. "ಕಾರ್ನಾಡರು ವಸ್ತುವನ್ನು ಗ್ರಹಿಸುವ ಕ್ರಮದಲ್ಲೇ ಅವರ ಅನನ್ಯತೆ ಇದೆ. ಈ ಗ್ರಹಿಕೆಗೆ ಪೂರಕವಾದ ರಚನಾಕ್ರಮವನ್ನು ಅವರು ಕಂಡುಕೊಂಡಿದ್ದಾರೆ. ಒಂದು ಸಮಸ್ಯೆಯನ್ನು ನಾಟಕ ರೂಪಕ್ಕೆ ಒಗ್ಗಿಸಿಕೊಂಡು ಅದಕ್ಕೊಂದು structure ಕೊಟ್ಟು ಜನರ ಮುಂದಿಡುವುದರಲ್ಲೇ ನಾಟಕಕಾರನ ಯಶಸ್ಸು, ಸೋಲು ಎರಡೂ ಅಡಗಿದೆ." ಎಂದು ಕಾರ್ನಾಡರ ನಾಟಕಗಳ ವಸ್ತು, ಗ್ರಹಿಕೆ ಬಗ್ಗೆ ಭಾರತೀಯ ರಂಗಭೂಮಿಯ ಹಿರಿಯ ನಿರ್ದೇಶಕ ಬಿ. ವಿ. ಕಾರಂತರು ದಾಖಲಿಸುತ್ತಾರೆ.

ಕಾರ್ನಾಡರಿಗೆ ಹಲವಾರು ಹುದ್ದೆಗಳು, ಪ್ರಶಸ್ತಿಗಳು ಲಭಿಸಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪ್ರತಿಷ್ಠಿತ ಪದ್ಮಶ್ರೀ, ಪದ್ಮಭೂಷಣ, ಜ್ಞಾನಪೀಠ ಪ್ರಶಸ್ತಿಗಳ ಗೌರವ ದೊರೆಕಿದೆ. ಕಾರ್ನಾಡ್ ಕೇಂದ್ರ ಸಂಗೀತ-ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ನೆಹರು ಸೆಂಟರ್‌ನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಯು.ಆರ್.ಅನಂತಮೂರ್ತಿ

ಶ್ರೀ ಯು ಆರ್ ಅನಂತಮೂರ್ತಿಕನ್ನಡಕ್ಕೆ ಆರನೆಯ ಜ್ಞಾನಪೀಠ ಪ್ರಶಸ್ತಿ ೧೯೯೪ರಲ್ಲಿ ಬಂದಾಗ ಕನ್ನಡ ಸಾಹಿತ್ಯ ಲೋಕ ಮತ್ತೊಮ್ಮೆ ಇಡೀ ದೇಶದ ಗಮನ ಸೆಳೆಯಿತು. ಈ ಗೌರವ ಪಡೆದವರು ಡಾ| ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ.

ಎಲ್ಲರಿಗೂ ಅವರವರ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಅತ್ಯಗತ್ಯ ಎಂದು ಬಲವಾಗಿ ಪ್ರತಿಪಾದಿಸುವ ಅನಂತಮೂರ್ತಿ; ವಿದೇಶಗಳ ಹಲವಾರು ಭಾಷೆ ತಿಳಿದಿರುವ ನಮಗೆ ನಮ್ಮ ಅಕ್ಕಪಕ್ಕದ ನಾಡಿನ ಭಾಷೆಗಳು ಗೊತ್ತೇ ಇಲ್ಲದ್ದರ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಜಗತ್ತಿನ ಬೇರೆ ಬೇರೆ ಭಾಷೆಗಳ ಹಲವು ಮಹತ್ವದ ಕೃತಿಗಳು ಇಂಗ್ಲೀಷಿಗೆ ಸಮರ್ಥವಾಗಿ ಅನುವಾದಗೊಳ್ಳಲು ಸಾಧ್ಯವಿಲ್ಲ ಎನ್ನುವುದ ಅವರ ಅಭಿಪ್ರಾಯವಾಗಿದೆ. ಕನ್ನಡ ಸಾಹಿತಿಯೂ ಮತ್ತು ಭಾರತೀಯ ಸಾಹಿತ್ಯದ ವಿಮರ್ಶಕರೂ ಆದ ಅನಂತಮೂರ್ತಿ ತಮ್ಮನ್ನು ಕನ್ನಡ ಸಂಸ್ಕೃತಿಯ Critical Insider ಎಂದು ಕರೆದುಕೊಳ್ಳುತ್ತಾರೆ.

ತಮ್ಮ ಬಹುಚರ್ಚಿತ ಸಂಸ್ಕಾರ ಕಾದಂಬರಿಯಿಂದ ಭಾರತೀಯ ಸಾಹಿತ್ಯ ಮತ್ತು ಚಲನಚಿತ್ರ ರಂಗಗಳಲ್ಲಿ ಒಂದು ದೊಡ್ಡ ವಿವಾದವನ್ನೇ ಮಾಡಿದ ಅನಂತಮೂರ್ತಿ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮೇಳಿಗೆ ಹಳ್ಳಿಯಲ್ಲಿ. ಇಬ್ಬರು ಜ್ಞಾನಪೀಠ ಪ್ರಶಸ್ತಿ ವಿಜೇತ (ಕುವೆಂಪು ಮತ್ತು ಅನಂತಮೂರ್ತಿ) ರನ್ನು ನೀಡಿದ ಹೆಗ್ಗಳಿಕೆ ತೀರ್ಥಹಳ್ಳಿ ತಾಲ್ಲೂಕಿನದು. ಇವರು ಹುಟ್ಟಿದ್ದು ೧೯೩೨ರ ಡಿಸೆಂಬರ್ ೨೧ರಂದು. ತಂದೆ ಉಡುಪಿ ರಾಜಗೋಪಾಲಾಚಾರ್ಯ. ತಾಯಿ ಸತ್ಯಮ್ಮ (ಸತ್ಯಭಾಮ).

ಪರಿವಿಡಿ [ಅಡಗಿಸು]
೧ ವಿದ್ಯಾಭ್ಯಾಸ
೨ ವೃತ್ತಿ ಜೀವನ
೩ ಸಾಹಿತ್ಯ
೪ ಪ್ರಶಸ್ತಿಗಳು
೫ ಬಾಹ್ಯ ಸಂಪರ್ಕಗಳು


[ಬದಲಾಯಿಸಿ] ವಿದ್ಯಾಭ್ಯಾಸ
ದೂರ್ವಾಸಪುರದ ಸಾಂಪ್ರದಾಯಿಕ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಆರಂಭಿಸಿದ ಅನಂತಮೂರ್ತಿಯವರ ಓದು ಅನಂತರ ತೀರ್ಥಹಳ್ಳಿ, ಮೈಸೂರುಗಳಲ್ಲಿ ಮುಂದುವರೆಯಿತು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದ ಇವರು ಹೆಚ್ಚಿನ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ಹೋದರು. ಕಾಮನ್‍ವೆಲ್ತ್ ವಿದ್ಯಾರ್ಥಿ ವೇತನ ಪಡೆದ ಇವರು ಬರ್ಮಿಂಗ್‍ಹ್ಯಾಮ್ ವಿಶ್ವವಿದ್ಯಾನಿಲಯದಿಂದ ಇಂಗ್ಲೀಷ್ ಮತ್ತು ತೌಲನಿಕ ಸಾಹಿತ್ಯ ಎಂಬ ವಿಷಯದಲ್ಲಿ ೧೯೬೬ರಲ್ಲಿ ಪಿಎಚ್.ಡಿ. ಪಡೆದರು.

ಶ್ರೀ ಅನಂತಮೂರ್ತಿ ಅವರ ಸಾಧನೆಯ ಬಗ್ಗೆ ಕನ್ನಡರತ್ನ.ಕಾಂ ನಲ್ಲಿ ಪ್ರಕಟವಾಗಿರುವ ಲೇಖನ http://kannadaratna.com/achievers/ura.html

[ಬದಲಾಯಿಸಿ] ವೃತ್ತಿ ಜೀವನ
೧೯೭೦ರಿಂದ ಮೈಸೂರು ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದಲ್ಲಿ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ಅನಂತಮೂರ್ತಿಯವರು, ೧೯೮೭ರಲ್ಲಿ ಕೇರಳದ ಕೋಟ್ಟಯಂನ ಮಹಾತ್ಮಾಗಾಂಧಿ ವಿಶ್ವವಿದ್ಯಾಲಯದ ಉಪಕುಲಗತಿಗಳಾಗಿದ್ದರು. ೧೯೯೨-೯೩ರ ಅವಧಿಯಲ್ಲಿ ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯದ ಅಧ್ಯಕ್ಷರಾಗಿದ್ದರು. ೧೯೯೩ರಲ್ಲಿ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾದರು. ಗೋಕಾಕರ ಅನಂತರ ಈ ಸಂಸ್ಥೆಯ ಅಧ್ಯಕ್ಷರಾದ ಎರಡನೆಯ ಕನ್ನಡಿಗರು ಇವರು.

ಅನಂತಮೂರ್ತಿಯವರು ದೇಶವಿದೇಶಗಳ ಹಲವು ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಜವಾಹರಲಾಲ್ ನೆಹರೂ ವಿ.ವಿ., ಜರ್ಮನಿಯ ತೂಬಿಂಗೆನ್ ವಿ.ವಿ., ಅಮೇರಿಕ ದೇಶದ ಐಯೊವಾ ವಿ.ವಿ., ಟಫಟ್ಸ್ ವಿ.ವಿ., ಕೊಲ್ಲಾಪುರದ ಶಿವಾಜಿ ವಿ.ವಿ.ಗಳಲ್ಲಿ ಪ್ರಾಧ್ಯಾಪಕರಾಗಿದ್ದರು.

ಬರಹಗಾರರಾಗಿ, ಭಾಷಣಕಾರರಾಗಿ ಅನಂತಮೂರ್ತಿಯವರು ದೇಶದ ಒಳಗೆ ಮತ್ತು ಹೊರಗೆ ಹಲವಾರು ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ; ಉಪನ್ಯಾಸ ನೀಡಿದ್ದಾರೆ. ೧೯೮೦ರಲ್ಲಿ ಸೋವಿಯತ್ ರಷ್ಯಾ, ಹಂಗೇರಿ, ಪಶ್ಚಿಮ ಜರ್ಮನಿ ಮತ್ತು ಫ್ರಾನ್ಸ್ ದೇಶಗಳಿಗೆ ಭೇಟಿ ನೀಡಿದ ಭಾರತೀಯ ಲೇಖಕರ ಬಳಗದ ಸದಸ್ಯರಾಗಿದ್ದರು. ಮಾರ್ಕ್ಸ್‌ವಾದದಿಂದ ತುಂಬ ಪ್ರಭಾವಿತರಾಗಿದ್ದ ಇವರು ತಮ್ಮ ಹಲವಾರು ಅಭಿಪ್ರಾಯಗಳನ್ನು ಪರೀಕ್ಷಿಸಿ ನೋಡಲು ಈ ಭೇಟಿ ನೆರವಾಯಿತು. ಸೋವಿಯತ್ ಪತ್ರಿಕೆಯೊಂದರ ಸಲಹಾ ಸಮಿತಿಯ ಸದಸ್ಯರಾಗಿ ೧೯೮೯ರಲ್ಲಿ ಮಾಸ್ಕೋಗೆ ಭೇಟಿ ನೀಡಿದರು. ೧೯೯೩ರಲ್ಲಿ ಚೀನಾ ದೇಶಕ್ಕೆ ಭೇಟಿ ನೀಡಿದ ಭಾರತೀಯ ಬರಹಗಾರರ ಬಳಗಕ್ಕೆ ಇವರು ನಾಯಕರಾಗಿದ್ದರು. ಇವಲ್ಲದೆ ದೇಶವಿದೇಶಗಳ ಹಲವಾರು ವೇದಿಕೆಗಳಿಂದ ನೂರಕ್ಕೂ ಹೆಚ್ಚು ಉಪನ್ಯಾಸ ನೀಡಿದ್ದಾರೆ.

ಇಷ್ಟೇ ಅಲ್ಲದೆ, ಅನಂತಮೂರ್ತಿಯವರು ಕನ್ನಡದ ಹಲವಾರು ಸಾಹಿತ್ಯ ದಿಗ್ಗಜರನ್ನು ರೇಡಿಯೋ ಮತ್ತು ದೂರದರ್ಶನಗಳಲ್ಲಿ ಸಂದರ್ಶಿಸಿದ್ದಾರೆ. ಮೈಸೂರು ಆಕಾಶವಾಣಿಗಾಗಿ ಗೋಪಾಲಕೃಷ್ಣ ಅಡಿಗ, ಶಿವರಾಮ ಕಾರಂತ, ಆರ್.ಕೆ. ನಾರಾಯಣ್, ಆರ್.ಕೆ.ಲಕ್ಷ್ಮಣ್ ಮತ್ತು ಜನರಲ್ ಕಾರಿಯಪ್ಪ ಅವರನ್ನು ಸಂದರ್ಶಿಸಿದ್ದಾರೆ. ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರುಗಳನ್ನು ಕುರಿತು ದೂರದರ್ಶನವು ನಿರ್ಮಿಸಿದ ಸಾಕ್ಷ್ಯ ಚಿತ್ರಗಳಲ್ಲಿ ಸಂದರ್ಶಕರಾಗಿ ಭಾಗವಹಿಸಿದ್ದಾರೆ.

[ಬದಲಾಯಿಸಿ] ಸಾಹಿತ್ಯ
ಅನಂತಮೂರ್ತಿಯವರು ಪ್ರಸಿದ್ಧರಾಗಿರುವುದು ಕನ್ನಡದ ಬರಹಗಾರರಾಗಿ ಮತ್ತು ಕನ್ನಡ ಸಂಸ್ಕೃತಿಯ critical insider ಆಗಿ. ೧೯೫೫ರಲ್ಲಿ "ಎಂದೆಂದೂ ಮುಗಿಯದ ಕತೆ" ಕಥಾ ಸಂಕಲನದಿಂದ ಅವರ ಸಾಹಿತ್ಯ ಕೃಷಿ ಆರಂಭವಾಯಿತು. ಮೌನಿ, ಪ್ರಶ್ನೆ, ಆಕಾಶ ಮತ್ತು ಬೆಕ್ಕು -ಇವರ ಕಥಾಸಂಕಲನಗಳು. ಈ ಎಲ್ಲ ಕತೆಗಳನ್ನೂ ಒಳಗೊಂಡ "ಮೂರು ದಶಕದ ಕಥೆಗಳು" ೧೯೮೯ರಲ್ಲಿ ಹೊರಬಂದಿದೆ. ಹಿರಿಯ ಸಮಾಜವಾದಿ ರಾಜಕಾರಣಿ ಜೆ. ಎಚ್. ಪಟೇಲರ ಸಮೀಪವರ್ತಿಯಾಗಿದ್ದ ಅನಂತಮೂರ್ತಿ ಅವರು ಶಾಂತವೇರಿ ಗೋಪಾಲ ಗೌಡ ಮತ್ತು ಲೋಹಿಯಾ ಅವರ ಪ್ರಭಾವಕ್ಕೆ ಒಳಗಾದವರು. ಇವರ ಬರಹದಲ್ಲಿ ಈ ಇಬ್ಬರ ಪ್ರಭಾವಗಳು ಎದ್ದು ಕಾಣುತ್ತವೆ.

೧೯೬೫ರಲ್ಲಿ ಇವರ ಮೊದಲ ಕಾದಂಬರಿ "ಸಂಸ್ಕಾರ" ಪ್ರಕಟವಾಯಿತು. ಪ್ರಕಟವಾದಾಗ ಮತ್ತು ಚಲನಚಿತ್ರವಾದಾಗ ತುಂಬ ವಿವಾದವನ್ನುಂಟು ಮಾಡಿದ ಈ ಕಾದಂಬರಿ ಹಲವಾರು ದೇಶೀಯ ಮತ್ತು ವಿದೇಶೀಯ ಭಾಷೆಗಳಿಗೆ ಅನುವಾದಗೊಂಡಿದೆ. ಭಾರತೀಪುರ, ಅವಸ್ಥೆ ಮತ್ತು ಭವ -ಇವರ ಇತರ ಕಾದಂಬರಿಗಳು. "ಆವಾಹನೆ" ಎಂಬ ಒಂದು ನಾಟಕವನ್ನು ಬರೆದಿರುವ ಅನಂತಮೂರ್ತಿ "೧೫ ಪದ್ಯಗಳು", "ಮಿಥುನ" ಮತ್ತು "ಅಜ್ಜನ ಹೆಗಲ ಸುಕ್ಕುಗಳು" ಎಂಬ ಮೂರು ಕವನ ಸಂಕಲನಗಳನ್ನೂ ಪ್ರಕಟಿಸಿದ್ದಾರೆ. ಪ್ರಜ್ಞೆ ಮತ್ತು ಪರಿಸರ, ಪೂರ್ವಾಪರ, ಸಮಕ್ಷಮ -ಇವು ಅವರ ಪ್ರಬಂಧ ಸಂಕಲನಗಳು. ಇಷ್ಟಲ್ಲದೆ ಇಂಗ್ಲೀಷಿನಲ್ಲಿ ಇವರು ಬರೆದಿರುವ ಹಲವಾರು ಪ್ರಬಂಧಗಳು ದೇಶ-ವಿದೇಶಗಳ ಸಾಹಿತ್ಯಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ೧೯೮೧ರಲ್ಲಿ ರಾಜಕೀಯ, ಸಾಂಸ್ಕೃತಿಕ ಮತ್ತು ಸಾಹಿತ್ಯಕ ವಿಷಯಗಳಿಗೆಂದು "ರುಜುವಾತು" ಎಂಬ ತ್ರೈಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಿದರು.

ಅನಂತಮೂರ್ತಿಯವರ ಹಲವು ಕತೆಗಳು ಕನ್ನಡ ಸಾಹಿತ್ಯ ವಿಮರ್ಶಕರ ಗಮನ ಸೆಳೆದಿವೆ ಮತ್ತು ಚರ್ಚೆಗೂ ವಿವಾದಕ್ಕೂ ಒಳಗಾಗಿವೆ. ಸೂರ್ಯ ಕುದುರೆ, ನವಿಲುಗಳು, ಬರ, ಘಟಶ್ರಾದ್ಧ, ತಾಯಿ, ಹುಲಿಯ ಹೆಂಗರಳು ಈ ಸಾಲಿಗೆ ಸೇರುತ್ತವೆ.

ಅನಂತಮೂರ್ತಿಯವರ ಸಂಸ್ಕಾರ, ಅವಸ್ಥೆ ಕಾದಂಬರಿಗಳನ್ನು ಮತ್ತು ಬರ, ಘಟಶ್ರಾದ್ಧ ಕತೆಗಳನ್ನು ಆಧರಿಸಿ ಚಲನಚಿತ್ರಗಳು ನಿರ್ಮಾಣವಾಗಿವೆ. ಇವೆಲ್ಲವೂ ಮಹತ್ವದ ಚಿತ್ರಗಳಾಗಿದ್ದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿವೆ. ಘಟಶ್ರಾದ್ಧ ಕತೆಯನ್ನು ಆಧರಿಸಿ "ದೀಕ್ಷಾ" ಎಂಬ ಹಿಂದಿ ಚಲನಚಿತ್ರವೂ ತಯಾರಾಗಿದೆ. ಸಂಸ್ಕಾರ ಮತ್ತು ಘಟಶ್ರಾದ್ಧ ಚಲನಚಿತ್ರಗಳು ಭಾರತ ಸರಕಾರದಿಂದ ಸ್ವರ್ಣಕಮಲ ಪ್ರಶಸ್ತಿಯನ್ನು ಪಡೆದಿವೆ.

[ಬದಲಾಯಿಸಿ] ಪ್ರಶಸ್ತಿಗಳು
ಸಂಸ್ಕಾರ, ಘಟಶ್ರಾದ್ಧ ಮತ್ತು ಬರ ಚಿತ್ರಗಳಿಗೆ ಅತ್ಯುತ್ತಮ ಕತೆಗಾಗಿ ಅನಂತಮೂರ್ತಿಯವರಿಗೆ ಪ್ರಶಸ್ತಿ ಸಿಕ್ಕಿದೆ. ೧೯೮೩ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೮೪ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,೧೯೯೨ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೯೪ರಲ್ಲಿ ಮಾಸ್ತಿ ಪ್ರಶಸ್ತಿ -ಇವು ಅನಂತಮೂರ್ತಿಯವರಿಗೆ ಬಂದ ಮನ್ನಣೆಗಳಲ್ಲಿ ಕೆಲವು. ೧೯೯೪ರಲ್ಲಿ ಬಂದಿರುವ ಜ್ಞಾನಪೀಠ ಪ್ರಶಸ್ತಿ ಇವೆಲ್ಲವುಗಳಿಗೆ ಕಳಶಪ್ರಾಯವಾದುದು.

ವಿನಾಯಕ ಕೃಷ್ಣ ಗೋಕಾಕ

ಶ್ರೀ ವಿನಾಯಕ ಕೃಷ್ಣ ಗೋಕಾಕ್ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು ೧೯೯೧ರಲ್ಲಿ ತಂದುಕೊಟ್ಟ ವಿನಾಯಕ ಕೃಷ್ಣ ಗೋಕಾಕರು ಹಲವು ರೀತಿಯಲ್ಲಿ ಅದೃಷ್ಠವಂತರು. ಅವರು ಕನ್ನಡದ ಪ್ರತಿಭಾವಂತ ಕವಿ, ಪಂಡಿತರಾಗಿದ್ದರು. ಕನ್ನಡ-ಇಂಗ್ಲೀಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಪಡೆದಿದ್ದ ಅವರು ತಮ್ಮ ಜೀವಿತ ಕಾಲದಲ್ಲೇ ಒಬ್ಬ ಪ್ರತಿಭಾವಂತ ಸಾಹಿತಿಗೆ ದೊರಕಬೇಕಾದ ಎಲ್ಲ ಸಿದ್ಧಿ, ಪ್ರಸಿದ್ಧಿಗಳನ್ನು ಪಡೆದರು. ಗೋಕಾಕರು ಇದಕ್ಕೂ ಮೊದಲು ಭಾರತೀಯ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು. ಈ ಸಮಿತಿಯ ಅಧ್ಯಕ್ಷರಾಗುವುದೇ ಒಂದು ದೊಡ್ಡ ಗೌರವ. ಅಂಥವರಿಗೇ ಜ್ಞಾನಪೀಠ ಪ್ರಶಸ್ತಿ ಸಹ ಬರುವುದೆಂದರೆ, ಸಾಮಾನ್ಯ ಸಾಧನೆಯಲ್ಲ!

ಪರಿವಿಡಿ [ಅಡಗಿಸು]
೧ ಜೀವನ
೨ ಕೃತಿಗಳು
೩ ಗೌರವಗಳು ಮತ್ತು ಪ್ರಶಸ್ತಿಗಳು
೪ ಗೋಕಾಕ್ ವರದಿ


[ಬದಲಾಯಿಸಿ] ಜೀವನ
ತಮ್ಮ ಹಲವು ಸಾಧನೆ, ಸಿದ್ಧಿಗಳಿಂದ ಕನ್ನಡಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯನ್ನೂ, ಗೌರವವನ್ನೂ ತಂದು ಕೊಟ್ಟ ವಿನಾಯಕ ಕೃಷ್ಣರಾವ್ ಗೋಕಾಕರು ೧೯೦೯ರ ಅಗಸ್ಟ್.೧೦ರಂದು ಧಾರವಾಡ ಜಿಲ್ಲೆಯ ಸವಣೂರು ಎಂಬಲ್ಲಿ ಜನಿಸಿದರು. ಅವರ ತಂದೆ ಕೃಷ್ಣರಾಯರು ವಕೀಲರಾಗಿದ್ದರು. ವಿನಾಯಕರು ಹುಟ್ಟಿದ ಕಾಲಕ್ಕೆ ಸವಣೂರು ಒಂದು ಪುಟ್ಟ ಸಂಸ್ಥಾನವಾಗಿತ್ತು. ಒಬ್ಬ ನವಾಬನ ಆಡಳಿತಕ್ಕೆ ಒಳಪಟ್ಟಿತ್ತು. ವಿನಾಯಕರ ವಿದ್ಯಾಭ್ಯಾಸ ಸವಣೂರು ಧಾರವಾಡಗಳಲ್ಲಿ ನಡೆಯಿತು. ಹೀಗೆ ವಿದ್ಯಾಭ್ಯಾಸದ ಸಲುವಾಗಿ ಧಾರವಾಡದಲ್ಲಿದ್ದಾಗಲೇ ಅವರಿಗೆ ಕನ್ನಡದ ವರಕವಿ ಬೇಂದ್ರೆಯವರ ಸಂಪರ್ಕ ಒದಗಿ ಬಂತು. ಗೋಕಾಕರ ಸಾಹಿತ್ಯ ಕೃಷಿ ಬೇಂದ್ರೆಯವರ ಮಾರ್ಗದರ್ಶನ, ಪ್ರೋತ್ಸಾಹಗಳಿಂದ ಮುಂದುವರೆಯಿತು. ಬೇಂದ್ರೆ ತಮ್ಮ ಕಾವ್ಯ ಗುರುವೂ, ಮಾರ್ಗದರ್ಶಕರೂ ಆಗಿದ್ದರೆಂದು ಗೋಕಾಕರೇ ಹೇಳಿಕೊಂಡಿದ್ದಾರೆ.

ಇಂಗ್ಲೀಷ್ ವಿಷಯದ ಎಂ.ಎ. ಪರೀಕ್ಷೆಯಲ್ಲಿ ಮೊದಲ ದರ್ಜೆಯಲ್ಲಿ ಉತ್ತೀರ್ಣರಾದ ಗೋಕಾಕರು, ಕೂಡಲೇ ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆಗೆ ಆಯ್ಕೆಯಾದರು. ಅವರು ತಮ್ಮ ವೃತ್ತಿಯಲ್ಲಿ ತಮ್ಮನ್ನು ಪೂರ್ತಿಯಾಗಿ ತೊಡಗಿಸಿಕೊಂಡರು.ಇದರ ಫಲವಾಗಿ ಕನ್ನಡದ ಗಂಡುಮೆಟ್ಟಿನ ನೆಲದ ಈ ಯುವಕ ಮರಾಠಿಗರನ್ನು ಕೂಡ ತಮ್ಮ ಕಡೆ ಸೆಳೆದುಕೊಂಡ. ಇವರ ತರಗತಿಗಳಿಗೆ ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳು ಕೂಡ ಪಾಠ ಕೇಳಲು ಬರುತ್ತಿದ್ದರಂತೆ.

ಇವರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಫರ್ಗ್ಯೂಸನ್ ಕಾಲೇಜಿನ ಆಡಳಿತ ವರ್ಗವೇ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಇವರನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ಕಳಿಸಿತು. ಗೋಕಾಕರು ಆಕ್ಸ್‌ಫರ್ಡ್‌ನಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಓದಿದರು. ಪರೀಕ್ಷೆಯನ್ನು ಮೊದಲ ದರ್ಜೆಯಲ್ಲಿ ಪಾಸು ಮಾಡಿದರು. ಹೀಗೆ ಆಕ್ಸ್‌ಫರ್ಡ್‌ನಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದ ಮೊದಲ ಭಾರತೀಯ ಎಂಬ ಕೀರ್ತಿಗೆ ಪಾತ್ರರಾದರು. ಇಂಗ್ಲೆಂಡಿನಿಂದ ಹಿಂತಿರುಗಿ ಬಂದವರಿಗೆ ಸಾಂಗ್ಲಿಯ ವಿಲ್ಲಿಂಗ್‌ಡನ್ ಕಾಲೇಜಿನ ಪ್ರಿನ್ಸಿಪಾಲ ಹುದ್ದೆ ಕಾದಿತ್ತು. ಅನಂತರ ಕ್ರಮೇಣ ಅವರು ಶಿಕ್ಷಣ ಕ್ಷೇತ್ರದಲ್ಲಿ ಅಧ್ಯಾಪಕನಾದವನೊಬ್ಬನು ಏರಬಹುದಾದ ಅತ್ಯುನ್ನತ ಹುದ್ದೆಯಾದ ಉಪಕುಲಪತಿ ಹುದ್ದೆಗೂ ಏರಿದರು. ಅವರು ಸಾಂಗ್ಲಿಯ ವಿಲ್ಲಿಂಗ್‌ಡನ್ ಕಾಲೇಜು, ಪುಣೆಯ ಫರ್ಗೂಸನ್ ಕಾಲೇಜು, ವೀಸನಗರದ ಕಾಲೇಜು, ಕೊಲ್ಲಾಪುರದ ರಾಜಾರಾಮ ಕಾಲೇಜು, ಧಾರವಾಡದ ಕರ್ನಾಟಕ ಕಾಲೇಜು, ಉಸ್ಮಾನಿಯಾ ವಿಶ್ವವಿದ್ಯಾಲಯ, ಹೈದರಾಬಾದಿನಲ್ಲಿರುವ ಇಂಗ್ಲೀಷ್ ಮತ್ತು ವಿದೇಶೀ ಭಾಷೆಗಳ ಕೇಂದ್ರ ಸಂಸ್ಥೆ, ಸಿಮ್ಲಾದಲ್ಲಿರುವ ಉನ್ನತ ಅಧ್ಯಯನ ಸಂಸ್ಥೆ -ಮೊದಲಾದ ಶಿಕ್ಷಣ ಸಂಸ್ಥೆಗಳಲ್ಲಿ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಶ್ರೀಸತ್ಯಸಾಯಿ ಉನ್ನತ ಅಧ್ಯಯನ ಸಂಸ್ಥೆಯ ಉಪಕುಲಪತಿಗಳಾಗಿದ್ದರು. ಜಪಾನ್, ಅಮೆರಿಕ, ಇಂಗ್ಲೆಂಡ್, ಬೆಲ್ಜಿಯಂ, ಗ್ರೀಸ್, ಪೂರ್ವ ಆಫ್ರಿಕ ಮೊದಲಾದ ದೇಶಗಳಿಗೆ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಹೋಗಿ ಬಂದರು. ತಮ್ಮ ಬದುಕಿನುದ್ದಕ್ಕೂ ಕನ್ನಡದ ಕೀರ್ತಿಪತಾಕೆಗಳನ್ನು ದೇಶದ ಒಳಗೂ ಹೊರಗೂ ಹಾರಿಸಿದ ಗೋಕಾಕರು ೧೯೯೨ರ ಎಪ್ರಿಲ್.೨೮ರಂದು ಬೆಳಗಿನ ಜಾವ ಮುಂಬಯಿಯಲ್ಲಿ ನಿಧನರಾದರು. ವಿನಾಯಕ ಕೃಷ್ಣ ಗೋಕಾಕ್ ಕುರಿತ ಮತ್ತೊಂದು ಲೇಖನಕ್ಕೆ ಈ ಲಿಂಕ್ ಕ್ಲಿಕ್ ಮಾಡಿ http://kannadaratna.com/achievers/gokak.html

[ಬದಲಾಯಿಸಿ] ಕೃತಿಗಳು
ಈ ಶತಮಾನದ ಕನ್ನಡ ಲೇಖಕರಲ್ಲಿ ಅಗ್ರಗಣ್ಯರಾಗಿರುವ ವಿ.ಕೃ. ಗೋಕಾಕರ ಬರಹ ತುಂಬ ವಿಪುಲವೂ, ವ್ಯಾಪಕವೂ ಆದದ್ದು. ಕನ್ನಡ, ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಗೋಕಾಕರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಇಂಗ್ಲೀಷಿನಲ್ಲಿ ಅವರು ಬರೆದಿರುವ ಕೃತಿಗಳ ಸಂಖ್ಯೆ ಮೂವತ್ತಕ್ಕೂ ಹೆಚ್ಚು. ಅವರ ಮೊದಲ ಪ್ರಕಟಿತ ಕೃತಿ "ಕಲೋಪಾಸಕರು". ಅವರು ಇಂಗ್ಲೆಂಡಿಗೆ ಸಮುದ್ರದ ಮೂಲಕ ಹೋಗಿ ಬಂದ ಅನುಭವಗಳನ್ನು ಆಧರಿಸಿ ರಚಿಸಿದ "ಸಮುದ್ರ ಗೀತೆಗಳು", "ಸಮುದ್ರದಾಚೆಯಿಂದ"- ಇವು ಮಹತ್ವದ ಕೃತಿಗಳಾಗಿವೆ. ಸಮುದ್ರ ಗೀತೆಗಳು ಕವನ ಸಂಕಲನದಲ್ಲಿರುವ "ಕೊಡದಿರು ಶರಧಿಗೆ ಷಟ್ಪದಿಯ ದೀಕ್ಷೆಯನು" ಎಂಬ ಸಾಲಂತೂ ತುಂಬ ಪ್ರಸಿದ್ಧವಾಗಿದೆ. ಕನ್ನಡ ಸಾಹಿತ್ಯದಲ್ಲಿ "ನವ್ಯ" ಎಂಬ ಹೊಸಮಾರ್ಗ ಗೋಕಾಕರಿಂದಲೇ ಪ್ರಾರಂಭಗೊಂಡಿತು ಎಂಬ ಅಭಿಪ್ರಾಯವಿದೆ. ಗೋಕಾಕರು ನಾಟಕ, ಪ್ರಬಂಧ, ಪ್ರವಾಸ ಕಥನ, ವಿಮರ್ಶೆ ಮುಂತಾದ ಪ್ರಕಾರಗಳಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಕನ್ನಡದ ಬೃಹತ್ ಕಾದಂಬರಿಗಳಲ್ಲಿ ಒಂದಾದ "ಸಮರಸವೇ ಜೀವನ" ಗೋಕಾಕರದ್ದೇ ಕೃತಿ. "ಜನನಾಯಕ" ಅವರ ಸುಪ್ರಸಿದ್ಧ ನಾಟಕ.

"ಭಾರತ ಸಿಂಧು ರಶ್ಮಿ" ವಿನಾಯಕರು ರಚಿಸಿದ ಮಹಾಕಾವ್ಯ. ಹನ್ನೆರಡು ಖಂಡಗಳು, ಮೂವತ್ತೈದು ಸಾವಿರ ಸಾಲುಗಳ ಈ ಮಹಾಕಾವ್ಯ ಋಗ್ವೇದ ಕಾಲದ ಜನಜೀವನವನ್ನು ಕುರಿತದ್ದು. ವಿಶ್ವಾಮಿತ್ರ ಈ ಕಾವ್ಯದ ನಾಯಕ.

[ಬದಲಾಯಿಸಿ] ಗೌರವಗಳು ಮತ್ತು ಪ್ರಶಸ್ತಿಗಳು
ಗೋಕಾಕರು ಸಾಹಿತ್ಯ-ಸಂಸ್ಕೃತಿಗೆ ಸಲ್ಲಿಸಿದ ಸೇವೆಯನ್ನು ಗಮನಿಸಿ ಜನತೆಯೂ, ಸರ್ಕಾರವೂ ಅವರಿಗೆ ಪ್ರಶಸ್ತಿ ಗೌರವಗಳನ್ನು ನೀಡಿ ಸನ್ಮಾನಿಸಿವೆ. ಬಳ್ಳಾರಿಯಲ್ಲಿ ೧೯೫೮ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು. ೧೯೬೭ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ೧೯೭೯ರಲ್ಲಿ ಕ್ಯಾಲಿಫೋರ್ನಿಯಾದ ಫೆಸಿಫಿಕ್ ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿವೆ. ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪದವಿ ಮತ್ತು ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಪದವಿ ಇವೆರಡೂ ಕನ್ನಡಿಗರೊಬ್ಬರಿಗೆ ಮೊದಲ ಬಾರಿಗೆ ಸಂದ ಗೌರವಗಳಾಗಿವೆ. ಅವರ ಮೇರು ಕೃತಿ "ಭಾರತ ಸಿಂಧು ರಶ್ಮಿ"ಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಭಾರತೀಯ ವಿದ್ಯಾಭವನದ ರಾಜಾಜಿ ಪ್ರಶಸ್ತಿ ಮತ್ತು ಐ.ಬಿ.ಎಚ್. ಪ್ರಶಸ್ತಿಗಳೂ ದೊರಕಿವೆ. ಗೋಕಾಕರ "ದ್ಯಾವಾ ಪೃಥಿವೀ" ಕವನ ಸಂಕಲನಕ್ಕೆ ೧೯೬೦ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಬಂದಿತು.

ಗೋಕಾಕರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ನೀಡುವಾಗ ಪ್ರಶಸ್ತಿ ಆಯ್ಕೆ ಸಮಿತಿ ಅವರ ಯಾವುದೇ ಕೃತಿಯನ್ನು ಹೆಸರಿಸಲಿಲ್ಲ. ಕನ್ನಡ ಸಾಹಿತ್ಯ ಲೋಕಕ್ಕೆ ಅವರು ೧೯೬೯ರಿಂದ ೧೯೮೪ರ ಅವಧಿಯಲ್ಲಿ ನೀಡಿದ ಅನುಪಮ ಕೊಡುಗೆಯನ್ನು ಗಮನಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಹೇಳಿದೆ. ಯಾವುದೇ ಕೃತಿಯನ್ನು ಹೆಸರಿಸದೆ ಜ್ಞಾನಪೀಠ ಪ್ರಶಸ್ತಿ ಕೊಟ್ಟಿದ್ದು ಇದೇ ಮೊದಲು. ಆದರೆ ಬಹಳ ಜನರು ಗೋಕಾಕರಿಗೆ ಅವರ ಮೇರು ಕೃತಿ "ಭಾರತ ಸಿಂಧು ರಶ್ಮಿ"ಗಾಗಿಯೇ ಈ ಪ್ರಶಸ್ತಿ ಬಂದಿದೆ ಎಂದು ಭಾವಿಸಿದ್ದಾರೆ.

ಸಾಮಾನ್ಯವಾಗಿ ಜ್ಞಾನಪೀಠ ಪ್ರಶಸ್ತಿಯನ್ನು ದೆಹಲಿಯಲ್ಲಿ ನೀಡಲಾಗುತ್ತದೆ. ಆದರೆ ಗೋಕಾಕರಿಗೆ ಪ್ರಶಸ್ತಿಯನ್ನು ನೀಡಲು ಸ್ವತಃ ಈ ದೇಶದ ಪ್ರಧಾನ ಮಂತ್ರಿಗಳೇ ಮುಂಬಯಿಗೆ ಆಗಮಿಸಿದರು. ಇದು ಗೋಕಾಕರು ಎಷ್ಟು ಮಹತ್ವದ ವ್ಯಕ್ತಿ ಎಂಬುದಕ್ಕೆ ಒಂದು ನಿದರ್ಶನ.

[ಬದಲಾಯಿಸಿ] ಗೋಕಾಕ್ ವರದಿ
ತಮ್ಮ ಪಾಂಡಿತ್ಯದಿಂದಾಗಿ ಸಾಹಿತ್ಯ ಲೋಕದಲ್ಲಿ ಜನಪ್ರಿಯರಾಗಿದ್ದ ಗೋಕಾಕರಿಗೆ ಶ್ರೀಸಾಮಾನ್ಯರ, ಅನಕ್ಷರಸ್ಥರ ವಲಯದಲ್ಲೂ ಜನಪ್ರಿಯರಾಗುವ ಒಂದು ಸುಯೋಗ ಒದಗಿ ಬಂತು. ಕರ್ನಾಟಕ ಸರ್ಕಾರ ೧೯೮೦ರಲ್ಲಿ ಪ್ರೌಢಶಾಲಾ ವ್ಯಾಸಂಗದಲ್ಲಿ ಭಾಷೆಗಳ ಸ್ಥಾನಮಾನ ಕುರಿತು ವರದಿ ನೀಡಲು ವಿ.ಕೃ. ಗೋಕಾಕರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತು. ಈ ಸಮಿತಿ ನೀಡಿದ ವರದಿ ಕನ್ನಡದ ಪರವಾಗಿತ್ತು. ಸರ್ಕಾರ ಈ ವರದಿಯನ್ನು ಅಂಗೀಕರಿಸಲು ಹಿಂದೆ ಮುಂದೆ ನೋಡಿತು. ಕನ್ನಡ ಜನತೆ ಮೊದಲ ಬಾರಿಗೆ ಒಕ್ಕೊರಲಿನಿಂದ ಗೋಕಾಕ್ ವರದಿ ಜಾರಿಗೆ ಬರಲಿ ಎಂದು ಸರ್ಕಾರವನ್ನು ಒತ್ತಾಯಿಸಿತು. ಈ ಸಂದರ್ಭದಲ್ಲಿ ನಡೆದ ಕನ್ನಡ ಚಳವಳಿ ಒಂದು ಐತಿಹಾಸಿಕ ದಾಖಲೆಯಾಗಿದೆ. ಕರ್ನಾಟಕದಲ್ಲಿ ಈ ಪ್ರಮಾಣದ ಚಳವಳಿ ಹಿಂದೆಂದೂ ನಡೆದಿರಲಿಲ್ಲ. ಸ್ವಾತಂತ್ರ್ಯ ಹೋರಾಟವಾಗಲೀ, ಕರ್ನಾಟಕ ಏಕೀಕರಣ ಚಳವಳಿಯಾಗಲೀ ಕರ್ನಾಟಕದಲ್ಲಿ ಈ ಪ್ರಮಾಣದಲ್ಲಿ ನಡೆದಿರಲಿಲ್ಲ ಎಂದು ಇತಿಹಾಸಕಾರರು ಹೇಳುತ್ತಾರೆ. ಇದು ಇತಿಹಾಸದಲ್ಲಿ "ಗೋಕಾಕ್ ಚಳವಳಿ" ಎಂದೇ ದಾಖಲಾಗಿದೆ. ಈಗ ಇದರ ಫಲವಾಗಿ ಕರ್ನಾಟಕದ ಕನ್ನಡೇತರ ಶಾಲೆಗಳಲ್ಲೂ ಮೂರನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗೂ ಒಂದು ಭಾಷೆಯಾಗಿ ಕನ್ನಡವನ್ನು ಕಡ್ಡಾಯವಾಗಿ ಓದಬೇಕಾಗಿದೆ. ಗೋಕಾಕ್ ಚಳವಳಿ ಕನ್ನಡಿಗರಲ್ಲಿ ಎಚ್ಚರವನ್ನು ಮೂಡಿಸಿದೆ. ಅಂದಿನಿಂದ ಕನ್ನಡಿಗರು ತಮ್ಮ ನಾಡು, ನುಡಿ ಹಾಗೂ ನೀರಿನ ಬಗ್ಗೆ ಸ್ವಲ್ಪ ಮಟ್ಟಿಗೆ ಜಾಗೃತರಾಗಿದ್ದಾರೆ. ಗೋಕಾಕರೇ ಸ್ವತಃ ಅನೇಕ ಕನ್ನಡ ಪರ ಚಳವಳಿಗಳಲ್ಲಿ ಭಾಗವಹಿಸಿ ಜನರನ್ನು ಎಚ್ಚರಿಸಿದ್ದಾರೆ. ಅವರು ಅನೇಕ ಕನ್ನಡಪರ ನಿಯೋಗಗಳ ನಾಯಕತ್ವವನ್ನು ವಹಿಸಿ ಸರ್ಕಾರವನ್ನೂ ಎಚ್ಚರಿಸಿದ್ದಾರೆ. ಇದು ಗೋಕಾಕರ ಕನ್ನಡ ಪ್ರೀತಿಗೆ ನಿದರ್ಶನವಾಗಿದೆ.

ಗೋಕಾಕ್ ಅವರು ತಮ್ಮ ಬರಹ, ಬೋಧನೆಗಳಿಂದ ಕನ್ನಡದ ಗೌರವವನ್ನು ಹೆಚ್ಚಿಸಿದರು. ಹಾಗೆಯೇ "ಗೋಕಾಕ್ ವರದಿ"ಯಲ್ಲಿ ಕನ್ನಡಕ್ಕೆ ಶಾಲಾ ಶಿಕ್ಷಣದಲ್ಲಿ ಸಲ್ಲಬೇಕಾದ ನ್ಯಾಯಯುತ ಸ್ಥಾನವನ್ನು ದೊರಕಿಸಿಕೊಟ್ಟರು. ಈ ಎರಡೂ ಕೆಲಸಗಳಿಗಾಗಿ ಕನ್ನಡ ಜನತೆ ಗೋಕಾಕರನ್ನು ಸದಾ ಗೌರವ, ಕೃತಜ್ಞತೆಗಳಿಂದ ನೆನೆಯುತ್ತದೆ.

ಮಾಸ್ತಿ ವೆಂಕಟೇಶ ಅಯ್ಯಂಗಾರ್

ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್ಮಾಸ್ತಿ ವೆಂಕಟೇಶ ಅಯ್ಯಂಗಾರರು (ಜೂನ್ ೬ ೧೮೯೧ - ಜೂನ್ ೬ ೧೯೮೬) - ಕನ್ನಡದ ಒಬ್ಬ ಅಪ್ರತಿಮ ಲೇಖಕರು. ಕನ್ನಡ ಸಾಹಿತ್ಯ ಲೋಕದಲ್ಲಿ ಮಾಸ್ತಿ ಎಂದೇ ಖ್ಯಾತರಾಗಿರುವ ಈ ಸಾಹಿತಿ ಶ್ರೀನಿವಾಸ ಎಂಬ ಕಾವ್ಯನಾಮದಡಿಯಲ್ಲಿ ಬರೆಯುತ್ತಿದರು.

ಮಾಸ್ತಿ ವೆಂಕಟೇಶ ಅಯ್ಯಂಗಾರರು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮದಲ್ಲಿ ಜೂನ್ ೬ ೧೮೯೧ ರಲ್ಲಿ ಜನಿಸಿದರು. ಮೆಟ್ರಿಕ್ಯುಲೇಷನ್(೧೯೦೭), ಎಫ್ ಎ (೧೯೦೯), ಬಿ ಎ (ಮದರಾಸು ವಿಶ್ವವಿದ್ಯಾಲಯ ೧೯೧೨), ಮೈಸೂರು ಸಿವಿಲ್ ಸರ್ವಿಸ್ (೧೯೧೩), ಎಂ.ಎ (ಮದರಾಸು ವಿಶ್ವವಿದ್ಯಾಲಯ ೧೯೧೪) ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ, ೧೯೧೪ ರಲ್ಲಿ ಮೈಸೂರು ಸರ್ಕಾರದಲ್ಲಿ ಅಸಿಸ್ಟೆಂಟ್ ಕಮಿಷನರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ೧೯೧೪ ರಿಂದ ೧೯೪೩ ರವವರೆಗೆ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿ ನಿವೃತ್ತರಾದರು. ೧೯೨೦ ರಲ್ಲಿ ಅವರ ಮೊದಲ ಪುಸ್ತಕ ಕೆಲವು ಸಣ್ಣ ಕಥೆಗಳು ಪ್ರಕಟಗೊಂಡಿತು. ಸಣ್ಣ ಕತೆ, ನೀಳ್ಗತೆ, ಕಾದಂಬರಿ, ಕಾವ್ಯ, ನಾಟಕ, ಜೀವನ ಚರಿತ್ರೆ, ಪ್ರಬಂಧ, ವಿಮರ್ಶೆ, ಸಂಪಾದನೆ, ಅನುವಾದ - ಹೀಗೆ ಕನ್ನಡ ಸಾಹಿತ್ಯದ ಪ್ರತಿಯೊಂದು ಕ್ಷೇತ್ರಕ್ಕೂ ತಮ್ಮ ಕೊಡುಗೆಯನ್ನು ನೀಡಿದ್ದಾರೆ.
೧೯೮೩ ರಲ್ಲಿ ಚಿಕವೀರ ರಾಜೇಂದ್ರ ಕಾದಂಬರಿಗಾಗಿ ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತಗೊಂಡ ಮಾಸ್ತಿಯವರು ಕನ್ನಡಕ್ಕೆ ನಾಲ್ಕನೆ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟರು. ಜೀವನ ಪರ್ಯಂತ ಕನ್ನಡ ಸೇವೆಯನ್ನು ಮಾಡಿದ ಮಾಸ್ತಿಯವರು ಜೂನ್ ೬ ೧೯೮೬ ರಂದು ನಿಧನ ಹೊಂದಿದರು.

ಪರಿವಿಡಿ [ಅಡಗಿಸು]
೧ ಜೀವನ
೨ ಸಾಹಿತ್ಯ
೩ ಗೌರವಗಳು
೪ ಮುಖ್ಯ ಕೃತಿಗಳು
೪.೧ ಸಣ್ಣ ಕತೆಗಳ ಸಂಗ್ರಹ
೪.೨ ನೀಳ್ಗತೆ
೪.೩ ಕಾವ್ಯ ಸಂಕಲನಗಳು
೪.೪ ಜೀವನ ಚರಿತ್ರೆ
೪.೫ ಪ್ರಬಂಧ
೪.೬ ನಾಟಕ
೪.೭ ಕಾದಂಬರಿ
೫ ಈ ಪುಟಗಳನ್ನೂ ನೋಡಿ
೬ ಪ್ರಶಸ್ತಿಗಳು


[ಬದಲಾಯಿಸಿ] ಜೀವನ
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿ ಎಂಬ ಹಳ್ಳಿಯಲ್ಲಿ ೧೮೯೧ರ ಜೂನ್ ೬ರಂದು ಹುಟ್ಟಿದರು. ಅವರು ಹುಟ್ಟುವ ಕಾಲಕ್ಕೆ ಮನೆಯಲ್ಲಿ ಬಡತನವಿತ್ತು. ಒಂದು ಕಾಲಕ್ಕೆ ಶ್ರೀಮಂತಿಕೆಯಿಂದ ವಿಜೃಂಭಿಸಿದ ಕುಟುಂಬ ಅವರ ಪೂರ್ವಿಕರದು. ಮಾಸ್ತಿ ವೆಂಕಟೇಶ ಅಯ್ಯಂಗಾರ್ "ಪೆರಿಯಾತ್" ಎಂದರೆ ದೊಡ್ಡ ಮನೆಯವರು. ಅವರ ವಿದ್ಯಾಭ್ಯಾಸ ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಜರುಗಿತು. ಅವರ ಹಿರಿಯರು ಬಹು ಜನಕ್ಕೆ ಅನ್ನ ಹಾಕಿ ಹೆಸರು ಗಳಿಸಿದ್ದರಾದರೂ ಅವರು ವಾರದ ಮನೆಗಳಲ್ಲಿ ಊಟಮಾಡಿ ವಿದ್ಯಾಭ್ಯಾಸ ಮಾಡಬೇಕಾಯಿತು. ಹೊಂಗೇನಳ್ಳಿ, ಯಲಂದೂರು, ಶಿವಾರಪಟ್ಟಣ, ಮಳವಳ್ಳಿ, ಮೈಸೂರು, ಕಡೆಗೆ ಮದರಾಸು ಹೀಗೆ ನಾನಾ ಕಡೆಗಳಲ್ಲಿ ತಮ್ಮ ಬಂಧುಗಳ ನೆರವಿನಿಂದ ವಿದ್ಯಾಭ್ಯಾಸ ಮಾಡಿ ಎಂ.ಎ. ಪದವಿ ಗಳಿಸಿದರು. ತಮ್ಮ ವಿದ್ಯಾಭ್ಯಾಸ ಕಾಲದಲ್ಲಿ ಮಾಸ್ತಿ ಯಾವ ಪರೀಕ್ಷೆಯಲ್ಲೂ ಪ್ರಥಮ ಸ್ಥಾನವನ್ನು ಬೇರೆಯವರಿಗೆ ಬಿಟ್ಟುಕೊಡಲಿಲ್ಲ. ಮದ್ರಾಸಿನಲ್ಲಿ ಇಂಗ್ಲೀಷ್ ಎಂ.ಎ. ಮಾಡಿಕೊಂಡು ಚಿನ್ನದ ಪದಕ ಗಳಿಸಿದ ಮಾಸ್ತಿ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸುಮಾರು ಒಂದೂವರೆ ತಿಂಗಳು ಉಪಾಧ್ಯಾಯರಾಗಿದ್ದು ಬೆಂಗಳೂರಿಗೆ ಬಂದು ಸಿವಿಲ್ ಪರೀಕ್ಷೆಗೆ ಕುಳಿತು ಅಲ್ಲಿಯೂ ಪ್ರಥಮರಾಗಿ ತೇರ್ಗಡೆಯಾದರು. ಸರ್ಕಾರದಲ್ಲಿ ಅಸಿಸ್ಟೆಂಟ್ ಕಮೀಶನರಾಗಿ ಕೆಲಸಕ್ಕೆ ಸೇರಿ ಸಮರ್ಪಕವಾಗಿ ಕೆಲಸ ನಿರ್ವಹಿಸಿದರು. ಸಾಹಿತ್ಯ ರಚನೆ ಅವರ ಪ್ರವೃತ್ತಿಯಾಗಿ ಬೆಳೆಯಿತು.

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಲೇಖನಕ್ಕೆ ಇಲ್ಲಿ ಕ್ಲಿಕ್ ಮಾಡಿ http://kannadaratna.com/achievers/masthi.html

[ಬದಲಾಯಿಸಿ] ಸಾಹಿತ್ಯ
೧೯೧೦ ರಲ್ಲಿ ಬರೆದ ರಂಗನ ಮದುವೆ ಎಂಬ ಸಣ್ಣ ಕಥೆಗಳ ಸಂಗ್ರಹದಿಂದ ಹಿಡಿದು ಅವರು ನಿಧನರಾಗುವುದಕ್ಕೆ ಕೆಲವೇ ತಿಂಗಳುಗಳ ಹಿಂದೆ ಪ್ರಕಟವಾದ 'ಮಾತುಗಾರ ರಾಮಣ್ಣ' ಎಂಬ ಕೃತಿಯವರೆಗೆ ಅವರು ರಚಿಸಿದ ಕೃತಿಗಳ ಸಂಖ್ಯೆ ೧೨೩. ಇದರಲ್ಲಿ ಸಣ್ಣಕತೆಗಳು, ಕಾದಂಬರಿಗಳು, ನಾಟಕಗಳು, ವಿಮರ್ಶೆಗಳು, ಪ್ರಬಂಧಗಳು, ಧಾರ್ಮಿಕ ಕೃತಿಗಳು, ಅನುವಾದ, "ಜೀವನ" ಎಂಬ ಅವರೇ ನಡೆಸುತ್ತಿದ್ದ ಪತ್ರಿಕೆಯಲ್ಲಿ ಬರೆದ ಸಂಪಾದಕೀಯ ಲೇಖನಗಳು, ಕವಿತೆಗಳ ಸಂಗ್ರಹ, ಕಾವ್ಯ ಸೇರಿವೆ.

೨೦ನೆಯ ಶತಮಾನದ ಆರಂಭದ ಕಾಲ. ಕನ್ನಡ ಭಾಷೆಗೆ ಹೇಳಿಕೊಳ್ಳುವಂಥ ಪ್ರೋತ್ಸಾಹವಿರಲಿಲ್ಲ. ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಸಾಹಿತ್ಯದಲ್ಲಿ ಗಮನಾರ್ಹ ಕೆಲಸವಾಗಬೇಕಾಗಿದ್ದ ಕಾಲದಲ್ಲಿ ಮಾಸ್ತಿ ಸಾಹಿತ್ಯ ರಚನೆಯ ಕೆಲಸವನ್ನು ಕೈಗೊಂಡರು. ಸಣ್ಣ ಕತೆಗಳ ರಚನೆ ಅವರು ಪ್ರಧಾನವಾಗಿ ಆರಿಸಿಕೊಂಡ ಸಾಹಿತ್ಯ ಪ್ರಕಾರ. ಶ್ರೀನಿವಾಸ ಎಂಬ ಕಾವ್ಯನಾಮದಲ್ಲಿ ಮಾಸ್ತಿ ನೂರಾರು ಸಣ್ಣ ಕತೆಗಳನ್ನು ಬರೆದರು. ಹಲವಾರು ಕಥಾ ಸಂಕಲನಗಳನ್ನು ಪ್ರಕಟಿಸಿದರು. ಅವರ ಒಂದು ಸಣ್ಣ ಕಥೆಯನ್ನು ರಾಜಾಜಿಯವರು ತಮಿಳಿಗೆ ಅನುವಾದಿಸಿದರು. ಇಂಗ್ಲೀಷ್ ಹಾಗೂ ಇತರ ಭಾರತೀಯ ಭಾಷೆಗಳಿಗೆ ಮಾಸ್ತಿ ಅವರ ಸಣ್ಣ ಕತೆಗಳು ಅನುವಾದಗೊಂಡಿವೆ. ದೂರದರ್ಶನದಲ್ಲಿ ಕೆಲವು ಕತೆಗಳು ಅಭಿನಯಿಸಲ್ಪಟ್ಟು ಪ್ರಸಾರವಾಗಿವೆ. ಕಥೆ ಹೇಳುವುದರಲ್ಲಿ ಮಾಸ್ತಿ ಎತ್ತಿದ ಕೈ. ಅವರ ಕಥೆಗಳನ್ನು ಓದುತ್ತಿದ್ದರೆ ಅವು ಕಣ್ಣಿಗೆ ಕಟ್ಟಿದಂತಿರುತ್ತವೆ. "ಸುಬ್ಬಣ್ಣ" ಅವರ ಒಂದು ಖ್ಯಾತ ನೀಳ್ಗತೆ. ಅಪಾರ ಮಾನವೀಯ ಅಂತಃಕರಣವನ್ನು ಕತೆಯಲ್ಲಿ ತುಳುಕಿಸಿದ ಅವರು ಕಥೆಗಳ ರಚನೆಗೆ ಬಳಸಿದ ತಂತ್ರ ಅಪರೂಪದ್ದಾಗಿದೆ. ಸಣ್ಣ ಕಥೆಗಳ ಜನಕರೆಂದೇ ಅವರಿಗೆ ಕರೆಯುತ್ತಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಅವರ ಕಥೆಗಳ ಸಂಕಲನಗಳಿಗೆ ಲಭಿಸಿತು. ಕಥೆ ಹೇಳುವುದು ಒಂದು ಪುಣ್ಯದ ಕೆಲಸವೆಂದು ಅವರು ಭಾವಿಸಿದ್ದರು.

ಮಾಸ್ತಿ ಕಥೆಗಳನ್ನು ಬರೆದಂತೆಯೇ ಕಾದಂಬರಿ, ಕವಿತೆ, ಪ್ರಬಂಧ ಇವುಗಳನ್ನೂ ಬರೆದರು, ನಾಟಕಗಳನ್ನೂ ರಚಿಸಿದರು. ಅವರ ಎಲ್ಲ ಕೃತಿಗಳಲ್ಲೂ ಕುಶಲತೆ, ಸೌಮ್ಯತೆ, ಜೀವನ ದರ್ಶನಗಳನ್ನು ಸ್ಪಷ್ಟವಾಗಿ ಕಾಣಬಹುದು. "ಭಾರತತೀರ್ಥ", "ಆದಿಕವಿ ವಾಲ್ಮೀಕಿ" ಇವು ಭಾರತ ರಾಮಾಯಣಗಳನ್ನು ಕುರಿತು ಬರೆದಿರುವ ಗ್ರಂಥಗಳಾದರೆ "ಶ್ರೀರಾಮ ಪಟ್ಟಾಭಿಷೇಕ" ಅವರ ಒಂದು ಕಾವ್ಯ. ರವೀಂದ್ರನಾಥ ಠಾಕೂರ್, ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆಗಳನ್ನೂ, ಪುರಂದರದಾಸ, ಕನಕದಾಸ, ಅನಾರ್ಕಳಿ, ತಿರುಪಾಣಿ, ಶಿವಾಜಿ ಮೊದಲಾದ ನಾಟಕಗಳನ್ನೂ, ಷೇಕ್ಸ್‌ಪಿಯರನ ನಾಟಕಗಳ ಅನುವಾದಗಳನ್ನೂ ಮಾಸ್ತಿ ಪ್ರಕಟಿಸಿದ್ದಾರೆ.

ಮಾಸ್ತಿ ಬರೆದ ಕಾದಂಬರಿಗಳು ಎರಡು. ಜ್ಞಾನಪೀಠ ಪ್ರಶಸ್ತಿ ಗಳಿಸಿದ ಕೃತಿ ಚಿಕವೀರ ರಾಜೇಂದ್ರ - ಕೊಡಗಿನ ಕಡೆಯ ರಾಜ ಚಿಕವೀರ ರಾಜೇಂದ್ರನನ್ನು ಕುರಿತದ್ದು, ಮತ್ತೊಂದು "ಚನ್ನಬಸವನಾಯಕ".

"ಭಾವ" - ಮಾಸ್ತಿ ಅವರ ಆತ್ಮಕಥೆ ಇರುವ ಮೂರು ಸಂಪುಟಗಳ ಗ್ರಂಥ.

[ಬದಲಾಯಿಸಿ] ಗೌರವಗಳು
ಮಾಸ್ತಿ ಅವರಿಗೆ ಸಂದ ಗೌರವ, ಪ್ರಶಸ್ತಿಗಳು ಅಪಾರ. "ಮಾಸ್ತಿ ಕನ್ನಡದ ಆಸ್ತಿ" ಎಂಬ ಹೇಳಿಕೆ ಒಂದು ನಾಣ್ಣುಡಿಯಾಗಿದೆ. ಎಲ್ಲ ಸಾಹಿತಿಗಳಿಗೂ ಅವರು "ಅಣ್ಣ ಮಾಸ್ತಿ"ಯಾಗಿದ್ದರು. ವರಕವಿ ದ ರಾ ಬೇಂದ್ರೆ ಮಾಸ್ತಿಯವರನ್ನು ಹಿರಿಯಣ್ಣ ಎಂದು ಗೌರವಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಮಾಸ್ತಿ ಸೇವೆ ಸಲ್ಲಿಸಿದರು. ೧೯೨೯ರಲ್ಲಿ ಬೆಳಗಾವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ಮೈಸೂರು ಮಹಾರಾಜರು "ರಾಜಸೇವಾ ಪ್ರಸಕ್ತ" ಎಂದು ಗೌರವಿಸಿದ್ದರು. ೧೯೭೨ರಲ್ಲಿ "ಶ್ರೀನಿವಾಸ" ಎಂಬ ಅವರ ಅಭಿನಂದನಾ ಗ್ರಂಥ ಪ್ರಕಟವಾಯಿತು.

ಮಾಸ್ತಿ ಕನ್ನಡಿಗರಿಗೆ ಒಂದು ಆದರ್ಶ. ಎಂಥ ಕಷ್ಟ ಕಾಲದಲ್ಲೂ ಅವರು ಜೀವನವನ್ನೆದುರಿಸಿದರು. ಸಾಹಿತ್ಯ ರಚಿಸಿದಂತೆಯೇ ಸಾಹಿತ್ಯ ಪೋಷಕರಾದರು. ಜಿ ಪಿ ರಾಜರತ್ನಂ, ದ ರಾ ಬೇಂದ್ರೆಯಂತಹವರಿಗೆ ಅವರು ಆದರ್ಶರಾಗಿದ್ದರು.

[ಬದಲಾಯಿಸಿ] ಮುಖ್ಯ ಕೃತಿಗಳು
[ಬದಲಾಯಿಸಿ] ಸಣ್ಣ ಕತೆಗಳ ಸಂಗ್ರಹ
ಕೆಲವು ಸಣ್ಣ ಕತೆಗಳು (೧೯೨೦)
ಸಣ್ಣ ಕತೆಫಅಸ್ಸೆಫ್ದ್ ಬ್ವೆಫ್ ಸೆಫ್ ವ್ವೆಫೆರ್ತ್ಗ್ನ್ ದ್ಗೆಫ್ ವ್ವ್ ಎರ್ತೆಅವೆ ಎರ್ೆರ್ತ್ವ್೪೮ರ್
[ಬದಲಾಯಿಸಿ] ನೀಳ್ಗತೆ
ಸುಬ್ಬಣ್ಣ (೧೯೨೮)
ಶೇಷಮ್ಮ(೧೯೭೬)
[ಬದಲಾಯಿಸಿ] ಕಾವ್ಯ ಸಂಕಲನಗಳು
ಬಿನ್ನಹ(೧೯೨೨)
ಅರುಣ(೧೯೨೪)
ತಾವರೆ(೧೯೩೦)
ಸಂಕ್ರಾಂತಿ(೧೯೬೯)
ನವರಾತ್ರಿ(೫ ಭಾಗ ೧೯೪೪-೧೯೫೩)
[ಬದಲಾಯಿಸಿ] ಜೀವನ ಚರಿತ್ರೆ
ರವೀಂದ್ರನಾಥ ಠಾಕೂರ(೧೯೩೫)
ಶ್ರೀ ರಾಮಕೃಷ್ಣ(೧೯೩೬)
[ಬದಲಾಯಿಸಿ] ಪ್ರಬಂಧ
ಕನ್ನಡದ ಸೇವೆ(೧೯೩೦)
ವಿಮರ್ಶೆ (೪ ಸಂಪುಟ ೧೯೨೮-೧೯೩೯)
ಜನತೆಯ ಸಂಸ್ಕ್ರುತಿ(೧೯೩೧)
ಜನಪದ ಸಾಹಿತ್ಯ(೧೯೩೭)
ಆರಂಭದ ಆಂಗ್ಲ ಸಾಹಿತ್ಯ(೧೯೭೯)
[ಬದಲಾಯಿಸಿ] ನಾಟಕ
ಶಾಂತಾ(೧೯೨೩)
ತಾಳೀಕೋಟೆ(೧೯೨೯)
ಶಿವಛತ್ರಪತಿ(೧೯೩೨)
ಯಶೋಧರಾ(೧೯೩೩)
ಕಾಕನಕೋಟೆ(೧೯೩೮)
[ಬದಲಾಯಿಸಿ] ಕಾದಂಬರಿ
ಚೆನ್ನಬಸವ ನಾಯಕ(೧೯೫೦)
ಚಿಕವೀರ ರಾಜೇಂದ್ರ(೧೯೫೬)
[ಬದಲಾಯಿಸಿ] ಈ ಪುಟಗಳನ್ನೂ ನೋಡಿ
ವರ್ಗ:ಮಾಸ್ತಿಯವರ ಕೃತಿಗಳು
[ಬದಲಾಯಿಸಿ] ಪ್ರಶಸ್ತಿಗಳು
ಜ್ಞಾನಪೀಠ ಪ್ರಶಸ್ತಿ(೧೯೮೩)
ಮೈಸೂರು ವಿಶ್ವವಿದ್ಯಾಲಯದ ಡಿ. ಲಿಟ್(೧೯೭೭)
ಕರ್ನಾಟಕ ವಿಶ್ವವಿದ್ಯಾಲಯದ ಡಿ. ಲಿಟ್(೧೯೫೬)
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೬೮)
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪದವಿ(೧೯೫೩)
ದಕ್ಷಿಣ ಭಾರತ ಸಾಹಿತ್ಯಗಳ ಸಮ್ಮೇಳನ ಅಧ್ಯಕ್ಷ ಪದವಿ(೧೯೪೬)

ಶಿವರಾಮ ಕಾರಂತ

ಶ್ರೀ ಕೋಟ ಶಿವರಾಮ ಕಾರಂತಶಿವರಾಮ ಕಾರಂತ (ಅಕ್ಟೋಬರ್ ೧೦, ೧೯೦೨ - ಸೆಪ್ಟೆಂಬರ್ ೧೨ ೧೯೯೭) - "ಕಡಲತೀರದ ಭಾರ್ಗವ", "ನೆಡೆದಾಡುವ ವಿಶ್ವಕೋಶ" ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ.

ಪರಿವಿಡಿ [ಅಡಗಿಸು]
೧ ಜೀವನ
೨ ಕೃತಿಗಳು
೨.೧ ಕವನ
೨.೨ ಕಾದಂಬರಿ
೨.೩ ನಾಟಕ
೨.೪ ಸಣ್ಣ ಕತೆ
೨.೫ ಹರಟೆ, ವಿಡಂಬನೆ
೨.೬ ಪ್ರವಾಸ ಕಥನ
೨.೭ ಆತ್ಮಕಥನ
೨.೮ ಜೀವನ ಚರಿತ್ರೆ
೨.೯ ಕಲಾಪ್ರಬಂಧ
೨.೧೦ ವೈಜ್ಞಾನಿಕ
೨.೧೧ ಇತರ
೨.೧೨ ಸಂಪಾದನೆ
೨.೧೩ ವಿಶ್ವಕೋಶ
೨.೧೪ ನಿಘಂಟು
೨.೧೫ ಅನುವಾದ
೨.೧೬ ಮಕ್ಕಳ ಪುಸ್ತಕಗಳು
೩ ಶೈಕ್ಷಣಿಕ
೩.೧ ಮಕ್ಕಳ ಶಿಕ್ಷಣ
೩.೨ ವಯಸ್ಕರ ಶಿಕ್ಷಣ
೪ ಆಂಗ್ಲ ಭಾಷೆಯಲ್ಲಿ ಸಾಹಿತ್ಯ
೫ ಪ್ರಶಸ್ತಿ/ಪುರಸ್ಕಾರಗಳು
೬ ಕಾರಂತರ ಕೆಲವು ಚಿಂತನೆಗಳು
೭ ವಿದ್ವಾಂಸರ ಕಣ್ಣಲ್ಲಿ ಕಾರಂತ ಸಾಹಿತ್ಯ
೭.೧ ತೀ.ನಂ.ಶ್ರೀಕಂಠಯ್ಯ
೭.೨ ಪೂರ್ಣಚಂದ್ರ ತೇಜಸ್ವಿ
೭.೩ ಹಾ.ಮಾ.ನಾಯಕ
೭.೪ ಗೋಪಾಲಕೃಷ್ಣ ಅಡಿಗ
೭.೫ ಜಿ.ಎಸ್.ಶಿವರುದ್ರಪ್ಪ
೮ ಬಾಲವನದಲ್ಲಿ ಕಾರಂತಜ್ಜ
೯ ಈ‌ ಪುಟಗಳನ್ನೂ ನೋಡಿ


[ಬದಲಾಯಿಸಿ] ಜೀವನ
ಜ್ಞಾನಪೀಠ ಪುರಸ್ಕೃತ ಡಾ. ಶಿವರಾಮ ಕಾರಂತರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕೋಟದಲ್ಲಿ ೧೯೦೨, ಅಕ್ಟೋಬರ್ ೧೦ರಂದು. ಒಂದು ಶತಮಾನಕ್ಕೆ ನಾಲ್ಕು ವರ್ಷಗಳಷ್ಟೇ ಕಮ್ಮಿ ಬಾಳಿ, ಅರ್ಥಪೂರ್ಣ ಬದುಕು ಕಳೆದ ಸಾಹಿತ್ಯ ದಿಗ್ಗಜ ಡಾ. ಶಿವರಾಮ ಕಾರಂತರು ೧೯೯೭, ಡಿಸೆಂಬರ್ ೦೯ ರಂದು ನಿಧನ ಹೊಂದಿದರು.

ಮಕ್ಕಳಿಂದ, ವಯೋವೃದ್ಧರವರೆಗೆ ಸಾಹಿತ್ಯ ಕೃಷಿ ಮಾಡಿದ, ಚಿಂತಿಸಿದ ಕಾರಂತರು ಇಡೀ ದೇಶದ ದೊಡ್ಡ ನಿಧಿಯಾಗಿದ್ದರು. ಕರ್ನಾಟಕದ ಮೂಲೆ ಮೂಲೆ, ಭಾರತದ ಬಹುತೇಕ ಸ್ಥಳಗಳು, ವಿದೇಶಗಳ ಸಾಂಸ್ಕೃತಿಕ ಕೇಂದ್ರಗಳಿಗೆ ಸುತ್ತುತ್ತ, ಸಾವಿನ ಹಿಂದಿನ ನಾಲ್ಕಾರು ದಿನಗಳವರೆಗೂ ಪ್ರವಾಸ ಮಾಡಿದ್ದರು.

ಜ್ಞಾನಪೀಠ, ಪದ್ಮಭೂಷಣ, ಪಂಪ ಪ್ರಶಸ್ತಿ, ನಾಡೋಜ ಪುರಸ್ಕಾರ, ಹಲವು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ಗಳನ್ನಿತ್ತು ಪುರಸ್ಕರಿಸಿವೆ. ವಯಸ್ಸಿನ ದಣಿವು ಮರೆತು, ಜ್ಞಾನದಾರಿಯಲ್ಲಿ ಜನರನ್ನು ಕೊಂಡೊಯ್ದ ಪ್ರೀತಿಯ "ಕಾರಂತಜ್ಜ" ಆಗಿದ್ದರು. ವಿಶ್ವ ಪ್ರೇಮಿ ಹಾಗೂ ಮಹಾಮಾನವತಾವಾದಿ ಆಗಿದ್ದ ಕಾರಂತರು ಜ್ಞಾನ ಕ್ಷಿತಿಜವನ್ನು ಎಂಟು ದಿಕ್ಕಿಗೆ ಚಾಚಿದ ಅಕ್ಷರ ಪ್ರೇಮಿಯಾಗಿದ್ದರು.


ಗೊಂಡಾರಣ್ಯ
ಚೋಮನ ದುಡಿಕಡಲ ತೀರದ ಭಾರ್ಗವ ಶಿವರಾಮ ಕಾರಂತರ ಕುರಿತ ಲೇಖನಕ್ಕೆ ಇಲ್ಲಿ ಕ್ಲಿಕ್ ಮಾಡಿ http://kannadaratna.com/achievers/karanth.html

[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕವನ
ರಾಷ್ಟ್ರಗೀತ ಸುಧಾಕರ
ಸೀಳ್ಗವನಗಳು
[ಬದಲಾಯಿಸಿ] ಕಾದಂಬರಿ
ಅದೇ ಊರು, ಅದೆ ಮರ
ಅಳಿದ ಮೇಲೆ
ಅಂಟಿದ ಅಪರಂಜಿ
ಆಳ, ನಿರಾಳ
ಇದ್ದರೂ ಚಿಂತೆ
ಇನ್ನೊಂದೇ ದಾರಿ
ಇಳೆಯೆಂಬ
ಉಕ್ಕಿದ ನೊರೆ
ಒಡ ಹುಟ್ಟಿದವರು
ಒಂಟಿ ದನಿ
ಔದಾರ್ಯದ ಉರುಳಲ್ಲಿ
ಕಣ್ಣಿದ್ದೂ ಕಾಣರು
ಕನ್ನಡಿಯಲ್ಲಿ ಕಂಡಾತ
ಕನ್ಯಾಬಲಿ
ಕರುಳಿನ ಕರೆ
ಕುಡಿಯರ ಕೂಸು
ಕೇವಲ ಮನುಷ್ಯರು
ಗೆದ್ದ ದೊಡ್ಡಸ್ತಿಕೆ
ಗೊಂಡಾರಣ್ಯ
ಚಿಗುರಿದ ಕನಸು
ಚೋಮನ ದುಡಿ
ಜಗದೋದ್ಧಾರ ನಾ
ಜಾರುವ ದಾರಿಯಲ್ಲಿ
ದೇವದೂತರು
ಧರ್ಮರಾಯನ ಸಂಸಾರ
ನಷ್ಟ ದಿಗ್ಗಜಗಳು
ನಂಬಿದವರ ನಾಕ, ನರಕ
ನಾವು ಕಟ್ಟಿದ ಸ್ವರ್ಗ
ನಿರ್ಭಾಗ್ಯ ಜನ್ಮ
ಬತ್ತದ ತೊರೆ
ಬೆಟ್ಟದ ಜೀವ
ಭೂತ
ಮರಳಿ ಮಣ್ಣಿಗೆ
ಮುಗಿದ ಯುದ್ಧ
ಮೂಕಜ್ಜಿಯ ಕನಸುಗಳು
ಮೂಜನ್ಮ
ಮೈ ಮನಗಳ ಸುಳಿಯಲ್ಲಿ
ಮೊಗ ಪಡೆದ ಮನ
ವಿಚಿತ್ರ ಕೂಟ
ಶನೀಶ್ವರನ ನೆರಳಿನಲ್ಲಿ
ಸನ್ಯಾಸಿಯ ಬದುಕು
ಸಮೀಕ್ಷೆ
ಸರಸಮ್ಮನ ಸಮಾಧಿ
ಸ್ವಪ್ನದ ಹೊಳೆ
ಹೆತ್ತಳಾ ತಾಯಿ
[ಬದಲಾಯಿಸಿ] ನಾಟಕ
ಅವಳಿ ನಾಟಕಗಳು
ಏಕಾಂಕ ನಾಟಕಗಳು
ಐದು ನಾಟಕಗಳು
ಕಟ್ಟೆ ಪುರಾಣ
ಕಠಾರಿ ಭೈರವ
ಕರ್ಣಾರ್ಜುನ
ಕೀಚಕ ಸೈರಂಧ್ರಿ
ಗರ್ಭಗುಡಿ
ಗೀತ ನಾಟಕಗಳು
ಜಂಬದ ಜಾನಕಿ
ಜ್ಯೂಲಿಯಸ್ ಸೀಸರ್
ಡುಮಿಂಗೊ
ದೃಷ್ಟಿ ಸಂಗಮ
ನವೀನ ನಾಟಕಗಳು
ನಾರದ ಗರ್ವಭಂಗ
ಬಿತ್ತಿದ ಬೆಳೆ
ಬೆವರಿಗೆ ಜಯವಾಗಲಿ
ಬೌದ್ಧ ಯಾತ್ರಾ
ಮಂಗಳಾರತಿ
ಮುಕ್ತದ್ವಾರ
ಯಾರೊ ಅಂದರು
ವಿಜಯ
ವಿಜಯ ದಶಮಿ
ಸರಳ ವಿರಳ ನಾಟಕಗಳು
ಸಾವಿರ ಮಿಲಿಯ
ಹಣೆ ಬರಹ
ಹಿರಿಯಕ್ಕನ ಚಾಳಿ
ಹೇಗಾದರೇನು?
ಹೇಮಂತ



[ಬದಲಾಯಿಸಿ] ಸಣ್ಣ ಕತೆ
ಕವಿಕರ್ಮ
ತೆರೆಯ ಮರೆಯಲ್ಲಿ
ಹಸಿವು
ಹಾವು
[ಬದಲಾಯಿಸಿ] ಹರಟೆ, ವಿಡಂಬನೆ
ಗ್ನಾನ
ಚಿಕ್ಕ ದೊಡ್ಡವರು
ದೇಹಜ್ಯೋತಿಗಳು ಮತ್ತು ಪ್ರಾಣಿ ಪ್ರಬಂಧಗಳು
ಮೈಗಳ್ಳನ ದಿನಚರಿಯಿಂದ
ಮೈಲಿಕಲ್ಲಿನೊಡನೆ ಮಾತುಕತೆಗಳು
ಹಳ್ಳಿಯ ಹತ್ತು ಸಮಸ್ತರು
[ಬದಲಾಯಿಸಿ] ಪ್ರವಾಸ ಕಥನ
ಅಪೂರ್ವ ಪಶ್ಚಿಮ
ಅರಸಿಕರಲ್ಲ
ಅಬೂವಿನಿಂದ ಬರಾಮಕ್ಕೆ
ಪಾತಾಳಕ್ಕೆ ಪಯಣ
ಪೂರ್ವದಿಂದ ಅತ್ಯಪೂರ್ವಕ್ಕೆ
ಯಕ್ಷರಂಗಕ್ಕಾಗಿ ಪ್ರವಾಸ
[ಬದಲಾಯಿಸಿ] ಆತ್ಮಕಥನ
ಸ್ಮೃತಿಪಟಲದಿಂದ (೧,೨,೩)
ಹುಚ್ಚು ಮನಸ್ಸಿನ ಹತ್ತು ಮುಖಗಳು
[ಬದಲಾಯಿಸಿ] ಜೀವನ ಚರಿತ್ರೆ
ಕಲಾವಿದ ಕೃಷ್ಣ ಹೆಬ್ಬಾರರು
[ಬದಲಾಯಿಸಿ] ಕಲಾಪ್ರಬಂಧ
ಕಲೆಯ ದರ್ಶನ
ಕರ್ನಾಟಕದಲ್ಲಿ ಚಿತ್ರಕಲೆ
ಚಾಲುಕ್ಯ ವಾಸ್ತು ಮತ್ತು ಶಿಲ್ಪ
ಚಿತ್ರ,ಶಿಲ್ಪ,ವಾಸ್ತು ಕಲೆಗಳು
ಜಾನಪದ ಗೀತೆಗಳು
ಭಾರತೀಯ ಚಿತ್ರಕಲೆ
ಭಾರತೇಯ ಶಿಲ್ಪ
ಯಕ್ಷಗಾನ ಬಯಲಾಟ
ಸೌಂದರ್ಯ ಪ್ರಜ್ಞೆಯನ್ನು ಬೆಳೆಯಿಸಲು
[ಬದಲಾಯಿಸಿ] ವೈಜ್ಞಾನಿಕ
ಅದ್ಭುತ ಜಗತ್ತು(೧. ವಿಚಿತ್ರ ಖಗೋಲ,೨. ನಮ್ಮ ಭೂಖಂಡಗಳು)
ಉಷ್ಣವಲಯದ ಆಗ್ನೇಸ್ಯ
ಪ್ರಾಣಿಪ್ರಪಂಚದ ವಿಸ್ಮಯಗಳು
ಮಂಗನ ಕಾಯಿಲೆ
ವಿಜ್ಞಾನ ಮತ್ತು ಅಂಧಶೃದ್ಧೆ
ವಿಶಾಲ ಸಾಗರಗಳು
ಹಿರಿಯ ಕಿರಿಯ ಹಕ್ಕಿಗಳು
[ಬದಲಾಯಿಸಿ] ಇತರ
ಪ್ರಜಾಪ್ರಭುತ್ವವನ್ನು ಕುರಿತು
ಬಾಳ್ವೆಯೇ ಬೆಳಕು
ಬಾಳ್ವೆಯೇ ಬೆಳಕು ಅಥವಾ ಜೀವನ ಧರ್ಮ
ಮನೋದೇಹಿಯಾದ ಮಾನವ
ವಿಚಾರಶೀಲತೆ
ವಿಚಾರ ಸಾಹಿತ್ಯ ನಿರ್ಮಾಣ
ಸ್ವಾರ್ಥಿ ಮಾನವ
[ಬದಲಾಯಿಸಿ] ಸಂಪಾದನೆ
ಐರೋಡಿ ಶಿವರಾಮಯ್ಯ ಬದುಕು, ಬರಹ
ಕೌಶಿಕ ರಾಮಾಯಣ
ಪಂಜೆಯವರ ನೆನಪಿಗಾಗಿ
[ಬದಲಾಯಿಸಿ] ವಿಶ್ವಕೋಶ
ಕಲಾ ಪ್ರಪಂಚ
ಪ್ರಾಣಿ ಪ್ರಪಂಚ
ಬಾಲ ಪ್ರಪಂಚ (೧,೨,೩)
ವಿಜ್ಞಾನ ಪ್ರಪಂಚ (೧,೨,೩,೪)
[ಬದಲಾಯಿಸಿ] ನಿಘಂಟು
ಸಿರಿಗನ್ನಡ ಅರ್ಥಕೋಶ
[ಬದಲಾಯಿಸಿ] ಅನುವಾದ
ಕೀಟನಾಶಕಗಳ ಪಿಡುಗುಗಳು
ಕೋಟ ಮಹಾಜಗತ್ತು
ಜನತೆಯೂ ಅರಣ್ಯಗಳೂ
ನಮ್ಮ ಪರಮಾಣು ಚೈತನ್ಯ—ಉತ್ಪಾದನಾ ಸಾಧನಗಳು
ನಮ್ಮ ಶಿಕ್ಷಣ ಪದ್ಧತಿಯ ಸಮಸ್ಯೆಗಳೂ, ಭವಿಷ್ಯವೂ
ನಮ್ಮ ಸುತ್ತಲಿನ ಕಡಲು
ನಮ್ಮೆಲ್ಲರಿಗೂ ಒಂದೇ ಭವಿಷ್ಯ
ಪರಮಾಣು – ಇಂದು ನಾಳೆ
ಪಂಚ ಋತು
ಬೆಳೆಯುತ್ತಿರುವ ಸಮಸ್ಯೆ
ಭಾರತದ ಪರಿಸರ – ದ್ವಿತೀಯ ಸಮಿಕ್ಷೆ
ಭಾರತದ ಪರಿಸರದ ಪರಿಸ್ಥಿತಿ – ೧೯೮೨ – ಪ್ರಜೆಯ ದೃಷ್ಟಿಯಲ್ಲಿ
ಭಾರತ ವರ್ಷದಲ್ಲಿ ಬ್ರಿಟಿಷರು
ಯಾರು ಲಕ್ಷಿಸುವರು?
ಶ್ರೀ ರಾಮಕೃಷ್ಣರ ಜೀವನ ಚರಿತೆ
[ಬದಲಾಯಿಸಿ] ಮಕ್ಕಳ ಪುಸ್ತಕಗಳು
ಅನಾದಿ ಕಾಲದ ಮನುಷ್ಯ
ಒಂದೇ ರಾತ್ರಿ ಒಂದೇ ಹಗಲು
ಗಜರಾಜ
ಗೆದ್ದವರ ಸತ್ಯ
ಢಂ ಢಂ ಢೋಲು
ನರನೋ ವಾನರನೋ
ಮರಿಯಪ್ಪನ ಸಾಹಸಗಳು
ಮಂಗನ ಮದುವೆ
ಸೂರ್ಯ ಚಂದ್ರ
ಹುಲಿರಾಯ
ಕನ್ನಡ ನಾಡು ಮತ್ತು ಕನ್ನಡಿಗರ ಪರಂಪರೆಗೆ ಸಂಬಂಧಿಸಿದ ೧೦ ಪುಸ್ತಕಗಳು
ಐಬಿಎಚ್, ಮೂಲವಿಜ್ಞಾನ ಪಾಠಮಾಲೆ ಹಾಗು ‘ಇಕೊ’ ದವರಿಗಾಗಿ ಮಾಡಿದ ಅನುವಾದಗಳು : ಸುಮಾರು ೧೩೩
‘ಇಕೊ’ ದವರಿಗಾಗಿ ಮಾಡಿದ ಸಂಪಾದಿತ ಪುಸ್ತಕಗಳು : ೪೨
[ಬದಲಾಯಿಸಿ] ಶೈಕ್ಷಣಿಕ
[ಬದಲಾಯಿಸಿ] ಮಕ್ಕಳ ಶಿಕ್ಷಣ
ಓದುವ ಆಟ
ಗೃಹ ವಿಜ್ಞಾನ (೧,೨,೩)
ಚಿತ್ರಮಯ ದಕ್ಷಿಣ ಕನ್ನಡ
ಚಿತ್ರಮಯ ದಕ್ಷಿಣ ಕನ್ನಡ – ಅಂದು, ಇಂದು
ಚಿತ್ರಮಯ ದಕ್ಷಿಣ ಹಿಂದುಸ್ತಾನ
ನಾಗರಿಕತೆಯ ಹೊಸ್ತಿಲಲ್ಲಿ
ರಮಣ ತಾತ
ಸಮಾಜ ನೀತಿ (೧,೨,೩)
ಸಾಮಾನ್ಯ ವಿಜ್ಞಾನ (೧,೨,೩)
ಸಿರಿಗನ್ನಡ ಪಾಠಮಾಲೆ (೧,೨,೩,೪,೫,೬,೭)
ಹೂಗನ್ನಡ ಪಾಠಮಾಲೆ (೧,೨,೩,೪,೫,೬,೭,೮)
[ಬದಲಾಯಿಸಿ] ವಯಸ್ಕರ ಶಿಕ್ಷಣ
ಅಳಿಲ ಭಕ್ತಿ ಮಳಲ ಸೇವೆ
ಕರ್ನಾಟಕದ ಜಾನಪದ ಕಲೆಗಳು
ಕೋಳಿ ಸಾಕಣೆ
ಜೋಗಿ ಕಂಡ ಊರು
ದಕ್ಷಿಣ ಹಿಂದುಸ್ತಾನದ ನದಿಗಳು
ದೇವ ಒಲಿದ ಊರು
ಬೇರೆಯವರೂ ಸರಿ ಇರಬಹುದು
ಹುಟ್ಟು ಸಾವು ಒಟ್ಟು ಒಟ್ಟು
[ಬದಲಾಯಿಸಿ] ಆಂಗ್ಲ ಭಾಷೆಯಲ್ಲಿ ಸಾಹಿತ್ಯ
Folk Art of Karnataka
Karnataka Paintings
My Concern for Life, Literature and Art
Picturesque South Kanara
Yakshagana
[ಬದಲಾಯಿಸಿ] ಪ್ರಶಸ್ತಿ/ಪುರಸ್ಕಾರಗಳು
ಜ್ಞಾನಪೀಠ ಪ್ರಶಸ್ತಿ
ಪದ್ಮಭೂಷಣ ಪ್ರಶಸ್ತಿ
ವಿವಿಧ ವಿಶ್ವವಿದ್ಯಾನಿಲಯಗಳಿಂದ ಡಾಕ್ಟರೇಟ್
ರಾವ್ ಬಹದೂರ್ ಪ್ರಶಸ್ತಿ (೧೯೩೦ ರಲ್ಲಿ)
[ಬದಲಾಯಿಸಿ] ಕಾರಂತರ ಕೆಲವು ಚಿಂತನೆಗಳು
ನಾನು ದೇವರನ್ನು ನಂಬುವುದಿಲ್ಲ. ಏಕೆಂದರೆ ನಾನು ನೋಡಿಲ್ಲ. ನನಗೆ ಯಾವುದು ಗೊತ್ತಿಲ್ಲವೋ ಅದನ್ನು ನಂಬುವುದಿಲ್ಲ. ರಾಮಕೃಷ್ಣ ಪರಮಹಂಸರು ನಂಬಿದ್ದರು. ಅದನ್ನು ತಪಸ್ಸಿನಿಂದ ಕಂಡುಕೊಂಡರು. ನನಗೆ ರಾಮ ಎಂದರೆ ರಾಜಾ ರವಿವರ್ಮ ಅವರ ಚಿತ್ರ. ಕೃಷ್ಣ ಎಂದರೆ ಗುಬ್ಬಿ ವೀರಣ್ಣನವರ ಕೃಷ್ಣಲೀಲಾ ನೆನಪಿಗೆ ಬರುತ್ತದೆ. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ನಾವು ನಂಬಿ ಬಂದಿದ್ದೇವೆ. ಆದರೆ, ಆ ರೀತಿ ಆಗಿಲ್ಲ. ನನಗೆ ಅನುಕೂಲವಾದಾಗ ಮಾತ್ರ ದೇವರನ್ನು ನಂಬುತ್ತೇನೆ ಎಂಬುದು ಸರಿಯಲ್ಲ.
ಸಾಹಿತಿಗಳಿಗೆ ಸಮಾಜದಲ್ಲಿ ಬೇರೇ ಪಾತ್ರವೇನೂ ಇಲ್ಲ. ಸಾಹಿತಿ ಲೋಕೋದ್ಧಾರಕ ಎಂಬ ಭಾವನೆ ಏನೂ ಬೇಡ. ಆತನೂ ನಿಮ್ಮ ಹಾಗೆ ಮನುಷ್ಯ. ಬದುಕಿನ ಬಗ್ಗೆ ತನ್ನ ಅನುಭವವನ್ನು ಮಾತ್ರ ಹೇಳುತ್ತಾನೆ. ಪರಿಹಾರ ಸೂಚಿಸುವುದಲ್ಲ. ಆತ ಬರೆದ ಮಾತ್ರಕ್ಕೆ ಮಹಾನುಭಾವ ಆಗೋಲ್ಲ. ಬರೆಯದವರೂ ದೊಡ್ಡ ಕೆಲಸಗಳನ್ನು ಮಾಡಿದ್ದಾರೆ.
ಮರ ತಾನಾಗಿ ಬೆಳೆಯುತ್ತದೆ. ಆ ರೀತಿ ಮನುಷ್ಯ ಬೆಳೆಯಲಾರ. ನಮ್ಮ ಬದುಕು ಆರಂಭವಾಗುವುದಕ್ಕೆ ಸಾವಿರಾರು ವರ್ಷಗಳ ಮೊದಲೇ ಜೀವರಾಶಿ ಇಲ್ಲಿತ್ತು ಎಂಬುದನ್ನು ತಿಳಿದರೆ ಸಾಕು.
ಸಮಾಜ ನನ್ನನ್ನು ಹೇಗೆ ಕಂಡಿತು - ಎಂದು ನಾನು ತಿಳಿದುಕೊಳ್ಳುವ ಬಗೆ ಹೇಗೆ? ಒಂದು ಗ್ರಂಥದ ಸಾವಿರ ಪ್ರತಿಗಳು ಹತ್ತು ವರ್ಷಗಳಲ್ಲಿ ಖರ್ಚಾದರೆ, ಅವನ್ನು ಓದಿದವರಲ್ಲಿ ಹತ್ತು ಮಂದಿ ನನಗೆ ಪತ್ರ ಬರೆದರೆ, ಅದರಿಂದ ಜನಗಳು ನನ್ನನ್ನು ಮೆಚ್ಚುತ್ತಿದ್ದಾರೆ- ಎಂದು ತಿಳಿಯಲು ಸಾಧ್ಯವೇ? ನಾವು ಬರೆಯುವುದು ಸಾಮಾಜಿಕರೊಡನೆ ಸಂಭಾಷಿಸುವುದಕ್ಕಾಗಿ. ಈ ಸಂಭಾಷಣೆ ಏಕಮುಖಿಯಾದದ್ದು. ನಾವೇನೋ ಗ್ರಂಥಗಳಲ್ಲಿ ಅನೇಕ ವಿಚಾರಗಳನ್ನು ಮಂಡಿಸುತ್ತೇವೆ; ಓದುಗರು ನಮ್ಮ ಕಣ್ಮುಂದೆ ಇರುವುದಿಲ್ಲ. ಅವರ ಮನಸ್ಸಿನಲ್ಲಿ ಓದುತ್ತ, ಓದುತ್ತ ಯಾವೆಲ್ಲ ಪ್ರತಿಕ್ರಿಯೆಗಳಾಗುತ್ತವೆ ಎಂದು ತಿಳಿಯುವ ಬಗೆ ಹೇಗೆ? ಆರಂಭದಿಂದಲೂ ನನ್ನ ಪುಸ್ತಕಗಳನ್ನು ಪತ್ರಿಕೆಗಳಿಗೆ ವಿಮರ್ಶೆಗೆ ಕಳುಹಿಸುವ ಪರಿಪಾಠವನ್ನು ನಾನು ಇರಿಸಿಕೊಳ್ಳದ್ದರಿಂದ, ವಿಮರ್ಶಕರು ಏನು ಹೇಳುತ್ತಾರೆಂಬುದು ಕೂಡಾ ನನಗೆ ತಿಳಿಯದ ಸಂಗತಿ. ಯಾರು ಏನನ್ನೇ ಹೇಳಲಿ, ನನಗೆ ತೋಚಿದಂತೆ ಬರೆಯುತ್ತೇನೆ- ಎಂದು ಬರೆಯುವ ನನಗೆ ಜನಾದರಣೆಯ ವಿಚಾರ ತಿಳಿಯುವುದು ಕಷ್ಟ. ವಿಕ್ರಯಗೊಳ್ಳುವ ಪುಸ್ತಕಗಳ ಸಂಖ್ಯೆಯಿಂದ ನಾನು ಅದನ್ನು ತರ್ಕಿಸುವುದಾದರೆ, ನನ್ನ ಜನಪ್ರಿಯತೆಗೆ ಬೇಕಾದ ಆಧಾರ ಸಿಗುವಂತಿಲ್ಲ. ಒಂದು ಕಾದಂಬರಿಯ ಸಾವಿರ ಪ್ರತಿಗಳು ಹತ್ತು ವರ್ಷಗಳಲ್ಲಿ ವಿಕ್ರಯಗೊಳ್ಳುವ, ಅಥವಾ ಅದರ ಭರ ಒಂದಿಷ್ಟು ಹೆಚ್ಚಿಗಿದ್ದರೂ, ಒಂದು ಪುಸ್ತಕದ ಮರುಮುದ್ರಣ ವರ್ಷಕ್ಕೆ ನೂರು ಪ್ರತಿಗಳಿಗಿಂತ ಹೆಚ್ಚಿಗೆ ವಿಕ್ರಯಗೊಳ್ಳದಾಗ, ಅಲ್ಲಿ, ಇಲ್ಲಿ, ನನ್ನನ್ನು ಜನರು ಭಾಷಣಗಳ ಕಾಲದಲ್ಲಿ ಸುಪ್ರಸಿದ್ಧ ಸಾಹಿತಿ ಎಂದು ಕರೆದರೂ, ಅಂಥ ಪ್ರಸಿದ್ಧಿಯ ಗಾತ್ರ ಸಾಕಷ್ಟು ಕುಬ್ಜವಾದದ್ದು ಎಂಬ ಅಭಿಪ್ರಾಯ ನನಗೆ. ಆ ದೃಷ್ಟಿಯಿಂದ ದಿವಂಗತ ಅ.ನ.ಕೃಷ್ಣರಾಯರು ಬರೆದ ಕಾದಂಬರಿಗಳು ನನಗಿಂತ ಎಷ್ಟೋ ಪಾಲು ಹೆಚ್ಚಿನ ಜನಾಕರ್ಷಣೆಯನ್ನು ಪಡೆದಿವೆ. ನನ್ನ, ಅವರ ಓದುಗರು ಯಾರು ಎಂಬುದನ್ನು ಕೂಡ ವಿಂಗಡಿಸಿ ತಿಳಿಯುವುದು ಕಷ್ಟ. ಅಂಥ ಓದುಗರು ಪ್ರಬುದ್ಧರೋ, ಅಪ್ರಬುದ್ಧರೋ, ಹೆಂಗಸರೋ, ಗಂಡಸರೋ, ತರುಣರೋ, ವೃದ್ಧರೋ, ಗಂಭೀರ ವಿಚಾರಕ್ಕೆ ಮನಸ್ಸು ಕೊಡುವವರೋ, ಅನುಭವ ಸಾಮ್ಯತೆ ಪಡೆದವರೋ, ಚಿಂತನಶೀಲರೋ, ಅಲ್ಲದವರೋ- ಇಂಥ ಯಾವೊಂದು ಸಂಗತಿಗಳನ್ನೂ ಎಣಿಸದೆ ಜನಮನ್ನಣೆಯ ತೂಕವನ್ನು ಅಳೆಯುವುದು ಅಸಾಧ್ಯ.
ಆದಷ್ಟು ಕಡಿಮೆ ತಿನ್ನಿ. ನಾಲಗೆ ರುಚಿಗಾಗಿ ಸಿಕ್ಕಿದ್ದನ್ನೆಲ್ಲಾ ತಿನ್ನುವುದಲ್ಲ. ಮನಬಂದ ಕೆಲಸವನ್ನೆಲ್ಲಾ ಮಾಡುವುದಲ್ಲ. ಇದು ನನ್ನ ಆರೋಗ್ಯದ ರಹಸ್ಯ.
[ಬದಲಾಯಿಸಿ] ವಿದ್ವಾಂಸರ ಕಣ್ಣಲ್ಲಿ ಕಾರಂತ ಸಾಹಿತ್ಯ
[ಬದಲಾಯಿಸಿ] ತೀ.ನಂ.ಶ್ರೀಕಂಠಯ್ಯ
ಶ್ರೀ ಶಿವರಾಮ ಕಾರಂತರು ನಮ್ಮ ತಲೆಮಾರಿನ ಕನ್ನಡದ ಕ್ರಾಂತಿಪುರುಷರಲ್ಲಿ ಒಬ್ಬರು. ಅವರ ಪ್ರತಿಭೆಗೆ ಅಳವಡದ ಕಲೆಯಿಲ್ಲ. ಅವರ ಲೇಖನಿಯಿಂದ ಸತತವಾಗಿ ಹೊರಬೀಳುತ್ತಿರುವ ಕೃತಿಗಳಲ್ಲಿ ಹಲವನ್ನು ಓದಿ ಮೆಚ್ಚಿರುವ ಅನೇಕ ಮಂದಿ ಕನ್ನಡಿಗರಲ್ಲಿ ನಾನೂ ಒಬ್ಬ. ದೂರದಿಂದ ಮಾತ್ರವಲ್ಲದೆ ಹತ್ತಿರದಿಂದಲೂ ಅವರ ಬಹುಮುಖವಾದ ಕಾರ್ಯೋತ್ಸಾಹವನ್ನು ಆಗಾಗ ವೀಕ್ಷಿಸಿ ಬೆರಗಾಗಿದ್ದೇನೆ; ಅವರ ಪರಿಚಯ ಭಾಗ್ಯವನ್ನೂ ಕೆಲವು ಮಟ್ಟಿಗೆ ಪಡೆದು ನನ್ನ ಅನುಭವ ಆನಂದಗಳನ್ನೂ ಹೆಚ್ಚಿಸಿಕೊಂಡಿದ್ದೇನೆ.

ನಿಸರ್ಗವೇ ನಮ್ಮ ಎದುರಿಗೆ ಸುರುಳಿ ಬಿಚ್ಚಿಕೊಂಡು ಸಾಗುತ್ತಿದ್ದರೆ ಉಂಟಾಗಬಹುದಾದ ಅನುಭವ ಕಾರಂತರ ಕೃತಿಗಳನ್ನು ಓದುತ್ತಿರುವಾಗ ನನಗೆ ಅನೇಕ ವೇಳೆ ಲಭಿಸಿದೆ. ಅವರ ಬರಹದಲ್ಲಿ ಒಟ್ಟಿನ ಮೇಲೆ ಕಲೆಯ ನಿರ್ಮಿತಿಗಿಂತ ನಿಸರ್ಗದ ಆವಿಷ್ಕೃತಿ ಹೆಚ್ಚು. ಇಲ್ಲಿ ನಿಸರ್ಗವೆಂದರೆ ಕಡಲು, ಬೆಟ್ಟ, ಹೊಳೆ, ಕಾಡು ಮೊದಲಾದ ಅಚೇತನ ಪ್ರಕೃತಿ ಮಾತ್ರವಲ್ಲ, ವಿವಿಧ ವಿಚಿತ್ರವಾದ ಮಾನವಪ್ರಕೃತಿಯೂ ಅವರಲ್ಲಿ ಹಾಸುಹೊಕ್ಕಾಗಿ ಸೇರುತ್ತದೆ.

ಕಾರಂತರ ಬರವಣಿಗೆ ಬೆಳೆದಂತೆಲ್ಲ ಅವರ ಸಹಾನುಭೂತಿ ಶಕ್ತಿಯೂ ಬೆಳೆದು ಬಂದಿರುವಂತೆ ಕಾಣುತ್ತದೆ. ದುಡಿಮೆ ದುಃಖ ಇವೇ ತಮ್ಮ ಬಾಳಿನ ಸಾರವಾದರೂ ಅಚಲ ಶ್ರದ್ಧೆಯನ್ನು ಭದ್ರವಾಗಿ ನೆಮ್ಮಿ ನಿಲ್ಲುವ ಸ್ತ್ರೀಪಾತ್ರಗಳಲ್ಲಂತೂ ಕಾರಂತರಿಗೆ ಅಪಾರ ಗೌರವ. ಇಂಥ ಪಾತ್ರಗಳಿಂದಲೇ ಅವರ ಮಹಾಕೃತಿ ಮರಳಿ ಮಣ್ಣಿಗೆ, ನಂಬಿದವರ ನಾಕ-ನರಕ ಮೊದಲಾದವು ಅಮರವಾಗಿರುವುದು. ವಿಚಾರಪರರಾದ ಕಾರಂತರ ದೃಷ್ಟಿಯಲ್ಲಿ ಬಾಳ್ವೆಯೇ ಬೆಳಕು. ಆದರೆ ಅನ್ಯರ ಬದುಕನ್ನು ಅರ್ಥಮಾಡಿಕೊಳ್ಳಬೇಕಾದರೆ ಅವರ ಸಾಂಪ್ರದಾಯಿಕವಾದ ನಂಬಿಕೆಗಳನ್ನು -ಅವು ತಮ್ಮವಲ್ಲದಿದ್ದರೂ- ಅರ್ಥಮಾಡಿಕೊಳ್ಳಬೇಕು ಎಂಬುದು ಕಾರಂತರ ಧೃಡತತ್ವ. ಡಾಂಭಿಕವರ್ತನೆಯನ್ನು, ಆಷಾಡಭೂತಿ ವಿದ್ಯೆಯನ್ನು ಕಂಡರೆ ಮಾತ್ರ ಅವರಿಗೆ ಎಂದಿಗೂ ಆಗದು. ಅದನ್ನು ವ್ಯಂಗ್ಯವಾಗಿ ವಾಚ್ಯವಾಗಿ ಅವರು ಖಂಡಿಸುತ್ತಲೇ ಇರುತ್ತಾರೆ. ಇಷ್ಟಾದರೂ ಬದುಕಿನ ಅನಂತ ವಿವಿಧತೆಯನ್ನು ಅವರು ಚೆನ್ನಾಗಿ ಮನಗಂಡವರು; 'ಹಳ್ಳಿಯ ಹತ್ತು ಸಮಸ್ತರು' ಎಂಬ ಅಪೂರ್ವ ಕೃತಿ ಇದಕ್ಕೆ ಉತ್ತಮ ಸಾಕ್ಷಿ. ಕಾದಂಬರಿಯ ತಂತ್ರದ ಕಡೆ ಕಾರಂತರ ಗಮನ ಕಡಿಮೆ. ಆದರೆ ಮನಸ್ಸು ಮಾಡಿದರೆ ಅದರಲ್ಲಿ ಎಂಥ ಸಿದ್ಧಿಯನ್ನು ಅವರು ಮುಟ್ಟಬಲ್ಲರೆಂಬುದನ್ನು ಅವರ 'ಅಳಿದ ಮೇಲೆ' ಸಾರುತ್ತದೆ.

[ಬದಲಾಯಿಸಿ] ಪೂರ್ಣಚಂದ್ರ ತೇಜಸ್ವಿ
ಲೋಹಿಯಾರವರ ತತ್ವ ಚಿಂತನೆ, ಕುವೆಂಪುರವರ ಕಲಾಸೃಷ್ಟಿ, ಕಾರಂತರ ಜೀವನದ ದೃಷ್ಟಿ ಮತ್ತು ಬದುಕಿನಲ್ಲಿನ ಪ್ರಯೋಗಶೀಲತೆ- ಈ ಮೂರೇ ನನ್ನ ಈಚಿನ ಸಾಹಿತ್ಯ ರಚನೆಯ ಮೇಲೆ ಗಾಢ ಪರಿಣಾಮಗಳನ್ನುಂಟು ಮಾಡಿರುವಂಥವು. ಬಹುಶಃ ಮುಂಬರುವ ಕಲಾವಿದರಿಗೆ ಕನ್ನಡ ಸಾಹಿತ್ಯ ಸೃಷ್ಟಿಯಲ್ಲಿ ಚೈತನ್ಯಶಕ್ತಿಯಾಗಬಲ್ಲಂಥವು ಈ ಮೂರೇ.

[ಬದಲಾಯಿಸಿ] ಹಾ.ಮಾ.ನಾಯಕ
ಯಾವ ಮಾನದಿಂದ ಅಳೆದರೂ ಕಾರಂತರು ವಿಶ್ವಲೇಖಕರ ಪಟ್ಟಿಯಲ್ಲಿ ಸೇರಬಲ್ಲವರು.

[ಬದಲಾಯಿಸಿ] ಗೋಪಾಲಕೃಷ್ಣ ಅಡಿಗ
ಶಿವರಾಮ ಕಾರಂತರನ್ನು ನಿಮಗೆ ಪರಿಚಯ ಮಾಡಿಕೊಡುವುದೂ ಒಂದೇ, ನೇಸರನ್ನು ಸೊಡರಿನಿಂದ ತೋರಿಸುವದೂ ಒಂದೇ.

[ಬದಲಾಯಿಸಿ] ಜಿ.ಎಸ್.ಶಿವರುದ್ರಪ್ಪ
ಬೆಟ್ಟ ಕಡಲಿನ ನಡುವೆ ಹುಟ್ಟಿದ ಈ ಚೈತನ್ಯ ಕಡಲಿನಷ್ಟೇ ವಿಸ್ತಾರವಾದ ಅನುಭವಗಳನ್ನು ತಮ್ಮ ಕೃತಿಗಳಲ್ಲಿ ಹಿಡಿದಿರಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಕಾರಂತರ ನಿಧನದಿಂದ ಉಜ್ವಲವಾದ ಸೃಜನ ಪರಂಪರೆಯ ಒಂದು ತಲೆಮಾರಿನ ಮುಕ್ತಾಯದ ಶೂನ್ಯದೊಳಕ್ಕೆ ನಾವು ಪ್ರವೇಶಿಸಿದ ಅನುಭವವಾಗುತ್ತಿದೆ.

[ಬದಲಾಯಿಸಿ] ಬಾಲವನದಲ್ಲಿ ಕಾರಂತಜ್ಜ
ಕಾರಂತರು ಕೆಲಕಾಲ 'ತರಂಗ' ಸಾಪ್ತಾಹಿಕದ 'ಬಾಲವನ' - ಮಕ್ಕಳ ವಿಭಾಗದಲ್ಲಿ 'ಬಾಲವನದಲ್ಲಿ ಕಾರಂತಜ್ಜ' ಎಂಬ ಕಾಲಂ ನಡೆಸಿಕೊಡುತ್ತಿದ್ದರು. ಇದು ಬಹಳವಾಗಿ ಜನಪ್ರಿಯವಾಗಿತ್ತು. ಪುಟಾಣಿಗಳು ಕಳುಹಿಸಿದ ವಿಜ್ಞಾನ ಕುರಿತ ಪ್ರಶ್ನೆಗಳಿಗೆ ಕಾರಂತರು ಮಕ್ಕಳಿಗೆ ಅರ್ಥವಾಗುವಂತೆ ಸರಳ ರೀತಿಯಲ್ಲಿ ಉತ್ತರ ನೀಡುತ್ತಿದ್ದರು. ಆಗಿನ ತಲೆಮಾರಿನ ಕನ್ನಡಿಗರಿಗೆ ಕಾರಂತರು, 'ಕಾರಂತಜ್ಜ' ರೆಂದೇ ಚಿರಪರಿಚಿತ.

ದ.ರಾ.ಬೇಂದ್ರೆ

ಶ್ರೀ ದತ್ತಾತ್ರೇಯ ರಾಮಚಂದ್ರ ಬೇಂದ್ರೆ"ಕುಣಿಯೋಣು ಬಾರಾ ಕುಣಿಯೋಣು ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ.




ಪರಿವಿಡಿ [ಅಡಗಿಸು]
೧ ಜೀವನ
೨ ಸಾಹಿತ್ಯ
೩ ಬೇಂದ್ರೆಯವರ ಸಾಹಿತ್ಯ
೩.೧ ಕಾವ್ಯಸಂಕಲನ
೩.೨ ವಿಮರ್ಶೆ
೩.೩ ಸಣ್ಣ ಕಥೆ
೩.೪ ನಾಟಕಗಳು
೩.೫ ಅನುವಾದ
೩.೬ ಮರಾಠಿ ಕೃತಿಗಳು
೩.೭ ಇಂಗ್ಲಿಷ ಕೃತ
೪ ಗೌರವ ಪ್ರಶಸ್ತಿಗಳು
೫ ಬಾಹ್ಯ ಸಂಪರ್ಕಗಳು


[ಬದಲಾಯಿಸಿ] ಜೀವನ
ಬೇಂದ್ರೆ ೧೮೯೬ನೆಯ ಇಸವಿ ಜನವರಿ ೩೧ ರಂದು ಜನಿಸಿದರು. ತಂದೆ ರಾಮಚಂದ್ರ ಭಟ್ಟ, ತಾಯಿ ಅಂಬಿಕೆ. ಬೇಂದ್ರೆಯವರ ಕಾವ್ಯನಾಮ ಅಂಬಿಕಾತನಯದತ್ತ.

ಬೇಂದ್ರೆ ಮನೆತನದ ಮೂಲ ಹೆಸರು ಠೋಸರ. ವೈದಿಕ ವೃತ್ತಿಯವರು. ಒಂದು ಕಾಲಕ್ಕೆ ಸಾಂಗ್ಲಿ ಸಂಸ್ಥಾನಕ್ಕೆ ಸೇರಿದ್ದ ಗದಗಪಟ್ಟಣದ ಸಮೀಪದ ಶಿರಹಟ್ಟಿಯಲ್ಲಿ ಬಂದು ನೆಲೆಸಿದರು. ದ.ರಾ.ಬೇಂದ್ರೆ ಹನ್ನೊಂದು ವರ್ಷದವರಿದ್ದಾಗ ಅವರ ತಂದೆ ತೀರಿಕೊಂಡರು. ೧೯೧೩ರಲ್ಲಿ ಮೆಟ್ರಿಕ್ಯುಲೇಶನ್ ಮುಗಿಸಿದ ಬಳಿಕ ಬೇಂದ್ರೆ ಪುಣೆಯ ಕಾಲೇಜಿನಲ್ಲಿ ಓದಿ ೧೯೧೮ರಲ್ಲಿ ಬಿ.ಎ. ಮಾಡಿಕೊಂಡರು. ಹಿಡಿದದ್ದು ಅಧ್ಯಾಪಕ ವೃತ್ತಿ. ೧೯೩೫ರಲ್ಲಿ ಎಮ್.ಎ. ಮಾಡಿಕೊಂಡು ಕೆಲಕಾಲ (೧೯೪೪ - ೧೯೫೬) ಸೊಲ್ಲಾಪುರದ ಡಿ.ಎ.ವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು.

ಬೇಂದ್ರೆಯವರು ೧೯೧೯ರಂದು ಹುಬ್ಬಳ್ಳಿಯಲ್ಲಿ ಲಕ್ಷ್ಮೀಬಾಯಿಯವರನ್ನು ವಿವಾಹವಾದರು; ಅವರ ಪ್ರಥಮ ಕಾವ್ಯ ಸಂಕಲನ "ಕೃಷ್ಣ ಕುಮಾರಿ"-ಯು ಆಗಲೇ ಪ್ರಕಟಿಸಲ್ಪಟ್ಟಿತ್ತು.

ಕವಿ, ದಾರ್ಶನಿಕ ಬೇಂದ್ರೆ ಈ ಯುಗದ ಒಬ್ಬ ಮಹಾಕವಿ. ೧೯೮೧ರ ಅಕ್ಟೋಬರ್ನಲ್ಲಿ ತೀರಿಕೊಂಡ ಅವರು ಕವಿಗಳಿಗೆ, ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆ. ಎಲ್ಲಾ ಕಾಲಕ್ಕೂ ಬಾಳುವಂತಹ ಕವನಗಳನ್ನು ರಚಿಸಿದ ಕೀರ್ತಿ ಅವರದು.

[ಬದಲಾಯಿಸಿ] ಸಾಹಿತ್ಯ

ಬೇಂದ್ರೆ ಸ್ಮಾರಕ, ಧಾರವಾಡಸಾಹಿತ್ಯ ರಚನೆ ಅವರ ಮೊದಲ ಒಲವು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕವಿತೆಗಳನ್ನು ಕಟ್ಟಿದರು. ೧೯೧೮ರಲ್ಲಿ ಅವರ ಮೊದಲ ಕವನ "ಪ್ರಭಾತ" ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಅಲ್ಲಿಂದಾಚೆಗೆ ಅವರು ಕಾವ್ಯ ರಚನೆ ಮಾಡುತ್ತಲೇ ಬ೦ದರು. "ಗರಿ", "ಕಾಮಕಸ್ತೂರಿ", "ಸೂರ್ಯಪಾನ", "ನಾದಲೀಲೆ", "ನಾಕುತಂತಿ" ಮೊದಲಾದ ಕವನ ಸಂಕಲನಗಳನ್ನು ಪ್ರಕಟಿಸಿದರು. ಇವರ ನಾಕುತಂತಿ ಕೃತಿಗೆ ೧೯೭೪ ಇಸ್ವಿಯ ಕೇಂದ್ರ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಕವಿತೆಗಳನ್ನಲ್ಲದೆ ನಾಟಕಗಳು, ಸಂಶೋಧನಾತ್ಮಕ ಲೇಖನಗಳು, ವಿಮರ್ಶೆಗಳನ್ನು ಬೇಂದ್ರೆ ಬರೆದಿದ್ದಾರೆ. ೧೯೨೧ರಲ್ಲಿ ಧಾರವಾಡದಲ್ಲಿ ಅವರು ಗೆಳೆಯರೊಡನೆ ಕಟ್ಟಿದ "ಗೆಳೆಯರ ಗುಂಪು" ಸಂಸ್ಥೆ ಅವರ ಸಾಹಿತ್ಯ ಚಟುವಟಿಕೆಗಳಿಗೆ ಇಂಬು ನೀಡಿತು. ಆಗಿನ್ನೂ ಸ್ವಾತಂತ್ರ್ಯ ಚಳುವಳಿ ಬಿಸಿ ಮುಟ್ಟಿದ್ದ ಸಮಯ. ದೇಶಪ್ರೇಮಿಗಳೂ, ದೇಶಭಕ್ತರೂ ಆಗಿದ್ದ ಬೇಂದ್ರೆ ತಾವೂ ಚಳುವಳಿಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆವಾಸ ಅನುಭವಿಸಿದರು.

ಉತ್ತಮ ವಾಗ್ಮಿಗಳಾಗಿದ್ದ ಬೇಂದ್ರೆಯವರ ಉಪನ್ಯಾಸಗಳೆಂದರೆ ಜನರಿಗೆ ಹಿಗ್ಗು. ಅವರ ಮಾತೆಲ್ಲ ಕವಿತೆಗಳೋಪಾದಿಯಲ್ಲಿ ಹೊರಹೊಮ್ಮುತ್ತಿದ್ದವು. ಕನ್ನಡದಲ್ಲಿಯೇ ಅಲ್ಲದೆ ಮರಾಠಿ ಭಾಷೆಯಲ್ಲೂ ಬೇಂದ್ರೆ ಕೆಲವು ಕೃತಿಗಳನ್ನು ರಚಿಸಿದರು.

ಆಧ್ಯಾತ್ಮದ ವಿಷಯದಲ್ಲಿ ಅವರು ಒಲವು ಬೆಳೆಸಿಕೊಂಡಿದ್ದರು. ಅರವಿಂದರ ವಿಚಾರಗಳಲ್ಲಿ ಆಸಕ್ತಿ ತೋರಿದ ಅವರು ಅರವಿಂದರ ಕೃತಿಯನ್ನು ಇಂಗ್ಲೀಷಿನಿಂದ ಭಾಷಾಂತರ ಮಾಡಿಕೊಟ್ಟರು. ಜಾನಪದ ಧಾಟಿಯ ಅವರ ಎಷ್ಟೋ ಕವಿತೆಗಳನ್ನು ಗಾಯಕರು ಸುಶ್ರಾವ್ಯವಾಗಿ ಹಾಡಿದ್ದಾರೆ. ಅವರ ಕವಿತೆಗಳ ನಾದಮಾಧುರ್ಯ ಅಪಾರ. ಇವರು ಬರೆದ "ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ" ಇಂದಿಗೂ ಚಿಣ್ಣರ ಅತ್ಯಂತ ಪ್ರೀತಿಪಾತ್ರ ಕವನವಾಗಿದೆ

[ಬದಲಾಯಿಸಿ] ಬೇಂದ್ರೆಯವರ ಸಾಹಿತ್ಯ
[ಬದಲಾಯಿಸಿ] ಕಾವ್ಯಸಂಕಲನ
(ಪ್ರಥಮ ಆವೃತ್ತಿಯ ವರ್ಷದೊಂದಿಗೆ) ಅಂಬಿಕಾತನಯದತ್ತರ ಸಮಗ್ರ ಕಾವ್ಯ ೬ ಸಂಪುಟಗಳು




೧೯೨೨: ಕೃಷ್ಣಾಕುಮಾರಿ;
೧೯೩೨: ಗರಿ;
೧೯೩೪: ಮೂರ್ತಿ ಮತ್ತು ಕಾಮಕಸ್ತೂರಿ;
೧೯೩೭: ಸಖೀಗೀತ;
೧೯೩೮: ಉಯ್ಯಾಲೆ;
೧೯೩೮: ನಾದಲೀಲೆ;
೧೯೪೩: ಮೇಘದೂತ;
೧೯೪೬: ಹಾಡು ಪಾಡು;
೧೯೫೧: ಗಂಗಾವತರಣ;
೧೯೫೬: ಸೂರ್ಯಪಾನ;
೧೯೫೬: ಹೃದಯಸಮುದ್ರ;
೧೯೫೬: ಮುಕ್ತಕಂಠ;
೧೯೫೭: ಚೈತ್ಯಾಲಯ;
೧೯೫೭: ಜೀವಲಹರಿ;
೧೯೫೭: ಅರಳು ಮರಳು;
೧೯೫೮: ನಮನ;
೧೯೫೯: ಸಂಚಯ;
೧೯೬೦: ಉತ್ತರಾಯಣ;
೧೯೬೧: ಮುಗಿಲಮಲ್ಲಿಗೆ;
೧೯೬೨: ಯಕ್ಷ ಯಕ್ಷಿ;
೧೯೬೪: ನಾಕುತಂತಿ;
೧೯೬೬: ಮರ್ಯಾದೆ;
೧೯೬೮: ಶ್ರೀಮಾತಾ;
೧೯೬೯: ಬಾ ಹತ್ತರ;
೧೯೭೦: ಇದು ನಭೋವಾಣಿ;
೧೯೭೨: ವಿನಯ;
೧೯೭೩: ಮತ್ತೆ ಶ್ರಾವಣಾ ಬಂತು;
೧೯೭೭: ಒಲವೇ ನಮ್ಮ ಬದುಕು;
೧೯೭೮: ಚತುರೋಕ್ತಿ ಮತ್ತು ಇತರ ಕವಿತೆಗಳು;
೧೯೮೨: ಪರಾಕಿ;
೧೯೮೨: ಕಾವ್ಯವೈಖರಿ;
೧೯೮೩: ತಾ ಲೆಕ್ಕಣಕಿ ತಾ ದೌತಿ;
೧೯೮೩: ಬಾಲಬೋಧೆ;
೧೯೮೬: ಚೈತನ್ಯದ ಪೂಜೆ;
೧೯೮೭: ಪ್ರತಿಬಿಂಬಗಳು;



[ಬದಲಾಯಿಸಿ] ವಿಮರ್ಶೆ
೧೯೩೭: ಸಾಹಿತ್ಯ ಮತ್ತು ವಿಮರ್ಶೆ;

೧೯೪೦: ಸಾಹಿತ್ಯಸಂಶೋಧನೆ;

೧೯೪೫: ವಿಚಾರ ಮಂಜರಿ;

೧೯೫೪: ಕವಿ ಲಕ್ಷ್ಮೀಶನ ಜೈಮಿನಿಭಾರತಕ್ಕೆ ಮುನ್ನುಡಿ;

೧೯೫೯: ಮಹಾರಾಷ್ಟ್ರ ಸಾಹಿತ್ಯ;

೧೯೬೨: ಕಾವ್ಯೋದ್ಯೋಗ;

೧೯೬೮: ಕನ್ನಡ ಸಾಹಿತ್ಯದಲ್ಲಿ ನಾಲ್ಕು ನಾಯಕರತ್ನಗಳು;

೧೯೭೪: ಸಾಹಿತ್ಯದ ವಿರಾಟ್ ಸ್ವರೂಪ;

೧೯೭೬: ಕುಮಾರವ್ಯಾಸ ಪುಸ್ತಿಕೆ;

ವರಕವಿ ದ.ರಾ. ಬೇಂದ್ರೆ ಕುರಿತ ಮತ್ತೊಂದು ಲೇಖನಕ್ಕೆ ಈ ಲಿಂಕ್ ಕ್ಲಿಕ್ ಮಾಡಿ http://kannadaratna.com/achievers/bendre.html

[ಬದಲಾಯಿಸಿ] ಸಣ್ಣ ಕಥೆ
೧೯೪೦: ನಿರಾಭರಣ ಸುಂದರಿ;




[ಬದಲಾಯಿಸಿ] ನಾಟಕಗಳು
ದೆವ್ವದ ಮನೆ;
ಹಳೆಯ ಗೆಣೆಯರು;
ಸಾಯೊ ಆಟ;
ತಿರುಕರ ಪಿಡುಗು;
ಗೋಲ್;
ಉದ್ಧಾರ;
ಜಾತ್ರೆ;
ನಗೆಯ ಹೊಗೆ;
ಮಂದೀ ಮದಿವಿ;
ಮಂದೀ ಮಕ್ಕಳು;
ಮಂದೀ ಮನಿ;
ಆ ಥರಾ ಈ ಥರಾ;
ಶೋಭನಾ;
ಮಕ್ಕಳು ಅಡಿಗೆ ಮನೆ ಹೊಕ್ಕರೆ;
ಸಮಗ್ರ ನಾಟಕ ಸಂಪುಟಗಳು ೩ ಸಂಪುಟಗಳಲ್ಲಿ ನಾಟಕ ಸಿಧ್ಧಾಂತ ಒಳಗೊಂಡು
[ಬದಲಾಯಿಸಿ] ಅನುವಾದ
ಉಪನಿಷತ್ ರಹಸ್ಯ( ಮೂಲ: ಶ್ರೀ ರಾನಡೆ[[೧]]);
ಭಾರತೀಯ ನವಜನ್ಮ(ಮೂಲ:ಶ್ರೀ ಅರವಿಂದ[[೨]] );
ಶ್ರೀ ಅರವಿಂದರ ಯೋಗ, ಆಶ್ರಮ ಮತ್ತು ತತ್ವೊಪದೇಶ;
ಚೀನಾದ ಬಾಳು ಬದುಕು;
ಗುರು ಗೋವಿಂದಸಿಂಗ;
ನೂರೊಂದು ಕವನ( ಮೂಲ: ಶ್ರೀ ರವೀಂದ್ರನಾಥ ಠಾಕೂರ);
ಕಬೀರ ವಚನಾವಲಿ;
ಭಗ್ನಮೂರ್ತಿ(ಮೂಲ ಮರಾಠಿ: ಶ್ರೀ ಅ.ರಾ.ದೇಶಪಾಂಡೆ);
[ಬದಲಾಯಿಸಿ] ಮರಾಠಿ ಕೃತಿಗಳು
ಸಂವಾದ;
ವಿಠ್ಠಲ ಸಂಪ್ರದಾಯ;
ಶಾಂತಲಾ( ಕನ್ನಡದಿಂದ ಅನುವಾದ:ಮೂಲ:ಕೆ.ವಿ.ಅಯ್ಯರ್);
ಸಂತ, ಮಹಂತ,ಪೂರ್ಣ ಶಂಭೂ ವಿಠ್ಠಲ;
ವಿಠ್ಠಲ ಪಾಂಡುರಂಗ (ಕವನ ಸಂಗ್ರಹ);
[ಬದಲಾಯಿಸಿ] ಇಂಗ್ಲಿಷ ಕೃತ
A theory of Immortality of probable problem and possible solution
[ಬದಲಾಯಿಸಿ] ಗೌರವ ಪ್ರಶಸ್ತಿಗಳು

ದ.ರಾ.ಬೇಂದ್ರೆಯವರುಅವರಿಗೆ ಸಂದ ಗೌರವಗಳು ಹಲವು. ಡಾಕ್ಟರೇಟ್ ಪದವಿ, ಕೇಳ್ಕರ್ ಬಹುಮಾನ (೧೯೬೫ರಲ್ಲಿ ಮರಾಠಿಯಲ್ಲಿ ರಚಿಸಿದ "ಸಂವಾದ" ಎಂಬ ಕೃತಿಗೆ), ಅವರ "ಅರಳು ಮರಳು" ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ (೧೯೫೮ರಲ್ಲಿ), ೧೯೪೩ರಲ್ಲಿ ಶಿವಮೊಗ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ -ಮೊದಲಾದ ಅನೇಕ ಗೌರವಗಳು ಅವರಿಗೆ ಲಭಿಸಿದವು. ೧೯೬೪ರ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಬೇಂದ್ರೆಯವರನ್ನು ಗೌರವಿಸಲಾಯಿತು. ಅದೇ ವರ್ಷ ಅವರ ನಾಕುತಂತಿ ಕವನ ಸಂಕಲನವು ಪ್ರಕಾಶಿಸಲ್ಪಟ್ಟಿತು.

೧೯೭೩ರಲ್ಲಿ ಬೇಂದ್ರೆಯವರ ನಾಕುತಂತಿ ಕವನ ಸಂಗ್ರಹವನ್ನು ಜ್ಞಾನಪೀಠ ಪ್ರಶಸ್ತಿಗಾಗಿ ಆರಿಸಿತು. ಅದೇ ವರ್ಷ ಒರಿಯಾ ಭಾಷೆಯ ಲೇಖಕ ಗೋಪಿನಾಥ ಮೊಹಂತಿ ಅವರೂ ಈ ಗೌರವಕ್ಕೆ ಅರ್ಹರಾದರು. ಆ ವರ್ಷದ ಪ್ರಶಸ್ತಿ ಮೌಲ್ಯವನ್ನು ಇಬ್ಬರಿಗೂ ಹಂಚಲಾಯಿತು.

ಕುವೆಂಪು

ಕುವೆಂಪು - ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (೧೯೦೪ - ೧೯೯೪) - ಕನ್ನಡವು ಪಡೆದ ಅತ್ಯುತ್ತಮ ಕವಿ, 'ರಾಷ್ಟ್ರಕವಿ'. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಕನ್ನಡದ ಪ್ರಥಮ ವ್ಯಕ್ತಿ. 'ವಿಶ್ವ ಮಾನವ'. ಕನ್ನಡ ಸಾಹಿತ್ಯಕ್ಕೆ ಇವರ ಕಾಣಿಕೆ ಅಪಾರ.




ಪರಿವಿಡಿ [ಅಡಗಿಸು]
೧ ಜೀವನ
೨ ಸಂದೇಶ
೩ ವಿಶ್ವ ಮಾನವ ಸಂದೇಶ
೪ ' ಸಾಹಿತ್ಯ
೫ ಶ್ರೀ ರಾಮಾಯಣ ದರ್ಶನಂ
೬ ಕೃತಿಗಳು
೬.೧ ಕುವೆಂಪುರವರ ಬಗ್ಗೆ ಇತರರು ಬರೆದ ಪುಸ್ತಕಗಳು
೭ ಪ್ರಶಸ್ತಿ ಪುರಸ್ಕಾರಗಳು
೮ ಇತರೆ ಸಂಬಂಧಪಟ್ಟ ಪುಟಗಳು
೯ ಹೊರಗಿನ ಸಂಪರ್ಕಗಳು


[ಬದಲಾಯಿಸಿ] ಜೀವನ
ಡಿಸೆಂಬರ್ ೨೯, ೧೯೦೪, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆಯಲ್ಲಿ ಜನಿಸಿದ ಇವರು, ಕುಪ್ಪಳ್ಳಿ (ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕು) ಹಾಗೂ ಮೈಸೂರಿನಲ್ಲಿ ಬೆಳೆದರು. ಮೈಸೂರಿನ 'ಮಹಾರಾಜಾ' ಕಾಲೇಜಿನಲ್ಲಿ ಓದಿದ ಇವರು, ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ಉಪಕುಲಪತಿಯಾಗಿ ನಿವೃತ್ತರಾದರು.ಇವರು ಮೈಸೂರಿನ ಒಂಟಿಕೊಪ್ಪಲುವಿನಲ್ಲಿರುವ "ಉದಯರವಿ"ಯಲ್ಲಿ ವಾಸಿಸುತ್ತಿದ್ದರು. ಇವರ ಹೆಂಡತಿಯ ಹೆಸರು ಹೇಮಾವತಿ ಮತ್ತು ಇವರಿಗೆ ನಾಲ್ಕು ಜನ ಮಕ್ಕಳು(ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ, ತಾರಿಣಿ ಚಿದಾನಂದ).

ರಾಷ್ಟ್ರಕವಿ ಡಾ.ಕು.ವೆಂ.ಪು ಅವರ ಕುರಿತ ಮತ್ತೊಂದು ಲೇಖನಕ್ಕೆ ಇಲ್ಲಿ ಕ್ಲಿಕ್ ಮಾಡಿ http://kannadaratna.com/achievers/kuvempu.html

[ಬದಲಾಯಿಸಿ] ಸಂದೇಶ
ಓ ನನ್ನ ಚೇತನ, ಆಗು ನೀ ಅನಿಕೇತನ

[ಬದಲಾಯಿಸಿ] ವಿಶ್ವ ಮಾನವ ಸಂದೇಶ
ಪ್ರತಿಯೊಂದು ಮಗುವೂ ಹುಟ್ಟುತ್ತಲೆ -ವಿಶ್ವ ಮಾನವ. ಬೆಳೆಯುತ್ತಾ ನಾವು ಅದನ್ನು ದೇಶ, ಭಾಷೆ, ಮತ, ಜಾತಿ,ಜನಾಂಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ”’ವಿಶ್ವಮಾನವ”’ನನ್ನಾಗಿ ಮಾಡುವುದೆ ವಿದ್ಯೆ, ಸಂಸ್ಕೃತಿ, ನಾಗರಿಕತೆಯ ಕರ್ತವ್ಯವಾಗಬೇಕು ಈ ದರ್ಶನವನ್ನೆ ’ವಿಶ್ವಮಾನವ ಗೀತೆ’ ಸಾರುತ್ತದೆ




[ಬದಲಾಯಿಸಿ] ' ಸಾಹಿತ್ಯ
ಕುವೆಂಪುರವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಅಪಾರ. ಇವರು ಧಾರವಾಡದಲ್ಲಿ ನಡೆದ ೧೯೫೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ೧೯೫೫ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು. ಇವರ ಶ್ರೀ ರಾಮಾಯಣ ದರ್ಶನಂ ಕೃತಿಯು ಕನ್ನಡಕ್ಕೆ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿಯನ್ನು ದೊರಕಿಸಿ ಕೊಟ್ಟಿತು. ಭಾರತ ಸರ್ಕಾರದ ಪದ್ಮವಿಭೂಷಣದಿಂದಲೂ ಪುರಸ್ಕೃತಗೊಂಡ ಇವರು 'ಜೈ ಭಾರತ ಜನನಿಯ ತನುಜಾತೆ...' ಕನ್ನಡ ನಾಡ ಗೀತೆಯನ್ನು ರಚಿಸಿದ ಮೇರು ಕವಿ. ಇವರು ಬರೆದ 'ಸ್ವಾಮಿ ವಿವೇಕಾನಂದ'ರ ಬಗೆಗಿನ ಕೃತಿ ಬಹಳ ಜನಪ್ರಿಯವಾದದ್ದು.

ಇವರ ವಿಶ್ವಮಾನವ ಸಂದೇಶ ಅತಿ ಪ್ರಸಿದ್ಡವಾಗಿದೆ.

[ಬದಲಾಯಿಸಿ] ಶ್ರೀ ರಾಮಾಯಣ ದರ್ಶನಂ
ಕುವೆಂಪುರವರು ಬರೆದ ಈ ಕೃತಿಯು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತವಾಗಿದೆ. ಕನ್ನಡದ ಅತ್ಯಮೂಲ್ಯ ಗ್ರಂಥಗಳಲ್ಲಿ ಒಂದು, ಈ ಕೃತಿ. ಈ ಕೃತಿ ಕನ್ನಡದ ಮೊದಲ ಆಧುನಿಕ ಮಹಾಕಾವ್ಯ; ಸರಳರಗಳೆಯನ್ನು ಕನ್ನಡದಲ್ಲಿ ಮೊತ್ತಮೊದಲ ಬಾರಿಗೆ ಬಳಸಲಾಗಿದೆ.

[ಬದಲಾಯಿಸಿ] ಕೃತಿಗಳು
ಕಾದಂಬರಿ:

ಕಾನೂರು ಸುಬ್ಬಮ್ಮ ಹೆಗ್ಗಡತಿ (ಚಲನ ಚಿತ್ರವಾಗಿದೆ)
ಮಲೆಗಳಲ್ಲಿ ಮದುಮಗಳು (ಚಲನ ಚಿತ್ರವಾಗಿದೆ)
ನಾಟಕಗಳು:

ಬೆರಳ್ಗೆ ಕೊರಳ್
ಶೂದ್ರ ತಪಸ್ವಿ
ಸ್ಮಶಾನ ಕುರುಕ್ಷೇತ್ರ
ರಕ್ತಾಕ್ಷಿ
ಬಿರುಗಾಳಿ
ಯಮನ ಸೋಲು
ನನ್ನ ಗೋಪಾಲ (ಮಕ್ಕಳ ನಾಟಕ)
ವಾಲ್ಮೀಕಿಯ ಭಾಗ್ಯ
ಮಹಾರಾತ್ರಿ
ಜಲಗಾರ
ಚಂದ್ರಹಾಸ
ಬಲಿದಾನ
ಮೋಡಣ್ಣನ ತಮ್ಮ (ಮಕ್ಕಳ ನಾಟಕ)
ಚಿತ್ರ ಪ್ರಬಂಧ:

ಮಲೆನಾಡಿನ ಚಿತ್ರಗಳು
ವಿಚಾರ:

ವಿಚಾರ ಕ್ರಾಂತಿಗೆ ಆಹ್ವಾನ
ಆತ್ಮ ಚರಿತ್ರೆ:

ನೆನಪಿನ ದೋಣಿಯಲ್ಲಿ
ಕಾವ್ಯಗಳು:

ಶ್ರೀ ರಾಮಾಯಣ ದರ್ಶನ೦
ಕೊಳಲು
ಅಗ್ನಿಹಂಸ
ಅನಿಕೇತನ
ಅನುತ್ತರಾ
ಇಕ್ಶುಗಂಗೋತ್ರಿ
ಕದರಡಕೆ
ಕಥನ ಕವನಗಳು
ಕಲಾಸುಂದರಿ
ಕಿಂಕಿಣಿ
ಕೃತ್ತಿಕೆ
ಜೇನಾಗುವ
ನವಿಲು
ಪಕ್ಷಿಕಾಶಿ
ಚಿತ್ರಾಂಗದಾ
ಪ್ರೇತಕ್ಯು
ಪ್ರೇಮಕಾಶ್ಮೀರ
ಮಂತ್ರಾಕ್ಷತೆ
ಷೋಡಶಿ
ಹಾಳೂರು
ಕೋಗಿಲೆ
ಪಾಂಚಜನ್ಯ
ಕುಟೀಚಕ
ಕಥಾಸಂಕಲನ:

ನನ್ನ ದೇವರು ಮತ್ತು ಇತರ ಕಥೆಗಳು
ವಿಮರ್ಶೆ:

ದ್ರೌಪದಿಯ ಶ್ರೀಮುಡಿ
ಜೀವನ ಚರಿತ್ರೆ:

ಸ್ವಾಮಿ ವಿವೇಕಾನಂದ
ಶ್ರೀ ರಾಮಕೃಷ್ಣ ಪರಮಹಂಸ
[ಬದಲಾಯಿಸಿ] ಕುವೆಂಪುರವರ ಬಗ್ಗೆ ಇತರರು ಬರೆದ ಪುಸ್ತಕಗಳು
ಮಗಳು ಕಂಡ ಕುವೆಂಪು - ಲೇ: ತಾರಿಣಿ ಚಿದಾನಂದ ಪ್ರಕಾಶಕರು:ಪುಸ್ತಕ ಪ್ರಕಾಶನ
ಅಣ್ಣನ ನೆನಪು - ಲೇ: ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರಕಾಶಕರು:ಪುಸ್ತಕ ಪ್ರಕಾಶನ
ಯುಗದ ಕವಿ-ಲೇ: ಡಾ.ಕೆ.ಸಿ.ಶಿವಾರೆಡ್ಡಿ
ಹೀಗಿದ್ದರು ಕುವೆಂಪು - ಲೇ:ಪ್ರಭುಶಂಕರ
ಬೆರಳ್ಗೆಕೊರಳ್ ನಾಟಕವುಸಹಚಲನಚಿತ್ರವಾಗಿದೆ.
[ಬದಲಾಯಿಸಿ] ಪ್ರಶಸ್ತಿ ಪುರಸ್ಕಾರಗಳು

ಕುಪ್ಪಳಿಯಲ್ಲಿ ಕುವೆಂಪು ಮನೆ (ಈಗ ವಸ್ತು ಸಂಗ್ರಹಾಲಯವಾಗಿದೆ)ಜ್ಞಾನಪೀಠ ಪ್ರಶಸ್ತಿ (ಶ್ರೀ ರಾಮಾಯಣ ದರ್ಶನಂ) (೧೯೬೭)
ಪದ್ಮಭೂಷಣ (೧೯೫೮)
ಪದ್ಮವಿಭೂಷಣ (೧೯೮೯)
ಕರ್ನಾಟಕ ರತ್ನ (೧೯೯೨)
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೫೫)
ಪಂಪ ಪ್ರಶಸ್ತಿ(೧೯೮೮)
ರಾಷ್ಟ್ರಕವಿ ಎಂದು ಬಿರುದು (೧೯೬೪)
[ಬದಲಾಯಿಸಿ] ಇತರೆ ಸಂಬಂಧಪಟ್ಟ ಪುಟಗಳು
ಕುವೆಂಪು ವಿಶ್ವವಿದ್ಯಾನಿಲಯ - ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟ ಎಂಬ ಊರಿನಲ್ಲಿ ಕುವೆಂಪು ಹೆಸರಿನ ವಿಶ್ವವಿದ್ಯಾನಿಲಯ ಸ್ಥಾಪನೆ.
ಪೂರ್ಣಚಂದ್ರ ತೇಜಸ್ವಿ - ಕುವೆಂಪುರವರ ಪುತ್ರ, ಸಾಹಿತಿ.

ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಕ್ಕಾಗಿ ದೆಹಲಿಯಲ್ಲಿ ಹಕ್ಕೊತ್ತಾಯ

--------------------------------------------------------------------------------

ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಪಂಚಕೋಟಿ ಕನ್ನಡಿಗರ ಪರವಾಗಿ ಈ ಹಕ್ಕೊತ್ತಾಯವನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಲಾಗಿದೆ.

ಪ್ರಸ್ತುತ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ಒಕ್ಕೂಟವಾದ ಯು.ಪಿ.ಎ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ತಮಿಳು ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಲಾಯಿತು. ಹೀಗೆ ನೀಡುವಾಗ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಗೊತ್ತುವಳಿಯೊಂದನ್ನು ಮಂಡಿಸಿತೇ ಹೊರತು, ಯಾವ ತಜ್ಞರ ಸಮಿತಿಯ ಪರಾಮರ್ಶೆಗೂ ಈ ವಿಷಯವನ್ನು ಒಪ್ಪಿಸಲಿಲ್ಲ. ತಮಿಳಿನಷ್ಟೇ ಪ್ರಾಚೀನವೂ, ಸಮೃದ್ಧವೂ ಆದ ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಬೇಕೆಂದು ಒತ್ತಾಯ ಬಂದಾಗ, ಇಂತಹುದೇ ಒತ್ತಾಯ ಇತರೆ ಭಾರತೀಯ ಭಾಷೆಗಳಿಂದಲೂ ಬಂದಾಗ ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿ, ಕೆಲವು ಮಾನದಂಡಗಳನ್ನು ರೂಪಿಸಿತು.

ಭಾರತ ದೇಶ ಒಂದು ಒಕ್ಕೂಟವಾಗಿದ್ದು, ಇದು ಹಲವಾರು ಭಿನ್ನ ಸಂಸ್ಕೃತಿ, ಭಾಷೆಗಳ ತವರಾಗಿದೆ. ಸ್ವಾತಂತ್ರದ ಸಮಯದಲ್ಲಿ ನಮ್ಮ ಭಾರತದೇಶ ಒಗ್ಗೂಡಲು ಪ್ರಮುಖವಾದ ಕಾರಣವೆಂದರೆ, "ಅನೇಕತೆಯಲ್ಲಿ ಏಕತೆ" ಎಂಬ ಸೈದ್ಧಾಂತಿಕ ನಿಲುವು, ಪ್ರತಿಯೊಂದು ಪ್ರದೇಶಕ್ಕೂ ಇರುವ ಅನನ್ಯತೆ, ಪ್ರತಿಯೊಂದು ಭಾಷೆಗೂ ಇರುವ ಇತಿಹಾಸ, ವೈಭವ ಮತ್ತು ಸಂಸ್ಕೃತಿಗಳಿಗೆ ಮಾನ್ಯತೆ, ಇವುಗಳ ಅಸ್ತಿತ್ವಕ್ಕೆ ಧಕ್ಕೆ ಬರದ ಹಾಗೆ ಆಡಳಿತ ನಡೆಸುವ ಭರವಸೆ, ಸಂವಿಧಾನದ ಚೌಕಟ್ಟಿನಲ್ಲಿಯೇ ಸ್ವಲ್ಪಮಟ್ಟಿನ ಸ್ವಾಯತ್ತತೆ, ಇವೆಲ್ಲಕ್ಕಿಂತ ಪ್ರಮುಖವಾಗಿ ಪ್ರತಿಯೊಂದು ವೈವಿಧ್ಯತೆಗೂ ಮಾನ್ಯತೆ ನೀಡುವಲ್ಲಿನ ಸಮಾನತೆ. ಇನ್ನಷ್ಟು ಸ್ಪಷ್ಟವಾಗಿ ಹೇಳಬೇಕೆಂದರೆ, ಈ ದೇಶದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳಿವೆ. ಇಲ್ಲಿನ ಪ್ರತಿಯೊಂದು ರಾಜ್ಯಕ್ಕೂ ಸಮಾನ ಸ್ಥಾನಮಾನವಿದೆ. ಪ್ರತಿಯೊಂದು ಭಾಷೆಗೂ ಸಮಾನ ಗೌರವ ಮತ್ತು ಪ್ರಾಮುಖ್ಯತೆ. ಅಂತೆಯೇ ಇಲ್ಲಿನ ರಾಷ್ಟ್ರಭಾಷೆಗಳು ಹದಿನೆಂಟಕ್ಕಿಂತಲೂ ಹೆಚ್ಚು. ಈ ದೇಶದಲ್ಲಿ ಪ್ರಾಂತ್ಯ, ಜನಾಂಗ ಅಥವಾ ಭಾಷೆಯ ಆಧಾರದ ಮೇಲೆ ತಾರತಮ್ಯ ತೋರಿಸುವುದು ಅಕ್ಷಮ್ಯ. ಹಾಗೆ ಪಕ್ಷಪಾತತನ ತೋರಿಸುವುದು ಒಕ್ಕೂಟ ವ್ಯವಸ್ಥೆಗೆ ಎಸಗುವ ದ್ರೋಹ.

ಎರಡು ಸಾವಿರ ವರ್ಷಗಳಿಗೂ ಮಿಗಿಲಾದ ಇತಿಹಾಸ ಇರುವ ಕನ್ನಡ ಭಾಷೆಗೆ " ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡುವಲ್ಲಿ ಅನುಸರಿಸುತ್ತಿರುವ ವಿಳಂಬ ನೀತಿ, ಘನ ಭಾರತ ಸರ್ಕಾರದ ಧೋರಣೆಯ ಬಗ್ಗೆ ಅನುಮಾನ ಹುಟ್ಟು ಹಾಕುತ್ತದೆ. ಶಾಸ್ತ್ರೀಯ ಭಾಷೆ ಎಂಬುದಕ್ಕೆ ಭಾಷಾ ವಿಜ್ಞಾನ ಕ್ಷೇತ್ರದಲ್ಲಿ ಇದುವರೆವಿಗೂ ಇದ್ದ ಅರ್ಥವೇ ಬೇರೆ. ಒಂದು ಭಾಷೆ ಪುರಾತನವಾಗಿದ್ದು, ಹಿಂದೊಮ್ಮೆ ಜನ ಸಾಮಾನ್ಯರ ಆಡುಭಾಷೆಯಾಗಿದ್ದು ನಂತರ ಹಲವಾರು ಭಾಷೆಗಳಿಗೆ ಜನ್ಮ ನೀಡಿ, ತಾನು ಜನಸಾಮಾನ್ಯರ ಬಳಕೆಯಿಂದ ಕ್ರಮೇಣ ಮರೆಯಾಗಿ, ಆಡುಭಾಷೆಯಾಗದೆ ಕೇವಲ ಗ್ರಂಥಸ್ಥ ಭಾಷೆಯಾಗಿ ಉಳಿದಿರುವುದಾದಲ್ಲಿ, ಅಂತಹ ಭಾಷೆಯನ್ನು ಶಾಸ್ತ್ರೀಯಭಾಷೆಯೆಂಬುದಾಗಿ ಗುರುತಿಸಿ, ಮಾನ್ಯತೆ ನೀಡುವ ಪರಿಪಾಠವಿತ್ತು. ಹಾಗಾಗಿ, ನಿಜವಾದ ಅರ್ಥದಲ್ಲಿ ಸಂಸ್ಕೃತಕ್ಕೆ ಮಾತ್ರವೇ ಶಾಸ್ತ್ರೀಯ ಭಾಷೆಯಾಗುವ ಅರ್ಹತೆಯಿತ್ತು. ಈ ಮಾನದಂಡ ಅನುಸರಿಸಿಯೇ ವಿಶ್ವದಾದ್ಯಂತ ಶಾಸ್ತ್ರೀಯ ಭಾಷೆಯೆಂದು ಮಾನ್ಯತೆ ಪಡೆದಿರುವ ಭಾಷೆಗಳ ಪಟ್ಟಿ ಹೀಗಿದೆ.
೧. ಹಿಬ್ರೂ
೨. ಶಾಸ್ತ್ರೀಯ ಗ್ರೀಕ್
೩. ಶಾಸ್ತ್ರೀಯ ಪರ್ಷಿಯನ್
೪. ಪಾಲಿ
೫. ಶಾಸ್ತ್ರೀಯ ಅರೇಬಿಕ್ ಮತ್ತು
೬. ಶಾಸ್ತ್ರೀಯ ಚೀನಿ ಭಾಷೆ.

ಈ ಪಟ್ಟಿಗೆ ಹೊಸ ಸೇರ್ಪಡೆ ದ್ರಾವಿಡ ಭಾಷೆಯಾದ ತಮಿಳು. ತಮಿಳುಭಾಷೆಗೆ ಈ ಪಟ್ಟ ದೊರೆತ ಒಂದು ವರ್ಷದ ನಂತರ ಸಂಸ್ಕೃತಕ್ಕೆ ಆ ಸ್ಥಾನ ನೀಡಿರುವುದು ಆಶ್ಚರ್ಯಕರವಾದ ಸತ್ಯ. ಶಾಸ್ತ್ರೀಯ ಭಾಷ ಪಟ್ಟಿಗೆ ತಮಿಳನ್ನು ಸೇರಿಸುವ ಮೂಲಕ, ನಮ್ಮ ಕೇಂದ್ರ ಸರ್ಕಾರವು " ಶಾಸ್ತ್ರೀಯ ಭಾಷೆ" ಎಂಬುದಕ್ಕೆ ಹೊಸ ಅರ್ಥ, ಹೊಸ ವ್ಯಾಖ್ಯಾನ ನೀಡಿದೆ. ಈ ಮೂಲಕ ಕನ್ನಡ ಭಾಷೆಗೂ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿಕೊಂಡಿದೆ. ತತ್ಸಂಬಂಧವಾದ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿದ ರೀತಿಯೇ ಪಕ್ಷಪಾತತನದ್ದಾಗಿದೆ. ತಮಿಳಿಗೆ ಶಾಸ್ತ್ರೀಯ ಭಾಷಾ ಸ್ಠಾನಮಾನ ನೀಡುವಾಗ ಪರಿಶೀಲನೆಗೆ ಒಳ ಪಡಿಸಬೇಕಾದ ಅಗತ್ಯ ಕಾಣದೆ ಈಗ ಕನ್ನಡಕ್ಕೆ ನೀಡಬೇಕಾದಾಗ ತಜ್ಞರ ಸಮಿತಿಯ ಮತ್ತು ಹೊಸ ಮಾನದಂಡಗಳನ್ನು ರಚಿಸುವ ಅಗತ್ಯಗಳನ್ನು ಮನಗಂಡಿದೆ. ಇದು ಘನ ಸರ್ಕಾರದ ಮಲತಾಯಿ ಧೋರಣೆಗೆ ಜ್ವಲಂತ ಸಾಕ್ಷಿ. ಮೊದಲಿಗೆ ಸಾವಿರ ವರ್ಷಗಳ ಪುರಾತನತೆಯ ಮಾನದಂಡ ವಿಧಿಸಿದ್ದ ಸಮಿತಿ, ಮತ್ತೆ ಅದನ್ನು ಸಾವಿರದ ಐದುನೂರು ವರ್ಷಗಳಿಗೆ ಯಾವ ಆಧಾರದ ಮೇಲೆ ಬದಲಾಯಿಸಿತು ಎಂಬುದು ಅರ್ಥವಾಗದೇ ಇದ್ದರೂ, ಕೇಂದ್ರ ಸರ್ಕಾರ ಸೂಚಿಸಿರುವ ಹೊಸ ಮಾನದಂಡಗಳನ್ನೂ ಕೂಡ ನಮ್ಮ ಹೆಮ್ಮೆಯ ಕನ್ನಡ ಭಾಷೆಯು ಅತ್ಯಂತ ಸಮರ್ಥನೀಯವಾಗಿ ಹೊಂದಿಕೊಳ್ಳುತ್ತದೆ ಎಂಬುದನ್ನು ತಮ್ಮ ಗಮನಕ್ಕೆ ತರಲು ಇಚ್ಚಿಸುತ್ತೇವೆ.
೧. ಭಾಷೆಯ ದಾಖಲಿತ ಅಥವಾ ಪ್ರಾಚೀನ ದಾಖಲೆಗಳು ಕನಿಷ್ಠ ಸಾವಿರದ ಐದುನೂರು ವರ್ಷಗಳಿಗೂ ಹಿಂದಿನದಾಗಿರಬೇಕು.
೨. ಆ ಭಾಷಿಕ ಜನರು ಮೌಲಿಕವೆಂದು ಭಾವಿಸುವ ಪ್ರಾಚೀನ ಸಾಹಿತ್ಯ ಅಥವಾ ವಾಙ್ಮಯ ಆ ಭಾಷೆಯಲ್ಲಿರಬೇಕು.
೩. ಸಾಹಿತ್ಯ ಪರಂಪರೆಯು ಮೌಲಿಕವಾದದ್ದಾಗಿದ್ದು ಯಾವುದೇ ಇನ್ನೊಂದು ಭಾಷೆಯಿಂದ ಸ್ವೀಕೃತವಾದದ್ದಾಗಿರಬಾರದು.
೪.ಶಾಸ್ತ್ರೀಯ ಭಾಷೆಯು ಅದರ ಮುಂದಿನ ರೂಪದಿಂದ ಭಿನ್ನವಾಗಿರಬಹುದು ಅಥವಾ ಅದರ ಬೆಳವಣಿಗೆಯೇ ಸ್ಥಗಿತಗೊಂಡಿರಬಹುದು.
ಕನ್ನಡ ಭಾಷೆಯ ಸಾಹಿತ್ಯದ ಹಳಮೆಯನ್ನು ಅಳೆಯಲು ಇರುವ ಕೆಲ ಆಧಾರಗಳು.
ಅ. ಅನ್ಯ ದೇಶ ಅಥವಾ ಭಾಷೆಯಲ್ಲಿ ದೊರೆಯುವ ಪ್ರಾಚೀನ ಅವಶೇಷಗಳು.
ಆ. ಕರ್ನಾಟಕದಲ್ಲಿಯ, ಅದರಲ್ಲೂ ಕನ್ನಡದಲ್ಲಿ ಬರೆದ ಪ್ರಾಚೀನ ಶಾಸನಗಳು.
ಇ. ಕವಿರಾಜ ಮಾರ್ಗದಲ್ಲಿ ದೊರೆಯುವ ಆಧಾರಗಳು.
ಈ. ಇತರ ಗ್ರಂಥಗಳಲ್ಲಿ ದೊರೆಯುವ ಆಧಾರಗಳು.



ಅ. ಅನ್ಯ ದೇಶ ಅಥವಾ ಭಾಷೆಯಲ್ಲಿ ದೊರೆಯುವ ಪ್ರಾಚೀನ ಅವಶೇಷಗಳು.
ವೇದಪೂರ್ವ ಕಾಲದಿಂದಲೂ ಇಲ್ಲವೇ ವೇದಕಾಲದಿಂದಲೂ ಕನ್ನಡ ನಾಡು ನುಡಿಗಳು ಅಸ್ತಿತ್ವದಲ್ಲಿ ಇದ್ದವೆಂಬ ಊಹೆಗಳಿದ್ದರೂ ಕ್ರಿ.ಪೂ ಮೂರನೇ ಶತಮಾನದಿಂದಲಂತೂ ಇದ್ದವೆಂಬುದಕ್ಕೆ ತಕ್ಕ ಸಾಕ್ಷ್ಯಗಳಿವೆ. ಕ್ರಿ.ಶ ನೂರೈವತ್ತರ ಸುಮಾರಿನ ಗ್ರೀಕ್ ನ ಅಲೆಗ್ಸಾಂಡ್ರಿಯಾದ ಟಾಲೆಮಿಯೆಂಬ ಪ್ರವಾಸಿಗ ತನ್ನ ಬರಹಗಳಲ್ಲಿ ಮುದುಗಲ್ ಮೊದಲಾದ ಕನ್ನಡದ ಊರುಗಳ ಹೆಸರುಗಳನ್ನು ಉದ್ಗರಿಸಿದ್ದಾನೆ. ಗ್ರೀಕ್ ರ ಕ್ರಿಸ್ತಪೂರ್ವದ ಕೆಲವು ನಾಟಕಗಳಲ್ಲಿ ಕೆಲವು ಕನ್ನಡದ ಪದಗಳನ್ನು ಗುರುತಿಸಿದ್ದಾರೆ. ಕ್ರಿಸ್ತಶಕ ಮುನ್ನೂರೈವತ್ತರಲ್ಲಿ ಮೊದಲಾದ ಕದಂಬರ ಆಳ್ವಿಕೆ ಕನ್ನಡಿಗರ ಮೊಟ್ಟಮೊದಲ ಆಳ್ವಿಕೆಯಾಗಿದೆ. ಕ್ರಿಸ್ತಪೂರ್ವ ಮುನ್ನೂರೈವತ್ತರ ಆಶೋಕ ಚಕ್ರವರ್ತಿಯ ಬ್ರಹ್ಮಗಿರಿ ಶಾಸನದಲ್ಲಿ "ಇಸಿಲ" ಎಂಬ ಕನ್ನಡ ಪದದ ಬಳಕೆಯಾಗಿದೆ. ಗಾಥ ಸಪ್ತಶತಿ ಎಂಬ ಪ್ರಾಕೃತ ಭಾಷಾ ಗ್ರಂಥದಲ್ಲಿ, ಇದನ್ನು ಸಂಕಲನ ಮಾಡಿದ ಹಾಲ ರಾಜನು ತನ್ನನ್ನು ತಾನು ಕುಂತಲು ಜನಪದೇಶ್ವರ ಎಂದು ಕರೆದುಕೊಂಡ ಶಾತವಾಹನ ವಂಶದ ರಾಜನಾಗಿದ್ದಾನೆ. ಇವನು ಕ್ರಿಸ್ತಶಕ ೧-೨ ನೆಯ ಶತಮಾನದವನಾಗಿದ್ದು ಇವನ ಕಾವ್ಯಗಳಲ್ಲಿ ಪೊಟ್ಟ (ಹೊಟ್ಟೆ), ತುಪ್ಪ ಎಂಬ ನಾಮಪದಗಳಿವೆ ಅಲ್ಲದೆ ಪೆಟ್ಟು (ಹೊಡೆ), ತೀರ್ (ಶಕ್ಯವಾಗು) ಎಂಬ ಧಾತುಗಳನ್ನು ಬಳಸಿದ್ದಾನೆ.



ಆ. ಪ್ರಾಚೀನ ಶಾಸನಗಳು.

ಹಾಸನ ಜಿಲ್ಲೆಯ ಹಲ್ಮಿಡಿ (ಹನುಮಿಡಿ) ಗ್ರಾಮದಲ್ಲಿ ದೊರೆತಿರುವ ಕ್ರಿಸ್ತಶಕ ೪೫೦ರ ಸುಮಾರಿನ ಕದಂಬ ದೊರೆಗಳ ಶಾಸನವೇ ಪ್ರಸ್ತುತ ಲಭ್ಯವಿರುವ ಕನ್ನಡದ ಪ್ರಾಚೀನ ಬರಹ. ಈ ಶಾಸನವು ಕದಂಬ ದೊರೆಗಳು, ಪಲ್ಲವರೇ ಮೊದಲಾದವರನ್ನು ಸೋಲಿಸಿದ ವಿಜಾ ಅರಸ ಎಂಬ ವೀರ ಸೈನಿಕನಿಗೆ ಬಿಟ್ಟುಕೊಟ್ಟ ದಾನದ ವಿಷಯವನ್ನು ಹೇಳಿದೆ. ಈ ಶಾಸನ ಬಲು ಸುಂದರವಾದ ಗದ್ಯ ಶೈಲಿಯಲ್ಲಿದ್ದು ಇದು ರಚಿತವಾದ ಕನಿಷ್ಠ ೨-೩ ಶತಮಾನಗಳಿಗೂ ಮುಂಚಿನಿಂದಲೂ ಕನ್ನಡವು ಗ್ರಂಥಸ್ತ ಕಾವ್ಯ ಭಾಷೆಯಾಗಿತ್ತು ಎಂಬುದು ವೇದ್ಯವಾಗುತ್ತದೆ. ಹಾಗೆಯೇ ತಮಟ ಕಲ್ಲಿನ ಶಾಸನವು ಕ್ರಿಸ್ತಶಕ ೫೦೦ರದ್ದು ಎಂಬುದಾಗಿ ನಿರ್ಣಯವಾಗಿದೆ. ಬಾದಾಮಿಯ ಚಾಲುಕ್ಯರಾಜ ಮಂಗಲೀಶನ ಕ್ರಿಸ್ತಶಕ ೫೭೮ರ ಚಿಕ್ಕ ಶಿಲಾಶಾಸನದಲ್ಲೂ ಕನ್ನಡದ ಕವಿತೆಯಿದೆ. ಕ್ರಿಸ್ತಶಕ ೭ನೇ ಶತಮಾನದಲ್ಲಿ ಕಪ್ಪೆ‌ಅರಭಟ್ಟನ ಸ್ವಭಾವಚಿತ್ರವಿದ್ದು, ಕನ್ನಡ ತಾಯಿ ಬೇರಾದ ತ್ರಿಪದಿಯ ಮೂಲರೂಪವು ಅದರಲ್ಲಿದೆ. ಇತ್ತೀಚೆಗೆ ಬನವಾಸಿಯಲ್ಲಿ ದೊರೆತ ಕದಂಬರ ಕಾಲದ್ದೆಂದು ಹೇಳಲಾದ ಕ್ರಿಸ್ತಶಕ ೪೫೦ರ ನಾಣ್ಯವೊಂದು ದೊರೆತಿದ್ದು ಅದರಲ್ಲಿ ಕನ್ನಡದ ಅಕ್ಷರಗಳನ್ನು ಟಂಕಿಸಲಾಗಿದೆ. ಇದು ಕನ್ನಡ ಭಾಷಾ ಪುರಾತನತೆಗೆ ಸಾಕ್ಷಿಯಾಗಿದೆ.

ಇ. ಕವಿರಾಜ ಮಾರ್ಗದಲ್ಲಿ ದೊರೆಯುವ ಆಧಾರಗಳು.

ಕ್ರಿಸ್ತಶಕ ೮೫೦ರ ಸುಮಾರಿನಲ್ಲಿ ರಾಷ್ಟ್ರಕೂಟ ದೊರೆ ಅಮೋಘವರ್ಷ ನೃಪತುಂಗನ ಆಸ್ತಾನದಲ್ಲಿ ಕವಿಯಾಗಿದ್ದ ಶ್ರೀವಿಜಯನಿಂದ ರಚಿತನಾದ ಅಲಂಕಾರ ಗ್ರಂಥ ಕವಿರಾಜ ಮಾರ್ಗ. ಇದೇ ಪ್ರಸ್ತುತ ಲಭ್ಯವಿರುವ ಪ್ರಾಚೀನ ಕನ್ನಡ ಸಾಹಿತ್ಯಿಕ ಗ್ರಂಥವೂ ಆಗಿದೆ. ಈ ಗ್ರಂಥವು ಮಹತ್ವ ಪೂರ್ಣವಾಗಿದ್ದು ಇದು ಕನ್ನಡ ನಾಡು, ನುಡಿಗಳ ವಿಸ್ತಾರ, ಸ್ವರೂಪ, ಸಾಹಿತ್ಯ ಸ್ಥಿತಿ, ಕವಿಗಳಿಗೆ ಮಾರ್ಗವನ್ನು ತೋರುವ ವಿಮರ್ಶಾತ್ಮಕ ವಿಚಾರ ಪ್ರಣಾಲಿ ಎಂಬವುಗಳಿಂದ ಸ್ವತಂತ್ರವಾದ ಮತ್ತು ಮೌಲಿಕವಾದ ಗ್ರಂಥವಾಗಿದೆ. ಕನ್ನಡ ಸಾಹಿತ್ಯವು ಅಂದೂ, ಅದಕ್ಕಿಂತ ಬಹಳ ಹಿಂದಿನಿಂದಲೂ ಸಮೃದ್ಧವಾಗಿದ್ದವೆಂಬುದನ್ನು ಪ್ರಮಾಣೀಕರಿಸುತ್ತವೆ. ಕವಿರಾಜಮಾರ್ಗದಲ್ಲಿ ಸಂಸ್ಕೃತ ಗದ್ಯ ಪದ್ಯಗಳಲ್ಲಿಯ ಕವಿಕಾವ್ಯಗಳ ಸ್ತುತಿ ಮಾಡಿದ ನಂತರ ಕನ್ನಡ ಗದ್ಯ-ಪದ್ಯ ಕವಿಗಳ ಹಲವು ಹೆಸರುಗಳನ್ನು ಕೊಡಲಾಗಿದೆ. ಕನ್ನಡ ಸಾಹಿತ್ಯದ ಸಮೃದ್ಧತೆಯನ್ನೂ, ಪ್ರಾಚೀನತೆಯನ್ನೂ ತೋರಿಸಲು ಈ ಆಧಾರಗಳು ಬಹಳ ಸಹಾಯಕವಾಗಿವೆ. ವಿಮಲ, ಉದಯ, ನಾಗಾರ್ಜುನ, ಜಯಬಂಧು, ದುರ್ವಿನೀತರೆಂಬ ಗದ್ಯ ಕವಿಗಳು ಇದ್ದರೆಂಬ ಉಲ್ಲೇಖ ಇದರಲ್ಲಿದೆ. ಕನ್ನಡಾ ಗಬ್ಬದಗಳಲ್ಲಿ ಚಿರಂತನಾಚಾರ್ಯರು ಹೇಳಿದ ಅಗಣಿತ ಗುಣದ ಗದ್ಯಕಥೆಯ ಉಲ್ಲೇಖ, ಎಲ್ಲ ಕಲೆ, ಭಾಷೆ, ಲೋಕ, ಶಾಸ್ತ್ರ ಮುಂತಾದ್ದರ ವರ್ಣನೆಯುಳ್ಳ ವಸ್ತುವಿಚಾರವನ್ನು ಅರಿಯದವನಿಂದ ಗ್ರಂಥರಚನೆ ಆಗುವುದಿಲ್ಲವೆಂದು ಕವಿ ಶ್ರೀವಿಜಯ, ಕವಿರಾಜ ಮಾರ್ಗದಲ್ಲಿ ಹೇಳಿರುವುದು, ಈ ಎಲ್ಲ ಕವಿಗಳು ಅಂದಿಗಿಂತ ಬಹಳ ಹಿಂದೆ ಇದ್ದು ಸಾಧನೆ ಮಾಡಿದ ಮಹಾಕವಿಗಳೆಂಬುದನ್ನು ಸಾರುತ್ತವೆ. ಬೆದೆಂಡೆ- ಚತ್ತಾಣವೆಂಬ ಸಾಹಿತ್ಯ ಪ್ರಕಾರಗಳು ಪುರಾತನ ಕಾಲದಿಂದಲೂ ಇದ್ದವೆಂಬುದನ್ನು ಸಾರುವ ಕವಿರಾಜ ಮಾರ್ಗ, ಕನ್ನಡ ಸಾಹಿತ್ಯದ ಪುರಾತನತೆಗೆ ಅಗತ್ಯ ಸಾಕ್ಷ್ಯ ಒದಗಿಸುತ್ತದೆ.


ಈ. ಇತರೆ ಗ್ರಂಥಗಳಲ್ಲಿ ದೊರೆಯುವ ಆಧಾರಗಳು.

ಕವಿರಾಜ ಮಾರ್ಗದ ನಂತರದ ಕಾಲದ ಅನೇಕ ಸಾಹಿತ್ಯ ಕೃತಿಗಳಾಲ್ಲಿನ ಕೆಲ ಉಲ್ಲೇಖಗಳು ಈ ದಿಕ್ಕಿನಲ್ಲಿ ಬೆಳಕು ಚೆಲ್ಲುತ್ತವೆ. ಆದಿಕವಿ ಪಂಪ "ಪಂಪಭಾರತ"ದ ಕೊನೆಗೆ ಈ ಹಿಂದಿನ ಎಲ್ಲ ಕಾವ್ಯಗಳನ್ನೂ, ಭಾರತಗಳನ್ನೂ ಮೀರಿದ ಕೃತಿ ತನ್ನೆದೆಂದು ಹೇಳಿದ್ದಾನೆ. ಪಂಪ ಮತ್ತು ಶ್ರೀವಿಜಯನ ನಡುವಿನ ಕಾಲದಲ್ಲಿ ಅಷ್ಟೊಂದು ಖ್ಯಾತಿ ಪಡೆದ ಕವಿಗಳಾಗಲೀ, ಭಾರತ ಕೃತಿಗಳಾಗಲೀ ಇಲ್ಲದೇ ಇರುವುದರಿಂದ, ಈ ಒಕ್ಕಣೆಯು ನಿಶ್ಚಿತವಾಗಿ ಕವಿರಾಜಮಾರ್ಗಕ್ಕಿಂತಲೂ ಪೂರ್ವದಲ್ಲಿ ಅನೇಕ ಕನ್ನಡ ಭಾರತ ಕೃತಿಗಳು ರಚಿತವಾಗಿದ್ದವೆಂಬ ಸುಳಿವನ್ನು ನೀಡುತ್ತವೆ. ಹಾಗೆಯೇ, ಕ್ರಿ.ಶ.೪೮೨-೫೨೨ರ ಕಾಲದ ತಲಕಾಡಿನ ಗಂಗರಸ ದುರ್ವಿನೀತನು ಸ್ವತಃ ಸಾಹಿತಿಯಾಗಿದ್ದು ಕನ್ನಡದಲ್ಲಿ ವಡ್ಡ ಕಥೆ (ವಡ್ಡಾರಾಧನೆ)ಯನ್ನು ರಚಿಸಿಹನೆಂದು ರಾಷ್ಟ್ರಕವಿ ಗೋವಿಂದ ಪೈಗಳು ಪ್ರಮಾಣೀಕರಿಸಿದ್ದಾರೆ. ಜೊತೆಗೆ ಈತ "ಶಬ್ದಾವತಾರ"ವೆಂಬ ಕನ್ನಡ ಕೃತಿಯನ್ನೂ ರಚಿಸಿದ್ದಾನೆ.


ಈ ಎಲ್ಲವೂ ಕನ್ನಡ ಸಾಹಿತ್ಯಕ್ಕೆ ಒಂದು ಸಾವಿರದ ಐದುನೂರು ವರ್ಷಗಳಿಗೆ ಮಿಗಿಲಾದ ಪುರಾತನತೆಯಿರುವುದನ್ನು ಸಾಬೀತುಪಡಿಸುತ್ತವೆ.

೨. ಆ ಭಾಷಿಕ ಜನರು ಮೌಲಿಕವೆಂದು ಭಾವಿಸುವ ಪ್ರಾಚೀನ ಸಾಹಿತ್ಯ ಅಥವಾ ವಾಙ್ಮಯ ಆ ಭಾಷೆಯಲ್ಲಿರಬೇಕು.

ಕನ್ನಡ ಭಾಷೆಯ ಜನತೆ ಅತ್ಯಂತ ಮೌಲಿಕವೇಂದು ಭಾವಿಸುವ ಸಾಹಿತ್ಯ ಪರಂಪರೆಯೇ ನಮ್ಮಲ್ಲಿದೆ.
ಕ್ರಿ.ಶ ೮೫೦ ರ ಶ್ರೀವಿಜಯನ - ಕವಿರಾಜಮಾರ್ಗ,
ಕ್ರಿ.ಶ ೭ನೇ ಶತಮಾನದ ಶ್ಯಾಮಕುಂದಾಚಾರ್ಯರ - ಕನ್ನಡಾ ಪ್ರಭೃತ (ಪರಾ ಪದ್ಧತಿ) ಎಂಬ ಶಾಸ್ತ್ರಗ್ರಂಥ,
ಗುಣವರ್ಮನ ಚಂಪೂಕಾವ್ಯದಲ್ಲಿನ ಹರಿವಂಶ,
ಕ್ರಿ.ಶ. ೧೦ನೇ ಶತಮಾನದ ಶಿವಕೋಟ್ಯಾಚಾರ್ಯರ - ವಡ್ಡಾರಾಧನೆ,
ಕ್ರಿ.ಶ.೧೦ನೇ ಶತಮಾನದ ರನ್ನನ - ಗಧಾಯುದ್ಧ,
ಕ್ರಿ.ಶ. ೧೦ನೇ ಶತಮಾನದ ಆದಿಕವಿಪಂಪನ - ಪಂಪ ಭಾರತ,
ಕ್ರಿ.ಶ. ೧೦ನೇ ಶತಮಾನದ ಪಂಪನ - ಶಾಂತಿಪುರಾಣ,
ಕ್ರಿ.ಶ. ೧೧ನೇ ಶತಮಾನದ ದಾಸಿಮಯ್ಯರ - ವಚನಸಾಹಿತ್ಯ.
ಕ್ರಿ.ಶ. ೧೨ನೇ ಶತಮಾನದ ನಾಗಚಂದ್ರನ - ಮಲ್ಲಿನಾಥಪುರಾಣ,
ಕ್ರಿ.ಶ. ೧೨ನೇ ಶತಮಾನದ (೧೨೩೦)ಕೇಶಿ ರಾಜನ - ಶಬ್ದಮಣಿದರ್ಪಣ,
ಕ್ರಿ.ಶ. ೧೨ನೇ ಶತಮಾನದ ಪ್ರಭುದೇವ, ಬಸವಣ್ಣ, ಅಕ್ಕಮಹಾದೇವಿಯರ - ವಚನಸಾಹಿತ್ಯಗಳು,
ಕ್ರಿ.ಶ. ೧೩ನೇ ಶತಮಾನದ ಜನ್ನ, ಹರಿಹರ, ರಾಘವಾಂಕ, ಕಂದ, ಚಂಪು - ವೃತ್ತ, ರಗಳೆ, ಷಟ್ಪದಿಗಳು,
ಕ್ರಿ.ಶ. ೧೫ನೇ ಶತಮಾನದ ಕುಮಾರವ್ಯಾಸನ - ಕನ್ನಡ ಭಾರತ,
ಕ್ರಿ.ಶ. ೧೬ನೇ ಶತಮಾನದಲ್ಲಿ ಶ್ರೀಪಾದರಾಯರಾಗಿ ಪುರಂದರದಾಸರು, ಕನಕದಾಸರಿಂದ - ದಾಸ ಸಾಹಿತ್ಯ,
ಕ್ರಿ.ಶ. ೧೬ನೇ ಶತಮಾನದ ತತ್ವಸಾರಿದ ಸರ್ವಜ್ಞನ - ತ್ರಿಪದಿಗಳು,
ಕ್ರಿ.ಶ. ೧೮ನೇ ಶತಮಾನದ ಗಿರಿಯಮ್ಮ, ಜಗನ್ನಾಥ ದಾಸರ ದಾಸ ಸಾಹಿತ್ಯಗಳು,
ಕ್ರಿ.ಶ. ೨೦ನೇ ಶತಮಾನದ ಮುದ್ದಣ್ಣನ-ಷಪ್ಟದಿಗಳು, ಗದ್ಯಗಳು
ಕನ್ನಡಿಗರು ಮೌಲಿಕವೆಂದು ಭಾವಿಸುವ ಸಾಹಿತ್ಯ್ ಪರಂಪರೆಯಾಸ್ತಿತ್ವಕ್ಕೆ ಸಾಕ್ಷಿಯಾಗಿದೆ.

೨. ಶಾಸ್ತ್ರೀಯ ಭಾಷೆಯು ಮೌಲಿಕವಾಗಿದ್ದು ಪರಭಾಷೆಯಿಂದ ಸ್ವೀಕರಿಸಿರಬಾರದು.

ಭಾಷಾ ಶಾಸ್ತ್ರ ಅರಿತ ಯಾರೇ ಆಗಲಿ ಈ ಒಂದು ಮಾನದಂಡ ಎಷ್ಟು ಅಪ್ರಬುದ್ಧವೆಂಬುದು ತಿಳಿಯುತ್ತದೆ. ಯಾವ ಭಾಷೆಯೇ ಆಗಲಿ ತನ್ನ ಅಂದಂದಿನ ಸುತ್ತಲಿನ ಸಮಾಜದ ಇತರೆ ಭಾಷೆಗಳಿಂದ ಸ್ವೀಕರಿಸುತ್ತಾ ಬೆಳೆಯುತ್ತದೆ. ಹಾಗೆ ಸ್ವೀಕರಿಸಿ ಅರಗಿಸಿಕೊಳ್ಳುವ ಶಕ್ತಿ ಹೆಚ್ಚಿದಷ್ಟೂ ಭಾಷೆಯ ಬೆಳವಣಿಗೆ ಉತ್ಕೃಷ್ಟವಾಗುತ್ತದೆ. ಕನ್ನಡ ಭಾಷಾ ಸಾಹಿತ್ಯವು ಬೇರೆ ಭಾಷೆಯ ಮೇಲೆ ಅವಲಂಬಿತವಾಗದೆ ತನ್ನತನ ಹೊಂದಿರಲು ಬೇಕಾದ ಪುರಾವೆಗಳಿವೆ. ನಮ್ಮ ಕವಿರಾಜ ಮಾರ್ಗದಲ್ಲಿಯೇ, ಕವಿ ಶ್ರೀ ವಿಜಯ ಅಂದಿನ ನಾಡು ನುಡಿಯ ಪರಂಪರೆ ಸಾಹಿತ್ಯ ಸ್ವರೂಪ, ಕವಿಗಳಿಗೆ ಮಾರ್ಗದರ್ಶನ ನೀಡುವ ವಿಚಾರ ಶೈಲಿಗಳಿಂದ ಸ್ವತಂತ್ರ ಶೈಲಿ ಹೊಂದಿದೆ. ಇಲ್ಲಿನ ಜನರ ಆಡು ಭಾಷೆಯಲ್ಲಿಯೇ ಸಾಹಿತ್ಯಪರಂಪರೆಯನ್ನು ಹುಟ್ಟು ಹಾಕಿದ ಕೀರ್ತಿ ನಾಡೀನ ವಚನಕಾರರಿಗೆ ದಾಸ ಸಾಹಿತ್ಯ ನಿರ್ಮಾತೃಗಳಿಗೆ, ಜೈನ ಸಾಹಿತಿಗಳಿಗೆ ಸಲ್ಲುತ್ತದೆ. ಕರ್ನಾಟಕ ಸಂಗೀತಕ್ಕೆ ಅಮೂಲ್ಯ ಕೊಡುಗೆ ನೀಡಿದ, ತ್ಯಾಗರಾಜಾಧಿ ಇತರೆ ಭಾಷಾ ಕವಿಗಳಿಗೆ ಸ್ಪೂರ್ತಿ ನೀಡಿದ ದಾಸ ಸಾಹಿತ್ಯ ಪರಂಪರೆಯಿಂದ ಕನ್ನಡವು ಸಮೃದ್ಧಿ ಹೊಂದಿದೆ. ತ್ರಿಪದಿ, ಚೌಪದಿ, ಷಪ್ಟದಿ, ಕಿಗಳೆ, ಚಂದಸ್ಸು, ಕಂದ ಪದ್ಯ, ಚಂಪು ಶೈಲಿಯ ಸಾಹಿತ್ಯ ರತ್ನಗಳು ಆಯಾ ಕಾಲದ ಸಾಮಾಜಿಕ ಸ್ಥಿತಿಗೆ ಹಿಡಿದ ಕನ್ನಡಿಯಾಗಿದ್ದವು. ಇವೆಲ್ಲಕ್ಕೂ ಕಳಶವಿಟ್ಟಂತೆ ಕನ್ನಡ ನಾಡಿನಲ್ಲಿರುವ ಅಘಾದವಾದ ಜಾನಪದ ಸಾಹಿತ್ಯ, ಕನ್ನಡ ಸಾಹಿತ್ಯ ಪರಂಪರೆಯ ಸ್ವಾವಲಂಬತೆಯನ್ನು ಸಾಬೀತುಪಡಿಸುತ್ತದೆ.


೪. ಶಾಸ್ತ್ರೀಯ ಭಾಷೆಯು ಅದರ ಮುಂದಿನ ರೂಪದಿಂದ ಭಿನ್ನವಾಗಿರಬಹುದು ಅಥವಾ ಅದರ ಬೆಳವಣಿಗೆಯೇ ಸ್ಥಗಿತಗೊಂಡಿರಬಹುದು.

ಇದು ನಿಜಕ್ಕೂ ಒಂದು ಮಾನದಂಡವಲ್ಲ. ಇದು ಆ ಭಾಷೆಗೆ ನೀಡಲಾದ ರಿಯಾಯಿತಿ. ಕನ್ನಡ ಭಾಷಾ ಬೆಳವಣಿಗೆಯೂ ಕೂಡ ಕಾಲಕಾಲಕ್ಕೆ ಆಗುತ್ತಾ ಇಂದಿನ ರೂಪ ಪಡೆದಿದೆ. ಈ ಬೆಳವಣಿಗೆ ಕೂಡ ಸಕಾರಾತ್ಮವಾಗಿದ್ದು ಇಂದು ಕನ್ನಡ ವಿಶ್ವದ ಅತ್ಯಂತ ವೈಜ್ಞಾನಿಕ ಭಾಷೆಯಾಗಿ ನಿಂತಿದೆ. ವಿಶ್ವದಲ್ಲಿಯೇ ಭಾರತೀಯ ಭಾಷೆಗಳಿಗೆ ಒಂದು ಮಹತ್ವವಿದೆ. ಏಕೆಂದರೆ ಇವುಗಳು ಶಬ್ದಾಧಾರಿತ ಅಕ್ಷರಗಳನ್ನು ಹೊಂದಿದೆ. ಭಾಷಾ ವಿಜ್ಞಾನಿಗಳು ಮನುಷ್ಯ ಪ್ರಾಣಿ ಹೊರಡಿಸಬಲ್ಲ ಸುಮಾರು ೨೫೦ ಸ್ವರಗಳನ್ನು ಗುರುತಿಸಿದ್ದಾರೆ. ಭಾರತೀಯ ಭಾಷೆಗಳ ಮೂಲಕ್ಷರಗಳು ಇವನ್ನೇ ಹೋಲುವುದರಿಂದ ಇಲ್ಲಿ ಉಚ್ಚಾರಣೆಗೂ, ಲಿಪಿಗೂ ಅಂತಹ ವ್ಯತ್ಯಾಸವಿಲ್ಲ. ಉಳಿದದೆಲ್ಲ ಭಾಷೆಗಳಿಗಿಲ್ಲದ ವಿಸ್ತಾರ ಹೊಂದಿರುವ ಕನ್ನಡದಲ್ಲಿ ನಾವು ಉಚ್ಚರಿಸುವುದನ್ನೇ ಬರೆಯಬಹುದು. ಬರೆದುದನ್ನೇ ಉಚ್ಚರಿಸಬಹುದು. ಉದಾಹರಣೆಗೆ ಕಾವೇರಿಯೆಂಬುದನ್ನು ಅಕ್ಷರ ಬಲ್ಲ ಎಲ್ಲಾ ಕನ್ನಡಿಗರು ಒಂದೇ ತೆರನಾಗಿ ಉಚ್ಚರಿಸುತ್ತಾರೆ ಮತ್ತು ಬರೆಯುತ್ತಾರೆ. ದೇವನಾಗರಿ ಲಿಪಿಯಲ್ಲೂ ಇರದಂತಹ ಸ್ವರಗಳು ಕನ್ನಡದಲ್ಲಿವೆ. ಒ ಮತ್ತು ಓ, ಎ ಮತ್ತು ಏ ಎಂಬ ಭಿನ್ನ ಉಚ್ಚಾರಣೆಗಳಿವೆ. ಕನ್ನಡ ಭಾಷೆಗೆ ವಿಶ್ವದ ಅತ್ಯಂತ ಸುಂದರ ಲಿಪಿಯೆಂಬ ಹೆಗ್ಗಳಿಕೆ ಕೂಡ ಇದೆ. * ರಾಷ್ಟ್ರದ ಹಿರಿಯ ನಾಯಕರಾದ ಶ್ರೀ ವಿನೋಬಾ ಭಾವೆಯವರು ಕನ್ನಡವನ್ನು " ವಿಶ್ವಲಿಪಿಗಳ ರಾಣಿ " ಎಂದು ಕರೆದಿದ್ದಾರೆ. * ಅಲ್ಲದೆ ದೇಶದಲ್ಲೇ ಅತಿ ಹೆಚ್ಚಿನ ಜ್ಞಾನಪೀಠ ಪ್ರಶಸ್ತಿಗಳು ಕನ್ನಡ ಸಾಹಿತಿಗಳ ಪಾಲಾಗಿದ್ದು ಕನ್ನಡ ಸಾಹಿತ್ಯದ ಹಿರಿಮೆಯನ್ನು ತೋರಿಸುತ್ತದೆ.

೧ ಕುವೆಂಪು.
೨. ದ.ರಾ.ಬೇಂದ್ರೆ.
೩. ಶಿವರಾಮಕಾರಂತ.
೪. ಮಾಸ್ತಿವೆಂಕಟೇಶ್ ಅಯ್ಯಂಗಾರ್.
೫. ವಿ.ಕೃ.ಗೋಕಾಕ್.
೬. ಅನಂತಮೂರ್ತಿ.
೭. ಗಿರೀಶ್ ಕಾರ್ನಾಡ್.
ಹೀಗಾಗಿ ಕನ್ನಡ ಶಾಸ್ತ್ರೀಯವು, ವೈಜ್ಞಾನಿಕವಾಗಿ ಉತ್ಕೃಷ್ಟವಾದ ಭಾಷೆಯಾಗಿದೆ.




ಚಿತ್ರ : ದೆಹಲಿಯ ಪ್ರತಿಭಟನೆ ವೇಳೆ ಕೇಂದ್ರ ಸಚಿವ ಶಿವರಾಜ್ ಪಾಟೇಲ್ ರವರ ಭೇಟಿ.


ಕೇಂದ್ರ ಸರ್ಕಾರಕ್ಕೆ ನಮ್ಮ ಹಕ್ಕೊತ್ತಾಯ ಸಲ್ಲಿಕೆ.

ಗೌರವಾನ್ವಿತರೇ,


ಈ ಎಲ್ಲಾ ಸಮರ್ಥನೆಗಳನ್ನು ನಿಮಗೆ ಸಲ್ಲಿಸುವ ಸಲುವಾಗಿ ನಾವು, ಇಡೀ ಪಂಚಕೋಟಿ ಕನ್ನಡಿಗರ ಧ್ವನಿಯಾಗಿ, ಪ್ರತಿನಿಧಿಗಳಾಗಿ ಇಲ್ಲಿಗೆ ಬಂದಿದ್ದೇವೆ. ನೀವು ಈಗಲಾದರೂ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಲು ಮುಂದಾಗುವಿರೆಂದು ಭಾವಿಸುತ್ತೇವೆ.

ಅನೇಕ ಪ್ರದೇಶ,ಭಾಷೆ, ಸಂಸ್ಕೃತಿ, ಜನಾಂಗಗಳನ್ನು ಹೊಂದಿರುವ ಭಾರತ ದೇಶದ ಬುನಾದಿಯೇ ಪರಸ್ಪರ ಗೌರವ ತೋರಿಸುವುದರಲ್ಲಿದೆ. ಹೀಗಿದ್ದಾಗ ಒಂದು ಭಾಷೆ ಮತ್ತೊಂದಕ್ಕಿಂತ ಮೇಲು ಕೀಳು ಎಂಬ ವರ್ಗೀಕರಣ ಎಷ್ಟರಮಟ್ಟಿಗೆ ಸಮಂಜಸವೆಂದು ಈಗ ಚಿಂತಿಸಬೇಕಾಗಿದೆ. ಪ್ರಾಚೀನತೆ, ಮೌಲ್ಯ, ಅನನ್ಯತೆಗಳೆದರಲ್ಲು ಒಂದಕ್ಕೊಂದು ಕಡಿಮೆ ಇರದ ಎರಡು ಭಾಷೆಗಳಲ್ಲಿ ಒಂದಕ್ಕೆ ಮಾನ್ಯತೆ ನೀಡಿ ಮತ್ತೊಂದನ್ನು ಕಡೆಗಣಿಸುವುದು ಇಡಿ ವ್ಯವಸ್ಥೆಗೆ ಮಾರಕವಾಗುವಂತಹ ನಿಲುವಲ್ಲವೇ?.



ಗೌರವಾನ್ವಿತ ಕೇಂದ್ರ ಸರ್ಕಾರ, ಶಾಸ್ತ್ರೀಯ ಭಾಷಾ ಸ್ಥಾನಮಾನ ತೀರ್ಮಾನಿಸಲು ನೇಮಿಸಿರುವ ಸಮಿತಿಗೆ ಶೀಘ್ರವಾಗಿ ಪರಿಗಣಿಸುವಂತೆ ಆದೇಶ ನೀಡಬೇಕೆಂದು ಒತ್ತಾಯ ಮಾಡುತ್ತೇವೆ. ಘನಕೇಂದ್ರ ಸರ್ಕಾರವು ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ನೀಡುವುದಾಗಿ ಘೋಷಿಸಿ ಕರ್ನಾಟಕ ಏಕೀಕರಣದ ಐವತ್ತನೇ ವರ್ಷದ "ಸುವರ್ಣ ಕರ್ನಾಟಕ" ಆಚರಣೆಗೆ ಅರ್ಥಪೂರ್ಣ ಕೊಡುಗೆ ನೀಡಬೇಕೆಂದು ಆಗ್ರಹಿಸುತ್ತೇವೆ.

Tuesday, July 6, 2010