Wednesday, July 7, 2010

ಮಾಸ್ತಿ ವೆಂಕಟೇಶ ಅಯ್ಯಂಗಾರ್

ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್ಮಾಸ್ತಿ ವೆಂಕಟೇಶ ಅಯ್ಯಂಗಾರರು (ಜೂನ್ ೬ ೧೮೯೧ - ಜೂನ್ ೬ ೧೯೮೬) - ಕನ್ನಡದ ಒಬ್ಬ ಅಪ್ರತಿಮ ಲೇಖಕರು. ಕನ್ನಡ ಸಾಹಿತ್ಯ ಲೋಕದಲ್ಲಿ ಮಾಸ್ತಿ ಎಂದೇ ಖ್ಯಾತರಾಗಿರುವ ಈ ಸಾಹಿತಿ ಶ್ರೀನಿವಾಸ ಎಂಬ ಕಾವ್ಯನಾಮದಡಿಯಲ್ಲಿ ಬರೆಯುತ್ತಿದರು.

ಮಾಸ್ತಿ ವೆಂಕಟೇಶ ಅಯ್ಯಂಗಾರರು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮದಲ್ಲಿ ಜೂನ್ ೬ ೧೮೯೧ ರಲ್ಲಿ ಜನಿಸಿದರು. ಮೆಟ್ರಿಕ್ಯುಲೇಷನ್(೧೯೦೭), ಎಫ್ ಎ (೧೯೦೯), ಬಿ ಎ (ಮದರಾಸು ವಿಶ್ವವಿದ್ಯಾಲಯ ೧೯೧೨), ಮೈಸೂರು ಸಿವಿಲ್ ಸರ್ವಿಸ್ (೧೯೧೩), ಎಂ.ಎ (ಮದರಾಸು ವಿಶ್ವವಿದ್ಯಾಲಯ ೧೯೧೪) ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ, ೧೯೧೪ ರಲ್ಲಿ ಮೈಸೂರು ಸರ್ಕಾರದಲ್ಲಿ ಅಸಿಸ್ಟೆಂಟ್ ಕಮಿಷನರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ೧೯೧೪ ರಿಂದ ೧೯೪೩ ರವವರೆಗೆ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿ ನಿವೃತ್ತರಾದರು. ೧೯೨೦ ರಲ್ಲಿ ಅವರ ಮೊದಲ ಪುಸ್ತಕ ಕೆಲವು ಸಣ್ಣ ಕಥೆಗಳು ಪ್ರಕಟಗೊಂಡಿತು. ಸಣ್ಣ ಕತೆ, ನೀಳ್ಗತೆ, ಕಾದಂಬರಿ, ಕಾವ್ಯ, ನಾಟಕ, ಜೀವನ ಚರಿತ್ರೆ, ಪ್ರಬಂಧ, ವಿಮರ್ಶೆ, ಸಂಪಾದನೆ, ಅನುವಾದ - ಹೀಗೆ ಕನ್ನಡ ಸಾಹಿತ್ಯದ ಪ್ರತಿಯೊಂದು ಕ್ಷೇತ್ರಕ್ಕೂ ತಮ್ಮ ಕೊಡುಗೆಯನ್ನು ನೀಡಿದ್ದಾರೆ.
೧೯೮೩ ರಲ್ಲಿ ಚಿಕವೀರ ರಾಜೇಂದ್ರ ಕಾದಂಬರಿಗಾಗಿ ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತಗೊಂಡ ಮಾಸ್ತಿಯವರು ಕನ್ನಡಕ್ಕೆ ನಾಲ್ಕನೆ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟರು. ಜೀವನ ಪರ್ಯಂತ ಕನ್ನಡ ಸೇವೆಯನ್ನು ಮಾಡಿದ ಮಾಸ್ತಿಯವರು ಜೂನ್ ೬ ೧೯೮೬ ರಂದು ನಿಧನ ಹೊಂದಿದರು.

ಪರಿವಿಡಿ [ಅಡಗಿಸು]
೧ ಜೀವನ
೨ ಸಾಹಿತ್ಯ
೩ ಗೌರವಗಳು
೪ ಮುಖ್ಯ ಕೃತಿಗಳು
೪.೧ ಸಣ್ಣ ಕತೆಗಳ ಸಂಗ್ರಹ
೪.೨ ನೀಳ್ಗತೆ
೪.೩ ಕಾವ್ಯ ಸಂಕಲನಗಳು
೪.೪ ಜೀವನ ಚರಿತ್ರೆ
೪.೫ ಪ್ರಬಂಧ
೪.೬ ನಾಟಕ
೪.೭ ಕಾದಂಬರಿ
೫ ಈ ಪುಟಗಳನ್ನೂ ನೋಡಿ
೬ ಪ್ರಶಸ್ತಿಗಳು


[ಬದಲಾಯಿಸಿ] ಜೀವನ
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿ ಎಂಬ ಹಳ್ಳಿಯಲ್ಲಿ ೧೮೯೧ರ ಜೂನ್ ೬ರಂದು ಹುಟ್ಟಿದರು. ಅವರು ಹುಟ್ಟುವ ಕಾಲಕ್ಕೆ ಮನೆಯಲ್ಲಿ ಬಡತನವಿತ್ತು. ಒಂದು ಕಾಲಕ್ಕೆ ಶ್ರೀಮಂತಿಕೆಯಿಂದ ವಿಜೃಂಭಿಸಿದ ಕುಟುಂಬ ಅವರ ಪೂರ್ವಿಕರದು. ಮಾಸ್ತಿ ವೆಂಕಟೇಶ ಅಯ್ಯಂಗಾರ್ "ಪೆರಿಯಾತ್" ಎಂದರೆ ದೊಡ್ಡ ಮನೆಯವರು. ಅವರ ವಿದ್ಯಾಭ್ಯಾಸ ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಜರುಗಿತು. ಅವರ ಹಿರಿಯರು ಬಹು ಜನಕ್ಕೆ ಅನ್ನ ಹಾಕಿ ಹೆಸರು ಗಳಿಸಿದ್ದರಾದರೂ ಅವರು ವಾರದ ಮನೆಗಳಲ್ಲಿ ಊಟಮಾಡಿ ವಿದ್ಯಾಭ್ಯಾಸ ಮಾಡಬೇಕಾಯಿತು. ಹೊಂಗೇನಳ್ಳಿ, ಯಲಂದೂರು, ಶಿವಾರಪಟ್ಟಣ, ಮಳವಳ್ಳಿ, ಮೈಸೂರು, ಕಡೆಗೆ ಮದರಾಸು ಹೀಗೆ ನಾನಾ ಕಡೆಗಳಲ್ಲಿ ತಮ್ಮ ಬಂಧುಗಳ ನೆರವಿನಿಂದ ವಿದ್ಯಾಭ್ಯಾಸ ಮಾಡಿ ಎಂ.ಎ. ಪದವಿ ಗಳಿಸಿದರು. ತಮ್ಮ ವಿದ್ಯಾಭ್ಯಾಸ ಕಾಲದಲ್ಲಿ ಮಾಸ್ತಿ ಯಾವ ಪರೀಕ್ಷೆಯಲ್ಲೂ ಪ್ರಥಮ ಸ್ಥಾನವನ್ನು ಬೇರೆಯವರಿಗೆ ಬಿಟ್ಟುಕೊಡಲಿಲ್ಲ. ಮದ್ರಾಸಿನಲ್ಲಿ ಇಂಗ್ಲೀಷ್ ಎಂ.ಎ. ಮಾಡಿಕೊಂಡು ಚಿನ್ನದ ಪದಕ ಗಳಿಸಿದ ಮಾಸ್ತಿ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸುಮಾರು ಒಂದೂವರೆ ತಿಂಗಳು ಉಪಾಧ್ಯಾಯರಾಗಿದ್ದು ಬೆಂಗಳೂರಿಗೆ ಬಂದು ಸಿವಿಲ್ ಪರೀಕ್ಷೆಗೆ ಕುಳಿತು ಅಲ್ಲಿಯೂ ಪ್ರಥಮರಾಗಿ ತೇರ್ಗಡೆಯಾದರು. ಸರ್ಕಾರದಲ್ಲಿ ಅಸಿಸ್ಟೆಂಟ್ ಕಮೀಶನರಾಗಿ ಕೆಲಸಕ್ಕೆ ಸೇರಿ ಸಮರ್ಪಕವಾಗಿ ಕೆಲಸ ನಿರ್ವಹಿಸಿದರು. ಸಾಹಿತ್ಯ ರಚನೆ ಅವರ ಪ್ರವೃತ್ತಿಯಾಗಿ ಬೆಳೆಯಿತು.

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಲೇಖನಕ್ಕೆ ಇಲ್ಲಿ ಕ್ಲಿಕ್ ಮಾಡಿ http://kannadaratna.com/achievers/masthi.html

[ಬದಲಾಯಿಸಿ] ಸಾಹಿತ್ಯ
೧೯೧೦ ರಲ್ಲಿ ಬರೆದ ರಂಗನ ಮದುವೆ ಎಂಬ ಸಣ್ಣ ಕಥೆಗಳ ಸಂಗ್ರಹದಿಂದ ಹಿಡಿದು ಅವರು ನಿಧನರಾಗುವುದಕ್ಕೆ ಕೆಲವೇ ತಿಂಗಳುಗಳ ಹಿಂದೆ ಪ್ರಕಟವಾದ 'ಮಾತುಗಾರ ರಾಮಣ್ಣ' ಎಂಬ ಕೃತಿಯವರೆಗೆ ಅವರು ರಚಿಸಿದ ಕೃತಿಗಳ ಸಂಖ್ಯೆ ೧೨೩. ಇದರಲ್ಲಿ ಸಣ್ಣಕತೆಗಳು, ಕಾದಂಬರಿಗಳು, ನಾಟಕಗಳು, ವಿಮರ್ಶೆಗಳು, ಪ್ರಬಂಧಗಳು, ಧಾರ್ಮಿಕ ಕೃತಿಗಳು, ಅನುವಾದ, "ಜೀವನ" ಎಂಬ ಅವರೇ ನಡೆಸುತ್ತಿದ್ದ ಪತ್ರಿಕೆಯಲ್ಲಿ ಬರೆದ ಸಂಪಾದಕೀಯ ಲೇಖನಗಳು, ಕವಿತೆಗಳ ಸಂಗ್ರಹ, ಕಾವ್ಯ ಸೇರಿವೆ.

೨೦ನೆಯ ಶತಮಾನದ ಆರಂಭದ ಕಾಲ. ಕನ್ನಡ ಭಾಷೆಗೆ ಹೇಳಿಕೊಳ್ಳುವಂಥ ಪ್ರೋತ್ಸಾಹವಿರಲಿಲ್ಲ. ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಸಾಹಿತ್ಯದಲ್ಲಿ ಗಮನಾರ್ಹ ಕೆಲಸವಾಗಬೇಕಾಗಿದ್ದ ಕಾಲದಲ್ಲಿ ಮಾಸ್ತಿ ಸಾಹಿತ್ಯ ರಚನೆಯ ಕೆಲಸವನ್ನು ಕೈಗೊಂಡರು. ಸಣ್ಣ ಕತೆಗಳ ರಚನೆ ಅವರು ಪ್ರಧಾನವಾಗಿ ಆರಿಸಿಕೊಂಡ ಸಾಹಿತ್ಯ ಪ್ರಕಾರ. ಶ್ರೀನಿವಾಸ ಎಂಬ ಕಾವ್ಯನಾಮದಲ್ಲಿ ಮಾಸ್ತಿ ನೂರಾರು ಸಣ್ಣ ಕತೆಗಳನ್ನು ಬರೆದರು. ಹಲವಾರು ಕಥಾ ಸಂಕಲನಗಳನ್ನು ಪ್ರಕಟಿಸಿದರು. ಅವರ ಒಂದು ಸಣ್ಣ ಕಥೆಯನ್ನು ರಾಜಾಜಿಯವರು ತಮಿಳಿಗೆ ಅನುವಾದಿಸಿದರು. ಇಂಗ್ಲೀಷ್ ಹಾಗೂ ಇತರ ಭಾರತೀಯ ಭಾಷೆಗಳಿಗೆ ಮಾಸ್ತಿ ಅವರ ಸಣ್ಣ ಕತೆಗಳು ಅನುವಾದಗೊಂಡಿವೆ. ದೂರದರ್ಶನದಲ್ಲಿ ಕೆಲವು ಕತೆಗಳು ಅಭಿನಯಿಸಲ್ಪಟ್ಟು ಪ್ರಸಾರವಾಗಿವೆ. ಕಥೆ ಹೇಳುವುದರಲ್ಲಿ ಮಾಸ್ತಿ ಎತ್ತಿದ ಕೈ. ಅವರ ಕಥೆಗಳನ್ನು ಓದುತ್ತಿದ್ದರೆ ಅವು ಕಣ್ಣಿಗೆ ಕಟ್ಟಿದಂತಿರುತ್ತವೆ. "ಸುಬ್ಬಣ್ಣ" ಅವರ ಒಂದು ಖ್ಯಾತ ನೀಳ್ಗತೆ. ಅಪಾರ ಮಾನವೀಯ ಅಂತಃಕರಣವನ್ನು ಕತೆಯಲ್ಲಿ ತುಳುಕಿಸಿದ ಅವರು ಕಥೆಗಳ ರಚನೆಗೆ ಬಳಸಿದ ತಂತ್ರ ಅಪರೂಪದ್ದಾಗಿದೆ. ಸಣ್ಣ ಕಥೆಗಳ ಜನಕರೆಂದೇ ಅವರಿಗೆ ಕರೆಯುತ್ತಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಅವರ ಕಥೆಗಳ ಸಂಕಲನಗಳಿಗೆ ಲಭಿಸಿತು. ಕಥೆ ಹೇಳುವುದು ಒಂದು ಪುಣ್ಯದ ಕೆಲಸವೆಂದು ಅವರು ಭಾವಿಸಿದ್ದರು.

ಮಾಸ್ತಿ ಕಥೆಗಳನ್ನು ಬರೆದಂತೆಯೇ ಕಾದಂಬರಿ, ಕವಿತೆ, ಪ್ರಬಂಧ ಇವುಗಳನ್ನೂ ಬರೆದರು, ನಾಟಕಗಳನ್ನೂ ರಚಿಸಿದರು. ಅವರ ಎಲ್ಲ ಕೃತಿಗಳಲ್ಲೂ ಕುಶಲತೆ, ಸೌಮ್ಯತೆ, ಜೀವನ ದರ್ಶನಗಳನ್ನು ಸ್ಪಷ್ಟವಾಗಿ ಕಾಣಬಹುದು. "ಭಾರತತೀರ್ಥ", "ಆದಿಕವಿ ವಾಲ್ಮೀಕಿ" ಇವು ಭಾರತ ರಾಮಾಯಣಗಳನ್ನು ಕುರಿತು ಬರೆದಿರುವ ಗ್ರಂಥಗಳಾದರೆ "ಶ್ರೀರಾಮ ಪಟ್ಟಾಭಿಷೇಕ" ಅವರ ಒಂದು ಕಾವ್ಯ. ರವೀಂದ್ರನಾಥ ಠಾಕೂರ್, ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆಗಳನ್ನೂ, ಪುರಂದರದಾಸ, ಕನಕದಾಸ, ಅನಾರ್ಕಳಿ, ತಿರುಪಾಣಿ, ಶಿವಾಜಿ ಮೊದಲಾದ ನಾಟಕಗಳನ್ನೂ, ಷೇಕ್ಸ್‌ಪಿಯರನ ನಾಟಕಗಳ ಅನುವಾದಗಳನ್ನೂ ಮಾಸ್ತಿ ಪ್ರಕಟಿಸಿದ್ದಾರೆ.

ಮಾಸ್ತಿ ಬರೆದ ಕಾದಂಬರಿಗಳು ಎರಡು. ಜ್ಞಾನಪೀಠ ಪ್ರಶಸ್ತಿ ಗಳಿಸಿದ ಕೃತಿ ಚಿಕವೀರ ರಾಜೇಂದ್ರ - ಕೊಡಗಿನ ಕಡೆಯ ರಾಜ ಚಿಕವೀರ ರಾಜೇಂದ್ರನನ್ನು ಕುರಿತದ್ದು, ಮತ್ತೊಂದು "ಚನ್ನಬಸವನಾಯಕ".

"ಭಾವ" - ಮಾಸ್ತಿ ಅವರ ಆತ್ಮಕಥೆ ಇರುವ ಮೂರು ಸಂಪುಟಗಳ ಗ್ರಂಥ.

[ಬದಲಾಯಿಸಿ] ಗೌರವಗಳು
ಮಾಸ್ತಿ ಅವರಿಗೆ ಸಂದ ಗೌರವ, ಪ್ರಶಸ್ತಿಗಳು ಅಪಾರ. "ಮಾಸ್ತಿ ಕನ್ನಡದ ಆಸ್ತಿ" ಎಂಬ ಹೇಳಿಕೆ ಒಂದು ನಾಣ್ಣುಡಿಯಾಗಿದೆ. ಎಲ್ಲ ಸಾಹಿತಿಗಳಿಗೂ ಅವರು "ಅಣ್ಣ ಮಾಸ್ತಿ"ಯಾಗಿದ್ದರು. ವರಕವಿ ದ ರಾ ಬೇಂದ್ರೆ ಮಾಸ್ತಿಯವರನ್ನು ಹಿರಿಯಣ್ಣ ಎಂದು ಗೌರವಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಮಾಸ್ತಿ ಸೇವೆ ಸಲ್ಲಿಸಿದರು. ೧೯೨೯ರಲ್ಲಿ ಬೆಳಗಾವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ಮೈಸೂರು ಮಹಾರಾಜರು "ರಾಜಸೇವಾ ಪ್ರಸಕ್ತ" ಎಂದು ಗೌರವಿಸಿದ್ದರು. ೧೯೭೨ರಲ್ಲಿ "ಶ್ರೀನಿವಾಸ" ಎಂಬ ಅವರ ಅಭಿನಂದನಾ ಗ್ರಂಥ ಪ್ರಕಟವಾಯಿತು.

ಮಾಸ್ತಿ ಕನ್ನಡಿಗರಿಗೆ ಒಂದು ಆದರ್ಶ. ಎಂಥ ಕಷ್ಟ ಕಾಲದಲ್ಲೂ ಅವರು ಜೀವನವನ್ನೆದುರಿಸಿದರು. ಸಾಹಿತ್ಯ ರಚಿಸಿದಂತೆಯೇ ಸಾಹಿತ್ಯ ಪೋಷಕರಾದರು. ಜಿ ಪಿ ರಾಜರತ್ನಂ, ದ ರಾ ಬೇಂದ್ರೆಯಂತಹವರಿಗೆ ಅವರು ಆದರ್ಶರಾಗಿದ್ದರು.

[ಬದಲಾಯಿಸಿ] ಮುಖ್ಯ ಕೃತಿಗಳು
[ಬದಲಾಯಿಸಿ] ಸಣ್ಣ ಕತೆಗಳ ಸಂಗ್ರಹ
ಕೆಲವು ಸಣ್ಣ ಕತೆಗಳು (೧೯೨೦)
ಸಣ್ಣ ಕತೆಫಅಸ್ಸೆಫ್ದ್ ಬ್ವೆಫ್ ಸೆಫ್ ವ್ವೆಫೆರ್ತ್ಗ್ನ್ ದ್ಗೆಫ್ ವ್ವ್ ಎರ್ತೆಅವೆ ಎರ್ೆರ್ತ್ವ್೪೮ರ್
[ಬದಲಾಯಿಸಿ] ನೀಳ್ಗತೆ
ಸುಬ್ಬಣ್ಣ (೧೯೨೮)
ಶೇಷಮ್ಮ(೧೯೭೬)
[ಬದಲಾಯಿಸಿ] ಕಾವ್ಯ ಸಂಕಲನಗಳು
ಬಿನ್ನಹ(೧೯೨೨)
ಅರುಣ(೧೯೨೪)
ತಾವರೆ(೧೯೩೦)
ಸಂಕ್ರಾಂತಿ(೧೯೬೯)
ನವರಾತ್ರಿ(೫ ಭಾಗ ೧೯೪೪-೧೯೫೩)
[ಬದಲಾಯಿಸಿ] ಜೀವನ ಚರಿತ್ರೆ
ರವೀಂದ್ರನಾಥ ಠಾಕೂರ(೧೯೩೫)
ಶ್ರೀ ರಾಮಕೃಷ್ಣ(೧೯೩೬)
[ಬದಲಾಯಿಸಿ] ಪ್ರಬಂಧ
ಕನ್ನಡದ ಸೇವೆ(೧೯೩೦)
ವಿಮರ್ಶೆ (೪ ಸಂಪುಟ ೧೯೨೮-೧೯೩೯)
ಜನತೆಯ ಸಂಸ್ಕ್ರುತಿ(೧೯೩೧)
ಜನಪದ ಸಾಹಿತ್ಯ(೧೯೩೭)
ಆರಂಭದ ಆಂಗ್ಲ ಸಾಹಿತ್ಯ(೧೯೭೯)
[ಬದಲಾಯಿಸಿ] ನಾಟಕ
ಶಾಂತಾ(೧೯೨೩)
ತಾಳೀಕೋಟೆ(೧೯೨೯)
ಶಿವಛತ್ರಪತಿ(೧೯೩೨)
ಯಶೋಧರಾ(೧೯೩೩)
ಕಾಕನಕೋಟೆ(೧೯೩೮)
[ಬದಲಾಯಿಸಿ] ಕಾದಂಬರಿ
ಚೆನ್ನಬಸವ ನಾಯಕ(೧೯೫೦)
ಚಿಕವೀರ ರಾಜೇಂದ್ರ(೧೯೫೬)
[ಬದಲಾಯಿಸಿ] ಈ ಪುಟಗಳನ್ನೂ ನೋಡಿ
ವರ್ಗ:ಮಾಸ್ತಿಯವರ ಕೃತಿಗಳು
[ಬದಲಾಯಿಸಿ] ಪ್ರಶಸ್ತಿಗಳು
ಜ್ಞಾನಪೀಠ ಪ್ರಶಸ್ತಿ(೧೯೮೩)
ಮೈಸೂರು ವಿಶ್ವವಿದ್ಯಾಲಯದ ಡಿ. ಲಿಟ್(೧೯೭೭)
ಕರ್ನಾಟಕ ವಿಶ್ವವಿದ್ಯಾಲಯದ ಡಿ. ಲಿಟ್(೧೯೫೬)
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೬೮)
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪದವಿ(೧೯೫೩)
ದಕ್ಷಿಣ ಭಾರತ ಸಾಹಿತ್ಯಗಳ ಸಮ್ಮೇಳನ ಅಧ್ಯಕ್ಷ ಪದವಿ(೧೯೪೬)

ಶಿವರಾಮ ಕಾರಂತ

ಶ್ರೀ ಕೋಟ ಶಿವರಾಮ ಕಾರಂತಶಿವರಾಮ ಕಾರಂತ (ಅಕ್ಟೋಬರ್ ೧೦, ೧೯೦೨ - ಸೆಪ್ಟೆಂಬರ್ ೧೨ ೧೯೯೭) - "ಕಡಲತೀರದ ಭಾರ್ಗವ", "ನೆಡೆದಾಡುವ ವಿಶ್ವಕೋಶ" ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ.

ಪರಿವಿಡಿ [ಅಡಗಿಸು]
೧ ಜೀವನ
೨ ಕೃತಿಗಳು
೨.೧ ಕವನ
೨.೨ ಕಾದಂಬರಿ
೨.೩ ನಾಟಕ
೨.೪ ಸಣ್ಣ ಕತೆ
೨.೫ ಹರಟೆ, ವಿಡಂಬನೆ
೨.೬ ಪ್ರವಾಸ ಕಥನ
೨.೭ ಆತ್ಮಕಥನ
೨.೮ ಜೀವನ ಚರಿತ್ರೆ
೨.೯ ಕಲಾಪ್ರಬಂಧ
೨.೧೦ ವೈಜ್ಞಾನಿಕ
೨.೧೧ ಇತರ
೨.೧೨ ಸಂಪಾದನೆ
೨.೧೩ ವಿಶ್ವಕೋಶ
೨.೧೪ ನಿಘಂಟು
೨.೧೫ ಅನುವಾದ
೨.೧೬ ಮಕ್ಕಳ ಪುಸ್ತಕಗಳು
೩ ಶೈಕ್ಷಣಿಕ
೩.೧ ಮಕ್ಕಳ ಶಿಕ್ಷಣ
೩.೨ ವಯಸ್ಕರ ಶಿಕ್ಷಣ
೪ ಆಂಗ್ಲ ಭಾಷೆಯಲ್ಲಿ ಸಾಹಿತ್ಯ
೫ ಪ್ರಶಸ್ತಿ/ಪುರಸ್ಕಾರಗಳು
೬ ಕಾರಂತರ ಕೆಲವು ಚಿಂತನೆಗಳು
೭ ವಿದ್ವಾಂಸರ ಕಣ್ಣಲ್ಲಿ ಕಾರಂತ ಸಾಹಿತ್ಯ
೭.೧ ತೀ.ನಂ.ಶ್ರೀಕಂಠಯ್ಯ
೭.೨ ಪೂರ್ಣಚಂದ್ರ ತೇಜಸ್ವಿ
೭.೩ ಹಾ.ಮಾ.ನಾಯಕ
೭.೪ ಗೋಪಾಲಕೃಷ್ಣ ಅಡಿಗ
೭.೫ ಜಿ.ಎಸ್.ಶಿವರುದ್ರಪ್ಪ
೮ ಬಾಲವನದಲ್ಲಿ ಕಾರಂತಜ್ಜ
೯ ಈ‌ ಪುಟಗಳನ್ನೂ ನೋಡಿ


[ಬದಲಾಯಿಸಿ] ಜೀವನ
ಜ್ಞಾನಪೀಠ ಪುರಸ್ಕೃತ ಡಾ. ಶಿವರಾಮ ಕಾರಂತರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕೋಟದಲ್ಲಿ ೧೯೦೨, ಅಕ್ಟೋಬರ್ ೧೦ರಂದು. ಒಂದು ಶತಮಾನಕ್ಕೆ ನಾಲ್ಕು ವರ್ಷಗಳಷ್ಟೇ ಕಮ್ಮಿ ಬಾಳಿ, ಅರ್ಥಪೂರ್ಣ ಬದುಕು ಕಳೆದ ಸಾಹಿತ್ಯ ದಿಗ್ಗಜ ಡಾ. ಶಿವರಾಮ ಕಾರಂತರು ೧೯೯೭, ಡಿಸೆಂಬರ್ ೦೯ ರಂದು ನಿಧನ ಹೊಂದಿದರು.

ಮಕ್ಕಳಿಂದ, ವಯೋವೃದ್ಧರವರೆಗೆ ಸಾಹಿತ್ಯ ಕೃಷಿ ಮಾಡಿದ, ಚಿಂತಿಸಿದ ಕಾರಂತರು ಇಡೀ ದೇಶದ ದೊಡ್ಡ ನಿಧಿಯಾಗಿದ್ದರು. ಕರ್ನಾಟಕದ ಮೂಲೆ ಮೂಲೆ, ಭಾರತದ ಬಹುತೇಕ ಸ್ಥಳಗಳು, ವಿದೇಶಗಳ ಸಾಂಸ್ಕೃತಿಕ ಕೇಂದ್ರಗಳಿಗೆ ಸುತ್ತುತ್ತ, ಸಾವಿನ ಹಿಂದಿನ ನಾಲ್ಕಾರು ದಿನಗಳವರೆಗೂ ಪ್ರವಾಸ ಮಾಡಿದ್ದರು.

ಜ್ಞಾನಪೀಠ, ಪದ್ಮಭೂಷಣ, ಪಂಪ ಪ್ರಶಸ್ತಿ, ನಾಡೋಜ ಪುರಸ್ಕಾರ, ಹಲವು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ಗಳನ್ನಿತ್ತು ಪುರಸ್ಕರಿಸಿವೆ. ವಯಸ್ಸಿನ ದಣಿವು ಮರೆತು, ಜ್ಞಾನದಾರಿಯಲ್ಲಿ ಜನರನ್ನು ಕೊಂಡೊಯ್ದ ಪ್ರೀತಿಯ "ಕಾರಂತಜ್ಜ" ಆಗಿದ್ದರು. ವಿಶ್ವ ಪ್ರೇಮಿ ಹಾಗೂ ಮಹಾಮಾನವತಾವಾದಿ ಆಗಿದ್ದ ಕಾರಂತರು ಜ್ಞಾನ ಕ್ಷಿತಿಜವನ್ನು ಎಂಟು ದಿಕ್ಕಿಗೆ ಚಾಚಿದ ಅಕ್ಷರ ಪ್ರೇಮಿಯಾಗಿದ್ದರು.


ಗೊಂಡಾರಣ್ಯ
ಚೋಮನ ದುಡಿಕಡಲ ತೀರದ ಭಾರ್ಗವ ಶಿವರಾಮ ಕಾರಂತರ ಕುರಿತ ಲೇಖನಕ್ಕೆ ಇಲ್ಲಿ ಕ್ಲಿಕ್ ಮಾಡಿ http://kannadaratna.com/achievers/karanth.html

[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕವನ
ರಾಷ್ಟ್ರಗೀತ ಸುಧಾಕರ
ಸೀಳ್ಗವನಗಳು
[ಬದಲಾಯಿಸಿ] ಕಾದಂಬರಿ
ಅದೇ ಊರು, ಅದೆ ಮರ
ಅಳಿದ ಮೇಲೆ
ಅಂಟಿದ ಅಪರಂಜಿ
ಆಳ, ನಿರಾಳ
ಇದ್ದರೂ ಚಿಂತೆ
ಇನ್ನೊಂದೇ ದಾರಿ
ಇಳೆಯೆಂಬ
ಉಕ್ಕಿದ ನೊರೆ
ಒಡ ಹುಟ್ಟಿದವರು
ಒಂಟಿ ದನಿ
ಔದಾರ್ಯದ ಉರುಳಲ್ಲಿ
ಕಣ್ಣಿದ್ದೂ ಕಾಣರು
ಕನ್ನಡಿಯಲ್ಲಿ ಕಂಡಾತ
ಕನ್ಯಾಬಲಿ
ಕರುಳಿನ ಕರೆ
ಕುಡಿಯರ ಕೂಸು
ಕೇವಲ ಮನುಷ್ಯರು
ಗೆದ್ದ ದೊಡ್ಡಸ್ತಿಕೆ
ಗೊಂಡಾರಣ್ಯ
ಚಿಗುರಿದ ಕನಸು
ಚೋಮನ ದುಡಿ
ಜಗದೋದ್ಧಾರ ನಾ
ಜಾರುವ ದಾರಿಯಲ್ಲಿ
ದೇವದೂತರು
ಧರ್ಮರಾಯನ ಸಂಸಾರ
ನಷ್ಟ ದಿಗ್ಗಜಗಳು
ನಂಬಿದವರ ನಾಕ, ನರಕ
ನಾವು ಕಟ್ಟಿದ ಸ್ವರ್ಗ
ನಿರ್ಭಾಗ್ಯ ಜನ್ಮ
ಬತ್ತದ ತೊರೆ
ಬೆಟ್ಟದ ಜೀವ
ಭೂತ
ಮರಳಿ ಮಣ್ಣಿಗೆ
ಮುಗಿದ ಯುದ್ಧ
ಮೂಕಜ್ಜಿಯ ಕನಸುಗಳು
ಮೂಜನ್ಮ
ಮೈ ಮನಗಳ ಸುಳಿಯಲ್ಲಿ
ಮೊಗ ಪಡೆದ ಮನ
ವಿಚಿತ್ರ ಕೂಟ
ಶನೀಶ್ವರನ ನೆರಳಿನಲ್ಲಿ
ಸನ್ಯಾಸಿಯ ಬದುಕು
ಸಮೀಕ್ಷೆ
ಸರಸಮ್ಮನ ಸಮಾಧಿ
ಸ್ವಪ್ನದ ಹೊಳೆ
ಹೆತ್ತಳಾ ತಾಯಿ
[ಬದಲಾಯಿಸಿ] ನಾಟಕ
ಅವಳಿ ನಾಟಕಗಳು
ಏಕಾಂಕ ನಾಟಕಗಳು
ಐದು ನಾಟಕಗಳು
ಕಟ್ಟೆ ಪುರಾಣ
ಕಠಾರಿ ಭೈರವ
ಕರ್ಣಾರ್ಜುನ
ಕೀಚಕ ಸೈರಂಧ್ರಿ
ಗರ್ಭಗುಡಿ
ಗೀತ ನಾಟಕಗಳು
ಜಂಬದ ಜಾನಕಿ
ಜ್ಯೂಲಿಯಸ್ ಸೀಸರ್
ಡುಮಿಂಗೊ
ದೃಷ್ಟಿ ಸಂಗಮ
ನವೀನ ನಾಟಕಗಳು
ನಾರದ ಗರ್ವಭಂಗ
ಬಿತ್ತಿದ ಬೆಳೆ
ಬೆವರಿಗೆ ಜಯವಾಗಲಿ
ಬೌದ್ಧ ಯಾತ್ರಾ
ಮಂಗಳಾರತಿ
ಮುಕ್ತದ್ವಾರ
ಯಾರೊ ಅಂದರು
ವಿಜಯ
ವಿಜಯ ದಶಮಿ
ಸರಳ ವಿರಳ ನಾಟಕಗಳು
ಸಾವಿರ ಮಿಲಿಯ
ಹಣೆ ಬರಹ
ಹಿರಿಯಕ್ಕನ ಚಾಳಿ
ಹೇಗಾದರೇನು?
ಹೇಮಂತ



[ಬದಲಾಯಿಸಿ] ಸಣ್ಣ ಕತೆ
ಕವಿಕರ್ಮ
ತೆರೆಯ ಮರೆಯಲ್ಲಿ
ಹಸಿವು
ಹಾವು
[ಬದಲಾಯಿಸಿ] ಹರಟೆ, ವಿಡಂಬನೆ
ಗ್ನಾನ
ಚಿಕ್ಕ ದೊಡ್ಡವರು
ದೇಹಜ್ಯೋತಿಗಳು ಮತ್ತು ಪ್ರಾಣಿ ಪ್ರಬಂಧಗಳು
ಮೈಗಳ್ಳನ ದಿನಚರಿಯಿಂದ
ಮೈಲಿಕಲ್ಲಿನೊಡನೆ ಮಾತುಕತೆಗಳು
ಹಳ್ಳಿಯ ಹತ್ತು ಸಮಸ್ತರು
[ಬದಲಾಯಿಸಿ] ಪ್ರವಾಸ ಕಥನ
ಅಪೂರ್ವ ಪಶ್ಚಿಮ
ಅರಸಿಕರಲ್ಲ
ಅಬೂವಿನಿಂದ ಬರಾಮಕ್ಕೆ
ಪಾತಾಳಕ್ಕೆ ಪಯಣ
ಪೂರ್ವದಿಂದ ಅತ್ಯಪೂರ್ವಕ್ಕೆ
ಯಕ್ಷರಂಗಕ್ಕಾಗಿ ಪ್ರವಾಸ
[ಬದಲಾಯಿಸಿ] ಆತ್ಮಕಥನ
ಸ್ಮೃತಿಪಟಲದಿಂದ (೧,೨,೩)
ಹುಚ್ಚು ಮನಸ್ಸಿನ ಹತ್ತು ಮುಖಗಳು
[ಬದಲಾಯಿಸಿ] ಜೀವನ ಚರಿತ್ರೆ
ಕಲಾವಿದ ಕೃಷ್ಣ ಹೆಬ್ಬಾರರು
[ಬದಲಾಯಿಸಿ] ಕಲಾಪ್ರಬಂಧ
ಕಲೆಯ ದರ್ಶನ
ಕರ್ನಾಟಕದಲ್ಲಿ ಚಿತ್ರಕಲೆ
ಚಾಲುಕ್ಯ ವಾಸ್ತು ಮತ್ತು ಶಿಲ್ಪ
ಚಿತ್ರ,ಶಿಲ್ಪ,ವಾಸ್ತು ಕಲೆಗಳು
ಜಾನಪದ ಗೀತೆಗಳು
ಭಾರತೀಯ ಚಿತ್ರಕಲೆ
ಭಾರತೇಯ ಶಿಲ್ಪ
ಯಕ್ಷಗಾನ ಬಯಲಾಟ
ಸೌಂದರ್ಯ ಪ್ರಜ್ಞೆಯನ್ನು ಬೆಳೆಯಿಸಲು
[ಬದಲಾಯಿಸಿ] ವೈಜ್ಞಾನಿಕ
ಅದ್ಭುತ ಜಗತ್ತು(೧. ವಿಚಿತ್ರ ಖಗೋಲ,೨. ನಮ್ಮ ಭೂಖಂಡಗಳು)
ಉಷ್ಣವಲಯದ ಆಗ್ನೇಸ್ಯ
ಪ್ರಾಣಿಪ್ರಪಂಚದ ವಿಸ್ಮಯಗಳು
ಮಂಗನ ಕಾಯಿಲೆ
ವಿಜ್ಞಾನ ಮತ್ತು ಅಂಧಶೃದ್ಧೆ
ವಿಶಾಲ ಸಾಗರಗಳು
ಹಿರಿಯ ಕಿರಿಯ ಹಕ್ಕಿಗಳು
[ಬದಲಾಯಿಸಿ] ಇತರ
ಪ್ರಜಾಪ್ರಭುತ್ವವನ್ನು ಕುರಿತು
ಬಾಳ್ವೆಯೇ ಬೆಳಕು
ಬಾಳ್ವೆಯೇ ಬೆಳಕು ಅಥವಾ ಜೀವನ ಧರ್ಮ
ಮನೋದೇಹಿಯಾದ ಮಾನವ
ವಿಚಾರಶೀಲತೆ
ವಿಚಾರ ಸಾಹಿತ್ಯ ನಿರ್ಮಾಣ
ಸ್ವಾರ್ಥಿ ಮಾನವ
[ಬದಲಾಯಿಸಿ] ಸಂಪಾದನೆ
ಐರೋಡಿ ಶಿವರಾಮಯ್ಯ ಬದುಕು, ಬರಹ
ಕೌಶಿಕ ರಾಮಾಯಣ
ಪಂಜೆಯವರ ನೆನಪಿಗಾಗಿ
[ಬದಲಾಯಿಸಿ] ವಿಶ್ವಕೋಶ
ಕಲಾ ಪ್ರಪಂಚ
ಪ್ರಾಣಿ ಪ್ರಪಂಚ
ಬಾಲ ಪ್ರಪಂಚ (೧,೨,೩)
ವಿಜ್ಞಾನ ಪ್ರಪಂಚ (೧,೨,೩,೪)
[ಬದಲಾಯಿಸಿ] ನಿಘಂಟು
ಸಿರಿಗನ್ನಡ ಅರ್ಥಕೋಶ
[ಬದಲಾಯಿಸಿ] ಅನುವಾದ
ಕೀಟನಾಶಕಗಳ ಪಿಡುಗುಗಳು
ಕೋಟ ಮಹಾಜಗತ್ತು
ಜನತೆಯೂ ಅರಣ್ಯಗಳೂ
ನಮ್ಮ ಪರಮಾಣು ಚೈತನ್ಯ—ಉತ್ಪಾದನಾ ಸಾಧನಗಳು
ನಮ್ಮ ಶಿಕ್ಷಣ ಪದ್ಧತಿಯ ಸಮಸ್ಯೆಗಳೂ, ಭವಿಷ್ಯವೂ
ನಮ್ಮ ಸುತ್ತಲಿನ ಕಡಲು
ನಮ್ಮೆಲ್ಲರಿಗೂ ಒಂದೇ ಭವಿಷ್ಯ
ಪರಮಾಣು – ಇಂದು ನಾಳೆ
ಪಂಚ ಋತು
ಬೆಳೆಯುತ್ತಿರುವ ಸಮಸ್ಯೆ
ಭಾರತದ ಪರಿಸರ – ದ್ವಿತೀಯ ಸಮಿಕ್ಷೆ
ಭಾರತದ ಪರಿಸರದ ಪರಿಸ್ಥಿತಿ – ೧೯೮೨ – ಪ್ರಜೆಯ ದೃಷ್ಟಿಯಲ್ಲಿ
ಭಾರತ ವರ್ಷದಲ್ಲಿ ಬ್ರಿಟಿಷರು
ಯಾರು ಲಕ್ಷಿಸುವರು?
ಶ್ರೀ ರಾಮಕೃಷ್ಣರ ಜೀವನ ಚರಿತೆ
[ಬದಲಾಯಿಸಿ] ಮಕ್ಕಳ ಪುಸ್ತಕಗಳು
ಅನಾದಿ ಕಾಲದ ಮನುಷ್ಯ
ಒಂದೇ ರಾತ್ರಿ ಒಂದೇ ಹಗಲು
ಗಜರಾಜ
ಗೆದ್ದವರ ಸತ್ಯ
ಢಂ ಢಂ ಢೋಲು
ನರನೋ ವಾನರನೋ
ಮರಿಯಪ್ಪನ ಸಾಹಸಗಳು
ಮಂಗನ ಮದುವೆ
ಸೂರ್ಯ ಚಂದ್ರ
ಹುಲಿರಾಯ
ಕನ್ನಡ ನಾಡು ಮತ್ತು ಕನ್ನಡಿಗರ ಪರಂಪರೆಗೆ ಸಂಬಂಧಿಸಿದ ೧೦ ಪುಸ್ತಕಗಳು
ಐಬಿಎಚ್, ಮೂಲವಿಜ್ಞಾನ ಪಾಠಮಾಲೆ ಹಾಗು ‘ಇಕೊ’ ದವರಿಗಾಗಿ ಮಾಡಿದ ಅನುವಾದಗಳು : ಸುಮಾರು ೧೩೩
‘ಇಕೊ’ ದವರಿಗಾಗಿ ಮಾಡಿದ ಸಂಪಾದಿತ ಪುಸ್ತಕಗಳು : ೪೨
[ಬದಲಾಯಿಸಿ] ಶೈಕ್ಷಣಿಕ
[ಬದಲಾಯಿಸಿ] ಮಕ್ಕಳ ಶಿಕ್ಷಣ
ಓದುವ ಆಟ
ಗೃಹ ವಿಜ್ಞಾನ (೧,೨,೩)
ಚಿತ್ರಮಯ ದಕ್ಷಿಣ ಕನ್ನಡ
ಚಿತ್ರಮಯ ದಕ್ಷಿಣ ಕನ್ನಡ – ಅಂದು, ಇಂದು
ಚಿತ್ರಮಯ ದಕ್ಷಿಣ ಹಿಂದುಸ್ತಾನ
ನಾಗರಿಕತೆಯ ಹೊಸ್ತಿಲಲ್ಲಿ
ರಮಣ ತಾತ
ಸಮಾಜ ನೀತಿ (೧,೨,೩)
ಸಾಮಾನ್ಯ ವಿಜ್ಞಾನ (೧,೨,೩)
ಸಿರಿಗನ್ನಡ ಪಾಠಮಾಲೆ (೧,೨,೩,೪,೫,೬,೭)
ಹೂಗನ್ನಡ ಪಾಠಮಾಲೆ (೧,೨,೩,೪,೫,೬,೭,೮)
[ಬದಲಾಯಿಸಿ] ವಯಸ್ಕರ ಶಿಕ್ಷಣ
ಅಳಿಲ ಭಕ್ತಿ ಮಳಲ ಸೇವೆ
ಕರ್ನಾಟಕದ ಜಾನಪದ ಕಲೆಗಳು
ಕೋಳಿ ಸಾಕಣೆ
ಜೋಗಿ ಕಂಡ ಊರು
ದಕ್ಷಿಣ ಹಿಂದುಸ್ತಾನದ ನದಿಗಳು
ದೇವ ಒಲಿದ ಊರು
ಬೇರೆಯವರೂ ಸರಿ ಇರಬಹುದು
ಹುಟ್ಟು ಸಾವು ಒಟ್ಟು ಒಟ್ಟು
[ಬದಲಾಯಿಸಿ] ಆಂಗ್ಲ ಭಾಷೆಯಲ್ಲಿ ಸಾಹಿತ್ಯ
Folk Art of Karnataka
Karnataka Paintings
My Concern for Life, Literature and Art
Picturesque South Kanara
Yakshagana
[ಬದಲಾಯಿಸಿ] ಪ್ರಶಸ್ತಿ/ಪುರಸ್ಕಾರಗಳು
ಜ್ಞಾನಪೀಠ ಪ್ರಶಸ್ತಿ
ಪದ್ಮಭೂಷಣ ಪ್ರಶಸ್ತಿ
ವಿವಿಧ ವಿಶ್ವವಿದ್ಯಾನಿಲಯಗಳಿಂದ ಡಾಕ್ಟರೇಟ್
ರಾವ್ ಬಹದೂರ್ ಪ್ರಶಸ್ತಿ (೧೯೩೦ ರಲ್ಲಿ)
[ಬದಲಾಯಿಸಿ] ಕಾರಂತರ ಕೆಲವು ಚಿಂತನೆಗಳು
ನಾನು ದೇವರನ್ನು ನಂಬುವುದಿಲ್ಲ. ಏಕೆಂದರೆ ನಾನು ನೋಡಿಲ್ಲ. ನನಗೆ ಯಾವುದು ಗೊತ್ತಿಲ್ಲವೋ ಅದನ್ನು ನಂಬುವುದಿಲ್ಲ. ರಾಮಕೃಷ್ಣ ಪರಮಹಂಸರು ನಂಬಿದ್ದರು. ಅದನ್ನು ತಪಸ್ಸಿನಿಂದ ಕಂಡುಕೊಂಡರು. ನನಗೆ ರಾಮ ಎಂದರೆ ರಾಜಾ ರವಿವರ್ಮ ಅವರ ಚಿತ್ರ. ಕೃಷ್ಣ ಎಂದರೆ ಗುಬ್ಬಿ ವೀರಣ್ಣನವರ ಕೃಷ್ಣಲೀಲಾ ನೆನಪಿಗೆ ಬರುತ್ತದೆ. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ನಾವು ನಂಬಿ ಬಂದಿದ್ದೇವೆ. ಆದರೆ, ಆ ರೀತಿ ಆಗಿಲ್ಲ. ನನಗೆ ಅನುಕೂಲವಾದಾಗ ಮಾತ್ರ ದೇವರನ್ನು ನಂಬುತ್ತೇನೆ ಎಂಬುದು ಸರಿಯಲ್ಲ.
ಸಾಹಿತಿಗಳಿಗೆ ಸಮಾಜದಲ್ಲಿ ಬೇರೇ ಪಾತ್ರವೇನೂ ಇಲ್ಲ. ಸಾಹಿತಿ ಲೋಕೋದ್ಧಾರಕ ಎಂಬ ಭಾವನೆ ಏನೂ ಬೇಡ. ಆತನೂ ನಿಮ್ಮ ಹಾಗೆ ಮನುಷ್ಯ. ಬದುಕಿನ ಬಗ್ಗೆ ತನ್ನ ಅನುಭವವನ್ನು ಮಾತ್ರ ಹೇಳುತ್ತಾನೆ. ಪರಿಹಾರ ಸೂಚಿಸುವುದಲ್ಲ. ಆತ ಬರೆದ ಮಾತ್ರಕ್ಕೆ ಮಹಾನುಭಾವ ಆಗೋಲ್ಲ. ಬರೆಯದವರೂ ದೊಡ್ಡ ಕೆಲಸಗಳನ್ನು ಮಾಡಿದ್ದಾರೆ.
ಮರ ತಾನಾಗಿ ಬೆಳೆಯುತ್ತದೆ. ಆ ರೀತಿ ಮನುಷ್ಯ ಬೆಳೆಯಲಾರ. ನಮ್ಮ ಬದುಕು ಆರಂಭವಾಗುವುದಕ್ಕೆ ಸಾವಿರಾರು ವರ್ಷಗಳ ಮೊದಲೇ ಜೀವರಾಶಿ ಇಲ್ಲಿತ್ತು ಎಂಬುದನ್ನು ತಿಳಿದರೆ ಸಾಕು.
ಸಮಾಜ ನನ್ನನ್ನು ಹೇಗೆ ಕಂಡಿತು - ಎಂದು ನಾನು ತಿಳಿದುಕೊಳ್ಳುವ ಬಗೆ ಹೇಗೆ? ಒಂದು ಗ್ರಂಥದ ಸಾವಿರ ಪ್ರತಿಗಳು ಹತ್ತು ವರ್ಷಗಳಲ್ಲಿ ಖರ್ಚಾದರೆ, ಅವನ್ನು ಓದಿದವರಲ್ಲಿ ಹತ್ತು ಮಂದಿ ನನಗೆ ಪತ್ರ ಬರೆದರೆ, ಅದರಿಂದ ಜನಗಳು ನನ್ನನ್ನು ಮೆಚ್ಚುತ್ತಿದ್ದಾರೆ- ಎಂದು ತಿಳಿಯಲು ಸಾಧ್ಯವೇ? ನಾವು ಬರೆಯುವುದು ಸಾಮಾಜಿಕರೊಡನೆ ಸಂಭಾಷಿಸುವುದಕ್ಕಾಗಿ. ಈ ಸಂಭಾಷಣೆ ಏಕಮುಖಿಯಾದದ್ದು. ನಾವೇನೋ ಗ್ರಂಥಗಳಲ್ಲಿ ಅನೇಕ ವಿಚಾರಗಳನ್ನು ಮಂಡಿಸುತ್ತೇವೆ; ಓದುಗರು ನಮ್ಮ ಕಣ್ಮುಂದೆ ಇರುವುದಿಲ್ಲ. ಅವರ ಮನಸ್ಸಿನಲ್ಲಿ ಓದುತ್ತ, ಓದುತ್ತ ಯಾವೆಲ್ಲ ಪ್ರತಿಕ್ರಿಯೆಗಳಾಗುತ್ತವೆ ಎಂದು ತಿಳಿಯುವ ಬಗೆ ಹೇಗೆ? ಆರಂಭದಿಂದಲೂ ನನ್ನ ಪುಸ್ತಕಗಳನ್ನು ಪತ್ರಿಕೆಗಳಿಗೆ ವಿಮರ್ಶೆಗೆ ಕಳುಹಿಸುವ ಪರಿಪಾಠವನ್ನು ನಾನು ಇರಿಸಿಕೊಳ್ಳದ್ದರಿಂದ, ವಿಮರ್ಶಕರು ಏನು ಹೇಳುತ್ತಾರೆಂಬುದು ಕೂಡಾ ನನಗೆ ತಿಳಿಯದ ಸಂಗತಿ. ಯಾರು ಏನನ್ನೇ ಹೇಳಲಿ, ನನಗೆ ತೋಚಿದಂತೆ ಬರೆಯುತ್ತೇನೆ- ಎಂದು ಬರೆಯುವ ನನಗೆ ಜನಾದರಣೆಯ ವಿಚಾರ ತಿಳಿಯುವುದು ಕಷ್ಟ. ವಿಕ್ರಯಗೊಳ್ಳುವ ಪುಸ್ತಕಗಳ ಸಂಖ್ಯೆಯಿಂದ ನಾನು ಅದನ್ನು ತರ್ಕಿಸುವುದಾದರೆ, ನನ್ನ ಜನಪ್ರಿಯತೆಗೆ ಬೇಕಾದ ಆಧಾರ ಸಿಗುವಂತಿಲ್ಲ. ಒಂದು ಕಾದಂಬರಿಯ ಸಾವಿರ ಪ್ರತಿಗಳು ಹತ್ತು ವರ್ಷಗಳಲ್ಲಿ ವಿಕ್ರಯಗೊಳ್ಳುವ, ಅಥವಾ ಅದರ ಭರ ಒಂದಿಷ್ಟು ಹೆಚ್ಚಿಗಿದ್ದರೂ, ಒಂದು ಪುಸ್ತಕದ ಮರುಮುದ್ರಣ ವರ್ಷಕ್ಕೆ ನೂರು ಪ್ರತಿಗಳಿಗಿಂತ ಹೆಚ್ಚಿಗೆ ವಿಕ್ರಯಗೊಳ್ಳದಾಗ, ಅಲ್ಲಿ, ಇಲ್ಲಿ, ನನ್ನನ್ನು ಜನರು ಭಾಷಣಗಳ ಕಾಲದಲ್ಲಿ ಸುಪ್ರಸಿದ್ಧ ಸಾಹಿತಿ ಎಂದು ಕರೆದರೂ, ಅಂಥ ಪ್ರಸಿದ್ಧಿಯ ಗಾತ್ರ ಸಾಕಷ್ಟು ಕುಬ್ಜವಾದದ್ದು ಎಂಬ ಅಭಿಪ್ರಾಯ ನನಗೆ. ಆ ದೃಷ್ಟಿಯಿಂದ ದಿವಂಗತ ಅ.ನ.ಕೃಷ್ಣರಾಯರು ಬರೆದ ಕಾದಂಬರಿಗಳು ನನಗಿಂತ ಎಷ್ಟೋ ಪಾಲು ಹೆಚ್ಚಿನ ಜನಾಕರ್ಷಣೆಯನ್ನು ಪಡೆದಿವೆ. ನನ್ನ, ಅವರ ಓದುಗರು ಯಾರು ಎಂಬುದನ್ನು ಕೂಡ ವಿಂಗಡಿಸಿ ತಿಳಿಯುವುದು ಕಷ್ಟ. ಅಂಥ ಓದುಗರು ಪ್ರಬುದ್ಧರೋ, ಅಪ್ರಬುದ್ಧರೋ, ಹೆಂಗಸರೋ, ಗಂಡಸರೋ, ತರುಣರೋ, ವೃದ್ಧರೋ, ಗಂಭೀರ ವಿಚಾರಕ್ಕೆ ಮನಸ್ಸು ಕೊಡುವವರೋ, ಅನುಭವ ಸಾಮ್ಯತೆ ಪಡೆದವರೋ, ಚಿಂತನಶೀಲರೋ, ಅಲ್ಲದವರೋ- ಇಂಥ ಯಾವೊಂದು ಸಂಗತಿಗಳನ್ನೂ ಎಣಿಸದೆ ಜನಮನ್ನಣೆಯ ತೂಕವನ್ನು ಅಳೆಯುವುದು ಅಸಾಧ್ಯ.
ಆದಷ್ಟು ಕಡಿಮೆ ತಿನ್ನಿ. ನಾಲಗೆ ರುಚಿಗಾಗಿ ಸಿಕ್ಕಿದ್ದನ್ನೆಲ್ಲಾ ತಿನ್ನುವುದಲ್ಲ. ಮನಬಂದ ಕೆಲಸವನ್ನೆಲ್ಲಾ ಮಾಡುವುದಲ್ಲ. ಇದು ನನ್ನ ಆರೋಗ್ಯದ ರಹಸ್ಯ.
[ಬದಲಾಯಿಸಿ] ವಿದ್ವಾಂಸರ ಕಣ್ಣಲ್ಲಿ ಕಾರಂತ ಸಾಹಿತ್ಯ
[ಬದಲಾಯಿಸಿ] ತೀ.ನಂ.ಶ್ರೀಕಂಠಯ್ಯ
ಶ್ರೀ ಶಿವರಾಮ ಕಾರಂತರು ನಮ್ಮ ತಲೆಮಾರಿನ ಕನ್ನಡದ ಕ್ರಾಂತಿಪುರುಷರಲ್ಲಿ ಒಬ್ಬರು. ಅವರ ಪ್ರತಿಭೆಗೆ ಅಳವಡದ ಕಲೆಯಿಲ್ಲ. ಅವರ ಲೇಖನಿಯಿಂದ ಸತತವಾಗಿ ಹೊರಬೀಳುತ್ತಿರುವ ಕೃತಿಗಳಲ್ಲಿ ಹಲವನ್ನು ಓದಿ ಮೆಚ್ಚಿರುವ ಅನೇಕ ಮಂದಿ ಕನ್ನಡಿಗರಲ್ಲಿ ನಾನೂ ಒಬ್ಬ. ದೂರದಿಂದ ಮಾತ್ರವಲ್ಲದೆ ಹತ್ತಿರದಿಂದಲೂ ಅವರ ಬಹುಮುಖವಾದ ಕಾರ್ಯೋತ್ಸಾಹವನ್ನು ಆಗಾಗ ವೀಕ್ಷಿಸಿ ಬೆರಗಾಗಿದ್ದೇನೆ; ಅವರ ಪರಿಚಯ ಭಾಗ್ಯವನ್ನೂ ಕೆಲವು ಮಟ್ಟಿಗೆ ಪಡೆದು ನನ್ನ ಅನುಭವ ಆನಂದಗಳನ್ನೂ ಹೆಚ್ಚಿಸಿಕೊಂಡಿದ್ದೇನೆ.

ನಿಸರ್ಗವೇ ನಮ್ಮ ಎದುರಿಗೆ ಸುರುಳಿ ಬಿಚ್ಚಿಕೊಂಡು ಸಾಗುತ್ತಿದ್ದರೆ ಉಂಟಾಗಬಹುದಾದ ಅನುಭವ ಕಾರಂತರ ಕೃತಿಗಳನ್ನು ಓದುತ್ತಿರುವಾಗ ನನಗೆ ಅನೇಕ ವೇಳೆ ಲಭಿಸಿದೆ. ಅವರ ಬರಹದಲ್ಲಿ ಒಟ್ಟಿನ ಮೇಲೆ ಕಲೆಯ ನಿರ್ಮಿತಿಗಿಂತ ನಿಸರ್ಗದ ಆವಿಷ್ಕೃತಿ ಹೆಚ್ಚು. ಇಲ್ಲಿ ನಿಸರ್ಗವೆಂದರೆ ಕಡಲು, ಬೆಟ್ಟ, ಹೊಳೆ, ಕಾಡು ಮೊದಲಾದ ಅಚೇತನ ಪ್ರಕೃತಿ ಮಾತ್ರವಲ್ಲ, ವಿವಿಧ ವಿಚಿತ್ರವಾದ ಮಾನವಪ್ರಕೃತಿಯೂ ಅವರಲ್ಲಿ ಹಾಸುಹೊಕ್ಕಾಗಿ ಸೇರುತ್ತದೆ.

ಕಾರಂತರ ಬರವಣಿಗೆ ಬೆಳೆದಂತೆಲ್ಲ ಅವರ ಸಹಾನುಭೂತಿ ಶಕ್ತಿಯೂ ಬೆಳೆದು ಬಂದಿರುವಂತೆ ಕಾಣುತ್ತದೆ. ದುಡಿಮೆ ದುಃಖ ಇವೇ ತಮ್ಮ ಬಾಳಿನ ಸಾರವಾದರೂ ಅಚಲ ಶ್ರದ್ಧೆಯನ್ನು ಭದ್ರವಾಗಿ ನೆಮ್ಮಿ ನಿಲ್ಲುವ ಸ್ತ್ರೀಪಾತ್ರಗಳಲ್ಲಂತೂ ಕಾರಂತರಿಗೆ ಅಪಾರ ಗೌರವ. ಇಂಥ ಪಾತ್ರಗಳಿಂದಲೇ ಅವರ ಮಹಾಕೃತಿ ಮರಳಿ ಮಣ್ಣಿಗೆ, ನಂಬಿದವರ ನಾಕ-ನರಕ ಮೊದಲಾದವು ಅಮರವಾಗಿರುವುದು. ವಿಚಾರಪರರಾದ ಕಾರಂತರ ದೃಷ್ಟಿಯಲ್ಲಿ ಬಾಳ್ವೆಯೇ ಬೆಳಕು. ಆದರೆ ಅನ್ಯರ ಬದುಕನ್ನು ಅರ್ಥಮಾಡಿಕೊಳ್ಳಬೇಕಾದರೆ ಅವರ ಸಾಂಪ್ರದಾಯಿಕವಾದ ನಂಬಿಕೆಗಳನ್ನು -ಅವು ತಮ್ಮವಲ್ಲದಿದ್ದರೂ- ಅರ್ಥಮಾಡಿಕೊಳ್ಳಬೇಕು ಎಂಬುದು ಕಾರಂತರ ಧೃಡತತ್ವ. ಡಾಂಭಿಕವರ್ತನೆಯನ್ನು, ಆಷಾಡಭೂತಿ ವಿದ್ಯೆಯನ್ನು ಕಂಡರೆ ಮಾತ್ರ ಅವರಿಗೆ ಎಂದಿಗೂ ಆಗದು. ಅದನ್ನು ವ್ಯಂಗ್ಯವಾಗಿ ವಾಚ್ಯವಾಗಿ ಅವರು ಖಂಡಿಸುತ್ತಲೇ ಇರುತ್ತಾರೆ. ಇಷ್ಟಾದರೂ ಬದುಕಿನ ಅನಂತ ವಿವಿಧತೆಯನ್ನು ಅವರು ಚೆನ್ನಾಗಿ ಮನಗಂಡವರು; 'ಹಳ್ಳಿಯ ಹತ್ತು ಸಮಸ್ತರು' ಎಂಬ ಅಪೂರ್ವ ಕೃತಿ ಇದಕ್ಕೆ ಉತ್ತಮ ಸಾಕ್ಷಿ. ಕಾದಂಬರಿಯ ತಂತ್ರದ ಕಡೆ ಕಾರಂತರ ಗಮನ ಕಡಿಮೆ. ಆದರೆ ಮನಸ್ಸು ಮಾಡಿದರೆ ಅದರಲ್ಲಿ ಎಂಥ ಸಿದ್ಧಿಯನ್ನು ಅವರು ಮುಟ್ಟಬಲ್ಲರೆಂಬುದನ್ನು ಅವರ 'ಅಳಿದ ಮೇಲೆ' ಸಾರುತ್ತದೆ.

[ಬದಲಾಯಿಸಿ] ಪೂರ್ಣಚಂದ್ರ ತೇಜಸ್ವಿ
ಲೋಹಿಯಾರವರ ತತ್ವ ಚಿಂತನೆ, ಕುವೆಂಪುರವರ ಕಲಾಸೃಷ್ಟಿ, ಕಾರಂತರ ಜೀವನದ ದೃಷ್ಟಿ ಮತ್ತು ಬದುಕಿನಲ್ಲಿನ ಪ್ರಯೋಗಶೀಲತೆ- ಈ ಮೂರೇ ನನ್ನ ಈಚಿನ ಸಾಹಿತ್ಯ ರಚನೆಯ ಮೇಲೆ ಗಾಢ ಪರಿಣಾಮಗಳನ್ನುಂಟು ಮಾಡಿರುವಂಥವು. ಬಹುಶಃ ಮುಂಬರುವ ಕಲಾವಿದರಿಗೆ ಕನ್ನಡ ಸಾಹಿತ್ಯ ಸೃಷ್ಟಿಯಲ್ಲಿ ಚೈತನ್ಯಶಕ್ತಿಯಾಗಬಲ್ಲಂಥವು ಈ ಮೂರೇ.

[ಬದಲಾಯಿಸಿ] ಹಾ.ಮಾ.ನಾಯಕ
ಯಾವ ಮಾನದಿಂದ ಅಳೆದರೂ ಕಾರಂತರು ವಿಶ್ವಲೇಖಕರ ಪಟ್ಟಿಯಲ್ಲಿ ಸೇರಬಲ್ಲವರು.

[ಬದಲಾಯಿಸಿ] ಗೋಪಾಲಕೃಷ್ಣ ಅಡಿಗ
ಶಿವರಾಮ ಕಾರಂತರನ್ನು ನಿಮಗೆ ಪರಿಚಯ ಮಾಡಿಕೊಡುವುದೂ ಒಂದೇ, ನೇಸರನ್ನು ಸೊಡರಿನಿಂದ ತೋರಿಸುವದೂ ಒಂದೇ.

[ಬದಲಾಯಿಸಿ] ಜಿ.ಎಸ್.ಶಿವರುದ್ರಪ್ಪ
ಬೆಟ್ಟ ಕಡಲಿನ ನಡುವೆ ಹುಟ್ಟಿದ ಈ ಚೈತನ್ಯ ಕಡಲಿನಷ್ಟೇ ವಿಸ್ತಾರವಾದ ಅನುಭವಗಳನ್ನು ತಮ್ಮ ಕೃತಿಗಳಲ್ಲಿ ಹಿಡಿದಿರಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಕಾರಂತರ ನಿಧನದಿಂದ ಉಜ್ವಲವಾದ ಸೃಜನ ಪರಂಪರೆಯ ಒಂದು ತಲೆಮಾರಿನ ಮುಕ್ತಾಯದ ಶೂನ್ಯದೊಳಕ್ಕೆ ನಾವು ಪ್ರವೇಶಿಸಿದ ಅನುಭವವಾಗುತ್ತಿದೆ.

[ಬದಲಾಯಿಸಿ] ಬಾಲವನದಲ್ಲಿ ಕಾರಂತಜ್ಜ
ಕಾರಂತರು ಕೆಲಕಾಲ 'ತರಂಗ' ಸಾಪ್ತಾಹಿಕದ 'ಬಾಲವನ' - ಮಕ್ಕಳ ವಿಭಾಗದಲ್ಲಿ 'ಬಾಲವನದಲ್ಲಿ ಕಾರಂತಜ್ಜ' ಎಂಬ ಕಾಲಂ ನಡೆಸಿಕೊಡುತ್ತಿದ್ದರು. ಇದು ಬಹಳವಾಗಿ ಜನಪ್ರಿಯವಾಗಿತ್ತು. ಪುಟಾಣಿಗಳು ಕಳುಹಿಸಿದ ವಿಜ್ಞಾನ ಕುರಿತ ಪ್ರಶ್ನೆಗಳಿಗೆ ಕಾರಂತರು ಮಕ್ಕಳಿಗೆ ಅರ್ಥವಾಗುವಂತೆ ಸರಳ ರೀತಿಯಲ್ಲಿ ಉತ್ತರ ನೀಡುತ್ತಿದ್ದರು. ಆಗಿನ ತಲೆಮಾರಿನ ಕನ್ನಡಿಗರಿಗೆ ಕಾರಂತರು, 'ಕಾರಂತಜ್ಜ' ರೆಂದೇ ಚಿರಪರಿಚಿತ.