Saturday, May 22, 2010

ಇಂದಿನ ಸುದ್ಧಿಗಳು ೨೨-೫-೨೦೧೦

ಬ್ರೇಕಿಂಗ್ ನ್ಯೂಸ್
ವಿಮಾನ ಅಪಘಾತ : 163 ಜನರ ಸಜೀವ ದಹನ - ಮೂವರು ಗಂಭೀರ ಗಾಯ
ಮಂಗಳೂರು : ಇಂದು ಬೆಳಗ್ಗೆ 6-15ರ ಸುಮಾರಿಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವೊಂದು ಅಪಘಾತಕ್ಕೀಡಾಗಿ ಸುಮಾರು 163 ಜನರು ಸಜೀವವಾಗಿ ದಹನಗೊಂಡ ಘಟನೆ ಇಲ್ಲಿನ ಕೆಂಜಾರು ಬಳಿ ನಡೆದಿದೆ.
ದುಬೈದಿಂದ ಹೊರಟಿದ್ದ ಏರ್ ಇಂಡಿಯಾ ಎಕ್ಸ್ಪ್ ಪ್ರೆಸ್ ವಿಮಾನವು ಬೆಳಗ್ಗೆ 6-45ರ ಸುಮಾರಿಗೆ ಬಜ್ಪೆ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗಬೇಕಿತ್ತು. ಆದರೆ, ಕೆಂಜಾರು ಬಳಿ ವಿಮಾನ ಅಪಘಾತಕ್ಕೀಡಾಗಿದೆ. ಇದರಲ್ಲಿದ್ದ ಸುಮಾರು 169 ಜನ ಪ್ರಯಾಣಿಕರ ಪೈಕಿ 163 ಜನ ದುರ್ಮರಣಕ್ಕೀಡಾಗಿದ್ದು, ಉಳಿದವರು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಈ ಅಪಘಾತಕ್ಕೆ ತಾಂತ್ರಿಕ ತೊಂದರೆಗಳ ಕಾರಣವೆಂದು ಹೇಳಲಾಗಿದ್ದರೂ, ಸ್ಪಷ್ಟ ಮಾಹಿತಿ ಇನ್ನೂ ಗೊತ್ತಾಗಿಲ್ಲ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ, ತಕ್ಷಣವೇ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಬದುಕುಳಿದವರ ರಕ್ಷಣಗೆ ಮುಂದಾಗಿದ್ದಾರೆ. ಮಕ್ಕಳು ಸೇರಿದಂತೆ ಈ ಅವಘಢದಲ್ಲಿ ಮಹಿಳೆಯರು ಸಜೀವ ದಹನವಾಗಿದ್ದಾರೆ ಎಂದು ಹೇಳಲಾಗಿದೆ. ಅಪಘಾತಕ್ಕೆ ಕಾರಣವೇನೆಂಬುದು ತನಿಖೆಯಿಂದ ತಿಳಿಯಲು ಸಾಧ್ಯ ಎನ್ನಲಾಗಿದೆ.

1. ಗೂರ್ಖಾ ನಾಯಕ ತಮಂಗ್ ಕಗ್ಗೊಲೆ.
2. ಹಿಂದಿ, ಇಂಗ್ಲೀಷ ಭಾಷೆಯಲ್ಲಿ ಚಿತ್ರೀಕರಣಗೊಂಡ 'ಕೈಟ್ಸ್' ಚಿತ್ರವನ್ನು ಬಿಡುಗಡೆ ಮಾಡಬಾರದೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನಿರ್ಧಾರಕ್ಕೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ದೊರೆತಿದೆ.
3. 10 ತರಗತಿಯವರೆಗೆ ಹೊಸ ಪಠ್ಯಕ್ರಮ : ಮುಂದಿನ ವರ್ಷದಿಂದ 5ನೇ ತರಗತಿಯವರೆಗೆ ನೂತನ ಪಠ್ಯಕ್ರಮ, 2014ಕ್ಕೆ 10ನೇ ತರಗತಿವರೆಗೂ ನೂತನ ಪಠ್ಯ. ವೆಬ್ ಸೈಟ್ ನಲ್ಲಿ ಸಾರ್ವಜನಿಕ ಚರ್ಚೆಗೆ ಆಹ್ವಾನಿಸಲಾಗಿದೆ.
4. ರಾಜ್ಯದ 9 ಜನ ಐಎೆಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
5. ರೈತರ ಮಹಾಸಂಗಮಕ್ಕೆ ಕೂಡಲ ಸಂಗಮ ಸಜ್ಜು.
6. ಲೈಲಾ ಚಂಡಮಾರುತ ಎಫೆಕ್ಟ್ : ಗುಲ್ಬರ್ಗದಲ್ಲಿ ಭಾರೀ ಮಳೆ. ಆಂಧ್ರದಲ್ಲಿ 27 ಜನ ಸಾವು.
7. ಇಂದು ಸಿಇಟಿ ಫಲಿತಾಂಶ ಪ್ರಕಟ.
8. ಉಗ್ರ ಕಸಾಬ್ ಈಗ ಖೈದಿ ನಂ. ದಿ.7096.
9. ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ ಮುಷರಫ್ ಅವರಿಗೆ ಪ್ರಧಾನಿಯಾಗುವ ಬಯಕೆ ಆಗಿದೆಯಂತೆ. ಹಾಗಂತ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
10. ಭಾರತದ ಮಾಜಿ ಪ್ರಧಾನಿ ರಾಜೀವ ಗಾಂಧಿ ಅವರ ಪುಣ್ಯಸ್ಮರಣೆ ನಿಮಿತ್ತ ನಿನ್ನೆ ಇಡೀ ದೇಶ ಅವರಿಗೆ ನಮನ ಸಲ್ಲಿಸಿತು.

No comments: