Tuesday, August 31, 2010

‘ಬೌದ್ಧಿಕ ತೃಪ್ತಿ ನೀಗದ ಪತ್ರಿಕೆಗಳು’…

31 Aug 2010

ಜಾಹೀರಾತು ಹಾಗೂ ಮಾರುಕಟ್ಟೆ ಆಧಾರಿತ ಕಾರ್ಯ ನಿರ್ವಹಿಸುತ್ತಿರುವ ಸುದ್ದಿ ಪತ್ರಿಕೆ ಹಾಗೂ ನಿಯತಕಾಲಿಕೆಗಳು ಓದುಗರ ಬೌದ್ಧಿಕ ಹಸಿವನ್ನು ನೀಗಿಸಲು ಇತ್ತೀಚಿನ ದಿನಗಳಲ್ಲಿ ಸೋತಿವೆ ಎಂದು ಸಾಹಿತಿ ಫ್ರೊ. ಶಿವರಾಮು ಕಾಡನಕುಪ್ಪೆ ಇಲ್ಲಿ ಅಭಿಪ್ರಾಯಪಟ್ಟರು.

ತಿಂಗಳು ಕನ್ನಡ ಮಾಸ ಪತ್ರಿಕೆಯು ಭಾನುವಾರ ರಂಗಾಯಣದ ಶ್ರೀರಂಗದಲ್ಲಿ ಏರ್ಪಡಿಸಿದ್ದ ಪತ್ರಿಕೆಯ ಮೊದಲ ವಾರ್ಷಿಕೋತ್ಸವ ಹಾಗೂ ತಿಂಗಳು ಮತ್ತು ಸೈಕಲ್ ಬ್ರಾಂಡ್ಯ್ ಅಗರಬತ್ತಿ ಕಥಾ ಮತ್ತು ಕಾವ್ಯ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ನಿಯತಕಾಲಿಕೆಗಳ ಸ್ವರೂಪ ಮತ್ತು ಪ್ರತಿಕ್ರಿಯೆ ವಿಷಯ ಕುರಿತು ಮಾತನಾಡಿದರು.

ದಿನಪತ್ರಿಕೆಗಳು ತಮ್ಮ ಜವಾಬ್ದಾರಿಯನ್ನು ಮರೆತಿವೆ ಎಂಬುದನ್ನು ಸಾಮಾನ್ಯೀಕರಿಸುವಷ್ಟು ಇಂದು ಸಮಸ್ಯೆ ದೊಡ್ಡದಾಗಿದೆ. ಆದರೆ ನಿಯತಕಾಲಿಕೆಗಳು ಕೊಂಚವಾದರೂ ತಮ್ಮ ಕೆಲಸದ ಮಹತ್ವವನ್ನು ಉಳಿಸಿಕೊಂಡಿವೆ ಎನ್ನಬಹುದು.

ಈ ನಿಟ್ಟಿನಲ್ಲಿ ನಿಯತಕಾಲಿಕೆಗಳ ಪ್ರಕಾಶಕರು, ಬದ್ಧತೆಯಿಂದ ಕೆಲಸ ಮಾಡಿ, ಸಮಾಜದಲ್ಲಿ ಸಾಹಿತ್ಯಿಕ, ಸಾಮಾಜಿಕ ಇತ್ಯಾದಿ ಜವಾಬ್ದಾರಿಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವಂತೆ ಮಾಡಬೇಕು. ಸಮಾಜದಲ್ಲಿ ಇವತ್ತಿಗೂ ಜ್ವಲಂತವಾಗಿರುವ ಅಸಮಾನತೆ, ಬಡತನಗಳನ್ನು ನಿವಾರಿಸಲು ಸೂಕ್ತ ರೀತಿಯ ಮಾರ್ಗಗಳನ್ನು ತೋರಿಸಿಕೊಡಬೇಕು ಎಂದು ಹೇಳಿದರು.

ಪತ್ರಿಕೋದ್ಯಮ ಇಂದು ಮಾಧ್ಯಮವಾಗಿದ್ದು, ಜಾಹೀರಾತುದಾರರು ಇಂದು ಮಾಧ್ಯಮಗಳನ್ನು ನಿಯಂತ್ರಿಸುತ್ತಿದ್ದಾರೆ. ಹಾಗಾಗಿ ಏನೇ ತಪ್ಪು ಮಾಡಿದರೂ ಮೌನ ತಾಳುವ, ಪ್ರಶ್ನಿಸದ ಮನೋಭಾವವನ್ನು ಮಾಧ್ಯಮಗಳು ಇತ್ತೀಚೆಗೆ ರೂಢಿಸಿಕೊಂಡಿವೆ ಎಂದರು.

ಇತ್ತೀಚಿನ ದಿನಗಳಲ್ಲಿ ಅಪರಾಧ, ಲೈಂಗಿಕತೆ ಪತ್ರಿಕೆಗಳಲ್ಲಿ ವಿಜೃಂಭಿಸುತ್ತಿದೆ. ಸಿನಿಮಾ ಕ್ಷೇತ್ರದಲ್ಲಿ ನಿರ್ದೇಶಕರು ತಮ್ಮದೇ ಸೂತ್ರಗಳನ್ನು ಬಳಸಿಕೊಂಡು, ಸೃಷ್ಟಿಸಿಕೊಂಡು ಪ್ರೇಕ್ಷಕರ ಮೇಲೆ ಹೇರುತ್ತಿರುವಂತೆ, ಪತ್ರಿಕೆಗಳೂ ಈ ಹೇರುವ ಕೆಲಸವನ್ನು ಮಾಡುತ್ತಿವೆ ಎಂದು ವಿಷಾದಿಸಿದರು.

ಮಾಧ್ಯಮಗಳು ಮೂಲಭೂತವಾದಿಗಳ ಜೊತೆಗೆ ಗುರುತಿಸಿಕೊಳ್ಳುವುದು ಅತಿ ಅಪಾಯಕಾರಿ ಬೆಳವಣಿಗೆಯಾಗುತ್ತಿದೆ. ಜಾತಿ, ಧರ್ಮಗಳನ್ನು ಬಿಂಬಿಸುವ ಕನ್ನಡಿಗಳಾಗಿ ಮಾಧ್ಯಮಗಳು ಎಂದಿಗೂ ಗುರುತಿಸಿಕೊಳ್ಳಬಾರದು. ಈ ಕೆಲಸವನ್ನು ಅವು ಮಾಡಿದ್ದೇ ಆದಲ್ಲಿ ಅವುಗಳ ಮೇಲಿರುವ ಗೌರವ ಕುಂದುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಪತ್ರಿಕೋದ್ಯಮಿ ರಾಜಶೇಖರ ಕೋಟಿ ಮಾತನಾಡಿ, ದೂರದರ್ಶನದಿಂದ ಇಂದು ನಿಯತಕಾಲಿಕೆಗಳಿಗೆ ಮಾರುಕಟ್ಟೆ ಕ್ಷೀಣಿಸಿದೆ. ಟಿವಿಗಳಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿಗಳಿಗೆ ದಾಸರಾಗಿರುವ ನಾವು ಪತ್ರಿಕೆಗಳನ್ನು ಓದುವುದನ್ನು ಕಡಿಮೆ ಮಾಡಿದ್ದೇವೆ. ಆದರೆ ಪತ್ರಿಕೆಗಳಿಗೆ ಪ್ರೋತ್ಸಾಹದ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾನು ತಿಂಗಳು ಪತ್ರಿಕೆಗೆ ಜಾಹೀರಾತು ನೀಡಿ ಪ್ರೋತ್ಸಾಹಿಸುವ ಕೆಲಸ ಮಾಡುವೆ ಎಂದರು.

ಪತ್ರಿಕೆಯ ವೆಬ್‌ಸೈಟ್‌ಗೆ ಪ್ರಕಾಶಕ ಬಿ.ಎನ್. ಶ್ರೀರಾಮು ಚಾಲನೆ ನೀಡಿದರು. ಹಿರಿಯ ಸಾಹಿಪ್ರೊ.ಎಚ್.ಎಲ್.ಕೇಶವಮೂರ್ತಿ ಅವರು ಇಂದಿನ ಕನ್ನಡ ನಿಯತಕಾಲಿಕೆಗಳ ಸ್ಥಿತಿಗತಿ, ಮಂಜುನಾಥ ಲತಾ ಅವರು ತಿಂಗಳು ಮಾಸಪತ್ರಿಕೆ ಒಂದು ಪ್ರತಿಕ್ರಿಯೆ ನಡೆಸಿಕೊಟ್ಟರು. ಎನ್.ಆರ್. ಪ್ರತಿಷ್ಠಾನದ ಹರೀಶ್ ಅವರು ಕಥಾ ಮತ್ತು ಕಾವ್ಯ ಪುರಸ್ಕಾರದ ವಿತರಣೆ ಮಾಡಿದರು. ಅಭಿರುಚಿ ಗಣೇಶ್ ಉಪಸ್ಥಿತರಿದ್ದರು.

ಬೌದ್ಧಿಕ ತೃಪ್ತಿ ನೀಗದ ಪತ್ರಿಕೆಗಳುಜಾಹೀರಾತು ಹಾಗೂ ಮಾರುಕಟ್ಟೆ ಆಧಾರಿತ ಕಾರ್ಯ ನಿರ್ವಹಿಸುತ್ತಿರುವ ಸುದ್ದಿ ಪತ್ರಿಕೆ ಹಾಗೂ ನಿಯತಕಾಲಿಕೆಗಳು ಓದುಗರ ಬೌದ್ಧಿಕ ಹಸಿವನ್ನು ನೀಗಿಸಲು ಇತ್ತೀಚಿನ ದಿನಗಳಲ್ಲಿ ಸೋತಿವೆ ಎಂದು ಸಾಹಿತಿ ಫ್ರೊ. ಶಿವರಾಮು ಕಾಡನಕುಪ್ಪೆ ಇಲ್ಲಿ ಅಭಿಪ್ರಾಯಪಟ್ಟರು.

ತಿಂಗಳು ಕನ್ನಡ ಮಾಸ ಪತ್ರಿಕೆಯು ಭಾನುವಾರ ರಂಗಾಯಣದ ಶ್ರೀರಂಗದಲ್ಲಿ ಏರ್ಪಡಿಸಿದ್ದ ಪತ್ರಿಕೆಯ ಮೊದಲ ವಾರ್ಷಿಕೋತ್ಸವ ಹಾಗೂ ತಿಂಗಳು ಮತ್ತು ಸೈಕಲ್ ಬ್ರಾಂಡ್ಯ್ ಅಗರಬತ್ತಿ ಕಥಾ ಮತ್ತು ಕಾವ್ಯ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ನಿಯತಕಾಲಿಕೆಗಳ ಸ್ವರೂಪ ಮತ್ತು ಪ್ರತಿಕ್ರಿಯೆ ವಿಷಯ ಕುರಿತು ಮಾತನಾಡಿದರು.

ದಿನಪತ್ರಿಕೆಗಳು ತಮ್ಮ ಜವಾಬ್ದಾರಿಯನ್ನು ಮರೆತಿವೆ ಎಂಬುದನ್ನು ಸಾಮಾನ್ಯೀಕರಿಸುವಷ್ಟು ಇಂದು ಸಮಸ್ಯೆ ದೊಡ್ಡದಾಗಿದೆ. ಆದರೆ ನಿಯತಕಾಲಿಕೆಗಳು ಕೊಂಚವಾದರೂ ತಮ್ಮ ಕೆಲಸದ ಮಹತ್ವವನ್ನು ಉಳಿಸಿಕೊಂಡಿವೆ ಎನ್ನಬಹುದು.

ಈ ನಿಟ್ಟಿನಲ್ಲಿ ನಿಯತಕಾಲಿಕೆಗಳ ಪ್ರಕಾಶಕರು, ಬದ್ಧತೆಯಿಂದ ಕೆಲಸ ಮಾಡಿ, ಸಮಾಜದಲ್ಲಿ ಸಾಹಿತ್ಯಿಕ, ಸಾಮಾಜಿಕ ಇತ್ಯಾದಿ ಜವಾಬ್ದಾರಿಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವಂತೆ ಮಾಡಬೇಕು. ಸಮಾಜದಲ್ಲಿ ಇವತ್ತಿಗೂ ಜ್ವಲಂತವಾಗಿರುವ ಅಸಮಾನತೆ, ಬಡತನಗಳನ್ನು ನಿವಾರಿಸಲು ಸೂಕ್ತ ರೀತಿಯ ಮಾರ್ಗಗಳನ್ನು ತೋರಿಸಿಕೊಡಬೇಕು ಎಂದು ಹೇಳಿದರು.

ಪತ್ರಿಕೋದ್ಯಮ ಇಂದು ಮಾಧ್ಯಮವಾಗಿದ್ದು, ಜಾಹೀರಾತುದಾರರು ಇಂದು ಮಾಧ್ಯಮಗಳನ್ನು ನಿಯಂತ್ರಿಸುತ್ತಿದ್ದಾರೆ. ಹಾಗಾಗಿ ಏನೇ ತಪ್ಪು ಮಾಡಿದರೂ ಮೌನ ತಾಳುವ, ಪ್ರಶ್ನಿಸದ ಮನೋಭಾವವನ್ನು ಮಾಧ್ಯಮಗಳು ಇತ್ತೀಚೆಗೆ ರೂಢಿಸಿಕೊಂಡಿವೆ ಎಂದರು.

ಇತ್ತೀಚಿನ ದಿನಗಳಲ್ಲಿ ಅಪರಾಧ, ಲೈಂಗಿಕತೆ ಪತ್ರಿಕೆಗಳಲ್ಲಿ ವಿಜೃಂಭಿಸುತ್ತಿದೆ. ಸಿನಿಮಾ ಕ್ಷೇತ್ರದಲ್ಲಿ ನಿರ್ದೇಶಕರು ತಮ್ಮದೇ ಸೂತ್ರಗಳನ್ನು ಬಳಸಿಕೊಂಡು, ಸೃಷ್ಟಿಸಿಕೊಂಡು ಪ್ರೇಕ್ಷಕರ ಮೇಲೆ ಹೇರುತ್ತಿರುವಂತೆ, ಪತ್ರಿಕೆಗಳೂ ಈ ಹೇರುವ ಕೆಲಸವನ್ನು ಮಾಡುತ್ತಿವೆ ಎಂದು ವಿಷಾದಿಸಿದರು.

ಮಾಧ್ಯಮಗಳು ಮೂಲಭೂತವಾದಿಗಳ ಜೊತೆಗೆ ಗುರುತಿಸಿಕೊಳ್ಳುವುದು ಅತಿ ಅಪಾಯಕಾರಿ ಬೆಳವಣಿಗೆಯಾಗುತ್ತಿದೆ. ಜಾತಿ, ಧರ್ಮಗಳನ್ನು ಬಿಂಬಿಸುವ ಕನ್ನಡಿಗಳಾಗಿ ಮಾಧ್ಯಮಗಳು ಎಂದಿಗೂ ಗುರುತಿಸಿಕೊಳ್ಳಬಾರದು.

ಈ ಕೆಲಸವನ್ನು ಅವು ಮಾಡಿದ್ದೇ ಆದಲ್ಲಿ ಅವುಗಳ ಮೇಲಿರುವ ಗೌರವ ಕುಂದುವುದು ಎಂದರು.ಅಧ್ಯಕ್ಷತೆ ವಹಿಸಿದ್ದ ಪತ್ರಿಕೋದ್ಯಮಿ ರಾಜಶೇಖರ ಕೋಟಿ ಮಾತನಾಡಿ, ದೂರದರ್ಶನದಿಂದ ಇಂದು ನಿಯತಕಾಲಿಕೆಗಳಿಗೆ ಮಾರುಕಟ್ಟೆ ಕ್ಷೀಣಿಸಿದೆ. ಟಿವಿಗಳಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿಗಳಿಗೆ ದಾಸರಾಗಿರುವ ನಾವು ಪತ್ರಿಕೆಗಳನ್ನು ಓದುವುದನ್ನು ಕಡಿಮೆ ಮಾಡಿದ್ದೇವೆ. ಆದರೆ ಪತ್ರಿಕೆಗಳಿಗೆ ಪ್ರೋತ್ಸಾಹದ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾನು ತಿಂಗಳು ಪತ್ರಿಕೆಗೆ ಜಾಹೀರಾತು ನೀಡಿ ಪ್ರೋತ್ಸಾಹಿಸುವ ಕೆಲಸ ಮಾಡುವೆ ಎಂದರು.ಪತ್ರಿಕೆಯ ವೆಬ್‌ಸೈಟ್‌ಗೆ ಪ್ರಕಾಶಕ ಬಿ.ಎನ್. ಶ್ರೀರಾಮು ಚಾಲನೆ ನೀಡಿದರು.

ಹಿರಿಯ ಸಾಹಿಪ್ರೊ.ಎಚ್.ಎಲ್.ಕೇಶವಮೂರ್ತಿ ಅವರು ಇಂದಿನ ಕನ್ನಡ ನಿಯತಕಾಲಿಕೆಗಳ ಸ್ಥಿತಿಗತಿ, ಮಂಜುನಾಥ ಲತಾ ಅವರು ತಿಂಗಳು ಮಾಸಪತ್ರಿಕೆ ಒಂದು ಪ್ರತಿಕ್ರಿಯೆ ನಡೆಸಿಕೊಟ್ಟರು. ಎನ್.ಆರ್. ಪ್ರತಿಷ್ಠಾನದ ಹರೀಶ್ ಅವರು ಕಥಾ ಮತ್ತು ಕಾವ್ಯ ಪುರಸ್ಕಾರದ ವಿತರಣೆ ಮಾಡಿದರು. ಅಭಿರುಚಿ ಗಣೇಶ್ ಉಪಸ್ಥಿತರಿದ್ದರು.

ಕೃಪೆ - ಕನ್ನಡ ಪ್ರಭ

.

No comments: