Tuesday, May 25, 2010

ಇಂದಿನ ಸುದ್ದಿಗಳು ೨೫-೫-೨೦೧೦

1. ವಿಮಾನ ದುರಂತ : ಬ್ಲಾಕ್ ಬಾಕ್ಸ್ ಇನ್ನೂ ಸಿಕ್ಕಿಲ್ಲ. ಡಿಎನ್ಎ ಫಲಿತಾಂಶಕ್ಕೆ 22 ಶವಗಳು ಕಾದಿವೆ.
2. ರೈತರ ಮೇಲಿನ ಕೇಸುಗಳೆಲ್ಲಾ ವಾಪಾಸ್ : ಸಚಿವ ಸಂಪುಟದಲ್ಲಿ ನಿರ್ಧಾರ.
3. ಕೇಂದ್ರ ಯುಪಿಎ ಸರಕಾರ - ಎರಡನೇ ಇನ್ನಿಂಗ್ಸ್ : ಗುರಿ ತಲುಪದೇ ನಿವೃತ್ತಿ ಆಗಲಾರೆ, ಸೋನಿಯಾ ಮೇಡಂ ಜೊತೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದರು ಪ್ರಧಾನಿ ಮನಮೋಹನ ಸಿಂಗ್.
4. ಜಾರ್ಖಂಡ್ : ಶಿಬು ಸೊರೆನ್ ಗೆ ಬಿಜೆಪಿ ಬೆಂಬಲ ವಾಪಾಸ್. ಬಹುಮತ ಸಾಬೀತುಪಡಿಸಲು ವಾರದ ಗಡುವು ನೀಡಿದ ರಾಜ್ಯಪಾಲರು.
5. ಚನ್ನರಾಯನಪಟ್ಟಣದಲ್ಲಿ ತಮ್ಮಸಹಾಯಕ ಸುಧಾಕರಗೌಡ ಮದುವೆಗೆ ಆಗಮಿಸಿದ, ಬಾಲಿವುಡ್ ನಟ ಅಮೀರಖಾನ್ ಮತ್ತು ಪತ್ನಿ ಕಿರಣರಾಯ ಮದುವೆ ಗಿಫ್ಟ್ ಆಗಿ 18 ಲಕ್ಷ ರೂ. ಮೌಲ್ಯದ ಕಾರು ಹಾಗೂ ಮುಂಬೈನಲ್ಲಿ ಮನೆಯೊಂದನ್ನು ನೀಡಿದರು.
6. ಗಡಿ ಗುರುತು ನಾಶ ಹಾಗೂ ಜೀವಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ಸಚಿವ ಜನಾರ್ಧನರೆಡ್ಡಿ ವಿರುದ್ಧ ಜಾಮೀನು ರಹಿತ ವಾರಂಟ್ ಮುಂದುವರಿಸಿರುವ ನ್ಯಾಯಾಲಯ ಜೂ.26ಕ್ಕೆ ವಿಚಾರಣೆಯನ್ನು ಮುಂದೂಡಿದ್ದಾರೆ.
7. ಕಾಂಗ್ರೆಸ್ ಪಕ್ಷದ ಸಾಂಸ್ಥಿಕ ಚುನಾವಣೆಯನ್ನು ಈ ತಿಂಗಳ ಅಂತ್ಯಕ್ಕೆ ನಡೆಯಲಿದ್ದು, ಜೂನ್ ಅಂತ್ಯಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ: ಕಾಂಗ್ರೆಸ್ ಅಧ್ಯಕ್ಷ ಆರ್.ವಿ.ದೇಶಪಾಂಡೆ.
8. ರೆಡ್ಡಿ ಸಹೋದರರು 30 ಗಣಿಗಳಿಂದ ಕಪ್ಪ ಕಾಣಿಕೆ ಸಂಗ್ರಹಿಸುತ್ತಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಆರೋಪಿಸಿದ್ದಾರೆ.
9. ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಕ್ಕೆ ಗುರಿಯಾಗಿರುವ ಮಾಜಿ ಸಚಿವ ಹರತಾಳು ಹಾಲಪ್ಪ ಅವರ ನ್ಯಾಯಾಂಗ ಬಂಧನದ ಅವಧಿಯು ಜೂ.7ರವರೆಗೆ ವಿಸ್ತರಿಸಲಾಗಿದೆ.
10. ಭಟ್ಕಳ ಮೂಲದ ಉಗ್ರ ಅಬ್ದುಲ್ ಸಮದ್ ನನ್ನು ಮಂಗಳೂರಿನಲ್ಲಿ ಸೋಮವಾರ ಬಂಧಿಸಲಾಗಿದೆ. ಈತ ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

No comments: