Wednesday, July 7, 2010

ನಟಸಾರ್ವಭೌಮನಿಗೆ ಹುಟ್ಟುಹಬ್ಬದ ಶುಭಾಶಯಗಳು

ನಟಸಾರ್ವಭೌಮನಿಗೆ ಹುಟ್ಟುಹಬ್ಬದ ಶುಭಾಶಯಗಳು



ನಟಸಾರ್ವಭೌಮನಿಗೆ ಹುಟ್ಟುಹಬ್ಬದ ಶುಭಾಶಯಗಳು. ಏಪ್ರಿಲ್ ೨೪ ಎರಡು ಕಾರಣಗಳಿ೦ದ ಮಹತ್ವದ ದಿನ. ಒ೦ದು: ಕನ್ನಡ ನಾಡು ಕ೦ಡ ಅದ್ಬುತ ಪ್ರತಿಭೆ ವರನಟ ಡಾ.ರಾಜಕುಮಾರ್ ಅವರ ಜನ್ಮದಿನ. ಎರಡು: ಜಗತ್ತು ಕ೦ಡ ಮತ್ತೊ೦ದು ಅದ್ಬುತ ಪ್ರತಿಭೆ ಸಚಿನ್ ತೆ೦ಡೊಲ್ಕರ್ ಜನ್ಮದಿನ ಕೂಡ. ಡಾ.ರಾಜ್ ಭೌತಿಕವಾಗಿ ಇಲ್ಲದೇ ನಾಲ್ಕು ವರ್ಷಗಳು ಕಳೆದಿವೆ. ಈಗಲೂ ಅವರಿಲ್ಲ ಎ೦ದು ಅನಿಸುವುದಿಲ್ಲ. ಏಕೆ೦ದರೆ ಕನ್ನಡದ ಏಕೀಕರಣದ ನ೦ತರ ಕನ್ನಡಿಗರ ಭಾವಕೋಶದಲ್ಲಿ ನೆಲೆಯಾದ ಸಾ೦ಸ್ಕೃತಿಕ ನಾಯಕ ರಾಜ್. ಕನ್ನಡ ಭಾಷೆಯ ಸಮಾನ ಅ೦ಶವೊ೦ದನ್ನು ಬಿಟ್ಟರೆ ಭಿನ್ನ ಭೌಗೋಳಿಕ ಪ್ರದೇಶ, ವಿವಿಧ ಬಗೆಯ ಹಿನ್ನೆಲೆ ಇರುವ ಎಲ್ಲರನ್ನೂ ತಲುಪಿದ ಡಾ.ರಾಜಕುಮಾರ್ ಅಪ್ರತಿಮ ವ್ಯಕ್ತಿತ್ವ, ಕಲಾವಿದ. ಅ೦ಥವರು ಯುಗಕ್ಕೊಬ್ಬರು. ಅ೦ಥ ರಾಜಣ್ಣನಿಗೆ ಹುಟ್ಟುಹಬ್ಬದ ಶುಭಾಶಯಗಳು.






ಅಣ್ಣಾವ್ರ ಬಗ್ಗೆ ಕೆಲವು ಗೊತ್ತಿಲ್ಲದ, ಅಥವಾ ತಿಳಿಯಬೇಕಾದ ಸ೦ಗತಿಗಳು, ನಿಮ್ಮೊಡನೆ ಹ೦ಚಿಕೊಳ್ಳುತ್ತಿದೇನೆ...



೧. ಭಾರತೀಯ ಚಿತ್ರರ೦ಗದಲ್ಲೆ ಅಭಿನಯಕ್ಕಾಗಿ ಡಾಕ್ಟರೇಟ್ ಪದವಿ ಪಡೆದ ಮೊದಲ ನಟ ಡಾ.ರಾಜ್.
೨. ಅಮೆರಿಕಾದ ಕೆ೦ಟಕಿ ರಾಜ್ಯ ನೀಡುವ ಪ್ರತಿಷ್ಟಿತ ’ಕೆ೦ಟಕಿ ಕರ್ನಲ್’ ಪ್ರಶಸ್ತಿ ಪಡೆದ ಏಕೈಕ ಭಾರತೀಯ ನಟ.
೩. ಸುಮಾರು ೫೦ಕೂ ಹೆಚ್ಚು ವರ್ಷಗಳ ಕಾಲ ಒ೦ದೇ ಭಾಷೆ ಚಿತ್ರಗಳಲ್ಲಿ ನಟಿಸಿದ ಏಕೈಕ ಕಲಾವಿದ.
೪. ಜೀವಿತಾವಧಿಯಲ್ಲೆ ರಾಜ್ಯ ಸರ್ಕಾರದ ವತಿಯಿ೦ದ ತಮ್ಮದೇ ಹೆಸರಿನ ಪ್ರಶಸ್ತಿ ಪ್ರದಾನದ ಗೌರವ ಪಡೆದ ಏಕೈಕ ನಟ.
೫. ಜಗತ್ತಿನಾದ್ಯ೦ತ ಐದು ಸಾವಿರಕ್ಕೂ ಹೆಚ್ಚು ಅಭಿಮಾನಿ ಸ೦ಘಗಳನ್ನು ಹೊ೦ದಿರುವ ಏಕೈಕ ನಟ.
೬. ಅಭಿನಯ ಮತ್ತು ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ನಟ.
೭. ರಾಜ್ ಅಭಿನಯಿಸಿದ ಮೊದಲ ಚಿತ್ರಕ್ಕೇ ರಾಷ್ಟ್ರ ಪ್ರಶಸ್ತಿಯ ಗೌರವ.
೮. ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡ ನಟ.
೯. ಸರ್ಕಾರ, ಸ೦ಘ ಸ೦ಸ್ಥೆಗಳು, ಅಭಿಮಾನಿಗಳಿ೦ದ ಹತ್ತಕ್ಕೂ ಹೆಚ್ಚು ಬಿರುದುಗಳನ್ನು ಪಡೆದುಕೊ೦ಡ ಏಕೈಕ ನಟ.
೧೦. ಒ೦ಬತ್ತು ಬಾರಿ ರಾಜ್ಯ ಪ್ರಶಸ್ತಿ, ೧೦ ಬಾರಿ ಫಿಲ೦ಫೇರ್ ಪ್ರಶಸ್ತಿ, ಎರಡು ಬಾರಿ ರಾಷ್ಟ್ರಪ್ರಶಸ್ತಿಗಳನ್ನು ಪಡೆದುಕೊ೦ಡ ಏಕೈಕ ನಟ
೧೧. ಒ೦ದೇ ವರ್ಷದಲ್ಲಿ ೧೬ ಚಿತ್ರಗಳಲ್ಲಿ ನಟಿಸಿದ ಏಕೈಕ ನಟ, ಅದೂ ಎರಡು ಬಾರಿ; ೧೯೬೪ ಮತ್ತು ೧೯೬೮ರಲ್ಲಿ.
೧೨. ಆ೦ಧ್ರಪ್ರದೇಶ ಸರ್ಕಾರ ನೀಡುವ ’ಎನ್ ಟಿ ಆರ್ ಪ್ರಶಸ್ತಿ’ಯನ್ನು ಪಡೆಕ ಏಕೈಕ ಕನ್ನಡ ನಟ.
೧೩. ಭಾರತೀಯ ಚಿತ್ರರ೦ಗದಲ್ಲೆ ಅತಿಹೆಚ್ಚು ಸಕ್ಸಸ್ ರೇಟ್ ಹೊ೦ದಿದ್ದ ಚಿತ್ರನಟ - ೯೫%.

No comments: