Sunday, August 29, 2010

ಸುಮ್ನೆ ಟೈಂಪಾಸಿಗಲ್ವಾ?

ಕಯ್ಯಾರ ಕಿಂಜ಼ಣ್ಣ ರೈ ಅವ್ರು ಚೆನ್ನಾಗಿ ಭಾಷಣ ಮಾಡ್ತಾರೆ. ಆದ್ರೆ ಅದು ಅವ್ರಿಗೂ ಗೊತ್ತಾಗಿಬಿಟ್ಟಿದೆ. ಕಾಸರಗೋಡು ಚಿನ್ನಾಗೆ ರೈ ಭಾಷಣ ತಡಕೊಳ್ಳೋಕಾಗಲ್ಲ. ರೈಗಳು ಭಾಷಣ ಚಚ್ತಾ ಇದ್ರೆ, “ಅಯ್ಯೋ ಕೈಯಾರ ಕೊಂದಣ್ಣ ರೈ” ಅಂತಾ ಕೂಗ್ತಾರೆ.

*

ಸಾಹಿತ್ಯ ಅಕಾಡೆಮಿಗೆ ಮೆಂಬರ್ಸ್ ಲಿಸ್ಟ್ ಅನೌನ್ಸ್ ಆಗಿತ್ತು. ಲೀಲಾದೇವಿ ಆರ್ ಪ್ರಸಾದ್ ಕಾಲ. ಸಾಹಿತಿಗಳ್ಯಾರು, ಪಾರ್ಟಿ ವರ್ಕರ್ಸ್ ಯಾರು ಅನ್ನೋದೇ ಗೊತ್ತಾಗ್ತಿರ್ಲಿಲ್ಲ. ಅಕಾಡೆಮಿ ಮೊದಲ ಸಭೇಲಿ ಒಂದು ವಾರ್ತಾಪತ್ರ ತರ್ಬೇಕು ಅಂತಾ ಚರ್ಚೆಯಾಗ್ತಿತ್ತು. ಅಥಣಿಯಿಂದ ಹೀಗೇ ಯಾರನ್ನೋ ಮೆಂಬರ್ ಮಾಡ್ಬಿಟ್ಟಿದ್ರು. ಸಾಹಿತ್ಯದ ಗಂಧಾನೂ ಇರ್ಲಿಲ್ಲ, ಗಾಳಿನೂ ಇರ್ಲಿಲ್ಲ. ನಾನೂ ವಾರ್ತಾಪತ್ರಕ್ಕೆ ಆರ್ಟಿಕಲ್ ಬರೀತೀನಿ ಅಂತಾ ಅವ್ರು ಎದ್ದು ನಿಂತ್ರು. ಸಭೇಲಿ ಜಯಂತ್ ಕಾಯ್ಕಿಣಿ ಇದ್ರು. ಏನ್ ಬರೀತೀರಿ ಅಂತಾ ಕೇಳಿದ್ರು. ಅಥಣಿ ಚಪ್ಲಿಗೆ ಫೇಮಸ್ಸು ಸಾರ್, ಅದ್ರ ಬಗ್ಗೆ ಬರೀತೀನಿ ಅಂದ್ರು. ಕಾಯ್ಕಿಣಿ ಗಂಭೀರವಾಗೇ ಹೇಳಿದ್ರು-

“ಖಂಡಿತ ಬರೀರಿ. ಆದ್ರೆ ಸಾಹಿತಿಗಳು ಮತ್ತು ಚಪ್ಪಲಿ ಸೇವೆ ಅಂತಾ ಬರೀರಿ.”

*

ವೈಯೆನ್ಕೆ ಫ್ರೆಂಡ್ಸ್ ಜೊತೆ ಬಾರಿನಲ್ಲಿ ಕೂತಿದ್ರು. ಎಷ್ಟೊತ್ತಾದ್ರೂ ವೇಯ್ಟರ್ ಬರ್ಲಿಲ್ಲ. ತಕ್ಷಣ ಹೇಳಿದ್ರು-

ಕರುಣಾಳು ಬಾ ಬೆಳಕೆ
ಮುಸುಕಿದೀ ಪಬ್ಬಿನಲಿ
ಕೈಹಿಡಿದು ಕುಡಿಸೆನ್ನನು…

(ಇವೆಲ್ಲ ಹೇಳಿದ್ದು ಕೇಳಿದ್ದು. ಕರೆಕ್ಟೊ ಸುಳ್ಳೊ ನಮ್ಗೂ ಗೊತ್ತಿಲ್ಲ. ಸುಮ್ನೆ ಟೈಂಪಾಸಿಗಲ್ವಾ? ಎಂಜಾಯ್ ಮಾಡಿ. ಯಾರಿಗಾದ್ರೂ ನಿಜ ಗೊತ್ತಿದ್ರೆ ಒಂದು ಮೇಲ್ ಮಾಡಿ. ಅಬ್ಜೆಕ್ಷನ್ ಇದ್ರೆ ಗಂಟಲೇರಿಸಿ. ಬ್ಲಾಗಿನಿಂದ ಆ ಐಟಮ್ ಡಿಲಿಟ್ ಆಗುತ್ತೆ.)

No comments: